Tag: ಪಿಜಿಸಿಇಟಿ

  • ಎಂಬಿಎ, ಎಂಸಿಎ ಪ್ರವೇಶಕ್ಕೆ ಭಾನುವಾರ ಪರೀಕ್ಷೆ- ಸಿದ್ಧತೆ ಪೂರ್ಣ: ಕೆಇಎ

    ಎಂಬಿಎ, ಎಂಸಿಎ ಪ್ರವೇಶಕ್ಕೆ ಭಾನುವಾರ ಪರೀಕ್ಷೆ- ಸಿದ್ಧತೆ ಪೂರ್ಣ: ಕೆಇಎ

    ಬೆಂಗಳೂರು: ಎಂಬಿಎ (MBA) ಮತ್ತು ಎಂಸಿಎ (MCA) ಕೋರ್ಸ್‌ಗಳ ಪ್ರವೇಶಕ್ಕೆ ಭಾನುವಾರ (ಜೂನ್ 22) ರಾಜ್ಯದ 11 ಜಿಲ್ಲೆಗಳಲ್ಲಿ ಲಿಖಿತ ಪರೀಕ್ಷೆ (PGCET) ನಡೆಯಲಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಿಗಿ ಕ್ರಮಗಳನ್ನು ಕೈಗೊಂಡಿದೆ.

    ಬೆಂಗಳೂರು, ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ದಾವಣಗೆರೆ, ಧಾರವಾಡ, ಕಲಬುರಗಿ, ಮಂಗಳೂರು, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ನಗರಗಳ ಒಟ್ಟು 68 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ಹಣ ಪಡೆದಿದ್ದು ನಿಜ, ಅದು ಟ್ಯಾಕ್ಸ್, ಅಭಿವೃದ್ಧಿ ಹಣ: ಲಂಚ ಆರೋಪಕ್ಕೆ ಕಮಲನಗರ ಪಿಡಿಓ ಸ್ಪಷ್ಟನೆ

    ಬೆಳಗ್ಗೆ ಎಂಸಿಎ ಹಾಗೂ ಮಧ್ಯಾಹ್ನ ಎಂಬಿಎ ಪ್ರವೇಶಕ್ಕೆ ಪರೀಕ್ಷೆ ನಡೆಯಲಿದೆ. ಎಂಸಿಎ ಪ್ರವೇಶಕ್ಕೆ 18,738 ಹಾಗೂ ಎಂಬಿಎ ಪ್ರವೇಶಕ್ಕೆ 33,282 ಮಂದಿ ಪರೀಕ್ಷೆ ಬರೆಯಲಿದ್ದಾರೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಹೆಲ್ಪ್‌ಲೈನ್‌ ಹೆಸರಲ್ಲಿ ವಂಚನೆ ಆರೋಪ – ಬೆಂಗಳೂರಿನ ಸಂಧ್ಯಾ ಪವಿತ್ರ ವಿರುದ್ಧ ಎಫ್‌ಐಆರ್

    ವಸ್ತ್ರ ಸಂಹಿತೆ ನಾಳಿನ ಪರೀಕ್ಷೆಗೂ ಅನ್ವಯ ಆಗಲಿದ್ದು, ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ಯಾಮೆರಾ ಕಣ್ಗಾವಲು ಕೂಡ ಇರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಂಕರ್‌ನಿಂದಲೇ ಸಂಭಾವ್ಯ ಉತ್ತರಾಧಿಕಾರಿಗಳ ಹೆಸರನ್ನು ಸೂಚಿಸಿದ ಖಮೇನಿ

  • ಮೇ 31ಕ್ಕೆ ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆ – ಕೆಇಎ

    ಮೇ 31ಕ್ಕೆ ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆ – ಕೆಇಎ

    ಬೆಂಗಳೂರು: ಎಂ.ಟೆಕ್, ಡಿಸಿಇಟಿ (DCET) ಪ್ರವೇಶ ಮತ್ತು ಐಎಎಸ್, ಕೆಎಎಸ್ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಶನಿವಾರ (ಮೇ 31) ರಾಜ್ಯದ 113 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಕಲ ಸಿದ್ಧತೆ ಮಾಡಿಕೊಂಡಿದೆ.

