Tag: ಪಿಸ್ತೂಲ್

  • ಬೆಂಗಳೂರಲ್ಲಿ ಅಪರಿಚಿತರಿಂದ ಗುಂಡಿನ ದಾಳಿ

    ಬೆಂಗಳೂರಲ್ಲಿ ಅಪರಿಚಿತರಿಂದ ಗುಂಡಿನ ದಾಳಿ

    ಬೆಂಗಳೂರು: ನಗರದಲ್ಲಿ ಶುಕ್ರವಾರ ರಾತ್ರಿ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ.

    ಸೈಯದ್ ಝುಬೇರ್ ದಾಳಿಗೊಳಗಾದ ವ್ಯಕ್ತಿ. ನಗರದ ಔಟರ್ ರಿಂಗ್ ರಸ್ತೆಯ ಎಚ್‍ಬಿಆರ್ ಲೇಔಟ್‍ನಲ್ಲಿ ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಸೈಯದ್ ಝುಬೇರ್ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ.

    ದುಷ್ಕರ್ಮಿಗಳು ತಮ್ಮ ಕೈಯಲ್ಲಿದ್ದ ಬ್ಯಾಗಿನಿಂದ ಪಿಸ್ತೂಲ್ ತೆಗೆದು ಝುಬೇರ್ ಮೇಲೆ ಗುಂಡು ಹಾರಿಸಿದ್ದಾರೆ. ನಂತರ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ದಾಳಿ ಮಾಡಿದವರು ಹೆಲ್ಮೆಟ್ ಹಾಕಿಕೊಂಡು ಬಂದಿದ್ದರು. ಇತ್ತ ಗುಂಡೇಟು ತಿಂದ ಝುಬೇರ್ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಘಟನಾ ಸ್ಥಳಕ್ಕೆ ಕೆಜಿ ಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

  • ಕಚ್ಚಲು ಬಂದ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ಕೊಂದೇ ಬಿಟ್ಟ ಮಾಲೀಕ..!

    ಕಚ್ಚಲು ಬಂದ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ಕೊಂದೇ ಬಿಟ್ಟ ಮಾಲೀಕ..!

    ನವದೆಹಲಿ: ತನ್ನ ಮನೆಯ ನಾಯಿಗೆ ಕಲ್ಲು ಹೊಡೆದಿದ್ದಕ್ಕೆ ವ್ಯಕ್ತಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಲೆಗೈದ ಅಮಾನವೀಯ ಘಟನೆಯೊಂದು ನವದೆಹಲಿಯಲ್ಲಿ ನಡೆದಿದೆ.

    ಮೃತ ದುರ್ದೈವಿ ವ್ಯಕ್ತಿಯನ್ನು ಅಫಾಖ್(30) ಎಂದು ಗುರುತಿಸಲಾಗಿದೆ. ಈ ಘಟನೆ ಉತ್ತರ ದೆಹಲಿಯ ವೆಲ್‍ಕಮ್ ಕಾಲೊನಿಯಲ್ಲಿ ನಡೆದಿದೆ.

    ಘಟನೆ ವಿವರ:
    ಅಫಾಖ್ ವೆಲ್ ಕಮ್ ಕಾಲೋನಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ನೋಡಿ ನಾಯಿಯೊಂದು ಜೋರಾಗಿ ಬೊಗಳಿದೆ. ಅಲ್ಲದೇ ಕಚ್ಚಲು ಕೂಡ ಪ್ರಯತ್ನಿಸುತ್ತಿತ್ತು. ಇದರಿಂದ ಭಯಗೊಂಡ ಅಫಶಖ್ ತನ್ನ ರಕ್ಷಣೆಗಾಗಿ ಅಲ್ಲೇ ಇದ್ದ ಕಲ್ಲನ್ನು ಎತ್ತಿ ನಾಯಿ ಕಡೆ ಎಸದಿದ್ದಾರೆ. ಇವೆಲ್ಲವನ್ನು ಮನೆಯೊಳಗಿಂದ ಮಾಲೀಕ ಮೆಹ್ತಾಬ್ ಗಮನಿಸಿದ್ದಾನೆ.

                                            ಸಾಂದರ್ಭಿಕ ಚಿತ್ರ

    ತನ್ನ ಮನೆಯ ನಾಯಿಗೆ ಕಲ್ಲು ಹೊಡೆದಿದ್ದರಿಂದ ಸಿಟ್ಟುಗೊಂಡ ಮೆಹ್ತಾಬ್ ಮನೆಯೊಳಗಿಂದ ಪಿಸ್ತೂಲ್ ತಂದು ನೇರವಾಗಿ ಅಫಾಖ್ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ಅತುಲ್ ಥಾಕೂರ್ ವಿವರಿಸಿದ್ದಾರೆ.

