Tag: ಪಿಜ್ಜಾ

  • ಐಪಿಎಲ್‌ಗಾಗಿ ಮಟನ್‌, ಪಿಜ್ಜಾ ತ್ಯಜಿಸಿದ್ದ ವೈಭವ್‌ – ಡಯಟ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಕೋಚ್‌

    ಐಪಿಎಲ್‌ಗಾಗಿ ಮಟನ್‌, ಪಿಜ್ಜಾ ತ್ಯಜಿಸಿದ್ದ ವೈಭವ್‌ – ಡಯಟ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಕೋಚ್‌

    ಪಾಟ್ನಾ: ಸದ್ಯ ಕ್ರಿಕೆಟ್‌ ಪ್ರಿಯರ ಬಾಯಲ್ಲೀಗ 14ರ ಬಾಲಕ ವೈಭವ್‌ ಸೂರ್ಯವಂಶಿಯದ್ದೇ (Vaibhav Suryavanshi) ಮಾತು. ವೈಭವ್‌ ಬ್ಯಾಟ್‌ನಿಂದ ಹೊಮ್ಮಿದ ಸಿಡಿಲಬ್ಬರದ ಶತಕ ರಾಜಸ್ಥಾನ ರಾಯಲ್ಸ್‌ (Rajasthan Royals) ತಂಡಕ್ಕೆ ನಿರ್ಣಾಯಕ ಪಂದ್ಯದಲ್ಲಿ ಭರ್ಜರಿ ಗೆಲುವು ತಂದುಕೊಟ್ಟಿತು. ಇದರೊಂದಿಗೆ ಸತತ 5 ಸೋಲುಗಳ ನಂತರ ಗೆಲುವಿನ ಹಾದಿಗೆ ಮರಳಿದ ರಾಯಲ್ಸ್‌ ತನ್ನ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿದೆ.

    ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧದ ಪಂದ್ಯದಲ್ಲಿ ಶಾರ್ದೂಲ್‌ ಠಾಕೂರ್‌ ಬೌಲಿಂಗ್‌ಗೆ ಮೊದಲ ಎಸೆತದಲ್ಲೇ ಸಿಕ್ಸರ್‌ ಸಿಡಿಸುವ ಮೂಲಕ ವೂಭವ್‌ ಐಪಿಎಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದ್ದರು. ಆದ್ರೆ ನಿನ್ನೆ ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿ ಗುಜರಾತ್‌ ಬೌಲರ್‌ಗಳನ್ನು ದಂಡಿಸಿದ ರೀತಿ ಕಂಡು ಇಡೀ ಕ್ರಿಕೆಟ್‌ (Cricket) ಜಗತ್ತು ನಿಬ್ಬೆರಗಾಗಿದೆ. ಹೀಗಾಗಿ ಕ್ರಿಕೆಟ್‌ ತಾರೆಯನ್ನ ಯುವ ಆಟಗಾರರನ್ನು ಕೊಂಡಾಡುತ್ತಿದ್ದಾರೆ. ಈ ಮಧ್ಯೆ ಒಂದು ವಿಷಯವನ್ನು ಎಲ್ಲರೂ ಅರಿತುಕೊಳ್ಳಬೇಕಿದೆ. ಅದ್ಭುತ ಶತಕದ ಮೂಲಕ ವಿಶ್ವವಿಖ್ಯಾತಿ ಪಡೆದ ವೈಭವ್‌ ಡಯಟ್‌ ಚಾರ್ಟ್‌ ಹೇಗಿದೆ ಅನ್ನೋದನ್ನ ಅವರ ಕೋಚ್‌ ಮನೋಜ್ ಓಜಾ (Manoj Ojha) ತಿಳಿಸಿದ್ದಾರೆ.

    ಚಿಕನ್‌, ಮಟನ್‌ ಪ್ರಿಯ ವೈಭವ್‌
    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಕೋಚ್‌ ಮನೋಜ್‌ ಓಜಾ, ವೈಭವ್‌ ಚಿಕ್ಕವನಾದ್ದರಿಂದ ಚಿಕನ್‌, ಮಟನ್‌ (Mutton), ಪಿಜ್ಜಾ ಅಂದ್ರೆ ಹೆಚ್ಚು ಪ್ರೀತಿ. ಎಷ್ಟು ಕೊಟ್ಟರೂ ಮುಗಿಸಿಬಿಡುತ್ತಿದ್ದಮ, ಅದಕ್ಕಾಗಿ ಸ್ವಲ್ಪ ದಪ್ಪಗೆ ಕಾಣುತ್ತಾನೆ. ಆದ್ರೆ ಐಪಿಎಲ್‌ ಹತ್ತಿರ ಬರುತ್ತಿದ್ದಂತೆ ಮಟನ್‌, ಪಿಜ್ಜಾ (Pizza) ತಿನ್ನೋದನ್ನ ತ್ಯಜಿಸಿದ್ದ. ಅವನಿಗಾಗಿ ಡಯಟ್‌ ಚಾರ್ಚ್‌ ಕೂಡ ಮಾಡಲಾಗಿತ್ತು ಎಂದು ಓಜಾ ಹೇಳಿದ್ದಾರೆ.

    ಹೀಗೆ ಹೊಡೀತಾನೆ ಅಂತ ಗೊತ್ತಿರಲಿಲ್ಲ
    ಇನ್ನೂ ಮನೋಜ್ ಓಜಾ ತಮ್ಮ ಶಿಷ್ಯನ ಆಟ ಕಂಡು ಚಕಿತಗೊಂಡಿದ್ದಾರೆ. ಅವನು ಹೊಡೆಯುತ್ತಾನೆ ಅಂದುಕೊಂಡಿದ್ದೆ, ಆದ್ರೆ ಹೀಗೆ ಹೊಡೆಯುತ್ತಾನೆ ಎಂದು ನನಗೆ ಗೊತ್ತಿರಲಿಲ್ಲ. ಒಟ್ನಲ್ಲಿ ಏನೋ ದೊಡ್ಡದು ನಡೆಯುತ್ತದೆ ಅಂತ ಮಾತ್ರ ಗೊತ್ತಿತ್ತು. ಅವನಿನ್ನೂ 14 ವರ್ಷದ ಹುಡುಗ, ದೇವರು ಅವನಿಗೆ ಅಪಾರ ಪ್ರತಿಭೆ ನೀಡಿದ್ದಾನೆ. ಅವನ ವೃತ್ತಿಜೀವನದಲ್ಲಿ ನಾನೂ ಭಾಗಿಯಾಗಲು ಸಾಧ್ಯವಾಗಿರುವುದಕ್ಕೆ ನಿಜವಾಗಿಯೂ ಕೃತಜ್ಞನಾಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

