Tag: ಪಿರಿಯಾಪಟ್ಟಣ

  • Mysuru | ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು

    Mysuru | ಬಾತ್‌ರೂಂನಲ್ಲಿ ಗ್ಯಾಸ್ ಗೀಸರ್ ಸೋರಿಕೆ; ಉಸಿರುಗಟ್ಟಿ ಅಕ್ಕ-ತಂಗಿ ಸಾವು

    ಮೈಸೂರು: ಬಾತ್‌ರೂಂನಲ್ಲಿ (Bathroom) ಗ್ಯಾಸ್ ಗೀಸರ್ (Gas Geyser) ಸೋರಿಕೆಯಾದ ಪರಿಣಾಮ ಉಸಿರುಗಟ್ಟಿ ಅಕ್ಕ-ತಂಗಿ (Sisters) ಸಾವನ್ನಪ್ಪಿದ ಘಟನೆ ಮೈಸೂರು (Mysuru) ಜಿಲ್ಲೆ ಪಿರಿಯಾಪಟ್ಟಣ (Piriyapatna) ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.

    ಗುಲ್ಫರ್ಮ್ ತಾಜ್ (23), ಸಿಮ್ರಾನ್ ತಾಜ್ (20) ಮೃತ ದುರ್ದೈವಿಗಳು. ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ (Carbon Monoxide) ಸೋರಿಕೆಯಾಗಿ ಘಟನೆ ಸಂಭವಿಸಿದೆ. ಗುಲ್ಫಾರ್ಮ್, ಸಿಮ್ರಾನ್ ತಾಜ್ ಇಬ್ಬರೂ ಒಟ್ಟಿಗೆ ಬಾತ್‌ರೂಂಗೆ ಹೋದಾಗ ಘಟನೆ ನಡೆದಿದೆ. ಬಹಳ ಹೊತ್ತು ಕಳೆದರು ಬಾತ್‌ರೂಂನಿಂದ ಅಕ್ಕ, ತಂಗಿ ಹೊರಬಾರದ ಹಿನ್ನೆಲೆ ತಂದೆ ಅಲ್ತಾಫ್ ಅನುಮಾನಗೊಂಡು ಬಾಗಿಲು ಬಡಿದಿದ್ದಾರೆ. ಆಗಲೂ ಬಾಗಿಲು ತೆಗೆದಿಲ್ಲ. ಈ ವೇಳೆ ಬಾಗಿಲು ಒಡೆದು ನೋಡಿದಾಗ ಮಕ್ಕಳಿಬ್ಬರು ಅರೆಪ್ರಜ್ಞಾವಸ್ಥೆಯಲ್ಲಿರೋದು ಗೊತ್ತಾಗಿದೆ. ಇದನ್ನೂ ಓದಿ: ಗುಂಡಿ ತಪ್ಪಿಸಲು ಹೋಗಿ ಬೈಕ್‌ನಿಂದ ರಸ್ತೆಗೆ ಬಿದ್ದ ಟೆಕ್ಕಿ – ಲಾರಿ ಹರಿದು ದುರ್ಮರಣ

    ತಕ್ಷಣವೇ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟುಹೊತ್ತಿಗಾಗಲೇ ಇಬ್ಬರೂ ಮೃತಪಟ್ಟಿದ್ದರು. ಕೋಣೆಯಲ್ಲಿ ಕಿಟಕಿ ಇರದ ಹಿನ್ನೆಲೆ ಉಸಿರುಗಟ್ಟಿದೆ ಎನ್ನಲಾಗಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

  • ಜಿಡಿಎಸ್‌ಗೆ ವೋಟ್ ಹಾಕಿದ್ದಕ್ಕೆ ಗಂಗಾ ಕಲ್ಯಾಣ ಪಟ್ಟಿಗೆ ತಡೆ – ಸಚಿವ ವೆಂಕಟೇಶ್ ವಿರುದ್ಧ ರೈತರ ಕಿಡಿ

    ಜಿಡಿಎಸ್‌ಗೆ ವೋಟ್ ಹಾಕಿದ್ದಕ್ಕೆ ಗಂಗಾ ಕಲ್ಯಾಣ ಪಟ್ಟಿಗೆ ತಡೆ – ಸಚಿವ ವೆಂಕಟೇಶ್ ವಿರುದ್ಧ ರೈತರ ಕಿಡಿ

    ಮೈಸೂರು: ಪಿರಿಯಾಪಟ್ಟಣದಲ್ಲಿ (Piriyapatna) ಮತ್ತೆ ದ್ವೇಷದ ರಾಜಕಾರಣ ಶುರುವಾಗಿದೆ. ಬೋರ್‌ವೆಲ್ ರಾಜಕೀಯ ಜೋರಾಗಿದ್ದು ರೈತರಿಗೆ ಮಂಜೂರಾಗಿದ್ದ ಗಂಗಾ ಕಲ್ಯಾಣ ಯೋಜನೆ ಪಟ್ಟಿಯನ್ನು ಖುದ್ದು ಸಚಿವ ಕೆ.ವಂಕಟೇಶ್  (K.Venkatesh ) ತಡೆಹಿಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಯೋಜನೆ ಪಟ್ಟಿಯನ್ನು ಸಚಿವ ಕೆ.ವಂಕಟೇಶ್ ತಡೆದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ರೈತರು, ಗಂಗಾ ಕಲ್ಯಾಣ ಯೋಜನೆ ಪಟ್ಟಿಯನ್ನು ಖುದ್ದು ವಂಕಟೇಶ್ ತಡೆಹಿಡಿಸಿದ್ದಾರೆ. ಮಾಜಿ ಶಾಸಕ ಜೆಡಿಎಸ್‌ನ ಕೆ.ಮಹದೇವ್  (K.Mahadeva )ಮೇಲಿನ ಸೇಡಿಗೆ ನಮ್ಮ ಭವಿಷ್ಯ ಬಲಿಯಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಷ್ಟಾರ್ಥಸಿದ್ಧಿಗಾಗಿ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್

    2021 ರಿಂದ 23ನೇ ಸಾಲಿನವರೆಗೆ ನೂರಕ್ಕೂ ಹೆಚ್ಚು ರೈತರು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಾಗಿ ಆಯ್ಕೆಯಾಗಿದ್ದರು. ಹಿಂದಿನ ಜೆಡಿಎಸ್ ಶಾಸಕ ಕೆ.ಮಹದೇವ್ ಇದ್ದ ಸಮಯದಲ್ಲಿ ಆಯ್ಕೆ ಮಾಡಿ ತಯಾರಾಗಿ ಮಂಜೂರಾತಿ ಸಿಕ್ಕಿತ್ತು. ಇದೀಗ ವೆಂಕಟೇಶ್ ಈ ಪಟ್ಟಿ ಜಾರಿಗೆ ಅಡ್ಡಿಯಾಗಿ ನಿಂತಿದ್ದಾರೆ. ಕಳೆದ ಬಾರಿ ಮಹದೇವ್ ಪರ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ ಎಂಬ ಕಾರಣ ಇಟ್ಟುಕೊಂಡು ದ್ವೇಷ ಸಾಧಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

  • ರೂಬಿಕ್ಸ್ ಕ್ಯೂಬ್‍ನಲ್ಲಿ ಶ್ರೀರಾಮನ ಚಿತ್ರ ಮೂಡಿಸಿದ 12ರ ಬಾಲಕ

    ರೂಬಿಕ್ಸ್ ಕ್ಯೂಬ್‍ನಲ್ಲಿ ಶ್ರೀರಾಮನ ಚಿತ್ರ ಮೂಡಿಸಿದ 12ರ ಬಾಲಕ

    ಮಡಿಕೇರಿ: ಅಯೋಧ್ಯೆಯಲ್ಲಿ ನಡೆಯುತ್ತಿರುವ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನೆಯ (Pran Pratishtha) ಹಿನ್ನೆಲೆ ದೇಶಾದ್ಯಂತ ರಾಮನ ಭಕ್ತರು ವಿಶೇಷ ಆಚರಣೆಗಳನ್ನು ಆರಂಭಿಸಿದ್ದಾರೆ. ಅದೇ ರೀತಿ ಪಿರಿಯಾಪಟ್ಟಣದ 12 ವರ್ಷದ ಬಾಲಕನೊಬ್ಬ ರೂಬಿಕ್ಸ್ ಕ್ಯೂಬ್‍ನಲ್ಲಿ ರಾಮನ ಚಿತ್ರ ಬಿಡಿಸುವ ಮೂಲಕ ಜನರ ಗಮನ ಸೆಳೆದಿದ್ದಾನೆ.

    ಗೋಣಿಕೊಪ್ಪ ರಸ್ತೆಯ ನಿವಾಸಿ ಮೃದುಲಾ ಮತ್ತು ಪಿ.ಎನ್ ವಿನಯ್ ದಂಪತಿ ಪುತ್ರ ಪ್ರಣವ್ ಈ ಸಾಧನೆ ಮಾಡಿದ ಬಾಲಕನಾಗಿದ್ದಾನೆ. ಪ್ರಣವ್ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದು, ರೂಬಿಕ್ಸ್ ಕ್ಯೂಬ್ ಸಾಲ್ವ್ ಮಾಡುವುದರಲ್ಲಿ ಪರಿಣಿತನಾಗಿದ್ದಾನೆ. ಈತ 22 ವಿವಿಧ ರೀತಿಯ ಕ್ಯೂಬ್‍ಗಳನ್ನು ಸಾಲ್ವ್ ಮಾಡಿ ಕರ್ನಾಟಕ ಬುಕ್ ಆಫ್ ರೇಕಾರ್ಡ್ ದಾಖಲೆ ಮಾಡಿದ್ದಾನೆ. ಇಂಡಿಯಾ ಬುಕ್ ಆಫ್ ರೇಕಾರ್ಡ್ ನಲ್ಲಿಯೂ ಈತನ ಸಾಧನೆ ದಾಖಲಾಗಿದೆ. ಇದನ್ನೂ ಓದಿ: ಅಂಬೇಡ್ಕರ್ ಹೆಸರಲ್ಲೂ ರಾಮನಿದ್ದಾನೆ: ಛಲವಾದಿ ನಾರಾಯಣಸ್ವಾಮಿ

    ಬರೋಬ್ಬರಿ 498 ಕ್ಯೂಬ್ ಗಳನ್ನು ಬಳಿಸಿ ಈಗ ಶ್ರೀರಾಮನ ಚಿತ್ರ ರಚಿಸಿದ್ದಾನೆ. ಈ ಮೂಲಕ ರಾಮನ ಪ್ರಾಣಪ್ರತಿಷ್ಠೆ ಹೊತ್ತಿನಲ್ಲಿ ತನ್ನದೇ ಶೈಲಿಯಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದಾನೆ. ಈ ಹಿಂದೆಯೂ ರೂಬಿಕ್ಸ್ ಕ್ಯೂಬ್‍ನಲ್ಲಿ ಪ್ರಣವ್ ಶ್ರೀಕೃಷ್ಣ, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಶಿವಕುಮಾರ ಸ್ವಾಮೀಜಿ ಮುಂತಾದ ಮಹನೀಯರ ಚಿತ್ರಗಳನ್ನು ರಚಿಸಿದ್ದ. ಅಲ್ಲದೇ ಪ್ರಧಾನಿ ಮೋದಿಯವರ (Narendra Modi )ಜನ್ಮ ದಿನಾಚರಣೆ ವೇಳೆ ಅವರ ಭಾವಚಿತ್ರವನ್ನು ರೂಬಿಕ್ಸ್ ಕ್ಯೂಬ್ ಬಳಸಿ ರಚಿಸಿದ್ದ.

