Tag: ಪಿವಿ ಸಿಂಧು

  • PV Sindhu Wedding | ಉದ್ಯಮಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪಿ.ವಿ ಸಿಂಧು

    PV Sindhu Wedding | ಉದ್ಯಮಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಪಿ.ವಿ ಸಿಂಧು

    ಜೈಪುರ್‌: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಹಾಗೂ ಒಲಿಂಪಿಕ್ಸ್ ಪದಕ ವಿಜೇತೆ ಪಿವಿ ಸಿಂಧು (P.V Sindhu) ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ರಾಜಸ್ಥಾನದ ಉದಯಪುರದಲ್ಲಿ (Udaipur) ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಉದ್ಯಮಿ ವೆಂಕಟ್ ದತ್ತಾ ಸಾಯಿ ಅವರೊಂದಿಗೆ ಸಿಂಧು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಪಿವಿ ಸಿಂಧು ಮತ್ತು ವೆಂಕಟ್ ಮದುವೆಯ ಮೊದಲ ಫೋಟೋ ಇದೀಗ ವೈರಲ್ ಆಗಿದೆ. ಈ ನವ ಜೋಡಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.

    ಡಿಸೆಂಬರ್ 22 ರಂದೇ ಸಿಂಧು ಮತ್ತು ವೆಂಕಟ್ ಮದುವೆಯಾಗಿದ್ದಾರೆ. ಅವರ ವಿವಾಹ ಸಮಾರಂಭವನ್ನು ಖಾಸಗಿಯಾಗಿ ಇರಿಸಲಾಗಿರುವುದರಿಂದ ಸಿಂಧು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಇನ್ನೂ ಹಂಚಿಕೊಳ್ಳಲಾಗಿಲ್ಲ. ಈ ಮದುವೆಯಲ್ಲಿ ಭಾಗಿಯಾಗಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನವ ಜೋಡಿಯ ಮದುವೆಯ ಫೋಟೋವನ್ನು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದು ನವದಂಪತಿಗಳಿಗೆ ಶುಭಕೋರಿದ್ದಾರೆ. ಈ ಫೋಟೋ ಈಗ ವೈರಲ್‌ ಆಗಿದೆ.

    ಡಿ.14ರಂದು ಇಬ್ಬರ ನಿಶ್ಚಿತಾರ್ಥ ನಡೆದಿತ್ತು. ಇದೀಗ ಆತ್ಮೀಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿರುವ ಈ ಜೋಡಿ ಮಂಗಳವಾರ ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ಆರತಕ್ಷತೆಯನ್ನು ಏರ್ಪಡಿಸಿದೆ.

    ಪಿವಿ ಸಿಂಧು ಪತಿ ಯಾರು?
    ಪಿವಿ ಸಿಂಧು ಅವರ ಪತಿ ವೆಂಕಟ್ ದತ್ತಾ ಸಾಯಿ ಅವರು ಫೌಂಡೇಶನ್ ಆಫ್ ಲಿಬರಲ್ ಮತ್ತು ಮ್ಯಾನೇಜ್‌ಮೆಂಟ್ ಎಜುಕೇಶನ್‌ನಿಂದ ಲಿಬರಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಲ್ಲಿ ಪದವಿ ಪಡೆದಿದ್ದಾರೆ. 2018 ರಲ್ಲಿ, ಅವರು ಫ್ಲೇಮ್ ವಿಶ್ವವಿದ್ಯಾಲಯದಿಂದ ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಬಿಬಿಎ ಮಾಡಿದ್ದರು. ಬೆಂಗಳೂರಿನ ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಷನ್ ಟೆಕ್ನಾಲಜಿಯಿಂದ ಡಾಟಾ ಸೈನ್ಸ್ ಮತ್ತು ಮೆಷಿನ್ ಲರ್ನಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಅವರು ಪೊಸಿಡೆಕ್ಸ್ ಟೆಕ್ನಾಲಜಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.

  • ಪಿವಿ ಸಿಂಧು ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟ ಮೆಗಾಸ್ಟಾರ್ ಫ್ಯಾಮಿಲಿ

    ಪಿವಿ ಸಿಂಧು ಜೊತೆ ಕ್ಯಾಮೆರಾಗೆ ಪೋಸ್ ಕೊಟ್ಟ ಮೆಗಾಸ್ಟಾರ್ ಫ್ಯಾಮಿಲಿ

    ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಕುಟುಂಬ ಪ್ಯಾರಿಸ್‌ನಲ್ಲಿದ್ದಾರೆ. ಪ್ರಸ್ತುತ 2024ನೇ ಸಾಲಿನ ಒಲಿಂಪಿಕ್ಸ್ ನಡೆಯುತ್ತಿದ್ದು ಸದ್ಯ ಭಾಗಿಯಾಗಿರುವ ಪಿವಿ ಸಿಂಧು (PV Sindhu) ಜೊತೆ ಚಿರಂಜೀವಿ ಫ್ಯಾಮಿಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

    ತೆಲುಗು ನಟ ಚಿರಂಜೀವಿ ಕುಟುಂಬ ಸದ್ಯ ಪ್ಯಾರಿಸ್‌ನಲ್ಲಿ (Paris) ವೆಕೇಷನ್ ಮೂಡ್‌ನಲ್ಲಿದ್ದಾರೆ. ಪ್ಯಾರಿಸ್‌ನಲ್ಲಿ ಒಲಂಪಿಕ್ಸ್ ನಡೆಯುತ್ತಿದ್ದು, ಭಾರತವನ್ನು ಪ್ರತಿನಿಧಿಸಿರುವ ಪಿವಿ ಸಿಂಧು ಜೊತೆ ಚಿರಂಜೀವಿ ದಂಪತಿ ಮತ್ತು ರಾಮ್‌ ಚರಣ್‌ ದಂಪತಿ ಕ್ಲಿಕ್ಕಿಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಜೊತೆಗೆ ಸಿಂಧುಗೆ ವಿಶೇಷವಾಗಿ ಚಿರಂಜೀವಿ ಕುಟುಂಬ ಶುಭಕೋರಿದೆ.

    ಅಂದಹಾಗೆ, ಚಿರಂಜೀವಿ ಕುಟುಂಬದವರು ಇಲ್ಲಿಂದ ಉಪ್ಪಿನಕಾಯಿ, ಪುಳಿಯೋಗರೆ, ಉಪ್ಪಿಟ್ಟು, ರಸಂ ಮಿಕ್ಸ್‌ಗಳನ್ನು ಪ್ಯಾರಿಸ್‌ಗೆ ಕೊಂಡೊಯ್ದಿದ್ದಾರೆ. ಅಲ್ಲಿನ ಭಾರತೀಯ ಅದರಲ್ಲೂ ದಕ್ಷಿಣ ಭಾರತದ ಆಟಗಾರರಿಗೆ ಅವುಗಳನ್ನೆಲ್ಲ ಉಚಿತವಾಗಿ ನೀಡಿದ್ದಾರೆ.