    ಈ ಮೊದಲು ಅಫಾಖ್ ಮತ್ತು ಮೆಹ್ತಾಬ್ ಮಧ್ಯೆ ಮಾತಿನ ಚಕಮಕಿ ನಡೆದಿದೆ ಎಂದು ಹೇಳಲಾಗಿದೆ. ಗುಂಡಿನ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಫ್ತಾಖ್ ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದ್ರೆ ಅದಾಗಲೇ ಅಫ್ತಾಖ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆಯ ಬಳಿಕ ಮಾಲೀಕ ಮೆಹ್ತಾಬ್ ಸ್ಥಳದಿಂದ ಕಾಲ್ಕಿತ್ತಿದ್ದು, ಸದ್ಯ ಪೊಲೀಸರ ಆತನ ಪತ್ತೆಗೆ ಬಲೆ ಬೀಸಿದ್ದಾರೆ.

    ಎರಡು ದಿನಗಳ ಹಿಂದೆಯಷ್ಟೇ ನಾಯಿ ಮರಿಯ ವಿಚಾರವಾಗಿಯೇ ನಾಲ್ವರು ದುಷ್ಕರ್ಮಿಗಳು ಇಬ್ಬರು ಹುಡುಗರ ಮೇಲೆ ಕೋಲಿನಿಂದ ಹಿಗ್ಗಾಮುಗ್ಗವಾಗಿ ಥಳಿಸಿದ ಘಟನೆ ಗುರುಗ್ರಾಮದಲ್ಲಿ ನಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪತ್ನಿಗೆ ಗುಂಡಿಕ್ಕಿ ಕೊಲೆಗೈದು ಠಾಣೆಗೆ ಶರಣಾದ ನಿವೃತ್ತ ಶಿಕ್ಷಕ..!

    ಪತ್ನಿಗೆ ಗುಂಡಿಕ್ಕಿ ಕೊಲೆಗೈದು ಠಾಣೆಗೆ ಶರಣಾದ ನಿವೃತ್ತ ಶಿಕ್ಷಕ..!

    ಚಿಕ್ಕಮಗಳೂರು: ನಿವೃತ್ತ ಶಿಕ್ಷಕನೊಬ್ಬ ತನ್ನ ಪತ್ನಿಯನ್ನ ಪಿಸ್ತೂಲಿನಿಂದ ಗುಂಡಿಕ್ಕಿ ಕೊಂದು ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಜಿಲ್ಲೆಯ ಕಡೂರು ತಾಲೂಕಿನ ಕಂಚಿಗೂರು ಗ್ರಾಮದಲ್ಲಿ ನಡೆದಿದೆ.

    ಕಂಚಿಗೂರು ನಿವಾಸಿ ಬಸಪ್ಪ(63) ಕೊಲೆಗೈದ ನಿವೃತ್ತ ಶಿಕ್ಷಕ. ಜಯಮ್ಮ(53) ಪತಿಯಿಂದ್ಲೇ ಕೊಲೆಯಾದ ದುರ್ದೈವಿ. ಹಲವು ವರ್ಷಗಳಿಂದ ದಂಪತಿ ನಡುವೆ ವೈಮನಸಿತ್ತು. ಆದರೂ ಹೇಗೋ ಇಬ್ಬರು ಮನಸ್ತಾಪದ ನಡುವೆಯೂ ಜೀವನ ಸಾಗಿಸುತ್ತಿದ್ದರು. ಯಾವಾಗಲು ಇವರಿಬ್ಬರ ನಡುವೆ ಜಗಳವಾಗುತ್ತಲೇ ಇದರಿಂದ ಬಸಪ್ಪ ಬೇಸತ್ತು ಹೋಗಿದ್ದನು.

    ಆದರೆ ಸೋಮವಾರ ಬಸಪ್ಪ ಹಾಗೂ ಆತನ ಪತ್ನಿ ಜಯಮ್ಮನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದೆ. ಅಲ್ಲದೆ ಮಾತಿಗೆ ಮಾತು ಬೆಳೆದು ಜಗಳ ತಾರಕಕ್ಕೇರಿದೆ. ಈ ವೇಳೆ ಕೋಪಗೊಂಡ ಬಸಪ್ಪ ಇದಕ್ಕೆಲ್ಲ ಒಂದು ಅಂತ್ಯ ಹಾಡಬೇಕೆಂದು ಪಿಸ್ತೂಲಿನಿಂದ ಗುಂಡು ಹಾರಿಸಿ ಪತ್ನಿಯನ್ನು ಕೊಂದು ಹಾಕಿದ್ದಾನೆ. ಅಷ್ಟೇ ಅಲ್ಲದೆ ತಾನೇ ಪತ್ನಿಯನ್ನು ಕೊಲೆ ಮಾಡಿದ್ದು ಅಂತ ಪೋಲೀಸ್ ಠಾಣೆಗೆ ಬಂದು ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಘಟನೆ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಯಧ ಪೂಜೆ ವೇಳೆ ಬಂದೂಕುಧಾರಿಯಿಂದ ಎಡವಟ್ಟು..!

