Tag: ಪಿಪಿಇ ಕಿಟ್

  • ಚೀನಾದಿಂದ ಪಿಪಿಇ ಕಿಟ್‌ ತರಿಸಿ ಸಾವಿರಾರು ಕೋಟಿ ಲೂಟಿ – ರಾಮುಲು, ಬಿಎಸ್‌ವೈ ವಿರುದ್ಧ ಸಿಎಂ ಬಾಂಬ್‌

    ಚೀನಾದಿಂದ ಪಿಪಿಇ ಕಿಟ್‌ ತರಿಸಿ ಸಾವಿರಾರು ಕೋಟಿ ಲೂಟಿ – ರಾಮುಲು, ಬಿಎಸ್‌ವೈ ವಿರುದ್ಧ ಸಿಎಂ ಬಾಂಬ್‌

    – ಹೆಣ ಹೂಳುವುದರಲ್ಲೂ ಹಣ ಲೂಟಿ ಹೊಡೆದ್ರು ಎಂದ ಸಿದ್ದರಾಮಯ್ಯ

    ಬಳ್ಳಾರಿ: ಬಿಜೆಪಿ ಸರ್ಕಾರ ಇದ್ದಾಗ ಕೋವಿಡ್ ವೇಳೆ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ದೇಶದಲ್ಲೇ ಅಗತ್ಯ ವಸ್ತುಗಳು ಸಿಕ್ಕರೂ ಚೀನಾದಿಂದ ಪಿಪಿಇ ಕಿಟ್‌ ತರಿಸಿ ಲೂಟಿ ಹೊಡೆದರು. ಆಗ ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದರು, ಶ್ರೀರಾಮುಲು ಮಂತ್ರಿ ಆಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಾಂಬ್‌ ಸಿಡಿಸಿದ್ದಾರೆ.

    ಮೆಟ್ರಿಕಿ‌ ಗ್ರಾಮದಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು ಬಳ್ಳಾರಿ (Bellary) ಜಿಲ್ಲೆ ಸಂಡೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಪರ ಮತಯಾಚನೆ ನಡೆಸಿದರು. ಬಳಿಕ ಮಾತನಾಡಿ, ಸಂಡೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್‌ನ ಭದ್ರ ಕೋಟೆ. ಕಾಂಗ್ರೆಸ್ ಪಕ್ಷ (Congress Party) ಯಾವತ್ತಿಗೂ ಕೂಡ ಬಡವರ ಪರ, ದೀನದಲಿತರ ಪರ, ಅಲ್ಪಸಂಖ್ಯಾತರು, ಮಹಿಳೆಯರ ಪರ ಇರುವ ಸರ್ಕಾರ. ನೆಹರು, ಇಂದಿರಾ ಗಾಂಧಿ, ರಾಜೀವ್‌ ಗಾಂಧಿ, ಮನಮೋಹನ್ ಸಿಂಗ್ ಕಾಲದಿಂದಲೂ ಬಡವರ ಪರ ಇರುವ ಸರ್ಕಾರ. ಭಾರತ ದೇಶ ಆಹಾರದಲ್ಲಿ ಸ್ವಾಲಂಭಿ ಆಗಿದೆ, ಅಂದ್ರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಬೀಗಿದರು. ಇದನ್ನೂ ಓದಿ: ಸಂಡೂರು ಅಖಾಡದಲ್ಲಿ ಪ್ರಚಾರ – 15 ದಿನದಲ್ಲಿ ಸಿದ್ದರಾಮಯ್ಯ ರಾಜೀನಾಮೆ : ಬಿಎಸ್‌ವೈ

    ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಕಾಲದಲ್ಲಿ ಹಸಿರು ಕ್ರಾಂತಿ ಮಾಡಿದ್ರು. ಆಗ ಭಾರತ ದೇಶವನ್ನ ಆಹಾರದಲ್ಲಿ ಸ್ವಾಲಂಬಿಯನ್ನಾಗಿ ಮಾಡಿದ್ರು. ಬಿಜೆಪಿ ಅಂದ್ರೆ ಕೇವಲ ಮೇಲ್ವರ್ಗದ ಪಕ್ಷ. ಬಡವರ ಪರ, ರೈತರ ಪರವಾದ ಸರ್ಕಾರ ಬಿಜೆಪಿ ಅಲ್ಲಾ. ಬಿಜೆಪಿಯವರು ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದರೂ ಬಡವರಿಗೋಸ್ಕರ ಏನೂ ಕೆಲಸ ಮಾಡಿಲ್ಲ. ಅಧಿಕಾರ ಕೊಟ್ರು ಏನು ಕೆಲಸ ಮಾಡಿಲ್ಲ. ಆದ್ರೆ ಕಾಂಗ್ರೆಸ್‌ ಅನ್ನಭಾಗ್ಯ, ಕೃಷಿ ಭಾಗ್ಯ, ಮೈತ್ರಿ, ಮನಸ್ವಿನಿ, ಮಾತೃಪೂರ್ಣ, ರೈತರ ಸಾಲ ಮನ್ನಾ ಹತ್ತು ಹಲವು ಕಾರ್ಯಕ್ರಮಗಳನ್ನ ಮಾಡಿದೆ. ಯಡಿಯೂರಪ್ಪ ಕೇವಲ ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ ಅಂತಾ ಹೇಳ್ತಾರೆ. ಇವೆರಡನ್ನ ಬಿಟ್ಟು ಉಳಿದಿದ್ದೆಲ್ಲವನ್ನ ಲೂಟಿ ಮಾಡಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ರೈತ ವಿರೋಧಿ, ಹಿಂದೂ ವಿರೋಧಿ ಧೋರಣೆ ಕಾಂಗ್ರೆಸ್ಸಿಗೆ ಶಾಪವಾಗಲಿದೆ – 3 ಕ್ಷೇತ್ರಗಳಲ್ಲೂ ನಮ್ಮದೇ ಗೆಲುವು: ವಿಜಯೇಂದ್ರ

    ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ಎಷ್ಟು ಲೂಟಿ ಹೊಡೆದಿದ್ದಾರೆ ಅಂದ್ರೆ, ಹೆಣ ಹೂಳುವುದರಲ್ಲೂ ಹಣ ಲೂಟಿ ಹೊಡೆದಿದ್ದಾರೆ. ಶ್ರೀರಾಮುಲು ಆಗ ಮಂತ್ರಿ ಇದ್ದರು, ಯಡಿಯೂರಪ್ಪ ಸಿಎಂ ಆಗಿದ್ದರು. ಚೀನಾಕ್ಕೆ ಹೋಗಿ ಪಿಪಿಇ ಕಿಟ್ ತಂದ್ರು. ದೇಶದಲ್ಲಿ ವಸ್ತು ಸಿಗುತ್ತಿದ್ದರೂ ಚೀನಾದಿಂದ ತಂದು ಭ್ರಷ್ಟಾಚಾರ ಮಾಡಿದ್ರು. ಅದರಲ್ಲಿ ಕೋಟಿ ಕೋಟಿ ಹಣ ಲೂಟಿ ಹೊಡೆದಿದ್ದಾರೆ. ಭ್ರಷ್ಟಾಚಾರ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು. ಇವರ ಮೇಲೆ ಕ್ರಮಕ್ಕೆ ಶಿಪಾರಸ್ಸು ಮಾಡಿದ್ದಾರೆ. ಯಡಿಯೂರಪ್ಪ, ಶ್ರೀರಾಮುಲು ಭ್ರಷ್ಟಾಚಾರ ಲೂಟಿ ಮಾಡೋದು ಬಿಟ್ರೆ ಏನೂ ಮಾಡಿಲ್ಲ. ಜನಾರ್ದನ ರೆಡ್ಡಿ ಚುನಾವಣೆ ಉಸ್ತುವಾರಿ ತೆಗೆದುಕೊಂಡಿದ್ದಾರೆ. ಲೂಟಿ ಹೊಡೆದವರಿಗೆ ಮನ್ನಣೆ ನೀಡಬೇಡಿ ಎಂದು ಕರೆ ಕೊಟ್ಟರು. ಇದನ್ನೂ ಓದಿ: ರಾಜ್ಯದಲ್ಲಿ 423 ಆಸ್ತಿಗೆ ವಕ್ಫ್‌ ನೋಟಿಸ್‌ – ಯಾವ ಜಿಲ್ಲೆಯಲ್ಲಿ ನೋಟಿಸ್‌ ಹಿಂದಕ್ಕೆ ಪಡೆಯಲಾಗಿದೆ?

    ಅಂದು ಅಕ್ರಮ ಗಣಿ ಬಗ್ಗೆ ಸಂತೋಷ ಹೆಗಡೆ ವರದಿ ಹಿನ್ನಲೆ ಪಾದಯಾತ್ರೆ ಮಾಡಿದೆ. ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಸಂತೋಷ ಹೆಗಡೆ ವರದಿ ನೀಡಿದ್ರು. ಈ ವರದಿಯ ಸದನದಲ್ಲಿ ಪ್ರಸ್ತಾಪಿಸಿದ ಹಿನ್ನಲೆ ನನ್ನ ಮೇಲೆ ಹೊಡೆಯಲು ಬಂದ್ರು, ಅಗ ಪಾದಯಾತ್ರೆ ಮಾಡಿದೆವು. ಆಗ ಬಳ್ಳಾರಿಯಿಂದ ಹೊರಗೆ ಹೋದವರು ಈಗ ಬಳ್ಳಾರಿಗೆ ಬಂದಿದ್ದಾರೆ. ಜನಾರ್ದನ ರೆಡ್ಡಿ ಶೋಷಣೆ ಜನರಿಗೆ ಗೊತ್ತಿದೆ. ನನ್ನ ಬಗ್ಗೆ ಮಾತನಾಡಲು ಯಾವ ಯೋಗ್ಯತೆಯೂ ಅವರಿಗೆ ಇಲ್ಲ. ಜನಾರ್ದನ ರೆಡ್ಡಿ ಒಮ್ಮೆ ಮಂತ್ರಿಯಾಗಿ ಇಡೀ ರಾಜ್ಯ ಲೂಟಿ ಹೊಡೆದ್ರು. ಈಗ ನನ್ನ ಮೇಲೆಯೇ ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರನನ್ನು ಬಳಸಿಕೊಂಡು ಕೇಸ್ ಹಾಕಿಸಿದ್ದಾರೆ ಎಂದು ಗುಡುಗಿದರು.

  • ಕೋವಿಡ್ ಕಾಲದಲ್ಲಿ ಪಿಪಿಇ ಕಿಟ್ ಖರೀದಿ ಅಕ್ರಮ – ಕಿದ್ವಾಯಿ ಆಸ್ಪತ್ರೆಯ ಆರ್ಥಿಕ ಸಲಹೆಗಾರ ಅಮಾನತು

    ಕೋವಿಡ್ ಕಾಲದಲ್ಲಿ ಪಿಪಿಇ ಕಿಟ್ ಖರೀದಿ ಅಕ್ರಮ – ಕಿದ್ವಾಯಿ ಆಸ್ಪತ್ರೆಯ ಆರ್ಥಿಕ ಸಲಹೆಗಾರ ಅಮಾನತು

    ಬೆಂಗಳೂರು: ಕೋವಿಡ್ (COVID-19) ಸಮಯದಲ್ಲಿ ಪಿಪಿಇ ಕಿಟ್ (PPE Kits) ಸೇರಿ ಹಲವು ಸಾಮಗ್ರಿ ಖರೀದಿಯಲ್ಲಿ ಅಕ್ರಮ ನಡೆದಿರುವ ಹಿನ್ನಲೆ ಕಿದ್ವಾಯಿ ಆಸ್ಪತ್ರೆಯ (Kidwai Memorial Grant Institute) ಆರ್ಥಿಕ ಸಲಹೆಗಾರ ಜಿ.ಟಿ ರಘು (G.T. Raghu) ಅವರನ್ನು ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.

    ಸರ್ಕಾರದ ಅನುಮೋದನೆ ಇಲ್ಲದೇ ಪಿಪಿಇ ಕಿಟ್ ಹಾಗೂ ಸಾಮಾಗ್ರಿಗಳನ್ನ ಖರೀದಿ ಮಾಡಲಾಗಿದೆ. ಖರೀದಿಸಿರುವ ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆಯಾಗಿದೆ. ನಿಯಮ ಉಲ್ಲಂಘನೆ ಆಗಿರುವುದು ತನಿಖಾ ವರದಿಯಲ್ಲಿ ಸ್ಪಷ್ಟವಾಗಿದೆ ಎಂದು ತನಿಖಾ ಸಮಿತಿ ನೀಡಿದ ವರದಿಯ ಆಧಾರದ ಮೇಲೆ ಅವರನ್ನು ಅಮಾನತು ಮಾಡಲಾಗಿದೆ. ಇದನ್ನೂ ಓದಿ: ಕಾಂತರಾಜು ಸಮಿತಿ ವರದಿಗೆ ಆಗ್ರಹ – ಅ.18ರ ಸಂಪುಟ ಸಭೆಯಲ್ಲಿ ಚರ್ಚಿಸಿ ತೀರ್ಮಾನ: ಸಿಎಂ

