Tag: ಪಿಎಸ್‍ಐ ಹಗರಣ

  • PSI ಹಗರಣದಲ್ಲಿ ಸಚಿವರ ಹೆಸರು ಥಳಕು – 80 ಲಕ್ಷ ಲಂಚ ಪಡೆದಿದ್ರಾ ಅಶ್ವತ್ಥ್ ನಾರಾಯಣ್ ಸಹೋದರ?

    PSI ಹಗರಣದಲ್ಲಿ ಸಚಿವರ ಹೆಸರು ಥಳಕು – 80 ಲಕ್ಷ ಲಂಚ ಪಡೆದಿದ್ರಾ ಅಶ್ವತ್ಥ್ ನಾರಾಯಣ್ ಸಹೋದರ?

    ಬೆಂಗಳೂರು: ಪಿಎಸ್‍ಐ (PSI) ಪರೀಕ್ಷಾ ಅಕ್ರಮದ ತನಿಖೆ ಸರ್ಕಾರದ ಬುಡಕ್ಕೆ ಬಂದಿದೆ. ರಾಜ್ಯಕ್ಕೆ ಅಮಿತ್ ಶಾ (AmitShah) ಆಗಮಿಸುತ್ತಿರೋ ಹೊತ್ತಲ್ಲೇ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ (Ashwath Narayan) ವಿರುದ್ಧ ಆರೋಪ ಕೇಳಿಬಂದಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.

    ಅಡ್ಡದಾರಿ ಮೂಲಕ ಪಿಎಸ್‍ಐ ಪರೀಕ್ಷೆಯಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದ ಮಾಗಡಿ ಮೂಲದ ದರ್ಶನ್‍ ಗೌಡರನ್ನು ಸಿಐಡಿ ವಿಚಾರಣೆಗೆ ಒಳಪಡಿಸಿದಾಗ, ಸಚಿವ ಅಶ್ವತ್ಥ್ ನಾರಾಯಣ ಸಹೋದರ ಸತೀಶ್‍ಗೆ 80 ಲಕ್ಷ ರೂಪಾಯಿ ಲಂಚ ಕೊಟ್ಟ ಬಗ್ಗೆ ಬಾಯ್ಬಿಟ್ಟಿದ್ದರು ಎನ್ನಲಾಗಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸಿಐಡಿ‌ (CID) ಪೊಲೀಸರು, ಸಚಿವ ಅಶ್ವತ್ಥ್ ನಾರಾಯಣ ಸಹೋದರನನ್ನು ವಿಚಾರಣೆಗೆ ಒಳಪಡಿಸಲು ಪ್ರಯತ್ನಿಸಿದಾಗ, ಸಚಿವರು ಅಡ್ಡಿಯಾಗಿ ವಿಚಾರಣೆ ನಡೆಸದಂತೆ ತಡೆದಿದ್ದಾರೆ. ಹೀಗಾಗಿ ಬೇರೆ ದಾರಿ ಇಲ್ಲದೇ, ಸಿಐಡಿ ಅಧಿಕಾರಿಗಳು ರಾತ್ರೋರಾತ್ರಿ ಸಚಿವರ ಅಣ್ಣನನ್ನು ವಿಚಾರಣೆ ನಡೆಸದೇ ಬಿಟ್ಟು ಕಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಅಂದ ಹಾಗೆ ದರ್ಶನ್ ಗೌಡ ಹೆಸರನ್ನು ಎಫ್‍ಐಆರ್‍ನಲ್ಲಿ ಉಲ್ಲೇಖವಾಗದಂತೆ ಅಶ್ವತ್ಥ್ ನಾರಾಯಣ್ ನೋಡಿಕೊಂಡಿದ್ದಾರೆ ಅಂತ ಕಾಂಗ್ರೆಸ್ (Congress) ಮುಖಂಡರು ಆರೋಪಿಸಿದ್ದಾರೆ. ಮಾಗಡಿಯ ಮರೂರಿನ ದರ್ಶನ್ ಗೌಡ, ಮೊದಲ ಪೇಪರ್ ನಲ್ಲಿ 19 ಅಂಕ, ಎರಡನೇ ಪೇಪರ್ ನಲ್ಲಿ 141 ಅಂಕ ಪಡೆದಿದ್ದ. ಸಿಐಡಿ ಪೊಲೀಸರಿಗೆ ಅನುಮಾನ ಬಂದು ಓಎಂಆರ್ (OMR) ಶೀಟ್‍ನ್ನು ಎಫ್‍ಎಸ್‍ಎಲ್ (FSL) ಪರೀಕ್ಷೆಗೆ ಕಳಿಸಿದಾಗ, ಅದರಲ್ಲಿ ತಿದ್ದುಪಡಿ ಮಾಡಿದ್ದು ಮಾಡಿದ್ದು ಬಯಲಾಗಿತ್ತು. ಹೀಗಾಗಿ ಆತನನ್ನು ವಿಚಾರಣೆಗೆ ಒಳಪಡಿಸಿದಾಗ ದರ್ಶನ್ ಗೌಡ, ಸಚಿವರ ಸಹೋದರನ ಹೆಸರನ್ನು ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

