Tag: ಪಿಸ್ತೂಲ್

  • ದೇಶಿ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್

    ದೇಶಿ ನಿರ್ಮಿತ ಪಿಸ್ತೂಲ್ ಇಟ್ಟುಕೊಂಡಿದ್ದ ಶಿಕ್ಷಕಿ ಅರೆಸ್ಟ್

    ಲಕ್ನೋ: ದೇಶಿ ನಿರ್ಮಿತ ಪಿಸ್ತೂಲ್ ಹೊಂದಿದ್ದ ಮಹಿಳೆಯೊಬ್ಬಳನ್ನು ಉತ್ತರ ಪ್ರದೇಶದ ಮೈನ್‍ಪುರಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಕರಿಷ್ಮಾ ಸಿಂಗ್ ಯಾದವ್ ಎಂದು ಗುರುತಿಸಲಾಗಿದ್ದು, ಈಕೆ ಫಿರೋಜಾಬಾದ್‍ನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಳೆ. ಆದರೆ ಕೆಲವು ಕೆಲಸಗಳ ಮೇಲೆ ಮಂಗಳವಾರ ಮೈನ್ಪುರಿಗೆ ಬಂದಿದ್ದಳು. ಈ ವೇಳೆ ಕೊತ್ವಾಲಿ ಪ್ರದೇಶದಲ್ಲಿ ಮಹಿಳೆಯೊಬ್ಬರು ಪಿಸ್ತೂಲ್ ಹಿಡಿದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ದೊರೆತ ಬಳಿಕ ಕರಿಷ್ಮಾ ಸಿಂಗ್ ಯಾದವ್‍ರನ್ನು ಹಿಂಬಾಲಿಸಿ ಪತ್ತೆ ಹಚ್ಚಲಾಯಿತು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ

    ಮಹಿಳಾ ಪೇದೆಯೊಬ್ಬರು ಆರೋಪಿಯನ್ನು ಪರೀಕ್ಷಿಸಿ, ಆಕೆ ಧರಿಸಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್‍ನ ಜೇಬಿನಿಂದ 315 ಬೋರ್ ಕಂಟ್ರಿಮೇಡ್ ಪಿಸ್ತೂಲ್ ಹೊರತೆಗೆದಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಕರಿಷ್ಮಾ ಸಿಂಗ್ ಯಾದವ್ ಅವರನ್ನು ತಕ್ಷಣವೇ ಪೊಲೀಸರು ವಶಕ್ಕೆ ಪಡೆದುಕೊಂಡು, ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಇದೀಗ ಆಕೆ ಆಯುಧವನ್ನು ಏಕೆ ಸಾಗಿಸುತ್ತಿದ್ದಳು ಎಂದು ತಿಳಿಯಲು ಅಧಿಕಾರಿಗಳು ಆರೋಪಿಯನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೈನ್‍ಪುರಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಬಿ.ಎಸ್ ಯಡಿಯೂರಪ್ಪ ಭೇಟಿಯಾದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

  • ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ..!

    ಪಿಸ್ತೂಲ್ ಕಸಿದುಕೊಂಡು ಪೊಲೀಸರ ಮೇಲೆ ದಾಳಿ ಮಾಡಿದ ಆರೋಪಿ..!

    ನವದೆಹಲಿ: ಕಸ್ಟಡಿಯಲ್ಲಿದ್ದ ದುಷ್ಕರ್ಮಿ ಪೊಲೀಸರ ಬಳಿ ಇದ್ದ ಪಿಸ್ತೂಲ್ ಕಸಿದುಕೊಂಡಿದ್ದು, ಅವರ ಮೇಲೆಯೇ ಗುಂಡು ಹಾರಿಸಿ ಪರಾರಿಯಾಗಲೂ ಯತ್ನಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಪೊಲೀಸ್ ಕಸ್ಟಡಿಯಲ್ಲಿದ್ದ ಕುಖ್ಯಾತ ಸ್ನ್ಯಾಚರ್, ಕಾನ್‍ಸ್ಟೆಬಲ್‍ನ ಪಿಸ್ತೂಲ್ ಕಸಿದುಕೊಂಡು ಅಲ್ಲಿದ್ದ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾನೆ. ಈ ವೇಳೆ ಒಬ್ಬ ಪೊಲೀಸ್ ಪೇದೆಗೆ ಗುಂಡು ತಗುಲಿದೆ. ಗುಂಡು ಹಾರಿಸಿದ ತಕ್ಷಣ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಪೊಲೀಸರು ಕೂಡ ಆರೋಪಿ ವಿರುದ್ಧ ಪ್ರತಿದಾಳಿ ನಡೆಸಿ ಗುಂಡು ಹಾರಿಸಿದ್ದಾರೆ. ಬಳಿಕ ಆರೋಪಿಯ ಕಾಲಿಗೆ ಗುಂಡು ತಗುಲಿದ್ದು, ತಕ್ಷಣ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಬೆಂಬಲಿಸಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬೃಹತ್ ಪ್ರತಿಭಟನೆ!