    ಈ ಬಗ್ಗೆ ಎಕ್ಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಪೋಸ್ಟ್ ಮಾಡಿರುವ ಅವರು, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆ, ಬೆಂಗಳೂರು ಇದರ ಆರ್ಥಿಕ ಸಲಹೆಗಾರರಾಗಿರುವ ಜಿ.ಟಿ.ರಘು ಅವರು ಈ ಹಿಂದೆ ವೈದ್ಯಕೀಯ ಶಿಕ್ಷಣ ಇಲಾಖೆಯ ನಿರ್ದೇಶನಾಲಯದಲ್ಲಿ ಆರ್ಥಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಸರ್ಕಾರದ ಅನುಮೋದನೆ ಇಲ್ಲದೆ ಪಿಪಿಇ ಕಿಟ್ ಹಾಗೂ ಇತರೆ ಸಾಮಾಗ್ರಿಗಳನ್ನು ಖರೀದಿಸಿರುವ ಮತ್ತು ಟೆಂಡರ್ ಪ್ರಕ್ರಿಯೆಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿರುವುದರಿಂದ ಇವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 2026ರ ವೇಳೆಗೆ ಸಂಪೂರ್ಣ ನಕ್ಸಲಿಸಂ ಮಟ್ಟ ಹಾಕಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು: ಅಮಿತ್‌ ಶಾ

  • N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    N95 ಮಾಸ್ಕ್‌ಗೆ 22, ಸರ್ಜಿಕಲ್ ಮಾಸ್ಕ್‌ಗೆ-4, ಪಿಪಿಇ ಕಿಟ್‍ಗೆ 273 ರೂ.!

    – ಕೇರಳ ಸರ್ಕಾರದಿಂದ ದರ ನಿಗದಿಗೊಳಿಸಿ ಆದೇಶ

    ತಿರುವನಂತಪುರಂ: ಕೋವಿಡ್ ಹರಡುವಿಕೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಅವಶ್ಯಕವಾದ ವಸ್ತುಗಳ ಬೆಲೆ ನಿಗದಿಗೊಳಿಸಿ ಆದೇಶ ಹೊರಡಿಸಿದೆ.

    ಯಾವುದಕ್ಕೆ ಎಷ್ಟು?: ಪಿಪಿಇ ಕಿಟ್‍ಗಳನ್ನು ಗರಿಷ್ಠ 273 ರೂಪಾಯಿಗೆ ಮಾತ್ರ ಮಾರಾಟ ಮಾಡಬಹುದು. ಒಂದು ಎನ್95 ಮಾಸ್ಕ್‌ಗೆ 22 ರೂ., ಸರ್ಜಿಕಲ್ ಮಾಸ್ಕ್‌ಗೆ 3 ರೂಪಾಯಿ 90 ಪೈಸೆ ಎಂದು ನಿಗದಿಗೊಳಿಸಲಾಗಿದೆ.

    ಅಲ್ಲದೆ ಕೋವಿಡ್ ಹರಡುವಿಕೆ ನಿಯಂತ್ರಿಸಲು ಬಳಸುವ ಸ್ಯಾನಿಟೈಸರ್ ಮಾರಾಟಕ್ಕೂ ದರ ನಿಗದಿಗೊಳಿಸಲಾಗಿದ್ದು, ಅರ್ಧ ಲೀಟರ್ ಸ್ಯಾನಿಟೈಸರ್‍ಗೆ ಗರಿಷ್ಠ 192 ರೂ. ಮಾತ್ರ ಪಡೆಯಬಹುದು. ಕೋವಿಡ್ ವೇಗವಾಗಿ ಹರಡುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಜನಸಾಮಾನ್ಯರಿಗೂ ಕೈಗೆಟಕುವ ದರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ವಸ್ತುಗಳನ್ನು ದೊರಕಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ನೀಡಿದ ನಿರ್ದೇಶನದನ್ವಯ ಕೇರಳ ಸರ್ಕಾರ ಈ ದರ ನಿಗದಿಗೊಳಿಸಿದೆ.

    ಪಿಪಿಇ ಕಿಟ್-273, ಎನ್95 ಮಾಸ್ಕ್ – 22 ರೂ., ಟ್ರಿಪಲ್ ಲೇಯರ್ ಮಾಸ್ಕ್- 3.90 ರೂ., ಫೇಸ್ ಶೀಲ್ಡ್-21 ರೂ., ಡಿಸ್ಪೋಸೇಬಲ್ ಏಪ್ರನ್-12 ರೂ., ಸರ್ಜಿಕಲ್ ಗೌನ್- 65 ರೂ., ಎಕ್ಸಾಮಿನೇಷನ್ ಗ್ಲೌಸ್- 5.75 ರೂ., ಹ್ಯಾಂಡ್ ಸ್ಯಾನಿಟೈಸರ್ (500 ಎಂಎಲ್) – 192 ರೂ., ಹ್ಯಾಂಡ್ ಸ್ಯಾನಿಟೈಸರ್ (200 ಎಂಎಲ್) – 98 ರೂ., ಹ್ಯಾಂಡ್ ಸ್ಯಾನಿಟೈಸರ್ (100 ಎಂಎಲ್) – 55 ರೂ., ಸ್ಟೆರೈಲ್ ಗ್ಲೌಸ್ (1 ಜೊತೆ) – 12 ರೂ., ಎನ್‌ಆರ್‌ಬಿ ಮಾಸ್ಕ್ – 80 ರೂ., ಹ್ಯೂಮಿಡಿಫೈರ್ ಫ್ಲೋ ಮೀಟರ್-1520 ರೂ., ಫಿಂಗರ್ ಟಿಪ್ ಪಲ್ಸ್ ಆಕ್ಸಿಮೀಟರ್- 1500 ರೂ.

  • 15 ಗಂಟೆ ಪಿಪಿಇ ಕಿಟ್ ಧರಿಸಿದ ವೈದ್ಯನ ಫೋಟೋ ವೈರಲ್- ವೈದ್ಯ ಹೇಳಿದ್ದೇನು ಗೊತ್ತಾ?

    15 ಗಂಟೆ ಪಿಪಿಇ ಕಿಟ್ ಧರಿಸಿದ ವೈದ್ಯನ ಫೋಟೋ ವೈರಲ್- ವೈದ್ಯ ಹೇಳಿದ್ದೇನು ಗೊತ್ತಾ?

    ನವದೆಹಲಿ: ಮಾಸ್ಕ್ ಧರಿಸಲು ನಿರ್ಲಕ್ಷ್ಯವಹಿಸೋರೆಲ್ಲಾ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಎಲ್ಲವನ್ನು ಧರಿಸಿ ಜನರ ಪ್ರಾಣ ಉಳಿಸಲು ಹಗಲಿರುಳು ದುಡಿಯುತ್ತಿರುವ ಕೊರೊನಾ ವಾರಿಯರ್ಸ್‍ರನ್ನು ನೆನಪಿಸುವ ಒಂದು ಘಟನೆ ನಡೆದಿದೆ.

    14-15 ಗಂಟೆಗಳ ಕಾಲ ಸತತ ಪಿಪಿಇ ಕಿಟ್  ಧರಿಸಿದ್ದರಿಂದ ಮೈಯೆಲ್ಲಾ ಬೇವರಿನಿಂದ ತೇವವಾಗಿರುವ ಘೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈದ್ಯರು ಹೇಗೆ ಪ್ರತಿದಿನ ರಿಸ್ಕ್ನಲ್ಲೇ ಕೆಲಸ ಮಾಡುತ್ತಿದ್ದಾರೆ ಎಂದು ವೈದ್ಯ ಸೋಹಿಲ್ ಪಿಪಿಇ ಕಿಟ್ ಧರಿಸಿದಾಗ ಮತ್ತು ತೆಗೆದಾಗಿನ 2 ಫೋಟೋಗಳನ್ನು ಹಾಕಿದ್ದರು.

    ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯ ಪರವಾಗಿ ನಾನು ಹೇಳುತ್ತಿದ್ದೇನೆ. ನಾವು ನಮ್ಮ ಕುಟುಂಬಗಳಿಂದ ದೂರವಿದ್ದು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ. ಕೆಲವೊಮ್ಮೆ ಕೊರೊನಾ ರೋಗಿಗಳಿಂದ ಒಂದು ಅಡಿ ಅಂತರದಲ್ಲೇ ಇದ್ದರೆ ಇನ್ನೂ ಕೆಲವೊಮ್ಮೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಂದ ಒಂದಿಂಚು ದೂರ ನಿಂರತುಕೊಂಡೇ ಕಾರ್ಯನಿರ್ವಹಿಸುತ್ತೇವೆ. ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ನಾನು ಮನವಿ ಮಾಡುತ್ತೇನೆ. ಸುರಕ್ಷಿತವಾಗಿರಿ ಎಂದು ವೈದ್ಯ ಸೋಹಿಲ್ ಟ್ವೀಟ್ ಮಾಡಿ ಮನವಿ ಮಾಡಿದ್ದಾರೆ.

  • ಪಿಪಿಇ ಕಿಟ್ ಧರಿಸಿ 13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಖದೀಮ!

    ಪಿಪಿಇ ಕಿಟ್ ಧರಿಸಿ 13 ಕೋಟಿ ಮೌಲ್ಯದ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ ಖದೀಮ!

    ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭ ಬಳಸುತ್ತಿದ್ದ ಪಿಪಿಇ ಕಿಟ್ ಅನ್ನು ಕಳ್ಳತನಕ್ಕೆ ಬಳಸಿಕೊಂಡ ಖದೀಮನೊಬ್ಬ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಆಧಾರದ ಮೇಲೆ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಪಶ್ಚಿಮ ಬಂಗಾಳ ಮೂಲದ ಶೇಖ್ ನೂರ್ ರೇಹಮಾನ್ (25) ಎಂದು ಗುರುತಿಸಲಾಗಿದೆ. ಈತ ಪಿಪಿಇ ಕಿಟ್ ಧರಿಸಿ ಆಭರಣ ಅಂಗಡಿಯೊಂದರ ಒಳಗೆ ನುಗ್ಗಿ 20 ಕೋಟಿ ರೂಪಾಯಿ ಬೆಲೆಬಾಳುವ ಚಿನ್ನ ಹಾಗೂ ನಗದನ್ನು ಕದ್ದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದರ ಬೆನ್ನತ್ತಿದ ಪೊಲೀಸರು ರೇಹಮಾನ್‍ನ್ನು ಘಟನೆ ನಡೆದು ಒಂದು ದಿನದ ಒಳಗಾಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ಪೊಲೀಸರು ತನಿಖೆ ನಡೆಸಿದ ವೇಳೆ ರೇಹಮಾನ್ 3ನೇ ಮಹಡಿಲ್ಲಿದ್ದ ಸ್ಟೋರ್ ರೂಮ್‍ನ ಬೀಗ ಒಡೆದು ಅದರ ಮೂಲಕ ಅಂಗಡಿ ಪ್ರವೇಶಿಸಿರುವುದು ತಿಳಿದು ಬಂದಿದೆ. ಈ ಕಳ್ಳತನದ ಹಿಂದೆ ಇದೇ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಲೆಕ್ಟ್ರಿಷನ್ ಒಬ್ಬರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ನಂತರ ಕದ್ದ ಚಿನ್ನಾಭರಣಗಳೆಲ್ಲಾ ಕರೋಲ್ ಬಾಗ್‍ನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಶೇಖ್ ನೂರ್ ರೆಹಮಾನ್ ಹಲವು ಸಾಮಾಜಿಕ ಜಾಲತಾಣಗದಲ್ಲಿ ಖಾತೆಯನ್ನು ಹೊಂದಿದ್ದಾನೆ. ಈತ ಈ ಹಿಂದೆ ಪದವಿ ವ್ಯಾಸಂಗವನ್ನು ಅರ್ಧದಲ್ಲಿ ನಿಲ್ಲಿಸಿ ಆಭರಣ ಅಂಗಡಿಯೊಂದರಲ್ಲಿ 2 ವರ್ಷ ಕೆಲಸ ಮಾಡುತ್ತಿದ್ದ. ಹಾಗೆ ಕಳ್ಳತನಕ್ಕೆ ಬಳಸುವ ಆಯುಧಗಳಾದ ಪ್ರೆಶರ್ ಕಟ್ಟರ್, ಗ್ಯಾಸ್ ಕಟ್ಟರ್, ಅಲೆನ್ ಕೀ ಮತ್ತು ಸ್ಕ್ರೂಡ್ರೈವರ್ ಬಳಕೆಯ ಬಗ್ಗೆ ಉತ್ತಮ ತಿಳುವಳಿಕೆ ಹೊಂದಿದ್ದ ಮತ್ತು ಕಳ್ಳತನದ ಮುಂಚೆ ಸರಿಯಾದ ಸ್ಕೆಚ್ ಹಾಕಿದ್ದ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಈತ ವಾಸವಿದ್ದ ಕೊಠಡಿಗೆ ತೆರಳಿ ಪೊಲೀಸರು ನೋಡಿದಾಗ ಕಳ್ಳತನಕ್ಕೆ ಬಳಸಿದ್ದ ಪ್ರೆಶರ್ ಕಟ್ಟರ್, ಗ್ಯಾಸ್ ಕಟ್ಟರ್, ಅಲೆನ್ ಕೀ ಮತ್ತು ಸ್ಕ್ರೊಡೈವರ್ ಮತ್ತು 20 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.

  • ಸಮಯಕ್ಕೆ ಸರಿಯಾಗಿ ಊಟವಿಲ್ಲ, ಉಸಿರುಗಟ್ಟಿಸುತ್ತೆ ಪಿಪಿಇ ಕಿಟ್- ಇದು ವಾರಿಯರ್ಸ್ ದುಃಸ್ಥಿತಿ

    ಸಮಯಕ್ಕೆ ಸರಿಯಾಗಿ ಊಟವಿಲ್ಲ, ಉಸಿರುಗಟ್ಟಿಸುತ್ತೆ ಪಿಪಿಇ ಕಿಟ್- ಇದು ವಾರಿಯರ್ಸ್ ದುಃಸ್ಥಿತಿ

    ಬೆಂಗಳೂರು: ಕೊರೊನಾ ವಾರಿಯರ್ಸ್ ತಮ್ಮ ಜೀವನದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲೂ ಮೊಬೈಲ್ ಯುನಿಟ್ ಗಳಲ್ಲಿ ಕರ್ತವ್ಯ ನಿರ್ವಹಿಸುವ ವಾರಿಯರ್ಸ್ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿರುತ್ತದೆ. ಈ ವಿಚಾರ ಪಬ್ಲಿಕ್ ಟಿವಿ ನಡೆಸಿದ ರಿಯಾಲಿಟಿ ಚೆಕ್ ವೇಳೆ ಬಯಲಾಗಿದೆ.

    ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ವಾರಿಯರ್ಸ್ ಗೆ ಸಮಯಕ್ಕೆ ಸರಿಯಾಗಿ ಊಟ ಇಲ್ಲ. ಅಲ್ಲದೆ ಪಿಪಿಐ ಕಿಟ್ ಉಸಿರುಗಟ್ಟಿಸುತ್ತೆ. ದಿನಕ್ಕೆ 6 ರಿಂದ 8 ಗಂಟೆ ಪಿಪಿಇ ಕಿಟ್ ಧರಿಸಿಯೇ ಇರುವಂತಹ ಸ್ಥಿತಿ, ಮೊಬೈಲ್ ಟೆಸ್ಟಿಂಗ್ ಯುನಿಟ್‍ನಲ್ಲಿರೋ ವಾರಿಯರ್ಸ್ ಗೆ ಎದುರಾಗಿದೆ. ಗುಣಮಟ್ಟದ ಪಿಪಿಇ ಕಿಟ್ ಸಿಗದೇ ಕೊರೊನಾ ವಾರಿಯರ್ಸ್ ಗೆ ಆತಂಕ ಉಂಟಾಗಿದೆ.

    ಸ್ಥಳ: ಕೆ.ಆರ್ ಮಾರುಕಟ್ಟೆ
    ಪ್ರತಿನಿಧಿ – ಪಿಪಿಇ ಕಿಟ್ ಹೆಂಗಿದೆ ಮೇಡಂ
    ವಾರಿಯರ್ – 4-6 ಗಂಟೆ ಹಾಕಿಕೊಂಡು ಇರುವುದು ಕಷ್ಟವಾಗುತ್ತದೆ. ಮತ್ತೆ ಡ್ಯೂಟಿ ಮಾಡೊದು 8 ಗಂಟೆ ಆಗುತ್ತದೆ.
    ಪ್ರತಿನಿಧಿ – ರೆಸ್ಟ್ ರೂಂ ಯೂಸ್ ಮಾಡಬೇಕಾದಾಗ?
    ವಾರಿಯರ್ – ರೆಸ್ಟ್ ರೂಂ ತುಂಬಾನೆ ಕಷ್ಟ ಆಗುತ್ತದೆ. ಸಾರ್ವಜನಿಕ ಶೌಚಾಲಯ ಯೂಸ್ ಮಾಡ್ತಾ ಇರೊದು.. ಸ್ಟಾಫ್ ಗೆ ಅಂತ ಕೊಟ್ಟಿದ್ದರೆ ಚೆನ್ನಾಗಿ ಇರುತ್ತಿತ್ತು.
    ಪ್ರತಿನಿಧಿ – ಪಿಪಿಇ ಕಿಟ್ ಸೇಫಾ ಅಲ್ಲ? ಒಳ್ಳೆಯ ಕ್ವಾಲಿಟಿ ಪಿಪಿಇ ಕಿಟ್ ಬೇಕು ಅಂತ?
    ವಾರಿಯರ್ – ಕೊಡಬಹುದಾಗಿತ್ತು…ಎರಡ್ ಎರಡ್ ಬಾರಿ ಇದನ್ನೇ ಹಾಕಿ…
    ಪ್ರತಿನಿಧಿ – ಎಲ್ಲರ ಕಷ್ಟ ನೋಡ್ತೀರಾ?
    ವಾರಿಯರ್ – ಹೌದು.. ನಮ್ ಕಷ್ಟನೂ ನೋಡಬೇಕಿತ್ತಲ್ವ ?
    ಪ್ರತಿನಿಧಿ – ನೀರ್ ಬಿದ್ರೆ ಒಳಗೆ ಹೋಗುತ್ತಾ?
    ವಾರಿಯರ್ – ಸದ್ಯ ಇದ್ ಕಾಟನ್.. ಏನ್ ಆಗುತ್ತೆ ನೋಡಬೇಕು.. ಸ್ವಲ್ಪ ಭಯ ಆಗುತ್ತದೆ.. ಅದು ವಾಟರ್ ಪ್ರೂಪ್…

    ಸ್ಥಳ: ಶ್ರೀನಗರ ಬಸ್ ನಿಲ್ದಾಣ
    ಪ್ರತಿನಿಧಿ – ಕಿಟ್ ಕಂಫರ್ಟ್ ಇದೆಯಾ..?
    ವಾರಿಯರ್ – 5 ಗಂಟೆ ಹಾಕಿಕೊಳ್ಳಬೇಕು.
    ಪ್ರತಿನಿಧಿ – ಬೇವರು ಬರೊದು, ಬೇರೆ ಏನಾದ್ರೂ ತೊಂದರೆ ಇದೆಯಾ..?
    ವಾರಿಯರ್ – ಇದು ಕಾಟನ್ ಪರವಾಗಿಲ್ಲ, ಇನ್ನೊಂದು ಇದೆ ಅದು ಸ್ಟೆಟ್ ಆಗುತ್ತದೆ..
    ಪ್ರತಿನಿಧಿ – ಹೇಗಿದೆ..?
    ವಾರಿಯರ್ – ಪಿಪಿಇ ಕಿಟ್ ನಲ್ಲಿ ಎರಡ್ ಬಗೆ ಇದೆ..
    ಪ್ರತಿನಿಧಿ – ಇದು ಪರವಾಗಿಲ್ಲ, ಇನ್ನೊಂದ್ ಉಸಿರಾಡಲು ಆಗಲ್ಲ .. ಕಷ್ಟ ಆಗುತ್ತದೆ..
    ವಾರಿಯರ್ – ತುಂಬಾ ಭಾರ ಎನ್ನಿಸುತ್ತದೆ.. ಹೆವಿ ಅನ್ನಿಸುತ್ತದೆ.. ಕಷ್ಟ ಇದು..

    ಇದು ಕೊರೊನಾ ವಿರುದ್ಧ ಹೋರಾಟ ಮಾಡುವವರ ಕಷ್ಟವಾಗಿದೆ. ಮೊಬೈಲ್ ಕೋವಿಡ್ ಟೆಸ್ಟ್ ಸೆಂಟರಿನಲ್ಲಿರುವ ಕೊರೊನಾ ವಾರಿಯರ್ಸ್ ಗೆ ಬಿಬಿಎಂಪಿ ರಕ್ಷಣೆ ಕೊಡಲ್ಲ. ಜನಜಂಗುಳಿಯಲ್ಲಿ ನಿಂತು ಕೋವಿಡ್ ಟೆಸ್ಟ್ ಮಾಡಿಸುತ್ತಾರೆ. ಈ ಮೂಲಕ ಇದೇನಾ ಕೊರೊನಾ ವಿರುದ್ಧ ಹೋರಾಟ ಎಂಬ ಪ್ರಶ್ನೆ ಹುಟ್ಟಿದೆ. ಬಿಬಿಎಂಪಿ ಇನ್ನಷ್ಟು ಒಳ್ಳೆಯ ಕ್ವಾಲಿಟಿ ಕಿಟ್ ಕೊಡಬಹುದಿತ್ತು. ಒಟ್ಟಿನಲ್ಲಿ ಶೌಚಾಲಯ ಸಮಸ್ಯೆ, ಪಿಪಿಇ ಕಿಟ್ ಕ್ವಾಲಿಟಿ ಚಾಲೆಂಜ್ ಆಗಿದೆ.

  • ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆ

    ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆ

    ಬೆಂಗಳೂರು: ಆನೇಕಲ್ ತಾಲೂಕಿನ ಹುಸ್ಕೂರು ರಸ್ತೆಯ ಪಕ್ಕದಲ್ಲಿ ನೂರಾರು ಲೀಟರ್ ಹಾಲಿನ ಪ್ಯಾಕೆಟ್‍ಗಳು ಪತ್ತೆಯಾಗಿದೆ.

    ಹಾಲಿನ ಪ್ಯಾಕೆಟ್ ಜೊತೆಗೆ ಮೂಟೆಯಲ್ಲಿ ಪಿಪಿಇ ಕಿಟ್‍ಗಳು ಕೂಡ ಪತ್ತೆಯಾಗಿವೆ. ಆನೇಕಲ್ ತಾಲೂಕಿನ ಹುಸ್ಕೂರು ಆರ್‌ಟಿಒ ಕಚೇರಿ ಮುಂದೆ ಹಾಲಿನ ಪಾಕೆಟ್‍ಗಳು ಪತ್ತೆಯಾಗಿವೆ. ನಂದಿನಿ, ಅಕ್ಷಯಕಲ್ಪ ಕಂಪನಿಯ ಹಾಲಿನ ಪ್ಯಾಕೆಟ್‍ಗಳು ಬಿದ್ದಿವೆ. ರಸ್ತೆಯ ಪಕ್ಕದಲ್ಲಿ ಬಿದ್ದಿರುವುದರಿಂದ ವಾಸನೆ ಬರುತ್ತಿದ್ದು, ಸಾರ್ವಜನಿಕರಿಗೆ ಓಡಾಡಲು ಪರದಾಡುತ್ತಿದ್ದಾರೆ.

    ಹಾಲಿನ ಪ್ಯಾಕೆಟ್‍ಗಳ ಮೇಲೆ 9ನೇ ಡೇಟ್ ಇದೆ. ಆದರೆ ಇಷ್ಟೊಂದು ಹಾಲಿನ ಪ್ಯಾಕೆಟ್‍ಗಳು ಎಲ್ಲಿಂದ ಬಂದವು ಎನ್ನುವುದೇ ಪ್ರಶ್ನೆಯಾಗಿದೆ. ಅಲ್ಲದೇ ಎರಡು ದಿನದಿಂದ ರಸ್ತೆಯ ಪಕ್ಕದಲ್ಲೇ ಹಾಲಿನ ಪ್ಯಾಕೆಟ್‍ಗಳು ಬಿದ್ದಿವೆ. ಆದರೂ ಬಿಬಿಎಂಪಿ ಸಿಬ್ಬಂದಿ ಮಾತ್ರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

    ಪಿಪಿಇ ಕಿಟ್ ಜೊತೆಗೆ ಹಾಲಿನ ಪ್ಯಾಕೆಟ್‍ಗಳು ಎಲ್ಲಿಂದ ಬಂದವು. ನೂರಾರು ಲೀಟರ್ ಹಾಲನ್ನು ಈ ರೀತಿ ಬಿಡಸಾಡಲು ಕಾರಣ ಏನು ಎಂಬುದು ತಿಳಿದುಬಂದಿದೆ.

  • ಪಿಪಿಇ ಕಿಟ್ ಧರಿಸಿ ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

    ಪಿಪಿಇ ಕಿಟ್ ಧರಿಸಿ ಮಗಳಿಂದ ತಂದೆಯ ಅಂತ್ಯ ಸಂಸ್ಕಾರ

    ಚಿಕ್ಕಮಗಳೂರು: ಕೊರೊನಾದಿಂದ ಮೃತಪಟ್ಟ ತಂದೆಯ ಅಂತ್ಯ ಸಂಸ್ಕಾರವನ್ನು ನಾನೇ ಮಾಡಬೇಕೆಂದು ಹಠ ಹಿಡಿದು ಮಗಳೇ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಯಲ್ಲಿ ನಡೆದಿದೆ.

    ಬೆಂಗಳೂರಿನ ಬಿಡದಿಯ ಟೊಯೋಟಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ವ್ಯಕ್ತಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಕೊನೆಗೆ ಕೊರೋನಾ ಚಿಕಿತ್ಸೆಯಲ್ಲಿರುವಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದರು.

    ಬೆಂಗಳೂರಿನಲ್ಲಿ ಕೊರೊನಾ ಹೆಚ್ಚಾಗಿ ವ್ಯಾಪಿಸುತ್ತಿದ್ದರಿಂದ ಇತ್ತೀಚಿಗಷ್ಟೆ ಊರಿಗೆ ಬಂದಿದ್ದ ಕುಟುಂಬ ಇಬ್ಬರು ಹೆಣ್ಣು ಮಕ್ಕಳನ್ನು ಮೂಡಿಗೆರೆಯಲ್ಲೇ ಬಿಟ್ಟು ದಂಪತಿ ಮಾತ್ರ ಬೆಂಗಳೂರಿಗೆ ವಾಪಸಾಗಿದ್ದರು.

    ಮೊನ್ನೆ ಪತ್ನಿ ಸೇರಿದಂತೆ ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಕೊರೊನಾ ಸೋಂಕಿತ ವ್ಯಕ್ತಿ ಆಸ್ಪತ್ರೆಯಿಂದ ವಿಡಿಯೋ ಕಾಲ್ ಮಾಡಿ ಮಾತನಾಡಿ ಶೀಘ್ರವೇ ಡಿಸ್ಚಾರ್ಜ್ ಆಗುವುದಾಗಿ ತಿಳಿಸಿದ್ದರು. ಆದರೆ ಶನಿವಾರ ಮಧ್ಯಾಹ್ನ ಹೃದಯಾಘಾತದಿಂದ ಕೊನೆಯುಸಿರೆಳೆದು ಕುಟುಂಬ ಕಂಗಾಲಾಗುವಂತೆ ಮಾಡಿತ್ತು.

    ಭಾನುವಾರ ಸ್ವಗ್ರಾಮ ಮೂಡಿಗೆರೆ ತಾಲೂಕಿನ ಮುಗ್ರಹಳ್ಳಿಗೆ ಮೃತದೇಹವನ್ನು ತಂದಾಗ ಹತ್ತಿರದಿಂದ ತಂದೆಯನ್ನು ನೋಡಲಾಗುತ್ತಿಲ್ಲ ಅಂತ ಇಬ್ಬರು ಹೆಣ್ಣುಮಕ್ಕಳು ಕಣ್ಣೀರಿಟ್ಟಿದ್ದು ಹೃದಯ ಕಲಕುವಂತಿತ್ತು.

     

    ಕೊನೆಗೆ ತಾನೇ ಅಪ್ಪನ ಅಂತ್ಯ ಸಂಸ್ಕಾರ ಮಾಡಬೇಕೆಂದು ಹಿರಿಯ ಮಗಳು ಹಠ ಹಿಡಿದಾಗ, ಹಿರಿಯರು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಮೃತರ ಪತ್ನಿಗೆ ಪಿಪಿಇ ಕಿಟ್ ಹಾಕಿಸಿಕೊಂಡು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲು ಅವಕಾಶ ಮಾಡಿಕೊಟ್ಟರು.

    ಮೂಡಿಗೆರೆಯ ಶಿವಗಿರಿ ಸೇವಕರ ತಂಡ ಯಾವುದೇ ಹಣ ಪಡೆಯದೇ ಅಂತ್ಯಸಂಸ್ಕಾರದ ಕಾರ್ಯವನ್ನು ನೆರವೇರಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ ಬೆಂಗಳೂರಿಗೆ ಹೋಗಿ ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದ ವ್ಯಕ್ತಿಯ ಸಾವಿಗೆ ಇಡೀ ಊರಿಗೆ ಊರೇ ಕಂಬನಿ ಮಿಡಿದಿದೆ.

  • ಪಿಪಿಇ ಕಿಟ್ ಧರಿಸಿ ಯುಎಇಗೆ ಪ್ರಯಾಣಿಸಿದ ರಾಜಸ್ಥಾನ ರಾಯಲ್ಸ್ ಕ್ರಿಕೆಟಿಗರು

    ಪಿಪಿಇ ಕಿಟ್ ಧರಿಸಿ ಯುಎಇಗೆ ಪ್ರಯಾಣಿಸಿದ ರಾಜಸ್ಥಾನ ರಾಯಲ್ಸ್ ಕ್ರಿಕೆಟಿಗರು

    ದುಬೈ: ಐಪಿಎಲ್ 2020ರ ಆವೃತ್ತಿಗಾಗಿ ಯುಎಇಗೆ ಗುರುವಾರದಿಂದ ತಂಡಗಳು ಯುಎಇಗೆ ಪ್ರಯಾಣ ಬೆಳೆಸಿವೆ. ಸೆ.19 ರಿಂದ ನ.10 ರವರೆಗೂ ಈ ಬಾರಿಯ ಟೂರ್ನಿ ನಡೆಯಲಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ದುಬೈಗೆ ತೆರಳಿವೆ.

    ಮಾಸ್ಕ್ ಹಾಗೂ ಸಾಮಾಜಿಕ ಅಂತರ ನಿಯಮಗಳನ್ನು ಪಾಲಿಸಿ ಪಂಜಾಬ್ ತಂಡದ ಆಟಗಾರರು ತೆರಳಿದರೆ, ರಾಜಸ್ಥಾನ ತಂಡದ ಆಟಗಾರರು ಪಿಪಿಇ ಕಿಟ್ ಧರಿಸಿ ಪ್ರಯಾಣಿಸುವ ಮೂಲಕ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿದ್ದರು. ರಾಜಸ್ಥಾನ ತಂಡದ ಜಯದೇವ್ ಉನದ್ಕತ್, ರಾಬಿನ್ ಉತ್ತಪ್ಪ ಪಿಪಿಇ ಕಿಟ್ ಧರಿಸಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    ಐಪಿಎಲ್ 2020ರ ಆವೃತ್ತಿ 53 ದಿನಗಳು ನಡೆಯಲಿದ್ದು, 60 ಪಂದ್ಯಗಳ ಶೆಡ್ಯೂಲ್ ನಿಗದಿಯಾಗಿದೆ. ಇದರಲ್ಲಿ 10 ಡಬಲ್ ಹೇಡರ್ ಪಂದ್ಯಗಳಿವೆ. ಯುಎಇಗೆ ಆಟಗಾರರನ್ನು ಕಳುಹಿಸುವ ಮುನ್ನ ಎರಡನೇ ಬಾರಿ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಅಲ್ಲದೇ ತೆರಳಿದ ಬಳಿಕ ಮೊದಲ ದಿನ ಹಾಗೂ 14 ದಿನಗಳ ಬಳಿಕ 2 ಬಾರಿ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಪ್ರತಿ ಆಟಗಾರನಿಗೆ 5 ಬಾರಿ ಕೊರೊನಾ ಟೆಸ್ಟ್ ನಡೆಸಲಾಗುತ್ತದೆ. ಎಲ್ಲಾ ಟೆಸ್ಟ್ ನಲ್ಲಿ ನೆಗೆಟಿವ್ ವರದಿ ಬಂದ ಆಟಗಾರರೊಂದಿಗೆ ಮಾತ್ರ ಬಯೋ-ಸೆಕ್ಯೂಲರ್ ವಾತಾವರಣದಲ್ಲಿ ಟೂರ್ನಿ ನಡೆಸಲಾಗುತ್ತದೆ.

  • ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಟಿಎಂಸಿ ನಾಯಕ!

    ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಟಿಎಂಸಿ ನಾಯಕ!

    – ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

    ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರೊಬ್ಬರು ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಕೊರೊನಾ ಸೋಂಕಿತನನ್ನು ಆಸ್ಪತ್ರೆಗೆ ಕರೆದೊಯ್ದ ಘಟನೆ ಪಶ್ಚಿಮ ಬಂಗಾಳದ ಜಾಗ್ರ್ರಾಮ್ ಜಿಲ್ಲೆಯಲ್ಲಿ ನಡೆದಿದೆ.

    ಗೋಪಿಬಲ್ಲವ್ ಪುರದ ಪಕ್ಷದ ಯುವ ವಿಭಾಗದ ಅಧ್ಯಕ್ಷ ಸತ್ಯಕಂ ಪಟ್ನಾಯಕ್ ಅವರಿಗೆ ತಮ್ಮ ಪಕ್ಷದ ಕಾರ್ಯಕರ್ತರಿಂದಾಗಿ ವ್ಯಕ್ತಿಯೊಬ್ಬ ಅಂಬುಲೆನ್ಸ್ ವ್ಯವಸ್ಥೆ ಸಿಗದೆ ಪರದಾಡುತ್ತಿದ್ದಾರೆ ಎಂಬ ವಿಚಾರ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಗ್ರಾಮಕ್ಕೆ ತೆರಳಿದಾಗ ವಲಸೆ ಕಾರ್ಮಿಕ ಐದಾರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿರುವುದನ್ನು ಕಂಡರು.

    ಇತ್ತ ಕಾರ್ಮಿಕನ ಕುಟುಂಬಸ್ಥರಿಗೆ ಅಂಬುಲೆನ್ಸ್ ಅಥವಾ ವಾಹನ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಕುಟುಂಬಕ್ಕೆ ಸಹಾಯ ಮಾಡಲು ಕೂಡ ಯಾರೂ ಮುಂದೆ ಬರುತ್ತಿರಲಿಲ್ಲ. ಕಾರ್ಮಿಕನಿಗೆ ಕೊರೊನಾ ವೈರಸ್ ತಗಲಿರಬಹುದೆಂಬ ಶಂಕೆಯಿಂದ ಯಾರೂ ಸಹಾಯಕ್ಕೆ ಬಂದಿರಲಿಲ್ಲ.

    ಈ ಬಗ್ಗೆ ತಿಳಿದುಕೊಂಡು, ಒಬ್ಬ ವ್ಯಕ್ತಿಯನ್ನು ಇಂತಹ ಪರಿಸ್ಥಿಯಲ್ಲಿ ಹೀಗೆ ಬಿಡುವುದು ಸರಿಯಲ್ಲ ಎಂದು ತಮ್ಮ ಪಕ್ಷದ ಕಾರ್ಯಕರ್ತರಲ್ಲಿ ಬೈಕ್ ವ್ಯವಸ್ಥೆ ಮಾಡಿಕೊಡುವಂತೆ ಕೇಳಿಕೊಂಡೆ. ಅಲ್ಲದೆ ಮೆಡಿಕಲ್ ಶಾಪ್ ಗೆ ತೆರಳಿ ಪಿಪಿಇ ಕಿಟ್ ಖರೀದಿಸಿದೆ. ಬಳಿಕ ವ್ಯಕ್ತಿಯ ಮನೆಗೆ ತೆರಳಿ ಆತನನ್ನು ಆಸ್ಪತ್ರೆಗೆ ಕರೆದೊಯ್ದೆ ಎಂದು ಪಟ್ನಾಯಕ್ ತಿಳಿಸಿದರು.

     

    ಕಾರ್ಮಿಕನ ಪತ್ನಿ ಹಾಗೂ ಮಕ್ಕಳು ಸ್ಥಿತಿಯ ಬಗ್ಗೆ ಕಣ್ಣೀರು ಹಾಕಿದರು. ಅಲ್ಲದೆ ಪತ್ನಿ ಕಾರ್ಮಿಕನ ಜೊತೆ ಆಸ್ಪತ್ರೆಗೆ ಹೋಗಬೇಕು ಎಂದು ಮನವಿ ಮಾಡಿಕೊಂಡರು. ಆದರೆ ನಾನು ಅವರ ಮನವೊಲಿಸಿ ಕಾರ್ಮಿಕನನ್ನು ಬೈಕಿನಲ್ಲಿ ಕೂರಿಸಿಕೊಂಡು ಗೋಪಿಬಲ್ಲವಪುರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿರುವುದಾಗಿ ಹೇಳಿದರು.

    ಆಸ್ಪತ್ರೆಯಲ್ಲಿ ವೈದ್ಯರು ಕಾರ್ಮಿಕನನ್ನು ಪರೀಕ್ಷಿಸಿ, ಕೆಲವೊಂದು ಔಷಧಿಗಳನ್ನು ನಿಡಿ ಮನೆಯಲ್ಲಿರುವಂತೆ ಸೂಚಿಸಿದರು. ನಂತರ ಪುನಃ ಕಾರ್ಮಿಕನನ್ನು ಅವರ ಮನೆಗೆ ಬಿಟ್ಟು ಬಂದೆ ಎಂದರು. ಸದ್ಯ ಪಟ್ನಾಯಕ್ ಅವರು ಪಿಪಿಇ ಕಿಟ್ ಧರಿಸಿ ಬೈಕಿನಲ್ಲಿ ಹೋಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಯಕನ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.