    ಈ ಪರೀಕ್ಷೆಗಳಿಗೂ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡುವುದರ ಜೊತೆಗೆ ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕವೇ ಅಭ್ಯರ್ಥಿಗಳ ಗುರುತು ಪತ್ತೆ ಹಚ್ಚಲಾಗುತ್ತದೆ. ನಕಲಿ ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶವೇ ಇರುವುದಿಲ್ಲ. 52,352 ಮಂದಿ ಈ ಪರೀಕ್ಷೆಗಳನ್ನು ಬರೆಯಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಎಲ್ಲ ಗ್ಯಾರಂಟಿ ಕೊಟ್ಟರು, ಪ್ರಾಣದ ಗ್ಯಾರಂಟಿ ಕೊಡ್ತಿಲ್ಲ: ಶೋಭಾ ಕರಂದ್ಲಾಜೆ ಕೆಂಡಾಮಂಡಲ

    ಡಿಪ್ಲೊಮಾ ಮುಗಿಸಿ ಎಂಜಿನಿಯರಿಂಗ್ ಪದವಿಯ 3ನೇ ಸೆಮಿಸ್ಟರ್ ಅಥವಾ ಎರಡನೇ ವರ್ಷಕ್ಕೆ ನೇರ ಪ್ರವೇಶ ಕಲ್ಪಿಸುವುದಕ್ಕೆ ರಾಜ್ಯದ 46 ಕೇಂದ್ರಗಳಲ್ಲಿ ಡಿಸಿಇಟಿ ನಡೆಸುತ್ತಿದ್ದು, 21,201 ಮಂದಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಎಂ.ಟೆಕ್‌ನ ಮೆಕಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ ಸೈನ್ಸ್ ಕೋರ್ಸ್‌ಗಳ ಪ್ರವೇಶಕ್ಕೆ 13 ಕೇಂದ್ರಗಳಲ್ಲಿ ಪಿಜಿಸಿಇಟಿ ನಡೆಯುತ್ತಿದ್ದು, 3,756 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾದಲ್ಲಿ ಸುದೀಪ್?

    ಸಮಾಜ ಕಲ್ಯಾಣ ಇಲಾಖೆಯು ಕೆಎಎಸ್ ಪರೀಕ್ಷೆಯ ತರಬೇತಿಗೆ ನಡೆಸುವ ಪರೀಕ್ಷೆಯನ್ನು 19,992 ಮಂದಿ ಬರೆಯಲಿದ್ದು, 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳ ಸಲುವಾಗಿ ಐಎಎಸ್ ಮತ್ತು ಕೆಎಎಸ್ ತರಬೇತಿಗಾಗಿ ಪರೀಕ್ಷೆ ನಡೆಯಲಿದ್ದು, ಅದನ್ನು 7,403 ಮಂದಿ ಬರೆಯಲಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಚಾಲ್ತಿಯಲ್ಲಿಲ್ಲದ ನಾಣ್ಯ, ವ್ಯಾಲ್ಯೂ ಇಲ್ಲ: ಶೋಭಾ ಕರಂದ್ಲಾಜೆ ವ್ಯಂಗ್ಯ

    ವಿಕಲಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ
    ಯುಜಿಸಿಇಟಿ ಬರೆದ ವಿಕಲಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಜೂನ್ 3ರಿಂದ 6ರವರೆಗೆ ನಡೆಯಲಿದೆ. ಇದರಲ್ಲಿ ಭಾಗವಹಿಸಲು ಇಚ್ಛಿಸುವ ಅಭ್ಯರ್ಥಿಗಳು ಮುಂಗಡವಾಗಿ ದಿನಾಂಕವನ್ನು ಕಾಯ್ದಿರಿಸಿಕೊಳ್ಳಲು ವೆಬ್‌ಸೈಟ್‌ನಲ್ಲಿ ಲಿಂಕ್ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಲೆನಾಡು ಭಾಗದಲ್ಲಿ ಭಾರೀ ಮಳೆ – ಶಿರಾಡಿಘಾಟ್‌ನಲ್ಲಿ ಮತ್ತೆ ಭೂಕುಸಿತ

    ಪಿಜಿಸಿಇಟಿ-25 (ಎಂಇ, ಎಂಟೆಕ್) ಆಯ್ಕೆ ಮಾಡಿರುವ ವಿಕಲಚೇತನ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ಜೂನ್ 9ರಂದು ಕೆಇಎ ಕಚೇರಿಯಲ್ಲಿ ನಡೆಯಲಿದೆ. ಎಂಬಿಎ, ಎಂಸಿಎ ಅಭ್ಯರ್ಥಿಗಳ ವೈದ್ಯಕೀಯ ತಪಾಸಣೆ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

