Tag: ಪಿಸಿ ಮೋಹನ್

  • ಹೆಬ್ಬಾಳ ಟನಲ್ ಡಿಪಿಆರ್‌ನಲ್ಲಿ ಲೋಪದೋಷ ಪತ್ತೆ – 1 ತಿಂಗಳ ಹಿಂದೆಯೇ ನ್ಯೂನತೆ ತಿಳಿಸಿದ್ದೆ: ಪಿಸಿ ಮೋಹನ್‌

    ಹೆಬ್ಬಾಳ ಟನಲ್ ಡಿಪಿಆರ್‌ನಲ್ಲಿ ಲೋಪದೋಷ ಪತ್ತೆ – 1 ತಿಂಗಳ ಹಿಂದೆಯೇ ನ್ಯೂನತೆ ತಿಳಿಸಿದ್ದೆ: ಪಿಸಿ ಮೋಹನ್‌

    ಬೆಂಗಳೂರು: ಡಿಪಿಆರ್ (DPR) ಅಧ್ಯಯನಕ್ಕಾಗಿ ಸರ್ಕಾರವೇ ರಚಿಸಿದ ಸಮಿತಿ ಇದೀಗ ಡಿಪಿಆರ್‌ನಲ್ಲಿ ಲೋಪದೋಷಗಳನ್ನು ಪತ್ತೆಹಚ್ಚಿದ್ದನ್ನು ಪ್ರಶ್ನಿಸಿ ಸಂಸದ ಪಿಸಿ ಮೋಹನ್  (PC Mohan) ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

    ಟನಲ್ ಡಿಪಿಆರ್ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರವೇ ನಗರಾಭಿವೃದ್ಧಿ ಇಲಾಖೆಯ ಐವರ ತಜ್ಞರ ಸಮಿತಿ ರಚನೆ ಮಾಡಿತ್ತು. ಈಗ ಆ ಸಮಿತಿಯೇ ಡಿಪಿಆರ್‌ನಲ್ಲಿ ಇರುವ ಲೋಪದೋಷಗಳನ್ನ ಪತ್ತೆಹಚ್ಚಿದೆ. ಈ ಕುರಿತು ಸಂಸದ ಪಿಸಿ ಮೋಹನ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಳೆದ ಒಂದು ತಿಂಗಳ ಹಿಂದೆ ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ಮಾರ್ಗದ ನ್ಯೂನತೆಗಳನ್ನ ಬಿಚ್ಚಿಟ್ಟಿದ್ದೆ. ಆದರೆ ಇದೀಗ ಸರ್ಕಾರ ರಚಿಸಿದ ತಜ್ಞರ ಸಮಿತಿಯೇ ಡಿಪಿಆರ್ ಲೋಪದೋಷಗಳನ್ನ ಪತ್ತೆ ಹಚ್ಚಿದೆ. ವರದಿಯಲ್ಲಿ ದುಬಾರಿ ವೆಚ್ಚ, ಅಸಮರ್ಪಕ, ಭೂ ಅವೈಜ್ಞಾನಿಕ ವಿಚಾರವಾಗಿ ತಜ್ಞರು ಉಲ್ಲೇಖಿಸಿದ್ದಾರೆ ಎಂದು ಸರ್ಕಾರವನ್ನ ಪ್ರಶ್ನಿಸಿದ್ದಾರೆ.ಇದನ್ನೂ ಓದಿ:ಡಿಕೆಶಿ ಕನಸಿನ ಕೂಸು ಟನಲ್‌ ರಸ್ತೆ ಯೋಜನೆಗೆ ವಿಘ್ನ – ಡಿಪಿಆರ್‌ನಲ್ಲಿ ಲೋಪದೋಷ ಪತ್ತೆ

    ತರಾತುರಿಯಲ್ಲಿ ಡಿಪಿಆರ್ ತಯಾರಿಕೆ ಮಾಡಿದ್ದಾರೆ ಎಂದು ಹೇಳಿರುವ ಸಮಿತಿ ಟನಲ್ ದೊಡ್ಡ ಯೋಜನೆ ಕೇವಲ 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಮಾಡಲಾಗಿದೆ. ಇದು ಸಾಕಾಗಲ್ಲ ಎಂದು ತಿಳಿಸಿದೆ. ಹೆಬ್ಬಾಳ – ಸಿಲ್ಕ್ ಬೋರ್ಡ್ಗೆ ರೆಡ್‌ಲೈನ್ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಏಕೆ? ಲಾಲ್ ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ ಅಂತಲೂ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

    ಟನಲ್ ಡಿಪಿಆರ್‌ನಲ್ಲಿ ಲೋಪದೋಷ – ತಜ್ಞರ ವರದಿಯಲ್ಲೇನಿದೆ?
    * ಟನಲ್ ದೊಡ್ಡ ಯೋಜನೆ, 4 ಕಡೆ ಮಾತ್ರ ಮಣ್ಣಿನ ಪರೀಕ್ಷೆ ಸಾಕಾಗಲ್ಲ
    * ಹೆಬ್ಬಾಳ-ಸಿಲ್ಕ್ ಬೋರ್ಡ್ಗೆ ರೆಡ್‌ಲೈನ್ ಮೆಟ್ರೋ ಇದ್ರೆ ಟನಲ್ ಏಕೆ..?
    * ಲಾಲ್‌ಬಾಗ್ ಬಳಿ ಮೆಟ್ರೋ ಮಾರ್ಗ ಬರಬೇಕಾದ್ರೆ ಟನಲ್ ಯಾಕೆ..?
    * ಪೀಕ್ ಅವರ್ ಟ್ರಾಫಿಕ್ ಗಣನೆಗೆ ತೆಗೆದುಕೊಂಡಿಲ್ಲ
    * ಕನಿಷ್ಠ 25 ವರ್ಷಕ್ಕೆ ಯೋಜನೆ ರೂಪಿಸಬೇಕು, 10 ವರ್ಷಕ್ಕಲ್ಲ
    * ಪಾದಚಾರಿ, ಒಳಚರಂಡಿ, ನೈಸರ್ಗಿಕ ವಿಪತ್ತು ನಿರ್ವಹಣೆ ಬಗ್ಗೆ ಉಲ್ಲೇಖ
    * ಬಿಎಂಟಿಸಿ, ಮೆಟ್ರೋ, ಉಪನಗರ ರೈಲುಗಳಿಗೆ ಅನಾನುಕೂಲದ ಮಾಹಿತಿ ಇಲ್ಲ
    * ಸುರಂಗ ರಸ್ತೆ, ಪರಿಸರ ಕಾಳಜಿ, ಸಾರಿಗೆ ವ್ಯವಸ್ಥೆ ನಿರ್ವಹಣೆ ಉಲ್ಲೇಖಿಸಿಲ್ಲ
    * ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಜಿಬಿಎಯಿಂದ ಡಿಪಿಆರ್
    * ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರ ಪರಿಶೀಲನೆ ನಡೆಸಿಲ್ಲ.

