Tag: ಪಿಎ

  • ನಮ್ ಬಾಸ್ ಇಲ್ಲೇ ಇದ್ದಾರೆ, ನಾನ್ ಇಲ್ಲಿಂದ ಹೋಗಲ್ಲ – ಸ್ವಾಮಿ ನಿಷ್ಠೆ ಮೆರೆದ ರೆಡ್ಡಿ ಪಿಎ ಅಲಿಖಾನ್

    ನಮ್ ಬಾಸ್ ಇಲ್ಲೇ ಇದ್ದಾರೆ, ನಾನ್ ಇಲ್ಲಿಂದ ಹೋಗಲ್ಲ – ಸ್ವಾಮಿ ನಿಷ್ಠೆ ಮೆರೆದ ರೆಡ್ಡಿ ಪಿಎ ಅಲಿಖಾನ್

    ಬೆಂಗಳೂರು: ಅಂಬಿಡೆಂಟ್ ಕಂಪೆನಿ ಜೊತೆ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಶದಲ್ಲಿರೋ ಮಾಜಿ ಗಣಿಧಣಿ ಜನಾರ್ದನ ರೆಡ್ಡಿ ಅವರ ಪಿಎ ಅಲಿಖಾನ್ ಸ್ವಾಮಿನಿಷ್ಠೆ ಮೆರೆದಿದ್ದಾರೆ.

    ರೆಡ್ಡಿ ವಿಚಾರಣೆಯಾಗುತ್ತಿದ್ದಂತೆಯೇ ಅಲಿಖಾನ್ ನನ್ನು ಮನೆಗೆ ತೆರಳುವಂತೆ ಪೊಲೀಸರು ಸೂಚಿಸಿದ್ದರು. ಈ ವೇಳೆ ಅಲಿಖಾನ್, ನಮ್ಮ ಬಾಸ್ ಇಲ್ಲೇ ಇದ್ದಾರೆ. ಹೀಗಾಗಿ ನಾನೂ ಇಲ್ಲೇ ಇರುತ್ತೀನಿ. ನಮ್ಮ ಬಾಸ್ ನ ಬಿಟ್ಟು ಹೋಗಲ್ಲ ಅಂತ ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ. ಈ ಮೂಲಕ ಕಷ್ಟದ ವೇಳೆಯೂ ಶಿಷ್ಯ ಆಲಿಖಾನ್ ಗಣಿಧಣಿಗೆ ನಿಷ್ಠೆ ಮೆರೆದಿದ್ದಾನೆ ಎಂದು ಹೇಳಲಾಗುತ್ತಿದೆ.

    ರೆಟ್ಟಿ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಿಖಾನ್ ನನ್ನು ಶನಿವಾರ ಪೊಲೀಸರು ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದರು. ಆದ್ರೆ ಸದ್ಯ ಅಲಿಖಾನ್ , ಜನಾರ್ದನ ರೆಡ್ಡಿ ಜೊತೆಯೇ ಸಿಸಿಬಿ ಕಚೇರಿಯಲ್ಲಿದ್ದಾನೆ.