  • PGCET: ಐದು ಎಂಟೆಕ್ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಇಲ್ಲ- ಕೆಇಎ

    PGCET: ಐದು ಎಂಟೆಕ್ ಕೋರ್ಸ್‌ಗಳಿಗೆ ಪ್ರವೇಶ ಪರೀಕ್ಷೆ ಇಲ್ಲ- ಕೆಇಎ

    ಬೆಂಗಳೂರು: ಲಭ್ಯವಿರುವ ಸೀಟುಗಳಿಗಿಂತ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿರುವ ಕಾರಣ ಎಂ.ಇ/ಎಂ.ಟೆಕ್‌ನ (M.E/M.Tech) ಈ ಕೆಳಗಿನ ಐದು ಕೋರ್ಸ್‌ಗಳಿಗೆ ಪಿಜಿಸಿಇಟಿ-25 (PGCET-25) ನಡೆಸದಿರಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತೀರ್ಮಾನಿಸಿದೆ.

    ಬಯೊ- ಟೆಕ್ನಾಲಜಿ, ಕೆಮಿಕಲ್ ಎಂಜಿನಿಯರಿಂಗ್, ಎನ್ವಿರಾನ್ಮೆಂಟ್ ಎಂಜಿನಿಯರಿಂಗ್, ಪಾಲಿಮರ್ ಸೈನ್ಸ್ ಮತ್ತು ಟೆಕ್ಸ್‌ಟೈಲ್ ಟೆಕ್ನಾಲಜಿ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಲಭ್ಯವಿರುವ ಸೀಟುಗಳಿಗಿಂತ ಕಡಿಮೆ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಹೀಗಾಗಿ ಅರ್ಹದಾಯಕ ಪದವಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ, ಪ್ರಕಟಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್‌, ಚೀನಾಗೆ ಟಕ್ಕರ್‌ ಕೊಡಲು ಹೊಸ ಫೈಟರ್‌ ಜೆಟ್‌ಗೆ ಭಾರತ ಅನುಮೋದನೆ

    ಈ ಮೇಲಿನ ಕೋರ್ಸ್‌ಗಳನ್ನು ಹೊರತುಪಡಿಸಿ, ಸಿವಿಲ್ ಎಂಜಿನಿಯರಿಂಗ್, ಮೆಕಾನಿಕಲ್ ಸೈನ್ಸ್ ಮತ್ತು ಎಲೆಕ್ಟ್ರಿಕಲ್ ಸೈನ್ಸ್ ವಿಷಯಗಳಿಗೆ ಇದೇ 31ರಂದು ವೇಳಾಪಟ್ಟಿ ಪ್ರಕಾರ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಜೂನ್ 2ರಂದು ನಡೆಸಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಜ್ಯೋತಿ ಮಲ್ಹೋತ್ರಾ ಮೊಬೈಲ್, ಲ್ಯಾಪ್‌ಟಾಪ್‌ನಿಂದ 12,000 ಜಿಬಿ ಡಾಟಾ ರಿಟ್ರೀವ್ – ಸ್ಫೋಟಕ ರಹಸ್ಯಗಳು ಬಯಲಿಗೆ!

  • PGCET: ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಈ ಬಾರಿ ಸಿಬಿಟಿ – ಕೆಇಎ

    PGCET: ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಈ ಬಾರಿ ಸಿಬಿಟಿ – ಕೆಇಎ

    ಬೆಂಗಳೂರು: ಪಿಜಿಸಿಇಟಿ-25ಕ್ಕೆ ಸಂಬಂಧಿಸಿದಂತೆ ಎಂ.ಇ ಮತ್ತು ಎಂ.ಟೆಕ್‌ನ ಕಂಪ್ಯೂಟರ್ ಸೈನ್ಸ್ ಕೋರ್ಸ್ ಪ್ರವೇಶಕ್ಕೆ ಮಾತ್ರ ಇದೇ ಮೊದಲ ಬಾರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ(CBT) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ತೀರ್ಮಾನಿಸಿದೆ.