    ಏನಿದು ಯೋಜನೆ?
    ಹೆಬ್ಬಾಳದಿಂದ-ಸಿಲ್ಕ್ ಬೋರ್ಡ್ ವರೆಗೆ 18 ಸಾವಿರ ಕೋಟಿ ರೂ. ವೆಚ್ಚದಲ್ಲಿ 19 ಕಿಮೀ ಉದ್ದದ ಸುರಂಗ ಮಾರ್ಗ ನಿರ್ಮಿಸುವ ಯೋಜನೆ ಇದಾಗಿದೆ. ಇದಕ್ಕಾಗಿ ಡಿಪಿಆರ್ ಕೂಡ ರಚನೆ ಮಾಡಲಾಗಿದೆ. ಸುರಂಗ ಮಾರ್ಗದಿಂದ ಲಾಲ್‌ಬಾಗ್‌ಗೂ ಹಾನಿಯಾಗುವ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕರ ವಿರೋಧ, ಡಿಪಿಆರ್ ಲೋಪದೋಷಗಳನ್ನ ಗಮನದಲ್ಲಿಟ್ಟುಕೊಂಡು ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಿದೆ ತಜ್ಞರ ಸಮಿತಿ.ಇದನ್ನೂ ಓದಿ:ಡಿಕೆಶಿ ಕನಸಿನ ಟನಲ್‌ ರೋಡ್‌ ಡಿಪಿಆರ್‌ನಲ್ಲಿ ಲೋಪದೋಷ!

  • ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ: ಪಿ.ಸಿ ಮೋಹನ್

    ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ: ಪಿ.ಸಿ ಮೋಹನ್

    ಬೆಂಗಳೂರು: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಮತಗಳವು ಆರೋಪವನ್ನ ಸಂಸದ ಪಿಸಿ ಮೋಹನ್ (PC Mohan) ತಳ್ಳಿಹಾಕಿದ್ದಾರೆ. ಮಹಾದೇವಪುರ (Mahadevapura) ಕ್ಷೇತ್ರದ ಮೇಲೆ ಅನುಮಾನ ವ್ಯಕ್ತಪಡಿಸಿರುವ ರಾಹುಲ್ ಗಾಂಧಿ, ಸರ್ವಜ್ಞ ನಗರ (Sarvagna Nagar) ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ ಅಂತಾ ಪಿಸಿ ಮೋಹನ್ ತಿರುಗೇಟು ನೀಡಿದ್ದಾರೆ.

    ದೆಹಲಿಯಲ್ಲಿ ಮಾತನಾಡಿದ ಅವರು, ಪಾರ್ಲಿಮೆಂಟ್‌ನಲ್ಲಿ ಮತದಾರರ ಪರಿಷ್ಕರಣೆ ಆಗಬಾರದು ಅಂತಾರೆ. ಇಲ್ಲಿ ಅಕ್ರಮ ಮತಗಳಿದೆ ಎಂದು ಹೇಳುತ್ತಿದ್ದಾರೆ. ಇದು ಯಾವ ರೀತಿಯ ದ್ವಂದ್ವ ರೀತಿ ಅಂದರು. 2009ರಿಂದ ನಿರಂತರವಾಗಿ ಮತಗಳು ಏರಿಕೆಯಾಗುತ್ತಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಇದೆ. ಮಹಾದೇವಪುರ ಕ್ಷೇತ್ರದ ಮೇಲೆ ರಾಹುಲ್ ಗಾಂಧಿ ಅವರಿಗೆ ಅನುಮಾನ ಬಂದಿದೆ. ಸರ್ವಜ್ಞ ನಗರದಲ್ಲಿ ಕಾಂಗ್ರೆಸ್‌ಗೆ (Congress) ಹೆಚ್ಚು ಮತ ಬಂದಿದೆ. ಅಲ್ಲಿ ಮತಗಳ ಪ್ರಮಾಣವೂ ಹೆಚ್ಚಾಗಿದೆ. ಮತ ಯಾಕೆ ಹೆಚ್ಚಾಗಿದೆ ಎನ್ನುವ ಅನುಮಾನಕ್ಕೆ ಅಲ್ಲೂ ಪರಿಶೀಲನೆ ಮಾಡಲಿ ಅಂತಾ ಆಗ್ರಹಿಸಿದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಉದ್ವಿಗ್ನತೆ – 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರತ್ಯೇಕ FIR ದಾಖಲು

    ಇನ್ನು, 2024ರಲ್ಲಿ ಯಾರ ಸರ್ಕಾರ ಇತ್ತು? ರಾಜ್ಯ ಸರ್ಕಾರದ ಅಧಿಕಾರಿಗಳ ಸಹಯೋಗದೊಂದಿಗೆ ಮತದಾರರ ಪಟ್ಟಿ ಮಾಡಿಕೊಡಲಾಗುತ್ತದೆ. ಹಾಗಿದ್ರೆ ಅವರದ್ದೇ ತಪ್ಪು. ಕಾಂಗ್ರೆಸ್‌ಗೆ ಒಂದು ಸ್ಥಾನದಿಂದ ಲೋಕಸಭೆಯಲ್ಲಿ 9 ಸ್ಥಾನ ಹೇಗೆ ಬಂತು ಅಂತಾ ಪ್ರಶ್ನಿಸಿದರು. ಇದನ್ನೂ ಓದಿ: ಅದಾನಿ ದುಡ್ಡನ್ನ ಮೋದಿ, ಬಿಜೆಪಿಯವರು ಹಂಚಿಕೊಳ್ತಿದ್ದಾರೆ: ಸಂತೋಷ್ ಲಾಡ್

    ಐಟಿಗಾಗಿ ಬೇರೆ ರಾಜ್ಯದಿಂದ ಬಹಳ ಜನರು ಬಂದಿದ್ದಾರೆ. ಐಡಿಗೆ ಆಧಾರ್ ಲಿಂಕ್ ಮಾಡಬೇಕು. ಅದನ್ನು ಮಾಡಲು ಅವರು ವಿರೋಧಿಸುತ್ತಿದ್ದಾರೆ. ಇನ್ನು ಐದು ಗಂಟೆ ಮೇಲೆ ಯಾಕೆ ಮತ ಪ್ರಮಾಣ ಹೆಚ್ಚುತ್ತಿದೆ ಗೊತ್ತಿಲ್ಲ. ಸಿಸಿಟಿವಿ ದೃಶ್ಯ ಕೇಳಲಿ, ಆಯೋಗ (Election Commission) ಕೊಡದಿದ್ದರೆ ನಾನು ಏನು ಮಾಡಲು ಸಾಧ್ಯ ಎಂದು ತಿಳಿಸಿದರು. ಇದನ್ನೂ ಓದಿ: ಟ್ಯಾರಿಫ್‌ ಶಾಕ್‌; ಚಿನ್ನದ ಬೆಲೆ 3,600 ರೂ. ಏರಿಕೆ

