Tag: ಪಿಒಕೆ

  • ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತೆ: ರಾಜನಾಥ್ ಸಿಂಗ್

    ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತೆ: ರಾಜನಾಥ್ ಸಿಂಗ್

    ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಭಾರತದ ಅವಿಭಾಜ್ಯ ಅಂಗವಾಗಿಯೇ ಇರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.

    ಜಮ್ಮುವಿನಲ್ಲಿ ನಡೆದ ‘ಕಾರ್ಗಿಲ್ ವಿಜಯ್ ದಿವಸ್’ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ ಆಗಮಿಸಿದ್ದರು. ಈ ವೇಳೆ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಒಕೆ ಕುರಿತು ಸಂಸತ್ತಿನಲ್ಲಿ ಅಂಗೀಕರಿಸಿದ ನಿರ್ಣಯಕ್ಕೆ ನಾವು ಬದ್ಧರಾಗಿದ್ದೇವೆ. ಪಿಒಕೆ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದು ಯಾವಾಗಲೂ ಉಳಿಯುತ್ತದೆ. ಬಾಬಾ ಅಮರನಾಥ(ಶಿವನ ರೂಪ) ಮತ್ತು ಶಾರದಾ ಆರ್ಶಿವಾದ ಭಾರತದ ಮೇಲೆ ಇರಲು ಯಾವ ಶಕ್ತಿ ನಮ್ಮನ್ನು ನಿಯಂತ್ರಣ ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಯಕ್ಷಗಾನದ ಭಾಗವತಿಕೆ ಮೂಲಕ ರಾಷ್ಟ್ರಪತಿಗೆ ಸ್ವಾಗತ ಕೋರಿದ ಬಾಲೆ

    J&K is integral part of India, says Rajnath Singh on 'Kargil Vijay Divas' - The Hindu

    ಸಮರ್ಥ ಮತ್ತು ಆತ್ಮವಿಶ್ವಾಸದ ನವ ಭಾರತದ ಮೇಲೆ ದುಷ್ಟಕಣ್ಣುಗಳನ್ನು ಹಾಕುವ ಯಾರಿಗಾದರೂ ಸೂಕ್ತವಾದ ಪ್ರತ್ಯುತ್ತರವನ್ನು ನೀಡಲು ಸಜ್ಜಾಗುತ್ತಿದೆ. ಭಾರತವನ್ನು ಜಾಗತಿಕ ಮಹಾಶಕ್ತಿಯನ್ನಾಗಿ ಮಾಡುವುದು ಮಡಿದ ನಮ್ಮ ವೀರರಿಗೆ ಸೂಕ್ತವಾದ ಗೌರವವಾಗಿದೆ ಎಂದು ಕರೆ ಕೊಟ್ಟರು.

    ಭಾನುವಾರ ಜಮ್ಮುವಿನಲ್ಲಿ ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ರಾಜನಾಥ್ ಸಿಂಗ್ ಅವರು ಭಾಗಿಯಾಗಿದ್ದು, ಸ್ವಾತಂತ್ರ್ಯದ ನಂತರ ದೇಶ ಸೇವೆಯಲ್ಲಿ ಪ್ರಾಣವನ್ನು ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಇದನ್ನೂ ಓದಿ:  ಬಿಗಿ ಭದ್ರತೆ ನಡೆದ ಮೊದಲ ಅಗ್ನಿಪಥ್ ಏರ್‌ಫೋರ್ಸ್ ನೇಮಕಾತಿ ಪರೀಕ್ಷೆ

    Live Tv
    [brid partner=56869869 player=32851 video=960834 autoplay=true]

  • ಪಾಕ್‍ನಲ್ಲಿ ತಿಕ್ಕಾಟ – ಭಾರತದ ಸಹಾಯ ಕೇಳಿದ ಪಿಒಕೆ ಪ್ರಜೆ

    ಪಾಕ್‍ನಲ್ಲಿ ತಿಕ್ಕಾಟ – ಭಾರತದ ಸಹಾಯ ಕೇಳಿದ ಪಿಒಕೆ ಪ್ರಜೆ

    ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ ರಾಜಕೀಯ ತಿಕ್ಕಾಟದಿಂದ ಸಂಕಷ್ಟ ಅನುಭವಿಸುತ್ತಿರುವ ಪಿಒಕೆಯ ಮುಜಾಫರಾಬಾದ್‍ನಲ್ಲಿರುವ ನಾಗರಿಕರೊಬ್ಬರು ಭಾರತದ ಸಹಾಯವನ್ನು ಕೇಳಿದ್ದಾರೆ.

    ಮೊಹ್ಸಿನ್ ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದ್ ಜಿಲ್ಲೆಯ ಪ್ರಜೆ. ಇವರು ಸಾಂವಿಧಾನಿಕ ಬಿಕ್ಕಟ್ಟಿನಿಂದಾಗಿ ದೇಶದ ಸಾಮಾನ್ಯ ಜನರ ಕಷ್ಟಗಳ ಬಗ್ಗೆ ವೀಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ದೇಶದಲ್ಲಿ ನಡೆಯುತ್ತಿರುವ ರಾಜಕೀಯ ಅಶಾಂತಿಯಿಂದ ಅನೇಕ ಕಷ್ಟಗಳು ಉಂಟಾಗುತ್ತಿದೆ. ಇದರಿಂದಾಗಿ ತನಗೆ ಹಾಗೂ ತನ್ನ ಕುಟುಂಬಕ್ಕೆ ಸಹಾಯ ಮಾಡುವಂತೆ ಭಾರತಕ್ಕೆ ಮನವಿ ಮಾಡಿದ್ದಾರೆ.

    ವೀಡಿಯೋದಲ್ಲಿ ಏನಿದೆ?:
    ಮೊಹ್ಸಿನ್ ಹೇಳಿರುವ ಪ್ರಕಾರ ಪಾಕಿಸ್ತಾನದ ಸೇನೆಯು ದೇಶದ ಜನರನ್ನು ಅಗೌರವದಿಂದ ನೋಡುತ್ತಿದೆ. ತಾನು ಪ್ರಸ್ತುತ ದುಬೈನಲ್ಲಿದ್ದೇನೆ. ಆದರೆ ತನ್ನ ಮಗನು ಅನಾರೋಗ್ಯದಿಂದ ಬಳಲುತ್ತಿದ್ದನು. ಇದರಿಂದಾಗಿ ತನ್ನ ಪತ್ನಿ ಆತನನ್ನು ಪಿಒಕೆಯ ಆಸ್ಪತ್ರೆಗ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಅವರಿಗೆ ಸ್ಕ್ಯಾನಿಂಗ್ ಮಾಡಲು ತಿಳಿಸಿದ್ದಾರೆ. ಸಿಟಿ ಸ್ಕ್ಯಾನ್ ಕೊಠಡಿಯ ಉಸ್ತುವಾರಿ ವಹಿಸಿದ್ದ ತಯ್ಯಬ್ ಎಂಬ ಮಿಲಿಟರಿ ಅಧಿಕಾರಿ ತನ್ನ ಪತ್ನಿಯನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಲ್ಲೆ ನಡೆಸಿದ್ದಾರೆ.

    ಮಹಿಳೆಯರಿಗೆ ಗೌರವ ಸಿಗದ ದೇಶದಿಂದ ಅವರನ್ನು ರಕ್ಷಿಸಬೇಕಾಗಿದೆ. ಅಷ್ಟೇ ಅಲ್ಲದೇ ಪಾಕಿಸ್ತಾನವು ತನ್ನ ನಾಗರಿಕರಿಗೆ ಉದ್ಯೋಗ ಮತ್ತು ಸುರಕ್ಷತೆಯನ್ನು ನೀಡುತ್ತಿಲ್ಲ. ಹೀಗಾಗಿ ಅನೇಕರು ಭಾರತಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೆಳಗಾವಿ ಆರ್‌ಎಸ್‌ಎಸ್ ಕಚೇರಿಗೆ ಗೋವಾ ಸಿಎಂ ಭೇಟಿ – ಇನ್ನೊಮ್ಮೆ ಮೋದಿ ಪ್ರಧಾನಿ ಆಗ್ತಾರೆ ಎಂದ ಸಾವಂತ್

    ಈ ವೀಡಿಯೋವನ್ನು ಮೊಹ್ಸಿನ್ ಹಂಚಿಕೊಂಡಿದ್ದು,  ಹಲವಾರು ಪಾಕಿಸ್ತಾನಿ ಪ್ರಜೆಗಳು ಮರು ಹಂಚಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ. ಇದನ್ನೂ ಓದಿ: ಲವ್ ಜಿಹಾದ್ ಕೇಸ್‍ಗೆ ಟ್ವಿಸ್ಟ್ – ನನ್ನನ್ನು ಯಾರು ಒತ್ತಾಯ ಪೂರ್ವಕವಾಗಿ ಕರೆದುಕೊಂಡು ಬಂದಿಲ್ಲ ಅಂದ ಯುವತಿ

  • ಪಾಕ್ ನಮ್ಮನ್ನು ಪ್ರಾಣಿಗಳ ರೀತಿ ನೋಡಿಕೊಳ್ತಿದೆ- ವಿಶ್ವಸಂಸ್ಥೆಯಲ್ಲಿ ಪಿಒಕೆ ನಾಯಕ ಅಳಲು

    ಪಾಕ್ ನಮ್ಮನ್ನು ಪ್ರಾಣಿಗಳ ರೀತಿ ನೋಡಿಕೊಳ್ತಿದೆ- ವಿಶ್ವಸಂಸ್ಥೆಯಲ್ಲಿ ಪಿಒಕೆ ನಾಯಕ ಅಳಲು

    – ಪಿಒಕೆಯಲ್ಲಿ ಯುವಕರನ್ನು ಯುದ್ಧಕ್ಕೆ ತಯಾರಿ ಮಾಡಲಾಗುತ್ತಿದೆ
    – ಪಾಕ್ ಭಯೋತ್ಪಾದಕ ಚಟುವಟಿಕೆಯನ್ನು ಜೀವಂತವಾಗಿರಿಸಿದೆ

    ಜಿನೀವಾ: ಜಮ್ಮು ಕಾಶ್ಮೀರದಲ್ಲಿನ ಜನರ ಸ್ವಾತಂತ್ರ್ಯವನ್ನು ಭಾರತ ಕಿತ್ತುಕೊಂಡಿದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹಾಳು ಮಾಡಲಾಗಿದೆ ಎಂದು ಬೊಬ್ಬೆ ಹಾಕುವ ಪಾಕಿಸ್ತಾನದ ಬಣ್ಣ ಇದೀಗ ಬಯಲಾಗಿದೆ. ವಿಶ್ವ ಸಂಸ್ಥೆಯ ಸಭೆಯಲ್ಲಿ ಸ್ವತಃ ಪಿಒಕೆ ನಾಯಕ ಈ ಆರೋಪ ಮಾಡಿದ್ದು, ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪಿಒಕೆ ಜನರನ್ನು ಪ್ರಾಣಿಗಳ ರೀತಿ ನಡೆಸಿಕೊಳ್ಳುತ್ತಿದೆ ಎಂದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಕಾರ್ಯಕರ್ತ ಸಜದ್ ರಾಜಾ ಆರೋಪಿಸಿದ್ದಾರೆ.

