ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆ ಪೊಲೀಸ್ ಠಾಣೆಗೆ ಪಿಸ್ತೂಲ್ ಜಮೆ ಮಾಡಿದ್ರು. ಆದರೆ ಪಿಸ್ತೂಲ್ ಠಾಣೆಗೆ ತಂದು ಕೊಟ್ಟ ವ್ಯಕ್ತಿ ಮಾಡಿದ ಎಡವಟ್ಟಿನಿಂದ ಠಾಣೆಯಲ್ಲೇ ದುರ್ಘಟನೆಯೊಂದು ನಡೆದು ಹೋಗಿದೆ.
ಬೊಮ್ಮನಹಳ್ಳಿ ವ್ಯಾಪ್ತಿಯ ಬೇಗೂರು ಪೊಲೀಸ್ ಠಾಣೆಗೆ (Beguru Police Station) ಮುಕುಂದ ರೆಡ್ಡಿ ಎಂಬವರು ಪಿಸ್ತೂಲ್ ತಂದು ಜಮಾ ಮಾಡಿದರು. ಪೊಲೀಸ್ ಕಾನ್ಸ್ ಟೇಬಲ್ ಪಿಸ್ತೂಲು ಪರಿಶೀಲನೆ ವೇಳೆ ಟ್ರಿಗರ್ ಒತ್ತಿದ್ದಾರೆ. ಈ ವೇಳೆ ಏಕಾಏಕಿ ಮಿಸ್ ಫೈರ್ ಆಗಿ, ಮತ್ತೊಬ್ಬ ಪೊಲೀಸ್ ಪೇದೆ ಅಂಬುದಾಸ್ ಕಾಲಿಗೆ ಗುಂಡೇಟು ತಗುಲಿದೆ. ಗಾಯಾಳುವನ್ನು ಅಪೊಲೋ ಆಸ್ಪತ್ರೆಗೆ ದಾಖಸಲಾಗಿದೆ.
ಈ ಘಟನೆಯಿಂದ ಪೊಲೀಸ್ ಠಾಣೆಯಲ್ಲಿ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಸ್ಥಳಕ್ಕೆ ಬಂದ ಎಫ್‍ಎಸ್‍ಎಲ್ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು ಬೇಗೂರು ಪೊಲೀಸ್ ಠಾಣೆಯ ಮೇಲಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ ಎನ್ನಲಾಗಿದೆ.
ಒಟ್ಟಿನಲ್ಲಿ ಪೊಲೀಸ್ ಠಾಣೆಗಳಿಗೆ ಬಂದುಕು ಅಥವಾ ಪಿಸ್ತೂಲ್‍ಗಳನ್ನು ಸೆರೆಂಡರ್ ಮಾಡುವ ಮುನ್ನ ಎಚ್ಚರವಹಿಸಬೇಕಾಗಿದೆ.
ಚಿತ್ರದುರ್ಗ: ಊಟ ಮುಗಿಸಿ ಕೈ ತೊಳೆದು ಬರುವಷ್ಟರಲ್ಲಿ ಪಿಎಸ್‌ಐ (PSI) ಒಬ್ಬರ ಪಿಸ್ತೂಲ್ (Pistol) ನಾಪತ್ತೆಯಾಗಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ನಾಪತ್ತೆ ಪ್ರಕರಣವೊಂದರ ತನಿಖೆಗಾಗಿ ಗುರುವಾರ ಕರ್ತವ್ಯದ ಮೇಲೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳಿದ್ದ ಕೆಆರ್ ಪುರಂ ಠಾಣೆ ಪಿಎಸ್‌ಐ ಕಲ್ಲಪ್ಪ ಅವರು ಚನ್ನಗಿರಿ ಮಾರ್ಗವಾಗಿ ಬೆಂಗಳೂರಿಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಚಿತ್ರದುರ್ಗ ತಾಲೂಕಿನ ಜಾನಕೊಂಡ ಗ್ರಾಮದ ಬಳಿಯ ರೆಸ್ಟೋರೆಂಟ್‌ಗೆ ಊಟಕ್ಕೆಂದು ತೆರಳಿದ್ದರು.
ಕಲ್ಲಪ್ಪ ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ, ಕೈ ತೊಳೆದು ಬರುವಷ್ಟರಲ್ಲಿ ಟೇಬಲ್ ಮೇಲಿಟ್ಟಿದ್ದ ಪಿಸ್ತೂಲ್ ಹಾಗೂ ಬ್ಯಾಗ್ ಒಂದು ನಾಪತ್ತೆಯಾಗಿದೆ. ಆ ಬ್ಯಾಂಗ್‌ನಲ್ಲಿ ರಿವಾಲ್ವರ್‌ಗೆ ಬಳಸುವ 10 ಜೀವಂತ ಗುಂಡುಗಳು ಸೇರಿದಂತೆ ಪ್ರಮುಖ ವಸ್ತುಗಳು ಸಹ ಇದ್ದವು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಬಳಿಕ ಪಿಎಸ್‌ಐ ಕಲ್ಲಪ್ಪ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: 900 ಭ್ರೂಣಗಳ ಹತ್ಯೆ ಆರೋಪಕ್ಕೆ ಅಂಜಿ ವಿಷದ ಚುಚ್ಚುಮದ್ದು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡ್ರಾ ವೈದ್ಯ?
ಲಕ್ನೋ: ಕೊಡಲಿ (Axe) ಬಳಸಿ ವ್ಯಕ್ತಿಯೋರ್ವ ತನ್ನ ಐವರು ಸಂಬಂಧಿಗಳನ್ನು ಕೊಂದು ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ (Uttar Prdesh) ಮೈನ್‌ಪುರಿ (Mainpuri) ಜಿಲ್ಲೆಯಲ್ಲಿ ನಡೆದಿದೆ.
ಗೋಕುಲಪುರ (Gokulpur) ಅರ್ಸರಾ ಹಳ್ಳಿಯಲ್ಲಿ ಮುಂಜಾನೆ ಸುಮಾರು 4:30ಯಿಂದ 5 ಗಂಟೆಯ ಒಳಗಾಗಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಶಿವವೀರ್ ಯಾದವ್ (30) ಎಂಬಾತ ತನ್ನ ಇಬ್ಬರು ತಮ್ಮಂದಿರಾದ ಬುಲ್ಲನ್ ಯಾದವ್ (25) ಮತ್ತು ಸೋನು ಯಾದವ್ (21) ಎಂಬವರನ್ನು ಕೊಡಲಿಯಿಂದ ಹತ್ಯೆ ಮಾಡಿದ್ದಾನೆ. ಅಲ್ಲದೇ ಸೋನು ಯಾದವ್‌ನ ಹೆಂಡತಿ ಸೋನಿಯನ್ನೂ (20) ಕೊಲೆ ಮಾಡಿದ್ದು, ಬಳಿಕ ಬಾಮೈದುನ ಸೌರಭ್ (23) ಮತ್ತು ಆತನ ಸ್ನೇಹಿತ ದೀಪಕ್ (20) ಎಂಬವರನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ವೈದ್ಯ ಲೋಕಕ್ಕೇ ಶಾಕ್ – 36 ವರ್ಷಗಳ ಕಾಲ ಪ್ರೆಗ್ನೆಂಟ್ ಆಗಿದ್ದ ಈ ವ್ಯಕ್ತಿ!
ಇಷ್ಟು ಮಾತ್ರವಲ್ಲದೇ ಆರೋಪಿ ತನ್ನ ಹೆಂಡತಿ ಡಾಲಿ (24) ಮತ್ತು ಭರ್ತನ ಜಿಲ್ಲೆಯ ನಾಗ್ಲ ರಾಮ್‌ಲಾಲ್ ಪೊಲೀಸ್ ಠಾಣೆಯ ಇಟವಾದಲ್ಲಿ ವಾಸಿಸುತ್ತಿದ್ದ ತಾಯಿಯ ಸಂಬಂಧಿಯಾದ ಸುಷ್ಮಾ (35) ಎಂಬವರನ್ನು ಗಾಯಗೊಳಿಸಿದ್ದಾನೆ. ಬಳಿಕ ದೇಶೀಯವಾಗಿ ತಯಾರಿಸಿದ ಪಿಸ್ತೂಲ್ (Pistol) ಒಂದರ ಸಹಾಯದಿಂದ ತನ್ನನ್ನು ತಾನು ಶೂಟ್ (Shoot) ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಕೋವಿನ್ ಪೋರ್ಟಲ್ ಡೇಟಾ ಲೀಕ್ ಪ್ರಕರಣ – ಅಪ್ರಾಪ್ತ ಸೇರಿ ಇಬ್ಬರ ಬಂಧನ