  • ಬೊಮ್ಮಾಯಿ ಸರ್ಕಾರದ ಕಾರ್ಯಕ್ರಮವನ್ನು ಹೇಳಿದ್ದಕ್ಕೆ  ಪ್ರದೀಪ್‌ ಈಶ್ವರ್‌ಗೆ ಸಿಟ್ಟು:  ಪಿಸಿ ಮೋಹನ್‌

    ಬೊಮ್ಮಾಯಿ ಸರ್ಕಾರದ ಕಾರ್ಯಕ್ರಮವನ್ನು ಹೇಳಿದ್ದಕ್ಕೆ ಪ್ರದೀಪ್‌ ಈಶ್ವರ್‌ಗೆ ಸಿಟ್ಟು: ಪಿಸಿ ಮೋಹನ್‌

    – ಪ್ರದೀಪ್ ಲಕ್ಷ್ಮಣ ರೇಖೆ ದಾಟಿದ ಮೇಲೆ ಮಧ್ಯ ಪ್ರವೇಶ ಮಾಡಿದೆ

    ಬೆಂಗಳೂರು: ಬೊಮ್ಮಾಯಿ (Basavaraj Bommai) ಸರ್ಕಾರದ ಕಾರ್ಯಕ್ರಮವನ್ನು ಆಯೋಜಕರು ಹೇಳಿದ್ದರು. ಇದಕ್ಕೆ ಪ್ರದೀಪ್ ಈಶ್ವರ್‌ (Pradeep Eshwar) ವಿರೋಧ ಮಾಡಿದ್ದರು. ಇದರಿಂದ ಅಲ್ಲಿ ಗೊಂದಲ ಆಯ್ತು ಎಂದು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿಸಿ ಮೋಹನ್‌ (PC Mohan) ಹೇಳಿದ್ದಾರೆ.

    ಶುಕ್ರವಾರ ರವೀಂದ್ರ ಕಲಾಕೇತ್ರದಲ್ಲಿ ಆಯೋಜನೆಗೊಂಡಿದ್ದ ಕೈವಾರ ತಾತಯ್ಯ (Kaivara Tatayya) ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನಿಂದ (Congress) ಬಲಿಜ ಸಮುದಾಯಕ್ಕೆ ಅನ್ಯಾಯವಾಗಿದೆ. ಪ್ರಚಾರದ ಗೀಳಿಗೆ ಪ್ರದೀಪ್ ಈಶ್ವರ್‌ ಮಾತನಾಡುತ್ತಿದ್ದಾರೆ. ಪ್ರದೀಪ್‌ ಅವರಿಗೆ ಹತಾಶೆಯಾಗಿದ್ದು,  ಅವರ ಹತಾಶೆಯನ್ನು ನಿನ್ನೆ ಹೊರಗೆ ಹಾಕಿದ್ದಾರೆ ಎಂದರು.

    ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಆದಾಗ ಕೈವಾರ ತಾತಯ್ಯ ಕಾರ್ಯಕ್ರಮ ಚೆನ್ನಾಗಿ ಮಾಡಿದ್ದರು. ಪ್ರದೀಪ್ ಈಶ್ವರ್ ಬಿಜೆಪಿ ಬಗ್ಗೆ ಮಾತಾಡೋದು, ಸಿದ್ದರಾಮಯ್ಯ ಸರ್ಕಾರ ಅದು ಇದು ಅಂತ ಮಾತಾಡೋಕೆ ಪ್ರಾರಂಭ ಮಾಡಿದರು. ಆಗ ಜನರೇ ಅವರ ವಿರುದ್ದ ಮಾತನಾಡಲು ಶುರು ಮಾಡಿದರು. ಪ್ರದೀಪ್ ಲಕ್ಷ್ಮಣ ರೇಖೆ ದಾಟಿದ ಮೇಲೆ ನಾನು ಮಧ್ಯ ಪ್ರವೇಶ ಮಾಡಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ರಾಜ್ಯದಲ್ಲಿರೋದು ಸಿದ್ದರಾಮಯ್ಯನ ಸರ್ಕಾರ… ನಿಮ್ಮಪ್ಪನ ಸರ್ಕಾರ ಅಲ್ಲ – ಬಿಜೆಪಿ ಕಾರ್ಯಕರ್ತರ ವಿರುದ್ಧ ರೊಚ್ಚಿಗೆದ್ದ ಪ್ರದೀಪ್‌ ಈಶ್ವರ್‌

    ಕಾಂಗ್ರೆಸ್ ಸರ್ಕಾರ ಬಲಿಜ ಸಮುದಾಯವನ್ನು 3A ಗೆ ಯಾಕೆ ಸೇರಿಸಿದ್ದು? ನಮ್ಮ ಸಮುದಾಯಕ್ಕೆ ಯಡಿಯೂರಪ್ಪ ಕೊಡುಗೆ ಇದೆ. ಅದರ ಬಗ್ಗೆ ಮಾತಾಡಿದ್ರೆ ಇವರಿಗೇನು ಸಮಸ್ಯೆ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್‌ನವರು ಬಲಿಜ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಈ ಕಾಂಗ್ರೆಸ್‌ ಸರ್ಕಾರ ಶಾಶ್ವತವಲ್ಲ. ಇನ್ನೆರಡು ವರ್ಷ ಆದ ಮೇಲೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪ್ರದೀಪ್ ಈಶ್ವರ್ ತಮ್ಮ ವರ್ತನೆ ಸರಿಪಡಿಸಿಕೊಳ್ಳಬೇಕು. ಕಾಂಗ್ರೆಸ್ ಸರ್ಕಾರ ನಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಯಡಿಯೂರಪ್ಪ, ಬೊಮ್ಮಾಯಿ ನಮ್ಮ ಸಮುದಾಯಕ್ಕೆ ಸಹಾಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     

    ಬಲಿಜ ಸಮುದಾಯದ ಅಭಿವೃದ್ಧಿ ನಿಗಮಕ್ಕೆ ಪ್ರದೀಪ್‌ ಈಶ್ವರ್‌ 500 ಕೋಟಿ ರೂ. ಕೊಡಿಸಿ. ಬಲಿಜ ಸಮುದಾಯಕ್ಕೆ ಅನ್ಯಾಯ ಮಾಡಿದ್ದೇ ಕಾಂಗ್ರೆಸ್. ಅ ನೋವು ಸಮುದಾಯಕ್ಕೆ ಇದೆ. ಅದನ್ನು ಕಾರ್ಯಕ್ರಮದಲ್ಲಿ ಹೇಳಿರಬಹುದು. ನಿನ್ನೆಯ ಕಾರ್ಯಕ್ರಮಕ್ಕೆ ಸಿಎಂ, ಮಂತ್ರಿಯಾರು ಬರಲಿಲ್ಲ. ಇದು ಕಾಂಗ್ರೆಸ್ ಸರ್ಕಾರದ ಅಸಡ್ಡೆಯನ್ನು ತೋರಿಸುತ್ತದೆ ಎಂದು ಕಿಡಿಕಾರಿದರು.