    ಜೂನ್ 2 ರಂದು ಪಿಜಿಸಿಇಟಿ(PGCET) ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸವಾಗಲಿ ಎನ್ನುವ ಕಾರಣಕ್ಕೆ ಮೇ 26 ಮತ್ತು 27ರಂದು ಅಣಕು ಪರೀಕ್ಷೆ ನಡೆಸಲಾಗುತ್ತದೆ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ(H Prasanna) ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬುರ್ಖಾಧಾರಿ ಮಹಿಳೆಯರಿಂದ ಮಗು ಕಿಡ್ನ್ಯಾಪ್‍ಗೆ ಯತ್ನ – ತಡೆಯಲು ಬಂದ ತಾಯಿಗೆ ಚಾಕು ಇರಿತ

    ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿದ ನಂತರ ಪರೀಕ್ಷಾಭ್ಯಾಸಕ್ಕೆ ಪ್ರಾಯೋಗಿಕ ಲಿಂಕ್ ನೀಡಲಾಗುವುದು. ಲಿಂಕ್ ಮೂಲಕ ಅಭ್ಯಾಸ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ | ಆರ್‌ಸಿಬಿ-ಕೆಕೆಆರ್‌ ಪಂದ್ಯಕ್ಕೆ ಅಡ್ಡಿ

    ಕಂಪ್ಯೂಟರ್ ಸೈನ್ಸ್ ಹೊರತುಪಡಿಸಿ, ಎಂಇ ಮತ್ತು ಎಂ.ಟೆಕ್‌ನ ಇತರ ಕೋರ್ಸ್‌ಗಳ ಪ್ರವೇಶಕ್ಕೆ ಮೇ 31 ರಂದು ಲಿಖಿತ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಪ್ರಾಯೋಗಿಕವಾಗಿ ಇದೇ ಮೊದಲ ಬಾರಿಗೆ ಮಾಡಲು ತೀರ್ಮಾನಿಸಿದ್ದು, ಮೂಲಸೌಕರ್ಯ ನೋಡಿಕೊಂಡು ಮುಂದಿನ ದಿನಗಳಲ್ಲಿ ಇತರ ಕೋರ್ಸ್‌ಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

  • ಪಿಜಿಸಿಇಟಿ ಮುಂದಕ್ಕೆ – ಅರ್ಜಿ ಸಲ್ಲಿಸಲು ಜು.7ರವರೆಗೆ ಅವಕಾಶ

    ಪಿಜಿಸಿಇಟಿ ಮುಂದಕ್ಕೆ – ಅರ್ಜಿ ಸಲ್ಲಿಸಲು ಜು.7ರವರೆಗೆ ಅವಕಾಶ

    ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ (2024) ಎಂಬಿಎ, ಎಂಸಿಎ, ಎಂ.ಇ./ಎಂ.ಟೆಕ್./ ಎಂ.ಆರ್ಕಿಟೆಕ್ಚರ್‌ ಕೋರ್ಸುಗಳ ಪ್ರವೇಶಕ್ಕೆ ಅರ್ಹತೆ ನಿರ್ಧರಿಸಲು ಜು.13 ಮತ್ತು 14 ರಂದು ನಡೆಸಲು ನಿಗದಿಪಡಿಸಲಾಗಿದ್ದ ಪಿಜಿಸಿಇಟಿ-2024ರ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ.

    ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳ ಅಂತಿಮ ಸೆಮಿಸ್ಟರ್ ಪರೀಕ್ಷೆಗಳು ಜುಲೈ 5 ಮತ್ತು ಜುಲೈ 10 ರಿಂದ ಪ್ರಾರಂಭವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪರೀಕ್ಷೆ ನಡೆಯುವ ಹೊಸ ದಿನಾಂಕವನ್ನು ಮುಂಬರುವ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಮಂಗಳವಾರ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಸೂರಜ್‌ ಪರ ದೂರು ನೀಡಿದ್ದ ಶಿವಕುಮಾರ್‌ ವಿರುದ್ಧ ಹಣ ದುರುಪಯೋಗ ಆರೋಪ, ಎಫ್‌ಐಆರ್‌ ದಾಖಲು

    ಈ ಮುಂದೂಡಿಕೆ ಹಿನ್ನೆಲೆಯಲ್ಲಿ, ಪಿಜಿಸಿಇಟಿ-2024ಕ್ಕೆ ನೋಂದಣಿ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದಕ್ಕೂ ಕಾಲಾವಕಾಶ ವಿಸ್ತರಣೆ ಮಾಡಿ ಅಂತಿಮ ಅವಕಾಶ ಕಲ್ಪಿಸಲಾಗಿದೆ.

