Tag: ಪಿಸಿಓಡಿ

  • ಸ್ತ್ರೀಯರಿಗೆ ಕಾಡುತ್ತಿದೆ PCOD ಸಮಸ್ಯೆ – ಲಕ್ಷಣ ಏನು? ಆಹಾರ ಕ್ರಮ ಹೇಗಿರಬೇಕು?

    ಸ್ತ್ರೀಯರಿಗೆ ಕಾಡುತ್ತಿದೆ PCOD ಸಮಸ್ಯೆ – ಲಕ್ಷಣ ಏನು? ಆಹಾರ ಕ್ರಮ ಹೇಗಿರಬೇಕು?

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆಹಾರ ಪದ್ಧತಿಯಿಂದ ಸ್ತ್ರೀಯರು (Women) ತಮ್ಮ ಆರೋಗ್ಯದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಯೌವನದಿಂದ ವೃದ್ಧಾಪ್ಯದವರೆಗೂ ಹೆಣ್ಣು ಹಲವಾರು ಬದಲಾವಣೆಗಳಿಗೆ ಒಳಗಾಗುತ್ತಾಳೆ. ಅದರ ಹಿಂದೆ ಇರುವುದೇ ಹಾರ್ಮೋನ್ (Hormones). ಈ ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾದರೆ ಒಂದರ ಹಿಂದೊಂದು ಸಮಸ್ಯೆಯ ಸುಳಿಗೆ ಹೆಣ್ಣು ಸಿಲುಕಿ ಒದ್ದಾಡುತ್ತಾಳೆ.

    ಹೌದು. ಇತ್ತೀಚಿನ ದಿನಗಳಲ್ಲಿ ಹರೆಯದ ಹೆಣ್ಣುಮಕ್ಕಳನ್ನು ಬಾಧಿಸುತ್ತಿರುವ ಸಮಸ್ಯೆಗಳಲ್ಲಿ ಪಿಸಿಓಡಿ ಕೂಡ ಒಂದು. ಅಪರಿಪಕ್ವವಾದ ಅಂಡಾಣು ಗರ್ಭಾಶಯದ ಎರಡೂ ಬದಿಯಲ್ಲಿರುವ ಅಂಡಕೋಶದ ಮೇಲೆ ನೀರಿನ ಗುಳ್ಳೆಯಂತೆ ಇರುವುದನ್ನು ಪಿಸಿಓಡಿ ಎಂದು ಕರೆಯುತ್ತಾರೆ.

    ಏನಿದು ಪಿಸಿಓಡಿ?: ಪಾಲಿಸಿಸ್ಟಿಕ್ ಓವೇರಿಯನ್ ಡಿಸೀಸ್ (PCOD) ಒಂದು ಹಾರ್ಮೋನ್ ಸ್ಥಿತಿ. ಹಾರ್ಮೋನುಗಳ ಅಸಮತೋಲನದಿಂದಾಗಿ ಪಿಸಿಓಡಿ ಕಂಡುಬರುತ್ತದೆ. ಇದು ಹೆರಿಗೆಯ ವಯಸ್ಸಿನ ಅಂದರೆ 12 ರಿಂದ 45 ವರ್ಷದವರೆಗಿನ ಸುಮಾರು 5 ರಿಂದ 10% ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಇದು ಸುಮಾರು 9% ರಿಂದ 22% ಭಾರತೀಯ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಚೀನಾ ಮತ್ತು ಶ್ರೀಲಂಕಾದಲ್ಲಿ ಈ ಸಂಖ್ಯೆಗಳು 2% ರಿಂದ 7% ರಷ್ಟಿವೆ. ಪಿಸಿಓಡಿ, ಪಾಲಿಸಿಸ್ಟಿಕ್ ಓವೇರಿಯನ್ ಸಿಂಡ್ರೋಮ್ (PCOS) ಎಂದೂ ಸಹ ಕರೆಯಲ್ಪಡುತ್ತದೆ. ಚಿಕಿತ್ಸೆ ನೀಡದೆ ಬಿಟ್ಟರೆ, ಮಧುಮೇಹ, ಸ್ಥೂಲಕಾಯತೆ, ಹೃದ್ರೋಗಗಳು ಮತ್ತು ಅಧಿಕ ಕೊಲೆಸ್ಟ್ರಾಲ್‍ನಂತಹ ಹೆಚ್ಚಿನ ಆರೋಗ್ಯ ತೊಡಕುಗಳಿಗೆ ಕಾರಣವಾಗಬಹುದು.

