Tag: ಪಿಐಎ

  • ಇಂಧನ ಕೊರತೆ – ಪಾಕಿಸ್ತಾನದ 48 ವಿಮಾನಗಳ ಹಾರಾಟ ರದ್ದು

    ಇಂಧನ ಕೊರತೆ – ಪಾಕಿಸ್ತಾನದ 48 ವಿಮಾನಗಳ ಹಾರಾಟ ರದ್ದು

    ಇಸ್ಲಾಮಾಬಾದ್: ತೀವ್ರ ಇಂಧನ ಕೊರತೆಯನ್ನು ಎದುರಿಸುತ್ತಿರುವ ಪಾಕಿಸ್ತಾನದಲ್ಲಿ (Pakistan) ಮತ್ತೊಂದು ಸಂಕಷ್ಟ ಎದುರಾಗಿದೆ. ಬಾಕಿ ಉಳಿದಿರುವ ಪಾವತಿಗಳಿಂದಾಗಿ ಇಂಧನ ಪೂರೈಕೆ ಮೇಲೆ ನಿರ್ಬಂಧಗಳಾಗಿರುವ ಹಿನ್ನೆಲೆ ಇದೀಗ ಹತ್ತಾರು ವಿಮಾನಗಳು ರದ್ದಾಗಿವೆ.

    ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾದ ಪಾಕಿಸ್ತಾನ್ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (PIA) ಇಂಧನದ ಕೊರತೆಯ ಕಾರಣ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರಯಾಣಗಳು ಸೇರಿದಂತೆ 48 ವಿಮಾನಗಳನ್ನು ರದ್ದುಗೊಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಪಿಐಎ ವಕ್ತಾರರು, ದೇಶದಲ್ಲಿ ದೈನಂದಿನ ವಿಮಾನಗಳಿಗೆ ಸೀಮಿತ ಇಂಧನ ಪೂರೈಕೆ ಮತ್ತು ಕಾರ್ಯಾಚರಣೆಯ ಸಮಸ್ಯೆಗಳಿಂದ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಕೆಲವು ವಿಮಾನಗಳ ನಿರ್ಗಮನವನ್ನು ಮರುನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

    ಇಂಧನದ ಕೊರತೆಯಿಂದಾಗಿ 13 ದೇಶೀಯ ವಿಮಾನಗಳು ಮತ್ತು ಅವುಗಳಲ್ಲಿ 11 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸಂಚರಿಸುವ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇತರ 12 ವಿಮಾನಗಳು ವಿಳಂಬವಾಗಿವೆ ಎಂದು ಅವರು ಹೇಳಿದ್ದಾರೆ. ರದ್ದಾದ ವಿಮಾನಗಳ ಪ್ರಯಾಣಿಕರನ್ನು ಪರ್ಯಾಯ ವಿಮಾನಗಳಿಗೆ ಸ್ಥಳಾಂತರಿಸಲಾಗಿದೆ. ಈ ನಿರ್ಧಾರದ ನಂತರ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸಲು ವಿಮಾನ ನಿಲ್ದಾಣಕ್ಕೆ ಆಗಮಿಸುವ ಮೊದಲು ಪಿಐಎ ಕಸ್ಟಮರ್ ಕೇರ್, ಪಿಐಎ ಕಚೇರಿಗಳು ಅಥವಾ ಅದರ ಟ್ರಾವೆಲ್ ಏಜೆಂಟ್ ಅನ್ನು ಸಂಪರ್ಕಿಸಲು ಪ್ರಯಾಣಿಕರಿಗೆ ಸಲಹೆ ನೀಡಿದೆ. ಇದನ್ನೂ ಓದಿ: ಅರಬ್ ನಾಯಕರ ಜೊತೆಗಿನ ಬೈಡೆನ್ ಮೀಟಿಂಗ್ ಕ್ಯಾನ್ಸಲ್

    ಇಂಧನ ಕೊರತೆ ಏಕೆ?
    ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್ ಸ್ಟೇಟ್ ಆಯಿಲ್‌ಗೆ (PSO) ಪಾವತಿ ಬಾಕಿ ಉಳಿದಿರುವ ಇನ್ನೆಲೆ ಪಿಐಎ ವಿಮಾನಗಳಿಗೆ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಕುಸಿತದ ಅಂಚಿನಲ್ಲಿರುವ ಮತ್ತು ಭಾರೀ ಸಾಲಗಳಿಂದ ಖಾಸಗೀಕರಣದತ್ತ ಮುಖ ಮಾಡಿರುವ ವಿಮಾನಯಾನದ ಭವಿಷ್ಯ ಅನಿಶ್ಚಿತವಾಗಿ ಉಳಿದಿದೆ. ಇದನ್ನೂ ಓದಿ: ಮೈದಾನದಲ್ಲಿ ನಮಾಜ್‌ – ರಿಜ್ವಾನ್‌ ವಿರುದ್ಧ ದೂರು ದಾಖಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

    ಸೂಕ್ತ ಒಳಉಡುಪು ಧರಿಸಲೇಬೇಕು – ಪಾಕ್ ವಿಮಾನಯಾನ ಸಂಸ್ಥೆ ಆದೇಶ

    ಇಸ್ಲಾಮಾಬಾದ್: ಇನ್ಮುಂದೆ ವಿಮಾನದ (AirCraft) ಕ್ಯಾಬಿನ್ ಸಿಬ್ಬಂದಿ ಸೂಕ್ತವಾದ ಒಳಉಡುಪುಗಳನ್ನು ಧರಿಸಲೇಬೇಕು ಎಂದು ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಯು (PIA) ಆದೇಶಿಸಿದೆ.

