Tag: ಪಿಓಕೆ

  • ಪಿಓಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ – ವಿಶ್ವಸಂಸ್ಥೆಯಲ್ಲಿ ಪಾಕ್ ಕುಟುಕಿದ ಭಾರತ

    ಪಿಓಕೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ – ವಿಶ್ವಸಂಸ್ಥೆಯಲ್ಲಿ ಪಾಕ್ ಕುಟುಕಿದ ಭಾರತ

    ನವದೆಹಲಿ: ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶದಲ್ಲಿ ಸೇನೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ (Human Rights Violation) ಎಂದು ಭಾರತ (India) ಖಂಡಿಸಿದೆ. ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ (Parvathaneni Harish), ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (POK) ಕ್ರೌರ್ಯವನ್ನು ಕೊನೆಗೊಳಿಸಬೇಕೆಂದು ಕರೆ ನೀಡಿದರು.

    80ನೇ ವಿಶ್ವಸಂಸ್ಥೆಯ ದಿನದಂದು ಆಯೋಜಿಸಲಾದ ಮುಕ್ತ ಚರ್ಚೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಉದ್ದೇಶಿಸಿ ಮಾತನಾಡಿದ ಹರೀಶ್, ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ರದೇಶಗಳಲ್ಲಿ ನಡೆಯುತ್ತಿರುವ ಗಂಭೀರ ಮತ್ತು ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕೊನೆಗೊಳಿಸಬೇಕೆಂದು ನಾವು ಪಾಕಿಸ್ತಾನವನ್ನು ಒತ್ತಾಯಿಸುತ್ತೇವೆ. ಪಾಕಿಸ್ತಾನದ ಮಿಲಿಟರಿ ಆಕ್ರಮಣ, ದಬ್ಬಾಳಿಕೆ, ಕ್ರೂರತೆ ಮತ್ತು ಸಂಪನ್ಮೂಲಗಳ ಅಕ್ರಮ ಶೋಷಣೆಯ ವಿರುದ್ಧ ಜನಸಂಖ್ಯೆಯು ಬಹಿರಂಗ ದಂಗೆಯಲ್ಲಿ ತೊಡಗಿದೆ ಎಂದರು. ಇದನ್ನೂ ಓದಿ: ಶಬರಿಮಲೆಯಲ್ಲಿ ಚಿನ್ನ ನಾಪತ್ತೆ ಪ್ರಕರಣಕ್ಕೆ ಬೆಂಗಳೂರು ಲಿಂಕ್‌ – ಬಳ್ಳಾರಿಯಲ್ಲಿ ಚಿನ್ನ ಮಾರಾಟ ಮಾಡಿರೋ ಶಂಕೆ

    ಜಮ್ಮು ಮತ್ತು ಕಾಶ್ಮೀರವು ಯಾವಾಗಲೂ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿ ಉಳಿಯುತ್ತದೆ ಮತ್ತು ಇಲ್ಲಿನ ಜನರು ತಮ್ಮ ಮೂಲಭೂತ ಹಕ್ಕುಗಳನ್ನು ಆನಂದಿಸುತ್ತಾರೆ. ಅಂತಹ ಸ್ವಾತಂತ್ರ‍್ಯಗಳು ಪಾಕಿಸ್ತಾನದಲ್ಲಿ ಪರಕೀಯ ಎಂದು ಹೇಳಿದರು. ಇದನ್ನೂ ಓದಿ: ಬೆಂಗಳೂರು | ಸಿಲಿಂಡರ್‌ ಸ್ಫೋಟ – ಮನೆಯೇ ನೆಲಸಮ, ಓರ್ವ ಸಾವು

    ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಮತ್ತು ಯಾವಾಗಲೂ ಇರುತ್ತದೆ. ಜಮ್ಮು ಮತ್ತು ಕಾಶ್ಮೀರದ ಜನರು ಭಾರತದ ಕಾಲ-ಪರೀಕ್ಷಿತ ಪ್ರಜಾಪ್ರಭುತ್ವ ಸಂಪ್ರದಾಯಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಅನುಸಾರವಾಗಿ ತಮ್ಮ ಮೂಲಭೂತ ಹಕ್ಕುಗಳನ್ನು ಚಲಾಯಿಸುತ್ತಾರೆ. ಇವು ಪಾಕಿಸ್ತಾನಕ್ಕೆ ಅನ್ಯವಾದ ಪರಿಕಲ್ಪನೆಗಳು ಎಂದು ನಮಗೆ ತಿಳಿದಿದೆ ಎಂದರು. ಇದನ್ನೂ ಓದಿ: ‌ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಾಟ – ದೆಹಲಿ ಏರ್‌ಪೋರ್ಟ್‌ನಲ್ಲಿ ಮಹಿಳೆಯಿಂದ 1 ಕೆಜಿ ಗೋಲ್ಡ್‌ ಬಿಸ್ಕೆಟ್ ವಶಕ್ಕೆ

    ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಸೇನೆ ಗುಂಡು ಹಾರಿಸಿದ ನಂತರ ಹಲವಾರು ನಾಗರಿಕರು ಸಾವನ್ನಪ್ಪಿದರು. ಜನರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾದ ನಂತರ ಅಶಾಂತಿ ಭುಗಿಲೆದ್ದಿತು. ಜಂಟಿ ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆದವು. ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸಾರಿಗೆ ಸೇವೆಗಳು ಹಲವಾರು ದಿನಗಳವರೆಗೆ ಈ ಪ್ರದೇಶದಾದ್ಯಂತ ಮುಚ್ಚಲ್ಪಟ್ಟವು. ಇದನ್ನೂ ಓದಿ: ಪರೀಕ್ಷೆಯಲ್ಲಿ ಕಳಪೆ ಅಂಕ ಬಂತೆಂದು MBBS ವಿದ್ಯಾರ್ಥಿನಿ ಆತ್ಮಹತ್ಯೆ