    ಗಾಯಗೊಂಡಿದ್ದ ಪೇದೆ ಹಾಗೂ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಯನ್ನು ಫೈಝಲ್ ಎಂದು ಹೆಸರಿಸಲಾಗಿದ್ದು, ಈತ ಈಗಾಗಲೇ ಹಲವು ಸರಗಳ್ಳತನ ಮತ್ತು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಬಂಧಿತ ಫೈಸಲ್‍ನನ್ನು ಪೊಲೀಸರು ಉತ್ತರ ದೆಹಲಿಯ ಸೆಕ್ಟರ್ ಎ 5 ರಲ್ಲಿ ಆತನ ಇತರ ಸಹಚರರು ಮತ್ತು ಲೂಟಿ ಮಾಡಿದ ಮೊಬೈಲ್ ಫೋನ್ ಹುಡುಕಲು ಕರೆದುಕೊಂಡು ಹೋಗಿದ್ದಾರೆ.

    ಅವಕಾಶ ನೋಡಿ ಪಿಸ್ತೂಲ್ ಕಿತ್ತುಕೊಂಡ!
    ಅವಕಾಶ ನೋಡಿದ ಫೈಝಲ್ ಏಕಾಏಕಿ ಸಿಪತಿ ವಿಕ್ರಮ್ ಬಳಿ ಇದ್ದ ಪಿಸ್ತೂಲ್ ಕಸಿದುಕೊಂಡಿದ್ದು, ಗುಂಡು ಹಾರಿಸಿ ಓಡಿ ಹೋಗಿದ್ದಾನೆ. ಈ ಹಿನ್ನೆಲೆ ಪೇದೆ ಕೈಗೆ ಗುಂಡು ತಗುಲಿದೆ. ಈ ವೇಳೆ ಪೊಲೀಸರು ಓಡಿ ಹೋಗದೆ ನಿಲ್ಲುವಂತೆ ಎಷ್ಟೇ ಹೇಳಿದರೂ, ಆತ ಹಿಂದೆ ಗುಂಡು ಹಾರಿಸುತ್ತಾ ಓಡಿ ಹೋಗುತ್ತಿದ್ದ. ಪರಿಣಾಮ ಪೊಲೀಸರು ಆತನ ಮೇಲೆ ಪ್ರತಿದಾಳಿ ಮಾಡಿದ್ದಾರೆ.

    ಫೈಝಲ್ ಕಾಲಿಗೆ ಗುಂಡು!
    ಗುಂಡು ಫೈಝಲ್‍ನ ಎಡಗಾಲಿಗೆ ತಗುಲಿದ್ದು, ನಂತರ ಅವನು ಅಲ್ಲಿಯೇ ಬಿದ್ದನು. ಪೊಲೀಸರು ಆತನನ್ನು ಸದೆಬಡಿದು ಪಿಸ್ತೂಲ್ ಕಸಿದುಕೊಂಡಿದ್ದಾರೆ. ಇದಾದ ನಂತರ ಕಾನ್‍ಸ್ಟೆಬಲ್ ಮತ್ತು ಆರೋಪಿ ಇಬ್ಬರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ. ಇದನ್ನೂ ಓದಿ: ಬಿಜೆಪಿ ಶಾಸಕನಿಂದ 25 ವರ್ಷದ ಯುವತಿ ಕಿಡ್ನಾಪ್ – ಕೇಸ್ ದಾಖಲು

    POLICE

    ಫೈಸಲ್ ಸ್ಪೋರ್ಟ್ಸ್ ಬೈಕ್ ಓಡಿಸುವುದರಲ್ಲಿ ಪರಿಣತಿ!
    ಫೈಝಲ್ ಬಳಿ ಸ್ಪೋಟ್ರ್ಸ್ ಬೈಕ್ ಇದ್ದು, ಅದನ್ನು ಚಲಾಯಿಸುವುದರಲ್ಲಿ ಆತ ನಿಪುಣನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಸರಗಳ್ಳತನದಂತಹ ಕೃತ್ಯ ನಡೆಸಿ ಬೈಕ್ ಚಲಾಯಿಸಿಕೊಂಡು ವೇಗವಾಗಿ ಓಡಿಸುತ್ತಾನೆ. ಅತಿವೇಗದಲ್ಲಿ ಟ್ರಾಫಿಕ್ ನಲ್ಲಿ ಬೈಕ್ ಓಡಿಸುವುದರಿಂದ ಆರೋಪಿ ಜನ ಮತ್ತು ಪೊಲೀಸರ ಕೈಗೆ ಸಿಕ್ಕಿಬೀಳುವುದಿಲ್ಲ. ಫೈಝಲ್ ದಿನಕ್ಕೆ 7 ರಿಂದ 8 ಸರಗಳ್ಳತನ ಅಥವಾ ದರೋಡೆ ಮಾಡುತ್ತಾನೆ ಎಂದು ಪೊಲೀಸರು ವಿವರಿಸಿದ್ದಾರೆ.

  • ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದ ಬಿಜೆಪಿ ಮುಖಂಡನ ಮೇಲೆ ಪ್ರಕರಣ ದಾಖಲು

    ಪಿಸ್ತೂಲ್ ತೋರಿಸಿ ಧಮ್ಕಿ ಹಾಕಿದ್ದ ಬಿಜೆಪಿ ಮುಖಂಡನ ಮೇಲೆ ಪ್ರಕರಣ ದಾಖಲು

    ಧಾರವಾಡ: ಅಂಗಡಿ ಇಡುವ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಾಗ ಬಿಜೆಪಿ ಮುಖಂಡನೋರ್ವ ಪಿಸ್ತೂಲ್ ತೆಗೆದು ಗುಂಡು ಹಾರಿಸಿ ಕೊಲೆ ಮಾಡುವ ಬೆದರಿಕೆ ಹಾಕಿದ ಘಟನೆ ಧಾರವಾಡ ಜಿಲ್ಲೆಯ ಹೊಸ ತೇಗೂರ ಗ್ರಾಮದಲ್ಲಿ ನಡೆದಿತ್ತು.

    ಸದ್ಯ ಆ ಬಿಜೆಪಿ ಮುಖಂಡನ ಮೇಲೆ ಪ್ರಕರಣ ದಾಖಲಾಗಿದೆ. ನಾಗಪ್ಪ ಗಾಣಿಗೇರ ಎಂಬ ಬಿಜೆಪಿ ಮುಖಂಡನೇ ಪಿಸ್ತೂಲ್ ತೆಗೆದು ಗುಂಡು ಹಾರಿಸಲು ಮುಂದಾಗಿದ್ದ. ಮಲ್ಲಿಕ ಎಂಬವನು ಸರ್ಕಾರಿ ಜಾಗದಲ್ಲಿ ಎಗ್‍ರೈಸ್ ಅಂಗಡಿ ಇಡಲು ಮುಂದಾದಾಗ, ಬಿಜೆಪಿ ಮುಖಂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ. ಈ ವಿಚಾರವಾಗಿ ಮಲ್ಲಿಕ ಪರ ನಾಗಪ್ಪನಿಗೆ ಮಾತನಾಡಲು ಬಂದಿದ್ದ ಮಡಿವಾಳೆಪ್ಪನಿಗೆ, ನಾಗಪ್ಪ ಪಿಸ್ತೂಲ್ ತೊರಿಸಿದ್ದ. ಈ ಪ್ರಕರಣ ನಡೆದ ನಂತರ ಮಡಿವಾಳೆಪ್ಪ ಗರಗ ಪೊಲೀಸ್ ಠಾಣೆಗೆ ದೂರನ್ನ ನೀಡಿದ್ದ. ನಾಗಪ್ಪ ನನಗೆ ಜೀವ ಬೆದರಿಕೆ ಹಾಕಿದ್ದಲ್ಲದೇ ಪಿಸ್ತೂಲ್ ನಿಂದ ಹೊಡೆಯಲು ಯತ್ನ ನಡೆದಿದೆ ಎಂದು ದೂರು ಕೊಟ್ಟಿದ್ದನು. ಇದನ್ನೂ ಓದಿ: ಇಟಲಿಯ ತಾಯಿ, ಭಾರತದ ತಂದೆ – ರಾಹುಲ್ ಗಾಂಧಿ ವಿರುದ್ಧ ಅನಿಲ್ ವಿಜ್ ಕಿಡಿ

    ಪ್ರಕರಣಕ್ಕೆ ಸಂಬಂಧಿಸಿ ಗರಗ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ನಾಗಪ್ಪನ ಮೇಲೆ ಪ್ರಕರಣ ದಾಖಲಿಸಿಕೊಂಡು ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ನಾಗಪ್ಪನಿಗೆ ಹಿಂದಿನ ಯಾವುದೇ ಕ್ರಿಮಿನಲ್ ರೆಕಾರ್ಡ್ ಇಲ್ಲದ ಕಾರಣ ತನಿಖೆ ನಡೆಸುತ್ತಿದ್ದು, ತನಿಖೆ ನಂತರ ಬಂಧಿಸುವದಾದರೆ ಬಂಧಿಸುತ್ತೆವೆ ಎಂದು ಎಸ್‍ಪಿ ಕೃಷ್ಣಕಾಂತ ಹೇಳಿದ್ದಾರೆ. ಇನ್ನು ವಶಕ್ಕೆ ಪಡೆದ ಪಿಸ್ತೂಲ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.

  • ದೆಹಲಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಅರೆಸ್ಟ್ – ಎಕೆ 47, ಮದ್ದುಗುಂಡುಗಳು ವಶಕ್ಕೆ

    ದೆಹಲಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಅರೆಸ್ಟ್ – ಎಕೆ 47, ಮದ್ದುಗುಂಡುಗಳು ವಶಕ್ಕೆ