    ಅವರೇನು ಚಿಕ್ಕ ಮಗು ಅಲ್ಲ. ಶಾಸಕರಾಗಿ ಹೀಗೆ ಮಾತನಾಡುವುದು ಸರಿನಾ ಅಂತ ಅವರೇ ತಿಳಿದುಕೊಳ್ಳಬೇಕು. ಅವರು ಮಾತಾಡಿದ್ದನ್ನು ಕೇಳಿ ನನಗೇ ಶಾಕ್ ಆಯ್ತು. ಮುಂದೆ ಇಂತಹ ಕಾರ್ಯಕ್ರಮಗಳಿಗೆ ಅವರನ್ನು ಕರೆಯಬೇಕಾ ಅಂತ ಯೋಚನೆ ಮಾಡಿ ಅಂತ ಆಯೋಜಕರಿಗೆ ಹೇಳುತ್ತೇನೆ. ಬಲಿಜ ಸಮುದಾಯ ಬಿಜೆಪಿ ಜೊತೆ ‌ಇದೆ ಎಂದರು.

  • ಕೊನೆಯಲ್ಲಿ ಕೈ ಹಿಡಿದ ಮಹಾದೇವಪುರ – ಸತತ 4ನೇ ಬಾರಿ ಪಿಸಿ ಮೋಹನ್‌ಗೆ ಜಯ

    ಕೊನೆಯಲ್ಲಿ ಕೈ ಹಿಡಿದ ಮಹಾದೇವಪುರ – ಸತತ 4ನೇ ಬಾರಿ ಪಿಸಿ ಮೋಹನ್‌ಗೆ ಜಯ

    ಬೆಂಗಳೂರು: ಬಹಳ ರೋಚಕತೆಯಿಂದ ಕೂಡಿದ ಬೆಂಗಳೂರು ಕೇಂದ್ರ (Bengaluru Central) ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಿಸಿ ಮೋಹನ್‌ (PC Mohan) ಜಯಗಳಿಸಿದ್ದಾರೆ. ಈ ಮೂಲಕ ಸತತ ನಾಲ್ಕನೇ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದಾರೆ.

    ಆರಂಭದಲ್ಲಿ ಮುನ್ನಡೆಯಲ್ಲಿದ್ದ ಪಿ. ಸಿ. ಮೋಹನ್ ನಂತರ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ (Mansoor Ali Khan) ಈ ಬಾರಿ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ಲೇಷಣೆ ಒಂದು ಹಂತದಲ್ಲಿ ಬಂದಿತ್ತು.

    ಕೊನೆಯ ಹಂತದಲ್ಲಿ ಮಹದೇವಪುರ ಕ್ಷೇತ್ರದ ಜನ 1 ಲಕ್ಷಕ್ಕೂ ಹೆಚ್ಚು ಮತಗಳ ಲೀಡ್‌ ನೀಡಿದ ಪರಿಣಾಮ 32,707 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಇದನ್ನೂ ಓದಿ: ವಿಧಾನಸಭೆಯಲ್ಲಿ ಸೋತು ಕಣ್ಣೀರಿಟ್ಟಿದ್ದ ಸೋಮಣ್ಣಗೆ ರಾಷ್ಟ್ರ ರಾಜಕಾರಣಕ್ಕೆ ಆಶೀರ್ವದಿಸಿದ ಮತದಾರ

    ಪಿಸಿ ಮೋಹನ್‌ 6,58,915 ಮತಗಳನ್ನು ಪಡೆದರೆ ಮನ್ಸೂರ್ ಅಲಿಖಾನ್ 6,26,208 ಮತಗಳನ್ನು ಪಡೆದರು. 2009 ರಿಂದ ಪಿಸಿ ಮೋಹನ್‌ ಈ ಕ್ಷೇತ್ರದಿಂದ ಗೆಲ್ಲುತ್ತಾ ಬಂದಿದ್ದಾರೆ.

    2019 ರ ಚುನಾವಣೆಯಲ್ಲಿ 70,968 ಮತಗಳಿಂದ, 2014 ರಲ್ಲಿ 1,37,500 ಮತಗಳಿಂದ, 2009 ರಲ್ಲಿ 35,2018 ಮತಗಳ ಅಂತರದಿಂದ ಪಿಸಿ ಮೋಹನ್‌ ಜಯಗಳಿಸಿದ್ದರು.

     

  • ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು

    ಅಯೋಧ್ಯೆಗೆ ಬೆಂಗಳೂರಿನಿಂದ ಹೊರಟಿತು ವಿಶೇಷ ರೈಲು

    ಬೆಂಗಳೂರು: ಅಯೋಧ್ಯೆ ದರ್ಶನಕ್ಕೆ (Ayodhya Darshan) ಬೆಂಗಳೂರಿನಿಂದ (Bengaluru) ವಿಶೇಷ ರೈಲು ಹೊರಟಿದೆ. ಅಯೋಧ್ಯೆ ಶ್ರೀರಾಮ ದರ್ಶ‌ನ ಅಭಿಯಾನದಡಿ ಬಿಜೆಪಿ ಕಾರ್ಯಕರ್ತರು ದರ್ಶನಕ್ಕೆ ತೆರಳುತ್ತಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 5 ವರ್ಷ: 2019ರ ಫೆ.14 ರಂದು ನಡೆದಿದ್ದು ಏನು?

    ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ರೈಲು ನಿಲ್ದಾಣದಿಂದ ಸಂಸದ ಪಿಸಿ ಮೋಹನ್‌ (PC Mohan) ಪ್ರವಾಸಕ್ಕೆ ಚಾಲನೆ ನೀಡಿದ್ದಾರೆ. ಬೆಂಗಳೂರಿನ 3 ಲೋಕಸಭಾ ಕ್ಷೇತ್ರಗಳ 1450 ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದನ್ನೂ ಓದಿ: ಅರಬ್ಬರ ನೆಲದಲ್ಲಿ ಹಿಂದೂ ಮಂದಿರ – ವಿಶ್ವದ ಮೂರನೇ ಅತಿ ದೊಡ್ಡ ದೇವಸ್ಥಾನ ಇಂದು ಲೋಕಾರ್ಪಣೆ

    ಇಂದು ಬೆಳಗ್ಗಿನ ಜಾವ 3:40ಕ್ಕೆ ಹೊರಟ ರೈಲು ಫೆ.16ರ ಮಧ್ಯಾಹ್ನ ಅಯೋಧ್ಯೆ ಧಾಮವನ್ನು (Ayodhya Dham) ತಲುಪಲಿದೆ. ಫೆ. 17ರ ಬೆಳಗ್ಗೆ ರೈಲು ಅಯೋಧ್ಯೆ ಧಾಮದಿಂದ ಹೊರಟು ಫೆ.20ರ ಬೆಳಗ್ಗೆ ಬೆಂಗಳೂರು ತಲುಪಲಿದೆ.