    ಆಯಧ ಪೂಜೆ ವೇಳೆ ಬಂದೂಕುಧಾರಿಯಿಂದ ಎಡವಟ್ಟು..!

    ದಾವಣರೆಗೆ: ಆಯುಧ ಪೂಜೆಗೆ ಕೆಲಸ ಮಾಡಲು ಸಹಾಯವಾಗುವ ಸಾಮಾಗ್ರಿಗಳನ್ನು ಹಾಗೂ ವಾಹನಗಳನ್ನು ಇಟ್ಟು ಪೂಜೆ ಮಾಡುವುದು ಸರ್ವೇ ಸಾಮಾನ್ಯ. ಆದರೆ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಹತ್ತಕ್ಕಿಂತ ಹೆಚ್ಚು ಗನ್ ಗಳನ್ನಿಟ್ಟು ಪೂಜೆ ಸಲ್ಲಿಸುವ ವೇಳೆ ಎಡವಟ್ಟು ಮಾಡಿಕೊಂಡಿದ್ದಾರೆ.

    ದಾವಣಗೆರೆಯ ಕುಂದುವಾಡ ಗ್ರಾಮದ ಗಜಾನನ ಎಂಬವರು ಆಯುಧ ಪೂಜೆಗೆ ಪಿಸ್ತೂಲ್, ಕೋವಿ ಹಾಗೂ ಲಾಂಗ್ ಗಳನ್ನು ಇಟ್ಟು ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಗನ್‍ಗಳಿಗೆ ಸುಮ್ಮನೆ ಪೂಜೆ ಮಾಡುವುದು ಬಿಟ್ಟು, ಬಂಧುಗಳ ಮುಂದೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

    ಗಾಳಿಯಲ್ಲಿ ಗುಂಡು ಹಾರಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಅಲ್ಲದೇ ಗಜಾನನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಪೂಜೆಗೆ ಇಟ್ಟ ಪಿಸ್ತೂಲ್ ಹಾಗೂ ಕೋವಿಗಳಿಗೆ ಪರ್ಮಿಟ್ ಪಡೆದಿದ್ದಾರೆ ಎನ್ನಲಾಗಿದೆ. ಪಿಸ್ತೂಲ್ ಗಳಿಂದ ಗುಂಡು ಹಾರಿಸಬಾರದು ಎನ್ನುವ ಕಾನೂನು ಇದೆ. ಆದ್ರೆ ಗಜಾನನ ಹಾಗೂ ಆತನ ಸಂಬಂಧಿಗಳು ಪೂಜೆ ನಂತರ ಗಾಳಿಯಲ್ಲಿ ಗುಂಡು ಹಾರಿಸಿ ಆಯುಧಪೂಜೆ ಆಚರಣೆ ಮಾಡಿದ್ದು, ಇದೀಗ ಪೇಚಿಗೆ ಸಿಲುಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ಗ್ಯಾಂಗ್, 2ಕಡೆ ನಾಲ್ವರ ಅಪಹರಣ – 7ಲಕ್ಷ ರೂ. ದೋಚಿ ಪರಾರಿ

    ಒಂದೇ ಗ್ಯಾಂಗ್, 2ಕಡೆ ನಾಲ್ವರ ಅಪಹರಣ – 7ಲಕ್ಷ ರೂ. ದೋಚಿ ಪರಾರಿ

    ಶಿವಮೊಗ್ಗ: ಒಂದೇ ಗ್ಯಾಂಗ್‍ನಿಂದ ಎರಡು ಕಡೆ ನಾಲ್ವರನ್ನು ಅಪಹರಿಸಿ ಏಳು ಲಕ್ಷ ದೋಚಿ ಪೊಲೀಸರಿಗೆ ಪಿಸ್ತೂಲ್ ತೋರಿಸಿ ಪರಾರಿಯಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ರೌಡಿ ಶೀಟರ್ ಜಮೀರ್ ಅಲಿಯಾಸ್ ಟೈಲ್ಸ್ ಬಚ್ಚ ಮತ್ತು ಗ್ಯಾಂಗ್ ಈ ಕೃತ್ಯ ಎಸಗಿದೆ. ಶಿವಮೊಗ್ಗದ ಪ್ರತಿಷ್ಠಿತ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಅಬಿಬ್ ಅಳಿಯ ಸಮಿ, ಮತ್ತವರ ಗೆಳೆಯ ಗ್ರಾನೈಟ್ ವ್ಯಾಪಾರಿ ಅನ್ಸರ್ ಸೇರಿ ನಾಲ್ವರ ಅಪಹರಣ ಮಾಡಲಾಗಿದೆ.

    ಚಾಲುಕ್ಯ ನಗರದಲ್ಲಿ ನಾಲ್ವರನ್ನು ಅಪಹರಿಸಿ, ನಾನಾ ಕಡೆ ಸುತ್ತಾಡಿಸಿ ದುಡ್ಡು ದೋಚಿ ಕೊನೆಗೆ ಅನುಪಿನ ಕಟ್ಟೆ ಬಳಿ ಬಿಟ್ಟು ಹೋಗಿದ್ದಾರೆ. ಪೊಲೀಸರು ಎಲ್ಲಾ ಕಡೆ ನಾಕಾಬಂಧಿ ಹಾಕಿದ್ದಾರೆ ಅನ್ನೋದು ಅರಿವಾದ ಕೂಡಲೇ ತಮ್ಮನ್ನು ಬೆನ್ನತ್ತಿದ ಪೊಲೀಸರಿಗೆ ಪಿಸ್ತೂಲ್ ತೋರಿಸಿ ಲಕ್ಷ್ಮೀ ಟಾಕೀಸ್ ಬಳಿ ಇನ್ನೋವಾ ಕಾರು ಬಿಟ್ಟು ಪಾತಕಿಗಳು ಪರಾರಿಯಾಗಿದ್ದಾರೆ.

    ಈ ಸಂಬಂಧ ದೊಡ್ಡಪೇಟೆ ಹಾಗೂ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಆಟೋ ಚಾಲಕನ ತಲೆಗೆ ಗನ್ ಇಟ್ಟ ಮಹಿಳೆ!

    ಆಟೋ ಚಾಲಕನ ತಲೆಗೆ ಗನ್ ಇಟ್ಟ ಮಹಿಳೆ!

    ಗುರುಗಾಂವ್: 34 ವರ್ಷದ ಮಹಿಳೆಯೊಬ್ಬರು ಆಟೋ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಲು ಯತ್ನಿಸಿದ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸಪ್ನಾ ಹಾಗೂ ಆಕೆಯ ಪತಿ ಭುರೇಯನ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

    ಏನಿದು ಪ್ರಕರಣ?:
    ಬುಧವಾರ ಗುರುಗಾಂವ್ ರಸ್ತೆ ಪಕ್ಕದಲ್ಲಿ ವಾಹನ ಪಾರ್ಕಿಂಗ್ ಮಾಡೋ ವಿಚಾರದಲ್ಲಿ ಮಹಿಳೆ ಹಾಗೂ ಆಟೋ ರಿಕ್ಷಾ ಚಾಲಕನಿಗೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ಮಹಿಳೆಯ ಪತಿ ತನಗೆ ಹೊಡೆದಿದ್ದಾನೆ ಅಂತ ಚಾಲಕ ಆರೋಪಿಸಿದ್ದಾರೆ.

    ಭವಾನಿ ಎನ್ಕ್ಲೇವ್ ಎಂಬ ಪ್ರದೇಶದಲ್ಲಿ ಬೆಳಗ್ಗೆ ನಡೆದ ಈ ಘಟನೆಯನ್ನು ಅಲ್ಲೇ ಇದ್ದ ಸ್ಥಳೀಯರು ಗಮನಿಸಿದ್ದಾರೆ. ಅಲ್ಲದೇ ಕೆಲವರು ಇದನ್ನು ತಮ್ಮ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಬಳಿಕ ಪೊಲೀಸರಿಗೆ ಈ ದೃಶ್ಯವನ್ನು ನೀಡಿದ್ದಾರೆ.

    ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಸಪ್ನಾ ಹಾಗೂ ಆಕೆಯ ಪತಿ ಭುರೇಯನ್ನು ಬಂಧಿಸಿ, ಸೆಕ್ಟರ್ 9 ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಇವರೊಂದಿಗೆ ಹಲ್ಲೆ ನಡೆಸಲು ಇನ್ನೋರ್ವ ವ್ಯಕ್ತಿ ಕೂಡ ಇದ್ದಿದ್ದು, ಆತ ಪೊಲೀಸರು ಬರುತ್ತಿದ್ದಂತೆಯೇ ಪರಾರಿಯಾಗಿದ್ದಾನೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಹಾಗೂ ಆಕೆಯ ಪತಿ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಹಾಗೆಯೇ ತಲೆಮರೆಸಿಕೊಂಡಿರೋ ಆರೋಪಿಯನ್ನು ಕೂಡ ಶೀಘ್ರವೇ ಬಂಧಿಸುವುದಾಗಿ ಎಸಿಪಿ ರಾಜೀವ್ ಕುಮಾರ್ ತಿಳಿಸಿದ್ದಾರೆ.