    ನವದೆಹಲಿ: ಪಾಕಿಸ್ತಾನದ ಭಯೋತ್ಪಾದಕನನ್ನು ರಾಷ್ಟ್ರ ರಾಜಧಾನಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ಭಯೋತ್ಪಾದಕ ನಕಲಿ ದಾಖಲೆಗಳನ್ನು ಹೊಂದಿದ್ದು, ದೆಹಲಿಯಲ್ಲಿ ವಾಸವಾಗಿದ್ದ. ಇದೀಗ ದೆಹಲಿಯ ಲಕ್ಷ್ಮೀನಗರ ಪ್ರದೇಶದಿಂದ ದೆಹಲಿಯ ವಿಶೇಷ ಸೆಲ್ ಪಾಕಿಸ್ತಾನಿ ಭಯೋತ್ಪಾದನನ್ನು ಸೆರೆಹಿಡಿದಿದ್ದಾರೆ. ಇದೀಗ ಆರೋಪಿಯಿಂದ ಎಕೆ-47 ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರಿಂದಾಗಿ ಈ ಬಾರಿ ನವರಾತ್ರಿಯಲ್ಲಿ ನಡೆಯಬೇಕಿದ್ದ ಭೀಕರ ಭಯೋತ್ಪಾದ ದಾಳಿಯೊಂದು ತಪ್ಪಿದಂತಾಗಿದೆ. ಇದನ್ನೂ ಓದಿ: 1960ರಲ್ಲಿ ಧರ್ಮೇಂದ್ರ ಖರೀದಿಸಿದ ಮೊದಲ ಕಾರಿನ ಬೆಲೆ ಎಷ್ಟು ಗೊತ್ತಾ?

    ಬಂಧಿತ ಪಾಕಿಸ್ತಾನಿ ಭಯೋತ್ಪಾದಕನನ್ನು ಮೊಹಮ್ಮದ್ ಅಶ್ರಫ್ ಎಂದು ಗುರುತಿಸಲಾಗಿದ್ದು, ಈತ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನಿವಾಸಿಯಾಗಿದ್ದಾನೆ. ಮೊಹಮ್ಮದ್ ಅಶ್ರಫ್ ದೆಹಲಿಯ ಶಾಸ್ತ್ರಿ ನಗರದಲ್ಲಿ ಅಲಿ ಅಹ್ಮದ್ ನೂರಿ ಹೆಸರಿನಲ್ಲಿ ವಾಸಿಸುತ್ತಿದ್ದನು. ವಿಚಾರಣೆ ವೇಳೆ, ಮೊಹಮ್ಮದ್ ಅಶ್ರಫ್ ಭಯೋತ್ಪಾದಕ ಸಂಘಟನೆ ಐಎಸ್‍ಐ ಜೊತೆ ಸಂಪರ್ಕ ಹೊಂದಿದ್ದು, ಕೆಲವು ದಿನಗಳ ಕಾಲ ಕಾಶ್ಮೀರದಲ್ಲಿ ಕೂಡ ತಂಗಿದ್ದ ವಿಚಾರವನ್ನು ತಿಳಿಸಿದ್ದಾನೆ. ಇದನ್ನೂ ಓದಿ: ಪುಟ್ಕೋಸಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಸರ್ಕಾರ ತೆಗೆದ ಮಹಾನ್ ನಾಯಕ – ಸಿದ್ದು ವಿರುದ್ಧ ಹೆಚ್‍ಡಿಕೆ ವಾಗ್ದಾಳಿ

    ಇದೀಗ ಪೊಲೀಸರು ಬಂಧಿತ ಭಯೋತ್ಪಾದಕನಿಂದ ಒಂದು ಎಕೆ -47 ದಾಳಿ ರೈಫಲ್ ಜೊತೆಗೆ ಒಂದು ಹೆಚ್ಚುವರಿ ಮ್ಯಾಗಜೀನ್, ಒಂದು ಹ್ಯಾಂಡ್ ಗ್ರೆನೇಡ್, 50 ಸುತ್ತುಗಳಿರುವ ಎರಡು ಅತ್ಯಾಧುನಿಕ ಪಿಸ್ತೂಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

  • ಯುವತಿ ಮೇಲೆ ಫೈರಿಂಗ್ ಪ್ರಕರಣ – ಪಾಗಲ್ ಪ್ರೇಮಿ ವಿರುದ್ಧ ಎಫ್‍ಐಆರ್

    ಯುವತಿ ಮೇಲೆ ಫೈರಿಂಗ್ ಪ್ರಕರಣ – ಪಾಗಲ್ ಪ್ರೇಮಿ ವಿರುದ್ಧ ಎಫ್‍ಐಆರ್

    ಬೆಂಗಳೂರು: ಮಾರತ್ತಹಳ್ಳಿಯಲ್ಲಿ ಯುವತಿ ಮೇಲೆ ಫೈರಿಂಗ್ ಮಾಡಿದ್ದ ಪಾಗಲ್ ಪ್ರೇಮಿ ಅಮರೇಂದ್ರ ಪಟ್ನಾಯಕ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಫೆಬ್ರವರಿ 25 ರಂದು ಯುವತಿ ಶುಭಾಶ್ರೀ ವಾಸವಿದ್ದ ಪಿಜಿ ಬಳಿ ಹೋಗಿದ್ದ ಅಮರೇಂದ್ರ ಪಟ್ನಾಯಕ್, ಶುಭಾಶ್ರೀ ಮೇಲೆ ಪಿಸ್ತೂಲ್ ಬಳಸಿ ಫೈರಿಂಗ್ ಮಾಡಿದ್ದನು. ಯುವತಿಯ ಹೊಟ್ಟೆ ಭಾಗಕ್ಕೆ ಫೈರ್ ಮಾಡಿದ ಆರೋಪಿ ತಾನು ಕೂಡ ಕೈ ಮತ್ತು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಇಬ್ಬರ ಪರಿಸ್ಥಿತಿ ಕೂಡ ಗಂಭೀರವಾಗಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಇದನ್ನೂ ಓದಿ: ಮಾರತ್‍ಹಳ್ಳಿ ಶೂಟೌಟ್- 17 ಪುಟಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟ ಲವ್ ಸ್ಟೋರಿ