    ಸಾಮಾನ್ಯವಾಗಿ ಮಹಿಳೆಯರಲ್ಲಿ 28-30 ದಿನಗಳ ಅವಧಿಗೊಮ್ಮೆ ಋತುಚಕ್ರವಾಗುವುದನ್ನು ಕಾಣಬಹುದು. ಮುಟ್ಟಾದ 11-14 ನೇ ದಿನಗಳ ಮಧ್ಯೆ ಯಾವುದಾದರು ಅಂಡಕೋಶದಿಂದ ಅಂಡಾಣುವು ಬಿಡುಗಡೆಯಾಗುತ್ತದೆ. ಹೀಗೆ ಪ್ರತಿ ತಿಂಗಳು ಬಲ ಅಥವಾ ಎಡ ಅಂಡಾಶಯದಿಂದ ಒಂದು ಅಂಡಾಣು ಬಿಡುಗಡೆಯಾಗುತ್ತಿರುತ್ತದೆ ಮತ್ತು ಗರ್ಭ ಧರಿಸಲು ಸಿದ್ಧವಾಗಿರುತ್ತದೆ. ಆದರೆ ಯಾರಲ್ಲಿ ಪಿಸಿಒಡಿ ಸಮಸ್ಯೆ ಇರುತ್ತದೋ ಅವರಲ್ಲಿ ಅಂಡಕೋಶದಿಂದ ಅಂಡಾಣುಗಳು ಬಿಡುಗಡೆಯಾಗದೇ ಅಲ್ಲಿಯೇ ಅಪರಿಪಕ್ವವಾದ ಅಂಡಾಣುಗಳು ನೀರಿನ ಗುಳ್ಳೆಗಳಂತೆ ಅಂಡಕೋಶದ ಒಳ ಪದರ ಮೇಲೆ ಉಳಿದು ಹೋಗುತ್ತದೆ.

     

    ಲಕ್ಷಣಗಳು: ಪ್ರತಿ ತಿಂಗಳ ಋತುಚಕ್ರದಲ್ಲಿ ಏರುಪೇರು ಉಂಟಾಗುತ್ತದೆ. ಋತುಚಕ್ರ ಸರಿಯಾಗಿ ಆದರೂ ಅಂಡಾಣುಗಳು ಅಂಡಕೋಶದಿಂದ ಬಿಡುಗಡೆಯಾಗದಿರುವುದು. ಸಾಮಾನ್ಯವಾಗಿ ಋತುಚಕ್ರದ ಸಂದರ್ಭದಲ್ಲಿ 4-5 ದಿನ ರಕ್ತಸ್ರಾವ ಆಗುತ್ತದೆ. ಆದರೆ ಇಲ್ಲಿ ರಕ್ತಸ್ರಾವು ಹೆಚ್ಚಿನ ದಿನಗಳವರೆಗೆ ಇರುವುದು. ಎರಡು ಋತುಚಕ್ರದ ಮಧ್ಯೆ ಮತ್ತೆ ರಕ್ತಸ್ರಾವ ಕಾಣಿಸಿಕೊಳ್ಳುವುದು. ಋತುಚಕ್ರ ಕಾಣಿಸಿಕೊಂಡಾಗ ಅತಿ ತೀವ್ರವಾದ ನೋವು ಕಾಣಿಸಿಕೊಳ್ಳುವುದು. ಈ ಸಮಸ್ಯೆ ಇರುವ ಮಹಿಳೆಯರಲ್ಲಿ ಸಂತಾನೋತ್ಪತ್ತಿಗೆ ಕೂಡ ತೊಡಕು ಉಂಟಾಗುವುದು.

    ಬಹಳ ತಿಂಗಳಾದರೂ ಋತುಚಕ್ರ ಕಾಣಿಸಿಕೊಳ್ಳದಿರುವುದು. ತೂಕ ಹೆಚ್ಚಾಗುವುದು, ಕೂದಲು ಉದುರುವುದು, ಮುಖದ ಮೇಲೆ, ಶರೀರದ ಮೇಲೆ ಅಧಿಕವಾಗಿ ಕೂದಲು ಕಾಣಿಸಿಕೊಳ್ಳುವುದು ಹಾಗೂ ಬಂಜೆತನ ಇವು ಪಿಸಿಓಡಿ ಲಕ್ಷಣಗಳಾಗಿವೆ.