    ಆಟೋ ರಿಕ್ಷಾ ಚಾಲಕನನ್ನು ಸುನೀಲ್ ಎಂದು ಗುರುತಿಸಲಾಗಿದ್ದು, ಇವರು ರಸ್ತೆ ಪಕ್ಕದಲ್ಲಿ ತನ್ನ ಆಟೋವನ್ನು ಪಾರ್ಕ್ ಮಾಡಿದ್ದರು. ಈ ವೇಳೆ ಅಲ್ಲಿಗೆ ಬಂದ ಸಪ್ನಾ ವಾಹನ ಅಲ್ಲಿಂದ ತೆಗೆಯುವಂತೆ ಸೂಚಿಸಿದ್ದಾರೆ. ಆದ್ರೆ ಸಪ್ನಾ ಮಾತನ್ನು ಸುನೀಲ್ ಕಡೆಗಣಿಸಿದ್ದಾರೆ. ಇದರಿಂದ ಸಿಟ್ಟುಗೊಂಡ ಮಹಿಳೆ ಸುನೀಲ್ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ. ಈ ವೇಳೆ ಸುನೀಲ್ ಪಕ್ಕದಲ್ಲೇ ಆಟೋ ನಿಲ್ಲಿಸಿ ಜಗಳವಾಡಿದ್ದಾನೆ. ಹೀಗಾಗಿ ಇಬ್ಬರು ಕೈಕೈ ಮಿಲಾಯಿಸಿಕೊಂಡಿದ್ದಾರೆ ಅಂತ ಕುಮಾರ್ ತಿಳಿಸಿದ್ದಾರೆ.

    ಜಗಳ ತಾರಕಕ್ಕೇರಿ ಸಪ್ನಾ ತನ್ನ ಹಣೆಗೆ ಪಿಸ್ತೂಲ್ ಇಟ್ಟು ಗುಂಡಿನ ದಾಳಿ ನಡೆಸಲು ಮುಂದಾದ್ರು. ಈ ವೇಳೆ ಎಚ್ಚೆತ್ತುಕೊಂಡು ಮಹಿಳೆ ಕೈಯಿಂದ ಪಿಸ್ತೂಲನ್ನು ದೂಡಿ ಆಗುವ ಅನಾಹುತದಿಂದ ಪಾರಾದೆ ಅಂತ ಚಾಲಕ ಸುನೀಲ್ ನಡೆದ ಘಟನೆಯನ್ನು ವಿವರಿಸಿದ್ದಾರೆ.

  • ಆಟವಾಡೋದಾಗಿ ರಿಯಲ್ ಗನ್‍ನಿಂದಲೇ ಶೂಟ್: ಐಸಿಯುನಲ್ಲಿ ತಾಯಿ

    ಆಟವಾಡೋದಾಗಿ ರಿಯಲ್ ಗನ್‍ನಿಂದಲೇ ಶೂಟ್: ಐಸಿಯುನಲ್ಲಿ ತಾಯಿ

    ಕೋಲ್ಕತ್ತಾ: ಆಟವಾಡೋ ಗನ್ ಎಂದು ತಿಳಿದು ಮಗಳು ತಾಯಿಗೆ ಶೂಟ್ ಮಾಡಿದ ಘಟನೆ ಭಾನುವಾರ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ.

    ಕಾಕೋಲಿ ಜಾನಾ ಗುಂಡಿನ ಏಟಿನಿಂದ ಆಸ್ಪತ್ರೆಯಲ್ಲಿ ಬಳುತ್ತಿರುವ ಮಹಿಳೆ. ಆಟವಾಡೋ ಪಿಸ್ತೂಲ್ ಎಂದು ತಿಳಿದು ತಾಯಿಯೇ ಆ ಪಿಸ್ತೂಲ್‍ನನ್ನು ತನ್ನ ಮಗಳಿಗೆ ನೀಡಿದ್ದರು. ಬಾಲಕಿ ಆ ಪಿಸ್ತೂಲ್‍ನಲ್ಲಿ ಆಟವಾಡುವಾಗ ನಿಜವಾದ ಪಿಸ್ತೂಲ್ ಎಂದು ತಿಳಿಯದೇ ತನ್ನ ತಾಯಿಗೆ ಶೂಟ್ ಮಾಡಿದ್ದಾಳೆ.