  • ಬೆಲೆ ಏರಿಕೆ: ಬರ್ಗರ್‌ಗೆ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್‌

    ಬೆಲೆ ಏರಿಕೆ: ಬರ್ಗರ್‌ಗೆ ಟೊಮೆಟೊ ಬಳಸಲ್ಲ ಎಂದ ಮೆಕ್‌ಡೊನಾಲ್ಡ್ಸ್‌

    ನವದೆಹಲಿ: ದೇಶಾದ್ಯಂತ ಟೊಮೆಟೊ (Tomato) ಬೆಲೆಯಲ್ಲಿ ಏರಿಕೆಯಾಗಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಕೇವಲ ಗ್ರಾಹಕರು, ಸಣ್ಣ-ಪುಟ್ಟ ಹೋಟೆಲ್‌ಗಳಿಗಷ್ಟೇ ಅಲ್ಲ ಆಹಾರ ಉತ್ಪನ್ನಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಂಪನಿಗಳಿಗೂ ಇದರ ಬಿಸಿ ತಟ್ಟಿದೆ.

    ಹೌದು,  ಬರ್ಗರ್‌ (Burger) ಆಹಾರ ಉತ್ಪನ್ನ ತಯಾರಿಸುವ ಕಂಪನಿ ಮೆಕ್‌ಡೊನಾಲ್ಡ್ಸ್ (McDonald’s) ಅಚ್ಚರಿಯ ಘೋಷಣೆಯೊಂದನ್ನು ಮಾಡಿದೆ. ಬರ್ಗರ್‌ ಸೇರಿದಂತೆ ಇತರೆ ಆಹಾರ ಉತ್ಪನ್ನಗಳಿಗೆ ಟೊಮೆಟೊ ಬಳಸಲಾಗುತ್ತಿಲ್ಲ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ 250 ರೂ. ತಲುಪಿದ ಟೊಮೆಟೋ ದರ- ಗ್ರಾಹಕರು ಕಂಗಾಲು

    ಮೆಕ್‌ಡೊನಾಲ್ಡ್ಸ್ ದೆಹಲಿಯಲ್ಲಿರುವ ರೆಸ್ಟೋರೆಂಟ್‌ಗಳ ಹೊರಗೆ, ತನ್ನ ಆಹಾರ ಉತ್ಪನ್ನಗಳಲ್ಲಿ ಟೊಮೆಟೊ ಬಳಕೆ ಮಾಡುತ್ತಿಲ್ಲ ಎಂಬ ಸೂಚನಾಫಲಕ ಹಾಕಿಕೊಂಡಿದೆ. ಈ ದೃಶ್ಯದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರ ಆದಿತ್ಯ ಶಾ ಅವರು ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

    ಉತ್ತಮ ಪದಾರ್ಥಗಳೊಂದಿಗೆ ಅತ್ಯುತ್ತಮ ಆಹಾರವನ್ನು ನಿಮಗೆ ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿಮಗೆ ಗುಣಮಟ್ಟದ ಟೊಮೆಟೊ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಹಾರ ಉತ್ಪನ್ನಗಳಲ್ಲಿ ಟೊಮೆಟೊ ಬಳಸುತ್ತಿಲ್ಲ ಎಂದು ಗ್ರಾಹಕರಿಗೆ ಮೆಕ್‌ಡೊನಾಲ್ಡ್ಸ್‌ ತಿಳಿಸಿದೆ. ಇದನ್ನೂ ಓದಿ: ಟೊಮೆಟೊ ಆಯ್ತು.. ಈಗ ಶುಂಠಿ, ಹಸಿರು ಮೆಣಸಿನಕಾಯಿ ಬೆಲೆಯಲ್ಲೂ ಏರಿಕೆ

    ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ ತುಟ್ಟಿಯಾಗಿದೆ. ಉತ್ತರಾಖಂಡದಲ್ಲಿ ಕೆಜಿ ಟೊಮೆಟೊಗೆ ಬರೋಬ್ಬರಿ 250 ರೂ. ದರವಿದೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಟೊಮೆಟೊ ಬೆಲೆ 100 ರೂ. ಗಡಿ ದಾಟಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಿನದ 3 ಹೊತ್ತು ಪಿಜ್ಜಾ ತಿಂದೇ ತೂಕ ಇಳಿಸಿಕೊಂಡ

    ದಿನದ 3 ಹೊತ್ತು ಪಿಜ್ಜಾ ತಿಂದೇ ತೂಕ ಇಳಿಸಿಕೊಂಡ

    ಲಂಡನ್: ಪಿಜ್ಜಾ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಆದರೆ ಡಯಟ್ ಮಾಡುವವರು, ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಪಿಜ್ಜಾ ತಿನ್ನುವುದನ್ನು ಬಿಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ಪಿಜ್ಜಾ (Pizza) ತಿಂದು ತೂಕವನ್ನು (Weight) ಕಳೆದುಕೊಂಡಿದ್ದಾನೆ.

    ಉತ್ತರ ಐರ್ಲೆಂಡ್‍ನ ರಿಯಾನ್ ಮರ್ಸರ್ ಎಂಬಾತ ತೂಕ ಇಳಿಸಿಕೊಂಡ ವ್ಯಕ್ತಿ. ಈತ ವೃತ್ತಿಯಲ್ಲಿ ತರಬೇತುದಾರನಾಗಿದ್ದು, 30 ದಿನಗಳ ಚಾಲೆಂಜ್‍ನಲ್ಲಿ ದಿನಕ್ಕೆ 10 ಸ್ಲೈಸ್ ಪಿಜ್ಜಾವನ್ನು ತಿನ್ನುತ್ತಾನೆ. ಬೆಳಗಿನ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿಯ ಊಟಕ್ಕೂ ಪಿಜ್ಜಾವನ್ನೇ ಸೇವಿಸುತ್ತಾ ತನ್ನ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾನೆ.