  • ಒಂದೇ ಸಮಯದಲ್ಲಿ ಅಪ್ಲೋಡ್‌, ಟ್ಯಾಗ್‌ – ಸಿಂಧು, ನೀರಜ್‌ ಪೋಸ್ಟ್‌ ರಹಸ್ಯ ಬಯಲು

    ಒಂದೇ ಸಮಯದಲ್ಲಿ ಅಪ್ಲೋಡ್‌, ಟ್ಯಾಗ್‌ – ಸಿಂಧು, ನೀರಜ್‌ ಪೋಸ್ಟ್‌ ರಹಸ್ಯ ಬಯಲು

    ನವದೆಹಲಿ: ಬ್ಯಾಡ್ಮಿಂಟನ್‌ ಪಟು ಪಿವಿ ಸಿಂಧು (PV Sindhu) ಮತ್ತು ಜಾವೆಲಿನ್ ತಾರೆ ನೀರಜ್‌ ಚೋಪ್ರಾ (Neeraj Chopra) ಪರಸ್ಪರ ಪ್ರೀತಿಸುತ್ತಿದ್ದಾರಾ ಹೀಗೊಂದು ಪ್ರಶ್ನೆಯನ್ನು ಅಭಿಮಾನಿಗಳು ಈಗ ಕೇಳುತ್ತಿದ್ದಾರೆ.

    ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಬ್ಬರೂ ಒಂದೇ ಸಮಯದಲ್ಲಿ ಅಪ್‌ಲೋಡ್‌ ಮಾಡಿದ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

    ಪೋಸ್ಟ್‌ನಲ್ಲಿ ಏನಿತ್ತು?
    ನೀರಜ್‌ ಚೋಪ್ರಾ ಬ್ಯಾಡ್ಮಿಂಟನ್‌ ರಾಕೆಟ್‌ ಮತ್ತು ಕಾಕ್‌ನ ಫೋಟೋ ಹಂಚಿಕೊಂಡು, ಇದರ ಅರ್ಥ ಏನು ಊಹೆ ಮಾಡುವಿರಾ ಎಂದು ಪ್ರಶ್ನಿಸಿ ಪೋಸ್ಟ್‌ ಅನ್ನು ಪಿವಿ ಸಿಂಧು ಅವರಿಗೆ ಟ್ಯಾಗ್‌ ಮಾಡಿದ್ದರು.

    ಪಿವಿ ಸಿಂಧು ಕೂಡ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜಾವೆಲಿನ್‌ ಫೋಟೋ ಹಂಚಿಕೊಂಡು, ಅರೇ ಇದು ಹೇಗೆ ನನ್ನ ಬಳಿ ಬಂತು? ಊಹೆ ಮಾಡ್ತೀರಾ ಎಂದು ಪ್ರಶ್ನಿಸಿ ನೀರಜ್‌ ಚೋಪ್ರಾ ಅವರಿಗೆ ಅನ್ನು ಟ್ಯಾಗ್‌ ಮಾಡಿದ್ದರು . ಇದನ್ನೂ ಓದಿ: ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಖ್ಯಾತ ಹಾಕಿ ಆಟಗಾರನಿಂದ ಅಪ್ರಾಪ್ತೆಯ ಮೇಲೆ ರೇಪ್‌!

    ಇಬ್ಬರು ಪೋಸ್ಟ್‌ ಹಾಕಿದ್ದು ಯಾಕೆ?
    ಅಭಿಮಾನಿಗಳು ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ಹೇಳಿದರೂ ಈ ತಾರೆಯರು ಕಂಪನಿಯೊಂದರ ಪ್ರಚಾರ ಸಂಬಂಧ ಪೋಸ್ಟ್‌ ಹಾಕಿದ್ದಾರೆ.

    ಒಲಿಂಪಿಕ್ಸ್‌ ಜಾವೆಲಿನ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ ಅವರನ್ನು ಜಾಗತಿಕ ಪೇಮೆಂಟ್‌ ಕಂಪನಿ ವೀಸಾ (Visa) ತನ್ನ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿದೆ. 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಮುನ್ನ ನೀರಜ್‌ ಚೋಪ್ರಾ ಅವರನ್ನು ನೇಮಕ ಮಾಡಿದೆ.

    ಈ ಹಿಂದೆ 2019ರಲ್ಲಿ ಪಿವಿ ಸಿಂಧು ಅವರನ್ನು ವೀಸಾ ಕಂಪನಿ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿತ್ತು. ಈಗ ವೀಸಾ ಕಂಪನಿಯ ಪ್ರಚಾರ ರಾಯಭಾರಿಯಾಗಿ ಆಯ್ಕೆಯಾದ ಎರಡನೇ ಭಾರತೀಯ ಕ್ರೀಡಾಪಟು ನೀರಾಜ್‌ ಚೋಪ್ರಾ ಆಗಿದ್ದಾರೆ. ಇಬ್ಬರು ವೀಸಾ ಕಂಪನಿಯ ರಾಯಭಾರಿಯಾಗಿದ್ದಕ್ಕೆ ನೀರಜ್‌ ಜೋಪ್ರಾ ಬ್ಯಾಡ್ಮಿಂಟನ್‌ ರಾಕೆಟ್‌ ಫೋಟೋ ಹಂಚಿಕೊಂಡಿದ್ದರೆ ಸಿಂಧು ಜಾವೆಲಿನ್‌ ಫೋಟೋ ಅಪ್ಲೋಡ್‌ ಮಾಡಿದ್ದರು. ನಂತರ ಇವರಿಬ್ಬರು ಈ ಪೋಸ್ಟ್‌ ಡಿಲೀಟ್‌ ಮಾಡಿದ್ದಾರೆ.

  • ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ – ಪಿವಿ ಸಿಂಧುಗೆ ಚಿನ್ನ

    ಕಾಮನ್‌ವೆಲ್ತ್‌ನಲ್ಲಿ ಹ್ಯಾಟ್ರಿಕ್‌ ಸಾಧನೆ – ಪಿವಿ ಸಿಂಧುಗೆ ಚಿನ್ನ

    ಬರ್ಮಿಂಗ್‌ಹ್ಯಾಮ್‌: ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿ.ವಿ. ಸಿಂಧು ಕಾಮನ್‌ವೆಲ್ತ್‌ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

    ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಸೆಟ್‌ಗಳಿಂದ ಪಂದ್ಯವನ್ನು ಗೆದ್ದು ಸತತ ಮೂರು ಕಾಮನ್‌ವೆಲ್ತ್‌ ಕ್ರೀಡೆಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

    ಈ ಹಿಂದೆ 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಕಂಚು, 2018 ರಲ್ಲಿ ಸೈನಾ ನೆಹ್ವಾಲ್‌ ವಿರುದ್ಧ ಸೋತು ಬೆಳ್ಳಿ ಗೆದ್ದಿದ್ದ ಸಿಂಧು ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿವ ಮೂಲಕ ಕನಸು ನನಸು ಮಾಡಿದ್ದಾರೆ.

    19 ಚಿನ್ನ, 15 ಬೆಳ್ಳಿ, 22 ಕಂಚಿನ ಪದಕ ಗೆದ್ದಿರುವ ಭಾರತ ಈಗ ಪದಕ ಪಟ್ಟಿಯಲ್ಲಿ ನಾಲ್ಕನೇಯ ಸ್ಥಾನಕ್ಕೆ ಜಿಗಿದಿದೆ.

    Live Tv
    [brid partner=56869869 player=32851 video=960834 autoplay=true]

  • Thailand Open – ನಂ.1 ಆಟಗಾರ್ತಿ ಯಮಗುಚಿಯನ್ನು ಸೋಲಿಸಿ ಸೆಮಿಗೆ ಸಿಂಧು ಎಂಟ್ರಿ

    Thailand Open – ನಂ.1 ಆಟಗಾರ್ತಿ ಯಮಗುಚಿಯನ್ನು ಸೋಲಿಸಿ ಸೆಮಿಗೆ ಸಿಂಧು ಎಂಟ್ರಿ

    ಬ್ಯಾಂಕಾಕ್: ಥೈಲ್ಯಾಂಡ್ ಓಪನ್ 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ವಿಶ್ವ ನಂ.1 ಬ್ಯಾಡ್ಮಿಂಟನ್ ಆಟಗಾರ್ತಿ ಅಕಾನೆ ಯಮಗುಚಿಯನ್ನು ಕ್ವಾರ್ಟರ್ ಫೈನಲ್‍ನಲ್ಲಿ ಸೋಲಿಸಿ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ ಸಿಂಧು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದ್ದಾರೆ.

    ಬ್ಯಾಂಕಾಕ್‍ನಲ್ಲಿ ನಡೆಯುತ್ತಿರುವ ಟೂರ್ನಿಯ ಕ್ವಾಟರ್ ಫೈನಲ್ ಪಂದ್ಯ ಬಾರಿ ರೋಚಕವಾಗಿ ಕೂಡಿತ್ತು. 51 ನಿಮಿಷಗಳ ವರೆಗಿನ ಹೋರಾಟದಲ್ಲಿ ಕೊನೆಗೆ ಪಿ.ವಿ ಸಿಂಧು 21-15, 20-22, 21-13 ಸೆಟ್‍ಗಳಿಂದ ಜಪಾನಿನ ಸ್ಟಾರ್ ಆಟಗಾರ್ತಿಯ ವಿರುದ್ಧ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್‍ನಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿರುವುದು ಹೆಮ್ಮೆ ಎನಿಸಿತು: ನಿಖತ್ ಜರೀನ್

    ಈ ವರ್ಷದ ಆರಂಭದಲ್ಲಿ ಯಮಗುಚಿ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‍ಶಿಪ್ ಟೂರ್ನಿಯಲ್ಲಿ ಸಿಂಧುರನ್ನು ಸೋಲಿಸಿದ್ದರು. ಆ ಬಳಿಕ ಥೈಲ್ಯಾಂಡ್ ಓಪನ್ 2022 ಬಾಡ್ಮಿಂಟನ್ ಟೂರ್ನಿಯಲ್ಲಿ ಎದುರುಬದುರಾದ ಇಬ್ಬರು ಆಟಗಾರ್ತಿಯರ ಮಧ್ಯೆ ತೀವ್ರ ಪೈಪೋಟಿ ಎದುರಾಯಿತು. ಆದರೆ ಅಂತಿಮ ಸೆಟ್‍ನಲ್ಲಿ ಯಮಗುಚಿ ಗಾಯಗೊಂಡು ಮೈದಾನ ತೊರೆದರು. ಈ ಮೂಲಕ ಸಿಂಧು ಸೆಮಿಫೈನಲ್‍ಗೆ ಲಗ್ಗೆ ಇಟ್ಟರು. ಇದನ್ನೂ ಓದಿ: ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್ – ಚಿನ್ನದ ಪದಕ ಗೆದ್ದ ಭಾರತದ ಬಾಕ್ಸರ್ ನಿಖತ್ ಜರೀನ್

    ಸೆಮಿಫೈನಲ್‍ನಲ್ಲಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಚೆನ್ ಯುಫೀನ್ ವಿರುದ್ಧ ಸಿಂಧು ಸೆಣಸಾಡಲಿದ್ದಾರೆ.

  • ಅಂಪೈರ್‌ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು

    ಅಂಪೈರ್‌ ವಿರುದ್ಧ ಕೋರ್ಟ್‌ನಲ್ಲೇ ಆಕ್ರೋಶ – ಅನ್ಯಾಯದಿಂದ ಸೋತೆ ಎಂದ ಸಿಂಧು

    ಮನಿಲಾ: ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತೆ ಪಿವಿ ಸಿಂಧು ಅಂಪೈರ್‌ ವಿರುದ್ಧ ಬ್ಯಾಡ್ಮಿಂಟನ್‌ ಕೋರ್ಟ್‌ನಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಫಿಲಿಪ್ಪೀನ್ಸ್‌ನಲ್ಲಿ ನಡೆದ ಬ್ಯಾಡ್ಮಿಂಟನ್‌ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್‌ನ ಸೆಮಿಫೈನಲ್‌ ಪಂದ್ಯದಲ್ಲಿ ಸಿಂಧು ಜಪಾನಿನ ಯಮಗುಚಿ ವಿರುದ್ಧ 21-13, 19-21, 16-21 ಸೆಟ್‌ನಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿ ಪಡೆದಿದ್ದಾರೆ.