  • ಪಿಸಿ ಮೋಹನ್ ಪರ ಪ್ರಚಾರದ ವೇಳೆ ‘ಗೋ ಬ್ಯಾಕ್ ದರ್ಶನ್’ ಘೋಷಣೆ

    ಪಿಸಿ ಮೋಹನ್ ಪರ ಪ್ರಚಾರದ ವೇಳೆ ‘ಗೋ ಬ್ಯಾಕ್ ದರ್ಶನ್’ ಘೋಷಣೆ

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಪರ ಭರ್ಜರಿ ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಬಳಿಕ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಪ್ರಚಾರಕ್ಕಿಳಿದಿದ್ದಾರೆ. ಸಿವಿ ರಾಮನ್ ನಗರದಲ್ಲಿ ದರ್ಶನ್ ಪ್ರಚಾರದ ಅಬ್ಬರ ನಡೆಸಿದ್ದು, ಪ್ರಚಾರ ವೇಳೆ ಅವರಿಗೆ ಶಾಕ್ ಸಿಕ್ಕಿದೆ.

    ದರ್ಶನ್ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರವಾಗಿ ಪ್ರಚಾರ ನಡೆಸುತ್ತಿದ್ದ ವೇಳೆ ಜನರು ‘ಗೋ ಬ್ಯಾಕ್ ದರ್ಶನ್’ ಎಂದು ಘೋಷಣೆ ಕೂಗಿದ್ದಾರೆ. ಸಂಸದರು ಇಲ್ಲಿ ಯಾವುದೇ ಕೆಲಸ ಮಾಡಿಲ್ಲ, ಐದು ವರ್ಷಕ್ಕೆ ಒಮ್ಮೆ ಬರುತ್ತಾರೆ. ನಟರಾಗಿ ಒಂದು ಪಕ್ಷದ ಪರ ಕೆಲಸ ಮಾಡೋದು ಸರಿಯಲ್ಲ ಎಂದು ಜನರು ಸಿಟ್ಟು ಹೊರಹಾಕಿದ್ದಾರೆ. ಅಲ್ಲದೆ ಇಲ್ಲಿಂದ ಹೊರಟು ಹೋಗಿ ಎಂದು ಜನರು ದರ್ಶನ್ ಹಾಗೂ ಪಿಸಿ ಮೋಹನ್ ಅವರ ಫ್ಲೆಕ್ಸ್ ಹಿಡಿದು ಪ್ರತಿಭಟನೆ ಮಾಡಿದರು.

    ಇನ್ನು ಪಿಸಿ ಮೋಹನ್ ಅವರ ಪರವಾಗಿ ಏಕೆ ಪ್ರಚಾರ ಮಾಡುತ್ತಿದ್ದೇನೆ ಎಂದು ದರ್ಶನ್ ಉತ್ತರಿಸಿದರು. ದರ್ಶನ್ ಮಾಧ್ಯಮಗಳೊಂದಿಗೆ ಮಾತನಾಡಿ, “ನಾನು ಮೊದಲನೇ ಬಾರಿಗೆ ಪಿಸಿ ಮೋಹನ್ ಪರ ಪ್ರಚಾರ ಮಾಡುತ್ತಿಲ್ಲ. ಪಿಸಿ ಮೋಹನ್ ನನಗೆ 15 ವರ್ಷದಿಂದ ಸ್ನೇಹಿತರು. ನಾನು ಈ ಹಿಂದೆ ಕೂಡ ಪ್ರಚಾರ ಮಾಡಿದ್ದೆ. ಈಗ ಕೂಡ ಪ್ರಚಾರ ಮಾಡುತ್ತಿದ್ದೇನೆ. ನಾನು ಪಕ್ಷ ನೋಡಿ ಪ್ರಚಾರ ಮಾಡುವುದಿಲ್ಲ. ನಾನು ವ್ಯಕ್ತಿ ನೋಡಿ ಪ್ರಚಾರಕ್ಕೆ ಹೋಗುತ್ತೇನೆ” ಎಂದು ಹೇಳಿದರು.

    ನಾನು ಎಂಪಿ, ಎಂಎಲ್‍ಎ ಪರ ಪ್ರಚಾರ ಮಾಡಿದರೆ ಒಂದು ಪತ್ರ ಮಾತ್ರ ಬಯಸುತ್ತೇನೆ. ಏಕೆಂದರೆ ನಮ್ಮ ಮನೆಗೆ ಹಾರ್ಟ್ ಆಪರೇಶನ್, ಬೇರೆ ಆಪರೇಶನ್‍ಗೆ ಹಣ ನೀಡಿ ಎಂದು ಜನರು ಕೇಳಿಕೊಂಡು ಬರುತ್ತಾರೆ. ಆಗ ಎಂಪಿ, ಎಂಎಲ್‍ಎ ಅವರಿಂದ ಪತ್ರ ಬಯಸುತ್ತೇನೆ. ಅವರ ಪತ್ರದಿಂದ ಆಸ್ಪತ್ರೆಗಳು ವೈದ್ಯಕೀಯ ಶುಲ್ಕವನ್ನು ಸ್ವಲ್ಪ ಕಡಿಮೆ ಮಾಡಿ ಚಿಕಿತ್ಸೆ ನೀಡುತ್ತವೆ. ಆಪರೇಶನ್‍ಗೆ ಒಂದು ಲಕ್ಷ ರೂ. ಇದ್ದರೆ, ಪತ್ರ ನೋಡಿ 30 ಸಾವಿರ ಕಡಿಮೆ ಮಾಡುತ್ತಾರೆ. ಉಳಿದ ಹಣವನ್ನು ನಾನು ನೀಡಿ ರೋಗಿಗಳಿಗೆ ಸಹಾಯ ಮಾಡುತ್ತೇನೆ” ಎಂದರು.