ಗೋಕುಲಪುರ ಹಳ್ಳಿಯಲ್ಲಿ ಘಟನೆ ನಡೆದಿದ್ದು, ಆರೋಪಿಯ ಸಹೋದರ ಸೋನು ಯಾದವ್ ಮತ್ತು ಆತನ ಹೆಂಡತಿ ಸೋನಿ ಘಟನೆಯ ಹಿಂದಿನ ದಿನವಷ್ಟೇ ಮದುವೆಯಾಗಿದ್ದರು. ವಿವಾಹದ (Marriage) ನಂತರ ನವಜೋಡಿ ತಮ್ಮ ಮನೆಗೆ ಬಂದ ಬಳಿಕ ಹತ್ಯೆ ಮಾಡಲಾಗಿದೆ. ನವಜೋಡಿಗಳ ಕೊಲೆಯ ಬಳಿಕ ಬಾಮೈದುನ ಮತ್ತು ಆತನ ಸ್ನೇಹಿತನನ್ನು ಹತ್ಯೆ ಮಾಡಲಾಗಿದೆ ಎಂದು ಮೈನ್‌ಪುರಿ ಪೊಲೀಸ್ ವರಿಷ್ಠಾಧಿಕಾರಿ ವಿನೋದ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಲಿಂಗ ಬದಲಾವಣೆ ನೆಪದಲ್ಲಿ ತಂತ್ರಿಯಿಂದ ಸಲಿಂಗಕಾಮಿ ಮಹಿಳೆ ಹತ್ಯೆ
ಆರೋಪಿಯ ಈ ಕೃತ್ಯಕ್ಕೆ ಯಾವುದೇ ನಿಖರ ಕಾರಣಗಳು ತಿಳಿದುಬಂದಿಲ್ಲ. ಘಟನೆಯಲ್ಲಿ ಹತ್ಯೆಯಾದ ಸಂಬಂಧಿಗಳ ಮೃತದೇಹವನ್ನು ಮೈನ್‌ಪುರಿ ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆಂದು ಕಳುಹಿಸಲಾಗಿದೆ. ಅಲ್ಲದೇ ಘಟನೆಯಲ್ಲಿ ಗಾಯಗೊಂಡ ಆರೋಪಿಯ ಹೆಂಡತಿ ಡಾಲಿ ಮತ್ತು ಸಂಬಂಧಿ ಸುಷ್ಮಾ ಅವರು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅನಾಥ ಬಾಲಕಿ ಮೇಲೆ ಆಶ್ರಮದಲ್ಲೇ ತಿಂಗಳುಗಳಿಂದ ಅತ್ಯಾಚಾರ – ಆಂಧ್ರದ ಸ್ವಾಮೀಜಿ ಅರೆಸ್ಟ್
ಕನಸಿನ ರಾಣಿ ಮಾಲಾಶ್ರೀ ನಾಯಕಿಯಾಗಿ ನಟಿಸಿರುವ ‘ರಾಜಾ ಕೆಂಪು ರೋಜ’ (Raja Kempu Roja) ಸಿನಿಮಾದ ನಟಿಸಿರುವ ರವಿರಾಜ್ ಗೆ ಗುಂಡು ತಗುಲಿ ಆಸ್ಪತ್ರೆ ಸೇರಿಕೊಂಡಿದ್ದಾರೆ. ಮನೆಯಲ್ಲಿದ್ದ ಪಿಸ್ತೂಲ್ (Pistol) ಅನ್ನು ನವೀಕರಣಕ್ಕಾಗಿ ಸ್ವಚ್ಚಗೊಳಿಸುತ್ತಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ (Gundu) ರವಿರಾಜ್ (Raviraj) ಅವರಿಗೆ ತಲೆಗೆ ಗಾಯವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ದಾವಣಗೆರೆ (Davangere) ಮೂಲದ ರವಿರಾಜ್ ಚಿನ್ನದ ವ್ಯಾಪಾರಿ ಕೂಡ ಆಗಿದ್ದಾರೆ. ಹಾಗಾಗಿ ಪರವಾಣಿಗೆ ಸಹಿತ ಪಿಸ್ತೂಲ್ ಹೊಂದಿದ್ದಾರೆ. ಎಂಸಿಸಿ ಬಿ ಬ್ಲಾಕ್ ನಿವಾಸಿ ಆಗಿರುವ ಅವರು ಬುಧವಾರ ಸಂಜೆ ಪಿಸ್ತೂಲಿನ ಲೈಸೆನ್ಸ್ ನವೀಕರಣಕ್ಕೆ ಹೋಗಬೇಕಿತ್ತು. ಹಾಗಾಗಿ ಅದನ್ನು ಸ್ವಚ್ಛಗೊಳಿಸುತ್ತಿದ್ದರು. ಈ ವೇಳೆ ಟ್ರಿಗರ್ ಒತ್ತಿದ ಪರಿಣಾಮ ಗುಂಡು ಸಿಡಿದಿದೆ. ಹಣೆಯ ಭಾಗಕ್ಕೆ ಗುಂಡು ಹೊಕ್ಕಿದೆ. ಕೂಡಲೇ ಅವರನ್ನು ಸಿಟಿ ಸೆಂಟ್ರಲ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನೂ ಓದಿ: ‘ಆಸ್ಕರ್’ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ದೀಪಿಕಾ ಪಡುಕೋಣೆ ನಿರೂಪಕಿ
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಎಲ್. ಸುಬ್ಬರಾವ್ ನೇತೃತ್ವದ ತಂಡವು ತುರ್ತು ಚಿಕಿತ್ಸೆ ನಡೆಸಿ, ಯಶಸ್ಸಿಯಾಗಿ ಗುಂಡು ಹೊರತಗೆಯಲಾಗಿದೆ. ತಲೆಬುರುಡೆಯ ಮೂಳೆಯಲ್ಲಿ ಗುಂಡು ಹೊಕ್ಕಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ರವಿರಾಜ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿನಿಮಾ ರಂಗದಲ್ಲಿ ರವಿರಾಜ್ ಎಂದೇ ಗುರುತಿಸಿಕೊಂಡಿದ್ದ ಅವರು ದಾವಣಗೆರೆ ಜನತೆಗೆ ಮಂಜುನಾಥ ರೇವಣ್ಕರ್ (Manjunath Revankar) ಎಂದು ಪರಿಚಿತರು.
ಸಿನಿಮಾ ರಂಗದಲ್ಲಿ ನಟರಾಗಿ, ನಾಯಕ ನಟರಾಗಿ ನಂತರ ಒಂದು ಸಿನಿಮಾವನ್ನೂ ನಿರ್ಮಾಣ ಮಾಡಿದ್ದಾರೆ. ಆನಂತರ ಸಿನಿಮಾ ರಂಗದಿಂದ ದೂರವಾಗಿ ತಮ್ಮ ವೃತ್ತಿಯಲ್ಲೇ ಮುಂದುವರೆದಿದ್ದರು. ಸಿನಿಮಾ ರಂಗದಿಂದ ದೂರವಾಗಿದ್ದರೂ, ಸಿನಿಮಾಗಳಿಂದ ಅವರು ದೂರವಾಗಿರಲಿಲ್ಲ. ಆಗಾಗ್ಗೆ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲೂ ಭಾಗಿಯಾಗುತ್ತಿದ್ದರು.
ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರ (Kashmir) ಪೊಲೀಸರು ಕಾರ್ಯಾಚರಣೆ ನಡೆಸಿ ದಕ್ಷಿಣ ಕಾಶ್ಮೀರದ ಕುಲ್ಗಾಮ್‍ನಲ್ಲಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ (Hizb-ul-Mujahideen) ಭಯೋತ್ಪಾದಕರನ್ನು ಬಂಧಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿರುವ ನಿರ್ದಿಷ್ಟ ಮಾಹಿತಿ ಮೇರೆಗೆ ಹತಿಪೋರ್, ಬೆಹಿಬಾಗ್ ಮತ್ತು ಕುಲ್ಗಾಮ್ ಠಾಣೆಯ ಪೊಲೀಸರು ಕಾರ್ಯಾಚರಣೆ ಕೈಗೊಂಡು, ದಾದರ್‍ಕೊಟ್‍ನ ಅಲಂಗಂಜ್ ಕ್ರಾಸಿಂಗ್‍ನಲ್ಲಿ ಚೆಕ್‍ಪೋಸ್ಟ್ ನಿರ್ಮಿಸಿ ಕಾದಿದ್ದರು.
ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಈ ಕುರಿತಂತೆ ಮಾಹಿತಿ ದೊರೆತ ಮೇರೆಗೆ ಎಸ್‍ಪಿ, ವಿಧಿವಿಜ್ಞಾನ ತಂಡ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಬೆಡ್‌ಶೀಟ್ ಮೇಲೆ ಕಲೆಗಳಿರುತ್ತಿತ್ತು- ಶ್ರೀಗಳ ಬೆಡ್‌ರೂಂ ರಸಹ್ಯ ಬಯಲು
ನ್ಯೂ ಆಜಾದ್ ನಗರ ಚೌಕಿಯ ಪೋಸ್ಟ್ ಇನ್ ಚಾರ್ಜ್ ಆಗಿ ಸಬ್ ಇನ್ಸ್‌ಪೆಕ್ಟರ್ ಸುಧಾಕರ್ ಪಾಂಡೆ ಅವರನ್ನು ನೇಮಿಸಲಾಗಿದೆ. ಬುಧವಾರ ತಡರಾತ್ರಿ ಕಳ್ಳರು ಠಾಣೆಯಲ್ಲಿದ್ದ ಪೆಟ್ಟಿಗೆಯನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳತನವಾಗಿರುವ ವಿಷಯ ಉನ್ನತ ಅಧಿಕಾರಿಗಳಿಗೆ ತಿಳಿದಾಗ ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿದೆ. ತರಾತುರಿಯಲ್ಲಿ ಐಜಿ ರೇಂಜ್, ಎಸ್‍ಪಿ ಔಟರ್ ಸೇರಿದಂತೆ ಸರ್ಕಲ್ ಫೋರ್ಸ್ ಸ್ಥಳಕ್ಕೆ ಧಾವಿಸಿದರು. ನಂತರ ತಕ್ಷಣವೇ ವಿಧಿವಿಜ್ಞಾನ ತಂಡವನ್ನು ಸ್ಥಳಕ್ಕೆ ಕರೆಸಲಾಯಿತು. ಸುಧಾಕರ್ ಪಾಂಡೇ ಅವರ ನಿರ್ಲಕ್ಷ್ಯವೇ ಈ ಕಳ್ಳತನಕ್ಕೆ ಕಾರಣ ಎಂದು ಇದೀಗ ಅವರನ್ನು ಕೆಲಸದಿಂದ ಅಮಾನತುಗೊಳಿಸಲಾಗಿದೆ.
ಈ ಘಟನೆ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಎಸ್‍ಪಿ ತೇಜ್ ಸ್ವರೂಪ್ ಸಿಂಗ್ ಅವರು, ಪೊಲೀಸ್ ಠಾಣೆಯಲ್ಲಿಯೇ ಈ ಘಟನೆ ನಡೆದಿದ್ದು, ಸರ್ಕಾರಿ ಪಿಸ್ತೂಲ್ ಮತ್ತು 10 ಕಾಟ್ರಿಡ್ಜ್‌ಗಳು ಕಾಣೆಯಾಗಿದೆ. ಈ ವೇಳೆ ಎಸ್‍ಐ ಔಟ್‍ಪೋಸ್ಟ್‌ನಲ್ಲಿದ್ದರು. ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ಕಳ್ಳರನ್ನು ಹಿಡಿಯಲು ಐದು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಲಕ್ನೋ: ಬಿಜೆಪಿ ಮುಖಂಡರೊಬ್ಬರ ಮಗ ತನ್ನ ನೆರೆ ಮನೆಯವರ ಜೊತೆ ತಮ್ಮ ಮನೆಯಲ್ಲಿ ಕಣ್ಣಾಮುಚ್ಚಾಲೆ ಆಟವಾಡುತ್ತಿದ್ದಾಗ ಗುಂಡು ತಗುಲಿ 10 ವಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕೌಶಂಬಿ ಜಿಲ್ಲೆಯಲ ಕರಾರಿಯಲ್ಲಿ ನಡೆದಿದೆ.
ಕೌಶಾಂಬಿ ಪೊಲೀಸ್ ವರಿಷ್ಠಾಧಿಕಾರಿ(ಎಸ್‍ಪಿ) ಪಿ.ಹೇಮರಾಜ್ ಮೀನಾ ಈ ಕುರಿತು ಮಾಹಿತಿ ಕೊಟ್ಟಿದ್ದು, ಘಟನೆ ನಡೆದ ಮನೆ ರಾಜಕೀಯ ಪಕ್ಷದ ಪದಾಧಿಕಾರಿಗೆ ಸೇರಿದ್ದು, ಆತ ಆರೋಪಿ ಬಾಲಕನ ತಂದೆಯಾಗಿದ್ದಾರೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಪಿಸ್ತೂಲ್ ಹೊಂದಿದ್ದ ತಂದೆಯ ಮಗ, ನೆರೆಮನೆಯ 10 ವರ್ಷದ ಬಾಲಕ ಮತ್ತು ಒಂಬತ್ತು ವರ್ಷದ ಬಾಲಕ ಸೇರಿದಂತೆ ಮೂವರು ಮಕ್ಕಳು ಇದ್ದರು. ಮೂವರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದರು ಎಂದು ವಿವರಿಸಿದರು.