    ಇದರೊಂದಿಗೆ ಬಾಲಕ ಪಿಯಾನೋ ನುಡಿಸುವುದು, ಸ್ಕೇಟಿಂಗ್ ತರಬೇತಿ ಪಡೆದುಕೊಂಡಿದ್ದಾನೆ. ಈತನ ಸಾಧನೆಗೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ: ಪರಿಶಿಷ್ಟ ಜಾತಿ ಒಳ ಮೀಸಲಾತಿ ವಿಚಾರ – ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧಾರ

  • ಪತ್ನಿ ಮೇಲೆ ವಿಪರೀತ ಸಂಶಯ – ಚಾಕುವಿನಿಂದ 5 ಬಾರಿ ಇರಿದು, ನೇಣಿಗೆ ಶರಣಾದ ಪತಿ

    ಪತ್ನಿ ಮೇಲೆ ವಿಪರೀತ ಸಂಶಯ – ಚಾಕುವಿನಿಂದ 5 ಬಾರಿ ಇರಿದು, ನೇಣಿಗೆ ಶರಣಾದ ಪತಿ

    ಮಡಿಕೇರಿ: ಪತ್ನಿ ಮೇಲೆ ವಿಪರೀತ ಸಂಶಯ ಪಡುತ್ತಿದ್ದ ಗಂಡನೊಬ್ಬ ಆಕೆ ತವರು ಮನೆಗೆ ಹೋಗಿದ್ದಾಗ ಅಲ್ಲಿ ಆಕೆಗೆ ಚಾಕುವಿನಿಂದ 5 ಬಾರಿ ಇರಿದು, ಬಳಿಕ ತನ್ನ ಮನೆಗೆ ಪರಾರಿಯಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ (Piriyapatna) ತಾಲೂಕಿನ ಮುತ್ತಿನಮುಳ್ಳುಸೋಗೆ ಗ್ರಾಮದಲ್ಲಿ ನಡೆದಿದೆ.

    ಕಳೆದ ಒಂದೂವರೆ ವರ್ಷದ ಹಿಂದೆ ಮುತ್ತಿನ ಮುಳುಸೋಗೆ ಗ್ರಾಮದ ಶ್ವೇತಾ ಎಂಬಾಕೆಯನ್ನು ಗ್ರಾಮದ ಪ್ರಸನ್ನ (36) ಎಂಬಾತ ಪ್ರೀತಿಸಿ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ. ಆದರೆ ದಿನಕಳೆದಂತೆ ತನ್ನ ಪತ್ನಿ ಮೇಲೆ ಪ್ರಸನ್ನ ವಿಪರೀತ ಸಂಶಯ ಪಟ್ಟು ಆಕೆಗೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ.

    ಈ ಬಗ್ಗೆ ಹಲವಾರು ಬಾರಿ ಮೈಸೂರು ಹಾಗೂ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ, ದಂಪತಿಯ ರಾಜಿ ಸಂಧಾನ ಮಾಡಿ ಕಳುಹಿಸಿದ್ದರು. ಆದರೆ ಪ್ರಸನ್ನ ಮಾತ್ರ ಪತ್ನಿ ಮೇಲೆ ಅನುಮಾನ ಪಡುವುದು ಬಿಟ್ಟಿರಲಿಲ್ಲ. ಆಕೆಯ ತಂಗಿಯ ಮೇಲೆ ವ್ಯಾಮೋಹವೂ ಹೆಚ್ಚಾಗಿ, ಆಕೆಯೊಂದಿಗೆ ಮದುವೆ ಮಾಡಿಸು ಎಂದು ಪತ್ನಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

    ಪತಿಯ ಕಿರುಕುಳದಿಂದ ಬೇಸತ್ತು ಶ್ವೇತಾ ಕಳೆದ ಒಂದು ತಿಂಗಳ ಹಿಂದೆ ತವರು ಮನೆಗೆ ಬಂದು ಅಲ್ಲಿಂದಲೇ ಕೆಲಸ ಮಾಡುತ್ತಿದ್ದಳು. ಗುರುವಾರ ಬೆಳಗ್ಗೆ ತವರು ಮನೆಯಿಂದ ಕೆಲಸಕ್ಕೆ ಹೊರಟಿದ್ದ ವೇಳೆ ಹೊರಗೆ ಕಾದು ಕುಳಿತಿದ್ದ ಪ್ರಸನ್ನ ಆಕೆಗೆ ಚಾಕು ತೋರಿಸಿ ತಮ್ಮ ಮನೆಗೆ ಹೋಗೋಣ ಎಂದು ಕರೆದಿದ್ದಾನೆ. ಆದರೆ ಮನೆಯಲ್ಲಿ ಯಾರೂ ಇಲ್ಲ, ಅವರೆಲ್ಲಾ ಬಂದ ಮೇಲೆ ತಮ್ಮ ಮನೆಗೆ ಹೋಗೋಣ ಎಂದು ಕೇಳಿಕೊಂಡಿದ್ದಾಳೆ. ಇದನ್ನೂ ಓದಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ – ಇಬ್ಬರು ಸವಾರರು ಸ್ಥಳದಲ್ಲೇ ಸಾವು

    ಹೇಳದ ಮಾತು ಕೇಳದೇ ಹೋಗಿದ್ದಕ್ಕೆ ಪ್ರಸನ್ನ ಜಗಳವಾಡಿದ್ದಾನೆ. ಹೀಗೆ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಪ್ರಸನ್ನ ಪತ್ನಿ ಶ್ವೇತಾ ಹೊಟ್ಟೆಗೆ ಹಾಗೂ ಬೆನ್ನಿಗೆ ಚಾಕುವಿನಿಂದ 5 ಬಾರಿ ಇರಿದಿದ್ದಾನೆ. ಪತ್ನಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರೂ ಆಕೆಯನ್ನು ಅಲ್ಲೇ ಬಿಟ್ಟು ತನ್ನ ಮನೆಗೆ ಓಡಿ ಹೋಗಿದ್ದಾನೆ. ನಂತರ ಅಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಇತ್ತ ಶ್ವೇತಾಳ ಚೀರಾಟ ಕೇಳಿ ಅಲ್ಲಿಗೆ ಧಾವಿಸಿದ ಗ್ರಾಮಸ್ಥರು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದುದನ್ನು ಕಂಡು ತಕ್ಷಣ ಮಡಿಕೇರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರ ಗಾಯಗಳಾಗಿರುವ ಶ್ವೇತಾಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಘಟನೆಗೆ ಸಂಬಂಧಿಸಿದಂತೆ ಪಿರಿಯಾಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಸನ್ನ ಮೃತದೇಹವನ್ನು ಪಿರಿಯಾಪಟ್ಟಣ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಅಂತರ್ಜಾತಿ ಪ್ರೇಮ ವಿವಾಹವಾಗಿದ್ದಕ್ಕೆ ಯುವಕನ ಕಡೆಯವರ ಆಟೋಗೆ ಬೆಂಕಿ ಹಚ್ಚಿದ ಹುಡುಗಿ ಕಡೆಯವರು