    ಅಲಿಖಾನ್ ಅರೆಸ್ಟ್:
    ಅಂಬಿಡೆಂಟ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಜೊತೆ ಸಿಸಿಬಿ ಅಧಿಕಾರಿಗಳ ಬಳಿ ಆಗಮಿಸಿದ್ದ ಅಲಿಖಾನ್ ನನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಅಲಿಖಾನ್ ನನ್ನು ಶನಿವಾರ ಪೊಲೀಸರು ಬಂಧಿಸಿದ್ದರು. ಅಲಿಕಾನ್ ವಿರುದ್ಧ ನಿನ್ನೆ ಬೆಳಗ್ಗೆಯೇ ಅಕ್ರಮ ಶಸ್ತ್ರಾಸ್ತ್ರದ ಕಾಯ್ದೆಯಡಿ ಸಿಸಿಬಿ ಪೊಲೀಸರು ಪ್ರತ್ಯೇಕ ಕೇಸ್ ದಾಖಲಿಸಿದ್ದರು. ಹೀಗಾಗಿ ರೆಡ್ಡಿ ಜೊತೆ ಬಂದ ಅಲಿಖಾನ್ ನನ್ನು ಸಿಸಿಬಿ ಬಂಧಿಸಿತ್ತು. ಅಲಿಖಾನ್ ಹೊಂದಿರುವ ಶಸ್ತ್ರಾಸ್ರ ಪರವಾನಿಗೆ 2017ರಲ್ಲಿ ಅಂತ್ಯಗೊಂಡಿತ್ತು. ಪರವಾನಿಗೆಯನ್ನು ನವೀಕರಣ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅಲಿಖಾನ್ ಬಂಧನವಾಗಿದೆ. ಅಲಿಖಾನ್ ಮನೆಯ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ 5 ಜೀವಂತ ಗುಂಡುಗಳು ಪತ್ತೆಯಾಗಿದ್ದವು ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಆಂಬಿಡೆಂಟ್ ಡೀಲ್ ಪ್ರಕರಣದ ಸೂತ್ರಧಾರಿ ಆಗಿರುವ ಅಲಿಖಾನ್ ಜಾಮೀನು ಸಹ ಪಡೆದುಕೊಂಡಿದ್ದ. ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಜನಾರ್ದನ ರೆಡ್ಡಿ ಜೊತೆಯಲ್ಲಿ ಅಲಿಖಾನ್ ಸಿಸಿಬಿ ಕಚೇರಿಗೆ ಆಗಮಿಸುತ್ತಿದ್ದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಪಿಎಯಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ

    ಪಿಎಯಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ

    ಚಾಮರಾಜನಗರ: ಆಪ್ತ ಸಹಾಯಕನಿಂದ ಚಪ್ಪಲಿ ತೊಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ಕಾರಿನಲ್ಲಿದ್ದ ಚಪ್ಪಲಿಯನ್ನು ಆತ ನನ್ನ ಬಳಿ ತಂದಾಗ ಹಾಗೆ ತರಬಾರದು ಎಂದು ಹೇಳಿದೆ. ನನ್ನ ಚಪ್ಪಲಿ ಮುಟ್ಡಿದ್ದ ಆತನನ್ನು ಮುಟ್ಟಿ ನಮಸ್ಕರಿಸಿ ನಾನೇ ಚಪ್ಪಲಿ ಧರಿಸಿಕೊಂಡಿದ್ದೇನೆ. ನಾನು ಮಾನವೀಯತೆಗೆ ಬೆಲೆ ಕೊಡುವ ಮನುಷ್ಯ. ನಾನು ಯಾವುದೇ ತಪ್ಪು ಮಾಡಿಲ್ಲ. ಎಲ್ಲರನ್ನು ಸರಿಸಮನಾಗಿ ಕಾಣುವ ಗುಣ ನನ್ನದು. ಮಾಧ್ಯಮಗಳಲ್ಲಿ ಬಂದ ವರದಿಯಿಂದ ಮನ ನೊಂದಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

    ಆದರೆ ಪುಟ್ಟರಂಗಶೆಟ್ಟಿ ಚಪ್ಪಲಿ ಹಾಕಿಸಿಕೊಳ್ಳುವಾಗ ಪಿಎಗೆ ನಮಸ್ಕಾರ ಮಾಡಿಕೊಂಡಿಲ್ಲ. ಹೀಗಿದ್ದರೂ ಸಹ ನಾನು ನಮಸ್ಕಾರ ಮಾಡಿದ್ದೇನೆ ಎಂದು ಪುಟ್ಟರಂಗಶೆಟ್ಟಿ ಸಮರ್ಥನೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ವಿಡಿಯೋ: ಚಪ್ಪಲಿ ಹಾಕೋದ್ದಕ್ಕೂ ಪಿಎ ಇಟ್ಟುಕೊಂಡ ಸಚಿವ ಸಿ.ಪುಟ್ಟರಂಗಶೆಟ್ಟಿ!

    ಸೋಮವಾರ ಚಾಮರಾಜನಗರದಲ್ಲಿ ಆಯೋಜಿಸಲಾಗಿದ್ದ ರೈತ ದಸರಾ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸಿದ್ದ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ತಮ್ಮ ಚಪ್ಪಲಿಯನ್ನು ಬಿಟ್ಟು ಎತ್ತಿನಗಾಡಿ ಏರಿದ್ದರು. ಎತ್ತಿನಗಾಡಿಯನ್ನು ಚಾಲನೆ ಮಾಡಿದ ನಂತರ ಅವರು ಕೆಳೆಗಿಳಿದು ನಡೆದು ಬರುತ್ತಿದ್ದಂತೆ ಅವರ ಆಪ್ತ ಸಹಾಯಕ ಪುಟ್ಟರಂಗಶೆಟ್ಟಿಗೆ ಚಪ್ಪಲಿ ತಂದು ತೊಡಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಚಿವ ಸಿ. ಪುಟ್ಟರಂಗಶೆಟ್ಟಿ ಸೌಜನ್ಯಕ್ಕಾದರೂ ಚಪ್ಪಲಿ ತೊಡಿಸುವ ತಮ್ಮ ಆಪ್ತ ಸಹಾಯಕನಿಗೆ ಬೇಡ ಎನ್ನದೇ ಸರ್ವಾಧಿಕಾರಿಯಂತೆ ಚಪ್ಪಲಿ ತೊಡಿಸಿಕೊಂಡು ಏನೂ ಆಗಿಲ್ಲವಂತೆ ನಡೆದು ಮುಂದೆ ಸಾಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=lPjIVJAvrF8

  • ನಾನು ಪಕ್ಕ ಲೋಕಲ್, ಬಿಜೆಪಿಯಲ್ಲಿ ನಾಯಕರು ಇಲ್ವಾ: ಸಿಎಂ ಪ್ರಶ್ನೆ

    ನಾನು ಪಕ್ಕ ಲೋಕಲ್, ಬಿಜೆಪಿಯಲ್ಲಿ ನಾಯಕರು ಇಲ್ವಾ: ಸಿಎಂ ಪ್ರಶ್ನೆ

    ಬೆಂಗಳೂರು: ನಾನು ಪಕ್ಕ ಲೋಕಲ್ ಕರ್ನಾಟಕ ಬಿಜೆಪಿಯಲ್ಲಿ ನಾಯಕರು ಇಲ್ವಾ ಎಂದು ಸಿಎಂ ಸಿದ್ದರಾಮಯ್ಯನವರು ರಾಜ್ಯ ಬಿಜೆಪಿಯನ್ನು ಪ್ರಶ್ನೆ ಮಾಡಿದ್ದಾರೆ.

    ಪ್ರಚಾರಕ್ಕೆಂದು ಮೋದಿ, ಯೋಗಿ ಅವರನ್ನು ಆಮದು ಮಾಡುತ್ತಿದೆ. ಸಿಎಂ ಅಭ್ಯರ್ಥಿ ಬಿಎಸ್ ಯಡಿಯೂರಪ್ಪ ಅವರನ್ನೇ ಬಿಜೆಪಿ ಡಮ್ಮಿ ಮಾಡಿದೆ ಎಂದು ಟ್ವೀಟ್ ಮಾಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಬರುತ್ತಾರೆ ಹೋಗುತ್ತಾರೆ. ಆದರೆ ಇಲ್ಲಿ ಸಿದ್ದರಾಮಯ್ಯ ವರ್ಸಸ್ ಬಿಎಸ್‍ವೈ ನಡುವೆ ಫೈಟ್ ಇದ್ದು ಯಾರು ಜಯಗಳಿಸುತ್ತಾರೆ ಎನ್ನುವುದು ನಿಮಗೆ ಗೊತ್ತಿದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ.

    2008 ರಿಂದ 2012 ರ ವರೆಗೆ ಗಣಿ ಲೂಟಿ ಮಾಡಿದ ರೆಡ್ಡಿ ಬ್ರದರ್ಸ್ ಬಿಎಸ್‍ವೈರನ್ನ ಕೈಗೊಂಬೆ ಮಾಡಿಕೊಂಡಿದ್ದರು. ಬಳ್ಳಾರಿ ರಿಪಬ್ಲಿಕ್ ಮಾಡಿದ್ದರು. ಶಾಸಕರನ್ನ ಆಪರೇಷನ್ ಕಮಲದ ಮೂಲಕ ಖರೀದಿ ಮಾಡಿ ರೆಸಾರ್ಟ್‍ನಲ್ಲಿಟ್ಟಿದ್ದರು. ಇದರಿಂದಾಗಿ ಕರ್ನಾಟಕಕ್ಕೆ ಭ್ರಷ್ಟ ರಾಜ್ಯ ಎಂಬ ಹಣೆಪಟ್ಟಿ ಬಂದಿತ್ತು. ಈಗ ಮತ್ತೆ ಕರ್ನಾಟಕದಲ್ಲಿ ಲೂಟಿ ಮಾಡಲು ಬರುತ್ತಿದ್ದಾರೆಂದು ಆರೋಪಿಸಿ ಸಿಎಂ ಟ್ವೀಟ್ ಮಾಡಿದ್ದಾರೆ.

