Tag: ಪಿ.ಸಿ ಮೋಹನ್‌

  • ನಮ್ಮ ಮೆಟ್ರೋ ಎಡವಟ್ಟು – ಮೆಟ್ರೋ ಸ್ಟೇಷನ್ ಫುಲ್ ರಷ್

    ನಮ್ಮ ಮೆಟ್ರೋ ಎಡವಟ್ಟು – ಮೆಟ್ರೋ ಸ್ಟೇಷನ್ ಫುಲ್ ರಷ್

    – ಮೆಟ್ರೋ ವಿಳಂಬದಿಂದ ಪರದಾಡಿದ ಪ್ರಯಾಣಿಕರು

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಎಡವಟ್ಟಿಗೆ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ. ಅಂಬೇಡ್ಕರ್ ಜಯಂತಿಯ ಸಲುವಾಗಿ ಇಂದು ರಜೆ ಎಂದು ಪ್ರತಿ ಹತ್ತು ನಿಮಿಷಕ್ಕೊಂದು ಮೆಟ್ರೋ ರೈಲಿನ ಸಂಚಾರವಿದ್ದುದರಿಂದ ಮೆಟ್ರೋ ಸ್ಟೇಷನ್‌ಗಳಲ್ಲಿ ಪ್ರಯಾಣಿಕರು ಪರದಾಡಿದ್ದಾರೆ.

    ಉಳಿದೆಲ್ಲಾ ದಿನದಲ್ಲಿ ಪ್ರತಿ 5 ನಿಮಿಷಕ್ಕೊಂದು ಮೆಟ್ರೋ ಸೇವೆ ಇರುತ್ತದೆ. ಆದರೆ ಇಂದು ಹತ್ತು ನಿಮಿಷಕ್ಕೊಂದು ಮೆಟ್ರೋ ಸೇವೆ ಇದ್ದುದರಿಂದ ಸ್ಟೇಷನ್‌ನಲ್ಲಿ ಜನದಟ್ಟಣೆಯಿಂದ ಪ್ರಯಾಣಿಕರು ಪರದಾಡುವಂತಾಯಿತು. ಇದನ್ನೂ ಓದಿ: ವಕ್ಫ್ ಹೆಸ್ರಲ್ಲಿ ಬಡವರ ಭೂಮಿ ಕಿತ್ತುಕೊಳ್ಳಲು ಸಾಧ್ಯವಿಲ್ಲ, ಲೂಟಿ ನಿಲ್ಲಲಿದೆ – ನರೇಂದ್ರ ಮೋದಿ

    ಸಾಮಾನ್ಯವಾಗಿ ಭಾನುವಾರ ಮಾತ್ರ ಈ ರೀತಿ ಮಾಡುತ್ತಿದ್ದ ಮೆಟ್ರೋ ಸಂಸ್ಥೆಯು, ಈಗ ಸಾರ್ವತ್ರಿಕ ರಜಾ ದಿನವೂ ಮೆಟ್ರೋ ಸೇವೆಯನ್ನು ವಿಳಂಬ ಮಾಡುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಮೆಟ್ರೋ ವಿರುದ್ಧ ಸಂಸದ ಪಿ.ಸಿ.ಮೋಹನ್ ವೀಡಿಯೋ ಟ್ಯಾಗ್ ಮಾಡಿ ಕಿಡಿಕಾರಿದ್ದಾರೆ. ಇದನ್ನೂ ಓದಿ: 4,500 ಎಕ್ರೆಗೆ ದಾಖಲೆ ಇದೆ, ಅರಮನೆ ಹೆಸರಿಗೆ ಜಮೀನು ಬಂದ್ರೂ ಗ್ರಾಮಸ್ಥರು ಆತಂಕ ಪಡಬೇಕಿಲ್ಲ: ಪ್ರಮೋದಾದೇವಿ ಒಡೆಯರ್

  • ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರ್ಕಾರ… ನಿಮ್ಮಪ್ಪನ ಸರ್ಕಾರ ಅಲ್ಲ – ಬಿಜೆಪಿ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಪ್ರದೀಪ್‌ ಈಶ್ವರ್‌

    ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರ್ಕಾರ… ನಿಮ್ಮಪ್ಪನ ಸರ್ಕಾರ ಅಲ್ಲ – ಬಿಜೆಪಿ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಪ್ರದೀಪ್‌ ಈಶ್ವರ್‌

    – ಸಂಸದ ಪಿ.ಸಿ ಮೋಹನ್‌ – ಪ್ರದೀಪ್‌ ಈಶ್ವರ್‌ ನಡುವೆ ಜೋರು ಜಗಳ

    ಬೆಂಗಳೂರು: ಇಲ್ಲಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ಶಾಸಕ ಪ್ರದೀಪ್‌ ಈಶ್ವರ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಭರಿತರಾದ ಪ್ರದೀಪ್‌ ಈಶ್ವರ್ ಬಿಜೆಪಿ ಕಾರ್ಯಕ್ರರ್ತರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

    ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರ 299ನೇ ಜಯಂತ್ಯುತ್ಸವ ಕಾರ್ಯಕ್ರಮದ ವೇಳೆ ಪ್ರದೀಪ್‌ ಈಶ್ವರ್‌, ಮಕ್ಕಳ ಶಿಕ್ಷಣ ಕುರಿತಂತೆ ಮಾತನಾಡುತ್ತಿದ್ದರು. ಈ ವೇಳೆ ಕೆಲ ಬಿಜೆಪಿ ಕಾರ್ಯಕರ್ತರು ಆಕ್ಷೇಪ ಎತ್ತಿದರು. ಇದರಿಂದ ರೊಚ್ಚಿಗೆದ್ದ ಶಾಸಕ, ಕೂತ್ಕೊಳ್ರಿ.. ನೀವೆಲ್ಲ ಸಮುದಾಯ ಗುಣಗಾನ ಮಾಡೋಕೆ ಬಂದಿದ್ದೀರಿ.. ಇದೇನ್‌ ಬಿಜೆಪಿ ಪ್ರೋಗ್ರಾಮ್‌ ಅಂದುಕೊಂಡಿದ್ದೀರಾ? ಕಾಂಗ್ರೆಸ್‌ ಸರ್ಕಾರ ಇದೋದು, ಬಿಜೆಪಿ ಗುಣಗಾನ ಮಾಡೋದು ಮುಚ್ಚಬೇಕು ಇಲ್ಲಿ. ಬಾಯಿ ಮುಚ್ಕೊಂಡು ಕೂತ್ಕೊಬೇಕು. ಸಿದ್ದರಾಮಯ್ಯನ ಸರ್ಕಾರ ಇರೋದು ರಾಜ್ಯದಲ್ಲಿ ನಿಮ್ಮಪ್ಪನ ಸರ್ಕಾರ ಅಲ್ಲ ಅಂತ ಏಕವಚನದಲ್ಲೇ ಲೇವಡಿ ಮಾಡಿದ್ದಾರೆ.

    ಮುಂದುವರಿದು… ಇದು ಸಿದ್ದರಾಮಯ್ಯನ ಪ್ರೋಗ್ರಾಂ, ನಿಮ್ಮಪ್ಪನ ಪ್ರೋಗ್ರಾಂ ಅಲ್ಲ, ಸಿದ್ದರಾಮಯ್ಯನ ಕಾರ್ಯಕ್ರಮ ನಡೆಯುತ್ತಿರೋದು ಇಲ್ಲಿ.. ಗೆಟ್‌ ಲಾಸ್ಟ್‌ ಅಂತ ಕಿಡಿ ಕಾರಿದ್ದಾರೆ. ನಮಗೂ ನಮ್ಮ ಪಾರ್ಟಿ ಸಿದ್ಧಾಂತಗಳಿರುತ್ತೆ. ನೀವು ನಿಮ್ಮ ಪಕ್ಷವನ್ನ ಗುಣಗಾನ ಮಾಡಿದ್ರೆ, ನಾವು ನಮ್ಮ ಪಕ್ಷವನ್ನ ಗುಣಗಾನ ಮಾಡಬೇಕಾಗುತ್ತೆ ಅಂತ ವಾರ್ನಿಂಗ್‌ ಕೊಟ್ಟಿದ್ದಾರೆ. ಈ ವೇಳೆ ಹಿಂಗೆಲ್ಲ ಹೇಳಬೇಡ್ರಿ ಅಂತ ಪ್ರದೀಪ್‌ ಈಶ್ವರ್‌ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಈ ಬೆಳವಣಿಗೆಯಿಂದ ಅಸಮಾಧಾನಗೊಂಡ ಬಿಜೆಪಿ ಸಂಸದ ಪಿ.ಸಿ ಮೋಹನ್‌.. ಪ್ರದೀಪ್‌ ಈಶ್ವರ್‌ ಅವರೇ ನಿಮಗೆ ಉತ್ಸಾಹ ಇದೆ. ಆದ್ರೆ ನೀವು ಇಲ್ಲಿ ಕೂತ್ಕೊಂಡು ಇದು ಸಿದ್ದರಾಮಯ್ಯನ ಪ್ರೋಗ್ರಾಂ ಅಂದ್ರೆ, ನಾನು ಬಿಜೆಪಿ ಸಂಸದ ಇಲ್ಲಿ ಇರಬೇಕೋ ಬೇಡ್ವೋ‌ ಹೇಳ್ರಿ? ಅಂತ ಜೋರು ದನಿಯಲ್ಲೇ ಕೂಗಿದ್ದಾರೆ. ಈ ವೇಳೆ ವೇದಿಕೆಯಲ್ಲಿದ್ದ ಗಣ್ಯರು ಹಾಗೂ ಕಾರ್ಯಕ್ರಮ ಆಯೋಜಕರು ಆಕ್ರೋಶಭರಿತರ ಮನವೊಲಿಸುವ ಪ್ರಯತ್ನ ಮಾಡಿದರು.

  • ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

    ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲು ಕೊಯ್ದ ಪ್ರಕರಣ – ಓರ್ವ ಆರೋಪಿ ಅರೆಸ್ಟ್‌

    ಬೆಂಗಳೂರು: ಇಲ್ಲಿನ ಚಾಮರಾಜಪೇಟೆಯಲ್ಲಿ (Chamarajpet) ಹಸುಗಳ ಕೆಚ್ಚಲು (Cows Udder) ಕೊಯ್ದು ವಿಕೃತಿ ಮೆರೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಬಂಧಿಸಿ ಸ್ಥಳ ಮಹಜರು ನಡೆಸಿರುವ ಸೋಕೋ ಟೀಂ ತಡರಾತ್ರಿಯಿಂದಲೇ ವಿಚಾರಣೆ ಆರಂಭಿಸಿದೆ. ಇದನ್ನೂ ಓದಿ: ಮೂರು ಹೊಸ ಹಸುಗಳನ್ನು ನಾನೇ ಕೊಡಿಸುತ್ತೇನೆ: ಜಮೀರ್ 

    ಏನಿದು ಅಮಾನವೀಯ ಪ್ರಕರಣ?
    ಬೀದಿಯಲ್ಲಿ ಮಲಗಿದ್ದ 3 ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದಿರುವ ಘಟನೆ ಚಾಮರಾಜಪೇಟೆಯಲ್ಲಿ ಭಾನುವಾರ ನಡೆದಿದೆ. ವಿನಾಯಕ ನಗರದಲ್ಲಿ ತಡರಾತ್ರಿ ಕರ್ಣ ಎಂಬುವರಿಗೆ ಸೇರಿದ್ದ 3 ಹಸುಗಳ ಕೆಚ್ಚಲು ಕೊಯ್ದ ರಕ್ತದ ಕೋಡಿಯನ್ನೇ ಹರಿಸಿದ್ದರು. ಸದ್ಯ ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕಾಟನ್ ಪೇಟೆ ಪೊಲೀಸರು ತನಿಖೆ ಆರಂಭಿಸಿದ್ದರು. ಇದನ್ನೂ ಓದಿ: ಹಸುಗಳನ್ನು ಹೋರಾಟಕ್ಕೆ ಕರೆದುಕೊಂಡು ಹೋಗಿದ್ದಕ್ಕೆ ಕೆಚ್ಚಲಿಗೆ ಕತ್ತರಿ!

    ಇನ್ನೂ ಈ ಪ್ರಕರಣದಲ್ಲೂ ರಾಜಕೀಯ ಕೆಸರೆರಚಾಟಕ್ಕೆ ಶುರುವಾಗಿದೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಬಿಜೆಪಿ ನಾಯಕರು ಸ್ಥಳಕ್ಕೆ ಭೇಟಿ ಕೊಟ್ರು.. ಸ್ಥಳೀಯ ಸಂಸದ ಪಿಸಿ ಮೋಹನ್ ಸ್ಥಳ ಪರಿಶೀಲಿಸಿ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿದರು. ವಿಪಕ್ಷ ನಾಯಕ ಅಶೋಕ್ ಕೂಡ ಸ್ಥಳಕ್ಕಾಗಮಿಸಿ, ಕಾಂಗ್ರೆಸ್ ಸರ್ಕಾರ ಬಂದ್ಮೇಲೆ ಸಂಕ್ರಾಂತಿಗೆ ಹಸುವಿನ ಕೆಚ್ಚಲು ಕೊಯ್ದಿರೋ ಗಿಫ್ಟ್ ಕೊಟ್ಟಿದ್ದಾರೆ. ಇದು ಜಿಹಾದಿ ಮನಸ್ಥಿತಿ, ಹಾಲು ಕೊಡುವ ಕೆಚ್ಚಲು ಕೊಯ್ದಿದ್ದಾರೆ ಎಂದು ಕಿಡಿಕಾರಿದ್ರು.