  • ಚುನಾವಣಾ ಬೆಟ್ಟಿಂಗ್‍: 1 ಎಕರೆ 37 ಗುಂಟೆ ಜಮೀನು ಮಾರಾಟ ಮಾಡಲು ಮುಂದಾದ ಕೈ ಮುಖಂಡ!

    ಚುನಾವಣಾ ಬೆಟ್ಟಿಂಗ್‍: 1 ಎಕರೆ 37 ಗುಂಟೆ ಜಮೀನು ಮಾರಾಟ ಮಾಡಲು ಮುಂದಾದ ಕೈ ಮುಖಂಡ!

    ಮೈಸೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Assembly Election 2023) ಯ ಫಲಿತಾಂಶ ಶನಿವಾರ ಹೊರಬೀಳುತ್ತಿದ್ದು, ಇದೀಗ ರಾಜ್ಯದಲ್ಲಿ ಬೆಟ್ಟಿಂಗ್ ದಂಧೆ ಆರಂಭವಾಗಿದೆ. ಅಂತೆಯೇ ವ್ಯಕ್ತಿಯೊಬ್ಬರು ಬೆಟ್ಟಿಂಗ್‍ಗೆ ತನ್ನ ಜಮೀನನ್ನೇ ಮಾರಾಟ ಮಾಡಲು ಮುಂದಾಗಿರುವ ಪ್ರಸಂಗವೊಂದು ಮೈಸೂರಿನಲ್ಲಿ ನಡೆದಿದೆ.

    ಹೌದು. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡ (Yogesh Gowda Betting) ಜಮೀನು ಮಾರಲು ಮುಂದಾದ ಕಾಂಗ್ರೆಸ್ (Congress) ಮುಖಂಡ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಕೆ.ವೆಂಕಟೇಶ್ (K Venkatesh) ಹಾಗೂ ಜೆಡಿಎಸ್ (JDS) ಅಭ್ಯರ್ಥಿ ಕೆ.ಮಹದೇವ್ ( K Mahadev) ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ.

    ಈ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆಂದು 1 ಎಕರೆ 37 ಗುಂಟೆ ಜಮೀನು ಬೆಟ್ಟಿಂಗ್ ನಡೆದಿದೆ. ಸದ್ಯ ಯೋಗೇಶ್ ಗೌಡ ಮಾತನಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಸಿಂಗಾಪುರ್ ಪಾಲಿಟಿಕ್ಸ್ ಅಸಲಿ ಆಟ ಶುರುನಾ?

     ವೀಡಿಯೋದಲ್ಲಿ ಏನಿದೆ..?: ಪಿರಿಯಾಪಟ್ಟಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ತಾರೆಂದು ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡನಾದ ನಾನು 1 ಎಕರೆ 37 ಗುಂಟೆ ಬೆಟ್‌ ಕಟ್ತೀನಿ. ಯಾರದ್ರೂ ತಯಾರಿದ್ದರೆ ಬರಬಹುದು. ಅಗ್ರಿಮೆಂಟ್‌ ಮಾಡಿ ಕೊಡ್ತೀನಿ. ನನ್ನ ಹೆಂಡ್ತಿ ಮಕ್ಕಳ ಸಹಿ ಕೂಡ ಹಾಕಿ ಕೊಡುತ್ತೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.

  • ನಿನ್ನ ಮನೆ ಹಾಳಾಗಲಿ, ನಿನ್ನ ವಂಶ ನಾಶವಾಗಲಿ: ವೆಂಕಟೇಶ್‌ ವಿರುದ್ಧ ಶಾಸಕ ಕೆ. ಮಹದೇವ್ ಕಿಡಿ

    ನಿನ್ನ ಮನೆ ಹಾಳಾಗಲಿ, ನಿನ್ನ ವಂಶ ನಾಶವಾಗಲಿ: ವೆಂಕಟೇಶ್‌ ವಿರುದ್ಧ ಶಾಸಕ ಕೆ. ಮಹದೇವ್ ಕಿಡಿ

    ಮೈಸೂರು: ನಿನ್ನ ಮನೆ ಹಾಳಾಗಲಿ, ನಿನ್ನ ವಂಶ ನಾಶವಾಗಲಿ ಎಂದ ಮಾಜಿ ಶಾಸಕ ವೆಂಕಟೇಶ್‌ (Venkatesh) ವಿರುದ್ಧ ಜೆಡಿಎಸ್ (JDS) ಶಾಸಕ ಕೆ ಮಹದೇವ್ (K Mahadev) ಆಕ್ರೋಶ ಹೊರಹಾಕಿದರು.