    ಸದ್ಯ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಪೊಲೀಸರು ಶುಭಾಶ್ರೀ ಹೇಳಿಕೆ ಪಡೆದಿದ್ದಾರೆ. ಅಮರೇಂದ್ರ ಪಟ್ನಾಯಕ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದರಿಂದ ಬೇಸತ್ತು ಹೈದರಾಬಾದ್‍ನಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದೆ. ಬೆಂಗಳೂರಿಗೆ ಬಂದ ನಂತರ ಅಮರೇಂದ್ರ ಪಟ್ನಾಯಕ್ ಕೂಡ ಬೆಂಗಳೂರಿಗೆ ಬಂದಿದ್ದ. ಇಲ್ಲೂ ಕೂಡ ಪ್ರೀತಿಸುವಂತೆ ಪೀಡಿಸುತ್ತಿದ್ದನು. ಇದನ್ನೂ ಓದಿ: ಹೈದರಾಬಾದ್‍ನಿಂದ ಬಂದು ಪ್ರೇಯಸಿಗೆ ಗುಂಡಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

    ಕಳೆದ 25 ರಂದು ಮಾರತ್ತಹಳ್ಳಿಯ ಪಿಜಿ ಬಳಿ ಬಂದು ಕೊನೆ ಬಾರಿಗೆ ಮಾತಾಡಬೇಕು ಎಂದು ಕರೆಸಿದ್ದನು. ಈ ವೇಳೆ ಏಕಾಏಕಿ ಪಿಸ್ತೂಲ್‍ನಿಂದ ಹೊಟ್ಟೆಯ ಭಾಗಕ್ಕೆ ಫೈರ್ ಮಾಡಿ ಎಸ್ಕೇಪ್ ಆಗಿದ್ದಾನೆ ಎಂದು ಶುಭಾಶ್ರೀ ಹೇಳಿಕೆ ಕೊಟ್ಟಿದ್ದಾಳೆ. ಈ ಹೇಳಿಕೆ ಆಧಾರದ ಮೇಲೆ ಐಪಿಸಿ ಸೆಕ್ಷನ್ ಹಾಗೂ ಇಂಡಿಯನ್ ಆರ್ಮ್ಸ್ ಆಕ್ಟ್ ಅಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

  • ಗೆಳತಿ ಮುಂದೆ ಪಿಸ್ತೂಲ್ ಪ್ರದರ್ಶಿಸಲು ಹೋಗಿ ತನಗೆ ತಾನೇ ಶೂಟ್ ಮಾಡ್ಕೊಂಡ

    ಗೆಳತಿ ಮುಂದೆ ಪಿಸ್ತೂಲ್ ಪ್ರದರ್ಶಿಸಲು ಹೋಗಿ ತನಗೆ ತಾನೇ ಶೂಟ್ ಮಾಡ್ಕೊಂಡ

    ನವದೆಹಲಿ: ಗೆಳತಿ ಮುಂದೆ ತನ್ನ ಬಳಿಯಿದ್ದ ಪಿಸ್ತೂಲ್ ಪ್ರದರ್ಶಿಸಲು ಹೋಗಿ ವ್ಯಕ್ತಿಯೋರ್ವ ಆಕಸ್ಮಿಕವಾಗಿ ತನಗೆ ತಾನೇ ಗುಂಡು ಹೊಡೆದುಕೊಂಡ ಘಟನೆ ದೆಹಲಿಯ ತಿಲಕ್ ನಗರದ ಪಾರ್ಕ್‍ನಲ್ಲಿ ನಡೆದಿದೆ.

    ಶುಕ್ರವಾರ ಈ ಘಟನೆ ನಡೆದಿದ್ದು ತಡವಾಗಿ ಸತ್ಯಾಂಶ ಬೆಳಕಿಗೆ ಬಂದಿದೆ. ಕಕ್ರೋಲಾ ನಿವಾಸಿ ಸೋನು ಶರ್ಮಾ ಗುಂಡು ಹೊಡೆದುಕೊಂಡ ವ್ಯಕ್ತಿ. ಶುಕ್ರವಾರ ರಾತ್ರಿ 11:45ರ ವೇಳೆಗೆ ಈ ಘಟನೆ ನಡೆದಿತ್ತು. ಆ ಬಳಿಕ ಶರ್ಮಾನನ್ನು ಆತನ ಗೆಳತಿ ಮೇಘಾ, ದೀನ ದಯಾಳ್ ಉಪಧ್ಯಾಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಳು. ಆದರೆ ಘಟನೆ ಬಗ್ಗೆ ಪೊಲೀಸ್ ಪ್ರಕರಣ ದಾಖಲಾದಾಗ ವಿಚಾರಣೆ ವೇಳೆ ಶರ್ಮಾ ನನ್ನ ಮೇಲೆ ಯಾರೋ ಗುಂಡು ಹಾರಿಸಿ ಕೊಲೆಗೈಯಲು ಪ್ರಯತ್ನಿಸಿದ್ದಾರೆ ಎಂದು ಹೇಳಿಕೆ ಕೊಟ್ಟಿದ್ದನು.

