Tag: ಪಿಯಾನೋ

  • ಪಿಯಾನೋ ನುಡಿಸುತ್ತಾ ಹಾಡಲು ಪ್ರಯತ್ನಿಸುತ್ತಿರುವ ನಾಯಿ – ವೀಡಿಯೋ ಎಂಜಾಯ್ ಮಾಡುತ್ತಿರುವ ನೆಟ್ಟಿಗರು

    ಪಿಯಾನೋ ನುಡಿಸುತ್ತಾ ಹಾಡಲು ಪ್ರಯತ್ನಿಸುತ್ತಿರುವ ನಾಯಿ – ವೀಡಿಯೋ ಎಂಜಾಯ್ ಮಾಡುತ್ತಿರುವ ನೆಟ್ಟಿಗರು

    ಸೋಶಿಯಲ್ ಮೀಡಿಯಾದಲ್ಲಿ ದಿನದಿಂದ ದಿನಕ್ಕೆ ಒಂದೊಂದು ವೀಡಿಯೋ ವೈರಲ್ ಆಗುತ್ತಿರುತ್ತೆ. ಅದರಲ್ಲಿಯೂ ಪ್ರಾಣಿಗಳ ತರಲೆ, ತಮಾಷೆ, ಮಾಲೀಕರ ಜೊತೆ ಸಾಕುಪ್ರಾಣಿಗಳು ನಡೆದುಕೊಳ್ಳುವ ರೀತಿ ಎಲ್ಲವನ್ನು ಜನರು ತುಂಬಾ ಆನಂದಿಸುತ್ತಾರೆ. ಅದೇ ರೀತಿ ನಾಯಿ ಪಿಯಾನೋ ನುಡಿಸುತ್ತ ಹಾಡಲು ಪ್ರಯತ್ನಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜನರನ್ನು ಆಕರ್ಷಿಸುತ್ತಿದೆ. ಈ ವೀಡಿಯೋ ಸಖತ್ ವೈರಲ್ ಆಗುತ್ತಿದೆ.

    ನಾಯಿಗಳ ಮತ್ತು ಸಾಕುಪ್ರಾಣಿಗಳ ಆಟೋಟಗಳು ಮಾಲೀಕರಿಗೆ ರಿಲ್ಯಾಕ್ಸ್ ಕೊಡುತ್ತೆ. ಸಾಕುಪ್ರಾಣಿಗಳು ಇದ್ರೆ ಅವುಗಳ ಆಟವನ್ನು ನೋಡಿಕೊಳ್ಲುತ್ತ ಮಾಲೀಕರು ಎಲ್ಲವನ್ನು ಮರೆಯುತ್ತಾರೆ. ಅದೇ ರೀತಿ ಇಲ್ಲೊಂದು ನಾಯಿ ಮನೆಯಲ್ಲಿ ಪಿಯಾನೋ ನುಡಿಸುತ್ತಿರುವ ದೃಶ್ಯವನ್ನು ಮಾಲೀಕರು ಫೋನ್‍ನಲ್ಲಿ ಚಿತ್ರಿಸಿದ್ದಾರೆ. ಈ ವೀಡಿಯೋವನ್ನು @dogsofinstagram  ಶೇರ್ ಮಾಡಿಕೊಂಡಿದೆ. ವೀಡಿಯೋದಲ್ಲಿ ನಾಯಿ ಎರಡು ಕಾಲಿನ ಮೇಲೆ ನಿಂತುಕೊಂಡು ತನ್ನ ಇನ್ನೆರೆಡು ಕೈಗಳನ್ನು ಪಿಯಾನೋ ಮೇಲೆ ಇಟ್ಟು ಕೂಗುತ್ತಿದೆ. ಇದನ್ನೂ ಓದಿ: ಮೊದಲ ದಿನದಿಂದ ಗೆಲುವು ಸ್ಪಷ್ಟವಾಗಿದೆ: ಯುಪಿ ಡಿಸಿಎಂ ಸೋಲಿಸಿದ ಪಲ್ಲವಿ ಪಟೇಲ್

    ವೀಡಿಯೋ ಶೇರ್ ಮಾಡಿದ @dogsofinstagram, ನನ್ನ ನಾಯಿ ಸಾಂಗ್ ಹಾಡಲು ಮತ್ತು ಪಿಯಾನೋ ನುಡಿಸಲು ಇಷ್ಟಪಡುತ್ತೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ಫುಲ್ ಖುಷ್ ಆಗಿದ್ದಾರೆ. ಅದರಲ್ಲಿಯೂ ಈ ವೀಡಿಯೋದಲ್ಲಿ ನಾಯಿ ರಿಯಾಕ್ಷನ್ ಸಖತ್ ಆಗಿದೆ.