    ಬೆಳಗ್ಗೆ ಸಚಿವ ಅಶ್ವತ್ಥ್ ನಾರಾಯಣ ಹೆಸರೇಳದೆ ಆರೋಪ ಮಾಡಿದ ಡಿಕೆಶಿ (DK Shivakumar), ಸಂಜೆ ಹೊತ್ತಿಗೆ ಹೆಸರು ಬಹಿರಂಗಪಡಿಸಿ ತಿರುಗೇಟು ಕೊಟ್ಟರು. ಇದನ್ನೂ ಓದಿ: ಸವಾಲಿಗೆ ಜವಾಬ್ ವಾರ್‌ – ಡಿಕೆಶಿ ಜೊತೆ ತೊಡೆ ತಟ್ಟಿದವರೆಲ್ಲ ಇಕ್ಕಟ್ಟಿನಲ್ಲಿ ಸಿಲುಕುತ್ತಿದ್ದಾರಾ?

  • ಪಿಎಸ್‍ಐ ಹಗರಣ: ಓರ್ವ ಪೊಲೀಸ್ ಪೇದೆ ಸೇರಿ ಬಂಧಿತರ ಸಂಖ್ಯೆ 39ಕ್ಕೆ ಏರಿಕೆ

    ಪಿಎಸ್‍ಐ ಹಗರಣ: ಓರ್ವ ಪೊಲೀಸ್ ಪೇದೆ ಸೇರಿ ಬಂಧಿತರ ಸಂಖ್ಯೆ 39ಕ್ಕೆ ಏರಿಕೆ

    ಬೆಂಗಳೂರು: ಪಿಎಸ್‍ಐ ಪರೀಕ್ಷಾ ಅಕ್ರಮದ ತನಿಖೆ ತೀವ್ರಗೊಳಿಸಿರುವ ಸಿಐಡಿ ನಿನ್ನೆ 12, ಇಂದು ನಾಲ್ವರನ್ನು ಬಂಧಿಸಿದೆ. ಇದ್ರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 39ಕ್ಕೇರಿದೆ.

    ಬಂಧಿತರದಲ್ಲಿ ಓರ್ವ ಪೊಲೀಸ್ ಪೇದೆ ಕೂಡ ಇದ್ದಾನೆ. ಇಂದು ಹಗರಣದ ಮೊತ್ತೋರ್ವ ಕಿಂಗ್‍ಪಿನ್ ಎನ್ನಲಾದ ನೀರಾವರಿ ಇಲಾಖೆ ಕಿರಿಯ ಎಂಜಿನಿಯರ್ ಮಂಜುನಾಥ್ ಮೆಳಕುಂದಿ ತಾವಾಗಿಯೇ ಬಂದು ಸಿಐಡಿ ಪೊಲೀಸರಿಗೆ ಶರಣಾಗಿದ್ದಾರೆ. ಕೋರ್ಟ್ ಅರೆಸ್ಟ್ ವಾರೆಂಟ್ ಪ್ರಕಾರ ಮಂಜುನಾಥ್ ಮೆಳಕುಂದಿ ನಾಳೆಯೊಳಗೆ ಶರಣಾಗಬೇಕಿತ್ತು. ಇಲ್ಲದಿದ್ರೆ ಆಸ್ತಿ ಮುಟ್ಟುಗೋಲು ಆಗ್ತಿತ್ತು. ಇದೇ ಭಯಕ್ಕೆ ಮಂಜುನಾಥ್ ಸಿಐಡಿಗೆ ಶರಣಾಗಿದ್ದಾರೆ. ಆದ್ರೆ, ಜ್ಞಾನ ಜ್ಯೋತಿ ಶಾಲೆ ಮುಖ್ಯ ಶಿಕ್ಷಕ ಕಾಶಿನಾಥ್ ಇನ್ನೂ ಪತ್ತೆಯಾಗಿಲ್ಲ. ಕಾಶಿನಾಥ್‍ಗೆ ಕೋರ್ಟ್ ವಿಧಿಸಿದ್ದ ಡೆಡ್‍ಲೈನ್ ಕೂಡ ನಾಳೆಯೇ ಮುಗಿಯಲಿದೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ: ಸಿಐಡಿಗೆ ಶರಣಾದ ಆರೋಪಿ ಮಂಜುನಾಥ್