ಈ ನಡುವೆ ಗುಂಡಿನ ಸದ್ದು ಕೇಳಿ ಬಂದಿದೆ. ಅದಕ್ಕೆ ಅಕ್ಕಪಕ್ಕದವರು ಒಳಗೆ ಓಡಿ ಬಂದು ನೋಡಿದಾಗ 10 ವರ್ಷದ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಗುಂಡು ಹಾರಿಸಿದ ಬಾಲಕ ಜೋರಾಗಿ ಅಳುತ್ತಿರುವುದು ಕಂಡುಬಂದಿದೆ. ಮೂರನೇ ಮಗು ಹಾಸಿಗೆಯ ಕೆಳಗೆ ಅಡಗಿಕೊಂಡಿತ್ತು ಎಂದು ಹೇಳಿದರು. ಇದನ್ನೂ ಓದಿ: ಭಾವನಾತ್ಮಕ ವಿಷಯ ಕೆದಕಿ ಕೆಲ ಪಕ್ಷಗಳು ರಾಜಕೀಯ ಲಾಭ ಪಡೆಯಲು ಹೊರಟಿವೆ: ಹೆಚ್‍ಡಿಕೆ ಕಿಡಿ
ಬಾಲಕ ಕಬೋರ್ಡ್‍ನಿಂದ ಪಿಸ್ತೂಲ್ ತೆಗೆದು ಆಕಸ್ಮಿಕವಾಗಿ ಗುಂಡು ಹಾರಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ತಜ್ಞರು ಕೂಡ ಭೇಟಿ ನೀಡಿದ್ದು, ಘಟನೆಯ ಬಗ್ಗೆ ವಿವರವಾದ ತನಿಖೆ ನಡೆಸಲಾಗುವುದು. ಘಟನೆ ನಡೆದಾಗ ಆರೋಪಿಗಳ ಪೋಷಕರು ಮನೆಯಲ್ಲಿ ಇರಲಿಲ್ಲ ಎಂದು ತಿಳಿಸಿದರು.
ಮೂವರೂ ಹುಡುಗರು ಸ್ನೇಹಿತರಾಗಿದ್ದರು. ಯಾವಾಗಲೂ ಒಟ್ಟಿಗೆ ಆಟವಾಡುತ್ತಿದ್ದರು ಎಂದು ನೆರೆಮನೆಯವರು ನಮಗೆ ಮಾಹಿತಿ ಕೊಟ್ಟಿದ್ದಾರೆ ಎಂದರು.
Live Tv
[brid partner=56869869 player=32851 video=960834 autoplay=true]
ನವದೆಹಲಿ: 45 ಪಿಸ್ತೂಲ್‌ಗಳನ್ನು ಒಯ್ಯುತ್ತಿದ್ದ ದಂಪತಿಯನ್ನು ನವದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಈ ಪಿಸ್ತೂಲ್‌ಗಳು ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ತಿಳಿಯಲು ತನಿಖೆ ನಡೆಸಲಾಗಿತ್ತು. ಆದರೆ ಇವು ಅಸಲಿ ಬಂದೂಕುಗಳು ಎಂದು ಭಯೋತ್ಪಾದನಾ ನಿಗ್ರಹ ಘಟಕದ ರಾಷ್ಟ್ರೀಯ ಭದ್ರತಾ ಸಿಬ್ಬಂದಿ (ಎನ್‌ಎಸ್‌ಜಿ) ವರದಿ ಮಾಡಿದ್ದಾರೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಬೂಸ್ಟರ್ ಡೋಸ್ ಉಚಿತ: ಕೇಂದ್ರ
ಜಗಜಿತ್ ಸಿಂಗ್ ಮತ್ತು ಜಸ್ವಿಂದರ್ ಕೌರ್ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಇವರು ಜುಲೈ 10 ರಂದು ವಿಯೆಟ್ನಾಂನಿಂದ ಭಾರತಕ್ಕೆ ಮರಳಿದ್ದರು. ಜಗಜಿತ್ ಸಿಂಗ್ ಎರಡು ಬ್ಯಾಗ್‌ಗಳಲ್ಲಿ ಪಿಸ್ತೂಲ್‌ಗಳನ್ನು ಇಟ್ಟುಕೊಂಡಿದ್ದ.