  • ಪಿಸಿ ಮೋಹನ್ ಪರ ಪ್ರಚಾರ ನಡೆಸೋದು ಯಾಕೆ: ಉತ್ತರ ಕೊಟ್ಟ ನಟ ದರ್ಶನ್

    ಪಿಸಿ ಮೋಹನ್ ಪರ ಪ್ರಚಾರ ನಡೆಸೋದು ಯಾಕೆ: ಉತ್ತರ ಕೊಟ್ಟ ನಟ ದರ್ಶನ್

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸುಮಲತಾ ಪರ ಭರ್ಜರಿ ಪ್ರಚಾರ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಪರ ಪ್ರಚಾರಕ್ಕಿಳಿದಿದ್ದಾರೆ. ಇದೇ ವೇಳೆ ನಾನು ಎಂಪಿ, ಎಂಎಲ್‍ಎ ಪರ ಪ್ರಚಾರ ಮಾಡಿದರೆ ಒಂದು ಪತ್ರ ಮಾತ್ರ ಬಯಸುತ್ತೇನೆ ಎಂದು ಹೇಳಿದ್ದಾರೆ.

    ಸಿವಿ ರಾಮನ್ ನಗರದಲ್ಲಿ ಪ್ರಚಾರ ಮಾಡುವ ವೇಳೆ ಮಾಧ್ಯಮಗಳ ಮಾತನಾಡಿದ ದರ್ಶನ್, “ನಾನು ಮೊದಲನೇ ಬಾರಿಗೆ ಪಿಸಿ ಮೋಹನ್ ಪರ ಪ್ರಚಾರ ಮಾಡುತ್ತಿಲ್ಲ. ಪಿಸಿ ಮೋಹನ್ ನನಗೆ 15 ವರ್ಷದಿಂದ ಸ್ನೇಹಿತರು. ನಾನು ಈ ಹಿಂದೆ ಕೂಡ ಪ್ರಚಾರ ಮಾಡಿದ್ದೆ. ಈಗ ಕೂಡ ಪ್ರಚಾರ ಮಾಡುತ್ತಿದ್ದೇನೆ. ನಾನು ಪಕ್ಷ ನೋಡಿ ಪ್ರಚಾರ ಮಾಡುವುದಿಲ್ಲ. ನಾನು ವ್ಯಕ್ತಿ ನೋಡಿ ಪ್ರಚಾರಕ್ಕೆ ಹೋಗುತ್ತೇನೆ” ಎಂದು ಹೇಳಿದ್ದಾರೆ.

    ನಾನು ಎಂಪಿ, ಎಂಎಲ್‍ಎ ಪರ ಪ್ರಚಾರ ಮಾಡಿದರೆ ಒಂದು ಪತ್ರ ಮಾತ್ರ ಬಯಸುತ್ತೇನೆ. ಏಕೆಂದರೆ ನಮ್ಮ ಮನೆಗೆ ಹಾರ್ಟ್ ಆಪರೇಶನ್, ಬೇರೆ ಆಪರೇಶನ್‍ಗೆ ಹಣ ನೀಡಿ ಎಂದು ಜನರು ಕೇಳಿಕೊಂಡು ಬರುತ್ತಾರೆ. ಆಗ ಎಂಪಿ, ಎಂಎಲ್‍ಎ ಅವರಿಂದ ಪತ್ರ ಬಯಸುತ್ತೇನೆ. ಅವರ ಪತ್ರದಿಂದ ಆಸ್ಪತ್ರೆಗಳು ವೈದ್ಯಕೀಯ ಶುಲ್ಕವನ್ನು ಸ್ವಲ್ಪ ಕಡಿಮೆ ಮಾಡಿ ಚಿಕಿತ್ಸೆ ನೀಡುತ್ತವೆ. ಆಪರೇಶನ್‍ಗೆ ಒಂದು ಲಕ್ಷ ರೂ. ಇದ್ದರೆ, ಪತ್ರ ನೋಡಿ 30 ಸಾವಿರ ಕಡಿಮೆ ಮಾಡುತ್ತಾರೆ. ಉಳಿದ ಹಣವನ್ನು ನಾನು ನೀಡಿ ರೋಗಿಗಳಿಗೆ ಸಹಾಯ ಮಾಡುತ್ತೇನೆ” ಎಂದರು.

    ಮಂಗಳವಾರ ನಾನು ಮಂಡ್ಯಕ್ಕೆ ಹೋಗುತ್ತೇನೆ. ಜನರು ಎಳೆದಾಡುವಾಗ ಕೈ ಸ್ವಲ್ಪ ನೋವಾಗಿದೆ. ಬೆಂಗಳೂರಿನಲ್ಲಿ ಸದ್ಯ ಪಿಸಿ ಮೋಹನ್ ಬಿಟ್ಟರೆ ಯಾರ ಪರವಾಗಿ ಪ್ರಚಾರ ಮಾಡುವುದಿಲ್ಲ. ಮತ್ತೆ 13ರಂದು ನಾನು ಪಿಸಿ ಮೋಹನ್ ಪರ ಪ್ರಚಾರಕ್ಕೆ ಬರುತ್ತೇನೆ ಎಂದು ದರ್ಶನ್ ತಿಳಿಸಿದರು.

    ಇಂದು ಸಂಜೆ ಮತ್ತೆ ದರ್ಶನ್ ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಶಾಂತಿನಗರ ಬಸ್ ಸ್ಟ್ಯಾಂಡ್‍ನಿಂದ ರೋಡ್ ಶೋ ಆರಂಭಿಸಲಿದ್ದಾರೆ. ಪಿಸಿ ಮೋಹನ್ ಪರ ದರ್ಶನ್ ಜೊತೆ ಸಂಸದ ರಾಜೀವ್ ಚಂದ್ರಶೇಖರ್, ನಟಿ ತಾರಾ ಅನುರಾಧ ಭಾಗಿಯಾಗಲಿದ್ದಾರೆ.

  • ಲೋಕಸಭಾ ಚುನಾವಣೆಗೆ ಕ್ಷೇತ್ರ ಆಯ್ದುಕೊಂಡ ಪ್ರಕಾಶ್ ರೈ

    ಲೋಕಸಭಾ ಚುನಾವಣೆಗೆ ಕ್ಷೇತ್ರ ಆಯ್ದುಕೊಂಡ ಪ್ರಕಾಶ್ ರೈ

    ಬೆಂಗಳೂರು: ನಟ ಪ್ರಕಾಶ್ ರೈ ಹೊಸ ವರ್ಷದಂದು ತಾವು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರು. ಆದ್ರೆ ಯಾವ ಕ್ಷೇತ್ರ, ಯಾವ ಪಕ್ಷ ಎಂಬುದರ ಮಾಹಿತಿಯನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲಿದ್ದೇನೆ ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.