    ಎರಡನೇ ಗೇಮ್‌ ವೇಳೆ ಸಿಂಧು 14-12 ರಲ್ಲಿ ಮುಂದಿದ್ದಾಗ ಸರ್ವ್‌ ಮಾಡಲು ಬಹಳ ಸಮಯ ತೆಗೆಯುತ್ತಿದ್ದಾರೆಂದು ಎದುರಾಳಿ ಆಟಗಾರ್ತಿಗೆ ಅಂಪೈರ್‌ 1 ಪೆನಾಲ್ಟಿ ಅಂಕವನ್ನು ನೀಡಿದ್ದರು. ಈ ವೇಳೆ ಸಿಂಧು ಈ ರೀತಿ ಅಂಕ ನೀಡುವುದು ಎಷ್ಟು ಸರಿ ಎಂದು ಮೈದಾನದಲ್ಲೇ ಪ್ರಶ್ನೆ ಮಾಡಿ ಸಿಟ್ಟು ಹೊರ ಹಾಕಿದ್ದರು.

    ಪಂದ್ಯದ ಬಳಿಕ ಮಾತನಾಡಿದ ಸಿಂಧು, ಸರ್ವ್‌ ಮಾಡಲು ತಡ ಮಾಡುತ್ತಿದ್ದೇನೆ ಎಂದು ಹೇಳಿ ಅಂಪೈರ್‌ ಎದುರಾಳಿ ಆಟಗಾರ್ತಿಗೆ ಪೆನಾಲ್ಟಿ ಅಂಕ ನೀಡಿದರು. ಆದರೆ ನಾನು ಸರ್ವ್‌ ಮಾಡುವ ಸಮಯದಲ್ಲಿ ಆಟಗಾರ್ತಿ ಸಿದ್ಧವಾಗಿರಲಿಲ್ಲ. ಆದರೆ ಅಂಪೈರ್‌ ದಿಢೀರ್‌ ಅಂಕವನ್ನು ನೀಡಿದ್ದು ಸರಿಯಲ್ಲ. ಇದರಿಂದಾಗಿ ನನ್ನ ಆತ್ಮವಿಶ್ವಾಸ ಕುಗ್ಗಿತು. ಅಂಪೈರ್‌ ನಿರ್ಧಾರದಿಂದ ನಾನು ಸೋತಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಡೇಜಾ CSK ನಾಯಕತ್ವ ತ್ಯಜಿಸಲು ಪ್ರಮುಖ ಕಾರಣವಿದು!

    ಅಂಪೈರ್‌ ಪನಾಲ್ಟಿ ನೀಡುವ ಸಮಯದಲ್ಲಿ ನಾನು ಮುಂದಿದ್ದೆ. ಈ ರೀತಿ ಅಂಕ ನೀಡಿದ್ದು ಅನ್ಯಾಯ. ಪಂದ್ಯದ ರೆಫ್ರಿ ಜೊತೆ ನಾನು ಮಾತನಾಡಿದೆ. ಆದರೆ ರೆಫ್ರಿ ಈಗಾಗಲೇ ಅಂಕ ನೀಡಲಾಗಿದೆ ಏನು ಮಾಡಲು ಆಗುವುದಿಲ್ಲ ಎಂದು ತಿಳಿಸಿದರು. ರಿಪ್ಲೈ ನೋಡುವಾಗ ಅವರಿಗೆ ಈ ತಪ್ಪು ಅರ್ಥವಾಗಬಹುದು. ಅಂಪೈರ್‌ ಈ ರೀತಿ ಅಂಕ ನೀಡದೇ ಇದ್ದಲ್ಲಿ ನಾನು ಪಂದ್ಯವನ್ನು ಗೆದ್ದು ಫೈನಲ್‌ ತಲುಪುತ್ತಿದ್ದೆ ಎಂದು ತಿಳಿಸಿದರು.

    ಸಿಂಧು ತಂದೆ ರಮಣ ಮಾತನಾಡಿ, ಈ ಟೂರ್ನಿಯಲ್ಲಿ ಸಿಂಧು ಚಿನ್ನ ಗೆಲ್ಲುವ ವಿಶ್ವಾಸದಲ್ಲಿದ್ದಳು. ಆಂಪೈರ್‌ ಯಾವುದೇ ಎಚ್ಚರಿಕೆ ನೀಡದೇ ಪೆನಾಲ್ಟಿ ನೀಡಿದ್ದು ತಪ್ಪು. ಮಗಳ ಜೊತೆ ಮಾತನಾಡುವಾಗ ಆಕೆ ಕಣ್ಣೀರಿಟ್ಟಳು ಎಂದು ಹೇಳಿದರು.

    ಅಂಪೈರ್‌ ವಿರುದ್ಧ ಸಿಟ್ಟು ಹೊರ ಹಾಕಿದ್ದ ಸಿಂಧು ಪಂದ್ಯದ ಬಳಿಕ ನಡೆದ ಪದಕ ವಿತರಣೆ ಕಾರ್ಯಕ್ರಮಕ್ಕೂ ಗೈರಾಗಿದ್ದರು.

  • ಧೋನಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಉತ್ತಮ ವಾಲಿಬಾಲ್ ಆಟಗಾರರು: ಅಶ್ವಲ್ ರೈ

    ಧೋನಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಉತ್ತಮ ವಾಲಿಬಾಲ್ ಆಟಗಾರರು: ಅಶ್ವಲ್ ರೈ

    ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾದ ಮಾಜಿ ನಾಯಕ ಎಂಎಸ್ ಧೋನಿ, ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಕ್ರಿಕೆಟ್ ಜೊತೆ ಉತ್ತಮ ವಾಲಿಬಾಲ್ ಆಟಗಾರರಾಗಿದ್ದಾರೆ ಎಂದು ಕೋಲ್ಕತ್ತಾ ಥಂಡರ್ಬೋಲ್ಟ್ಸ್ ನಾಯಕ ಅಶ್ವಲ್ ರೈ ಅಭಿಪ್ರಾಯಪಟ್ಟಿದ್ದಾರೆ.

    ಮುಂಬರುವ (ಪಿವಿಎಲ್) ಪ್ರೈಮ್ ವಾಲಿಬಾಲ್ ಲೀಗ್‍ನ ಪಂದ್ಯಾವಳಿಯ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲ್ಕತ್ತಾ ಥಂಡರ್ಬೋಲ್ಟ್ಸ್ (ಪಿವಿಎಲ್) ವಾಲಿಬಾಲ್ ಲೀಗ್ ಅಭಿಯಾನವನ್ನು ಮುಂದಿನ ವಾರ ಸೋಮವಾರದಿಂದ ಪ್ರಾರಂಭಿಸಲಿದೆ.