ಲಕ್ನೋ: ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಂಗಡಿಗಳಲ್ಲಿ ಕಲ್ಲುಗಳು, ಸಲಿಕೆಗಳು ಮತ್ತು ಪಿಸ್ತೂಲ್‍ಗಳನ್ನು ಇಟ್ಟುಕೊಳ್ಳಬೇಕು ಎಂದು ವ್ಯಾಪಾರಿಗಳಿಗೆ ಸಲಹೆ ನೀಡುವ ಮೂಲಕ ಉತ್ತರ ಪ್ರದೇಶದ ಮುಜಾಫರ್‍ನಗರದ ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರು ಹೊಸ ವಿವಾದ ಸೃಷ್ಟಿಸಿದ್ದಾರೆ.
ಶನಿವಾರ ಜನಸತ್ ತಹಸಿಲ್ ಪ್ರದೇಶದ ವಾಜಿದ್‍ಪುರ ಕವಾಲಿ ಗ್ರಾಮದಲ್ಲಿ ಖತೌಲಿ ಶಾಸಕರು ಈ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ್ದಕ್ಕಾಗಿ ಕೇಂದ್ರ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ಮತ್ತು ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರಿಗೆ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿತ್ತು. ಇದನ್ನೂ ಓದಿ: ಮಂಗಳೂರಿನಲ್ಲಿ ಅಲೆಗಳ ಹೊಡೆತಕ್ಕೆ ಕೊಚ್ಚಿಕೊಂಡು ಹೋದ ರಸ್ತೆ!
ಈ ವೇಳೆ ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ವಿಕ್ರಮ್ ಸೈನಿ ಅವರು, ಪೊಲೀಸರು ಎಷ್ಟು ದಿನ ಅಂತ ಕೆಲಸ ಮಾಡುತ್ತಾರೆ? ಪೊಲೀಸರು ಬರುವಷ್ಟರಲ್ಲಿ ನಿಮ್ಮ ಅಂಗಡಿಗಳಿಗೆ ಬೆಂಕಿ ಹಚ್ಚಿಬಿಟ್ಟಿರುತ್ತಾರೆ. ಹೀಗಾಗಿ ನೀವು ಸುರಕ್ಷಿತವಾಗಿರಬೇಕೆಂದರೆ ನಿಮ್ಮ ಅಂಗಡಿಗಳಲ್ಲಿ ಕಲ್ಲು, ಸಲಿಕೆ, ಪಿಸ್ತೂಲ್ ಇಟ್ಟುಕೊಳ್ಳಬೇಕು ಎಂದು ವ್ಯಾಪಾರಿಗಳಿಗೆ ಸಲಹೆ ನೀಡುವ ಮೂಲಕ ವಿಕ್ರಮ್ ಸೈನಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವೇದಿಕೆಯಲ್ಲಿದ್ದ ಮುಖಂಡರ ಈ ಹೇಳಿಕೆಯನ್ನು ತಡೆಯಲು ಮುಂದಾದಾಗ ವಿಕ್ರಮ್ ಸೈನಿ ಅವರು, ಇಂದು ನನಗೆ ಮಾತನಾಡಲು ಅವಕಾಶ ನೀಡಿ. ಇದನ್ನು ಪತ್ರಿಕೆಯಲ್ಲಿ ಮುದ್ರಿಸಿ ಅಥವಾ ಟಿವಿಯಲ್ಲಿ ತೋರಿಸಿ, ಆದರೆ 5 ವರ್ಷಗಳವರೆಗೆ ನನ್ನನ್ನು ಯಾರೂ ತೆಗೆದುಹಾಕಲು ಸಾಧ್ಯವಿಲ್ಲ ಮತ್ತು ನನಗೆ ಯಾವುದೇ ಆಸೆ ಇಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಳೆಯ ಆರ್ಭಟ: ಹಳಿ ತಪ್ಪುವ ಆತಂಕದಿಂದ 165 ರೈಲುಗಳ ಸಂಚಾರ ಸಂಪೂರ್ಣ ರದ್ದು