    2019ರ ಲೋಕಸಭಾ ಚುನಾವಣೆಗಾಗಿ ನನ್ನ ರಾಜಕೀಯ ಜೀವನವನ್ನು ಕರ್ನಾಟಕದ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಆರಂಭಿಸಲು ನಿಶ್ಚಯಿಸಿದ್ದೇನೆ. ನನ್ನ ಹೊಸ ಜರ್ನಿಗೆ ಶುಭಕೋರಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಶೀಘ್ರದಲ್ಲಿಯೇ ಚುನಾವಣೆ ತಯಾರಿ ಮತ್ತು ಇದಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತೇನೆ ಎಂದು ಪ್ರಕಾಶ್ ರೈ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

    ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಬಳಿಕ ಪ್ರಕಾಶ್ ರೈ ಎಡಪಂಥೀಯರಲ್ಲಿ ಗುರುತಿಸಿಕೊಂಡಿದ್ದಾರೆ. ಜಸ್ಟ್ ಆಸ್ಕಿಂಗ್ ಎಂಬ ಹ್ಯಾಶ್ ಟ್ಯಾಗ್ ಬಳಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ತಮ್ಮ ಆಪ್ತರ ಬಳಿಯೇ ಚರ್ಚಿಸಿಯೇ ಹೊಸ ವರ್ಷದಂದು ತಮ್ಮ ಅಭಿಮಾನಿಗಳಿಗೆ ರಾಜಕೀಯ ಪ್ರವೇಶದ ಸಿಹಿ ಸುದ್ದಿಯನ್ನು ನೀಡಿದ್ದರು.

    ಬೆಂಗಳೂರು ಸೆಂಟ್ರಲ್ ಪ್ರಾಬಲ್ಯತೆ ಹೇಗಿದೆ?
    2008ರಲ್ಲಿ ಈ ಲೋಕಸಭಾ ಕ್ಷೇತ್ರ ರಚನೆಯಾಗಿದ್ದು, ಇದೂವರೆಗೂ ಎರಡು ಚುನಾವಣೆಗಳನ್ನು ಎದುರಿಸಿದೆ. ಎರಡು ಬಾರಿಯೂ (2009 ಮತ್ತು 2014) ಬಿಜೆಪಿ ಪಿ.ಸಿ.ಮೋಹನ್ ಸಂಸದರಾಗಿ ಸಂಸತ್ತು ಪ್ರವೇಶ ಮಾಡಿದ್ದಾರೆ. ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳೇ ಬಿಜೆಪಿಗೆ ಸ್ಪರ್ಧೆ ನೀಡಿದ್ದರು. 2009ರಲ್ಲಿ ಕಾಂಗ್ರೆಸ್ ನಿಂದ ಹೆಚ್.ಟಿ.ಸಾಂಗ್ಲಿಯಾನ ಮತ್ತು 2014ರಲ್ಲಿ ರಿಜ್ವಾನ್ ಅರ್ಷದ್ ಸ್ಪರ್ಧೆ ಮಾಡಿ ಪಿ.ಸಿ.ಮೋಹನ್ ವಿರುದ್ಧ ಸೋಲು ಕಂಡಿದ್ದರು.

    ಪಿ.ಸಿ.ಮೋಹನ್ ಮತ್ತು ರಿಜ್ವಾನ್ ಅರ್ಷದ್

    2019ರಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪಿ.ಸಿ.ಮೋಹನ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತ ಕಾಂಗ್ರೆಸ್‍ನಿಂದ ಯುವ ಮುಖಂಡ ರಿಜ್ವಾನ್ ಅರ್ಷದ್ ಅವರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ. ಚುನಾವಣೆಗೂ ಮೊದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ರಚಿಸಿಕೊಂಡಿದ್ದು, ಎರಡೂ ಪಕ್ಷಗಳ ಪರವಾಗಿ ಯಾರು ಸ್ಪರ್ಧೆ ಮಾಡ್ತಾರೆ ಎಂಬುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ: ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಅಶ್ವಥ್ ನಾರಾಯಣ ವಾಗ್ದಾಳಿ

    ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ: ಈಶ್ವರಪ್ಪ ವಿರುದ್ಧ ಏಕವಚನದಲ್ಲಿ ಅಶ್ವಥ್ ನಾರಾಯಣ ವಾಗ್ದಾಳಿ

    ಬೆಂಗಳೂರು: ನೀನು ಪಕ್ಷದಲ್ಲಿ ಇಷ್ಟು ದೊಡ್ಡವನಾಗಿದ್ದು ಹೇಗೆ? ಬೆಳೆದು ಬಂದಿದ್ದು ಹೇಗೆ ಅಂತ ಯೋಚಿಸು ಎಂದು ಈಶ್ವರಪ್ಪ ವಿರುದ್ಧ ಶಾಸಕ ಅಶ್ವಥ್ ನಾರಾಯಣ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

    ತುಮಕೂರು ಜಿಲ್ಲೆಯ ಬಿಜೆಪಿ ಪಕ್ಷದ ವತಿಯಿಂದ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿದ್ದ ‘ಸಂಘಟನೆ ಉಳಿಸಿ ಸಮಾವೇಶ’ದಲ್ಲಿ ಬಿಎಸ್ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಕ್ಕೆ ಮಲ್ಲೇಶ್ವರಂ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಬಿಎಸ್‍ವೈ ಬಣ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಶ್ವಥ್ ನಾರಾಯಣ, ಯಾರು ಪಕ್ಷದಲ್ಲಿ ಯಡಿಯೂರಪ್ಪ ನಾಯಕತ್ವವನ್ನು ಪ್ರಶ್ನಿಸುತ್ತಿದ್ದಾರೋ ಅವರು ಪಕ್ಷಕ್ಕೆ ಬೇಕಿಲ್ಲ. ನಿನ್ನಂಥ ಕ್ಷುಲ್ಲಕ, ಯೋಗ್ಯವಲ್ಲದ ವ್ಯಕ್ತಿ ಪಕ್ಷಕ್ಕೆ ಬೇಡ. ನೀನು ಪಕ್ಷದಲ್ಲಿ ಇಷ್ಟು ದೊಡ್ಡವನಾಗಿದ್ದು ಹೇಗೆ? ಬೆಳೆದು ಬಂದಿದ್ದು ಹೇಗೆ ಅಂತ ಯೋಚಿಸು ಎಂದು ಪ್ರಶ್ನಿಸಿ ಕಿಡಿಕಾರಿದರು.