    ಸ್ವಿಟ್ಜರ್ಲೆಂಡ್‍ನ ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ 45ನೇ ಅಧಿವೇಶನದಲ್ಲಿ ಅವರು ಪಾಕಿಸ್ತಾನದ ಬಣ್ಣವನ್ನು ಬಯಲು ಮಾಡಿದ್ದಾರೆ. ಅಲ್ಲದೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾರೆ. ರಾಜಕೀಯ, ನಾಗರಿಕ ಹಾಗೂ ಸಾಂವಿಧಾನಿಕ ಹಕ್ಕಗಳನ್ನು ಮರು ಸ್ಥಾಪಿಸಲು ಸಹಾಯ ಮಾಡುವಂತೆ ವಿಶ್ವಸಂಸ್ಥೆಗೆ ಕೇಳಿಕೊಂಡಿದ್ದಾರೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಪಿಒಕೆ ಪ್ರದೇಶದ ನಾಗರಿಕರನ್ನು ಪ್ರಾಣಿಗಳಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಜನರಾದ ನಾವು ಮಂಡಳಿಯನ್ನು ಕೇಳಿಕೊಳ್ಳುವುದೇನೆಂದರೆ, ಪಾಕಿಸ್ತಾನ ಪ್ರಾಣಿಗಳ ರೀತಿ ನೋಡಿಕೊಳ್ಳುತ್ತಿರುವುದನ್ನು ತಡೆಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ. ಪಿಒಕೆ ಚುನಾವಣಾ ಕಾಯ್ದೆ-2020 ನಮ್ಮ ಎಲ್ಲ ಸಾಂವಿಧಾನಿಕ, ನಾಗರಿಕ ಹಾಗೂ ರಾಜಕೀಯ ಹಕ್ಕನ್ನು ಕಿತ್ತುಕೊಂಡಿದೆ. ಪಾಕಿಸ್ತಾನದ ಪಿಒಕೆ ಮೇಲಿನ ಹಸ್ತಕ್ಷೇಪವನ್ನು ವಿರೋಧಿಸುವ ನಮ್ಮ ನಡೆಯನ್ನು ವಿಶ್ವಸಂಸ್ಥೆಯ ನಿರ್ಣಯಗಳ ಉಲ್ಲಂಘನೆಯಲ್ಲಿ ರಾಜ್ಯ ವಿರೋಧಿ ಎಂದು ಘೋಷಿಸಲಾಗಿದೆ ಎಂದು ರಾಷ್ಟ್ರೀಯ ಸಮಾನತೆ ಪಕ್ಷದ ಅಧ್ಯಕ್ಷ ಸಜದ್ ರಾಜಾ ಅವರು ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

    ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ(ಯುಎನ್‍ಎಚ್‍ಆರ್‍ಸಿ) ಮನವಿ ಸಲ್ಲಿಸುತ್ತಿದ್ದಂತೆ ಪಿಒಕೆ ಕಾರ್ಯಕರ್ತ ಕಣ್ಣೀರು ಹಾಕಿದ್ದಾರೆ. ನಮ್ಮ ಸ್ವಂತ ಮನೆಯನ್ನು ರಕ್ಷಿಸಿಕೊಳ್ಳುತ್ತಿರುವುದಕ್ಕೆ ನಮ್ಮನ್ನು ದೇಶದ್ರೋಹಿಗಳಾಗಿ ಪರಿಗಣಿಸಲಾಗಿದೆ. ನಮ್ಮ ರಾಜಕೀಯ ಚಟುವಟಿಕೆಗಳನ್ನು ಕಾನೂನು ಬಾಹಿರವೆಂದು ಘೋಷಿಸಿದ್ದು, ಈ ಕಾಯ್ದೆಯ ಮೂಲಕ ನಮ್ಮ ಜನರನ್ನು ಹತ್ಯೆ ಮಾಡಲು ಪಾಕಿಸ್ತಾನ ಸೈನ್ಯಕ್ಕೆ ಮುಕ್ತ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದ್ದಾರೆ.

    ಜಮ್ಮು ಕಾಶ್ಮೀರದ ಗಡಿಯ ಎರಡೂ ಬದಿಗಳಲ್ಲಿರುವ ಯುವ ಸಮೂಹವನ್ನು ಅಧಿಕಾರಿಗಳು ಮೈಂಡ್ ವಾಶ್ ಮಾಡುವ ಮೂಲಕ ಭಾರತದೊಂದಿಗೆ ಪ್ರಾಕ್ಸಿ ಯುದ್ಧ ಮಾಡಲು ಫಿರಂಗಿಗೆ ಆಹಾರವನ್ನಾಗಿಸುತ್ತಿದ್ದಾರೆ. ಪಾಕಿಸ್ತಾನ ಪಿಒಕೆಯಿಂದ ಭಯೋತ್ಪಾದಕ ಶಿಬಿರಗಳನ್ನು ನಡೆಸುತ್ತಲೇ ಇದೆ ಎಂಬ ಗಂಭೀರ ಆರೋಪವನ್ನು ಅವರು ಮಾಡಿದ್ದಾರೆ.

