Tag: ಪಿಲಿನಲಿಕೆ

  • ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ `ಪಿಲಿನಲಿಕೆ’ – ಕಿಚ್ಚ ಸುದೀಪ್, ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡು

    ಮಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ `ಪಿಲಿನಲಿಕೆ’ – ಕಿಚ್ಚ ಸುದೀಪ್, ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡು

    – ಹುಲಿವೇಷ ತಂಡಕ್ಕೆ 2 ಲಕ್ಷ ರೂ. ಬಹುಮಾನ ಘೋಷಿಸಿದ ಝೈದ್ ಖಾನ್

    ಮಂಗಳೂರಿನಲ್ಲಿ ದಸರಾ (Mangaluru Dasara) ಹಿನ್ನೆಲೆ ಮಿಥುನ್ ರೈ ಅವರು ಆಯೋಜಿಸಿದ್ದ `ಪಿಲಿನಲಿಕೆ’ (Pilinalike) ಕಾರ್ಯಕ್ರಮಕ್ಕೆ ಅದ್ದೂರಿಯಾಗಿ ತೆರೆದಿದ್ದು, ಕಾರ್ಯಕ್ರಮಕ್ಕೆ ನಟ ಕಿಚ್ಚ ಸುದೀಪ್ (Kiccha Sudeep), ಬಾಲಿವುಡ್ ನಟಿ ಪೂಜಾ ಹೆಗ್ಡೆ, ಕ್ರಿಕೆಟಿಗ ಜಿತೇಶ್ ಶರ್ಮಾ ಸೇರಿ ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು.

    ದಸರಾ ಹಿನ್ನೆಲೆ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅನೇಕ ತಂಡಗಳು ಹುಲಿಕುಣಿತ ಮಾಡಿತ್ತು. ಈ ಕಲಾವಿದರಾದ ಕಿಚ್ಚ ಸುದೀಪ್, ಸುನೀಲ್ ಶೆಟ್ಟಿ, ಝೈದ್ ಖಾನ್, ಪೂಜಾ ಹೆಗ್ಡೆ, ಕ್ರಿಕೆಟಿಗ ಅಜಿಂಕ್ಯ ರಹಾನೆ, ಜಿತೇಶ್ ಶರ್ಮ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಅಖಂಡ 2 ಸಿನಿಮಾ ರಿಲೀಸ್ ಡೇಟ್ ಫಿಕ್ಸ್ : ಬಾಲಯ್ಯ ನಟನೆಯ ಸಿನಿಮಾ

    ಕಾರ್ಯಕ್ರಮದಲ್ಲಿ ಒಂದು ತಂಡದ ನೃತ್ಯವನ್ನು ವೀಕ್ಷಿಸಿ ಬಹಳ ಸಂತೋಷಪಟ್ಟ ನಟ ಝೈದ್ ಖಾನ್ ಸ್ಥಳದಲ್ಲೇ ಆ ತಂಡಕ್ಕೆ 2 ಲಕ್ಷ ರೂ. ಬಹುಮಾನವನ್ನು ಘೋಷಣೆ ಮಾಡುವ ಮೂಲಕ ಹುಲಿಕುಣಿತಕ್ಕೆ ಪ್ರೋತ್ಸಾಹ ನೀಡಿದರು. ಇದನ್ನೂ ಓದಿ: ಕೊತ್ತಲವಾಡಿ ನಿರ್ದೇಶಕರ ಜೊತೆಗೆ ಪುಷ್ಪಮ್ಮ ಮತ್ತೊಂದು ಸಿನಿಮಾ

    ತುಂಬಾ ಸೊಗಸಾಗಿ ಹುಲಿನೃತ್ಯ ಮಾಡಿದ ಹುಡುಗನ ಪ್ರತಿಭೆಗೆ ಮನಸೋತ ಝೈದ್ ಖಾನ್, ಆತನಿಗೆ 50,000 ರೂ. ಹಣ ನೀಡುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. ಪ್ರಸ್ತುತ ಝೈದ್ ಖಾನ್ ಅವರು ನಾಯಕನಾಗಿ ನಟಿಸುತ್ತಿರುವ `ಕಲ್ಟ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಡೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಹಾಗೂ ಟೀಸರ್ ಪ್ರೇಕ್ಷಕರ ಮನ ಗೆದ್ದಿದೆ.