    ಧೋನಿ ಮತ್ತು ಪಾಂಡ್ಯ ಪಾಸಿಂಗ್‍ನಲ್ಲಿ ಉತ್ತಮವಾಗಿ ಕಾಣುತ್ತಾರೆ. ರಾಹುಲ್ ಉತ್ತಮ ಹೊಡೆತಗಾರನಾಗಿ ಕಾಣಿಸುತ್ತಾರೆ. ನಾನು ಈ ಹಿಂದೆ ಅವರು ದುಬೈನ ಬೀಚ್‍ವೊಂದರಲ್ಲಿ ವಾಲಿಬಾಲ್ ಆಡುವ ವೀಡಿಯೋವನ್ನು ನಾನು ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇನೆ. ಅವರೊಂದಿಗೆ ವಾಲಿಬಾಲ್ ಆಡುವ ಅವಕಾಶ ನಮಗೆ ಸಿಕ್ಕರೆ ಅದು ನಮ್ಮ ಅದೃಷ್ಟ ನಾನು ಇದಕ್ಕಾಗಿ ಕಾತರನಾಗಿದ್ದೇನೆ ಎಂದರು. ಇದನ್ನೂ ಓದಿ: ಐಪಿಎಲ್ ಹರಾಜಿನ ಅಂತಿಮ ಪಟ್ಟಿಯಲ್ಲಿ ಕಾಣಿಸಿಕೊಂಡ ಪಶ್ಚಿಮ ಬಂಗಾಳದ ಕ್ರೀಡಾ ಸಚಿವ

    ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧುರವರು ವಾಲಿಬಾಲ್ ಲೀಗ್‍ನ್ನು ಪ್ರಚಾರ ಮಾಡುತ್ತಿದ್ದು, ಅವರು ನಮ್ಮನ್ನು ಮೈದಾನದಲ್ಲಿ ಭೇಟಿಯಾಗಿ ಎಲ್ಲರೊಂದಿಗೆ ಮಾತನಾಡಿದರು. ವಾಲಿಬಾಲ್ ಆಟಕ್ಕೆ ಉತ್ತಮ ಗುಣಮಟ್ಟ ಮತ್ತು ಸರಿಯಾದ ರೀತಿಯ ಪ್ರಚಾರವನ್ನು ನೀಡಿದರೆ ಅದು ಕ್ರಿಕೆಟ್ ಮಟ್ಟಕ್ಕೆ ಬರಬಹುದು ಎಂದರು. ಇದನ್ನೂ ಓದಿ: U -19 World Cup 2022: 96 ರನ್‌ಗಳ ಭರ್ಜರಿ ಜಯ, ಫೈನಲಿಗೆ ಭಾರತ

    ಎಲ್ಲಾ ಆಟಗಾರರಿಗೆ, ಅವರ ಕ್ರೀಡಾ ಕೌಶಲ್ಯ ಮತ್ತು ಪ್ರದರ್ಶನವನ್ನು ತೋರಿಸಲು ಇದು ಸರಿಯಾದ ವೇದಿಕೆಯಾಗಿದೆ. ಮೊದಲು, ನನಗೆ ಕ್ರೀಡೆಯ ಬಗ್ಗೆ ಅಷ್ಟೊಂದು ಆಸಕ್ತಿ ಇರಲಿಲ್ಲ. ನಂತರ ನಾನು ಕ್ರಿಕೆಟ್ ಮತ್ತು ಫುಟ್‍ಬಾಲ್ ಅನ್ನು ಅನುಸರಿಸಲು ಪ್ರಾರಂಭಿಸಿದೆ. ನಾನು ಪ್ರತಿ ಬಾರಿ ಆಟದ ಮೈದಾನಕ್ಕೆ ಇಳಿದ ಬಳಿಕ ಶ್ರೇಷ್ಠ ಮಟ್ಟದ ಆಟವನ್ನು ಆಡಲು ಶ್ರಮಿಸುತ್ತೇನೆ ಎಂದರು.

    ಫೆಬ್ರವರಿ 5 ರಂದು ಪ್ರೈಮ್ ವಾಲಿಬಾಲ್ ಲೀಗ್‍ಗೆ ಚಾಲನೆ ದೊರೆಯಲಿದ್ದು, ಪಂದ್ಯಾವಳಿಯು ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಬಲಿಷ್ಠ ಕೊಚ್ಚಿ ಬ್ಲೂ ಸ್ಪೈಕರ್ಸ್ ವಿರುದ್ಧ ಹೈದರಾಬಾದ್ ಬ್ಲಾಕ್ ಹಾಕ್ಸ್ ತಂಡವನ್ನು ಎದುರಿಸಲಿದೆ. ಸ್ಪರ್ಧೆಯ ಫೈನಲ್ ಫೆಬ್ರವರಿ 27 ರಂದು ನಡೆಯಲಿದೆ.

    ಪಂದ್ಯಾವಳಿಯು 23 ದಿನಗಳ ವರೆಗೆ ನಡೆಯಲಿದ್ದು, ಒಟ್ಟು 24 ಪಂದ್ಯಗಳು ಟೂರ್ನಿಯಲ್ಲಿ ಕಾಣಸಿಗಲಿದೆ. ಏಳು ಫ್ರಾಂಚೈಸಿಗಳಾದ- ಕ್ಯಾಲಿಕಟ್ ಹೀರೋಸ್, ಕೊಚ್ಚಿ ಬ್ಲೂ ಸ್ಪೈಕರ್ಸ್, ಅಹಮದಾಬಾದ್ ಡಿಫೆಂಡರ್ಸ್, ಹೈದರಾಬಾದ್ ಬ್ಲಾಕ್ ಹಾಕ್ಸ್, ಚೆನ್ನೈ ಬ್ಲಿಟ್ಜ್, ಬೆಂಗಳೂರು ಟಾರ್ಪಿಡೋಸ್ ಮತ್ತು ಕೋಲ್ಕತ್ತಾ ಥಂಡರ್ಬೋಲ್ಟ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

  • ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ

    ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ ದೀಪಿಕಾ ಪಡುಕೋಣೆ

    ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಎರಡು ಬಾರಿ ಒಲಿಂಪಿಕ್ಸ್ ಪದಕ ತನ್ನದಾಗಿಸಿಕೊಂಡಿರುವ ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿದ್ದಾರೆ.