    ಪಾಕಿಸ್ತಾನ ಏಜೆನ್ಸಿಗಳಿಂದಾಗಿ ಕಣ್ಮರೆಯಾಗುತ್ತಿರುವ ಸಿಂಧಿ ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ವಿಶ್ವಸಂಸ್ಥೆ ಪೂರೈಸಬೇಕು. ಪಾಕಿಸ್ತಾನ ಸರ್ಕಾರವನ್ನು ಹೊಣೆಗಾರರನ್ನಾಗಿಸಿ ಅಪರಾಧಿಗಳನ್ನು ನ್ಯಾಯಾಲಯಕ್ಕೆ ತರಬೇಕು. ಕಳೆದ ಮೂರು ತಿಂಗಳಲ್ಲಿ 60ಕ್ಕೂ ಹೆಚ್ಚು ಸಿಂಧಿಯರನ್ನು ಅಪಹರಿಸಲಾಗಿದೆ. ಭಯೋತ್ಪಾದನೆಯನ್ನು ಪಸರಿಸಲು ಇವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಿಂಧಿ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ ಆರೋಪಿಸಿದ್ದಾರೆ.

  • ಕಾಶ್ಮೀರ ಎಂದಿಗೂ ನಮ್ಮದೇ ಎಂದ ಅಫ್ರಿದಿಗೆ ಪಾಕ್ ಮಾಜಿ ಕ್ರಿಕೆಟಿಗನಿಂದಲೇ ಛೀಮಾರಿ

    ಕಾಶ್ಮೀರ ಎಂದಿಗೂ ನಮ್ಮದೇ ಎಂದ ಅಫ್ರಿದಿಗೆ ಪಾಕ್ ಮಾಜಿ ಕ್ರಿಕೆಟಿಗನಿಂದಲೇ ಛೀಮಾರಿ

    ಇಸ್ಲಾಮಾಬಾದ್: ಕಾಶ್ಮೀರ ಎಂದಿಗೂ ನಮ್ಮದೇ ಎಂದು ಹೇಳಿಕೆ ನೀಡಿದ್ದ ಪಾಕಿಸ್ತಾನ ತಂಡದ ಆಲ್‍ರೌಂಡರ್ ಶಾಹಿದ್ ಅಫ್ರಿದಿಗೆ ಸಹ ಆಟಗಾರರಾಗಿದ್ದ ದಾನಿಶ್ ಕನೇರಿಯಾ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಶ್ರಮಿಸುತ್ತಿದ್ದ ಶಾಹಿದ್ ಅಫ್ರಿದಿಗೆ ಟೀಂ ಇಂಡಿಯಾ ಮಾಜಿ ಆಟಗಾರ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಸಹಾಯ ಮಾಡಿದ್ದರು. ಆದರೆ ಅದಾದ ಕೆಲ ದಿನಗಳಲ್ಲಿ ಅಫ್ರಿದಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಬಗ್ಗೆ ಮಾತನಾಡಿ ಯುವಿ ಹಾಗೂ ಭಜ್ಜಿ ಸ್ನೇಹದಿಂದ ದೂರವಾಗಿದ್ದಾರೆ. ಇದೇ ವಿಚಾರವಾಗಿ ಈಗ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಅವರು ಅಸಮಾಧಾನ ಹೊರ ಹಾಕಿದ್ದಾರೆ. ಇದನ್ನೂ ಓದಿ: ಇನ್ಮೇಲಿಂದ ಅಫ್ರಿದಿಗೂ ನನಗೂ ಸಂಬಂಧವಿಲ್ಲ, ಅವನು ಮಿತಿ ಮೀರಿದ್ದಾನೆ: ಭಜ್ಜಿ ಗರಂ

    ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿದ ಕನೇರಿಯಾ, “ಶಾಹಿದ್ ಅಫ್ರಿದಿ ಯಾವುದೇ ವಿಷಯದ ಬಗ್ಗೆ ಮಾತನಾಡುವ ಮೊದಲು ಯೋಚಿಸಬೇಕು. ಅವರು ರಾಜಕೀಯಕ್ಕೆ ಸೇರಲು ಬಯಸಿದರೆ ಕ್ರಿಕೆಟ್‍ನೊಂದಿಗಿನ ಎಲ್ಲಾ ಸಂಬಂಧಗಳನ್ನು ತ್ಯಜಿಸಬೇಕು. ರಾಜಕಾರಣಿಗಳಂತೆ ಮಾತನಾಡುತ್ತಿದ್ದರೆ ಕ್ರಿಕೆಟ್‍ನಿಂದ ದೂರವಿರುವುದು ಮುಖ್ಯ. ಈ ರೀತಿಯ ಮಾತುಗಳು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಪಾಕಿಸ್ತಾನ ಕ್ರಿಕೆಟ್ ತಂಡದ ಬಗ್ಗೆ ಕೆಟ್ಟ ಭಾವನೆ ಮೂಡಿಸುತ್ತೆ” ಎಂದು ಗುಡುಗಿದ್ದಾರೆ. ಇದನ್ನೂ ಓದಿ: ‘ಕಾಶ್ಮೀರ ಎಂದಿಗೂ ನಮ್ಮದೇ’- ಅಫ್ರಿದಿ ಹೇಳಿಕೆಗೆ ಧವನ್ ತಿರುಗೇಟು

    ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಮುನ್ನ ಅಫ್ರಿದಿ ಯಾವ ಮುಖ ಇಟ್ಟುಕೊಂಡು ಯುವಿ ಮತ್ತು ಭಜ್ಜಿ ಅವರ ಬಳಿ ಸಹಾಯ ಕೇಳಿದರು? ಸಹಾಯ ಪಡೆದುಕೊಂಡು ಅವರ ದೇಶ ಮತ್ತು ಪ್ರಧಾನಿಯ ಬಗ್ಗೆ ದ್ವೇಷದ ಹೇಳಿಕೆ ನೀಡಿದ್ದಾರೆ. ಇದು ಯಾವ ರೀತಿಯ ಸ್ನೇಹ ಎಂದು ಕನೇರಿಯಾ ಪ್ರಶ್ನಿಸಿ ಕನೇರಿಯಾ ಅಫ್ರಿದಿಗೆ ಛೀಮಾರಿ ಹಾಕಿದ್ದಾರೆ.