    ಪಿಸಿಓಡಿ ಬರಲು ಕಾರಣಗಳೇನು?: ಹಾರ್ಮೋನ್ ಅಸಮತೋಲನ, ಅಸಮರ್ಪಕ ಜೀವನಶೈಲಿ, ಅಧಿಕ ಒತ್ತಡ, ವ್ಯಾಯಾಮದ ಕೊರತೆ ಹಾಗೂ ಕೊಬ್ಬಿನ ಪದಾರ್ಥಗಳನ್ನು ಹೆಚ್ಚು ತಿನ್ನುವುದು ಕೂಡ ಪಿಸಿಓಡಿ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿರುತ್ತದೆ.

    ಮುಂಜಾಗ್ರತೆ ಏನು?: ಜೀವನ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡು ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು. ಸರಿಯಾದ ವ್ಯಾಯಾಮದಿಂದ ಹಾರ್ಮೋನ್‍ಗಳ ಸಮತೋಲನವನ್ನು ಕಾಪಾಡಿಕೊಳ್ಳುವುದು ಹಾಗೂ ಸಮತೋಲನ ಆಹಾರ ಸೇವಿಸುವುದರಿಂದ ಈ ಸಮಸ್ಯೆಯಿಂದ ದೂರ ಉಳಿದುಕೊಳ್ಳಬಹುದು.

    ಆಹಾರ ಕ್ರಮ ಹೇಗಿರಬೇಕು?: ನೈಸರ್ಗಿಕ, ಸಂಸ್ಕರಿಸದ ಆಹಾರ, ಪಾಲಕ್, ಕೇಲ್ ಮತ್ತು ಇತರ ಎಲೆಗಳ ತರಕಾರಿಗಳು, ಬ್ರೊಕೊಲಿ ಮತ್ತು ಹೂಕೋಸು, ಬೀಜಗಳು ಮತ್ತು ದ್ವಿದಳ ಧಾನ್ಯಗಳು, ಮೀನು, ಕಾಳುಗಳನ್ನು ಸೇವಿಬೇಕು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು

    PCOD ನಿವಾರಣೆಗೆ ಇಲ್ಲಿವೆ ಕೆಲವು ಮನೆ ಮದ್ದುಗಳು

    ತ್ತೀಚಿನ ದಿನಗಳಲ್ಲಿ ಅನೇಕ ಮಹಿಳೆಯರ ಜೀವನ ಶೈಲಿಯಿಂದಾಗಿ ಪಿಸಿಓಡಿ ಕಾಣಿಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಮನೆ, ಕೆಲಸದ ಒತ್ತಡದಿಂದಾಗಿ ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOD) ಬರುತ್ತಿದೆ. ಶೇಕಡಾ 25 ರಿಂದ 30ರಷ್ಟು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಧಿಕ ತೂಕ, ಕೂದಲು ಉದುರುವಿಕೆ, ಮೊಡವೆ, ಪುರುಷರಿಗಿರುವಂತೆ ರೋಮಗಳ ಬೆಳವಣಿಗೆ ಮೊದಲಾದ ಸಮಸ್ಯೆಗಳನ್ನು ಪಿಸಿಓಡಿ ಸಮಸ್ಯೆಗೊಳಗಾದವರಲ್ಲಿ ಕಾಣಬಹುದು. ಅಷ್ಟೇ ಅಲ್ಲದೇ ಬಂಜೆತನಕ್ಕೂ ಕಾರಣವಾಗಬಲ್ಲ ಈ ಸಮಸ್ಯೆಯಿಂದ ಚಿಂತೆ ಮತ್ತು ಖಿನ್ನತೆಯಂತಹ ಬೇರೆ ಬೇರೆ ತೊಂದರೆಗಳು ಕಾಣಿಸಿಕೊಳ್ಳಬಹುದು.

    ಈ ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಂದು ಮಹಿಳೆಯು (Woman) ಸತತವಾಗಿ ವ್ಯಾಯಾಮ ಮಾಡುವುದು ಹಾಗೂ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ನಡೆಸಬೇಕು. ಈ ಪಿಸಿಓಡಿ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಲು ಕೆಲವು ಪ್ರೋಟೀನ್ ಹಾಗೂ ಫೈಬರ್ ಪ್ರಮಾಣ ಹೊಂದಿರುವ ಜ್ಯೂಸ್‍ಗಳು ಇಲ್ಲಿವೆ.