    ಒಲಂಪಿಕ್ಸ್ ವಿಜೇತೆ ಪಿವಿ ಸಿಂಧು ಜೊತೆ ಬ್ಯಾಡ್ಮಿಂಟನ್ ಆಡಿ ದೀಪಿಕಾ ಗಮನ ಸೆಳೆದಿದ್ದಾರೆ. ಅಲ್ಲದೆ ಈ ಫೋಟೋಗಳನ್ನು ನಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕ್ಯಾಲರಿ ಬರ್ನ್ ಆಗಿ ಮುಖದಲ್ಲಿ ಬೆವರಿಳಿದಿದೆ. ಇದರಿಂದ ಮುಖದ ಕಾಂತಿ ಹೆಚ್ಚಿದೆ ಎಂದು ನಟಿ ದೀಪಿಕಾ ಬರೆದುಕೊಂಡಿದ್ದರು. ಪಿವಿ ಸಿಂಧು ಕಾಮೆಂಟ್ ಮಾಡಿ ಎಷ್ಟು ಕ್ಯಾಲರಿ ಬರ್ನ್ ಆಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:  ಅರಣ್ಯಕ್ಕೆ ಬಿಟ್ಟು ಬಂದರೂ ಗೊಬ್ಬರದ ಲಾರಿ ಏರಿ ಮತ್ತೆ ಪೇಟೆಗೆ ಬಂದ ಕೋತಿ

     

    View this post on Instagram

     

    A post shared by Deepika Padukone (@deepikapadukone)

    ಈ ವಿಶೇಷ ಪಂದ್ಯಕ್ಕಾಗಿ ದೀಪಿಕಾ ಕಪ್ಪು ಧಿರಿಸು ಧರಿಸಿದ್ದರು. ಸಿಂಧೂ ಕೂಡ ಅದೇ ರೀತಿಯ ಬಟ್ಟೆ ಧರಿಸಿದ್ದು ವಿಶೇಷವಾಗಿತ್ತು. ಸಿಂಧು ನೇರಳೆ ಮತ್ತು ಗುಲಾಬಿ ಬಣ್ಣಗಳ ಟಾಪ್ ಧರಿಸಿದ್ದರು. ಇಬ್ಬರು ಬೆವರಿಳಿಸುವಂತೆ ಆಟವಾಡಿದ್ದು, ಈ ಆಟದಲ್ಲಿ ಯಾರಿಗೆ ಗೆಲುವು ಆಯಿತು ಎಂಬುದನ್ನು ಮಾತ್ರ ತಿಳಿಸಿಲ್ಲ. ಆದರೆ ನಟಿ ದೀಪಿಕಾ ಈ ಆಟದಿಂದ ತಮ್ಮ ಮುಖದ ಕಾಂತಿ ಹೆಚ್ಚಿತು ಎಂದಿದ್ದಾರೆ.

     

    View this post on Instagram

     

    A post shared by Deepika Padukone (@deepikapadukone)

    ನಟಿ ದೀಪಿಕಾ ಇತ್ತೀಚಿನ ದಿನಗಳಲ್ಲಿ ಒಲಿಂಪಿಕ್ಸ್ ವಿಜೇತೆ ಪಿವಿ ಸಿಂಧು ಅವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಸಿಂಧುಗಾಗಿ ವಿಶೇಷ ಔತಣ ಕೂಟವನ್ನು ಮುಂಬೈನ ರೆಸ್ಟೋರೆಂಟ್‍ನಲ್ಲಿ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಆಯೋಜಿಸಿದ್ದರು. ನಟಿ ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ ಕೂಡ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದರು. ನಟಿ ದೀಪಿಕಾ ಕೂಡ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಟುವಾಗಿದ್ದರು. ನಟಿ ದೀಪಿಕಾ ಕೂಡ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಟುವಾಗಿದ್ದರು. ಇದೀಗ ಪಿವಿ ಸಿಂಧು ಜೊತೆಗೆ ಮೈದಾನಲ್ಲಿ ಕಾಣಿಸಿಕೊಂಡಿರುವುದು ಸಖತ್ ಸುದ್ದಿಯಲ್ಲಿದೆ.

  • ಮಿಥಾಲಿ ರಾಜ್ ಇತರ ಕ್ರಿಕೆಟಿಗರಿಗೆ ಸ್ಫೂರ್ತಿ – ನರೇಂದ್ರ ಮೋದಿ

    ಮಿಥಾಲಿ ರಾಜ್ ಇತರ ಕ್ರಿಕೆಟಿಗರಿಗೆ ಸ್ಫೂರ್ತಿ – ನರೇಂದ್ರ ಮೋದಿ

    ನವದೆಹಲಿ: ಭಾರತ ಮಹಿಳಾ ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಇತರ ಕ್ರಿಕೆಟ್ ಆಟಗಾರಿಗೆ ಸ್ಫೂರ್ತಿಯಾಗಿದ್ದಾರೆ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮಿಥಾಲಿ ರಾಜ್ ಕೆಲದಿನಗಳ ಹಿಂದೆ ಮಹಿಳಾ ಕ್ರಿಕೆಟ್ ನಲ್ಲಿ 10 ಸಾವಿರ ರನ್ ಪೂರೈಸಿದ್ದರು. ಈ ಮೂಲಕ 10 ಸಾವಿರ ರನ್ ಪೇರಿಸಿದ ವಿಶ್ವದ ಮೊದಲ  ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    ಮೋದಿ ತಮ್ಮ 75ನೇ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತೀಯ ಮಹಿಳಾ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ 10 ಸಾವಿರ ರನ್ ಪೂರೈಸಿದ ಶ್ವದ ಮೊದಲ  ಮಹಿಳಾ ಆಟಗಾರ್ತಿಯಾಗಿದ್ದಾರೆ, ಅವರಿಗೆ ಮೊದಲು ಅಭಿನಂದನೆ ತಿಳಿಸುತ್ತೇನೆ. ಮಿಥಾಲಿ 10,000 ರನ್ ಸಾಧನೆಯೊಂದಿಗೆ ಏಕದಿನ ಕ್ರಿಕೆಟ್‍ನಲ್ಲಿ 7,000 ರನ್ ಸಿಡಿಸಿದ ಮೊದಲ ಮಹಿಳಾ ಆಟಗಾರ್ತಿಯಾಗಿ ವಿಶ್ವದಾಖಲೆ ನಿರ್ಮಿಸಿದ್ದರು. ಭಾರತೀಯ ಮಹಿಳಾ ಕ್ರಿಕೆಟ್‍ಗೆ ಇವರ ಸಾಧನೆ ಮೆಚ್ಚುವಂತದ್ದು ಎಂಬುದಾಗಿ ಮೋದಿ ಶ್ಲಾಘಿಸಿದ್ದಾರೆ.