    ಈತ ತನ್ನ 30 ದಿನಗಳ ಚಾಲೆಂಜ್‍ಗಾಗಿ ಪಿಜ್ಜಾವನ್ನು ಹೊರತುಪಡಿಸಿ ಉಳಿದ ಎಲ್ಲಾ ರೀತಿಯ ತಿಂಡಿಯನ್ನು ತಿನ್ನುವುದನ್ನು ತ್ಯಜಿಸಿದ. ಕ್ಯಾಲೋರಿ ಕೊರತೆ ಮತ್ತು ಆರೋಗ್ಯದ ಬಗ್ಗೆ ಒಂದು ಅಂಶವನ್ನು ಗಮನಿಸಲು ಸ್ವತಃ ಪಿಜ್ಜಾಗಳನ್ನು ತಿನ್ನಲು ಪ್ರಾರಂಭಿಸಿದ. ಆದರೆ ಈತನಿಗೆ ಕೊಬ್ಬನ ಬದಲು ಮಸಲ್ಸ್ ಬಂದಿದೆ.

    ಹಣ್ಣುಗಳು ಮತ್ತು ತರಕಾರಿಗಳೊಂದಿಗೆ ಸಾಕಷ್ಟು ಪ್ರೊಟೀನ್ ಹೊಂದಿರುವ ತನ್ನ ವಿಶಿಷ್ಟವಾದ ಆಹಾರ ಕ್ರಮವನ್ನು ರಿಯಾನ್ ವಿವರಿಸಿದ್ದಾನೆ. ಈತನೇ ಹೇಳುವ ಪ್ರಕಾರ ನಾನು ದಿನಕ್ಕೆ ಸಣ್ಣ ಗಾತ್ರದ ಎರಡು ಪಿಜ್ಜಾಗಳು ಮತ್ತು ಒಂದು ದೊಡ್ಡ ಗಾತ್ರದ ಪಿಜ್ಜಾವನ್ನು ತಿನ್ನುತ್ತೇನೆ. ಇದು ದಿನಕ್ಕೆ ಸರಿಸುಮಾರು 10 ಸ್ಲೈಸ್‍ಗಳಿಗೆ ಸಮನಾಗಿರುತ್ತದೆ ಎಂದು ತಿಳಿಸಿದನು. ಇದನ್ನೂ ಓದಿ: ಶಾಲಾ ಮಕ್ಕಳ ಜೊತೆ ಕೂತು ಬಿಸಿಯೂಟ ಸವಿದ ಸಿಪಿವೈ

    ರಿಯಾನ್‍ಗೆ ಅಚ್ಚುಮೆಚ್ಚಿನ ಆಹಾರಗಳಲ್ಲಿ ಪಿಜ್ಜಾವೂ ಒಂದಾಗಿದೆ. ಇದರಿಂದಾಗಿ ಆತ ಇಡೀ ತಿಂಗಳು ಪಿಜ್ಜಾವನ್ನು ಸಂತೋಷದಿಂದಲೇ ತಿಂದಿದ್ದಾನೆ. ಅಷ್ಟೇ ಅಲ್ಲದೇ ವಿವಿಧ ರೀತಿಯ ಪಿಜ್ಜಾಗಳನ್ನು ತಿನ್ನುವ ಮೂಲಕ ವಿವಿಧ ರೀತಿಯ ಪೋಷಕಾಂಶಗಳನ್ನು ಪಡೆದುಕೊಳ್ಳುತ್ತಿದ್ದಾನಂತೆ. ಇದನ್ನೂ ಓದಿ: ಕೇಸರಿ ಭದ್ರಕೋಟೆಗೆ ಚಾಣಕ್ಯ: ಮಂಗಳೂರಿನಲ್ಲಿ ಶಾ ಚುನಾವಣ ರಣತಂತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಿಜ್ಜಾ ಹಟ್‍ನಿಂದ ದಂಪತಿಗೆ ಸಿಕ್ತು ಬಂಪರ್ ಆಫರ್- ಪ್ರತಿ ತಿಂಗಳು ಮನೆಗೆ ಬರುತ್ತೆ ಉಚಿತ ಪಿಜ್ಜಾ

    ಪಿಜ್ಜಾ ಹಟ್‍ನಿಂದ ದಂಪತಿಗೆ ಸಿಕ್ತು ಬಂಪರ್ ಆಫರ್- ಪ್ರತಿ ತಿಂಗಳು ಮನೆಗೆ ಬರುತ್ತೆ ಉಚಿತ ಪಿಜ್ಜಾ

    ಗುವಾಹಟಿ: ಪಿಜ್ಜಾ ಅಂದ್ರೆ ಯುವ ಜನರಿಗೆಂದು ಭಾರೀ ಇಷ್ಟ. ಈ ಪಿಜ್ಜಾವನ್ನು ಅಸ್ಸಾಂನ (Assam) ದಂಪತಿಗೆ (Couple) ಪಿಜ್ಜಾ ಹಟ್ ವಿಶೇಷ ಉಡುಗೊರೆಯನ್ನು ನೀಡಿದ್ದು, ಅವರಿಗೆ ಪ್ರತಿ ತಿಂಗಳಿಗೊಮ್ಮೆ ಪಿಜ್ಜಾವನ್ನು (Pizza) ಉಚಿತವಾಗಿ ಮನೆಗೆ ತಲುಪಿಸಲು ಮುಂದಾಗಿದೆ.

    ಅರೇ.. ಇದೇನು ಎಂದು ಯೋಚಿಸುತ್ತಿದ್ದಾರೆ..? ಹೌದು ಹಿಂದೊಮ್ಮೆ ಮದುವೆ (Marriage) ಸಂದರ್ಭದಲ್ಲಿ ವಿಶೇಷವಾದ ಒಪ್ಪಂದಕ್ಕೆ ಸಹಿ ಹಾಕುವುದರ ಮೂಲಕ ಮಿಂಟು ರೈ ಮತ್ತು ಶಾಂತಿ ಪ್ರಸಾದ್ ಜೋಡಿ ವೈರಲ್ ಆಗಿದ್ದರು. ಇದನ್ನು ನೋಡಿದ ಪಿಜ್ಜಾ ಹಟ್ ಕಂಪನಿಯು ಕರ್ವಾಚೌತ್ ದಿನದಂದು ಈ ಜೋಡಿಗೆ ಒಂದು ವರ್ಷದವರೆಗೆ ಪ್ರತಿ ತಿಂಗಳಿಗೊಮ್ಮೆ ಉಚಿತವಾಗಿ ಪಿಜ್ಜಾವನ್ನು ನೀಡುವುದಾಗಿ ಘೋಷಿಸಿದೆ. ಈ ಅಧಿಕೃತ ಘೋಷಣೆಯನ್ನು ಪಿಜ್ಜಾ ಹಟ್ ಇಂಡಿಯಾ ಎಂಬ ಅಧಿಕೃತ ಇನ್ಸ್‍ಸ್ಟಾಗ್ರಾಮ್ ಖಾತೆಯಲ್ಲಿ ಘೋಷಿಸಿದೆ.

     

    View this post on Instagram

     

    A post shared by Pizza Hut India (@pizzahut_india)

    ಇನ್‍ಸ್ಟಾಗ್ರಾಮ್‍ನಲ್ಲಿ ಏನಿದೆ?: ತಿಂಗಳಿಗೊಮ್ಮೆ ಪಿಜ್ಜಾ ತಿಂದು ನಿಮ್ಮ ಪತಿಯೊಂದಿಗೆ ಸುದೀರ್ಘ ಹಾಗೂ ಸಂತೋಷದ ಜೀವನ ನಡೆಸಿ. ಪಿಜ್ಜಾವನ್ನು ಪ್ರೀತಿಸುವ ದಂಪತಿಗಳಿಗೂ ಕರ್ವಾ ಚೌತ್ ಶುಭಾಶಯಗಳು ಎಂದು ತಿಳಿಸಿದೆ. ಈ ವೇಳೆ ಮಿಂಟು ರೈ ಮತ್ತು ಶಾಂತಿ ಪ್ರಸಾದ್ ಅವರ ವೀಡಿಯೋವನ್ನು ಹಂಚಿಕೊಂಡಿದ್ದು, ಇದರಲ್ಲಿ ತಿಂಗಳಿಗೊಮ್ಮೆ ಉಚಿತವಾಗಿ ಪಿಜ್ಜಾವನ್ನು ಈ ದಂಪತಿಗೆ ನೀಡುತ್ತಿರುವ ಬಗ್ಗೆ ತಿಳಿಸಿದೆ. ಇದನ್ನೂ ಓದಿ: ಯತ್ನಾಳಷ್ಟು ದೊಡ್ಡ ವ್ಯಕ್ತಿಯೂ ನಾನಲ್ಲ, ಅವರಷ್ಟು ಬುದ್ಧಿವಂತಿಕೆಯೂ ನನಗಿಲ್ಲ: ಸವದಿ

    ಈ ಜೋಡಿ ಜುಲೈನಲ್ಲಿ ಮದುವೆಯಾಗಿದ್ದರು. ಆ ಸಂದರ್ಭದಲ್ಲಿ ಶಾಂತಿ ಪ್ರಸಾದ್ ತನ್ನ ಪತಿಗೆ ಮದುವೆ ದಿನದಂತೆ ಕೆಲವು ಷರತ್ತುಗಳನ್ನು ವಿಧಿಸಿ ಸಹಿ ಹಾಕಿಸಿಕೊಂಡಿದ್ದರು. ಅದರಲ್ಲಿ ಪ್ರತಿದಿನವೂ ಜಿಮ್‍ಗೆ ಹೋಗುವುದು, ಪ್ರತಿ 15 ದಿನಕ್ಕೊಮ್ಮೆ ಶಾಪಿಂಗ್ ಹೋಗುವುದು. ಪ್ರತಿ ತಿಂಗಳಿಗೊಮ್ಮೆ ಪಿಜ್ಜಾ ತಿನ್ನುವುದು ಈ ರೀತಿಯ ಕೆಲವು ತಮಾಷೆಯ ಷರತ್ತುಗಳಿದ್ದವು. ಇದನ್ನೂ ಓದಿ: ರಾಮಲಿಂಗಾರೆಡ್ಡಿ BJP ಸೇರೋಕೆ ಬಂದಿದ್ರು: ಈಶ್ವರಪ್ಪ

    Live Tv
    [brid partner=56869869 player=32851 video=960834 autoplay=true]

  • ಮೈಕ್ರೋವೇವ್‌ನಲ್ಲಿ ಮಾಡಿ ಸುಲಭದ ಮಗ್ ಪಿಜ್ಜಾ

    ಮೈಕ್ರೋವೇವ್‌ನಲ್ಲಿ ಮಾಡಿ ಸುಲಭದ ಮಗ್ ಪಿಜ್ಜಾ

    ನಾವು ಈ ಹಿಂದೆ ಸುಲಭವಾಗಿ ಮಾಡಬಹುದಾದಂತಹ ಚಾಕ್ಲೇಟ್ ಮಗ್ ಕೇಕ್ ವಿಧಾನವನ್ನು ಹೇಳಿಕೊಟ್ಟಿದ್ದೆವು. ಇಂದು ನಾವು ಫಟಾಫಟ್ ಅಂತ ಮಾಡಬಹುದಾದ ಹಾಗೂ ಸುಲಭವಾಗಿ ತಯಾರಿಸಬಹುದಾಗ ಸಸ್ಯಾಹಾರಿ ಮಗ್ ಪಿಜ್ಜಾ (Mug Pizza) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಪಿಜ್ಜಾ (Pizza) ಪ್ರಿಯರು ಹೊರಗಡೆ ಹೋಗಲು ಅಸಾಧ್ಯವಾದ ಸಮಯದಲ್ಲಿ ಖಂಡಿತವಾಗಿಯೂ ಇದನ್ನು ಮನೆಯಲ್ಲಿ ಮಾಡಲೇ ಬೇಕು.

    ಬೇಕಾಗುವ ಪದಾರ್ಥಗಳು:
    ಮೈದಾ – ಕಾಲು ಕಪ್
    ಬೇಕಿಂಗ್ ಪೌಡರ್ – ಚಿಟಿಕೆ
    ಅಡುಗೆ ಸೋಡಾ – ಚಿಟಿಕೆ
    ಉಪ್ಪು – ರುಚಿಗೆ ತಕ್ಕಷ್ಟು
    ಅಡುಗೆ ಎಣ್ಣೆ – 1 ಟೀಸ್ಪೂನ್

    ಹಾಲು – 3 ಟೀಸ್ಪೂನ್
    ಪಿಜ್ಜಾ ಸಾಸ್ – 2 ಟೀಸ್ಪೂನ್
    ಮೊಝರೆಲ್ಲ ಚೀಸ್ – 1 ಟೀಸ್ಪೂನ್
    ಕತ್ತರಿಸಿದ ಆಲಿವ್ – 1-2
    ಹೆಚ್ಚಿದ ಕ್ಯಾಪ್ಸಿಕಮ್ – 1 ಟೀಸ್ಪೂನ್
    ಚಿಲ್ಲಿ ಫ್ಲೆಕ್ಸ್ – ಚಿಟಿಕೆ
    ಓರೆಗಾನೊ – ಚಿಟಿಕೆ ಇದನ್ನೂ ಓದಿ: ಓವನ್ ಬೇಡ – ಪ್ರೆಶರ್ ಕುಕ್ಕರ್‌ನಲ್ಲಿ ಮಾಡಿ ಚಾಕ್ಲೇಟ್ ಮಗ್ ಕೇಕ್

    ಮಾಡುವ ವಿಧಾನ:
    * ಮೊದಲಿಗೆ ಮೈಕ್ರೊವೇವ್ ಸುರಕ್ಷಿತ ಕಾಫಿ ಮಗ್ ತೆಗೆದುಕೊಳ್ಳಿ.
    * ಅದರಲ್ಲಿ ಮೈದಾ, ಬೇಕಿಂಗ್ ಪೌಡರ್, ಅಡುಗೆ ಸೋಡಾ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ.
    * ಈಗ 1 ಟೀಸ್ಪೂನ್ ಅಡುಗೆ ಎಣ್ಣೆ ಅಥವಾ ಆಲಿವ್ ಎಣ್ಣೆ ಹಾಕಿ, 3 ಟೀಸ್ಪೂನ್ ಹಾಲು ಸೇರಿಸಿ ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿ.
    * ಈಗ ಮಿಶ್ರಣದ ಮೇಲೆ ಪಿಜ್ಜಾ ಸಾಸ್ ಹಾಕಿ, ಒಂದೇ ರೂಪದಲ್ಲಿ ಹರಡಿ.
    * ಈಗ ಅದರ ಮೇಲೆ ಮೊಝರೆಲ್ಲಾ ಚೀಸ್, ಆಲಿವ್ ಹಾಗೂ ಕ್ಯಾಪ್ಸಿಕಮ್ ಹಾಕಿ ಅಲಂಕರಿಸಿ.
    * ಚಿಟಿಕೆಯಷ್ಟು ಚಿಲ್ಲಿ ಫ್ಲೇಕ್ಸ್ ಮತ್ತು ಓರೆಗಾನೊ ಸಿಂಪಡಿಸಿ.
    * ಈಗ ಮೈಕ್ರೋವೇವ್‌ನಲ್ಲಿ ಮಗ್ ಇಟ್ಟು 2 ನಿಮಿಷ ಅಥವಾ ಚೀಸ್ ಸಂಪೂರ್ಣವಾಗಿ ಕರಗುವವರೆಗೆ ಬೇಯಿಸಿ.
    * ಇದೀಗ ಇನ್ಸ್ಟೆಂಟ್ ಮಗ್ ಪಿಜ್ಜಾ ತಯಾರಾಗಿದ್ದು, ನೇರವಾಗಿ ಆನಂದಿಸಿ. ಇದನ್ನೂ ಓದಿ: ಮೊಟ್ಟೆ ಮತ್ತು ಆಲೂಗಡ್ಡೆ ಕಟ್ಲೆಟ್ ರೆಸಿಪಿ

    Live Tv
    [brid partner=56869869 player=32851 video=960834 autoplay=true]

  • ಪಿಜ್ಜಾ ಉದ್ಯೋಗಿಯನ್ನು ಮನಬಂದಂತೆ ಥಳಿಸಿದ ನಾಲ್ವರು ಯುವತಿಯರ ಗುಂಪು

    ಪಿಜ್ಜಾ ಉದ್ಯೋಗಿಯನ್ನು ಮನಬಂದಂತೆ ಥಳಿಸಿದ ನಾಲ್ವರು ಯುವತಿಯರ ಗುಂಪು

    ಭೋಪಾಲ್: ಪಿಜ್ಜಾ ಚೈನ್‍ನ ಮಹಿಳಾ ಉದ್ಯೋಗಿಯನ್ನು ನಾಲ್ವರು ಯುವತಿಯರ ಗುಂಪು ಮಧ್ಯಪ್ರದೇಶದ ಇಂದೋರ್‌ನಲ್ಲಿ ಮನ ಬಂದಂತೆ ಥಳಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ವೀಡಿಯೋದಲ್ಲಿ ನಾಲ್ವರು ಯುವತಿಯರು ಡೋಮಿನೋಸ್ ಪಿಜ್ಜಾ ಉದ್ಯೋಗಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ. ಆ ಮಹಿಳಾ ಉದ್ಯೋಗಿಯು ಈ ನಾಲ್ವರನ್ನು ದಿಟ್ಟಿಸಿ ನೋಡಿದ್ದಾಳೆ ಎಂದು ಆರೋಪಿಸಿ ಆಕೆಗೆ ಹೊಡೆದಿದ್ದಾರೆ. ಕೊನೆಗೆ ಆಕೆ ನೆಲದ ಮೇಲೆ ಬಿದ್ದರೂ ಸ್ವಲ್ಪವೂ ಕನಿಕರ ತೋರದೆ ಕೋಲಿನಿಂದ ಆಕೆಯನ್ನು ಥಳಿಸಿದ್ದಾರೆ.

    ಘಟನೆ ನಡೆಯುತ್ತಿರುವ ಸ್ಥಳಕ್ಕೆ ಸ್ಥಳೀಯರು ಜಮಾಯಿಸಿದ್ದರೂ, ಆ ಮಹಿಳಾ ಉದ್ಯೋಗಿ ಸಹಾಯಕ್ಕಾಗಿ ಅಂಗಲಾಚಿ ಕಣ್ಣಿರಿಟ್ಟರೂ ಯಾರೊಬ್ಬರು ಸಹಾಯ ಮಾಡಲು ಮುಂದಾಗಲಿಲ್ಲ. ಇದರಿಂದಾಗಿ ಅಲ್ಲೇ ಸಮೀಪವಿರುವ ಮನೆಯೊಂದಕ್ಕೆ ಹೋಗಿ ಅಲ್ಲೇ ಬಚ್ಚಿಟ್ಟುಕೊಂಡು ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ. ಇದನ್ನೂ ಓದಿ: ತಡರಾತ್ರಿ ಬಸವಕಲ್ಯಾಣದಲ್ಲಿ ಮುಸ್ಲಿಮರಿಂದ ದಿಢೀರ್ ಪ್ರತಿಭಟನೆ – ವ್ಯಕ್ತಿ ಅರೆಸ್ಟ್