    ಕಳೆದ ಕೆಲವು ತಿಂಗಳುಗಳಿಂದ ಕನೇರಿಯಾ ಸುದ್ದಿಯಲ್ಲಿದ್ದು, ಹಿಂದೂ ಎಂಬ ಕಾರಣಕ್ಕಾಗಿ ಪಾಕಿಸ್ತಾನ ರಾಷ್ಟ್ರೀಯ ತಂಡದಲ್ಲಿ ಅವರು ಎದುರಿಸಿದ ತಾರತಮ್ಯವನ್ನು ಎತ್ತಿ ತೋರಿಸಿದ್ದಾರೆ. ಅದರಲ್ಲೂ ಅಫ್ರಿದಿಯ ನಡೆದುಕೊಂಡ ರೀತಿಯನ್ನು ವಿವರಿಸಿದ್ದರು. ಇದನ್ನೂ ಓದಿ: ನನ್ನ ವೃತ್ತಿಜೀವನ ಹಾಳು ಮಾಡಿದ್ದೇ ಅಫ್ರಿದಿ- ದಾನಿಶ್ ಕನೇರಿಯಾ

    ಪಿಒಕೆ ಬಗ್ಗೆ ಅಫ್ರಿದಿ ಮಾತನಾಡಿದ ನಂತರ ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಗೌತಮ್ ಗಂಭೀರ್ ಸೇರಿದಂತೆ ಅನೇಕ ಟೀಂ ಇಂಡಿಯಾ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ವಾಗ್ದಾಳಿ ನಡೆಸಿದರು. ತೀವ್ರ ಹಿನ್ನಡೆ ಅನುಭವಿಸಿದ ಅಫ್ರಿದಿ ಕೆಲವು ಭಾರತೀಯ ಕ್ರಿಕೆಟಿಗರೊಂದಿಗೆ ಎಲ್ಲ ಸ್ನೇಹವನ್ನು ಕಳೆದುಕೊಂಡರು.

  • ಪಿಒಕೆ ಭಾರತದ ಭಾಗವೆಂದ ಪಾಕ್

    ಪಿಒಕೆ ಭಾರತದ ಭಾಗವೆಂದ ಪಾಕ್

    ಇಸ್ಲಾಮಾಬಾದ್: ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶ ತನಗೆ ಸೇರಿದ್ದು ಎಂದು ಮೊಂಡುತನ ತೋರುತ್ತಿದ್ದ ಪಾಕಿಸ್ತಾನವು ಸದ್ಯ ಭಾರತದ ಭಾಗವೆಂದು ಘೋಷಿಸಿದೆ.

    ಇತ್ತೀಚೆಗೆ ಭಾರತದ ಹವಾಮಾನ ಬುಲೆಟಿನ್‍ನಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನವನ್ನು ಸೇರಿಸಿದಾಗ ಪಾಕಿಸ್ತಾನ ಸಾಕಷ್ಟು ಆಘಾತಕ್ಕೊಳಗಾಗಿತ್ತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಕುರಿತ ತನ್ನ ಹೇಳಿಕೆಯನ್ನು ಅವರು ಪುನರಾವರ್ತಿಸಲು ಪ್ರಾರಂಭಿಸಿತ್ತು. ಜೊತೆಗೆ ಪಾಕ್ ತಮ್ಮ ಹವಾಮಾನ ಬುಲೆಟಿನ್‍ನಲ್ಲಿ ಜಮ್ಮು-ಕಾಶ್ಮೀರ ಮತ್ತು ಲಡಾಕ್ ತಾಪಮಾನವನ್ನು ಹೇಳುವ ಮೂಲಕ ಆಕ್ರೋಶ ಹೊರ ಹಾಕಿತ್ತು. ಆದರೆ ಈಗ ತಾಂತ್ರಿಕ ದೋಷದಿಂದಾಗಿ ಪಾಕಿಸ್ತಾನವು ಪಿಒಕೆಯನ್ನು ಭಾರತದೊಂದಿಗೆ ಸೇರಿಸಿದೆ. ಇದನ್ನೂ ಓದಿ:  ‘ಕಾಶ್ಮೀರ ಎಂದಿಗೂ ನಮ್ಮದೇ’- ಅಫ್ರಿದಿ ಹೇಳಿಕೆಗೆ ಧವನ್ ತಿರುಗೇಟು

    ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಲು ಪಾಕಿಸ್ತಾನ ಸರ್ಕಾರವು ವೆಬ್‍ಸೈಟ್ ಆರಂಭಿದೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತದ ಭಾಗವೆಂದು ವಿವರಿಸಲಾಗಿದೆ. ಇಲ್ಲಿಯವರೆಗೆ ಪಾಕಿಸ್ತಾನವು ಪಿಒಕೆ ಮೇಲೆ ತನ್ನ ಅಧಿಕಾರ ಚಲಾಯಿಸಲು ಯತ್ನಿಸಿ ಅಲ್ಲಿ ಚುನಾವಣೆ ನಡೆಸಲು ಆದೇಶಿಸಿತ್ತು. ಈ ಬಗ್ಗೆ ಭಾರತವು ತೀವ್ರ ಪ್ರತಿಭಟನೆ ನಡೆಸಿತ್ತು. ಈಗ ಅಧಿಕೃತ ವೆಬ್‍ಸೈಟ್‍ನಲ್ಲಿ ಪಿಒಕೆಯನ್ನು ಭಾರತದ ಭಾಗವೆಂದು ಇಮ್ರಾನ್ ಸರ್ಕಾರ ವಿವರಿಸಿದೆ.  ಇದನ್ನೂ ಓದಿ: ಆಕ್ರಮಿತ ಜಾಗ ನಮ್ಮದು, ಗಿಲ್ಗಿಟ್ ಬಾಲ್ಟಿಸ್ತಾನಲ್ಲಿ ಚುನಾವಣೆ ನಡೆಸುವಂತಿಲ್ಲ – ಪಾಕ್‍ಗೆ ಭಾರತದ ಖಡಕ್ ಎಚ್ಚರಿಕೆ