    ಭಾನುವಾರ ಬೆಳಗ್ಗೆ ಕಾಕೋಲಿ ತನ್ನ ಮನೆಯ ಆವರಣದಲ್ಲಿ ಆ ಪಿಸ್ತೂಲ್ ಅನ್ನು ನೋಡಿದ್ದರು. ನಂತರ ಅದು ಆಟವಾಡೋ ಪಿಸ್ತೂಲ್ ಎಂದು ತಿಳಿದು ತನ್ನ ಮಗಳಿಗೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿ ಆ ಪಿಸ್ತೂಲ್‍ನಿಂದ ಆಟವಾಡುವಾಗ ಆಕಸ್ಮಿಕವಾಗಿ ತನ್ನ ತಾಯಿಯ ಬೆನ್ನಿಗೆ ಶೂಟ್ ಮಾಡಿದ್ದಾಳೆ. ತಕ್ಷಣ ಕಾಕೋಲಿ ಅವರನ್ನು ಆರಂಬಗ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಸದ್ಯ ಕಾಕೋಲಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿಯನ್ನು ವಶಕ್ಕೆ ಪಡೆದಿದ್ದೇವೆ. ಬಾಲಕಿ ಆಕಸ್ಮಿಕವಾಗಿ ಗುಂಡನ್ನು ಹಾರಿಸಿದ್ದಾಳೆ. ಆ ಗುಂಡು ರೂಮಿನಲ್ಲಿ ಕುಳಿತ್ತಿದ್ದ ಆಕೆಯ ತಾಯಿಯ ಬೆನ್ನಿಗೆ ಬಿದ್ದಿದೆ. ಸದ್ಯ ಬಾಲಕಿ ಶಾಕ್ ನಲ್ಲಿದ್ದು, ಏನು ಹೇಳುವ ಸ್ಥಿತಿಯಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

    ಸದ್ಯ ಪೊಲೀಸರು ಆ ಪಿಸ್ತೂಲ್ ಮನೆಯ ಆವರಣದಲ್ಲಿ ಹೇಗೆ ಬಂತು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

  • ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿದ್ದರೂ, ತಂದೆಯ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡ ವಿದ್ಯಾರ್ಥಿನಿ

    ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿದ್ದರೂ, ತಂದೆಯ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡ ವಿದ್ಯಾರ್ಥಿನಿ

    ಚಂಡೀಗಢ: ಪರೀಕ್ಷೆಯಲ್ಲಿ ಉತ್ತಮ ಅಂಕ ಬಂದಿದ್ದರೂ ವಿದ್ಯಾರ್ಥಿನಿಯೊಬ್ಬಳು ತಂದೆಯ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಜಿಂದ್ ನಲ್ಲಿ ನಡೆದಿದೆ.

    ಮೃತ ವಿದ್ಯಾರ್ಥಿಯನ್ನು 17 ವರ್ಷದ ಅಂಜಲಿ ಕುಮಾರಿ ಎಂದು ಗುರುತಿಸಲಾಗಿದೆ. ಈಕೆ 11ನೇ ತರಗತಿಯಲ್ಲಿ ಓದುತ್ತಿದ್ದಳು. ಇಂದು ಬೆಳಗ್ಗೆ ಅಂಜಲಿ ತಂದೆ ಕೆಲಸಕ್ಕಾಗಿ ಮನೆಯಿಂದ ಹೋಗಿದ್ದರು. ತಂದೆ ಕೆಲಸಕ್ಕೆ ಹೋಗುತ್ತಿದ್ದಂತೆ ಅಂಜಲಿ ಬಾತ್ ರೂಮಿಗೆ ತೆರಳಿ ಲಾಕ್ ಮಾಡಿಕೊಂಡ ತಂದೆಯ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡಿದ್ದಾಳೆ. ನಂತರ ಕುಟುಂಬದವರು ತಂದೆಗೆ ಮಾಹಿತಿ ತಿಳಿಸಿದ್ದಾರೆ.