    ಪಿರಿಯಾಪಟ್ಟಣದ (Periyapatna) ನಾಡ ಅಧಿದೇವತೆ ಮಸಣಿಮ್ಮ ದೇವಾಲಯ ವಾರ್ಷಿಕೋತ್ಸವದ ನಡೆಯುತ್ತಿರುವ ಸಂದರ್ಭದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕರ ನಡುವೆ ಆಣೆ ಪ್ರಮಾಣದ ವಾರ್ ನಡೆಯುತ್ತಿದೆ. ಮಸಣಿಮ್ಮ ದೇವಾಲಯದ ಹಣವನ್ನು ಶಾಸಕ ಕೆ.ಮಹದೇವ್ ಅವರು ದುರುಪಯೋಗ ಮಾಡಿದ್ದಾರೆ ಎಂದು ಮಾಜಿ ಶಾಸಕ ವೆಂಕಟೇಶ್ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಾಜಿ ಶಾಸಕ ವೆಂಕಟೇಶ್ ಅವರ ವಿರುದ್ಧ ಶಾಸಕ ಮಹದೇವ್‌ ವಾಗ್ದಾಳಿ ನಡೆಸಿದರು.

    ಈ ಬಗ್ಗೆ ಮಾತನಾಡಿದ ಶಾಸಕ, ದೇವಾಲಯ ಹಣದಲ್ಲಿ ಒಂದು ರೂ. ಲೂಟಿ ಮಾಡಿದ್ರು ಆ ದೇವತೆ ತನಗೆ ಶಿಕ್ಷೆ ನೀಡಲಿ. ಮಾಜಿ ಶಾಸಕ ವೆಂಕಟೇಶ್‌ ಅವರಿಗೆ ನಾನು ಬಹಿರಂಗವಾಗಿ ಆಹ್ವಾನ ನೀಡುತ್ತಿದ್ದೇನೆ‌. ದೇವಾಲಯಕ್ಕೆ ಇಬ್ಬರು ಬಂದು ತಾಯಿ ಎದುರು ಇಬ್ಬರು ಹೂವಿನ ಹಾರ ಹಾಕಿಕೊಂಡು ಆಣೆ ಪ್ರಮಾಣ ಮಾಡೋಣ. ನಾನು ಏನನ್ನಾದರೂ ಹಣ ಲೂಟಿ ಮಾಡಿದರೇ ನನ್ನ ವಂಶ ನಾಶವಾಗಲಿ. ಆರೋಪದಲ್ಲಿ ಹುರುಳು ಇಲ್ಲದಿದ್ದರೇ ನಿನ್ನ ವಂಶ ಹಾಳಾಗಲಿ, ನಿನ್ನ ಮನೆ ಹಾಳಾಗಲಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಮಾರ್ಚ್ 11ಕ್ಕೆ ಇಡಿ ಮುಂದೆ ಹಾಜರಾಗಲಿದ್ದಾರೆ KCR ಪುತ್ರಿ ಕವಿತಾ

    ಮಾಜಿ ಶಾಸಕ ‌ವೆಂಕಟೇಶ್‌ಗೆ ದೇವರ ಮೇಲೆ ನಂಬಿಕೆಯೇ ಇಲ್ಲ. ಒಂದು ಹಣ್ಣು ಕಾಯಿ ಮಾಡಿಸದೇ ಇರುವ ವ್ಯಕ್ತಿ ಅವರು. ನಾನು ಸಂಸ್ಕಾರ ಕುಟುಂಬದಲ್ಲಿ ಹುಟ್ಟಿರುವ ವ್ಯಕ್ತಿ ಎಂದು ಪರೋಕ್ಷವಾಗಿ ವೆಂಕಟೇಶ್‌ ಅವರನ್ನು ಟೀಕಿಸಿದರು. ಇದನ್ನೂ ಓದಿ:  ಪಾರಿವಾಳದ ಕಾಲಿನಲ್ಲಿ ಕ್ಯಾಮೆರಾ – ಬೇಹುಗಾರಿಕೆ ಶಂಕೆ

  • ಬರೋಬ್ಬರಿ 6 ತಿಂಗಳ ನಂತ್ರ ಮಲೇಷ್ಯಾದಿಂದ ಹುಟ್ಟೂರಿಗೆ ಬಂತು ಯುವಕನ ಶವ!

    ಬರೋಬ್ಬರಿ 6 ತಿಂಗಳ ನಂತ್ರ ಮಲೇಷ್ಯಾದಿಂದ ಹುಟ್ಟೂರಿಗೆ ಬಂತು ಯುವಕನ ಶವ!

    ಮೈಸೂರು: ಸರಿಸುಮಾರು 6 ತಿಂಗಳ ಹಿಂದೆ ಮಲೇಷ್ಯಾದಲ್ಲಿ ಮೃತಪಟ್ಟ ಯುವಕನ ಮೃತದೇಹ ಇದೀಗ ಹುಟ್ಟೂರಿಗೆ ಬಂದಿದೆ.

    ಹೌದು. ಪಿರಿಯಾಪಟ್ಟಣದ ನಿವಾಸಿ ಸುಮಂತ್(22) ಮಲೇಷ್ಯಾದಲ್ಲಿ ಡಿಸೆಂಬರ್ ತಿಂಗಳಲ್ಲಿ ನಿಗೂಢವಾಗಿ ಮೃತಪಟ್ಟಿದ್ದನು. ಇದೀಗ ಆತನ ಮೃತದೇಹ ಆರು ತಿಂಗಳ ನಂತರ ತವರೂರಿಗೆ ಬಂದಿದ್ದು, ಕೊನೆಗೂ ಮಗನ ಅಂತ್ಯಕ್ರಿಯೆ ನೆರವೇರಿಸಿ ತಾಯಿ ಸಮಾಧಾನಪಟ್ಟುಕೊಂಡಿದ್ದಾರೆ.

    ಸುಮಂತ್ ಕೆಲಸಕ್ಕಾಗಿ ಮಲೇಷ್ಯಾಕ್ಕೆ ತೆರಳಿದ್ದನು. 35 ಸಾವಿರ ರೂ. ಸಂಬಳ ಕೊಡಿಸುವುದಾಗಿ ನಂಬಿಸಿ ಮಧ್ಯವರ್ತಿಯೊಬ್ಬ ಕರೆದೊಯ್ದಿದ್ದನು. ಆದರೆ ಆ ಬಳಿಕ ಕೇವಲ 18 ಸಾವಿರ ರೂ. ಕೆಲಸ ಕೊಡಿಸಿ ಮಧ್ಯವರ್ತಿ ವಂಚನೆ ಮಾಡಿದ್ದನು. ಇದರಿಂದ ಮನನೊಂದಿದ್ದ ಸುಮಂತ್, ವಾಪಸ್ ಬರುವುದಾಗಿ ತಾಯಿ ಬಳಿ ಹೇಳಿಕೊಂಡಿದ್ದ. ಅಷ್ಟರಲ್ಲೇ ಸುಮಂತ್ ಮೃತಪಟ್ಟಿರುವುದಾಗಿ ಆತನ ಸಹೋದ್ಯೋಗಿಗಳು ತಿಳಿಸಿದ್ದ.

    ಇತ್ತ ಮಗನ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ಸುಮಂತ್ ಪೋಷಕರು ಸಾವಿನ ತನಿಖೆ ಹಾಗೂ ಶವ ತರಿಸಿಕೊಳ್ಳಲು ಸಂಸದ ಪ್ರತಾಪ್‍ಸಿಂಹಗೆ ಮನವಿ ಮಾಡಿದ್ದರು. ಅಂತೆಯೇ ಸಂಸದರು ಭಾರತದ ರಾಯಭಾರಿ ಕಚೇರಿಗೆ ಮಾಹಿತಿ ಕೂಡ ನೀಡಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಸುಮಂತ್ ಮೃತದೇಹ ಆರು ತಿಂಗಳ ಬಳಿಕ ತಡವಾಗಿ ಆಗಮಿಸಿದೆ.

  • ಕರೆದಾಕ್ಷಣ ನೈಟ್ ಡ್ಯೂಟಿಗೆ ಬರದ್ದಕ್ಕೆ ಶಾಸಕನಿಂದ ದೂರು- ವೈದ್ಯೆ ವೀಣಾಸಿಂಗ್ ಸ್ಪಷ್ಟನೆ

    ಕರೆದಾಕ್ಷಣ ನೈಟ್ ಡ್ಯೂಟಿಗೆ ಬರದ್ದಕ್ಕೆ ಶಾಸಕನಿಂದ ದೂರು- ವೈದ್ಯೆ ವೀಣಾಸಿಂಗ್ ಸ್ಪಷ್ಟನೆ

    ಬೆಂಗಳೂರು/ಮೈಸೂರು: ಕರೆದಾಕ್ಷಣ ಮನೆಗೆ ಚಿಕಿತ್ಸೆ ನೀಡಲು ಬಂದಿಲ್ಲವೆಂದು ಆರೋಪಿಸಿ ವೈದ್ಯೆ ಡಾ. ವೀಣಾಸಿಂಗ್ ವಿರುದ್ಧ ಜೆಡಿಎಸ್ ಶಾಸಕ ಕೆ. ಮಹದೇವ್ ದೂರು ದಾಖಲಿಸಿದ್ದಾರೆ. ವೈದ್ಯೆ ಡಾ. ವೀಣಾ ಸಿಂಗ್ ಅವರು ನಡೆದ ಘಟನೆಯ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.

    ಸೆಪ್ಟೆಂಬರ್ 18 ರಂದು ನಾನು ತುರ್ತು ನಿಗಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಸುಮಾರು 100 ಹಾಸಿಗೆಗಳಿರುವ ಆಸ್ಪತ್ರೆಯಲ್ಲಿ ನಾನೊಬ್ಬಳೇ ಅಂದು ಹಾಜರಾಗಿದ್ದೆ. ಇದೇ ದಿನ ಸಂಜೆ 5.30ಕ್ಕೆ ಹೆರಿಗೆ ರೋಗಿಯೊಬ್ಬರು ದಾಖಲಾಗಿದ್ದರು. ಅಲ್ಲದೇ 8.45ರ ಸುಮಾರಿಗೆ ಅಪಘಾತದಿಂದ ಗಾಯಗೊಂಡು ಮೂವರಿಗೆ ಚಿಕಿತ್ಸೆ ನೀಡುತ್ತಿದ್ದೆ.

    ಇದೇ ಸಮಯದಲ್ಲಿ ಹೆರಿಗೆಗೆ ಆಗಮಿಸಿದ್ದ ರೋಗಿಯೊಬ್ಬರಿಗೆ ನೋವು ಕಾಣಿಸಿಕೊಂಡಿತ್ತು. ನಾನು ಅವರಿಗೆ ಹೆರಿಗೆ ಕೊಠಡಿಯಲ್ಲಿ ಚಿಕಿತ್ಸೆ ನೀಡುತ್ತಿದ್ದೆ. ಈ ವೇಳೆ ಆಸ್ಪತ್ರೆ ಸಿಬ್ಬಂದಿ ಗಿರಿಜಾ ಎಂಬವರು ಬಂದು, ಎಂಎಲ್‍ಎ ಅವರಿಗೆ ಹುಷಾರಿಲ್ಲ ಎಂದು ಆಟೋ ಚಾಲಕರೊಬ್ಬರು ಬಂದಿದ್ದಾರೆ ಎಂದು ಹೇಳಿದರು. ಕೂಡಲೇ ನಾನು ಅವರ ಬಳಿ ಹೋಗಿ ವಿಚಾರಿಸಿದಾಗ, ಆಟೋ ಚಾಲಕ ಶಾಸಕರಿಗೆ ಹುಷಾರಿಲ್ಲ ಬೇಗ ನನ್ನ ಜೊತೆ ಬನ್ನಿ ಎಂದು ಹೇಳಿದರು.