    POLICE JEEP

    ಕೊನೆಗೆ ಉದ್ಯೋಗಿಯೇ ತಾನು ಹೋಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ನಾಲ್ವರು ಯುವತಿಯರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸ್ಟಾಲಿನ್‌ ರಾಜಕೀಯ ಸ್ಟಂಟ್‌ ಮಾಡುತ್ತಿದ್ದಾರೆ: ತಮಿಳುನಾಡು ಸಿಎಂ ವಿರುದ್ಧ ಬೊಮ್ಮಾಯಿ ಕಿಡಿ

  • ಪಿಜ್ಜಾ ಆರ್ಡರ್‌ ಮಾಡುವಾಗ 9,000 ಹೋಯ್ತು – ವಾಪಸ್‌ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ

    ಪಿಜ್ಜಾ ಆರ್ಡರ್‌ ಮಾಡುವಾಗ 9,000 ಹೋಯ್ತು – ವಾಪಸ್‌ ಪಡೆಯಲು ಹೋಗಿ 11 ಲಕ್ಷ ಕಳ್ಕೊಂಡ ವೃದ್ಧೆ

    ಮುಂಬೈ: ಆನ್‍ಲೈನ್‍ನಲ್ಲಿ ಪಿಜ್ಜಾ, ಡ್ರೈ ಫ್ರೂಟ್ಸ್ ಆರ್ಡರ್ ಮಾಡುವಾಗ ಕಳೆದುಕೊಂಡ ಹಣವನ್ನು ವಾಪಾಸ್ ಪಡೆಯಲು ಪ್ರಯತ್ನಿಸಿದಾಗ ಸೈಬರ್ ವಂಚಕರು ವೃದ್ಧ ಮಹಿಳೆಗೆ 11 ಲಕ್ಷಕ್ಕೂ ಹೆಚ್ಚು ಹಣವನ್ನು ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    BRIBE

    ನಡೆದಿದ್ದೇನು?: ಅಂಧೇರಿಯ ಉಪನಗರ ನಿವಾಸಿಯಾಗಿರುವ ಮಹಿಳೆ ಆನ್‍ಲೈನ್‍ನಲ್ಲಿ ಪಿಜ್ಜಾ ಆರ್ಡರ್ ಮಾಡಿದ್ದರು. ಹಣವನ್ನು ತನ್ನ  ಫೋನ್‍ನಲ್ಲಿ ಪಾವತಿಸುವಾಗ 9,999 ಕಳೆದುಕೊಂಡಿದ್ದಾರೆ. ಇದನ್ನೂ ಓದಿ:  ಮೇಕೆದಾಟು ಪಾದಯಾತ್ರೆ ಬಿಸಿ – ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೂ ಕೊರೊನಾ ದೃಢ

    MONEY

    ತಕ್ಷಣ ಎಚ್ಚೆತ್ತುಕೊಂಡ ವೃದ್ಧೆ ತಾನೂ ಹಣವನ್ನು ಕಳುಹಿಸಿದ ನಂಬರ್‍ಗೆ ಕರೆಮಾಡಿದ್ದಾಳೆ. ಆಗ ವಂಚಕ ಮಹಿಳೆಗೆ ಮೊಬೈಲ್ ಫೋನ್‍ನಲ್ಲೊಂದು ಅಪ್ಲಿಕೇಶನ್ ಡೌನ್‍ಲೋಡ್ ಮಾಡಲು ಹೇಳಿದ್ದಾನೆ. ಆಗ ಮಹಿಳೆಯ ಮೊಬೈಲ್ ಆ್ಯಕ್ಸಸ್ ಅವರಿಗೆ ಸಿಕ್ಕಿದೆ. ಆಗ ಬ್ಯಾಂಕ್ ಖಾತೆ ವಿವರ, ಪಾಸ್‍ವರ್ಡ್ ಕುರಿತಾದ ಎಲ್ಲಾ ಮಾಹಿತಿ ವಂಚಕರಿಸಿಗೆ ಸಿಕ್ಕಿದೆ. ವಂಚಕ 2021ರ ನ.14 ಮತ್ತು ಡಿ.1 ನಡುವೆ ಮಹಿಳೆಯ ಬ್ಯಾಂಕ್ ಖಾತೆಯಿಂದ 11.78 ಲಕ್ಷವನ್ನು ವರ್ಗಾಯಿಸಿಕೊಂಡು ಡ್ರಾ ಮಾಡಿ ವಂಚಿಸಿದ್ದಾನೆ. ಇದನ್ನೂ ಓದಿ:  ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಪ್ರಿಯಾಂಕ್ ಖರ್ಗೆಗೂ ಕೊರೊನಾ ಪಾಸಿಟಿವ್

    ಬ್ಯಾಂಕ್ ಖಾತೆಯಿಂದ ಹಣ ಡ್ರಾ ಆಗಿರುವ ಕುರಿತಾಗಿ ತಿಳಿಯುತ್ತಿದ್ದಂತೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆ ಬಿಕೆಸಿ ಸೈಬರ್ ಪೊಲೀಸ್ ಠಾಣೆಗೆ ಬಂದಾಗ ವಂಚನೆ ಬೆಳಕಿಗೆ ಬಂದಿದೆ. ಮಹಿಳೆ ನೀಡಿರುವ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 420 (ವಂಚನೆ) ಎಫ್‍ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

  • ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್

    ಪಿಜ್ಜಾಗೆ ಡೂಡಲ್ ಸಮರ್ಪಿಸಿದ ಗೂಗಲ್

    ನವದೆಹಲಿ: ಗೂಗಲ್ ತನ್ನ ಇಂಟರಾಕ್ಟಿವ್ ಡೂಡಲ್ ನ್ನು ಪ್ರತಿದಿನ ಒಂದೊಂದು ವಿಶೇಷವಾದ ಸ್ಥಳ, ವ್ಯಕ್ತಿಗೆ ಸಮರ್ಪಿಸುತ್ತಿರುತ್ತೆ. ಇಂದು ಪ್ರಪಂಚದಲ್ಲಿ ಹೆಚ್ಚು ಸೇವಿಸುತ್ತಿರುವ ಪಿಜ್ಜಾಗೆ ತನ್ನ ಡೂಡಲ್ ಅನ್ನು ಸಮರ್ಪಿಸಿದೆ.