    ಕೂಡಲೇ ತಂದೆ ಮನೆಗೆ ಬಂದು ಬಾತ್ ರೂಮಿನ ಬಾಗಿಲು ಮುರಿದು ಒಳ ಹೋಗುವಷ್ಟರಲ್ಲಿ ಅಂಜಲಿ ತಲೆಗೆ ಗುಂಡೇಟು ಬಿದ್ದು ಮೃತಪಟ್ಟಿದ್ದಾಳೆ. ಭಾನುವಾರ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಇದರಲ್ಲಿ ಅಂಜಲಿ ಉತ್ತಮ ಅಂಕ ಪಡೆದುಕೊಂಡಿದ್ದಳು. ಆದರೆ ಕ್ಲಾಸ್ ಗೆ ಟಾಪ್ ಬರಲಿಲ್ಲ ಎಂದು ಆಕೆ ಮನನೊಂದಿದ್ದಳು ಎನ್ನಲಾಗಿದ್ದು, ಇದರಿಂದ ತಂದೆಯ ಲೈಸನ್ಸ್ ಹೊಂದಿದ್ದ ರಿವಾಲ್ವರ್  ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಮನೆಯಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಪಿಲ್ಲುಖೆರಾದಲ್ಲಿರೋ ಖಾಸಗಿ ಶಾಲೆಯಲ್ಲಿ ಅಂಜಲಿ ಓದುತ್ತಿದ್ದು, ತಂದೆ ಸಿವಾಹ್ ಗ್ರಾಮದ ಸರ್‍ಪಂಚ್ ಆಗಿದ್ದಾರೆ. ಸದ್ಯಕ್ಕೆ ಅಂಜಲಿ ಸಾವಿನ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಪಡೆದಿದ್ದ ಶಶಿಧರ್ ಮೇಲೆ ಫೈರಿಂಗ್

    ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ಪಡೆದಿದ್ದ ಶಶಿಧರ್ ಮೇಲೆ ಫೈರಿಂಗ್

    ವಿಜಯಪುರ: ಭೀಮಾತೀರದ ಹಂತಕ ಶಶಿಧರ್ ಮುಂಡೆವಾಡಿ ಪಿಎಸ್‍ಐ ಮತ್ತು ಪೇದೆ ಮೇಲೆ ಚಾಕುನಿಂದ ಹಲ್ಲೆ ನಡೆಸಿರುವ ಘಟನೆ ವಿಜಯಪುರದ ಇಂಡಿ ತಾಲೂಕಿನ ಬರಡೋಲ ಗ್ರಾಮದ ಬಳಿ ನಡೆದಿದೆ.

    ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದ ಆರೋಪ ಎದುರಿಸುತ್ತಿರುವ ಶಶಿಧರ್ ಮುಂಡೆವಾಡಿ ಅಕ್ರಮ ಪಿಸ್ತೂಲ್ ಸಾಗಾಟ ಮಾಡುತ್ತಿದ್ದ ಶಂಕೆಯ ಮೇಲೆ ಆತ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಚಡಚಣ ಪಿಎಸ್‍ಐ ಗೋಪಾಲ್ ಹಳ್ಳುರ ತಪಾಸಣೆಗೆ ಮುಂದಾಗಿದ್ದರು. ಈ ವೇಳೆ ಶಶಿಧರ್ ಪಿಎಸ್‍ಐ ಗೋಪಾಲ ಹಳ್ಳೂರ್ ಹಾಗೂ ಓರ್ವ ಪೇದೆ ಮೇಲೆ ಚಾಕೂವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ.

    ಶಶಿಧರ್ ಮುಂಡೆವಾಡಿ ಹಲ್ಲೆ ನಡೆಸಿದ ಸಮಯದಲ್ಲಿ ಪಿಎಸ್‍ಐ ಗೋಪಾಲ್ ಹಳ್ಳೂರ್ ಕೈಗೆ ತಾಗಿದ್ದು, ಪೇದೆಗೂ ಗಾಯವಾಗಿದೆ. ಈ ವೇಳೆ ಪಿಎಸ್‍ಐ ಗೋಪಾಲ ಅವರು ತಮ್ಮ ರಕ್ಷಣೆಗಾಗಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಅದರೂ ಆರೋಪಿ ಜಗ್ಗದ ಕಾರಣ ಶಶಿಧರ್ ಮುಂಡೆವಾಡಿ ಕಾಲಿಗೆ ಒಂದು ಸುತ್ತು ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಶಶಿಧರ್ ಮುಂಡೆವಾಡಿ ಹಾಗೂ ಚಾಕುವಿನಿಂದ ಹಲ್ಲೆಗೆ ಒಳಗಾಗಿದ್ದ ಪಿಎಸ್‍ಐ ಗೋಪಾಲ್ ಮತ್ತು ಪೇದೆಯನ್ನು ಚಡಚಣ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ವಿಜಯಪುರದ ಬಿಎಲ್‍ಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪೊಲೀಸ್ ದಾಳಿಯ ವೇಳೆ ಶಶಿಧರ್ ನಿಂದ ಎರಡು ನಾಡ ಪಿಸ್ತೂಲ್, ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಸುದ್ದಿ ತಿಳಿಯುತ್ತಿದಂತೆ ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್‍ಪಿ ಶಿವಕುಮಾರ್ ಗುಣಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಶಶಿಧರ್ ನನ್ನು ದಾಖಲಿಸಿರುವ ಆಸ್ಪತ್ರೆಗೆ ಇಂಡಿ ಪೊಲೀಸ್ ವಲಯದಿಂದ ಹೆಚ್ಚುವರಿ ಬೀಗಿ ಪೊಲೀಸ್ ಬಂದೋಬಸ್ತು ನಿಯೋಜಿಸಿಲಾಗಿದೆ.