    ಕಲಬುರಗಿಯ ಜ್ಞಾನಜ್ಯೋತಿ ಶಾಲೆಯಲ್ಲಿ ಅಕ್ರಮ ನಡೆದಿರುವಂತೆ ಬೆಂಗಳೂರಿನ ಕೇಂಬ್ರಿಡ್ಜ್ ಕಾಲೇಜ್‍ನಲ್ಲಿಯೂ ದೊಡ್ಡ ಮಟ್ಟದ ಪರೀಕ್ಷಾ ಅಕ್ರಮ ನಡೆದಿರೋದು ಬೆಳಕಿಗೆ ಬಂದಿದೆ. ಕೇಂಬ್ರಿಡ್ಜ್ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಏಳಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಸಿಐಡಿ ಬಂಧಿಸಿದೆ. ಇಲ್ಲಿಯೂ ಓಎಂಆರ್ ಶೀಟ್ ತಿದ್ದಿರೋದು ದೃಢಪಟ್ಟಿದೆ. ಬ್ಲೂಟೂತ್ ಕೂಡ ಆರೋಪಿಗಳು ಬಳಕೆ ಮಾಡಿರೋದು ಬೆಳಕಿಗೆ ಬಂದಿದೆ. ಈ ಮಧ್ಯೆ, ಆರ್‍ಡಿ ಪಾಟೀಲ್ ಮತ್ತು ಮಂಜುನಾಥ್ ಮೆಳಕುಂದಿ ಟೀಂಗಳಿಂದ ದೊಡ್ಡ ಮೊತ್ತದ ಹಣ ಸ್ವೀಕರಿಸಿರೋದನ್ನು ದಿವ್ಯಾ ಹಾಗರಗಿ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ – ಬೆಂಗಳೂರಿನಲ್ಲಿ 12 ಅಭ್ಯರ್ಥಿಗಳು ಅರೆಸ್ಟ್

    ಕಲಬುರಗಿಯಲ್ಲಿ ಪರೀಕ್ಷೆಯ ಅಕ್ರಮ ಬಯಲಾಗಿತ್ತು. ಈ ಪ್ರಕರಣದ ಆರೋಪಿ ಆಗಿದ್ದ ಮಂಜುನಾಥ್ ಮೇಳಕುಂದಿ ಇಂದು ತಾವಾಗಿಯೇ ಬಂದು ಸಿಐಡಿ ಪೊಲೀಸರಿಗೆ ಶರಣಾಗಿದ್ದಾರೆ. ನೀರಾವರಿ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆ ಬಳಿಕ ಎಫ್‍ಐಆರ್ ದಾಖಲಾದ ಬಳಿಕ ನಾಪತ್ತೆ ಆಗಿದ್ದರು. ಈ ಹಿನ್ನೆಲೆಯಲ್ಲಿ 6 ದಿನಗೊಳಗೆ ಶರಣಾಗಬೇಕು, ಇಲ್ಲದಿದ್ದರೇ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು. ಇದೀಗ ಆಟೋದಲ್ಲಿ ಒಬ್ಬನೇ ಸಿಐಡಿ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.

    ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಮಂಗಳೂರಿಗೆ ಹೋಗಿದ್ದೆ. ಇಂದು ಮುಂಜಾನೆ ಕಲಬುರಗಿಗೆ ಬಂದಿದ್ದೇನೆ. ನಂತರ ನಾನೇ ಸಿಐಡಿ ಮಂದೆ ಶರಣಾಗಲು ಬಂದಿದ್ದೇನೆ ಎಂದು ತಿಳಿಸಿದರು.

  • ಹೈಕಮಾಂಡ್‌ ಗರಂ – ಆರಗ ಖಾತೆ ಬದಲಾವಣೆ?

    ಹೈಕಮಾಂಡ್‌ ಗರಂ – ಆರಗ ಖಾತೆ ಬದಲಾವಣೆ?