    ಮೆಂತ್ಯ, ದಾಲ್ಚಿನ್ನಿ ಮತ್ತು ಕಪ್ಪು ಒಣದ್ರಾಕ್ಷಿ ಜ್ಯೂಸ್: ಮೆಂತ್ಯ ಸಾಮಾನ್ಯವಾಗಿ ಋತುಚಕ್ರದ ಸಮಯದಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದರಿಂದಾಗಿ ಋತುಚಕ್ರದ ಸಮಯದಲ್ಲಿ ಉಂಟಾಗುವ ಹೊಟ್ಟೆ ನೋವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ. ದಾಲ್ಚಿನಿ ಇನ್ಸುಲಿನ್ ಪ್ರತಿರೋಧವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೂ ಕಪ್ಪು ಒಣ ದ್ರಾಕ್ಷಿಯು ಪಿಸಿಓಡಿ ಚಿಕಿತ್ಸೆಯಲ್ಲಿ ಸಹಾಯ ಮಾಡುವ ಹಾಗೂ ರಕ್ತ ಶುದ್ಧೀಕರಣ ಗುಣಲಕ್ಷಣಗಳನ್ನು ಹೊಂದಿರುತ್ತದೆ. ಇದರಿಂದಾಗಿ ಒಣದ್ರಾಕ್ಷಿ, ದಾಲ್ಚಿನ್ನಿ ಹಾಗೂ ಮೆಂತ್ಯ ಬೀಜವನ್ನು ಮಿಶ್ರಣ ಮಾಡಿ 8 ದಿನಗಳವರೆಗೆ ಕುಡಿದರೆ ಪಿಸಿಒಡಿ ಕಡಿಮೆ ಮಾಡಿಕೊಳ್ಳಬಹುದು.

    ಅಲೋವರಾ (ಲೋಳೆರಸ): ಅಲೋವರಾ (Aloe Vera) ಜೀರ್ಣಾಂಗ ವ್ಯವಸ್ಥೆಗೆ ಸಹಾಯ ಮಾಡುತ್ತದೆ. ಅದರಲ್ಲೂ ಹೆಚ್ಚಾಗಿ ಪಿಸಿಓಡಿಯಿಂದ ಬಳಲುತ್ತಿರುವ ಮಹಿಳೆಯರು ಬೆಳಗ್ಗೆ ಸಮಯದಲ್ಲಿ ಅಲೋವರವನ್ನು ಉಪ್ಪು, ಜೇನುತುಪ್ಪ ಹಾಗೂ ನೀರಿನೊಂದಿಗೆ ಮಿಶ್ರಣ ಮಾಡಿ ಜ್ಯೂಸ್ ಮಾಡಿ ಕುಡಿಯಿರಿ.

    ಆಪಲ್ ಸೈಡರ್ ವಿನೆಗರ್: ಈ ಪೌಷ್ಟಿಕ ಜ್ಯೂಸ್ ದೇಹದ ಸಮತಲೋನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೇ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಜೊತೆಗೆ ಪಿಸಿಓಡಿ ಸಮಸ್ಯೆಯನ್ನು ನಿವಾರಿಸುತ್ತದೆ. ಇದನ್ನೂ ಓದಿ: ಬೇಸಿಗೆಯಲ್ಲಿ ನಿಮ್ಮ ತ್ವಚೆ ರಕ್ಷಣೆಗೆ ಹೀಗೆ ಮಾಡಿ

    ಬೀಟ್ರೂಟ್ ಕ್ಯಾರೆಟ್ ಜ್ಯೂಸ್: ಬೀಟ್ರೂಟ್ ಹಾಗೂ ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ರಕ್ತಹೀನತೆಯಿಂದ ಚೇತರಿಸಿಕೊಳ್ಳಬಹುದು. ಋತುಚಕ್ರವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುವ ಮೂಲಕ ರಕ್ತವನ್ನು ಶುದ್ಧಿಗೊಳಿಸುತ್ತದೆ.

    ಪುದಿನಾ ಟೀ: ಪುದಿನಾ ಟೀ ಮಹಿಳೆಯರಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಪಿಸಿಓಡಿ ಹೊಂದಿರುವ ಮಹಿಳೆಯರು ಹೆಚ್ಚು ಟೆಸ್ಟೋಸ್ಟೆರಾನ್ ಮಟ್ಟವನ್ನು ಹೊಂದಿದೆ. ಇದರಿಂದಾಗಿ ಕೂದಲು ಉದುರುವಿಕೆಯು ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಪುದಿನಾ ಟೀ ಪಿಸಿಓಡಿ ಕಡಿಮೆ ಮಾಡುವ ಜೊತೆಗೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಇದನ್ನೂ ಓದಿ: ತೂಕ ಇಳಿಸಲು ತಲೆಕೆಡಿಸಿಕೊಳ್ಳಬೇಡಿ ತಿನ್ನಿ ಕಲ್ಲಂಗಡಿ ಹಣ್ಣು

  • ಏನಾಯಿತು ಕಮಲ್ ಹಾಸನ್ ಪುತ್ರಿಗೆ? ಆರೋಗ್ಯ ಸಮಸ್ಯೆ ಹಂಚಿಕೊಂಡ ಶ್ರುತಿ ಹಾಸನ್

    ಏನಾಯಿತು ಕಮಲ್ ಹಾಸನ್ ಪುತ್ರಿಗೆ? ಆರೋಗ್ಯ ಸಮಸ್ಯೆ ಹಂಚಿಕೊಂಡ ಶ್ರುತಿ ಹಾಸನ್

    ಮಿಳಿನ ಖ್ಯಾತ ನಟ ಕಮಲ್ ಹಾಸನ್ ಪುತ್ರಿ, ನಟಿ ಶ್ರುತಿ ಹಾಸನ್ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರಂತೆ. ಈ ಕುರಿತು ಅವರೇ ಸ್ವತಃ ಇನ್ಸ್ಟಾದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದಾರೆ. ಹಲವು ತಿಂಗಳುಗಳಿಂದ ಆ ಸಮಸ್ಯೆಯಿಂದ ಅವರು ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೇ, ಅದಕ್ಕೆ ಟ್ರೀಟ್ ಮೆಂಟ್ ತಗೆದುಕೊಳ್ಳುವುದರ ಜೊತೆಗೆ ನಿತ್ಯ ವ್ಯಾಯಾಮ ಮಾಡುತ್ತಿರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.

    ಈಗಾಗಲೇ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶ್ರುತಿ ಹಾಸನ್, ಒಳ್ಳೆಯ ಗಾಯಕಿ ಕೂಡ. ಈಗ ‍ಪ್ರಭಾಸ್ ಜೊತೆ ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ. ಈ ನಡುವೆಯೇ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಿಚಾರವನ್ನೂ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ತಾವು ಪಿಸಿಓಡಿಯಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ. ಅದರಿಂದ ಆಚೆ ಬರುವುದಕ್ಕೆ ಸಾಕಷ್ಟು ಶ್ರಮ ಪಡುತ್ತಿರುವುದಾಗಿಯೂ ಹೇಳಿದ್ದಾರೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

    ನಾನು ಎಂಡೊಮೆಟ್ರಿಯೋಸಿಸ್ ನೊಂದಿಗೆ ಹಾರ್ಮೋನ್ ಸಮಸ್ಯೆಗಳನ್ನು ಎದುರಿಸುತ್ತಿರುವೆ. ಇದೊಂದು ನೈಸರ್ಗಿಕ ಕ್ರಿಯೆ ಎಂದು ನನಗೆ ಗೊತ್ತಿದ್ದರೂ, ಅದರೊಂದಿಗೆ ಹೋರಾಟ ಮಾಡಲೇಬೇಕಿದೆ. ಶೂಟಿಂಗ್ ನಡುವೆಯೂ ನಿತ್ಯ ವ್ಯಾಯಾಮ ಮಾಡುತ್ತೇನೆ. ಸರಿಯಾದ ಊಟ ಮತ್ತು ವೇಳೆಗೆ ಸರಿಯಾಗಿ ನಿದ್ದೆ ಮಾಡಬೇಕಿದೆ. ಸದಾ ಸಂತೋಷದಿಂದ ಇರುವುದೇ ಇದಕ್ಕೆ ಪರಿಹಾರ ಎಂದು ಹಲವರು ಸೂಚಿಸಿದ್ದಾರೆ. ಹಾಗಾಗಿ ನಾನು ಸದಾ ಲವಲವಿಕೆಯಿಂದ ಇರುವೆ ಎಂದು ಹೇಳಿಕೊಂಡಿದ್ದಾರೆ ಶ್ರುತಿ ಹಾಸನ್.

    Live Tv