  • ಉಪೇಂದ್ರ ರಿಯಲ್ ಹೀರೋ ಅಲ್ಲ, ರೀಲ್ ಹೀರೋ ಅಂದಿದ್ದಕ್ಕೆ ಉಪಾಧ್ಯಕ್ಷೆಗೆ ಬಿತ್ತಂತೆ ಒದೆ!

    ಉಪೇಂದ್ರ ರಿಯಲ್ ಹೀರೋ ಅಲ್ಲ, ರೀಲ್ ಹೀರೋ ಅಂದಿದ್ದಕ್ಕೆ ಉಪಾಧ್ಯಕ್ಷೆಗೆ ಬಿತ್ತಂತೆ ಒದೆ!

    ಬೆಂಗಳೂರು: ರಿಯಲ್ ಸ್ಟಾರ್ ನಟ ಉಪೇಂದ್ರ ಅವರ ಆಪ್ತ ಕಾರ್ಯದರ್ಶಿಯೊಬ್ಬರು ಕೆಪಿಜೆಪಿ ಮಹಿಳಾ ಉಪಾಧ್ಯಕ್ಷೆ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೊಂದು ಕೇಳಿಬಂದಿದೆ.

    ಉಪೇಂದ್ರ ಅವರ ಪಿಎ ಹಿತೇಶ್ ಬೆಂಗಳೂರಿನ ಸುಂಕದಕಟ್ಟೆಯ ಮುದ್ದಿನಪಾಳ್ಯದಲ್ಲಿ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕೆಪಿಜೆಪಿ ಪಕ್ಷದ ರಾಜ್ಯ ಮಹಿಳಾ ಉಪಾಧ್ಯಕ್ಷೆ ಲಲಿತಾ ಮೇರಿ ಆರೋಪಿಸಿದ್ದಾರೆ.

    ಶನಿವಾರ ರಾತ್ರಿ ಕೆಪಿಜೆಪಿ ಪಕ್ಷದ ಮಹಿಳಾ ವಾಟ್ಸಾಪ್ ಗ್ರೂಪ್‍ಗೆ ಉಪೇಂದ್ರ ರಿಯಲ್ ಹೀರೋ ಅಲ್ಲ, ರೀಲ್ ಹೀರೋ ಯಾರು ನಂಬಬೇಡಿ ಎಂದು ಲಲಿತಾ ಮೇರಿ ಮಸೇಜ್ ಮಾಡಿದ್ದರು. ಲಲಿತಾ ಮೇರಿ ಅವರ ಈ ಮಸೇಜ್‍ಗೆ ಹಿತೇಶ್ ಪ್ರತಿಕ್ರಿಯಿಸಿ, ಯಾರೇ ನೀನು, ನಾಯಿ ಅಂತ ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಬಳಿಕ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಸುಂಕದಕಟ್ಟೆಯ ಕೆಇಎಲ್ ಕಾಲೇಜ್ ಬಳಿ ಲಲಿತಾ ಮೇರಿ ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಬಂದ ಹಿತೇಶ್ ಮತ್ತು ಆತನ ಸ್ನೇಹಿತ ಹಲ್ಲೆ ಮಾಡಿದ್ದಾರೆ. ಅಲ್ಲದೇ ನಮ್ ಬಾಸ್ ಬಗ್ಗೆ ಕೆಟ್ಟದಾಗಿ ಮಾತಾನಾಡುತ್ತೀಯಾ ಎಂದು ಅವಾಚ್ಯ ಪದಗಳಿಂದ ನಿಂದಿಸಿ ಪರಾರಿಯಾಗಿದ್ದಾರೆ ಎಂದು ಮೇರಿ ಹೇಳಿದ್ದಾರೆ.