  • ಮೊದಲ ಬಾರಿಗೆ ಕ್ರಿಕೆಟಿಗ ಶಿವಂ ದುಬೆ ಮಂಗಳೂರಿಗೆ ಭೇಟಿ – ಕಟೀಲು ದುರ್ಗಾಪರಮೇಶ್ವರಿಯ ದರ್ಶನ

    ಮೊದಲ ಬಾರಿಗೆ ಕ್ರಿಕೆಟಿಗ ಶಿವಂ ದುಬೆ ಮಂಗಳೂರಿಗೆ ಭೇಟಿ – ಕಟೀಲು ದುರ್ಗಾಪರಮೇಶ್ವರಿಯ ದರ್ಶನ

    – ಪಿಲಿನಲಿಕೆ ಹುಲಿವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗಿ

    ಮಂಗಳೂರು: ಮೊದಲ ಬಾರಿಗೆ ಕ್ರಿಕೆಟಿಗ ಶಿವಂ ದುಬೆ (Shivam Dube) ಮಂಗಳೂರಿಗೆ (Mangaluru) ಭೇಟಿ ನೀಡಿದ್ದಾರೆ. ಮಂಗಳೂರಿನ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಾಲಯಕ್ಕೆ (Kateel Durgaparameshwari Temple) ಭೇಟಿ ನೀಡಿದ ದುಬೆ, ದೇವಿಯ ದರ್ಶನ ಪಡೆದಿದ್ದಾರೆ.

    ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭ ದೇವಳದ ವತಿಯಿಂದ ಶಿವಂ ದುಬೆ ಅವರಿಗೆ ದೇವಳದ ಶೇಷ ವಸ್ತ್ರ ಹಾಗೂ ಪ್ರಸಾದ ನೀಡಿ ಗೌರವಿಸಲಾಯಿತು. ಈ ವೇಳೆ ದೇವಳದ ಅರ್ಚಕರು, ಆಡಳಿತ ಮಂಡಳಿಯವರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು. ಬಳಿಕ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಪಿಲಿನಲಿಕೆ ಹುಲಿವೇಷ ಸ್ಪರ್ಧೆ ಕಾರ್ಯಕ್ರಮದಲ್ಲಿ ದುಬೆ ಪಾಲ್ಗೊಂಡರು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಈ ಬಾರಿಯೂ ಜನ ಜೆಡಿಎಸ್‌ ಕೈ ಹಿಡಿಯುತ್ತಾರೆ: ನಿಖಿಲ್‌ ಕುಮಾರಸ್ವಾಮಿ

    ಮಂಗಳೂರಿನಲ್ಲಿ ಹುಲಿವೇಷ ಸ್ಪರ್ಧೆಯ ಅಬ್ಬರ ಜೋರಾಗಿ ನಡೆಯುತ್ತಿದ್ದು, ನಟ ಡಾಲಿ ಧನಂಜಯ್, ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ, ಪ್ರಮೋದ್ ಸೇರಿದಂತೆ ಅನೇಕ ಬಾಲಿವುಡ್ ಹಾಗೂ ಸ್ಯಾಂಡಲ್‌ವುಡ್ ಕಲಾವಿದರು ಇದರಲ್ಲಿ ಭಾಗವಹಿಸಿದ್ದಾರೆ. ನವರಾತ್ರಿಯ ಸಂಭ್ರಮದಲ್ಲಿ ಮಂಗಳೂರಿನ ವಿವಿಧೆಡೆ ಹುಲಿ ಕುಣಿತ ಸ್ಪರ್ಧೆ ನಡೆಯುತ್ತಿದೆ. ನಗರದ ನೆಹರೂ ಮೈದಾನದಲ್ಲಿ ನಡೆದ ಪಿಲಿಪರ್ಬ ಹುಲಿವೇಷ ಕುಣಿತದ ಸ್ಪರ್ಧೆಗೆ ಅತಿಥಿಯಾಗಿ ಆಗಮಿಸಿದ ಚಿತ್ರನಟ ರಾಜ್ ಬಿ ಶೆಟ್ಟಿ ವೇದಿಕೆಯಲ್ಲಿ ಹುಲಿ ಕುಣಿತಕ್ಕೆ ಸ್ಟೆಪ್ ಹಾಕಿದರು. ಇದನ್ನೂ ಓದಿ: Mysuru Dasara Photo Gallery: ಜಂಬೂಸವಾರಿ ಮೆರವಣಿಗೆ ವೈಭವ ಕಣ್ತುಂಬಿಕೊಂಡ ಕೋಟ್ಯಂತರ ಜನರು

    ಹುಲಿವೇಷಧಾರಿಗಳು ವೇದಿಕೆಯಲ್ಲಿ ಹುಲಿಡ್ಯಾನ್ಸ್ ಮಾಡುತ್ತಿದ್ದಂತೆ ರಾಜ್ ಬಿ ಶೆಟ್ಟಿಯೂ ಅವರೊಂದಿಗೆ ಸ್ಟೆಪ್ ಹಾಕಿ ಎಲ್ಲರನ್ನೂ ರಂಜಿಸಿದರು. ಬಳಿಕ ಇದೇ ವೇದಿಕೆಗೆ ಆಗಮಿಸಿದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹುಲಿವೇಷ ಹಾಕಿ ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಿದರು. ಇದನ್ನೂ ಓದಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಸಂಜಯ್ ದತ್ ಭೇಟಿ