    ಇತ್ತೀಚಿಗೆ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಪಿಜ್ಜಾ ಎಂದರೆ ಬಾಯಲ್ಲಿ ನೀರು ಬರುತ್ತೆ. ಅದು ಅಲ್ಲದೇ ಇದು ವಿಶ್ವದ ಅತ್ಯಂತ ಜನಪ್ರಿಯ ಭಕ್ಷ್ಯಗಳಲ್ಲಿ ಒಂದಾಗಿದ್ದು, ಇದಕ್ಕೆ ಗೌರವ ಸಲ್ಲಿಸುವ ಸಲ್ಲುವಾಗಿ ಗೂಗಲ್ ಇಂದು ಸಂವಾದಾತ್ಮಕ ಡೂಡಲ್(ಇಂಟರಾಕ್ಟಿವ್ ಡೂಡಲ್) ನಲ್ಲಿ ಪಿಜ್ಜಾ ಚಿತ್ರವನ್ನು ಹಾಕಿದೆ.

    ಜಾಗತಿಕ ಸರ್ಚ್ ಇಂಜಿನ್ ತನ್ನ ವಿಶೇಷ ಡೂಡಲ್ನೊಂದಿಗೆ ನಿಯಾಪೊಲಿಟನ್ ‘ಪಿಜ್ಜೈಯುಲೊ’ ನ ಪಾಕಶಾಲೆಯ ಕಲೆಯನ್ನು ಹಾಕಿದೆ. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಪ್ರಕಾರ, ‘ನಿಯಾಪೊಲಿಟನ್ ‘ಪಿಜ್ಜೈಯುಲೊ’ ಕಲೆಯು ನಾಲ್ಕು ವಿಭಿನ್ನ ಹಂತಗಳನ್ನು ಒಳಗೊಂಡಿರುವ ಒಂದು ಪಾಕಶಾಲೆಯ ಅಭ್ಯಾಸವಾಗಿದೆ ಇದು ಭಿನ್ನ ಕಲೆಗಳಲ್ಲಿ ಒಂದಾಗಿದೆ ಎಂದಿದೆ. ಇದನ್ನೂ ಓದಿ: ಸಖತ್ ಟೇಸ್ಟ್ ಈ ಚಿಕನ್ ಹರಿಯಾಲಿ – ನೀವೂ ಒಮ್ಮೆ ಟ್ರೈ ಮಾಡಿ

    ಗೂಗಲ್ ಪ್ರಪಂಚದಾದ್ಯಂತದ 11 ಅತ್ಯಂತ ಜನಪ್ರಿಯ ಪಿಜ್ಜಾ ಪಝಲ್ ಗೇಮ್ ಅನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದೆ. ಈ ಗೇಮ್ ಆಟಗಾಗರಿಗೆ ಸವಾಲು ಹಾಕುತ್ತಾ ತನ್ನತ್ತ ಸೆಳೆಯುತ್ತೆ.

  • ಸೂರತ್‍ನಲ್ಲಿ ಸಿಗುತ್ತೆ ವಿಶಿಷ್ಟವಾದ ಮಡಿಕೆ ಪಿಜ್ಜಾ – ವೀಡಿಯೋ ವೈರಲ್

    ಸೂರತ್‍ನಲ್ಲಿ ಸಿಗುತ್ತೆ ವಿಶಿಷ್ಟವಾದ ಮಡಿಕೆ ಪಿಜ್ಜಾ – ವೀಡಿಯೋ ವೈರಲ್

    ಗಾಂಧಿನಗರ: ಪಿಜ್ಜಾ ಸವಿಯಲು ಸಖತ್ ಟೇಸ್ಟಿಯಾಗಿರುತ್ತದೆ. ಬಹುತೇಕ ಮಂದಿಗೆ ಪಿಜ್ಜಾ ಎಂದರೆ ಬಹಳ ಪ್ರಿಯ. ಪಿಜ್ಜಾದಲ್ಲಿ ವೆರೈಟಿ ಪಿಜ್ಜಾಗಳನ್ನು ನಾವು ನೋಡಿರಬಹುದು. ಆದರೆ ಮಡಿಕೆ ಪಿಜ್ಜಾವನ್ನು ಎಲ್ಲದರೂ ಕೇಳಿದ್ದೀರಾ?

    ಹೌದು, ಗುಜರಾತ್‍ನ ಸೂರತ್ ಅಂಗಡಿಯೊಂದರಲ್ಲಿ ಮಡಿಕೆಯಿಂದ ತಯಾರಿಸಿದ ವಿಶೇಷವಾದ ಪಿಜ್ಜಾ ದೊರೆಯುತ್ತದೆ. ಮಣ್ಣಿನಿಂದ ತಯಾರಿಸಲಾದ ಪುಟ್ಟ ಮಡಿಕೆಯಲ್ಲಿ ಚೀಸ್ ಪಿಜ್ಜಾವನ್ನು ತುಂಬಿಸಿ ನೀಡಲಾಗುತ್ತದೆ. ಈ ವೀಡಿಯೋವನ್ನು ಮಾರ್ಚ್ ತಿಂಗಳಿನಲ್ಲಿ ಆಮ್ಚಿ ಮುಂಬೈ ಎಂಬ ಯೂಟ್ಯೂಬ್ ಪೇಜ್‍ನಲ್ಲಿ ಪೋಸ್ಟ್ ಮಾಡಲಾಗಿದ್ದು, ಇಲ್ಲಿಯವರೆಗೂ ಸುಮಾರು 23 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ತಾಲಿಬಾನಿ ಬಿಜೆಪಿ ಸರ್ಕಾರದಿಂದ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ: ಮಮತಾ ಬ್ಯಾನರ್ಜಿ

    ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಒಂದು ಬಟ್ಟಲಿಗೆ ಬೇಯಿಸಿದ ಕಾರ್ನ್, ಕತ್ತರಿಸಿದ ಟೊಮ್ಯಾಟೋ, ಪನ್ನೀರ್, ಮೇಯನೇಸ್, ಟೊಮ್ಯಾಟೋ ಕೆಚಪ್ ನಂತಹ ಹಲವಾರು ಸಾಸ್‍ಗಳನ್ನು ಹಾಕಿ ಮಿಶ್ರಣ ಮಾಡಿ, ಅದಕ್ಕೆ ಚಿಲ್ಲಿ ಫ್ಲೇಕ್ಸ್, ಓರೆಗಾನೊ, ಉಪ್ಪು ಮತ್ತು ಚಾಟ್ ಮಸಾಲೆ ಹಾಕಿ ಮಿಕ್ಸ್ ಮಾಡುತ್ತಾರೆ. ನಂತರ ಸಣ್ಣ ಮಡಿಕೆ ಕಪ್‍ಗೆ ಅದೆಲ್ಲವನ್ನು ತುಂಬಿಸಿ, ಸಾಸ್ ಮತ್ತು ಚೀಸ್‍ನನ್ನು ಅದರ ಮೇಲೆ ಹಾಕಿ ನಂತರ ಲಿಕ್ವಿಡ್ ಚೀಸ್ ಸೇರಿದಂತೆ ಹಲವು ಚೀಸ್‍ಗಳನ್ನು ಮಿಶ್ರಣ ಮಾಡುತ್ತಾರೆ. ಕೊನೆಗೆ ಚಿಕ್ಕ ಮಡಿಕೆಯ ಕಪ್‍ನನ್ನು ಮೈಕ್ರೋವೇವ್‍ನಲ್ಲಿ ಇಟ್ಟು ಬೇಯಿಸುತ್ತಾರೆ. ಇದನ್ನೂ ಓದಿ: ಕೈ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ- ದೇಗುಲ ಧ್ವಂಸ, ಗೋವು ಕಳ್ಳರ ವಿರುದ್ಧ ಆಕ್ರೋಶ