  • ಪಿಓಕೆ ಸಮಸ್ಯೆ ಕುರಿತ ಅಮಿತ್ ಶಾ ಹೇಳಿಕೆಗೆ ರಾಗಾ ಆಕ್ಷೇಪ

    ಪಿಓಕೆ ಸಮಸ್ಯೆ ಕುರಿತ ಅಮಿತ್ ಶಾ ಹೇಳಿಕೆಗೆ ರಾಗಾ ಆಕ್ಷೇಪ

    ನವದೆಹಲಿ: ನೆಹರೂ ಅವರ ಪ್ರಮಾದವೇ ಕಾಶ್ಮೀರ-ಪಿಓಕೆ ಸಮಸ್ಯೆಯ ಮೂಲ ಬೇರು ಅಂತ ಲೋಕಸಭೆ (Loksabha), ರಾಜ್ಯಸಭೆಯಲ್ಲಿ (Rajya Sabha) ಕೇಂದ್ರ ಸಚಿವ ಅಮಿತ್ ಶಾ ಗುಡುಗಿದ್ದರು. ಅಮಿತ್ ಶಾ ಹೇಳಿಕೆಗೆ ರಾಹುಲ್ ಗಾಂಧಿ (Rahul Gandhi) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಸಂಸತ್ ಭವನದ ಬಳಿ ವಾಗ್ದಾಳಿ ನಡೆಸಿದ ಅವರು, ಪಂಡಿತ್ ನೆಹರೂ ಅವರು ಭಾರತಕ್ಕಾಗಿ ಪ್ರಾಣ ಅರ್ಪಿಸಿದ್ದಾರೆ. ಹಲವಾರು ವರ್ಷಗಳ ಕಾಲ ಜೈಲಿನಲ್ಲಿದ್ದರು. ಅಮಿತ್ ಶಾಗೆ (Amitshah) ಇತಿಹಾಸದ ಅರಿವೇ ಇಲ್ಲ. ಅವರು ಇತಿಹಾಸ ತಿಳಿದುಕೊಳ್ತಾರೆ ಅಂತ ನಾನು ನಿರೀಕ್ಷಿಸಲ್ಲ. ಯಾಕೆಂದರೆ ಅಮಿತ್ ಶಾಗೆ ಇತಿಹಾಸವನ್ನು ತಿರುಚೋದೇ ಅವರ ಕಾಯಕ ಎಂದು ಕಿಡಿಕಾರಿದ್ದಾರೆ.

    ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಅಮಿತ್ ಶಾ ಹೇಳಿಕೆಗೆ ವ್ಯಂಗ್ಯವಾಡಿದ್ದಾರೆ. ಅಮಿತ್ ಶಾ ಅವರಷ್ಟು ನೆಹರೂ ಅವರು ಜ್ಞಾನಿಯಾಗಿರಲಿಲ್ಲ ಅನ್ನಿಸುತ್ತೆ. ನೀವು ಏನೇ ಮಾಡಿದರೂ ಅದು ಸರಿಯೇ ಬಿಡಿ. ಹಾಗಾದರೆ ನೀವು ಪಿಓಕೆಯನ್ನು ಯಾವಾಗ ವಾಪಸ್ ತಗೋತೀರಾ..? ಅಂತ ಅಧೀರ್ ರಂಜನ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: Article 370 Verdict – ಇಂದಿನ ತೀರ್ಪು ಕೇವಲ ತೀರ್ಪಲ್ಲ, ಭರವಸೆಯ ದಾರಿದೀಪ: ಮೋದಿ ಸಂತಸ

    ಕಾಶ್ಮೀರ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಕೂಡ ಅಮಿತ್ ಶಾ ಟೀಕೆಗೆ ಖಂಡಿಸಿದ್ದಾರೆ. ಜಮ್ಮು-ಕಾಶ್ಮೀರ ನರಕಕ್ಕೆ ಹೋಗಲಿ, ಬಿಜೆಪಿಗರು ಜನತೆಗೆ ಮೋಸ ಮಾಡಿದರು. ನೆಹರೂ ಅಂದರೆ ಯಾಕೆ ಬಿಜೆಪಿಗರು ಇಷ್ಟೊಂದು ವಿಷಕಾರುತ್ತಿದ್ದಾರೆ ಅಂತ ನನಗೆ ಗೊತ್ತಾಗ್ತಿಲ್ಲ. ನೆಹರೂ ಒಬ್ಬರೇ ಕಾರಣ ಅಲ್ಲ. ಆರ್ಟಿಕಲ್ 370 ಜಾರಿಗೆ ತರುವಾಗ ಸರ್ದಾರ್ ಪಟೇಲ್ ಇಲ್ಲಿದ್ದರು. ನೆಹರೂ ಅಮೆರಿಕದಲ್ಲಿದ್ದರು ಅಂದಿದ್ದಾರೆ.

  • ಸಂಸತ್ ಆದೇಶ ಕೊಟ್ಟರೆ ಪಿಓಕೆ ವಶಕ್ಕೆ ಪಡೆಯಲು ಸೇನೆ ಸಿದ್ಧ: ಸೇನಾ ಮುಖ್ಯಸ್ಥ

    ಸಂಸತ್ ಆದೇಶ ಕೊಟ್ಟರೆ ಪಿಓಕೆ ವಶಕ್ಕೆ ಪಡೆಯಲು ಸೇನೆ ಸಿದ್ಧ: ಸೇನಾ ಮುಖ್ಯಸ್ಥ

    ನವದೆಹಲಿ: ಸಂಸತ್ತಿನಿಂದ ಆದೇಶ ಕೊಟ್ಟರೆ ಪಾಕಿಸ್ತಾನ ಆಕ್ರಮಿತ-ಕಾಶ್ಮೀರ (ಪಿಓಕೆ) ವಶಕ್ಕೆ ಪಡೆಯಲು ಸೇನೆ ಸಿದ್ಧವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನಾರವಾಣೆ ಹೇಳಿದ್ದಾರೆ.

    ಆರ್ಮಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗವಾಗಿದೆ ಎಂಬುದು ಸಂಸತ್ತಿನ ನಿರ್ಣಯವಾಗಿದೆ. ಸಂಸತ್ತು ಬಯಸಿದರೆ ಆ ಪ್ರದೇಶವೂ (ಪಿಒಕೆ) ನಮಗೆ ಸೇರಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ನಮ್ಮ ಸೈನ್ಯಕ್ಕೆ ಆದೇಶ ಸಿಕ್ಕರೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಭಾರತೀಯ ಸೇನೆಯು ಮೊದಲಿಗಿಂತ ಈಗ ಉತ್ತಮವಾಗಿ ತಯಾರಾಗಿದೆ ಎಂದು ತಿಳಿಸಿದರು.

    ನಾವು ಭಾರತದ ಸಂವಿಧಾನಕ್ಕೆ ನಿಷ್ಠೆಯನ್ನು ಪ್ರತಿಜ್ಞೆ ಮಾಡುತ್ತೇವೆ. ಸಂವಿಧಾನವು ನಮ್ಮ ಎಲ್ಲಾ ಕಾರ್ಯಗಳಲ್ಲಿ ಹಾಗೂ ಎಲ್ಲಾ ಸಮಯದಲ್ಲೂ ಮಾರ್ಗದರ್ಶನ ನೀಡುತ್ತದೆ. ಸಂವಿಧಾನದಲ್ಲಿ ಪ್ರತಿಪಾದಿಸಿದಂತೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಅಧಿಕಾರಿಗಳಿಗೆ ಹಾಗೂ ಯೋಧರಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

    ಭವಿಷ್ಯದ ಯುದ್ಧಗಳಿಗೆ ಸಶಸ್ತ್ರ ಪಡೆಗಳನ್ನು ಸಿದ್ಧಪಡಿಸುವುದು, ತರಬೇತಿ ನೀಡುವುದು ಮುಖ್ಯ ಉದ್ದೇಶವಾಗಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ರಚನೆ ಮತ್ತು ಮಿಲಿಟರಿ ವ್ಯವಹಾರಗಳ ಇಲಾಖೆಯನ್ನು ರಚಿಸುವುದನ್ನು ಸ್ವಾಗತಿಸುತ್ತೇನೆ ಎಂದ ಮನೋಜ್ ಮುಕುಂದ್ ನಾರವಾಣೆ ಅವರು, ಇದು ಏಕೀಕರಣದತ್ತ ಒಂದು ದೊಡ್ಡ ಹೆಜ್ಜೆ ಎಂದು ತಿಳಿಸಿದರು.

    ಚೀನಾ ಗಡಿಯಲ್ಲಿ ಮಿಲಿಟರಿ ಮೂಲಸೌಕರ್ಯವನ್ನು ಹೆಚ್ಚಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಉತ್ತರ ಗಡಿಯಲ್ಲಿ ಸವಾಲುಗಳನ್ನು ಎದುರಿಸಲು ಸೈನ್ಯವು ಸಿದ್ಧವಾಗಿದೆ. ಸಿಯಾಚಿನ್ ನಮಗೆ ಬಹಳ ಮುಖ್ಯವಾಗಿದೆ. ಅಲ್ಲಿ ಒಂದು ತಂಡವು ಪಶ್ಚಿಮ ಮತ್ತು ಉತ್ತರ ಪ್ರದೇಶಗಳನ್ನು ನೋಡಿಕೊಳ್ಳುತ್ತದೆ. ಇದು ಆಯಕಟ್ಟಿನ ಮಹತ್ವದ್ದಾಗಿದೆ. ಅಲ್ಲಿಂದಲೇ ಒಡಂಬಡಿಕೆ ಸಂಭವಿಸಬಹುದು ಎಂದು ಹೇಳಿದರು.

    ಅಧಿಕಾರಿಗಳ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿದ ಜನರಲ್ ನಾರವಾಣೆ, ಅಧಿಕಾರಿಗಳ ಕೊರತೆ ಇದೆ. ಆದರೆ ಅದಕ್ಕೆ ಅರ್ಜಿ ಸಲ್ಲಿಸುವ ಜನರ ಕೊರತೆ ಅಲ್ಲ. ನಾವು ಅಧಿಕಾರಿಗಳನ್ನು ಆಯ್ಕೆ ಮಾಡುವ ಮಾನದಂಡಗಳನ್ನು ಕಡಿಮೆ ಮಾಡಿಲ್ಲ ಎಂದರು.

  • ಬೆಳಗಾವಿ ಗಡಿ ವಿವಾದವನ್ನು ಕಾಶ್ಮೀರದ ಪಿಓಕೆಗೆ ಹೋಲಿಸಿದ ಮಹಾ ಸಿಎಂ

    ಬೆಳಗಾವಿ ಗಡಿ ವಿವಾದವನ್ನು ಕಾಶ್ಮೀರದ ಪಿಓಕೆಗೆ ಹೋಲಿಸಿದ ಮಹಾ ಸಿಎಂ

    ಬೆಳಗಾವಿ: ಜಿಲ್ಲೆಯ ಗಡಿ ವಿವಾದ ಈಗಾಗಲೇ ಸರ್ವೋಚ್ಛ ನ್ಯಾಯಾಲಯದಲ್ಲಿದೆ. ಆದರೆ ನ್ಯಾಯಾಲಯದ ತೀರ್ಪು ಬರುವವರೆಗೆ ಸುಮ್ಮನಿರದೆ ಮಹಾರಾಷ್ಟ್ರದಲ್ಲಿ ಪ್ರಪ್ರಥಮ ಬಾರಿಗೆ ಅಧಿಕಾರ ಹಿಡಿದ ಶೀವಸೇನೆಯ ಸಿಎಂ ಬೆಳಗಾವಿ ಗಡಿ ವಿಚಾರವಾಗಿ ಲಘುವಾಗಿ ಮಾತನಾಡಿದ್ದಾರೆ.

    ಬೆಳಗಾವಿ, ನಿಪ್ಪಾಣಿ, ಕಾರವಾರ ಪ್ರದೇಶದ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಪ್ರದೇಶವಾಗಿದೆ. ಅಲ್ಲಿರುವ ಮರಾಠಿಗರು ಹಿಂದೂಗಳಲ್ಲವೆ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದ ನಾಗಪೂರದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡುವಾಗ ಬೆಳಗಾವಿ ಗಡಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬೆಳಗಾವಿ, ಕಾರವಾರ ಪಾಕಿಸ್ತಾನದಲ್ಲಿದೆಯೋ, ಬ್ರಹ್ಮದೇಶದಲ್ಲಿದೆಯೋ? ಅಥವಾ ಭಾರತದಲ್ಲಿದೆಯೋ? ಎಂದು ಉದ್ಧವ್ ಪ್ರಶ್ನೆ ಮಾಡಿದ್ದಾರೆ.

    ರಾಜ್ಯದ ಗಡಿಯಲ್ಲಿರುವ ಮರಾಠಿಗರ ಮೇಲೆ ಕರ್ನಾಟಕ ಸರ್ಕಾರ ಹಲವಾರು ವರ್ಷಗಳಿಂದ ಭಾಷಾ ಅತ್ಯಾಚಾರವೆಸಗುತ್ತಿದೆ. ನ್ಯಾಯಕೋರಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಆದರೆ ಕೇಂದ್ರ ಸರ್ಕಾರ ಮರಾಠಿ ಭಾಷಿಕ ಹಿಂದೂಗಳ ಪರವಾಗಿ ನಿಲ್ಲದೆ ಕರ್ನಾಟಕ ಸರ್ಕಾರದ ಪರವಾಗಿ ನಿಂತಿದೆ ಎಂದು ಮಹಾರಾಷ್ಟ್ರದ ಸಿಎಂ ಗಂಭೀರ ಆರೋಪ ಮಾಡಿದ್ದಾರೆ.

    ಬೆಳಗಾವಿ, ಕಾರವಾರ, ನಿಪ್ಪಾಣಿಯಲ್ಲಿ ಮರಾಠಿ ಭಾಷಿಕ ಹಿಂದೂಗಳಿಗೆ ಕೇಂದ್ರ ಸರ್ಕಾರ ಮೊದಲು ನ್ಯಾಯ ಕೊಡಿ ಎಂದು ಪರೋಕ್ಷವಾಗಿ ಹೇಳಿ ಪ್ರಧಾನಿ ಹಾಗೂ ಗ್ರಹ ಸಚಿವರನ್ನು ಕುಟುಕಿದ್ದಾರೆ. ಈ ಭಾಗದಲ್ಲಿರುವ ಕನ್ನಡಿಗಳು ಹಿಂದೂಗಳಲ್ಲವೆ? ಭಾಷಾ ವಿವಾದಕ್ಕೆ ತುಪ್ಪ ಸುರಿಯುವಂತೆ ಮಾತನಾಡುವ ಮಹಾರಾಷ್ಟ್ರ ಸಿಎಂ ಭಾರತದ ಒಕ್ಕೂಟದ ವ್ಯವಸ್ಥೆಯನ್ನೇ ಪ್ರಶ್ನೆ ಮಾಡಿ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ.

  • ಉಗ್ರರು ನಿಯಂತ್ರಿಸುತ್ತಿರುವ ಪಿಓಕೆಯನ್ನು ವಶಕ್ಕೆ ಪಡೆಯುತ್ತೇವೆ- ಬಿಪಿನ್ ರಾವತ್

    ಉಗ್ರರು ನಿಯಂತ್ರಿಸುತ್ತಿರುವ ಪಿಓಕೆಯನ್ನು ವಶಕ್ಕೆ ಪಡೆಯುತ್ತೇವೆ- ಬಿಪಿನ್ ರಾವತ್

    ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಓಕೆ) ಪಾಕಿಸ್ತಾನ ಸರ್ಕಾರದ ನಿಯಂತ್ರಣದಲ್ಲಿ ಇಲ್ಲ. ಅದು ಉಗ್ರರ ನಿಯಂತ್ರಣದಲ್ಲಿದ್ದು ಅದನ್ನು ವಶಕ್ಕೆ ಪಡೆಯುತ್ತೇವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಗುಡುಗಿದ್ದಾರೆ.

