Tag: ಪಿಲಿಕುಳ ನಿಸರ್ಗಧಾಮ

  • ಮಂಗ್ಳೂರಿನಲ್ಲಿ 1 ಹೆಣ್ಣು 4 ಗಂಡು ಮರಿಗಳಿಗೆ ಜನ್ಮ ನೀಡಿದ ಹುಲಿ

    ಮಂಗ್ಳೂರಿನಲ್ಲಿ 1 ಹೆಣ್ಣು 4 ಗಂಡು ಮರಿಗಳಿಗೆ ಜನ್ಮ ನೀಡಿದ ಹುಲಿ

    ಮಂಗಳೂರು: ಜಗತ್ತಿನಾದ್ಯಂತ ಹುಲಿಗಳ ಸಂತತಿ ಅವನತಿಯ ಹಾದಿಯಲ್ಲಿದ್ದರೆ, ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ಮಾತ್ರ ಹುಲಿಗಳು ಸದ್ದು ಮಾಡಲಾರಂಭಿಸಿವೆ.

    ಹೆಣ್ಣು ಹುಲಿಯೊಂದು ಒಮ್ಮೆಲೇ ಐದು ಮರಿಗಳಿಗೆ ಜನ್ಮ ನೀಡಿದ್ದು ಪಿಲಿಕುಳದಲ್ಲಿ ಹುಲಿ ಮರಿಗಳ ನಲಿದಾಟ ಆಕರ್ಷಣೆ ಹುಟ್ಟಿಸಿದೆ. ಈವರೆಗೆ 13 ಇದ್ದ ಹುಲಿಗಳ ಸಂಖ್ಯೆ ಈಗ 18 ಕ್ಕೇರಿದ್ದು ನಿಸರ್ಗಧಾಮದ ಹಿರಿಮೆ ಹೆಚ್ಚಿಸಿದೆ. ಪುಟಾಣಿ ಮರಿಗಳು ತಾಯಿ ಹುಲಿ ರಾಣಿಯ ಜೊತೆ ಆಟವಾಡುತ್ತಾ ಕೃತಕ ಕಾಡಿನಲ್ಲಿ ಅಡ್ಡಾಡುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಇದನ್ನು ಓದಿ: ಪಿಲಿಕುಳದಲ್ಲಿ ಐದು ಮರಿಗಳ ಜನನ- ಮತ್ತೆ ಅಗ್ರಸ್ಥಾನಕ್ಕೇರಿದ ಕರ್ನಾಟಕ

    ಈಗ ನಾಲ್ಕು ಗಂಡು ಮತ್ತು ಒಂದು ಹೆಣ್ಣು ಮರಿಯಾಗಿದ್ದು ಪಿಲಿಕುಳದಲ್ಲಿ ಹೊಸ ಸಂಭ್ರಮ ಮನೆಮಾಡಿದೆ. ಪಿಲಿಕುಳದಲ್ಲಿ ಹೆಚ್ಚಿನ ಪ್ರಾಣಿಗಳನ್ನು ವಿವಿಧ ಕಂಪನಿಗಳು ದತ್ತು ಪಡೆದಿದ್ದು ಅವುಗಳ ಸಂರಕ್ಷಣೆಯ ಹೊಣೆ ಹೊತ್ತುಕೊಂಡಿದೆ. ಹೀಗಾಗಿ ವಿವಿಧ ರೀತಿಯ ಅಪರೂಪದ ಕಾಡು ಪ್ರಾಣಿಗಳನ್ನು ಪಿಲಿಕುಳದಲ್ಲಿ ಸಂರಕ್ಷಿಸಲಾಗಿದ್ದು ಸಂತತಿ ಹೆಚ್ಚಳಕ್ಕೆ ಒತ್ತು ನೀಡಲಾಗಿದೆ. ಇಲ್ಲಿ ಹೆಚ್ಚುವರಿಯಾದ ಪ್ರಾಣಿಗಳನ್ನು ದೇಶದ ವಿವಿಧ ಮೃಗಾಲಯಗಳಿಗೆ ಎರವಲು ನೀಡಲಾಗುತ್ತಿದೆ.