    ಈ ಆದೇಶವು ವಿಚಿತ್ರ ಹಾಗೂ ವಿಲಕ್ಷಣ ಎಂದೇ ಅನ್ನಿಸಬಹುದು. ಆದರೆ ಕ್ಯಾಬಿನ್ ಸಿಬ್ಬಂದಿಗೆ ಡ್ರೆಸ್ಸಿಂಗ್ (Dress) ಸೆನ್ಸ್ ತುಂಬಾನೇ ಮುಖ್ಯ. ಇಲ್ಲವಾದಲ್ಲಿ ಸಂಸ್ಥೆಯ ಬಗ್ಗೆ ಪ್ರಯಾಣಿಕರು ನಕಾರಾತ್ಮಕ ಧೋರಣೆ ತಾಳುತ್ತಾರೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಿದೆ. ಈ ಹೊಸ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ ವಿಮಾನ ಸಿಬ್ಬಂದಿಗೆ ಕೇಳಿಕೊಂಡಿದೆ. ಇದನ್ನೂ ಓದಿ: ಕಿಡ್ನಿ ಕಸಿ ಮಾಡಿಸಿಕೊಂಡು 4 ವರ್ಷದ ಬಳಿಕ ಮಗುವಿಗೆ ಜನ್ಮ ನೀಡಿದ ಮಹಿಳೆ

    ಕೆಲ ಕ್ಯಾಬಿನ್ ಸಿಬ್ಬಂದಿ ಇಂಟರ್‌ಸಿಟಿ ಪ್ರಯಾಣ ಮಾಡುವಾಗ, ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವಾಗ ಮತ್ತು ವಿವಿಧ ಭೇಟಿಗಳ ಸಂದರ್ಭದಲ್ಲಿ ತಮ್ಮಿಚ್ಛೆಯಂತೆ ಉಡುಗೆ ಧರಿಸುತ್ತಾರೆ. ಇಂತಹ ಡ್ರೆಸ್ಸಿಂಗ್ ಸೆನ್ಸ್ ನೋಡುಗರಲ್ಲಿ ಮುಜುಗರ ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಸಂಸ್ಥೆಯ ಬಗ್ಗೆ ಪ್ರಯಾಣಿಕರಲ್ಲಿ ತಪ್ಪು ಗ್ರಹಿಕೆಗೆ ಈಡುಮಾಡುತ್ತದೆ. ಆದ್ದರಿಂದ ಪುರುಷರೇ ಆಗಲಿ ಮಹಿಳೆಯರೇ ಆಗಲಿ ಸೂಕ್ತ ಒಳಉಡುಪು ಮತ್ತು ಸರಳವಾದ ಉಡುಪುಗಳನ್ನು ಧರಿಸಬೇಕು. ಈ ಧರಿಸುವಿಕೆ ನಮ್ಮ ಸಾಂಸ್ಕೃತಿಕ ಮತ್ತು ರಾಷ್ಟ್ರೀಯ ನೈತಿಕತೆಗೆ ಅನುಗುಣವಾಗಿರಬೇಕು. ಈ ಕುರಿತು ಅಧಿಕಾರಿಗಳು ಗಮನಿಸಬೇಕು ಎಂದು ಪಿಐಎ ಪ್ರಧಾನ ವ್ಯವಸ್ಥಾಪಕ ಅಮೀರ್ ಬಶೀರ್ (Aamir Bashir) ಹೇಳಿದ್ದಾರೆ. ಇದನ್ನೂ ಓದಿ: ಪ್ರೀತಿಸಿದವಳಿಂದ ಕಪಾಳಮೋಕ್ಷ – ಅವಮಾನ ಸಹಿಸಲಾರದೇ ಪ್ರಿಯಕರ ಆತ್ಮಹತ್ಯೆ

    ಪಿಐಎ ಪಾಕಿಸ್ತಾನದ (Pakistan) ಅತಿದೊಡ್ಡ ವಿಮಾನಯಾನ ಸಂಸ್ಥೆಯಾಗಿದ್ದು, 30 ವಿಮಾನಗಳನ್ನ ಲಾಂಚ್ ಮಾಡಿದೆ. ಪ್ರತಿದಿನ 100 ವಿಮಾನಗಳು ಕಾರ್ಯಾಚರಣೆ ನಡೆಸಲಿದ್ದು, ಏಷ್ಯಾ, ಯುರೋಪ್, ಮಧ್ಯಪ್ರಾಚ್ಯ ಮತ್ತು ಉತ್ತರ ಅಮೆರಿಕಾ ಸೇರಿದಂತೆ 18 ದೇಶೀಯ ಸ್ಥಳಗಳು ಹಾಗೂ 25 ಅಂತರರಾಷ್ಟ್ರೀಯ ಸ್ಥಳಗಳಿಗೆ ಪ್ರಯಾಣಿಸುತ್ತದೆ.

    Live Tv
    [brid partner=56869869 player=32851 video=960834 autoplay=true]