    ಪಾಕಿಸ್ತಾನವು ಅಕ್ರಮವಾಗಿ ಕಾಶ್ಮೀರವನ್ನು ಆಕ್ರಮಿಸಿದೆ. ಆದರೆ ಇದು ಅದರ ನಿಯಂತ್ರಣದಲ್ಲಿರದೆ ಉಗ್ರರು ನಿಯಂತ್ರಿಸುತ್ತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್ ಬಾಲ್ಟಿಸ್ತಾನ್ ಇದ್ದರೆ ಮಾತ್ರ ಜಮ್ಮು ಕಾಶ್ಮೀರ ಪೂರ್ಣವಾ ರಾಜ್ಯವಾಗುತ್ತದೆ. ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಪಿಓಕೆಯನ್ನು ಆಕ್ರಮಿಸಿಕೊಳ್ಳಲಾಗಿದ್ದು ಅದನ್ನು ವಶಕ್ಕೆ ಪಡೆಯುತ್ತೇವೆ ಎಂದು ಹೇಳಿದರು.

    ಸಂವಿಧಾನದಲ್ಲಿ 370ನೇ ವಿಧಿ ತಾತ್ಕಾಲಿಕ ಎಂದು ತಿಳಿಸಿಲಾಗಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ತಾತ್ಕಾಲಿಕ ಎಂದು ತಿಳಿಸಿದಾಗ ಪಾಕಿಸ್ತಾನ ಯಾವುದೇ ತಕರಾರು ತೆಗೆಯಲಿಲ್ಲ. ಆದರೆ ಇದನ್ನು ರದ್ದುಗೊಳಿಸಿದ್ದಕ್ಕೆ ಪಾಕಿಸ್ತಾನ ಯಾಕೆ ವಿರೋಧ ವ್ಯಕ್ತಪಡಿಸಿತು ಎಂದು ಪ್ರಶ್ನಿಸಿದರು.

    ಇದೇ ವೇಳೆ, ಭಾರತೀಯ ಸೇನೆಗೆ ವಿಶ್ವದ ಅತ್ಯುತ್ತಮ ಅಮೆರಿಕ ನಿರ್ಮಿತ ಸಿಗ್ ಸೌರ್ ರೈಫಲ್ ಲಭ್ಯವಾಗಲಿದೆ. ಈ ವರ್ಷದ ಅಂತ್ಯಕ್ಕೆ ಇನ್‍ಫ್ಯಾಂಟ್ರಿ ಸೈನಿಕರಿಗೆ ಈ ರೈಫಲ್ ಸಿಗಲಿದೆ ಎಂದು ಭರವಸೆ ನೀಡಿದರು.

  • 72 ವರ್ಷಗಳ ನಂತರ ಮೊದಲ ಬಾರಿಗೆ ಭಾರತೀಯ ದಂಪತಿಯಿಂದ ಪಿಓಕೆಯ ಶಾರದೆಗೆ ಪೂಜೆ

    72 ವರ್ಷಗಳ ನಂತರ ಮೊದಲ ಬಾರಿಗೆ ಭಾರತೀಯ ದಂಪತಿಯಿಂದ ಪಿಓಕೆಯ ಶಾರದೆಗೆ ಪೂಜೆ

    ನವದೆಹಲಿ: ಭಾರತೀಯ ಮೂಲದ ಹಾಂಕಾಂಗ್ ಹಿಂದೂ ದಂಪತಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಓಕೆ)ದ ಶಾರದಾ ಪೀಠದ ದೇಗುಲದಲ್ಲಿ ಪೂಜೆ ನೆರವೇರಿಸಿದ್ದಾರೆ. ಈ ಮೂಲಕ ಕಳೆದ 72 ವರ್ಷಗಳಿಂದ ಪ್ರಥಮ ಬಾರಿಗೆ ಪಿಓಕೆಯಲ್ಲಿನ ಶಾರದೆಯನ್ನು ಪೂಜಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಪಿ.ವಿ.ವೆಂಕಟರಮಣ ಮತ್ತು ಅವರ ಪತ್ನಿ ಸುಜಾತಾ ಸೇವ್ ಶಾರದಾ ಸಮಿತಿ ಹಾಗೂ ಪಿಓಕೆಯಲ್ಲಿನ ನಾಗರಿಕ ಸದಸ್ಯರ ಸಮಾಜದ ಸಂಘಟಿತ ಪ್ರಯತ್ನಗಳ ಮೂಲಕ ಅಧಿಕೃತ ವೀಸಾದೊಂದಿಗೆ ಪಿಓಕೆಯಲ್ಲಿನ ಶಾರದಾ ಪೀಠಕ್ಕೆ ತೆರಳಿ ಶಾರದಾ ದೇವಿ ಹಾಗೂ ಸ್ವಾಮಿ ಲಾಲ್ ಜಿ ಅವರಿಗೆ ಪೂಜೆ ಸಲ್ಲಿಸಿದ್ದಾರೆ.

    ವರದಿಗಳ ಪ್ರಕಾರ ದಂಪತಿಗಳ ಭೇಟಿಯ ಸಮಯದಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಪಡಿಸಿರುವ ಭಾರತದ ಕ್ರಮವನ್ನು ವಿರೋಧಿಸಿ ಪಿಓಕೆಯಲ್ಲಿ ಕಳೆದ ಮೂರು ದಿನಗಳಿಂದ ಗಡಿ ನಿಯಂತ್ರಣ ರೇಖೆ ಬಳಿ ಪ್ರತಿಭಟನೆ ನಡೆಸುತ್ತಿದ್ದರು. ಹೀಗಾಗಿ ದಂಪತಿಗಳಿಗೆ ರಕ್ಷಣೆ ಕೊಡುವಂತೆ ಭಾರತೀಯ ಅಧಿಕಾರಿಗಳು ಪಿಓಕೆಯ ನಾಗರಿಕ ಸಮಾಜದ ಸದಸ್ಯರಿಗೆ ಮನವಿ ಮಾಡಿದ್ದರು.

    ಶಾಂತಿಯುತವಾಗಿ ಪೂಜೆಯನ್ನು ನೆರವೇರಿಸಿದ ನಂತರ ದಂಪತಿ ದೇವತೆ ಮತ್ತು ಸ್ವಾಮಿ ನಂದ ಲಾಲ್ ಅವರ ಫೋಟೋಗಳನ್ನು ನಾಗರಿಕ ಸಮಾಜದ ಸದಸ್ಯರಿಗೆ ಹಸ್ತಾಂತರಿಸಿದರು. ಪ್ರಸ್ತುತ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಗಡಿಯಾಚೆಗಿನ ಉದ್ವಿಗ್ನತೆ ತಣ್ಣಗಾದ ನಂತರ ಇಲ್ಲಿ ದೇವಾಲಯ ಸ್ಥಾಪಿಸಬಹುದು ಎಂದು ಹೇಳಿದರು.

    ಇದಕ್ಕೂ ಮುನ್ನ 2019ರಲ್ಲಿ ಭಾರತೀಯ ಅಧಿಕಾರಿಗಳು ಪಾಕಿಸ್ತಾನ ಹಿಂದೂ ಕೌನ್ಸಿಲ್(ಪಿಎಚ್‍ಸಿ)ನೊಂದಿ ಮಾತುಕತೆ ಸಾಧಿಸಿದ್ದರು. ಡಾ.ರಮೇಶ್ ವಾಂಕ್ವಾನಿ ನೇತೃತ್ವದ ಐವರು ಸದಸ್ಯರ ನಿಯೋಗವು 2019ರ ಜೂನ್ 24ರಂದು ಶಾರದಾ ಪೀಠಕ್ಕೆ ಭೇಟಿ ನೀಡಿತ್ತು.

    ಶಾರದಾ ಪೀಠದ ತೀರ್ಥಯಾತ್ರೆಯ ಮಾರ್ಗವನ್ನು ಪುನಃ ತೆರೆಯಲು ಹಾಗೂ ಶಾರದಾ ದೇವಾಲಯವನ್ನು ಪುನಃ ಸ್ಥಾಪಿಸಲು ರವೀಂದ್ರ ಪಂಡಿತ ಹಾಗೂ ಇತರ ಸಂಬಂಧಿಸಿದ ಜನರು ಸೇವ್ ಶಾರದಾ ಸಮಿತಿಯನ್ನು ರಚಿಸಿದ್ದಾರೆ. ತೀರ್ಥಯಾತ್ರೆಗಾಗಿ ಹಾಗೂ ಭಾರತೀಯ ಹಿಂದೂಗಳ ಪ್ರಯಾಣಕ್ಕೆ ಅನುಕೂಲವಾಗುವಂತೆ ಎಲ್‍ಓಸಿ ಪರವಾನಗಿ ನಿಯಮಗಳನ್ನು ಅಂಗೀಕರಿಸುವಂತೆ ಸಮಿತಿ ಒತ್ತಾಯಿಸುತ್ತಿದೆ.

    ಸೇವ್ ಶಾರದಾ ಸಮಿತಿಯು ಪಿಓಕೆಯ ಇತರ ಐತಿಹಾಸಿಕ ತಾಣಗಳಂತೆ ಶಾರದಾ ತಾಣವನ್ನು ಸಂರಕ್ಷಿಸುವಂತೆ ಕಾನೂನು ಹೋರಾಟ ನಡೆಸುತ್ತಿದೆ. ಇದರ ಭಾಗವಾಗಿ ಪಿಓಕೆ ಸುಪ್ರೀಂ ಕೋರ್ಟ್ ಶಾರದಾ ಪೀಠದ ಸಂರಕ್ಷಣೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿತ್ತು.

  • ನಮ್ಮ ಮುಂದಿನ ಗುರಿ ಪಿಓಕೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

    ನಮ್ಮ ಮುಂದಿನ ಗುರಿ ಪಿಓಕೆ: ಕೇಂದ್ರ ಸಚಿವ ಜಿತೇಂದ್ರ ಸಿಂಗ್

    ನವದೆಹಲಿ: ನಮ್ಮ ಮುಂದಿನ ಗುರಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (Pakistan-occupied Kashmir -PoK) ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಖಡಕ್ ಸಂದೇಶ ರವಾನಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸಚಿವರು, ಕಾಶ್ಮೀರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದಿಟ್ಟತನ ತೋರಿತು. ಅದರಂತೆ ಮುಂದಿನ ದಿನಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಮತ್ತೆ ಭಾರತದ ಸುಪರ್ದಿಗೆ ತರುವ ಅಜೆಂಡಾ ಹೊಂದಿದ್ದೇವೆ. ಈ ನಿರ್ಧಾರ ನಮ್ಮ ಪಕ್ಷದ ತೀರ್ಮಾನ ಮಾತ್ರವಲ್ಲ, 1994ರಲ್ಲಿ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರ್ಕಾರ ವೇಳೆ ಲೋಕಸಭೆಯಲ್ಲಿ ಇದು ಸರ್ವಾನುಮತದಿಂದ ಅಂಗೀಕಾರವಾಗಿತ್ತು ಎಂದು ತಿಳಿಸಿದರು.

    ಕೇಂದ್ರ ಸಚಿವರು ಪಿಓಕೆ ಬಗ್ಗೆ ಮಾತನಾಡಿದ್ದು ಇದೇ ಮೊದಲೇನಲ್ಲ. ಕಳೆದ ತಿಂಗಳು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಜಿತೇಂದ್ರ ಸಿಂಗ್ ಅವರು, ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಜನರು ಪಿಓಕೆ ಭಾರತದೊಂದಿಗೆ ಸಂಯೋಜನೆಗೊಳ್ಳಬೇಕು ಅಂತ ಪ್ರಾರ್ಥಿಸಬೇಕು. ದೇಶದಲ್ಲಿ ಪಿಒಕೆ ಏಕೀಕರಣಗೊಳ್ಳುವುದನ್ನು ನಾವು ನೋಡಬೇಕು. ಮುಜಫರಾಬಾದ್‍ಗೆ ಹೋಗುವ ಜನರು ಅಡೆತಡೆಯಿಲ್ಲದೆ ಓಡಾಡುವಂತಾಗಲಿ ಎಂದು ಹೇಳಿದ್ದರು.

    ಇದೇ ವಿಚಾರವಾಗಿ ಮಾತನಾಡಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತ ಮತ್ತು ಪಾಕ್ ಮಧ್ಯೆ ಮಾತುಕತೆ ನಡೆಯುವುದಾದರೆ ಅದು ಕೇವಲ ಪಾಕ್ ಆಕ್ರಮಿತ ಕಾಶ್ಮೀರದ (ಪಿಓಕೆ) ಬಗ್ಗೆ ಮಾತ್ರ. ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ. ಈ ನಿರ್ಧಾರ ತಪ್ಪು ಅಂತ ಪಾಕಿಸ್ತಾನವು ವಿಶ್ವಸಂಸ್ಥೆಗೆ ದೂರು ನೀಡಿದೆ. ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಪಾಕಿಸ್ತಾನದೊಂದಿಗೆ ಭಾರತ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದರು.

  • ಪಿಓಕೆ ಬಗ್ಗೆ ಮಾತ್ರ ಮಾತುಕತೆ: ಪಾಕಿಸ್ತಾನವನ್ನ ಕುಟುಕಿದ ರಾಜನಾಥ್ ಸಿಂಗ್

    ಪಿಓಕೆ ಬಗ್ಗೆ ಮಾತ್ರ ಮಾತುಕತೆ: ಪಾಕಿಸ್ತಾನವನ್ನ ಕುಟುಕಿದ ರಾಜನಾಥ್ ಸಿಂಗ್

    ನವದೆಹಲಿ: ಭಾರತ ಮತ್ತು ಪಾಕ್ ಮಧ್ಯೆ ಮಾತುಕತೆ ನಡೆಯುವುದಾದರೆ ಅದು ಕೇವಲ ಪಾಕ್ ಆಕ್ರಮಿತ ಕಾಶ್ಮೀರದ (ಪಿಓಕೆ) ಬಗ್ಗೆ ಮಾತ್ರ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನವನ್ನು ಕುಟುಕಿದ್ದಾರೆ.

    ಹರ್ಯಾಣದ ಕಲ್ಕಾದಲ್ಲಿ ನಡೆದ ‘ಜನ ಆಶೀರ್ವಾದ ಯಾತ್ರೆ’ಯಲ್ಲಿ ಮಾತನಾಡಿದ ಅವರು, ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ್ದು ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ. ಈ ನಿರ್ಧಾರ ತಪ್ಪು ಅಂತ ಪಾಕಿಸ್ತಾನವು ವಿಶ್ವಸಂಸ್ಥೆಗೆ ದೂರು ನೀಡಿದೆ. ಭಯೋತ್ಪಾದನೆ ನಿಲ್ಲಿಸಿದರೆ ಮಾತ್ರ ಪಾಕಿಸ್ತಾನದೊಂದಿಗೆ ಭಾರತ ಮಾತುಕತೆಗೆ ಸಿದ್ಧ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನ್ಯೂಕ್ಲಿಯರ್ ಶಕ್ತಿ ‘ನೋ ಫಸ್ಟ್ ಯೂಸ್’ ನೀತಿ ಭವಿಷ್ಯದಲ್ಲಿ ಬದಲಾಗಬಹುದು: ರಾಜನಾಥ್ ಸಿಂಗ್

    ಹರ್ಯಾಣದ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿಯು ಜನ ಆಶೀರ್ವಾದ ಯಾತ್ರೆಯನ್ನು ಕೈಗೊಂಡಿದೆ. ಈ ಯಾತ್ರೆಯು ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಿ ಸೆಪ್ಟೆಂಬರ್ 8ರಂದು ರೊಹ್ಟಕ್‍ನಲ್ಲಿ ಮುಕ್ತಾಯವಾಗಲಿದೆ. ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಹರ್ಯಾಣ ಸಿಎಂ ಮನೋಹರ್ ಲಾಲ್ ಕಟ್ಟರ್ ಮತ್ತು ಸಂಪುಟ ಸಚಿವರು ಯಾತ್ರೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ನಮ್ಮ ನೆರೆರಾಷ್ಟ್ರದಂತವರು ಮತ್ಯಾರಿಗೂ ಸಿಗದಿರಲಿ: ಪಾಕ್ ವಿರುದ್ಧ ರಾಜನಾಥ್ ಸಿಂಗ್ ಕಿಡಿ

    ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತದ ಕ್ರಮವನ್ನು ವಿರೋಧಿಸಿ ಪಾಕಿಸ್ತಾನವು ವಿಶ್ವಸಂಸ್ಥೆ ಮೆಟ್ಟಿಲೇರಿತ್ತು. ಈ ವಿಚಾರವಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಗೌಪ್ಯ ಸಭೆ ನಡೆಸಲಾಗಿತ್ತು. ಈ ವೇಳೆ ದೂರು ಸಲ್ಲಿಸಿದ್ದ ಪಾಕಿಸ್ತಾನವು ಭಾರೀ ಮುಖಭಂಗ ಅನುಭವಿಸಿದೆ.

    ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಸೈಯದ್ ಅಕ್ಬರುದ್ದೀನ್ ಅವರು, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವುದು ಭಾರತದ ಆಂತರಿಕ ವಿಷಯ. ಆ ಪ್ರದೇಶಗಳ ಅಭಿವೃದ್ಧಿಗೆ ಪೂರಕವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದರಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ಆದರೂ ಚೀನಾ ಈ ವಿಚಾರವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸುತ್ತಿದೆ. ಚೀನಾ ಅಭಿಪ್ರಾಯವು ಜಾಗತಿಕ ಅಭಿಪ್ರಾಯವಲ್ಲ ಎಂದು ತಿಳಿಸಿದ್ದರು.

    ಒಟ್ಟು 5 ಪ್ರಶ್ನೆಗಳಿಗೆ ಉತ್ತರಿಸಿದ ಅಕ್ಬರುದ್ದೀನ್ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ಪಾಕ್ ಪತ್ರಕರ್ತರಿಗೆ ಶೇಕ್ ಹ್ಯಾಂಡ್ ಮಾಡಿ ವ್ಯಂಗ್ಯವಾಗಿ ಕುಟುಕಿದ ವಿಡಿಯೋಗೆ ಭಾರತೀಯರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

  • ಪಿಓಕೆಯೊಂದಿಗೆ ಅಕ್ಷಯ್ ಚಿನ್ ಭಾರತದ ಅವಿಭಾಜ್ಯ ಅಂಗ

    ಪಿಓಕೆಯೊಂದಿಗೆ ಅಕ್ಷಯ್ ಚಿನ್ ಭಾರತದ ಅವಿಭಾಜ್ಯ ಅಂಗ

    ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದೊಂದಿಗೆ ಆಕ್ಷಯ್ ಚಿನ್ ಸಹ ಭಾರತದ ಅವಿಭಾಜ್ಯ ಅಂಗ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

    ಲೋಕಸಭೆಯಲ್ಲಿ ಇಂದು ಕಾಶ್ಮೀರಕ್ಕೆ ನೀಡಲಾದ 370ನೇ ವಿಧಿಯ ರದ್ದು ಕುರಿತಂತೆ ನಡೆಯುತ್ತಿರುವ ಚರ್ಚೆಯಲ್ಲಿ ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ, ಜಮ್ಮು ಕಾಶ್ಮೀರವನ್ನು ರಾತ್ರಿ ಬೆಳಗಾಗುವುದರ ಒಳಗಡೆ ಎರಡು ಕೇಂದ್ರಾಡಳಿತ ರಾಜ್ಯವನ್ನಾಗಿ ಮಾಡಿದ್ದೀರಿ. ಇದರಿಂದ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಹೇಗಾಗುತ್ತದೆ. ನೀವು ಪಾಕ್ ಆಕ್ರಮಿತ ಕಾಶ್ಮೀರ ಬಗ್ಗೆ ಯಾವುದೇ ಆಲೋಚನೆ ಮಾಡಿಲ್ಲ. ನಿಯಮಗಳನ್ನು ಉಲ್ಲಂಘಿಸಿ ರಾಜ್ಯವನ್ನು ವಿಭಜನೆ ಮಾಡುತ್ತಿದ್ದೀರಿ ಎಂದು ಆರೋಪಿಸಿದರು.

    ಇದಕ್ಕೆ ಕೂಡಲೇ ಉತ್ತರ ನೀಡಿದ ಶಾ, ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಭಾರತ ಮತ್ತು ಜಮ್ಮು ಕಾಶ್ಮೀರ ಸಂವಿಧಾನದಲ್ಲಿ ಇದರ ಬಗ್ಗೆ ಆಧಾರವಿದೆ. ಪಿಓಕೆಯನ್ನು ನಾವು ಪರಿಗಣಿಸಿಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ ನಾನು ಹೇಳುತ್ತೇನೆ. ಪಾಕ್ ಆಕ್ರಮಿತ ಕಾಶ್ಮೀರ ಸೇರಿದಾಗ ಮಾತ್ರ ಅದು ಜಮ್ಮು ಕಾಶ್ಮೀರ ಆಗುತ್ತದೆ. ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಅಕ್ಷಯ್ ಚಿನ್ ಸೇರಿಸಿ ಜಮ್ಮು ಕಾಶ್ಮೀರದ ಗಡಿಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಪಿಓಕೆ ಮತ್ತು ಅಕ್ಷಯ್ ಚಿನ್ ಎರಡೂ ಭಾರತದ ಅವಿಭಾಜ್ಯ ಅಂಗಗಳು ಎಂದು ಉತ್ತರಿಸಿದರು.