    ಬಳಿಕ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಪಿಜ್ಜಾ ಮೇಲೆ ಉದುರಿಸಿ ಸವಿಯಲು ನೀಡುತ್ತಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕಾಮೆಂಟ್‍ಗಳ ಸುರಿಮಳೆಯೇ ಹರಿದುಬರುತ್ತಿದೆ.

  • ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ!

    ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಅಫ್ಘಾನ್ ಮಾಜಿ ಸಚಿವ!

    ಕಾಬೂಲ್: ಅಫ್ಘಾನ್ ಮಾಜಿ ಸಚಿವರೊಬ್ಬರು ಇದೀಗ ಜರ್ಮನಿಯಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಅವರು ತಮ್ಮ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ ಎಂಬುದಾಗಿ ವರದಿಯಾಗಿದೆ.

    ಆಶ್ರಫ್ ಘನಿ ಸರ್ಕಾರದಲ್ಲಿ ಮಾಹಿತಿ ತಂತ್ರಜ್ಞಾನ ಸಚಿವರಾಗಿದ್ದ ಸೈಯದ್ ಅಹಮ್ಮದತ್ ಶಾ ಸಾದತ್ ಅವರೇ ಇದೀಗ ಪಿಝಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವವರಾಗಿದ್ದಾರೆ. ಅಶ್ರಫ್ ಘನಿಯವರೊಂದಿಗಿನ ಭಿನ್ನಾಭಿಪ್ರಾಯದಿಂದ ದೇಶವನ್ನೇ ತೊರೆದು ಜರ್ಮನಿಯಲ್ಲಿ ನೆಲೆಸಿದ್ದರು. ಈ ವೇಳೆ ಅವರಿಗೆ ತಮ್ಮ ಬದುಕು ಸಾಗಿಸಲು ಹಣದ ಕೊರತೆ ಉಂಟಾಗಿದೆ.

    ಹಣದ ಅವಶ್ಯಕತೆ ಎದುರಾದ ಸಂದರ್ಭದಲ್ಲಿ ಅವರು ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡಬೇಕಾದ ಅನಿವಾರ್ಯ ಎದುರಾಯಿತು. ಹೀಗಾಗಿ ಸಾದತ್ ಅವರು ಜರ್ಮನಿಯ ಲೀಪ್ ಜಿಂಗ್ ನಲ್ಲಿ ಫುಡ್ ಡೆಲಿವರಿ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರ್ಪಡೆಗೊಳ್ಳುತ್ತಾರೆ. ಅಂತೆಯೇ ಇದೀಗ ನಗರದಾದ್ಯಂತ ಸೈಕಲ್‍ನಲ್ಲಿ ಓಡಾಡುತ್ತಾ ತಮ್ಮ ಗ್ರಾಹಕರಿಗೆ ಆಹಾರವನ್ನು ವಿತರಿಸುತ್ತಿದ್ದಾರೆ.  ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.

    ಸಾದತ್ ಅವರು ಜರ್ಮನಿಯಲ್ಲಿ ತನ್ನ ಗ್ರಾಹಕರಿಗೆ ಆಹಾರ ಪೂರೈಕೆ ಮಾಡುತ್ತಿದ್ದ ಸಂದರ್ಭ ಸ್ಥಳೀಯ ಮಾಧ್ಯಮದ ವರದಿಗಾರರು ಮಾಜಿ ಸಚಿವರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು

    ಸ್ಥಳೀಯ ಮಾಧ್ಯಮ ವರದಿಗಾರ ಈಓ ಬಗ್ಗೆ ತಮ್ಮ ಟ್ವೀಟ್ ನಲ್ಲಿ ಫೋಟೋ ಅಪ್ಲೋಡ್ ಮಾಡಿಕೊಂಡು, ಕಳೆದ ಎರಡು ವರ್ಷಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಸಂವಹನ ಸಚಿವರಾಗಿದ್ದೆ ಎಂದು ಹೇಳಿಕೊಂಡ ವ್ಯಕ್ತಿಯನ್ನು ನಾನು ಕಳೆದ ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದೆ. ನಾನು ಆ ವ್ಯಕ್ತಿಯ ಬಳಿ ನೀವು ಲೀಪ್‍ಜಿಂಗ್ ಪ್ರದೇಶದಲ್ಲಿ ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದೆ. ಆಗ ಅವರು ಲೈಫೆರಾಂಡೋಗೆ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ ಎಂದು ಬರೆದುಕೊಂಡಿದ್ದಾರೆ.

    2018 ರಲ್ಲಿ ಅಶ್ರಫ್ ಘನಿ ನೇತೃತ್ವದ ಅಫ್ಘಾನಿಸ್ತಾನ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಇದ್ದರು. ಎರಡು ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವರಾಗಿ ಸೈಯದ್ ಅಹಮ್ಮದ್ ಶಾ ಸಾದತ್ ಕಾರ್ಯ ನಿರ್ವಹಿಸಿದ್ದಾರೆ. 2020 ರಲ್ಲಿ ಸಾದತ್ ತನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಬಳಿಕ ಕಳೆದ ವರ್ಷ ಅಂದರೆ 2020 ರ ಡಿಸೆಂಬರ್‍ನಲ್ಲಿ ಜರ್ಮಿನಿಗೆ ಬಂದಿದ್ದಾರೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಅಮ್ಮನಿಂದ ದೂರವಾದ ಕಂದಮ್ಮನನ್ನ ರಕ್ಷಿಸಿದ ಟರ್ಕಿ ಸೈನಿಕರು