  • ಮತ್ತೆ ನೈತಿಕ ಪೊಲೀಸ್‍ಗಿರಿ-ಮಂಗ್ಳೂರಲ್ಲಿ ಯುವಕ, ಯುವತಿಯರ ಮೇಲೆ ಹಲ್ಲೆ

    ಮತ್ತೆ ನೈತಿಕ ಪೊಲೀಸ್‍ಗಿರಿ-ಮಂಗ್ಳೂರಲ್ಲಿ ಯುವಕ, ಯುವತಿಯರ ಮೇಲೆ ಹಲ್ಲೆ

    ಮಂಗಳೂರು: ನಗರದಲ್ಲಿ ಮತ್ತೆ ನೈತಿಕ ಪೊಲೀಸ್‍ಗಿರಿ ನಡೆದಿದೆ. ಮಂಗಳೂರಿನ ಮೂಡುಶೆಡ್ಡೆಯಲ್ಲಿರುವ ಪ್ರವಾಸಿತಾಣ ಪಿಲಿಕುಳ ನಿಸರ್ಗಧಾಮದ ವಾಟರ್ ಪಾರ್ಕಿನಲ್ಲಿ ಇಬ್ಬರು ಅನ್ಯಕೋಮಿನ ವಿದ್ಯಾರ್ಥಿನಿಯರ ಜೊತೆ ಯುವಕನೊಬ್ಬ ಬಂದಿದ್ದು ಹಿಂದೂ ಸಂಘಟನೆ ಕಾರ್ಯಕರ್ತರು ಹಿಡಿದು ಥಳಿಸಿದ್ದಾರೆ.

    ಬಳಿಕ ಪೊಲೀಸರು ಆಗಮಿಸಿ, ಯುವಕ-ಯುವತಿಯರನ್ನು ವಶಕ್ಕೆ ಪಡೆದರೂ ಕಾರ್ಯಕರ್ತರು ಪೊಲೀಸರ ನಡುವೆಯೇ ಹಲ್ಲೆ ನಡೆಸಿದ್ದಾರೆ. ಯುವಕ-ಯುವತಿಯರು ಒಂದೇ ಕಾಲೇಜಿನವರಾಗಿದ್ದು ಪಿಲಿಕುಳದ ಮಾನಸ ವಾಟರ್ ಪಾರ್ಕಿಗೆ ಹೋಗಿದ್ದರು. ಇದನ್ನೂ ಓದಿ: ಕರಾವಳಿಯಲ್ಲಿ ಮತ್ತೆ ಪೊಲೀಸ್ ನೈತಿಕಗಿರಿ – ತಮಿಳು ನಟಿಗೆ ಪೊಲೀಸ್, ಹಿಂದು ಸಂಘಟನೆ ಕಾರ್ಯಕರ್ತರಿಂದ ಹಲ್ಲೆ

    ವಿದ್ಯಾರ್ಥಿಗಳು ಅನ್ಯಕೋಮಿನವರು ಎಂದು ನೋಡಿದ ಸ್ಥಳೀಯ ಯುವಕರು ಹಿಂದೂ ಸಂಘಟನೆಯವರಿಗೆ ಸುದ್ದಿ ಮುಟ್ಟಿಸಿದ್ದದ್ದಾರೆ. ಕೂಡಲೇ ಎಚ್ಚೆತ್ತ ಕಾರ್ಯಕರ್ತರು ಪಾರ್ಕ್ ಒಳನುಗ್ಗಿ ಹಲ್ಲೆ ನಡೆಸಿದ್ದಾರೆ. ಅನ್ಯಕೋಮಿನ ಯುವಕರು ಹಿಂದು ಯುವತಿಯರನ್ನು ಪ್ರೀತಿಯ ನೆಪದಲ್ಲಿ ಲವ್ ಜಿಹಾದ್ ಬಲೆಗೆ ಬೀಳಿಸುತ್ತಿದ್ದಾರೆಂಬ ಆರೋಪದ ಮಧ್ಯೆ ಜೊತೆಯಾಗಿ ಸಿಕ್ಕಿಬಿದ್ದವರ ಮೇಲೆ ಸಂಘಟನೆ ಕಾರ್ಯಕರ್ತರು ಚೆನ್ನಾಗಿಯೇ ಉಪಚರಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಮೆಹಂದಿ ಶಾಸ್ತ್ರದಂದೇ ರಾತ್ರಿ ನಾಪತ್ತೆಯಾಗಿದ್ದ ಯುವತಿ ಈಗ ಜೈಲು ಪಾಲು!

    ಯುವತಿಗೆ ಪೊಲೀಸರ ಎದುರೇ ಹಲ್ಲೆ ನಡೆಸಿದ್ದ ಹಿಂದು ಸಂಘಟನೆಯ ಕಾರ್ಯಕರ್ತ ಸಂಪತ್ ಎಂಬಾತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಾಗಿದೆ.