Tag: ಪಿಜಿ ಮಾಲೀಕ

  • ಪಿಜಿ ಮಾಲೀಕ ಅಶ್ರಫ್‌ನಿಂದ ವಿದ್ಯಾರ್ಥಿನಿ ರೇಪ್‌ ಪ್ರಕರಣ – ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ ಮಹಿಳಾ ಆಯೋಗ

    ಪಿಜಿ ಮಾಲೀಕ ಅಶ್ರಫ್‌ನಿಂದ ವಿದ್ಯಾರ್ಥಿನಿ ರೇಪ್‌ ಪ್ರಕರಣ – ಸ್ವಯಂಪ್ರೇರಿತ ಕೇಸ್‌ ದಾಖಲಿಸಿದ ಮಹಿಳಾ ಆಯೋಗ

    ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯ ಮೇಲೆ ಪಿಜಿ ಮಾಲೀಕ (PG Owner) ಅತ್ಯಾಚಾರ ಎಸಗಿದ್ದ ಕೇಸ್‌ಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.

    ಅಲ್ಲದೇ ಕೃತ್ಯ ಸಂಬಂಧ ಪ್ರಾಮಾಣಿಕ, ನಿಷ್ಪಕ್ಷಪಾತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗದ (National Women commission) ಅಧ್ಯಕ್ಷರು ಡಿಜಿಪಿಗೆ ಪತ್ರದ ಮೂಲಕ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿ ಮೇಲೆ ರೇಪ್‌ – ಪಿಜಿ ಮಾಲೀಕ ಅಶ್ರಫ್‌ ಅರೆಸ್ಟ್‌

    ತನ್ನದೇ ಪಿಜಿಯಲ್ಲಿ ಇದ್ದ ಕೇರಳ ಮೂಲದ ವಿದ್ಯಾರ್ಥಿನಿ ಮೇಲೆ ಪಿಜಿ ಮಾಲೀಕ ಅಶ್ರಫ್‌ ಅತ್ಯಾಚಾರ ಎಸಗಿದ್ದ ಘಟನೆ ಕಳೆದ ಶುಕ್ರವಾರ ಸೋಲದೇವನಹಳ್ಳಿಯಲ್ಲಿ ನಡೆದಿತ್ತು. ಹೀಗಾಗಿ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಜೊತೆಗೆ ಸಂತ್ರಸ್ತೆಗೆ ಅಗತ್ಯ ನೆರವು ನೀಡಬೇಕೆಂದು ಪತ್ರದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಮನಗರ | ಇನ್‌ಸ್ಟಾದಲ್ಲಿ ಪರಿಚಯವಾದ ಅಪ್ರಾಪ್ತೆಯನ್ನ ಗರ್ಭಿಣಿ ಮಾಡಿದ್ದ ಕಾಮುಕ ಅರೆಸ್ಟ್‌

    ಪಿಜಿ ಮಾಲೀಕ ಅಶ್ರಫ್‌ ಬಂಧಿತ ರೇಪ್‌ ಆರೋಪಿ. ವಿದ್ಯಾರ್ಥಿನಿ ಪಿಜಿ ಸೇರಿ ಕೇವಲ 10 ದಿನಗಳು ಕಳೆದಿತ್ತು. ಕಳೆದ ಶುಕ್ರವಾರ ಆಕೆಯನ್ನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿರುವುದು ಕಂಡುಬಂದಿತ್ತು. ಘಟನೆ ಬಳಿಕ ಸಂತ್ರಸ್ತೆ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದರು. ಆಗಸ್ಟ್‌ 3ರಂದು ಆರೋಪಿಯನ್ನ ಬಂಧಿಸಲಾಗಿತ್ತು. ಇದನ್ನೂ ಓದಿ: ಕಲಬುರಗಿಯಲ್ಲಿ ಬಿಎಸ್ಸಿ ಪದವೀಧರೆ ನಾಪತ್ತೆ – ಲವ್ ಜಿಹಾದ್ ಆರೋಪ, ಕೇಸ್‌ ದಾಖಲು

  • ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿ ಮೇಲೆ ರೇಪ್‌ – ಪಿಜಿ ಮಾಲೀಕ ಅಶ್ರಫ್‌ ಅರೆಸ್ಟ್‌

    ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿ ಮೇಲೆ ರೇಪ್‌ – ಪಿಜಿ ಮಾಲೀಕ ಅಶ್ರಫ್‌ ಅರೆಸ್ಟ್‌

    ಬೆಂಗಳೂರು: ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿನಿ (College Student) ಮೇಲೆ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಪಿಜಿ ಮಾಲೀಕನನ್ನ ಬಂಧಿಸಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ (Soladevanahalli Police) ನಡೆದಿದೆ.

    ಪಿಜಿ ಮಾಲೀಕ (PG Owner) ಅಶ್ರಫ್‌ ಬಂಧಿತ ರೇಪ್‌ ಆರೋಪಿ. ವಿದ್ಯಾರ್ಥಿನಿ ಪಿಜಿ ಸೇರಿ ಕೇವಲ 10 ದಿನಗಳು ಕಳೆದಿತ್ತು. ಮೊನ್ನೆ ಆಕೆಯನ್ನ ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದಾನೆ. ಇದನ್ನೂ ಓದಿ: ಅಶ್ಲೀಲ ವಿಡಿಯೋದಲ್ಲಿ ಇದ್ದದ್ದು ಪ್ರಜ್ವಲ್‌ ಅಂತ ಪತ್ತೆಹಚ್ಚಿದ್ದೇ ಹೊಸ ತಂತ್ರಜ್ಞಾನ – ದೇಶದಲ್ಲೇ ಮೊದಲ ಪ್ರಯೋಗ

    ಘಟನೆ ಬಳಿಕ ಸಂತ್ರಸ್ತೆ ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಶ್ರಫ್‌ನನ್ನ ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಪ್ರಜ್ವಲ್‌ಗೆ ಶಿಕ್ಷೆ ಬೆನ್ನಲ್ಲೇ ಪೆನ್‌ಡ್ರೈವ್‌ ಹಂಚಿದವರಿಗೆ ಶುರುವಾಯ್ತು ನಡುಕ!

  • ಪಿಜಿ ಮಾಲೀಕನ ಕಾಟ ತಾಳಲಾರದೆ ಗಗನಸಖಿ ನೇಣಿಗೆ ಶರಣು

    ಪಿಜಿ ಮಾಲೀಕನ ಕಾಟ ತಾಳಲಾರದೆ ಗಗನಸಖಿ ನೇಣಿಗೆ ಶರಣು

    – ಗಗನಸಖಿಯ ಮೊಬೈಲ್ ಹ್ಯಾಕ್ ಮಾಡಿದ್ದ ಮಾಲೀಕ

    ಚಂಡೀಗಢ: ಪಿಜಿ ಮಾಲೀಕನ ಕಾಟ ತಾಳಲಾರದೆ ಗಗನಸಖಿ ನೇಣಿಗೆ ಶರಣಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

    ಗುರುಗ್ರಾಮದ ಡಿಎಲ್‍ಎಫ್ ಪೇಸ್-3ಯ ಪಿಜಿಯಲ್ಲಿ ಸ್ಪೈಸ್ ಜೆಟ್ ವಿಮಾನ ಸಂಸ್ಥೆಯ ಗಗನಸಖಿ ನೇಣಿಗೆ ಶರಣಾಗಿದ್ದು, ಪಿಜಿ ಮಾಲೀಕ ಅಮರಿಂದರ್ ಸಿಂಗ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಈವರೆಗೆ ಯಾರನ್ನೂ ಬಂಧಿಸಿಲ್ಲ. ಸಂತ್ರಸ್ತೆಯನ್ನು ಮಿಸ್ತು ಸರ್ಕಾರ್ ಎಂದು ಗುರುತಿಸಲಾಗಿದೆ. ಸರ್ಕಾರ್ ಪಶ್ಚಿಮ ಬಂಗಾಳದ ನಿವಾಸಿಯಾಗಿದ್ದು, ತಂದೆಯನ್ನು ಹವ್ಲು ಚಂದ್ರ ಸರ್ಕಾರ್ ಎಂದು ಗುರುತಿಸಲಾಗಿದೆ.