  • ಸೆಲ್ಫಿ ಎಡವಟ್, ಪಿಸ್ತೂಲಿನಿಂದ ಶಿಕ್ಷಕನನ್ನು ಕೊಂದೇಬಿಟ್ಟ 11ರ ಬಾಲಕ!

    ಸೆಲ್ಫಿ ಎಡವಟ್, ಪಿಸ್ತೂಲಿನಿಂದ ಶಿಕ್ಷಕನನ್ನು ಕೊಂದೇಬಿಟ್ಟ 11ರ ಬಾಲಕ!

    ನವದೆಹಲಿ: ಪಿಸ್ತೂಲ್ ಜೊತೆಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಂಬಂಧಿ ಶಿಕ್ಷಕರೊಬ್ಬರನ್ನು ಬಾಲಕನೊಬ್ಬನ ಗುಂಡೇಟಿಗೆ ಬಲಿಯಾಗಿರುವ ಘಟನೆ ದೆಹಲಿಯ ಸರಿತಾ ವಿಹಾರ್ ಪ್ರದೇಶದಲ್ಲಿ ನಡೆದಿದೆ.

    ಪ್ರಶಾಂತ್ ಚೌಹಾಣ್(23) ಮೃತ ದುರ್ದೈವಿ. ಮೂಲತಃ ಉತ್ತರ ಪ್ರದೇಶದ ಪಾಲಿ ಗ್ರಾಮದ ನಿವಾಸಿಯಾಗಿದ್ದು, ಈತ ಶಹದಾರಾದಲ್ಲಿ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸರಿತಾ ವಿಹಾರ್‍ದಲ್ಲಿರುವ ತಮ್ಮ ಚಿಕ್ಕಪ್ಪನ ಮನೆಗೆ ಹೋಗಿದ್ದಾಗ ಗುರುವಾರ ಈ ಘಟನೆ ಸಂಭವಿಸಿದೆ.

    ಚೌಹಾನ್ ತನ್ನ ಸಂಬಂಧಿ 11ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನನ್ನು ಭೇಟಿಯಾಗಲು ಚಿಕ್ಕಪ್ಪನ ಮನೆಗೆ ಹೋಗಿದ್ದಾರೆ. ಈ ವೇಳೆ ಬಾಲಕ ಲೈಸೆನ್ಸ್ ಇದ್ದ ಪಿಸ್ತೂಲ್ ತೆಗೆದುಕೊಂಡು ಪ್ರಶಾಂತ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾಗಿದ್ದಾನೆ. ನಂತರ ಇಬ್ಬರೂ ಒಂದು ರೂಮ್‍ಗೆ ಹೋಗಿ ಬಾಗಿಲು ಹಾಕಿಕೊಂಡು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೇಳೆ ಬಾಲಕನ ಕೈಯಲ್ಲಿದ್ದ ಗನ್‍ನಿಂದ ಆಕಸ್ಮಿಕವಾಗಿ ಗುಂಡು ಸಿಡಿದಿದ್ದು, ಅದು ಪ್ರಶಾಂತ್ ಚೌಹಾಣ್ ಬಿದ್ದಿದೆ ಎಂದು ಪೊಲೀಸ್ ಅಧಿಕಾರಿ ಚಿನ್ಮಯ್ ಬಿಸ್ವಾಲ್ ಹೇಳಿದ್ದಾರೆ.

    ದೇಹಕ್ಕೆ ಗುಂಡು ಬಿದ್ದು, ಗಾಯಗೊಂಡಿದ್ದ ಚೌಹಾಣ್ ನನ್ನು ಕುಟುಂಬದವರು ಸಮೀಪದ ಅಪೋಲೋ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ವೈದ್ಯರು ಪರೀಕ್ಷೆ ಮಾಡಿ ಚೌಹಾಣ್ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

    ಆರೋಪಿ ಇನ್ನೂ ಅಪ್ರಾಪ್ತನಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಾಲಾಪರಾಧ ಕೇಂದ್ರಕ್ಕೆ ಒಪ್ಪಿಸಲಾಗಿದೆ. ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.