    ಈ ವೀಡಿಯೋಗೆ 50,000ಕ್ಕೂ ಹೆಚ್ಚು ಲೈಕ್ ಸಿಕ್ಕಿದೆ. ನಾಯಿಯ ಚೇಷ್ಟೆಗಳನ್ನು ಪ್ರೀತಿಸಿದ ನೆಟ್ಟಿಗರು ಸಂತೋಷಗೊಂಡಿದ್ದಾರೆ. ಶ್ವಾನ ಪ್ರೇಮಿಗಳು ಕಾಮೆಂಟ್‍ಗಳಲ್ಲಿ ಲವ್ ಎಮೋಜಿಗಳನ್ನು ಕಳುಹಿಸುತ್ತಿದ್ದಾರೆ. ಅದರಲ್ಲಿಯೂ ಕೆಲವರು, ಈ ಪ್ರತಿಭಾವಂತ ಕಲಾವಿದನ ಇಡೀ ವರ್ಷದ ಸಂಗೀತ ಕಚೇರಿ ಟಿಕೆಟ್‍ಗಳನ್ನು ಖರೀದಿಸಲು ನಾನು ಸಿದ್ಧ ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು, ಇದು ಅತ್ಯುತ್ತಮವಾಗಿದೆ ಎಂದು ತಮಾಷೆ ಮಾಡಿದರು. ಇದನ್ನೂ ಓದಿ: ಡಾ.ಪುನೀತ್ ರಾಜ್‍ಕುಮಾರ್ ನೆನೆದು ಗುಣಗಾನ ಮಾಡಿದ ಪ್ರಿಯಾಂಕ್ ಖರ್ಗೆ 

    ಓಹ್ ನನ್ನ ಗುಡ್ನೆಸ್ ಇದು ತುಂಬಾ ಸ್ವೀಟ್ ವೀಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ. ನಾಯಿಯು ಮನೆಯ ಸಂಗೀತಗಾರನಾಗಿರುವ ಆ ಕ್ಷಣ… ಎಂದು ಬರೆದು ಕಾಮೆಂಟ್ ಮಾಡಿದ್ದು, ವೀಡಿಯೋ ನೆಟ್ಟಿಗರಿಗೆ ಸಖತ್ ಇಷ್ಟವಾಗುತ್ತಿದೆ.