    ಅತೃಪ್ತರ ಸಭೆ ನಡೆದಿದ್ದು ಖಂಡನೀಯವಾಗಿದ್ದು, ಪಕ್ಷದ ಸಂಘಟನೆಯಲ್ಲಿ ಇಂತಹ ಸಭೆಗಳು ಸರಿಯಲ್ಲ. ಪಕ್ಷ ಸಂಘಟನೆ ಬಗ್ಗೆ ನಾವೆಲ್ಲ ಶ್ರಮಿಸುತ್ತಿದ್ದೇವೆ. ಆದರೆ ಈ ಅತೃಪ್ತರು ಪಕ್ಷದ ಸಂಘಟನೆ ಹಾಳು ಮಾಡುತ್ತಿದ್ದಾರೆ. ಕೂಡಲೇ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರು ವಿರುದ್ಧ ಕ್ರಮ ಕೈಗೊಳ್ಳಬೇಕು. ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡವರಿಗೆ ವಿಪಕ್ಷ ನಾಯಕ ಸ್ಥಾನ ಕೊಟ್ಟಿದ್ದು ನಮಗೆ ಅಗೌರವ. ಯೋಗ್ಯತೆ ಗೊತ್ತಿದೆ, ಕೂಡಲೇ ಈಶ್ವರಪ್ಪ ಅವರನ್ನ ಪಕ್ಷದಿಂದ ಕಿತ್ತು ಹಾಕಲಿ ಎಂದು ಅಶ್ವಥನಾರಾಯಣ ಆಗ್ರಹಿಸಿದರು.

    ಸಂಸದ ಪಿ.ಸಿ.ಮೋಹನ್ ಮಾತನಾಡಿ ಈಶ್ವರಪ್ಪನವರು ನಾಲ್ಕು ಗೋಡೆಗಳ ಮಧ್ಯೆ ಸಮಸ್ಯೆ ಬಗೆಹರಿಸಿಕೊಳ್ಳಬೇಕಿತ್ತು. ಈಶ್ವರಪ್ಪ ಕರೆದಿದ್ದ ಸಭೆಗೆ ಸಾವಿರ ಜನ ಇರಲಿಲ್ಲ ಬಿಎಸ್‍ವೈ ಸಭೆ ಕರೆದ್ರೆ 2 ಲಕ್ಷ ಜನ ಬರುತ್ತಾರೆ. ಇದು ಪಕ್ಷ ವಿರೋಧಿ ಚಟುವಟಿಕೆ ಎಂದು ಟೀಕಿಸಿದರು.

    ಸುದ್ದಿಗೋಷ್ಠಿಯಲ್ಲಿ ಮುನಿರಾಜು, ನಾರಾಯಣಸ್ವಾಮಿ, ಪರಿಷತ್ ಸದಸ್ಯರಾದ ಪುಟ್ಟಸ್ವಾಮಿ, ಲೆಹರ್ ಸಿಂಗ್, ಮಾಜಿ ಶಾಸಕ ಕಟ್ಟಾ ಸುಬ್ರಮಣ್ಯನಾಯ್ಡು, ಬೆಂಗಳೂರು ನಗರಾಧ್ಯಕ್ಷ ಸದಾಶಿವ ಉಪಸ್ಥಿತರಿದ್ದರು.

    ಇದನ್ನೂ ಓದಿ: ಸಮಸ್ಯೆ ಪರಿಹಾರಕ್ಕೆ ಬಿಎಸ್‍ವೈಗೆ ಭಿನ್ನರಿಂದ ಡೆಡ್‍ಲೈನ್ ಫಿಕ್ಸ್

    https://www.youtube.com/watch?v=nFYZuu2deRU

    ಇದನ್ನೂ ಓದಿ: ನಾವು ತಂದೆ, ತಾಯಿಗೆ ಹುಟ್ಟಿದ ಜನ. ನಾವು ಪಕ್ಷ ಬಿಡಲ್ಲ, ಬೇರೆ ಪಕ್ಷ ಕಟ್ಟಲ್ಲ: ಬಿಎಸ್‍ವೈ ವಿರುದ್ಧ ಈಶ್ವರಪ್ಪ ಗುಡುಗು
    ಇದನ್ನೂ ಓದಿ: ಬಿಜೆಪಿ ಸಂಘಟನಾ ಸಮಾವೇಶದಲ್ಲಿ ಬಿಎಸ್‍ವೈ-ಈಶ್ವರಪ್ಪ ಬೆಂಬಲಿಗರ ಮಾರಾಮಾರಿ: ವಿಡಿಯೋ ನೋಡಿ

    https://www.youtube.com/watch?v=FnDvcFgKDoQ

  • ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ- ನಮ್ಗೂ ಟಿಕೆಟ್ ಬೇಕು ಅಂತಿರೋ ಸಂಸದರು

    ರಾಜ್ಯ ಬಿಜೆಪಿಯಲ್ಲಿ ಮಿಂಚಿನ ಸಂಚಲನ- ನಮ್ಗೂ ಟಿಕೆಟ್ ಬೇಕು ಅಂತಿರೋ ಸಂಸದರು

    ಬೆಂಗಳೂರು: ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಪಾಳೆಯದಲ್ಲಿ ಮಿಂಚಿನ ಸಂಚಲನ ನಡೆಯುತ್ತಿದೆ. ನಮಗೂ ಟಿಕೆಟ್ ಬೇಕು ಅಂತಾ ಕೆಲ ಸಂಸದರು ಕ್ಯೂ ನಿಲ್ತಿದ್ದಾರೆ.

    ಸಂಸತ್ತಿನಿಂದ ವಿಧಾನಸಭೆಗೆ ಬರಲು ಸಂಸದರು ಪ್ಲಾನ್ ಮಾಡಿದ್ದಾರೆ. ಕ್ಷೇತ್ರ ಹುಡುಕಿದ್ದೇವೆ, ನಮಗೂ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿ ಅಂತ ಕೆಲ ಸಂಸದರು ಬಿಜೆಪಿ ವರಿಷ್ಠರಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಆದ್ರೆ ಸಂಸದರ ಬೇಡಿಕೆಗೆ ಸೊಪ್ಪು ಹಾಕದ ವರಿಷ್ಠರು, ಸದ್ಯಕ್ಕೆ ಎಂಪಿಗಳಿಗೆ ಟಿಕೆಟ್ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

    ಯಾರಿಗೆ ಯಾವ ಕ್ಷೇತ್ರ ಬೇಕಂತೆ?
    > ಶೋಭಾ ಕರಂದ್ಲಾಜೆ – ಪುತ್ತೂರು ಕ್ಷೇತ್ರ
    > ಅನಂತಕುಮಾರ್ ಹೆಗಡೆ- ಯಲ್ಲಾಪುರ ಕ್ಷೇತ್ರ
    > ಕರಡಿಸಂಗಣ್ಣ – ಕೊಪ್ಪಳ ಕ್ಷೇತ್ರ
    > ಶ್ರೀರಾಮುಲು- ಬಳ್ಳಾರಿ ಗ್ರಾಮಾಂತರ ಕ್ಷೇತ್ರ, ಸಂಡೂರು ಕ್ಷೇತ್ರ
    > ಪಿ.ಸಿ.ಮೋಹನ್- ಗಾಂಧಿನಗರ ಕ್ಷೇತ್ರ