    ಈ ವೇಳೆ ವೈಯಕ್ತಿಕವಾಗಿ 1 ಲಕ್ಷ ಪರಿಹಾರವನ್ನೂ ಘೋಷಿಸಿದ್ರು. ಇತ್ತ, ಹಿಂದೂ ಮುಖಂಡರೂ ಘಟನೆಯನ್ನು ಉಗ್ರವಾಗಿ ಖಂಡಿಸಿದ್ದಾರೆ. ಘಟನೆಯನ್ನು ಸಿಎಂ ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ ಅಂದಿದ್ದಾರೆ. ಸ್ಥಳೀಯ ಶಾಸಕರೂ ಆಗಿರುವ ಸಚಿವ ಜಮೀರ್, ಕಾಟನ್‌ಪೇಟೆ ಪಶುವೈದ್ಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ತಪ್ಪಿತಸ್ಥರ ವಿರುದ್ಧ ಕ್ರಮ ಆಗುತ್ತೆ. 3 ಹೊಸ ಹಸುಗಳನ್ನು ನಾನೇ ಕೊಡಿಸ್ತೀನಿ ಅಂದಿದ್ದಾರೆ. ಇದನ್ನೂ ಓದಿ: ಛೇ ಇದೆಂತಾ ವಿಕೃತಿ! – ಹಸುಗಳ ಕೆಚ್ಚಲು ಕೊಯ್ದ ದುರುಳರು

  • ‘ಹರ್ ಘರ್ ತಿರಂಗಾʼ ಕಾರ್ಯಕ್ರಮಕ್ಕೆ ಬಿಜೆಪಿ ಚಾಲನೆ

    ‘ಹರ್ ಘರ್ ತಿರಂಗಾʼ ಕಾರ್ಯಕ್ರಮಕ್ಕೆ ಬಿಜೆಪಿ ಚಾಲನೆ

    ಬೆಂಗಳೂರು: ಸ್ವಾತಂತ್ರ್ಯ ಹೋರಾಟದ ಕುರಿತು ಜನಜಾಗೃತಿಗಾಗಿ ಪ್ರತಿಯೊಂದು ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸುವ ‘ಹರ್ ಘರ್ ತಿರಂಗಾ’ (Har Ghar Tiranga) ಕಾರ್ಯಕ್ರಮಕ್ಕೆ ಚಾಲನೆ ಕೊಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ (BY Vijayendra) ಅವರು ತಿಳಿಸಿದರು.

    ಶಿವಾಜಿನಗರದ (Shivajinagara) ವಸಂತ ನಗರ ವಾರ್ಡಿನ ಬೂತ್ ನಂ.44ರಲ್ಲಿಂದು ಬೆಳಗ್ಗೆ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆಯ (Independence Day) ಶುಭ ಸಂದರ್ಭದಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸಬೇಕು, ಯುವ ಪೀಳಿಗೆಗೆ ಸ್ವಾತಂತ್ರ್ಯ ಸಂಗ್ರಾಮದ ದಿನಗಳನ್ನ ನೆನಪಿಸಿ ಕೊಡಬೇಕು. ತ್ಯಾಗ, ಬಲಿದಾನದ ಚರ್ಚೆ ಆಗಬೇಕು ಎಂದು ತಿಳಿಸಿದ್ದಾರೆ. ಅದಕ್ಕಾಗಿ ಯುವಜನತೆಯಲ್ಲೂ ದೇಶಭಕ್ತಿ ಜಾಗೃತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ವಿವರಿಸಿದರು.

    ಸಂಸದ ಪಿ.ಸಿ.ಮೋಹನ್, ಬಿಜೆಪಿ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಬೂತ್ ಸಂಖ್ಯೆ 44ರ ಅಧ್ಯಕ್ಷ ಸಾಗರ್, ಪಕ್ಷದ ಕಾರ್ಯಕರ್ತರ ನೇತೃತ್ವದಲ್ಲಿ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಅದೇರೀತಿ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ತಿರಂಗಯಾತ್ರೆ ಆಯೋಜಿಸಲಾಗಿದೆ ಎಂದು ತಿಳಿಸಿದರು. ಯುವಕರಿಂದ ಬೈಕ್ ರ‍್ಯಾಲಿ ಮೂಲಕ ತಿರಂಗಾ ಯಾತ್ರೆ ನಡೆಸಲಾಗುತ್ತಿದ್ದು, ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ ಎಂದು ಹೇಳಿದರು.

    ಇದೇ 11 ರಿಂದ 15ರವರೆಗೆ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳು, ಪುತ್ಥಳಿಗಳ ಸ್ವಚ್ಛತಾ ಕಾರ್ಯ ನಡೆಸಲಾಗುತ್ತಿದೆ. ನಾಳೆ (ಆ.14) ದೇಶದ ವಿಭಜನೆಯ ಕರಾಳ ದಿನದ ನೆನಪನ್ನು ವಿಭಜನೆಯ ಸ್ಮೃತಿ ದಿನವಾಗಿ ನೆನಪಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.