  • ಮೊಮ್ಮಗಳಿಗೆ ಪಿಯಾನೋ ನುಡಿಸುವುದನ್ನು ಹೇಳಿಕೊಟ್ಟ ಇಳಯರಾಜ

    ಮೊಮ್ಮಗಳಿಗೆ ಪಿಯಾನೋ ನುಡಿಸುವುದನ್ನು ಹೇಳಿಕೊಟ್ಟ ಇಳಯರಾಜ

    ಚೆನ್ನೈ: ಯುವನ್ ಶಂಕರ್ ರಾಜಾ ಇತ್ತೀಚೆಗೆ ತಮ್ಮ ತಂದೆ ಇಳಯರಾಜ ಮತ್ತು ಮಗಳು ಜಿಯಾ ವೀಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    ವೀಡಿಯೋದಲ್ಲಿ ಇಳಯರಾಜ ಪಿಯಾನೋವನ್ನು ಜಿಯಾಗೆ ಹೇಗೆ ನುಡಿಸಬೇಕೆಂದು ಕಲಿಸಿಕೊಡುತ್ತಿರುತ್ತಾರೆ. ಈ ವೇಳೆ ಪಿಯಾನೋ ನುಡಿಸುತ್ತಿದ್ದಂತೆಯೇ ಜಿಯಾ ಬೇರೆ ಕಡೆಗೆ ಬೇಗ ಗಮನ ಹರಿಸುತ್ತಾಳೆ. ಈ ವೀಡಿಯೋಗೆ ಶ್ರುತಿ ಹಾಸನ್, ವಿಜಯ್ ಯೇಸುದಾಸ್ ಸೇರಿದಂತೆ ಅನೇಕ ಮಂದಿ ಕಾಮೆಂಟ್ ಮಾಡುವ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ಯುವನ್ ಶಂಕರ್ ಇಳಯರಾಜಾ ಮೊಮ್ಮಗಳು ಜಿಯಾ ಜೊತೆ ಕಾಲಕಳೆಯುತ್ತಿರುವ ಮುದ್ದಾದ ವೀಡಿಯೋವೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ಇಳಯಾರಾಜ ಜಿಯಾ ಅವರೊಟ್ಟಿಗೆ ಟ್ಯೂನ್‍ವೊಂದನ್ನು ನುಡಿಸಿದ್ದಾರೆ. ಈ ಸುಂದರವಾದ ಕ್ಷಣವನ್ನು ಯುವನ್ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ.

    ವೀಡಿಯೋದಲ್ಲಿ ಜಿಯಾ ಪಿಯಾನೊ ನುಡಿಸಲು ಪ್ರಯತ್ನಿಸುತ್ತಿದ್ದ ವೇಳೆ ಇಳಯರಾಜ ಅವರು, ಅವಳನ್ನು ಮೇಜಿನ ಮೇಲೆ ನಿಲ್ಲಲು ಸಹಾಯ ಮಾಡುತ್ತಾರೆ. ಬಳಿಕ ಅವಳಿಗೆ ಪಿಯಾನೋ ನುಡಿಸುವುದನ್ನು ಹೇಳಿಕೊಡಲು ಮುಂದಾದಾಗ ಜಿಯಾ ಮೇಜಿನ ಮೇಲೆ ಇಟ್ಟಿರುವ ಕಲಾಕೃತಿಯೊಂದಿಗೆ ಆಟ ಆಡುವುದನ್ನು ಕಾಣಬಹುದಾಗಿದೆ.

     

    View this post on Instagram

     

    A post shared by U1 (@itsyuvan)

  • ಕಣ್ಣಿಲ್ಲದಿದ್ರೂ ಅಪೂರ್ವವಾದ ಪ್ರತಿಭೆಯ ಪಿಯಾನೋ ಟ್ಯೂನ್‍ಗೆ ನಿಖಿಲ್ ಫಿದಾ

    ಕಣ್ಣಿಲ್ಲದಿದ್ರೂ ಅಪೂರ್ವವಾದ ಪ್ರತಿಭೆಯ ಪಿಯಾನೋ ಟ್ಯೂನ್‍ಗೆ ನಿಖಿಲ್ ಫಿದಾ

    ಹಾಸನ: ನಟ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿದ್ದು, ಆಗಾಗ ಪತ್ನಿ ರೇವತಿ ಜೊತೆಗಿರುವ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇದೀಗ ನಿಖಿಲ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.  ಇದನ್ನೂ ಓದಿ: ಮಡದಿ ಮಾತಿಗೆ ತಲೆಯಾಡಿಸಿ ನಸು ನಕ್ಕ ಅಭಿಮನ್ಯು

    ನಟ ನಿಖಿಲ್ ಪಿಯಾನೋ ವಿಶ್ವನಾಥ್ ಅವರ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಶ್ವನಾಥ್ ಅವರು ನಿಖಿಲ್‍ಗಾಗಿ ಪಿಯಾನೋ ಟ್ಯೂನ್ ನುಡಿಸಿದ್ದು, ಅವರ ನುಡಿಸಿದ ಟ್ಯೂನ್‍ಗೆ ನಿಖಿಲ್ ಫಿದಾ ಆಗಿದ್ದಾರೆ.