    ಇಲ್ಲಿಯವರೆಗೆ ನೋಂದಣಿ ಮಾಡದೇ ಇರುವ ಆಸಕ್ತ ಅಭ್ಯರ್ಥಿಗಳು ಜುಲೈ 7ರ ಒಳಗೆ ನೋಂದಣಿ ಮಾಡಿ ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಿ ಜುಲೈ 9ರ ಸಂಜೆ 6.00 ರೊಳಗೆ ಶುಲ್ಕ ಪಾವತಿಸಬಹುದು. ನೋಂದಣಿ ಮಾಡಲು ಮತ್ತೊಮ್ಮೆ ದಿನಾಂಕವನ್ನು ವಿಸ್ತರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಇದನ್ನೂ ಓದಿ: ಎರಡೂವರೆ ವರ್ಷದ ಬಳಿಕ ಸಚಿವರ ಬದಲಾವಣೆ ಆಗಬೇಕು ಎಂಬ ಹೇಳಿಕೆಗೆ ಈಗಲೂ ಬದ್ಧ: ಮುನಿಯಪ್ಪ

    ಪರಿಷ್ಕೃತ ಮಾಹಿತಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ಸೈಟ್ http://kea.kar.nic.in ನೋಡುತ್ತಿರಬೇಕೆಂದು ಸೂಚಿಸಲಾಗಿದೆ.

  • ಜುಲೈ 13,14ಕ್ಕೆ ಪಿಜಿಸಿಇಟಿ ಪರೀಕ್ಷೆ: ಕೆಇಎ

    ಜುಲೈ 13,14ಕ್ಕೆ ಪಿಜಿಸಿಇಟಿ ಪರೀಕ್ಷೆ: ಕೆಇಎ

    ಬೆಂಗಳೂರು: 2024-25ನೇ ಸಾಲಿನ ಸ್ನಾತಕೋತ್ತರ ಕೋರ್ಸ್‌ಗಳ (ಎಂಬಿಎ, ಎಂಸಿಎ, ಎಂ.ಟೆಕ್, ಎಂ.ಇ, ಎಂ.ಆರ್ಕಿಟೆಕ್ಚರ್) ಪ್ರವೇಶಕ್ಕೆ ಜುಲೈ 13 ಮತ್ತು 14ರಂದು ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET-24) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತೀರ್ಮಾನಿಸಿದೆ.

    ಎಂ.ಇ/ಎಂ.ಟೆಕ್/ಎಂ.ಆರ್ಕಿಟೆಕ್ಚರ್ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಜುಲೈ 13 ಹಾಗೂ ಎಂಸಿಎ ಮತ್ತು ಎಂಬಿಎ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಜುಲೈ 14ರಂದು ನಡೆಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಕ್ಯಾಂಟರ್ ಅಡ್ಡಗಟ್ಟಿ 32 ಲಕ್ಷ ರೂ. ದರೋಡೆ ಪ್ರಕರಣ – ಚಾಲಕನೇ ಮಾಸ್ಟರ್ ಮೈಂಡ್

    ಪಿಜಿಸಿಇಟಿ ಪರೀಕ್ಷೆಗೆ ಮೇ 27ರಿಂದ ಜೂನ್ 17ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಜೂನ್ 18ರೊಳಗೆ ಶುಲ್ಕ ಪಾವತಿಸಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಎಲ್ಲೇ ಇದ್ದರೂ ಕೂಡಲೇ ಸ್ವದೇಶಕ್ಕೆ ಬಾ, ನನ್ನ ತಾಳ್ಮೆ ಪರೀಕ್ಷಿಸಬೇಡ – ಪ್ರಜ್ವಲ್‌ಗೆ ಹೆಚ್‌ಡಿಡಿ ಸೂಚನೆ

    ಗೇಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಪಿಜಿಸಿಇಟಿ-24ಕ್ಕೆ ಹಾಜರಾಗುವ ಅಗತ್ಯ ಇಲ್ಲ. ಆದರೆ, ಅಂತಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಿ, ಪ್ರವೇಶಕ್ಕೆ ಅರ್ಹರಾಗಬೇಕಾಗುತ್ತದೆ. ಗೇಟ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆಯೇ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ನೀಡಲಾಗುತ್ತದೆ ಎಂದು ವಿವರಿಸಿದರು. ಇದನ್ನೂ ಓದಿ: ಸಂಕಷ್ಟ ನಿವಾರಣೆಗಾಗಿ ಗಾಣಗಾಪುರದ ದತ್ತನ ಮೊರೆ ಹೋದ ರೇವಣ್ಣ