    ಮಿಥಾಲಿಯವರ ಎರಡು ದಶಕಗಳ ಕ್ರಿಕೆಟ್ ಜೀವನ ಹಲವರಿಗೆ ಸ್ಫೂರ್ತಿದಾಯಕವಾಗಿದ್ದು, ಅವರ ಕಠಿಣ ಪರಿಶ್ರಮ ಮತ್ತು ಯಶಸ್ಸಿನ ಕಥೆ ಮಹಿಳೆಯರಿಗೆ ಮಾತ್ರವಲ್ಲದೇ ಪುರುಷ ಕ್ರಿಕೆಟಿಗರಿಗು ಸ್ಫೂರ್ತಿಯಾಗಿದ್ದಾರೆ ಎಂದರು.

    ಮೋದಿ ಮಿಥಾಲಿ ಸಾಧನೆಯೊಂದಿಗೆ ಭಾರತದಲ್ಲಿ ನಡೆಯುತ್ತಿರುವ ಐಎಸ್‍ಎಸ್‍ಎಫ್ ಶೂಟಿಂಗ್ ವಿಶ್ವಕಪ್‍ನಲ್ಲಿ ಪದಕ ಜಯಿಸಿರುವ ಶೂಟರ್ ಗಳಿಗೆ  ಅಭಿನಂದನೆ ಸಲ್ಲಿಸಿದ್ದಾರೆ. ಈಗಾಗಲೇ ಶೂಟಿಂಗ್ ವಿಶ್ವಕಪ್‍ನಲ್ಲಿ ಭಾರತದ ಸ್ಪರ್ಧಿಗಳು 13 ಚಿನ್ನದ ಪದಕದೊಂದಿಗೆ ಒಟ್ಟು 28 ಪದಕವನ್ನು ಭಾರತದ ಮುಕುಟಕ್ಕೆ ತೊಡಿಸಿದ್ದಾರೆ.

    ಒಂದು ತಿಂಗಳ ಹಿಂದೆ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪಿವಿ ಸಿಂಧು ರನ್ನರ್ ಅಪ್ ಆಗಿದ್ದರು ಅವರನ್ನು ಕೂಡ ಮೋದಿ ಸ್ಮರಿಸಿಕೊಂಡಿದ್ದಾರೆ. ಇದರೊಂದಿಗೆ ಈ ವರ್ಷ ಮಾರ್ಚ್‍ನಲ್ಲಿ ನಡೆದ ಮಹಿಳಾ ದಿನಾಚರಣೆಯನ್ನು ಈ ಎಲ್ಲಾ ಸಾಧನೆಗಳಿಂದ ಮಹಿಳಾ ಆಟಗಾರ್ತಿಯರು ಇನ್ನಷ್ಟು ಸಂಭ್ರಮಿಸುವಂತೆ ಮಾಡಿದ್ದಾರೆ ಎಂದು ಮೋದಿ ನುಡಿದರು.

  • ‘ಐ ರಿಟೈರ್’ ಬರೆದು ನಿವೃತ್ತಿಗೆ ಟ್ವಿಸ್ಟ್ ಕೊಟ್ಟ ಸಿಂಧು

    ‘ಐ ರಿಟೈರ್’ ಬರೆದು ನಿವೃತ್ತಿಗೆ ಟ್ವಿಸ್ಟ್ ಕೊಟ್ಟ ಸಿಂಧು

    ನವದೆಹಲಿ: ಭಾರತದ ಹೆಮ್ಮೆಯ ಬ್ಯಾಡ್ಮಿಂಟನ್ ಆಟಗಾರ್ತಿ, ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ.ಸಿಂಧು ಅವರ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ವೈರಲ್ ಆಗಿದ್ದು, ಇದನ್ನು ನೋಡಿದ ಬಹುತೇಕರು ಆಘಾತಕ್ಕೊಳಗಾಗಿದ್ದಾರೆ. ಆದರೆ ಈ ಬಗ್ಗೆ ಕೊನೆಗೆ ಸಿಂಧು ಸ್ಪಷ್ಟಪಡಿಸಿದ್ದಾರೆ.

    ನಿವೃತ್ತಿಯ ಪೋಸ್ಟ್ ಬಗ್ಗೆ ಟ್ವೀಟ್ ಮಾಡಿರುವ ಪಿ.ವಿ.ಸಿಂಧು, ಐ ರಿಟೈರ್ ಎಂದು ದೊಡ್ಡ ಅಕ್ಷರದಲ್ಲಿ ಬರೆದಿದ್ದಾರೆ. ಇದಕ್ಕೆ ಮತ್ತೆ ಸ್ಪಷ್ಟನೆ ನೀಡಿದ್ದಾರೆ. ಆದರೆ ಆರಂಭದಲ್ಲಿ ಈ ಪೋಸ್ಟ್ ನೋಡಿದವರಿಗೆ ಶಾಕ್ ಆಗಿದೆ.

    ಡೆನ್ಮಾರ್ಕ್ ಓಪನ್ ವಾಸ್ ಫೈನಲ್ ಸ್ಟ್ರಾ, ಐ ರಿಟೈರ್ ಎಂದು ಮೊದಲ ಪುಟದಲ್ಲಿ ಬರೆದಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಗೊಂದಲಕ್ಕೆ ತಳ್ಳಿದ್ದಾರೆ. ಆರಂಭದಲ್ಲಿ ಕುತೂಹಲ ಕೆರಳಿಸುವಂತೆ ಪತ್ರ ಬರೆಯಲಾಗಿದ್ದು, ಅವರ ಅಭಿಮಾನಿಗಳು ಸಹ ಅಷ್ಟೇ ಕುತೂಹಲವಾಗಿ ಒದಿದ್ದಾರೆ. ಆರಂಭದಲ್ಲಿ ಹಾಗೇ ಅನಿಸಿದರೂ, ಪಿವಿ ಸಿಂಧು ಪತ್ರದ ಕೊನೆಗೆ ಯಾವುದಕ್ಕೆ ವಿದಾಯ ಹೇಳಿರುವುದು ಎಂದು ಸ್ಪಷ್ಟಪಡಿಸಿದ್ದಾರೆ.