    “ಕಣ್ಣಿಲ್ಲದಿದ್ದರೂ ಅಪೂರ್ವವಾದ ಪ್ರತಿಭೆಯಾಗಿರುವ ವಿಶ್ವನಾಥ್ ಅವರು ಹಾಸನದ ಈಜಿಪುರದವರಂತೆ. ಇಂದು ಆಕಸ್ಮಿಕವಾಗಿ ಇವರ ಭೇಟಿಯಾಯಿತು. ಇವರು ಇಂಪಾಗಿ ಪಿಯಾನೋ ನುಡಿಸುವುದನ್ನು ಕೇಳಿ ಸಂತೋಷವಾಯಿತು. ದೈಹಿಕ ನ್ಯೂನತೆಗಳಿದ್ದರೂ ಸಾಧಿಸುವ ಛಲವಿರುವವರಿಗೆ ಯಾವುದು ಅಡ್ಡಿಯಾಗುವುದಿಲ್ಲ. ಇವರ ಸಾಧನೆ ವಿಕಲಚೇತನರಿಗೆ ಮಾತ್ರ ಅಲ್ಲ ಎಲ್ಲರಿಗೂ ಸ್ಫೂರ್ತಿಯಾಗುವಂತದ್ದು” ಎಂದು ಬರೆದುಕೊಂಡಿದ್ದಾರೆ.

    ಇತ್ತೀಚೆಗೆ ನಿಖಿಲ್ ತಮ್ಮ ಪತ್ನಿ ಅಡುಗೆ ಮಾಡುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ನಂತರ ತಮ್ಮ ಪತ್ನಿ ರೇವತಿಯ ಮಾತಿಗೆ ನಿಖಿಲ್ ತಲೆಯಾಡಿಸಿ ನಕ್ಕಿರುವ ಒಂದು ಸುಂದರ ವಿಡಿಯೋವನ್ನು ಹಂಚಿಕೊಂಡಿದ್ದರು. ಅಭಿಮಾನಿಗಳು ಕೂಡ ಅವರಿಬ್ಬರ ವಿಡಿಯೋವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

    ಸದ್ಯಕ್ಕೆ ನಿಖಿಲ್ ಈಗ ರಿಲ್ಯಾಕ್ಸ್ ಮೂಡಿನಲ್ಲಿದ್ದು, ಹಾಸನದ ಖಾಸಗಿ ರೆಸಾರ್ಟಿನಲ್ಲಿ ಕುಟುಂಬ ಸಮೇತ ವಾಸ್ತವ್ಯ ಹೂಡಿದ್ದಾರೆ. ಕಳೆದ ಎರಡು ದಿನಗಳಿಂದ ಹಾಸನದ ಬೇಲೂರು ರಸ್ತೆಯಲ್ಲಿರುವ ಖಾಸಗಿ ರೆಸಾರ್ಟಿನಲ್ಲಿ ನಿಖಿಲ್ ತಮ್ಮ ಪತ್ನಿ ರೇವತಿ, ತಾಯಿ ಅನಿತಾ ಮತ್ತು ತಂದೆ ಕುಮಾರಸ್ವಾಮಿ ಜೊತೆ ವಾಸ್ತವ್ಯ ಮಾಡಿದ್ದಾರೆ.

    https://www.instagram.com/p/CFZYXuwJMlO/?utm_source=ig_embed

    ಬಹುದಿನಗಳ ಬಳಿಕ ನಿಖಿಲ್ ಮತ್ತೆ ಸಿನಿಮಾ ಕಡೆ ಮುಖ ಮಾಡಿದ್ದು, ‘ರೈಡರ್’ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಿದ್ಧರಾಗಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಪೋಸ್ಟರ್ ಸಹ ರಿಲೀಸ್ ಆಗಿದ್ದು, ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಖ್ಯಾತ ನಿರ್ದೇಶಕ ವಿಜಯ್ ಕುಮಾರ್ ಕೊಂಡ ಆಕ್ಷನ್ ಕಟ್ ಹೇಳುತ್ತಿದ್ದಾರೆ.

  • ಅಭಿಮಾನಿಗಾಗಿ ಪಿಯಾನೋ ನುಡಿಸಿದ ಕಿಚ್ಚ ಸುದೀಪ್

    ಅಭಿಮಾನಿಗಾಗಿ ಪಿಯಾನೋ ನುಡಿಸಿದ ಕಿಚ್ಚ ಸುದೀಪ್

    ಬೆಂಗಳೂರು: ನಟ ಕಿಚ್ಚ ಸುದೀಪ್ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದು, ತಮ್ಮ ಆಪ್ತ ನಟ, ನಟಿಯರು, ತಂತ್ರಜ್ಞರ ಜನ್ಮದಿನದ ಸಂದರ್ಭದಲ್ಲಿ ವಿಶೇಷವಾಗಿ ಶುಭಾಶಯ ಕೋರುತ್ತಾರೆ. ಇದೀಗ ತಮ್ಮ ಆಪ್ತ ಸಹಾಯಕರೊಬ್ಬರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರುವ ಮೂಲಕ ಸುದೀಪ್ ಗಮನ ಸೆಳೆದಿದ್ದಾರೆ.

    ನಟ ಸುದೀಪ್ ತಮ್ಮ ಆಪ್ತ ಸಹಾಯಕ ಮಹದೇವ್ ಅವರ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಮಹದೇವ್ ಹುಟ್ಟುಹಬ್ಬ ಮೇ 31ರಂದು ಇತ್ತು. ಅಂದು ಸುದೀಪ್ ಪಿಯಾನೋ ನುಡಿಸುವ ಮೂಲಕ ಮಹದೇವ್‍ಗೆ ಬರ್ತ್ ಡೇ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋವನ್ನು ಸುದೀಪ್ ಟ್ವಿಟ್ಟರಿನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮೊದಲಿಗೆ ವಿಡಿಯೋದಲ್ಲಿ ಸುದೀಪ್, ಈಗ ನಾನು ಏನೋ ಪ್ಲೇ ಮಾಡುತ್ತಿದ್ದೀನಿ. ನನಗೆ ಬೇಕಾಗಿರುವ, ನನ್ನೊಟ್ಟಿಗಿರುವ ಮಹದೇವ್ ಹುಟ್ಟುಹಬ್ಬ. ನಮ್ಮ ಮಹದೇವ್‍ಗೋಸ್ಕರ ಇದು ಎಂದು ಸುದೀಪ್, ಕೀಬೋರ್ಡ್ ನಲ್ಲಿ ‘ಹ್ಯಾಪಿ ಬರ್ತ್ ಡೇ ಟೂ ಯೂ’ ಟ್ಯೂನ್ ನುಡಿಸಿದ್ದಾರೆ.

    ಈ ವಿಡಿಯೋದಲ್ಲಿ ಸುದೀಪ್ ಪಕ್ಕದಲ್ಲಿಯೇ ಮಹದೇವ್ ನಿಂತಿರುವುದನ್ನು ಕಾಣಬಹುದಾಗಿದೆ. ಕೀ ಬೋರ್ಡ್ ನುಡಿಸಿದ ಬಳಿಕ ಸುದೀಪ್, ‘ಹ್ಯಾಪಿ ಬರ್ತ್ ಡೇ ಮಹದೇವ್’ ಎಂದು ಅವರನ್ನು ಶುಭಾಶಯ ಕೋರಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಇತ್ತೀಚೆಗಷ್ಟೆ ನಟ ಸುದೀಪ್ ತಮ್ಮ ಮಗಳ ಹುಟ್ಟುಹಬ್ಬದಂದು “ನಿನ್ನೆ ಮೊನ್ನೆ ಇದ್ದ ಹಾಗಿದೆ. ಹೇಗಪ್ಪಾ ನಂಬೋದು ನನ್ನ ಮಗಳಿಗೀಗ ಹದಿನಾರು ವರುಷ. ನೀ ಇಟ್ಟ ಅಂಬೆಗಾಲು, ಮುದ್ದಾದ ಮೊದಲುಗಳು, ಕೂಡಿಟ್ಟಿರುವೆ ನಾ ಒಂದೊಂದು ನಿಮಿಷ. ಎದೆಯೆತ್ತರ ಬೆಳೆದಿರೋ ಕನಸು ನೀನು. ನಿನ್ನಿಂದಲೇ ಕಲಿಯುವ ಕೂಸು ನಾನು. ಆಸೆ ಬುರುಕ ಅಪ್ಪ ನಾನು, ಮತ್ತೆ ಮಗುವಾಗು ನೀನು” ಎಂದು ಬರೆದು ಮಗಳ ಸವಿನೆನಪಿನ ಫೋಟೋಗಳನ್ನು ಹಂಚಿಕೊಂಡಿದ್ದರು.