    Covid.gov.pok ಎಂಬ ವೆಬ್‍ಸೈಟ್ ಗ್ರಾಫಿಕ್ಸ್ ಮೂಲಕ ಕೊರೊನಾದ ವ್ಯಾಪ್ತಿಯನ್ನು ವಿವರಿಸಲಾಗಿದೆ. ಈ ನಕ್ಷೆಯ ಫೋಟೋ ನೋಡಿದ ತಕ್ಷಣವೇ ನೆಟ್ಟಿಗರು ಟ್ವಿಟರ್ ನಲ್ಲಿ ಪಾಕಿಸ್ತಾನ ಸರ್ಕಾರವನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.

    ಇದಕ್ಕೂ ಮುನ್ನ ಪಾಕಿಸ್ತಾನವು ಕೊರೊನಾ ಸೋಂಕಿತರನ್ನು ಪಿಒಕೆಗೆ ಶಿಫ್ಟ್ ಮಾಡಲು ಮುಂದಾಗಿತ್ತು. ಇದಕ್ಕೆ ಗಿಲ್ಗಿಟ್-ಬಾಲ್ಟಿಸ್ತಾನದ  ಜನರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದಿತ್ತು.

    ಸದ್ಯದ ವರದಿಯ ಪ್ರಕಾರ ಪಾಕಿಸ್ತಾನದಲ್ಲಿ 48 ಸಾವಿರಕ್ಕೂ ಹೆಚ್ಚು ಜನರಿಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ಈ ಪೈಕಿ 1,017 ಜನರು ಮೃತಪಟ್ಟಿದ್ದರೆ, 14 ಸಾವಿರ ಜನರು ಗುಣಮುಖರಾಗಿದ್ದಾರೆ.

  • ಅಯೋಧ್ಯೆ, ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಿದ ಪಾಕಿಗೆ ಚಳಿ ಬಿಡಿಸಿದ ಭಾರತದ ಅಧಿಕಾರಿ

    ಅಯೋಧ್ಯೆ, ಕಾಶ್ಮೀರ ವಿಷಯದಲ್ಲಿ ಮೂಗು ತೂರಿಸಿದ ಪಾಕಿಗೆ ಚಳಿ ಬಿಡಿಸಿದ ಭಾರತದ ಅಧಿಕಾರಿ

    – ವಿಶ್ವಸಂಸ್ಥೆಯಲ್ಲಿ ಮುಜುಗರಕ್ಕೀಡಾದ ಪಾಕ್

    ಪ್ಯಾರಿಸ್: ಕಾಶ್ಮೀರ ಮತ್ತು ಅಯೋಧ್ಯೆ ವಿಚಾರದಲ್ಲಿ ಮೂಗು ತೂರಿಸಿದ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಭಾರತದ ಅಧಿಕಾರಿ ಚಳಿ ಬಿಡಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಪಾಕಿಸ್ತಾನ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಿದೆ.

    ಯುನೆಸ್ಕೋ(UNESCO)ದ 40ನೇ ಸಾಮಾನ್ಯ ಸಭೆ(ಜನರಲ್ ಕಾನ್ಫರೆನ್ಸ್)ಯಲ್ಲಿ ಕಾಶ್ಮೀರ ಮತ್ತು ಅಯೋಧ್ಯೆ ವಿಷಯಗಳನ್ನು ಪಾಕಿಸ್ತಾನ ಪ್ರಸ್ತಾಪ ಮಾಡಿತು. ಈ ಎರಡು ಭಾರತದ ಆಂತರಿಕ ವಿಚಾರಗಳಾಗಿವೆ. ಹಾಗಾಗಿ ಪಾಕಿಸ್ತಾನ ಇದರಲ್ಲಿ ಹಸ್ತಕ್ಷೇಪ ಮಾಡದಿರುವುದೇ ಉತ್ತಮ ಹಾಗೂ ಈ ವಿಷಯಗಳಲ್ಲಿ ನಮ್ಮ ಮೇಲೆ ಯಾವುದೇ ಒತ್ತಡ ಹಾಕುವಂತಿಲ್ಲ ಎಂದು ಭಾರತದ ಪ್ರತಿನಿಧಿ ಖಡಕ್ ಆಗಿ ಯುನೆಸ್ಕೋದಲ್ಲಿ ಹೇಳಿದ್ದಾರೆ.

    ನಾವು ಪಾಕಿಸ್ತಾನದ ದುಷ್ಟಬುದ್ಧಿ ಮತ್ತು ಸುಳ್ಳು ಪ್ರಚಾರವನ್ನು ಬಲವಾಗಿ ಖಂಡಿಸುತ್ತೇವೆ. ಪಾಕಿಸ್ತಾನ ತನ್ನ ಸುಳ್ಳುಗಳಿಂದ ಭಾರತದ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಭಾರತದ ಸವೋಚ್ಛ ನ್ಯಾಯಾಲಯ ನೀಡಿದ ಅಯೋಧ್ಯೆ ತೀರ್ಪನ್ನು ಪಾಕಿಸ್ತಾನ ಟೀಕಿಸುವ ಮೂಲಕ ನ್ಯಾಯಾಂಗ ನಿಂದನೆ ಮಾಡುತ್ತಿದೆ. ಅಯೋಧ್ಯೆ ವಿಷಯ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರವಾಗಿದ್ದು, ಪಾಕಿಸ್ತಾನಕ್ಕೆ ಈ ಬಗ್ಗೆ ಮಾತನಾಡುವ ಯಾವುದೇ ಹಕ್ಕಿಲ್ಲ ಎಂದು ತಿರುಗೇಟು ನೀಡಿದರು.