    ಪ್ರಕರಣದ ಕುರಿತು ಹವ್ಲು ಚಂದ್ರ ಸರ್ಕಾರ್ ಪ್ರತಿಕ್ರಿಯಿಸಿ, ಮಿಸ್ತುಳಿಗೆ ಪಿಜಿ ಮಾಲೀಕ ಕಿರುಕುಳ ನೀಡಿದ್ದಾನೆ. ಅಮರಿಂದರ್ ಸಿಂಗ್ ನನ್ನ ಮಗಳ ಪೋನ್‍ನನ್ನು ಹ್ಯಾಕ್ ಮಾಡಿದ್ದ. ಡಿಸೆಂಬರ್ 17ರ ರಾತ್ರಿ ನನ್ನ ಮಗಳು ಕರೆ ಮಾಡಿದ್ದಳು, ಆಗ ಸಿಂಗ್ ನನಗೆ ಕಿರುಕುಳ ನೀಡುತ್ತಿದ್ದಾನೆ, ಅವಮಾನ ಮಾಡುತ್ತಿದ್ದಾನೆ ಎಂದು ಆರೋಪಿಸಿದ್ದಳು ಎಂದು ತಿಳಿಸಿದ್ದಾರೆ.

    ಸಿಂಗ್ ವರ್ತನೆಯಿಂದಗಿ ಮಿಸ್ತು ಬೇಸತ್ತಿದ್ದಳು. ಅಲ್ಲದೆ ಮರಳಿ ಮನೆಗೆ ತೆರಳಲು ನಿರ್ಧರಿಸಿದ್ದಳು. ಈ ಕುರಿತು ಡಿ.17 ರಂದು ತಂದೆ ಹೌವ್ಲು ಚಂದ್ರ ಸರ್ಕಾರ್ ಕರೆ ಮಾಡಿದಾಗ ಮನೆಗೆ ಬರುವಂತೆ ತಿಳಿಸಿದ್ದರು. ಆದರೆ ಮಿಸ್ತು ತಂದೆಯ ಕರೆಯನ್ನು ಕಟ್ ಮಾಡಿದ್ದಳು. ಕೆಲವೇ ಗಂಟೆಗಳ ನಂತರ ಪಿಜಿ ಮಾಲೀಕ ಸಿಂಗ್ ಹೌವ್ಲು ಚಂದ್ರ ಸರ್ಕಾರ್ ಅವರಿಗೆ ಕರೆ ಮಾಡಿ, ನಿಮ್ಮ ಮಗಳು ಏನೋ ಮಾಡುವ ಧಾವಂತದಲ್ಲಿದ್ದಾಳೆ ಎಂದು ತಿಳಿಸಿದ್ದ.

    ನಂತರ ಬುಧವಾರ ಬೆಳಗ್ಗೆ ಹೌವ್ಲು ಚಂದ್ರ ಸರ್ಕಾರ್ ಅವರು ತಮ್ಮ ಮಗಳು ಸಾವನ್ನಪ್ಪಿರುವ ಕುರಿತು ತಿಳಿಸಿದ್ದಾರೆ. ಪಿಜಿ ಕೆಲಸಗಾರರು ಘಟನೆ ಕುರಿತು ಹೌವ್ಲು ಚಂದ್ರ ಸರ್ಕಾರ್ ಅವರಿಗೆ ಕರೆ ಮಾಡಿ ವಿವರಿಸಿದ್ದಾರೆ. ಮಿಸ್ತು ಒಳಗಿನಿಂದ ತನ್ನ ರೂಂ ಲಾಕ್ ಮಾಡಿಕೊಂಡು ಫ್ಯಾನ್‍ಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

    ಮಿಸ್ತು ತಂದೆ ಹೌವ್ಲು ಚಂದ್ರ ಸರ್ಕಾರ್ ಹೇಳಿಕೆ ಆಧರಿಸಿ ಪಿಜಿ ಮಾಲೀಕ ಸಿಂಗ್ ವಿರುದ್ಧ ಐಪಿಸಿ ಸೆಕ್ಷನ್ 306(ಆತ್ಮಹತ್ಯೆಗೆ ಪ್ರಚೋದನೆ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಗನಸಖಿಯ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ನಂತರ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ.