Tag: ಪಿಕೆ

  • 11 ವರ್ಷಗಳ ಬಳಿಕ ‘ಪಿಕೆ’ ನಿರ್ದೇಶಕನ ಜೊತೆ ಕೈಜೋಡಿಸಿದ ಆಮೀರ್ ಖಾನ್

    11 ವರ್ಷಗಳ ಬಳಿಕ ‘ಪಿಕೆ’ ನಿರ್ದೇಶಕನ ಜೊತೆ ಕೈಜೋಡಿಸಿದ ಆಮೀರ್ ಖಾನ್

    ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಸದ್ಯ ‘ಸಿತಾರೆ ಜಮೀನ್ ಪರ್’ (Sitaare Jameen Par) ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಸಿನಿಮಾ ಬಗ್ಗೆ ಅಪ್‌ಡೇಟ್‌ವೊಂದು ಸಿಕ್ಕಿದೆ. 11 ವರ್ಷಗಳ ಬಳಿಕ ಪಿಕೆ, ಸಂಜು ಸಿನಿಮಾಗಳ ನಿರ್ದೇಶಕ ರಾಜ್‌ಕುಮಾರ್ ಹಿರಾನಿ (Rajkumar Hirani) ಜೊತೆ ನಟ ಕೈಜೋಡಿಸಿದ್ದಾರೆ. ಇದನ್ನೂ ಓದಿ:ಬೆಡ್‌ರೂಮಲ್ಲಿ ಬಿಕಿನಿ ತೊಟ್ಟು ಸೆಲ್ಫಿ ಕ್ಲಿಕ್ಕಿಸಿದ ನಟಿ – ದಿಶಾ ಪಟಾನಿ ಮೈಮಾಟಕ್ಕೆ ಪಡ್ಡೆ ಹುಡುಗರು ಬೋಲ್ಡ್

    ‘ಪಿಕೆ’ ಚಿತ್ರದ ಮೂಲಕ ಸೂಪರ್ ಹಿಟ್ ಕೊಟ್ಟಿದ್ದ ಆಮೀರ್ ಖಾನ್ ಮತ್ತು ರಾಜ್‌ಕುಮಾರ್ ಹಿರಾನಿ ಮತ್ತೆ ಹೊಸ ಸಿನಿಮಾಗಾಗಿ ಒಂದಾಗಿದ್ದಾರೆ. ಭಾರತೀಯ ಸಿನಿಮಾರಂಗ ಪಿತಾಮಹ ಎಂದು ಕರೆಯಲಾಗುವ ‘ದಾದಾ ಸಾಹೇಬ್ ಪಾಲ್ಕೆ’ ಅವರ ಜೀವನ ಚರಿತ್ರೆಯನ್ನು ಸಿನಿಮಾ ರೂಪದಲ್ಲಿ ತರಲು ನಿರ್ಧರಿಸಲಾಗಿದೆ. ಇದನ್ನೂ ಓದಿ:ಬ್ರೇಕಪ್ ಬಳಿಕ ಮಹತ್ವದ ನಿರ್ಧಾರ ಕೈಗೊಂಡ ತಮನ್ನಾ ಭಾಟಿಯಾ

    ನಿರ್ದೇಶಕ, ನಿರ್ಮಾಪಕ, ಬರಹಗಾರ ದಾದಾ ಸಾಹೇಬ್ ಪಾಲ್ಕೆ ಅವರು ಸಿನಿಮಾ ರಂಗಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಜೀವನ ಚರಿತ್ರೆಗೆ ರಾಜ್‌ಕುಮಾರ್ ಹಿರಾನಿ ಆ್ಯಕ್ಷನ್ ಕಟ್ ಹೇಳಲು ಹೊರಟಿದ್ದಾರೆ. ಆಮೀರ್ ಇದರಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್‌ ಕೆಲಸ ಶುರುವಾಗಿದೆ.

  • ‘ಪಿಕೆ’ ಚಿತ್ರೀಕರಣದಲ್ಲಿ ನಿಜವಾಗಿಯೂ ಬೆತ್ತಲೆಯಾಗಿದ್ದೆ: ನಟ ಆಮೀರ್ ಖಾನ್

    ‘ಪಿಕೆ’ ಚಿತ್ರೀಕರಣದಲ್ಲಿ ನಿಜವಾಗಿಯೂ ಬೆತ್ತಲೆಯಾಗಿದ್ದೆ: ನಟ ಆಮೀರ್ ಖಾನ್

    ಬಾಲಿವುಡ್ ನ ಸೂಪರ್ ಹಿಟ್ ಸಿನಿಮಾ ಪಿಕೆ ಸಿನಿಮಾದ ದೃಶ್ಯವೊಂದರ ಬಗ್ಗೆ ಮಾತನಾಡಿದ್ದಾರೆ ನಟ ಆಮೀರ್ ಖಾನ್. ಕಾಮಿಡಿ ವಿತ್ ಕಪಿಲ್ ಶೋಗೆ ಬಂದಿದ್ದ ಅವರು, ಪಿಕೆ ಸಿನಿಮಾದ ದೃಶ್ಯವೊಂದರಲ್ಲಿ ರಿಯಲ್ ಆಗಿ ಬೆತ್ತಲೆಯಾಗಿಯೇ ನಟಿಸಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಪಿಕೆ ಸಿನಿಮಾದಲ್ಲಿ ಖಾಸಗಿ ಅಂಗಾಂಗಕ್ಕೆ  ರೇಡಿಯೋ ಮುಚ್ಚಿಕೊಂಡು ಓಡುವ ದೃಶ್ಯವೊಂದಿದೆ. ಈ ದೃಶ್ಯದಲ್ಲಿ ತಾವು ಸಂಪೂರ್ಣ ಬೆತ್ತಲೆಯಾಗಿಯೇ ನಟಿಸಿದ್ದೆ. ಅದೊಂದು ರೀತಿಯಲ್ಲಿ ಮುಜಗರ ಕೂಡ ತಂದಿತ್ತು. ಮಾಡಲೇಬೇಕಾದ ಅನಿವಾರ್ಯ ಕೂಡ ಎದುರಾಗಿತ್ತು ಎಂದಿದ್ದಾರೆ ಆಮೀರ್.

    ಈ ಮೊದಲು ನಿರ್ದೇಶಕ ರಾಜ್ ಕುಮಾರ್ ಹಿರಾನಿ, ಶಾರ್ಟ್ಸ್ ಧರಿಸಿದ್ದರು. ಅದನ್ನು ಹಾಕಿಕೊಂಡು ಓಡಲು ಸಾಧ್ಯವಾಗಲಿಲ್ಲ. ಪದೇ ಪದೇ ಬಿಚ್ಚಿ ಬೀಳುತ್ತಿತ್ತು. ಹಾಗಾಗಿ ಶಾರ್ಟ್ಸ್ ಕಿತ್ತಾಕಿ, ನೈಜವಾಗಿಯೇ ಬೆತ್ತಲೆ ದೃಶ್ಯ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಎಲ್ಲ ವಿಷ್ಯದಲ್ಲಿ ನಾನು ಫರ್ಫೆಕ್ಟ್ ಎಂದಿದ್ದಾರೆ ಆಮೀರ್.

     

    ಹಳ್ಳಿಯೊಂದರಲ್ಲಿ ಚಿತ್ರೀಕರಣ ನಡೆದಿದ್ದರಿಂದ ಜನರೂ ಇರಲಿಲ್ಲ. ಶೂಟಿಂಗ್ ಸ್ಪಾಟ್ ನಲ್ಲೂ ಕಡಿಮೆ ಸದಸ್ಯರು ಇದ್ದರು. ಆದರೂ, ಆತಂಕದಲ್ಲೇ ಆ ದೃಶ್ಯವನ್ನು ಮುಗಿಸಿದೆ ಎಂದು ಆಮೀರ್ ಹೇಳಿಕೊಂಡಿದ್ದಾರೆ.

  • ಬಿಟೌನ್‌ ಬಾಕ್ಸ್ಆಫೀಸ್‌ನಲ್ಲಿ 329 ಕೋಟಿ ಬಾಚಿದ `ಕೆಜಿಎಫ್ 2′ ಚಿತ್ರ

    ಬಿಟೌನ್‌ ಬಾಕ್ಸ್ಆಫೀಸ್‌ನಲ್ಲಿ 329 ಕೋಟಿ ಬಾಚಿದ `ಕೆಜಿಎಫ್ 2′ ಚಿತ್ರ

    ಬಾಲಿವುಡ್‌ನಲ್ಲಿ ಸದ್ಯ ಸೌಂಡ್ ಮಾಡ್ತಿರೋ ಏಕೈಕ ಚಿತ್ರ ಅಂದ್ರೆ `ಕೆಜಿಎಫ್ 2′ ಸಿನಿಮಾ. ಈ ಚಿತ್ರದದ ಯಶಸ್ಸಿನ ನಂತರ ಹಿಂದಿ ಚಿತ್ರಗಳನ್ನೇ ರಿಲೀಸ್ ಮಾಡಲು ಹಿಂದೆ ಮುಂದೆ ನೋಡ್ತಿದ್ದಾರೆ ಬಿಟೌನ್ ಮಂದಿ. ಚಿತ್ರ ಸಕ್ಸಸ್‌ಫುಲ್ ಪ್ರದರ್ಶನ ಕಾಣ್ತಾ ಎರಡನೇ ವಾರದತ್ತ ಮುನ್ನುಗುತ್ತಿದೆ. ಇವರೆಗೂ ಎಲ್ಲೂ ಹಿಂದೆ ಬೀಳದೇ ಸೋಮವಾರದ ಕಲೆಕ್ಷನ್‌ನಲ್ಲಿ 8 ಕೋಟಿ ಬಾಚಿದೆ. ಈ ಮೂಲಕ ಚಿತ್ರದ ಒಟ್ಟು ಕಲೆಕ್ಷನ್ 329 ಕೋಟಿ ರೂಪಾಯಿ ಖಜಾನೆ ಭರ್ತಿ ಮಾಡಿದೆ.

    ಈ ಹಿಂದಿನ ಎಲ್ಲಾ ಸಿನಿಮಾಗಳ ದಾಖಲೆಗಳನ್ನ `ಕೆಜಿಎಫ್ 2′ ಮುರಿದಿದೆ. ಬಾಲಿವುಡ್ ಬಾಕ್ಸ್ಆಫೀಸ್‌ನಲ್ಲಿ ಸಖತ್ ಸದ್ದು ಮಾಡಿದ್ದ ಭಜರಂಗಿ ಭಾಯಿಜಾನ್ 320.34 ಕೋಟಿ, ಸುಲ್ತಾನ್ 300 ಕೋಟಿ, ಪದ್ಮಾವತ್ 302 ಕೋಟಿ ಬಾಚಿತ್ತು ಈಗ ಈ ಚಿತ್ರಗಳ ರೆಕಾರ್ಡ್‌ `ಕೆಜಿಎಫ್ 2′ ಬ್ರೇಕ್ ಮಾಡಿದೆ.

    ಬಿಟೌನ್‌ನ ʻಸಂಜುʼ, ʻಟೈಗರ್ ಜಿಂದಾ ಹೈʼ, ʻಪಿಕೆʼ ಚಿತ್ರಗಳನ್ನು ಓವರ್‌ಟೆಕ್ ಮಾಡಿದೆ `ಕೆಜಿಎಫ್ 2′ ಚಿತ್ರದ ಜೊತೆ ಹಿಂದಿಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಅಮೀರ್ ಖಾನ್ ನಟನೆಯ `ದಂಗಲ್’ ಬಾಲಿವುಡ್ ಬಾಕ್ಸ್ ಆಫೀಸ್‌ನಲ್ಲಿ 387 ಕೋಟಿ ಬಾಚಿತ್ತು ಇದೀಗ ಈ ಎಲ್ಲಾ ಚಿತ್ರಗಳನ್ನ ಮೀರಿ `ಕೆಜಿಎಫ್ 2′ ಮುನ್ನುಗುತ್ತಿದೆ ಎಂಬುದು ಸಿನಿಮಂದಿಯ ಲೆಕ್ಕಾಚಾರ.‌

    ಇನ್ನು ಇತ್ತೀಚೆಗೆ ರಿಲೀಸ್ ಆದ `ಜೆರ್ಸಿ’ ಚಿತ್ರಕ್ಕೂ ಸೈಡ್ ಹೊಡೆದು `ಕೆಜಿಎಫ್ 2′ ಉತ್ತಮ ಪ್ರದರ್ಶನ ಕಂಡಿತ್ತು. ಬಾಕ್ಸ್ಆಫೀಸ್‌ನಲ್ಲಿ ಒಟ್ಟು 329.40 ಕೋಟಿ ರೂಪಾಯಿ ಲಕೋಟೆ ಬಾಚಿದೆ ಯಶ್ ನಟನೆಯ ಸಿನಿಮಾ. `ಕೆಜಿಎಫ್ 2′ ಓಟಕ್ಕೆ ಎಲ್ಲಾ ವುಡ್‌ಗಳ ಸಿನಿಮಾನೂ ಬೆದರಿ ನಿಲ್ಲುತ್ತಿದೆ.

  • ಮತ್ತೆ ಮೋಡಿ ಮಾಡಲು ಬರಲಿದೆ ‘ಪಿಕೆ’ ಜೋಡಿ: ಆಮೀರ್ ಜತೆ ರಣ್‌ಬೀರ್ ಜುಗಲ್‌ಬಂದಿ

    ಮತ್ತೆ ಮೋಡಿ ಮಾಡಲು ಬರಲಿದೆ ‘ಪಿಕೆ’ ಜೋಡಿ: ಆಮೀರ್ ಜತೆ ರಣ್‌ಬೀರ್ ಜುಗಲ್‌ಬಂದಿ

    ಬಾಲಿವುಡ್ ಸ್ಟಾರ್ ನಟ ಆಮೀರ್ ಖಾನ್ ನಟನೆಯ `ಲಾಲ್ ಸಿಂಗ್ ಚಡ್ಡಾ’ ರಿಲೀಸ್‌ಗೆ ರೆಡಿ ಆಗಿದೆ. ಈ ಚಿತ್ರದ ನಂತರ ಮಿಸ್ಟರ್ ಪರ್ಫೆಕ್ಟ್ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ, ಯಾವ ರೀತಿಯ ಪಾತ್ರವನ್ನು ಅವರು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಅವರು ಮುಂದಿನ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜತೆ ನಟಿಸುತ್ತಿದ್ದು, ಹಲವು ವರ್ಷಗಳ ಅವರ ಅಭಿಮಾನಿಗಳ ಆಸೆಯನ್ನು ಈ ಮೂಲಕ ಈಡೇರಿಸುತ್ತಿದ್ದಾರೆ.

    ಆಮೀರ್ ಖಾನ್ ಕೆರಿಯರ್‌ನ ಸೂಪರ್ ಹಿಟ್ `ಪಿಕೆ’ ಚಿತ್ರದಲ್ಲಿ ರಣ್‌ಬೀರ್ ಕಪೂರ್ ಗೆಸ್ಟ್ ರೋಲ್ ನಲ್ಲಿ ನಟಿಸಿದ್ದರು. `ಪಿಕೆ’ ಚಿತ್ರ ಇಷ್ಟಪಟ್ಟಿದ್ದ ಅಭಿಮಾನಿಗಳು ಇವರಿಬ್ಬರೂ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೆ ಹೇಗಿರುತ್ತದೆ ಅಂತಾ ಲೆಕ್ಕಾಚಾರ ಹಾಕಿದ್ದರು. ಈಗ ಅಭಿಮಾನಿಗಳ ಅಭಿಲಾಷೆಯಂತೆ ಆಮೀರ್ ಖಾನ್ ಮತ್ತು ರಣ್‌ಬೀರ್ ಕಪೂರ್ ಒಂದೇ ಚಿತ್ರದಲ್ಲಿ ತೆರೆ ಹಂಚಿಕೊಳ್ಳುತ್ತಿದ್ದಾರೆ.

    ಹೊಸ ಪ್ರಾಜೆಕ್ಟ್‌ಗಾಗಿ ತೆರೆಯಮರೆಯಲ್ಲಿ ಜೋರಾಗಿಯೇ ತಯಾರಿ ನಡೆಯುತ್ತಿದೆ. ಈ ಹೊಸ ಚಿತ್ರವನ್ನ ಸರ್ಫರೋಶ್ ಎಂಬುವವರು ನಿರ್ಮಾಣ ಮಾಡುತ್ತಿದ್ದು, ಹೊಸ ರೀತಿಯ ಕಥೆಯನ್ನು ಚಿತ್ರಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆಯಂತೆ.ಇಬ್ಬರು ಸ್ಟಾರ್‌ಗಳಿರೋ ಈ ಚಿತ್ರದಲ್ಲಿ ವಿಭಿನ್ನ ಕಂಟೆಂಟ್ ಜೊತೆ ಪವರ್‌ಫುಲ್ ಪಾತ್ರಗಳೂ ಇರಲಿದ್ದು, `ಪಿಕೆ’ ಚಿತ್ರ ನೋಡಿ ಖುಷಿಪಟ್ಟಿದ್ದ ಅಭಿಮಾನಿಗಳಿಗೆ, ನಯಾ ಪ್ರಾಜೆಕ್ಟ್‌ನಲ್ಲಿ ಆಮೀರ್ ಮತ್ತು ರಣ್‌ಬೀರ್ ಕಪೂರ್ ಜುಗಲ್‌ಬಂದಿ ಅಟ್ರ್ಯಾಕ್ಟ್‌ ಮಾಡಲಿದೆ. ಇದನ್ನು ಓದಿ:  ಕೆಜಿಎಫ್ 2 : ಗಗನ ನೀ.. ಇಂದು ಅಮ್ಮನ ಹಾಡು ರಿಲೀಸ್

    ಆಮೀರ್ ಖಾನ್ ನಟನೆಯ `ಲಾಲ್ ಸಿಂಗ್ ಚಡ್ಡಾ’ ಚಿತ್ರದ ಪ್ರೀ ಪ್ರೋಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದ್ದು, ಸಾಕಷ್ಟು ವಿಚಾರಗಳಿಂದ ಗಮನ ಸೆಳೆಯುತ್ತಿರೋ ಈ ಚಿತ್ರ ಆಗಸ್ಟ್ 11ಕ್ಕೆ ತೆರೆಗೆ ಬರಲು ಸಜ್ಜಾಗಿದೆ. `ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಬಳಿಕ ಆಮೀರ್ ಮತ್ತು ಆರ್‌ಕೆ ನಟನೆಯ ಚಿತ್ರ ಸೆಟ್ಟೇರಲಿದೆ.

  • ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸುನಾಮಿ: ಒಟ್ಟು ಐದು ದಿನದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?

    ಭಾರತೀಯ ಚಿತ್ರರಂಗದಲ್ಲಿ ಬಾಹುಬಲಿ ಸುನಾಮಿ: ಒಟ್ಟು ಐದು ದಿನದಲ್ಲಿ ಎಷ್ಟು ಕಲೆಕ್ಷನ್ ಆಗಿದೆ?

    ಹೈದರಾಬಾದ್: ಭಾರತೀಯ ಚಿತ್ರ ರಂಗದದಲ್ಲಿ ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಬಾಹುಬಲಿ ಬಿಡುಗಡೆಯಾದ ಐದೇ ದಿನದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಒಟ್ಟು 710 ಕೋಟಿ ರೂ. ಗಳಿಕೆ ಮಾಡಿದೆ.

    ಭಾರತದಲ್ಲಿ 565 ಕೋಟಿ ರೂ. ಗಳಿಕೆ ಮಾಡಿದರೆ, ವಿದೇಶದಲ್ಲಿ ಒಟ್ಟು 145 ಕೋಟಿ ರೂ. ಗಳಿಕೆ ಮಾಡಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಲ ಟ್ವೀಟ್ ಮಾಡಿ ತಿಳಿಸಿದ್ದಾರೆ.

    ಬಹುಬಲಿ ಮೊದಲ ದಿನ 217 ಕೋಟಿ ರೂ ಗಳಿಸಿದ್ದರೆ, ಎರಡನೇ ದಿನ 382.5 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 540 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ನಾಲ್ಕನೇಯ ದಿನ 625 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

    ಬಾಹುಬಲಿ ಹಿಂದಿ ನಾಲ್ಕು ದಿನದಲ್ಲಿ ಒಟ್ಟು 168. 25 ಕೋಟಿ ರೂ. ಗಳಿಸಿದರೆ, ಮಂಗಳವಾರ 30 ಕೋಟಿ ಕಲೆಕ್ಷನ್ ಆಗಿದ್ದು, ಒಟ್ಟು ಐದು ದಿನದಲ್ಲಿ 198.25 ಕೋಟಿ ರೂ. ಗಳಿಕೆಗೆ ಮಾಡಿದೆ ಎಂದು ರಮೇಶ್ ಬಲ ತಿಳಿಸಿದ್ದಾರೆ.

    ದಂಗಲ್ ದಾಖಲೆ ಬ್ರೇಕ್:
    ಭಾರತದಲ್ಲಿ 5 ದಿನದಲ್ಲಿ ಇದೂವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಯ ಅಮೀರ್ ಖಾನ್ ಅಭಿನಯದ ದಂಗಲ್ ಪಾತ್ರವಾಗಿತ್ತು. ದಂಗಲ್ 5 ದಿನದಲ್ಲಿ 387.39 ಕೋಟಿ ಗಳಿಸಿತ್ತು.

    ನಿರ್ಮಾಪಕ ಶೋಭಾ ಯರ್ಲಾಗಡ್ಡ ಅವರು ಬಾಹುಬಲಿ ಭಾಗ 1 ಮತ್ತು ಭಾಗ 2 ನಿರ್ಮಾಣಕ್ಕೆ ಒಟ್ಟು 450 ಕೋಟಿ ರೂ. ಖರ್ಚು ಮಾಡಿದ್ದರು.

    ಇದನ್ನೂ ಓದಿ: ರಾಜಮೌಳಿ ದೇವರು ಕೊಟ್ಟ ಮಗು: ಬಾಹುಬಲಿಗೆ ಗಣ್ಯರ ವಿಮರ್ಶೆ ಹೀಗಿದೆ ನೋಡಿ

    ಇದನ್ನೂ ಓದಿ: ಬಾಹುಬಲಿಗಾಗಿ 5 ವರ್ಷ ಮುಡಿಪಿಟ್ಟ ನಿರ್ದೇಶಕ ರಾಜಮೌಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

  • ಬಾಕ್ಸ್ ಆಫೀಸ್ ನಲ್ಲಿ ಬಾಹುಬಲಿ ಸುಂಟರಗಾಳಿ: 4 ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಹಿಂದಿಯಲ್ಲಿ ಮತ್ತೊಂದು ದಾಖಲೆ

    ಬಾಕ್ಸ್ ಆಫೀಸ್ ನಲ್ಲಿ ಬಾಹುಬಲಿ ಸುಂಟರಗಾಳಿ: 4 ದಿನಗಳಲ್ಲಿ ಎಷ್ಟು ಕಲೆಕ್ಷನ್ ಆಗಿದೆ? ಹಿಂದಿಯಲ್ಲಿ ಮತ್ತೊಂದು ದಾಖಲೆ

    ಹೈದರಾಬಾದ್: ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ದಾಖಲೆಯನ್ನು ಉಡೀಸ್ ಮಾಡುತ್ತಿರುವ ಬಾಹುಬಲಿ ಬಿಡುಗಡೆಯಾದ ಮೊದಲ 4 ದಿನ ಬರೋಬ್ಬರಿ 625 ಕೋಟಿ ರೂ. ಹಣವನ್ನು ಕಲೆಕ್ಷನ್ ಮಾಡಿದೆ.

    ಭಾರತದಲ್ಲಿ 490 ಕೋಟಿ ರೂ. ಗಳಿಸಿದರೆ ವಿದೇಶದಲ್ಲಿ ಒಟ್ಟು 135 ಕೋಟಿ ರೂ. ಗಳಿಸಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಲ ಟ್ವೀಟ್ ಮಾಡಿದ್ದಾರೆ.