    ಭಾವನೆಗಳನ್ನು ಸ್ವಚ್ಛಗೊಳಿಸಿ ಆಗಮಿಸುವ ಬಗ್ಗೆ ಯೋಚಿಸುತ್ತಿದ್ದೇನೆ. ಇದರೊಂದಿಗೆ ನಾನು ಹೋರಾಟ ನಡೆಸುತ್ತಿದ್ದೇನೆ. ಇದು ನನಗೆ ತಪ್ಪು ಅನ್ನಿಸುತ್ತಿದೆ. ನಿಮಗೆ ಗೊತ್ತಾ, ಹೀಗಾಗಿಯೇ ನಾನು ಇಂದು ಈ ಬರವಣಿಗೆ ಮೂಲಕ ನಿಮಗೆ ತಿಳಿಸುತ್ತಿದ್ದೇನೆ. ಇದರಿಂದ ಆಘಾತವಾಗಿದೆ, ವಿಚಲಿತರಾಗಿದ್ದೀರಿ ಎಂಬುದು ತಿಳಿದಿದೆ. ಆದರೆ ನೀವು ಓದುವುದನ್ನು ಮುಗಿಸುವಷ್ಟರಲ್ಲಿ ನನ್ನ ಅನಿಸಿಕೆ ಏನು ಎಂಬುದು ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ಇದಕ್ಕೆ ನೀವೂ ಬೆಂಬಲ ಸೂಚಿಸುತ್ತೀರಿ ಎಂಬ ಭರವಸೆ ನನಗಿದೆ ಎಂದು 25 ವರ್ಷದ ಆಟಗಾರ್ತಿ ಪತ್ರದಲ್ಲಿ ತಿಳಿಸಿದ್ದಾರೆ.

    ಕೊರೊನಾ ಮಹಾಮಾರಿ ನನ್ನ ಕಣ್ಣು ತೆರೆಸಿದೆ. ನನ್ನ ವಿರುದ್ಧದ ಕಠಿಣ ಸ್ಪರ್ಧಾಳುಗಳ ವಿರುದ್ಧ ಹೋರಾಡುವುದಕ್ಕೆ ನಾನು ತಯಾರಾಗಿದ್ದೇನೆ. ಹಲ್ಲು ಹಾಗೂ ಉಗುರಿನಿಂದ ಹಿಡಿದು ಆಟದ ಕೊನೆಯ ಶಾಟ್ ಎದುರಿಸುವ ಬಗೆಯನ್ನು ಅರಿತಿದಿದ್ದೇನೆ. ಈ ಹಿಂದೆಯೂ ನಾನು ಇದನ್ನು ಮಾಡಿದ್ದೇನೆ, ಮತ್ತೆ ಮಾಡುತ್ತೇನೆ. ಆದರೆ ಕಣ್ಣಿಗೆ ಕಾಣದ ವೈರಸ್ ವಿರುದ್ಧ ಹೇಗೆ ಹೋರಾಡುವುದು? ಇಡೀ ಜಗತ್ತು ಇದನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

    ಈ ವೈರಸ್‍ನಿಂದಾಗಿ ತಿಂಗಳುಗಟ್ಟಲೇ ಮನೆಯಲ್ಲೇ ಇರಬೇಕಾಯಿತು. ಈಗಲೂ ನಾವು ಹೊರಗೆ ಕಾಲಿಡಬೇಕೆಂದರೆ ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕು. ಮನಕಲಕುವ ಹಲವು ಕಥೆಗಳನ್ನು ಕೇಳಿದಾಗ, ನೋಡಿದಾಗ ನನಗೆ ನಾನೇ ಪ್ರಶ್ನಿಸಿಕೊಳ್ಳುವಂತಾಗಿದೆ. ಈ ಜಗತ್ತಿನಲ್ಲಾ ನಾವಿರುವುದು ಎಂಬ ಪ್ರಶ್ನೆ ಕಾಡುತ್ತಿದೆ. ನಾನು ಪ್ರತಿನಿಧಿಸುತ್ತಿರುವ ಡೆನ್ಮಾರ್ಕ್ ಓಪನ್ ಕೊನೆಯ ಪಂದ್ಯ ಅಲ್ಲ. ಇಂದು ನಾನು ಋಣಾತ್ಮಕತೆ, ಹೆದರಿಕೆ, ಅನಿಶ್ಚಿತತೆಯಿಂದ ನಿವೃತ್ತಿ ಪಡೆಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

    ನಾವು ಕುಗ್ಗಬೇಕಾಗಿಲ್ಲ, ಇದಕ್ಕೆ ನಾವು ಹೆಚ್ಚಿನ ರೀತಿ ಸಿದ್ಧರಾಗಬೇಕಿದೆ. ಎಲ್ಲರೂ ಸೇರಿ ಈ ವೈರಸ್‍ನ್ನು ಸೋಲಿಸಬೇಕಿದೆ. ಇಂದು ನಾವು ಮಾಡುವ ಆಯ್ಕೆಗಳು ನಮ್ಮು ಭವಿಷ್ಯ ಹಾಗೂ ಮುಂದಿನ ಪೀಳಿಗೆಯನ್ನು ನಿರ್ಧರಿಸುತ್ತವೆ. ಇದನ್ನು ವುಗಳನ್ನು ನಿಭಾಯಿಸುವುದರಿಂದ ನಾವು ಹಿಂದೆ ಸರಿಯಬಾರದು ಎಂದು ಕರೆ ನೀಡಿದ್ದಾರೆ.

    ಈ ಪೋಸ್ಟ್ ಓದಿ ನಿಮಗೆ ಶಾಕ್ ಆಗಬಹುದು. ಇದು ನಿಮಗೆ ತಿಳಿಯಬೇಕೆಂದು ಈ ರೀತಿ ಮಾಡಿದೆ. ಸುರಂಗ ದಾಟಿದ ಬಳಿಕ ಬೆಳಕು ಹೊಳೆಯುತ್ತದೆ ಎಂಬ ಭರವಸೆಯನ್ನು ನಾವು ಹೊಂದಬೇಕು. ಹೌದು ಡೆನ್ಮಾರ್ಕ್ ಓಪನ್ ನಡೆಯಲಿಲ್ಲ. ಆದರೆ ನಾನು ತಯಾರಿ ನಡೆಸುವುದನ್ನು ಬಿಡಲಿಲ್ಲ. ಜೀವನ ನಿಮ್ಮ ಬಳಿ ಬರುವಾಗ ತುಂಬಾ ಕಠಿಣವಾಗಿರುತ್ತದೆ. ಹೀಗಾಗಿ ನಾನು ಈಗ ಏಷ್ಯಾ ಓಪನ್‍ಗೆ ತಯಾರಾಗುತ್ತಿದ್ದೇನೆ. ನಾವು ಸುರಕ್ಷಿತ ಜಗತ್ತಿಗೆ ತಲುಪುವವರೆಗೆ ನಮ್ಮ ಕೆಲಸವನ್ನು ಮಾಡಲೇಬೇಕು ಎಂದು ಕೊರೊನಾ ಸಂದರ್ಭದ ಕಷ್ಟಗಳ ಬಗ್ಗೆ ಬರೆದಿದ್ದಾರೆ.