    ಪಾಕಿಸ್ತಾನದ ಶಿಕ್ಷಣ ಮಂತ್ರಿ ಶಫಾಕತ್ ಮಹಮೂದ್ ಅಯೋಧ್ಯೆಯ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ಹೊರಹಾಕುತ್ತಾ, ಯುನೆಸ್ಕೋದ ಧಾರ್ಮಿಕ ಸ್ವಾತಂತ್ರ್ಯದ ಮೌಲ್ಯಗಳಿಗೆ ಅನುಗುಣವಾಗಿ ತೀರ್ಪು ಬಂದಿಲ್ಲ ಎಂದು ಮೂಗು ತೂರಿಸುವ ಪ್ರಯತ್ನ ಮಾಡಿದ್ದರು.

    ಶಫಾಕತ್‍ಗೆ ತಿರುಗೇಟು ನೀಡಿದ ಭಾರತದ ಪ್ರತಿನಿಧಿ, ಜೀವನದ ಅಧಿಕಾರ (Right To life) ದೇಶದ ಮೂಲಭೂತ ಅಧಿಕಾರವಾಗಿದೆ. ವಿಶ್ವಮಟ್ಟದಲ್ಲಿ ಈ ಅಧಿಕಾರಕ್ಕೆ ಭಯೋತ್ಪಾದನೆ ದೊಡ್ಡ ವಿಘ್ನವಾಗಿದೆ. ಪಾಕಿಸ್ತಾನ ಭಯೋತ್ಪಾದನೆಯ ಉತ್ಪಾದಕ ಕೇಂದ್ರ ಮತ್ತು ರಪ್ತು ಮಾಡುವ ದೇಶವಾಗಿದೆ. ಪಾಕಿಸ್ತಾನದ ರಾಜಕಾರಣದಲ್ಲಿ ಭಯೋತ್ಪಾದನೆ ಬೇರೂರಿದೆ. ಪಾಕಿಸ್ತಾನದ ಮೂಲಕವೇ ಭಯೋತ್ಪಾದನೆ ಮುಖ್ಯವಾಹಿನಿಗೆ ಬರುತ್ತಿದೆ ಎಂಬುವುದು ವಿಶ್ವಮಟ್ಟದಲ್ಲಿ ಗೊತ್ತಾಗಿದೆ ಎಂದು ಚಳಿ ಬಿಡಿಸಿದರು.

    ಇದೇ ವೇಳೆ ಪಾಕಿಸ್ತಾನ ಕಾಶ್ಮೀರದ ವಿಚಾರವನ್ನು ಪ್ರಸ್ತಾಪ ಮಾಡಿತು. ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮೂರು ಭಾರತದ ಅವಿಭಾಜ್ಯ ಅಂಗಗಳಾಗಿವೆ. ಈ ಮೂರು ಭಾಗಗಳು ಯಾವಾಗಲೂ ಭಾರತದ ಅಂಗಗಳಾಗಿಯೇ ಇರಲಿವೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸಹ ಸೇರಿದೆ. ಪಾಕಿಸ್ತಾನ ಕಾನೂನುಬಾಹಿರ ಮತ್ತು ಬಲವಂತವಾಗಿ ಕಾಶ್ಮೀರದ ಭಾಗವನ್ನು ಆಕ್ರಮಿಸಿಕೊಂಡಿದೆ ಎಂದು ಭಾರತದ ಪ್ರತಿನಿಧಿ ಆರೋಪಿಸಿದರು.

     

  • ಶರಣಾದ ಪಾಕ್ – ಶ್ವೇತ ಬಾವುಟ ತೋರಿಸಿ ಮೃತದೇಹ ಹೊತ್ತೊಯ್ದ ಇಮ್ರಾನ್ ಸೇನೆ

    ಶರಣಾದ ಪಾಕ್ – ಶ್ವೇತ ಬಾವುಟ ತೋರಿಸಿ ಮೃತದೇಹ ಹೊತ್ತೊಯ್ದ ಇಮ್ರಾನ್ ಸೇನೆ

    ಶ್ರೀನಗರ: ಭಾರತೀಯ ಸೇನೆಯಿಂದ ಹತರಾದ ಪಾಕ್ ಸೈನಿಕರ ಮೃತದೇಹವನ್ನು ಪಾಕಿಸ್ತಾನ ಸೇನೆ ಶ್ವೇತ ಬಾವುಟ ತೋರಿಸಿ ಶರಣಾಗಿದ್ದೇವೆ ಎಂಬ ಸಂದೇಶವನ್ನು ರವಾನಿಸಿ ತೆಗೆದುಕೊಂಡು ಹೋಗಿದೆ.

    ಕದನ ವಿರಾಮ ಉಲ್ಲಂಘನೆ ಮಾಡಿದ ಪಾಕಿಸ್ತಾನಿ ಸೈನಿಕರನ್ನು ಸೆಪ್ಟೆಂಬರ್ 10, 11 ರಂದು ಭಾರತೀಯ ಸೇನೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಯ ಹಾಜಿಪುರ ಸೆಕ್ಟರ್‍ ನಲ್ಲಿ ಹೊಡೆದು ಹಾಕಿತ್ತು. ಈ ಗುಂಡಿನ ದಾಳಿಯಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಬಹವಾಲ್‍ನಗರ ಮೂಲದ ಸೈನಿಕ ಗುಲಾಮ್ ರಸೂಲ್‍ನನ್ನು ಭಾರತೀಯ ಸೇನೆ ಕೊಂದು ಹಾಕಿತ್ತು.