    ಆದರೆ ಆಸ್ಪತ್ರೆಯಲ್ಲಿ ಹೆರಿಗೆ ರೋಗಿ ಹಾಗೂ ಅಪಘಾತದಿಂದ ಗಾಯಗೊಂಡಿದ್ದವರಿಗೆ ನಾನು ಚಿಕಿತ್ಸೆ ನೀಡುತ್ತಿದ್ದೆ. ಹೀಗಾಗಿ ಶಾಸಕರ ಆರೋಗ್ಯ ತಪಾಸಣೆಗೆ ಹೋಗಲು ನಾನು ಕೂಡಲೇ ನಮ್ಮ ಮೆಡಿಕಲ್ ಆಫೀಸರ್ ಗೆ ಕರೆ ಮಾಡಿ ವಿಚಾರಿಸಿದೆ. ಅವರು ಆಟೋ ಚಾಲಕನೊಂದಿಗೆ ಮಾತನಾಡಲು ಫೋನ್ ಕೊಡಿ ಎಂದು ಹೇಳಿದರು. ಆದರೆ ಆರೋಗ್ಯಾಧಿಕಾರಿಯ ಜೊತೆ ಮಾತನಾಡಲು ಆಟೋ ಚಾಲಕ ನಿರ್ಲಕ್ಷ್ಯಿಸಿ, ಶಾಸಕರನ್ನು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿನಿ ಎಂದು ತರಾತುರಿಯಲ್ಲಿ ಹೊರಟು ಹೋದರು. ಇದನ್ನೂ ಓದಿ: ಕರೆದಾಕ್ಷಣ `ನೈಟ್ ಡ್ಯೂಟಿ’ಗೆ ಬಾರದ ವೈದ್ಯೆ ವಿರುದ್ಧ ಜೆಡಿಎಸ್ ಶಾಸಕ ದೂರು!

    ಶಾಸಕರಿಗೆ ಹುಷಾರಿಲ್ಲ ಅವರು ಆಸ್ಪತ್ರೆಗೆ ಬರುತ್ತಾರೆಂದು ತಿಳಿದು, ನಾನು ಹಾಗೂ ಆಸ್ಪತ್ರೆಯ ಸಿಬ್ಬಂದಿ ಐಸಿಯು ಅನ್ನು ಸಿದ್ಧಪಡಿಸಿಕೊಂಡು ಅವರಿಗಾಗಿ ಕಾಯುತ್ತಿದ್ದೆವು. ಆದರೆ ಆಟೋ ಚಾಲಕ ಶಾಸಕ ಅನಾರೋಗ್ಯದ ತೀವ್ರತೆಯ ಬಗ್ಗೆ ನನಗೆ ನಿಖರವಾದ ಯಾವುದೇ ಮಾಹಿತಿ ನೀಡಿರಲಿಲ್ಲ. ಇದಾದ ನಂತರ ಸೆಪ್ಟೆಂಬರ್ 19 ರಂದು ಸ್ಥಳೀಯ ಪತ್ರಿಕೆಗಳಲ್ಲಿ ಶಾಸಕರ ಆರೋಗ್ಯ ವಿಚಾರಿಸದ ವೈದ್ಯೆ ಎಂದು ಪ್ರಕಟಿಸಿದ್ದಾಗ, ನನಗೆ ಶಾಸಕರ ಆರೋಗ್ಯದ ತೀವ್ರತೆಯ ಬಗ್ಗೆ ಅರಿವಾಯಿತು ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್ ಶಾಸಕನೊಂದಿಗೆ ಕಿರಿಕ್- ಡಾ.ವೀಣಾಸಿಂಗ್ ಪಿರಿಯಾಪಟ್ಟಣದಿಂದ ಎತ್ತಂಗಡಿ?

    ಇದಾದ ಕೂಡಲೇ ಅದೇ ದಿನ ಸಂಜೆ ನಮ್ಮ ಹಿರಿಯ ಅಧಿಕಾರಿಗಳು, ನೋಡಲ್ ಅಧಿಕಾರಿಗಳೊಂದಿಗೆ ಶಾಸಕರ ಮನೆಗೆ ಹೋಗಿ ನಡೆದ ಅಚಾತುರ್ಯದ ಬಗ್ಗೆ ವಿವರಿಸಿದೆವು. ಅಲ್ಲದೇ ಆಸ್ಪತ್ರೆಯಲ್ಲಿನ ರೋಗಿಗಳ ಬಗ್ಗೆಯೂ ಮಾಹಿತಿ ನೀಡಿದೆವು. ಆದರೆ ಶಾಸಕರು ನಮ್ಮ ಮಾತನ್ನು ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ, ಅಲ್ಲದೇ ಅವರು ಈ ಬಗ್ಗೆ ನನ್ನ ವಿರುದ್ಧ ದೂರನ್ನು ನೀಡಿದ್ದಾರೆ. ಪುನಃ ನಾನು ಅವರನ್ನು ಭೇಟಿ ಮಾಡಿದಾಗ ಅವರು ದಾಖಲಿಸಿರುವ ದೂರನ್ನು ವಾಪಸ್ ಪಡೆದುಕೊಳ್ಳುತ್ತೇನೆ ಎಂದು ಹೇಳಿದರೇ ಹೊರತು, ಕ್ಷಮಾಪಣಾ ಪತ್ರ ನೀಡುವಂತೆ ಹೇಳಿರಲಿಲ್ಲ ಎಂದು ಸ್ಪಷ್ಟನೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=LsbzC-2HiOA

     

  • ರೋಹಿಣಿ ಸಿಂಧೂರಿ ವಿಚಾರವನ್ನು ಕೇಳಿದ್ದಕ್ಕೆ ಹಾದಿಬೀದಿಯಲ್ಲಿ ಚರ್ಚೆ ಮಾಡೋಕ್ಕಾಗಲ್ಲ ಎಂದ ಸಿಎಂ

    ರೋಹಿಣಿ ಸಿಂಧೂರಿ ವಿಚಾರವನ್ನು ಕೇಳಿದ್ದಕ್ಕೆ ಹಾದಿಬೀದಿಯಲ್ಲಿ ಚರ್ಚೆ ಮಾಡೋಕ್ಕಾಗಲ್ಲ ಎಂದ ಸಿಎಂ

    ಮೈಸೂರು: ಆಡಳಿತಾತ್ಮಕ ವಿಚಾರವನ್ನ ಬೀದಿಯಲ್ಲಿ ನಿಂತು ಮಾತನಾಡೋಲ್ಲ ಎಂದು ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗಿ ಪ್ರತಿಕ್ರಿಯಿಸಿದ್ದಾರೆ.

    ನಗರದ ಪಿರಿಯಾಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರವು ಮಾಡಿಸುತ್ತೇವೆ. ವರ್ಗಾವಣೆಗೆ ತಡೆಯಾಜ್ಞೆ ತಂದಿದ್ದರಿಂದ ನಮಗೆ ಮುಜುಗರ ಆಗಿಲ್ಲ. ಇದರಲ್ಲಿ ಮುಜುಗರ ಆಗುವ ಪ್ರಶ್ನೆಯೂ ಇಲ್ಲ ಅಂತ ಹೇಳಿದ್ದಾರೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರದಲ್ಲಿ ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗ

    ಬಿಜೆಪಿ, ಜೆಡಿಎಸ್ ಮೋದಿ ಎಲ್ಲರಿಗೂ ನಾನೇ ಟಾರ್ಗೆಟ್ ಆಗಿದ್ದೇನೆ. ಚುನಾವಣೆ ವೇಳೆ ದೇವೇಗೌಡರು ಬಂದು ಅಳ್ತಾರೆ ಅವರ ಮಾತು ಕೇಳಬೇಡಿ. ಕುಮಾರಸ್ವಾಮಿ ಬಂದು ಏನೇನೋ ಹೇಳ್ತಾರೆ ಅವರ ಮಾತು ನಂಬಬೇಡಿ. ಯಡಿಯೂರಪ್ಪ, ಶೋಭ ಕರಂದ್ಲಾಜೆ, ಅಮಿತ್ ಶಾ ಇವರೆಲ್ಲರಿಗೂ ನಾನೆ ಟಾರ್ಗೆಟ್ ಆಗಿದ್ದೀನಿ. ಹೀಗಾಗಿ ನೀವು ನನ್ನ ಕೈ ಹಿಡಿಯಬೇಕು. ಚುನಾವಣೆಯಲ್ಲಿ ನನ್ನ ಜೊತೆ ಇರಬೇಕು ಎಂದು ತಿಳಿಸಿದ್ದಾರೆ.

    ಮೋದಿಯಂತಹ ಸುಳ್ಳಗಾರ ಇನ್ನೊಬ್ಬರಿಲ್ಲ. 60 ವರ್ಷದಲ್ಲಿ ಇಂತಹ ಸುಳ್ಳು ಹೇಳುವ ಪ್ರಧಾನಿ ದೇಶಕ್ಕೆ ಸಿಕ್ಕಿರಲಿಲ್ಲ. ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಲೆವೆಲ್‍ಗೆ ಮೋದಿ ಇಳಿದಿದ್ದಾರೆ. ಮೋದಿ ಡೀಲ್ ಮಾಡಿಕೊಂಡಿದ್ದಾರೆ. ಹೀಗಾಗಿ ನೀರವ್ ಮೋದಿ, ಮಲ್ಯ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಮೋದಿ ಕುಮ್ಮಕ್ಕಿನಿಂದ ಇವರು ದೇಶ ಬಿಟ್ಟಿದ್ದಾರೆ ಎಂದಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

    ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಸಂಬಂಧ ಮಾತನಾಡಿದ ಅವರು, ಸಂಪುಟದಲ್ಲಿ ವಿಚಾರ ಚರ್ಚೆಗೆ ಬಂತು. ಸಮಯದ ಅಭಾವದಿಂದ ಚರ್ಚೆ ಮುಗಿದಿಲ್ಲ. ಈ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಸಂಪುಟದಲ್ಲಿ ಇಲ್ಲ. ಎಲ್ಲರು ಚರ್ಚೆಗೆ ಮಾಡಿದ್ರು. ಆದರೆ ಇನ್ನಷ್ಟು ಚರ್ಚೆಗೆ ಸಮಯ ಇರಲಿಲ್ಲ. ಹಾಗಾಗಿ ಲಿಂಗಾಯತ ಧರ್ಮದ ವಿಚಾರವನ್ನ ಮುಂದೂಡಿದ್ದೇವೆ ಅಂದ್ರು.

    ನಾಡಧ್ವಜವೇ ಬೇರೆ, ಕನ್ನಡ ಬಾವುಟವೇ ಬೇರೆ. ಕನ್ನಡ ಧ್ವಜ ಬಳಸುವಂತೆ ನಾಡಧ್ವಜ ಬಳಸುವಂತಿಲ್ಲ. ನಾಡ ಧ್ವಜಕ್ಕೆ ರಾಷ್ಟ್ರಧ್ವಜದಂತೆ ನೀತಿ ನಿಯಮ ಇರಲಿವೆ. ಹೋರಾಟಗಾರರು ಎಂದಿನಂತೆ ಕನ್ನಡ ಧ್ವಜ ಬಳಸಬಹುದು. ಆದ್ರೆ ನಾಡಧ್ವಜ ಬಳಕೆಯನ್ನ ಸರ್ಕಾರಿ ಕಾರ್ಯಕ್ರಮಗಳಲ್ಲಿ ಹಾಗೂ ರಾಜ್ಯೋತ್ಸವದಲ್ಲಿ ಬಳಸಬೇಕು. ಈ ಬಗ್ಗೆ ಕೇಂದ್ರ ಒಪ್ಪಿಗೆ ಕೊಟ್ಟ ಮೇಲೆ ಎಲ್ಲಾ ನೀತಿ ನಿಯಮ ಜಾರಿಯಾಗಲಿದೆ. ನಾಡಧ್ವಜಕ್ಕೆ ವಾಟಾಳ್ ನಾಗರಾಜ್ ಬಿಟ್ಟು ಇನ್ಯಾರ ವಿರೋಧವು ಇಲ್ಲ. ಎಲ್ಲರು ನಾಡಧ್ವಜವನ್ನ ಒಪ್ಪಿದ್ದಾರೆ ಅಂತ ಸಿಎಂ ತಿಳಿಸಿದ್ರು.