    ಹೀಗಾಗಿ ತನಿಖೆ ಕೈಗೊಂಡ ಪೊಲೀಸರು ಈ ಬಗ್ಗೆ ಶರ್ಮಾನ ಗೆಳತಿ ಮೇಘಾಳನ್ನು ವಿಚಾರಿಸಿದಾಗ ಸತ್ಯಾಂಶ ಬಯಲಾಗಿದೆ. ಶುಕ್ರವಾರ ತಿಲಕ್ ನಗರ ಪಾರ್ಕ್‍ನಲ್ಲಿ ಈ ಘಟನೆ ನಡೆಯಿತು. ಕುಡಿದ ಮತ್ತಿನಲ್ಲಿದ್ದ ಶರ್ಮಾ ನನಗೆ, ತನ್ನ ಬಳಿ ಇದ್ದ ಪಿಸ್ತೂಲ್ ತೋರಿಸುತ್ತಿದ್ದನು. ಈ ವೇಳೆ ಆಕಸ್ಮಿಕವಾಗಿ ತನ್ನ ಕಾಲಿಗೆ ತಾನೇ ಗುಂಡು ಹಾರಿಸಿಕೊಂಡಿದ್ದನು ಎಂದು ನಡೆದ ಘಟನೆ ಬಗ್ಗೆ ಬಾಯಿಬಿಟ್ಟಳು.

    ಸುಳ್ಳು ದೂರು ನೀಡಿದ್ದಕ್ಕೆ ಶರ್ಮಾ ಹಾಗೂ ಆತನ ಸ್ನೇಹಿತನನ್ನು ಮಂಗಳವಾರ ಪೊಲೀಸರು ಬಂಧಿಸಿದ್ದು, ಅವರ ಬಳಿ ಇದ್ದ ಪಿಸ್ತೂಲ್ ಅನ್ನು ವಶಕ್ಕೆ ಪಡೆದುಕೊಂಡರು. ಸದ್ಯ ಇಬ್ಬರು ಆರೋಪಿಗಳ ಮೇಲೂ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರಿದಿದೆ.

  • ಪಿಸ್ತೂಲ್ ಡೀಲರ್ ಸೆರೆ- ಸಿಸಿಬಿ ಪೊಲೀಸರಿಂದ ಬಂಧನ

    ಪಿಸ್ತೂಲ್ ಡೀಲರ್ ಸೆರೆ- ಸಿಸಿಬಿ ಪೊಲೀಸರಿಂದ ಬಂಧನ

    ಬೆಂಗಳೂರು: ಪಿಸ್ತೂಲ್ ಡೀಲರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಅಸ್ಲಾಂ ಅಲಿಯಾಸ್ ಹಾವೇರಿ ಅಸ್ಲಾಂ ಬಂಧಿತ ಆರೋಪಿ. ಅಸ್ಲಾಂ ಪಶ್ಚಿಮ ಬಂಗಾಳದಿಂದ ಪಿಸ್ತೂಲ್ ಹಾಗೂ ರಿವಾಲ್ವರ್ ಗಳು ತಂದು ಕರ್ನಾಟಕದ ವಿವಿಧ ನಗರಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.

    ಹಲವು ವರ್ಷಗಳಿಂದ ಅಸ್ಲಾಂ ಈ ದಂಧೆಯಲ್ಲಿ ತೊಡಗಿದ್ದು, ರೌಡಿಗಳು, ಸೇರಿದಂತೆ ಭೂಗತ ನಂಟಿರುವ ವ್ಯಕ್ತಿಗಳಿಗೆ ಅಕ್ರಮವಾಗಿ ಪಿಸ್ತೂಲ್, ರಿವಾಲ್ವರ್ ಸೇರಿದಂತೆ ಅಕ್ರಮ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದರ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

    ಮತ್ತೊಬ್ಬ ಡೀಲರ್ ಆಗಿರುವ ಮೈಸೂರು ಮೂಲದ ಜಾವೀದ್ ಎನ್ನುವ ವ್ಯಕ್ತಿ ಕೂಡ ಈ ಡೀಲ್ ಮಾಡುತ್ತಿರುವುದು ಗೊತ್ತಾಗಿದ್ದು, ಜಾವೀದ್‍ನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಖಚಿತ ಮಾಹಿತಿ ಆಧಾರದಲ್ಲಿ ಸಿಸಿಬಿ ಪೊಲೀಸರು ಅಸ್ಲಾಂನನ್ನು ಬಂಧಿಸಿದ್ದಾರೆ.

    ಬಂಧಿತ ಆರೋಪಿಯಿಂದ ಎರಡು ಪಿಸ್ತೂಲ್ ಸೇರಿದಂತೆ ಕೆಲವು ಮಾರಾಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಅಸ್ಲಾಂ ಮತ್ತು ಜಾವೀದ್ ಯಾರಿಗೆಲ್ಲಾ ಮಾರಾಟ ಮಾಡಿದ್ದಾರೆ ಎನ್ನುವುದು ತನಿಖೆಯಿಂದ ಬಹಿರಂಗವಾಗಬೇಕಿದೆ.