    ನಾಲ್ಕನೇಯ ದಿನಕ್ಕೆ ಭಾರತದಲ್ಲಿ ಹಿಂದಿ 165 ಕೋಟಿ ರೂ., ತೆಲುಗು, ತಮಿಳು, ಮಲೆಯಾಳಂ ಒಟ್ಟು 220 ಕೋಟಿ ರೂ. ಗಳಿಸಿದೆ ಎಂದು ಅವರು ತಿಳಿಸಿದ್ದಾರೆ. ಸೋಮವಾರ ಒಂದೇ ದಿನ ಹಿಂದಿ ಬಾಹುಬಲಿ 35ಕೋಟಿ ಗಳಿಸಿದ್ದು, ಸೋಮವಾರ ಒಂದೇ ದಿನ ಹಿಂದಿಯಲ್ಲಿ ಬಿಡುಗಡೆಯಾದ ಚಿತ್ರ ಇಷ್ಟೊಂದು ಕಲೆಕ್ಷನ್ ಮಾಡಿರುವುದು ಇದೇ ಮೊದಲು ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಬಾಹುಬಲಿಗಾಗಿ 5 ವರ್ಷ ಮುಡಿಪಿಟ್ಟ ನಿರ್ದೇಶಕ ರಾಜಮೌಳಿಗೆ ಎಷ್ಟು ಹಣ ಸಿಗುತ್ತೆ ಗೊತ್ತಾ?

    ನಿರ್ಮಾಪಕ ಶೋಭಾ ಯರ್ಲಾಗಡ್ಡ ಅವರು ಬಾಹುಬಲಿ ಭಾಗ 1 ಮತ್ತು ಭಾಗ 2 ನಿರ್ಮಾಣಕ್ಕೆ ಒಟ್ಟು 450 ಕೋಟಿ ರೂ. ಖರ್ಚಾಗಿದೆ ಎನ್ನುವುದನ್ನು ತಿಳಿಸಿದ್ದಾರೆ ಎಂದು ರಮೇಶ್ ಬಲ ಟ್ವೀಟ್ ಮಾಡಿದ್ದಾರೆ.

    ಬಹುಬಲಿ ಮೊದಲ ದಿನ 217 ಕೋಟಿ ರೂ ಗಳಿಸಿದ್ದರೆ, ಎರಡನೇ ದಿನ 382.5 ಕೋಟಿ ರೂ. ಗಳಿಸಿತ್ತು. ಮೂರನೇ ದಿನ 540 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

    ಭಾರತದಲ್ಲಿ ಇದೂವರೆಗೆ ಅತಿ ಹೆಚ್ಚು ಕಲೆಕ್ಷನ್ ಆದ ಫಿಲ್ಮ್ ಎಂಬ ಹೆಗ್ಗಳಿಕೆಗೆ ಅಮೀರ್ ಖಾನ್ ಅಭಿನಯದ ಪಿಕೆಗೆ ಇತ್ತು. 2014ರ ಡಿಸೆಂಬರ್ ನಲ್ಲಿ ಬಿಡುಗಡೆಯಾದ ಈ ಫಿಲ್ಮ್ ಒಟ್ಟು 792 ಕೋಟಿ ರೂ. ಗಳಿಸಿತ್ತು. ಈಗ ಬಾಹುಬಲಿಯ ಕಲೆಕ್ಷನ್ ವೇಗ ನೋಡಿದರೆ ಒಂದೇ ವಾರದಲ್ಲಿ ಈ ದಾಖಲೆಯನ್ನು ಮುರಿಯಲಿದೆ ಎಂದು ಸಿನಿ ಮಾರುಕಟ್ಟೆ ಪಂಡಿತರು ವಿಶ್ಲೇಷಿಸಿದ್ದಾರೆ.

    ಇದನ್ನೂ ಓದಿ: ಬೆಂಗ್ಳೂರಿನಲ್ಲಿ 1200 ರೂ, ಆಂಧ್ರದಲ್ಲಿ ಬಾಹುಬಲಿ-2 ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

    ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