    ಹಿತೇಶ್ ನನ್ನ ಮೇಲೆ ಹಲ್ಲೆ ಮಾಡಿದ್ದರ ಹಿಂದೆ ನಟ ಉಪೇಂದ್ರನ ಕೈವಾಡ ಇದೆ ಎಂದು ಮೇರಿ ಆರೋಪ ಮಾಡುತ್ತಿದ್ದಾರೆ. ಸದ್ಯ ಮೇರಿ ಸುಂಕದಕಟ್ಟೆಯ ಲಕ್ಷ್ಮೀ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಾಗಿದ್ದು, ಈ ಬಗ್ಗೆ ಬ್ಯಾಡರಹಳ್ಳಿ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ.

    https://www.youtube.com/watch?v=h1pj6VMxsXE

     

  • ಸಚಿವರ ಹೆಸ್ರಲ್ಲಿ ಫೇಸ್‍ಬುಕ್‍ನಲ್ಲಿ ಪೋಸ್ಟ್- ಅನಂತ್ ಕುಮಾರ್ ಹೆಗ್ಡೆ ಪಿಎಯಿಂದ ದೂರು

    ಸಚಿವರ ಹೆಸ್ರಲ್ಲಿ ಫೇಸ್‍ಬುಕ್‍ನಲ್ಲಿ ಪೋಸ್ಟ್- ಅನಂತ್ ಕುಮಾರ್ ಹೆಗ್ಡೆ ಪಿಎಯಿಂದ ದೂರು

    ಕಾರವಾರ: ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ ವ್ಯಕ್ತಿಗಳ ವಿರುದ್ಧ ಸಚಿವರ ಆಪ್ತ ಕಾರ್ಯದರ್ಶಿ ದೂರು ದಾಖಲಿಸಿದ್ದಾರೆ.

    ಸಚಿವರ ಫೋಟೋದೊಂದಿಗೆ ಕೆಂಪೇ ಗೌಡ ಅವರ ವಿರುದ್ಧ ವಿವಾದಿತ ಹೇಳಿಕೆಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರ್ಕೆಟ್ ಠಾಣೆಯಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ದೂರು ದಾಖಲಿಸಿದ್ದಾರೆ.

    ಚುನಾವಣೆಯ ಸಂದರ್ಭದಲ್ಲಿ ಈ ರೀತಿಯ ಆಕ್ಷೇಪಾರ್ಹ ಸಂದೇಶಗಳನ್ನು ಹರಿಯಬಿಟ್ಟಿರುವುದು ಸಮಾಜದಲ್ಲಿ ಗೊಂದಲ ನಿರ್ಮಿಸಿ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡ ಭಾವನೆಯನ್ನು ಕೆರಳಿಸಿ, ಜಾತಿ ಗಲಭೆಗಳನ್ನು ಸೃಷ್ಟಿಸಲು ಪಿತೂರಿ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲದೇ ಅನಂತ್ ಕುಮಾರ್ ಹೆಗ್ಡೆಯವರ ಹೆಸರನ್ನು ತೇಜೋವಧೆ ಮಾಡುವ ಉದ್ದೇಶದಿಂದಲೇ ಸಂದೆಶಗಳನ್ನು ಹಾಕಿರುತ್ತಾರೆ. ಈ ಹಿನ್ನೆಲೆಯಲ್ಲಿ ಫೇಸ್ ಬುಕ್ ಪೋಸ್ಟ್ ಹಾಕಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಯುಆರ್ ಎಲ್ ಲಿಂಕ್ ಗಳನ್ನು ನೀಡಿ ಮನವಿ ಮಾಡಿದ್ದಾರೆ.

    ಫೇಸ್ ಬುಕ್ ಪೋಸ್ಟ್ ನಲ್ಲೇನಿದೆ?
    `ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಕೆಂಪೇಗೌಡರ ಪ್ರತಿಮೆ ಉರುಳಿಸ್ತೇವೆ. ಅಲ್ಲದೇ ಕೆಂಪೇಗೌಡರ ಪ್ರತಿಮೆ ಉರುಳಿಸಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುತ್ತೇವೆ’ ಅಂತ ಸಚಿವರ ಫೋಟೋದೊಂದಿಗೆ ಈ ಹೇಳಿಕೆಯನ್ನು ಬರೆಯಲಾಗಿದೆ.