  • ಹಾಡಹಗಲೇ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಪಿಸ್ತೂಲ್ ತೋರಿಸಿ ವ್ಯಕ್ತಿಯ ಕಿಡ್ನಾಪ್

    ಹಾಡಹಗಲೇ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಪಿಸ್ತೂಲ್ ತೋರಿಸಿ ವ್ಯಕ್ತಿಯ ಕಿಡ್ನಾಪ್

    ರಾಯಚೂರು: ಹಾಡಹಗಲೇ ಸ್ನೇಹಿತರಂತೆ ವ್ಯಕ್ತಿಯೊಬ್ಬರನ್ನು ಮಾತನಾಡಿದ ದುಷ್ಕರ್ಮಿಗಳು ಪಿಸ್ತೂಲ್ ತೋರಿಸಿ ಅಪಹರಣ ಮಾಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ಬಸ್ ನಿಲ್ದಾಣದ ಬಳಿ ನಡೆದಿದೆ.

    ಎಂಎಚ್ 14, 3566 ನಂಬರ್ ಕಾರಿನಲ್ಲಿ ಬಂದ ಕೆಲ ದುಷ್ಕರ್ಮಿಗಳು ವ್ಯಕ್ತಿಯೊಬ್ಬರನ್ನು ಸ್ನೇಹಿತರಂತೆ ಮಾತನಾಡಿಸಿದ್ದಾರೆ. ಆ ಬಳಿಕ ಆತನ ಹೆಗಲ ಮೇಲೆ ಕೈ ಹಾಕಿ ಕಾರಿನ ಬಳಿ ಎಳೆದುಕೊಂಡು ಹೋಗಲು ಪ್ರಯತ್ನಿಸಿದ್ದಾರೆ. ಈ ಹಂತದಲ್ಲಿ ದುಷ್ಕರ್ಮಿಗಳ ಸಂಚು ತಿಳಿಯುತ್ತಿದಂತೆ ವ್ಯಕ್ತಿ ರಕ್ಷಣೆಗೆ ಕೂಗಿಕೊಂಡಿದ್ದ.

    ವ್ಯಕ್ತಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಯತ್ನಿಸುತ್ತಿರುವುದನ್ನು ಕಂಡ ಕೆಲ ಸಾರ್ವಜನಿಕರು ಕೂಡಲೇ ರಕ್ಷಣೆಗೆ ಮುಂದಾಗಿದ್ದರು. ಆದರೆ ದುಷ್ಕರ್ಮಿಗಳ ಗುಂಪಿನಲ್ಲಿದ್ದ ಮತ್ತೊಬ್ಬ ತನ್ನ ಬಳಿ ಇದ್ದ ಪಿಸ್ತೂಲ್ ತೋರಿಸಿ ಸಾರ್ವಜನಿಕರನ್ನು ಹೆದರಿಸಿದ್ದ. ಪಿಸ್ತೂಲ್ ಕಂಡ ಸಾರ್ವಜನಿಕರು ಏನು ಮಾಡಲಾಗದೆ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ಎದುರಾಗಿತ್ತು.

    ಇತ್ತ ವ್ಯಕ್ತಿ ಕಾರನ್ನು ಹತ್ತಲು ನಿರಾಕರಿಸಿ ಸ್ಥಳದಲ್ಲಿ ರಂಪಾಟ ನಡೆಸಿದ್ದ. ಆದರೂ ಆತನನ್ನು ಬಿಡದ ದುಷ್ಕರ್ಮಿಗಳು ಕಾರಿಗೆ ಬಲವಂತವಾಗಿ ಎತ್ತಿಹಾಕಿ ಸ್ಥಳದಿಂದ ಕೆಲವೇ ನಿಮಿಷಗಳಲ್ಲಿ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯಗಳು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ.

    ಅಪಹರಣವಾದ ವ್ಯಕ್ತಿ ಹಾಗೂ ದುಷ್ಕರ್ಮಿಗಳ ಯಾವುದೇ ಮಾಹಿತಿ ಇದುವರೆಗೂ ಲಭಿಸಿಲ್ಲ. ಸದ್ಯ ಸಿಸಿಟಿವಿ ದೃಶ್ಯಗಳ ಆಧಾರದಲ್ಲಿ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸ್ಥಳೀಯರು ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ ಹಣಕಾಸಿನ ವಿಚಾರದಲ್ಲಿ ಅಪಹರಣವಾದ ವ್ಯಕ್ತಿ ಹಾಗೂ ದುಷ್ಕರ್ಮಿಗಳ ನಡುವೆ ಮಾತುಕತೆ ನಡೆಸುತ್ತಿದ್ದರು ಎಂದು ತಿಳಿಸಿದ್ದಾರೆ.

  • ಪೊಲೀಸರಿಗೆ ಪಿಸ್ತೂಲ್ ತೋರಿಸಿದವ ಅಂದರ್

    ಪೊಲೀಸರಿಗೆ ಪಿಸ್ತೂಲ್ ತೋರಿಸಿದವ ಅಂದರ್

    ಹುಬ್ಬಳ್ಳಿ: ಕರ್ತವ್ಯ ನಿರತ ಆರ್ ಪಿಎಫ್ ಪೊಲೀಸ್ ಸಿಬ್ಬಂದಿಗೆ ಪಿಸ್ತೂಲ್ ತೋರಿಸಿದ ಯುವಕನನ್ನು ಬಂಧಿಸಿರುವ ಘಟನೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಡೆದಿದೆ.

    ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲೂ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಈ ವೇಳೆ ನಿಲ್ದಾಣದ ವಿಐಪಿ ಲಾಂಜ್ ಬಳಿ ವ್ಯಕ್ತಿಯೊಬ್ಬ ಮೊಬೈಲ್ ಹಿಡಿದು ಫೋಟೋ ತೆಗೆದಿದ್ದಾರೆ. ಇದನ್ನು ಗಮನಿಸಿದ ಆರ್ ಪಿಎಫ್ ಪೊಲೀಸ್ ಪೇದೆ ಭದ್ರತೆಯ ದೃಷ್ಟಿಯಿಂದ ಫೋಟೋ ಡಿಲೀಟ್ ಮಾಡುವಂತೆ ಮನವಿ ಮಾಡಿದ್ದಾರೆ.

    ಈ ವೇಳೆ ಯುವಕ ಹಾಗೂ ಆತನ ಜೊತೆಗಿದ್ದ ಸ್ನೇಹಿತರು ಫೋಟೋ ಡಿಲೀಟ್ ಮಾಡಲು ನಿರಾಕರಿಸಿದ್ದು, ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಯುವಕರ ನಡುವೆ ವಾಗ್ವಾದ ನಡೆದಿದೆ. ಈ ಹಂತದಲ್ಲಿ ಅವರನ್ನು ಬೆದರಿಸಲು ಪೊಲೀಸ್ ಬಂದೂಕು ತೋರಿಸಿದ್ದಾರೆ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಯುವಕ ತನ್ನ ಬಳಿಯೂ ಪಿಸ್ತೂಲ್ ಇದೆ ಎಂದು ತೋರಿಸಿ ಅವಾಜ್ ಹಾಕಿದ್ದಾನೆ. ಪರಿಣಾಮ ಯುವಕನ್ನ ಪೊಲೀಸರು ಬಂಧಿಸಿದ್ದಾರೆ.

    ಮಾಹಿತಿಯ ಅನ್ವಯ ಬಂಧಿತ ಯುವಕ ಮಂಟೂರು ರಸ್ತೆಯ ಬ್ಯಾಳಿ ಓಣಿ ನಿವಾಸಿ ಶರೀಫ ಆದೋನಿ ಎನ್ನಲಾಗಿದ್ದು, ಆತನೊಂದಿಗೆ ಇದ್ದ ಯುವಕರನ್ನು ವಶಕ್ಕೆ ಪಡೆದು ಗದಗ ರಸ್ತೆಯ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದರು. ಆ ಬಳಿಕ ಅವರನ್ನು ಶಹರ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಘಟನೆಯಿಂದ ನಿಲ್ದಾಣದಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

  • ಅಕ್ರಮವಾಗಿ ಪಿಸ್ತೂಲ್, ಜೀವಂತ ಗುಂಡು ಇಟ್ಕೊಂಡು ತಿರುಗ್ತಿದ್ದ ಇಬ್ಬರ ಬಂಧನ

    ಅಕ್ರಮವಾಗಿ ಪಿಸ್ತೂಲ್, ಜೀವಂತ ಗುಂಡು ಇಟ್ಕೊಂಡು ತಿರುಗ್ತಿದ್ದ ಇಬ್ಬರ ಬಂಧನ

    ಕಲಬುರಗಿ: ಅಕ್ರಮವಾಗಿ ಪಿಸ್ತೂಲ್ ಹಾಗೂ ಜೀವಂತ ಗುಂಡು ಇಟ್ಟುಕೊಂಡು ತಿರುಗಾಡುತ್ತಿದ್ದ ಇಬ್ಬರನ್ನು ಡಿಸಿಆರ್ ಬಿ ಘಟಕದ ಪೊಲೀಸರು ಬಂಧಿಸಿದ್ದಾರೆ.

    ಕೋಗನೂರಿನ ಹಸನ್‍ಸಾಬ್ ಬಾವಾಸಾಬ್ ಹತ್ತರಕಿ ಹಾಗೂ ಲಕ್ಷ್ಮಿಕಾಂತ ಶೇಖಜಿ ಬಂಧಿತರು. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಕೋಗನೂರು ಗ್ರಾಮದ ಕಣ್ಣಿ ಮಾರ್ಕೆಟ್‍ನ ಎಂ.ಎಸ್.ಕೆ. ಮಿಲ್ ಬಳಿ ಇಬ್ಬರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದರು

    ಬಾವಾಸಾಬ್ ಹತ್ತರಕಿ ಹಾಗೂ ಲಕ್ಷ್ಮಿಕಾಂತ ಶೇಖಜಿ ಇಬ್ಬರು ಪಿಸ್ತೂಲ್ ಹಿಡಿದುಕೊಂಡು ತಿರುಗಾಡುತ್ತಿರುವುದನ್ನು ಕಂಡ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಡಿಸಿಆರ್ ಬಿ ಘಟಕದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನು ಬಂಧಿಸಿದ್ದಾರೆ.