    ಈ ಗುಂಡಿನ ಚಕಮಕಿಯಲ್ಲಿ ಹತನಾದ ರಸೂಲ್ ಮೃತ ದೇಹವನ್ನು ತೆಗೆದುಕೊಂಡು ಹೋಗಲು ಪಾಕ್ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ಮುಂದುವರಿಸಿತ್ತು. ಈ ದಾಳಿಗೆ ಭಾರತೀಯ ಸೇನೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಸಿದ ಪರಿಣಾಮ ಪಾಕಿನ ಮತ್ತೊಬ್ಬ ಸೈನಿಕ ಸಹ ಹತ್ಯೆಯಾಗಿದ್ದ. ಈ ಎರಡು ಮೃತದೇಹಗಳನ್ನು ವಾಪಸ್ ಪಡೆಯಲು ಪಾಕಿಸ್ತಾನಿ ಸೇನೆ ಎರಡು ದಿನಗಳ ಕಾಲ ಬಹಳ ಪ್ರಯತ್ನ ಪಟ್ಟರೂ ಭಾರತೀಯ ಸೇನೆ ಬಿಟ್ಟುಕೊಟ್ಟಿರಲಿಲ್ಲ.

    ಎರಡು ದಿನ ಪ್ರಯತ್ನ ಪಟ್ಟು ಸೋತ ಪಾಕಿಸ್ತಾನಿ ಸೈನಿಕರು ಸೆಪ್ಟಂಬರ್ 13 ಶುಕ್ರವಾರ ಬಿಳಿ ಬಣ್ಣದ ಬಾವುಟವನ್ನು ತೋರಿಸಿ ನಾವು ಶರಣಾಗಿದ್ದೇವೆ ಎಂದು ಸಂದೇಶ ರವಾನೆ ಮಾಡುವ ಮೂಲಕ ಎರಡು ಮೃತ ದೇಹವನ್ನು ತೆಗೆದುಕೊಂಡು ಹೋಗಿದ್ದಾರೆ. ಇದನ್ನು ಓದಿ:ಶ್ವೇತ ಬಾವುಟ ತೋರಿಸಿ, ನಿಮ್ಮ ಶವಗಳನ್ನು ತೆಗೆದುಕೊಂಡು ಹೋಗಿ-ಪಾಕಿಸ್ತಾನಕ್ಕೆ ಭಾರತದ ಸಂದೇಶ

    ಶ್ವೇತ ಬಾವುಟ ತೋರಿಸಿ ಶರಣಾಗಿ ಬಂದ ಪಾಕ್ ಸೈನಿಕರನ್ನು ಕಂಡ ಭಾರತೀಯ ಸೈನಿಕರು ಮತ್ತೆ ಗುಂಡಿನ ದಾಳಿ ಮಾಡದೇ ಮೃತ ದೇಹಗಳನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ಈ ಮೂಲಕ ಸೋತು ಶರಣಾದವರಿಗೆ ನಾವು ಗೌರವ ನೀಡುತ್ತೇವೆ ಎಂಬ ಸಂದೇಶವನ್ನು ಭಾರತೀಯ ಸೇನೆ ನೀಡಿದೆ.

    ಈ ಹಿಂದೆ ಜುಲೈ ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕೇರನ್ ಸೆಕ್ಟರ್ ನಲ್ಲಿಯ ಫಾರ್ವರ್ಡ್ ಪೋಸ್ಟ್ ಬಳಿ ಪಾಕಿಸ್ತಾನದ ಸೇನೆಯ ಬ್ಯಾಟ್  (Border Action Team) ತಂಡ  ದಾಳಿಯನ್ನು ನಡೆಸಿತ್ತು. ಪಾಕಿಸ್ತಾನದ ದಾಳಿಯನ್ನು ವಿಫಲಗೊಳಿಸಿದ ಭಾರತೀಯ ಸೇನೆ ಪ್ರತಿದಾಳಿ ನಡೆಸಿತ್ತು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ 5 ರಿಂದ7 ಸೈನಿಕರು ಮತ್ತು ಕೆಲ ಉಗ್ರರು ಸಾವನ್ನಪ್ಪಿದ್ದರು.

    ಭಾರತೀಯ ಸೇನೆಯ ದಾಳಿಗೆ ಸಿಕ್ಕಿ ಮೃತ ಪಟ್ಟ ಪಾಕಿಸ್ತಾನ ಸೈನಿಕರ ಮೃತ ದೇಹಗಳು ಎಲ್‍ಓಸಿಯಲ್ಲಿ ಬಿದ್ದಿವೆ. ಈ ದೇಹಗಳನ್ನು ಶ್ವೇತ ಬಾವುಟ ತೋರಿಸಿ ತೆಗೆದುಕೊಂಡಿ ಹೋಗಿ ಅಂತ್ಯಕ್ರಿಯೇ ಮಾಡಬಹುದು ಎಂದು ಭಾರತೀಯ ಸೇನೆ ಪಾಕಿಸ್ತಾನ ಸೇನೆಗೆ ಹೇಳಿತ್ತು. ಇದನ್ನು ನಿರಾಕರಿಸಿದ್ದ ಪಾಕಿಸ್ತಾನ ಎಲ್‍ಓಸಿಯಲ್ಲಿ ಮೃತ ಪಟ್ಟ ಸೈನಿಕರು ನಮ್ಮ ಸೈನಿಕರಲ್ಲ ಎಂದು ಹೇಳಿತ್ತು.