    ಪ್ರಜಾಕೀಯ ಸಪೋರ್ಟರ್ಸ್ ಹೆಸರಿನ ಫೇಸ್‍ಬುಕ್ ಖಾತೆಯಲ್ಲಿ ಈ ಪೋಸ್ಟ್ ಹಾಕಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಸಚಿವ ಅನಂತ್ ಕುಮಾರ್ ಹೆಗಡೆ ಈ ಹೇಳಿಕೆ ನೀಡಿದ್ದಾರೆ ಎಂದು ಎಂದು ಜನ ಭಾವಿಸಿ ಅವರ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ.

  • ಶಾಸಕರ ಪಿಎ ಅಂತ ಹೇಳಿ ದರ್ಬಾರ್ ನಡೆಸಿದವನಿಗೆ ಗ್ರಾಮಸ್ಥರಿಂದ ಹಲ್ಲೆಗೆ ಯತ್ನ!

    ಶಾಸಕರ ಪಿಎ ಅಂತ ಹೇಳಿ ದರ್ಬಾರ್ ನಡೆಸಿದವನಿಗೆ ಗ್ರಾಮಸ್ಥರಿಂದ ಹಲ್ಲೆಗೆ ಯತ್ನ!

    ಚಿಕ್ಕಬಳ್ಳಾಪುರ: ಶಾಸಕರ ಪಿಎ ಅಂತ ಹೇಳಿ ದರ್ಬಾರ್ ನಡೆಸಿದ ಸಾಯಿಕೃಷ್ಣ ಚಾರಿಟಬಲ್ ಟ್ರಸ್ಟ್ ನ ಸಿಬ್ಬಂದಿ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಲು ಮುಂದಾದ ಘಟನೆ ಚಿಕ್ಕಬಳ್ಳಾಪುರ ತಾಲೂಕು ಆವಲಗುರ್ಕಿ ಗ್ರಾಮದಲ್ಲಿ ನಡೆದಿದೆ.

    ಶಾಸಕ ಡಾ.ಕೆ.ಸುಧಾಕರ್ ಒಡೆತನದ ಶ್ರೀ ಸಾಯಿಕೃಷ್ಣ ಚಾರಿಟೇಬಲ್ ಟ್ರಸ್ಟ್ ನ ಸಿಬ್ಬಂದಿ ಅವಿನಾಶ್ ನನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಮರಕ್ಕೆ ಕಟ್ಟಿ ಹಾಕಲು ಯತ್ನಿಸಿದರು.

    ಅವಲಗುರ್ಕಿ ಗ್ರಾಮದಲ್ಲಿ ಜಿಲ್ಲಾಡಳಿತ ವತಿಯಿಂದ ಕೊಳವೆಬಾವಿ ಕೊರೆಸಲಾಗುತ್ತಿದ್ದು ನೀರು ಸಿಗದೆ ವೈಫಲ್ಯವಾಗಿದೆ. ಹೀಗಾಗಿ ಮತ್ತೊಂದು ಕೊಳವೆಬಾವಿ ಕೊರೆಯುವಂತೆ ಗ್ರಾಮಸ್ಥರು ಪಟ್ಟು ಹಿಡಿದು ಬೋರ್ ವೆಲ್ ಲಾರಿ ಅಡ್ಡಗಟ್ಟಿ ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಈ ವೇಳೆ ಸ್ಥಳಕ್ಕೆ ಬಂದ ಅವಿನಾಶ್ ಗ್ರಾಮಸ್ಥರಿಗೆ ಮಾಹಿತಿ ನೀಡದೆ ಸ್ಥಳದಿಂದ ಬೋರ್ ವೆಲ್ ಲಾರಿಯನ್ನ ಕಳುಹಿಸಿದ್ದಾನೆ. ಇದ್ರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಬೋರ್ ವೆಲ್ ಲಾರಿ ಅಡ್ಡಗಟ್ಟಿ, ಅವಿನಾಶ್ ನನ್ನ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.