ಉದಯ್‍ಪುರ ಘಟನೆ ಕುರಿತು ಮಾತನಾಡಿದ ಅವರು, ನೂಪುರ್ ಶರ್ಮಾ ತನಗೆ ಮಾತನಾಡಲು ಪ್ರಜಾಸತ್ತಾತ್ಮಕ ಹಕ್ಕಿದೆ ಎಂದು ಹೇಳಿದ್ದಾರೆ. ಹಿಂದೂ ದೇವತೆಗಳ ವಿರುದ್ಧ ಮಾತನಾಡಲು ಕೂಡ ಜನರಿಗೆ ಹಕ್ಕಿದೆ. ಆದರೆ ಯಾರಾದರೂ ತಲೆ ಕತ್ತರಿಸುತ್ತೇವೆ ಎಂದು ಅವರ ವಿರುದ್ಧವಾಗಿ ಹೇಳಿಕೆ ನೀಡಿದರೆ, ಅವರನ್ನು ಉಳಿಸಲು ಎಲ್ಲರೂ ಒಂದಾಗಬೇಕು ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹುಬ್ಬಳ್ಳಿ: ಹುಟ್ಟುಹಬ್ಬದ ಪಾರ್ಟಿಯಲ್ಲಿ ನಗರದಲ್ಲಿ ಗುಂಡಿನ ಸದ್ದು ಮೊಳಗಿರುವ ಅನುಮಾನ ಮೂಡಿದೆ. ನಗರದ ಹೊರವಲಯದ ಕುಸುಗಲ್ ಸಮೀಪದಲ್ಲಿ ಕಲಬುರಗಿ ಫಾರ್ಮ್ ಹೌಸ್‍ನಲ್ಲಿ ಆರ್.ಟಿ.ಐ. ಕಾರ್ಯಕರ್ತನ ಪುತ್ರ ಮತ್ತು 100ಕ್ಕೂ ಹೆಚ್ಚು ರೌಡಿಗಳು ಒಂದೆಡೇ ಸೇರಿ ಭರ್ಜರಿ ಪಾರ್ಟಿ ಮಾಡುವಾಗ ಈ ಪ್ರಕರಣ ನಡೆದಿದೆ ಎನ್ನಲಾಗಿದೆ.
ಆರ್‌ಟಿಐ ಕಾರ್ಯಕರ್ತರಾದ ಕೇಶ್ವಾಪುರದ ಫಿಲೋಮಿನಾ ಪೌಲ್ ಪುತ್ರ ಸುಂದರ ಪೌಲ್ ಹುಟ್ಟುಹಬ್ಬದ ನಿಮಿತ್ತವಾಗಿ ರಾತ್ರಿ ಫಾರ್ಮ್‍ಹೌಸ್‍ವೊಂದರಲ್ಲಿ ಗುಂಡು-ತುಂಡಿನ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಹೊಸೂರು, ಸೆಟಲ್‍ಮೆಂಟ್ ಸೇರಿದಂತೆ ನಗರದ ವಿವಿಧ ಪ್ರದೇಶದ ರೌಡಿ ಶೀಟರ್‍ಗಳು ಪಾಲ್ಗೊಂಡಿದ್ದರು. ಕೇಕ್ ಕತ್ತರಿಸುವ ಸಮಯದಲ್ಲಿ ವೇದಿಕೆ ಮೇಲೆ ಖುಷಿಯಿಂದ ಆರು ಸುತ್ತಿನ ಗುಂಡು ಹಾರಿಸಿರುವ ಅನುಮಾನ ಮೂಡಿದೆ. ಇದನ್ನೂ ಓದಿ: ಟ್ರಕ್‍ಗಳ ಮುಖಾಮುಖಿ ಡಿಕ್ಕಿ – ಚಾಲಕ ಸಾವು
ಸುದ್ದಿ ತಿಳಿಯುತ್ತಿದ್ದಂತೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ರಮೇಶ್ ಗೋಕಾಕ್ ನೇತೃತ್ವದ ತಂಡ ಫಾರ್ಮ್ ಹೌಸ್‍ಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದೆ. ಸದ್ಯ ಫಿಲೋಮಿನ್ ಪೌಲ್ ಬಳಿ ಇದ್ದ ಲೈಸೆನ್ಸ್ ಪಿಸ್ತೂಲ್ ವಶಕ್ಕೆ ಪಡೆದಿರುವ ಪೊಲೀಸರು, ಎಫ್‍ಐಆರ್ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ. ಸುಂದರ್ ಪೌಲ್ ಉಪಟಳ ಇದೇ ಮೊದಲಲ್ಲ, ಈ ಹಿಂದೇ ಕಾಲೇಜು ಕ್ಯಾಂಪಸ್‍ನಲ್ಲಿ ಪಿಸ್ತೂಲ್ ತೋರಿಸಿ ಸುದ್ದಿಯಾಗಿದ್ದ. ಇದನ್ನೂ ಓದಿ : ಯಶ್ ಮುಂದಿನ ಸಿನಿಮಾ ನರ್ತನ್ ಜೊತೆ ಫಿಕ್ಸ್ : ಘೋಷಣೆಯೊಂದೇ ಬಾಕಿ