    ಬೆಂಗಳೂರು: ಪಿಎಸ್‍ಐ ಪರೀಕ್ಷಾ ಅಕ್ರಮದ ವಿಚಾರದಲ್ಲಿ ಬೊಮ್ಮಾಯಿ ಸರ್ಕಾರದ ಧೋರಣೆಗೆ ಅದರಲ್ಲೂ ಗೃಹ ಸಚಿವ ಆರಗ ಜ್ಞಾನೇಂದ್ರ ತೋರಿದ ನಡವಳಿಕೆಗಳಿಗೆ ಬಿಜೆಪಿ ಹೈಕಮಾಂಡ್ ಗರಂ ಆಗಿದೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಮರು ಪರೀಕ್ಷೆ ನಡೆಸಲು ಸಿಐಡಿ ವರದಿ ಕೊಟ್ಟರೂ ಆದೇಶ ಹೊರಡಿಸಲು ಮೀನಾಮೇಷ ಎಣಿಸಿದ ಸರ್ಕಾರವನ್ನು ಅಮಿತ್ ಶಾ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಪರಿಣಾಮ ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಗೃಹ ಸಚಿವರು, ಮರು ಪರೀಕ್ಷೆ ಆದೇಶವನ್ನು ತರಾತುರಿಯಲ್ಲಿ ಹೊರಡಿಸಿದ್ದಾರೆ. ಜೊತೆಗೆ ದಿವ್ಯಾ ಹಾಗರಗಿ ಬಂಧನದೊಂದಿಗೆ ರಾಜ್ಯ ಸರ್ಕಾರವೂ ನಿಟ್ಟುಸಿರುಬಿಟ್ಟಿದೆ. ಇದನ್ನೂ ಓದಿ: ಎಲ್ಲಾ ಮುಸ್ಲಿಮರು ಭಯೋತ್ಪಾದಕರಲ್ಲ, ದೇಶ ದ್ರೋಹಿಗಳನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ: ರೇಣುಕಾಚಾರ್ಯ

    Hubballi Riot

    ಈಗೇನಾದರೂ ಮರು ಪರೀಕ್ಷೆ ಆದೇಶ ಹೊರಡಿಸದಿದ್ದರೆ ದಿವ್ಯಾ ಹಾಗರಗಿ ಬಂಧನ ಆಗದಿದ್ದರೆ ಅಮಿತ್ ಶಾ ರಾಜ್ಯ ಪ್ರವಾಸದ ವೇಳೆ, ಅವರಿಗೆ ಮುಜುಗರದ ಸನ್ನಿವೇಶ ಎದುರಾಗುತ್ತಿತ್ತು.

    ಗೃಹ ಇಲಾಖೆ ನಿಭಾಯಿಸಲಾಗದೇ ಒದ್ದಾಡುತ್ತಿರುವ ಆರಗ ಜ್ಞಾನೇಂದ್ರರನ್ನು ಬದಲಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗ್ತಿದೆ. ಮೇ ಮೊದಲ ವಾರದ ಬಳಿಕ ಆರಗ ಜ್ಞಾನೇಂದ್ರರಿಂದ ಗೃಹ ಖಾತೆ ಹಿಂಪಡೆದು, ಅವರಿಗೆ ಬೇರೆ ಖಾತೆಯ ಹೊಣೆ ನೀಡುವ ಸಂಭವ ಇದೆ. ಆರಗ ಜ್ಞಾನೇಂದ್ರ ಕಾರ್ಯವೈಖರಿ ಬಗ್ಗೆ ಸ್ವತಃ ಬಿಜೆಪಿ ಪಕ್ಷದಲ್ಲೇ ಭಾರೀ ಅಸಮಾಧಾನವಿದೆ. ಇದನ್ನೂ ಓದಿ: ಕೋವಿಡ್ ಉಲ್ಬಣ – ಐಐಟಿಯಲ್ಲೂ ಹೆಚ್ಚಿದ ಸೋಂಕು

    ಕಾರಣಗಳೇನು?
    – ಮೈಸೂರು ರೇಪ್ ಪ್ರಕರಣದಲ್ಲಿ ಲೂಸ್ ಟಾಕ್
    – ಉಡುಪಿಯ ಹಿಜಬ್‌ ವಿವಾದ ವೇಳೆ ಸರ್ಕಾರದ ನಿಲುವು ಸಮರ್ಥಿಸುವಲ್ಲಿ ವಿಫಲ
    – ಶಿವಮೊಗ್ಗ, ಹುಬ್ಬಳ್ಳಿ ಗಲಭೆ ವೇಳೆ ವ್ಯಕ್ತವಾಗದ ಖಡಕ್ ನಿಲುವು
    – ಜೆ.ಜೆ.ನಗರದ ಚಂದ್ರು ಕೊಲೆ ಪ್ರಕರಣದಲ್ಲಿ ಉಲ್ಟಾ-ಪಲ್ಟಾ ಹೇಳಿಕೆ
    – ಪಿಎಸ್‍ಐ ಪರೀಕ್ಷಾ ಅಕ್ರಮ. ಶುರುವಿನಲ್ಲೇ ಆರೋಪ ನಿರ್ಲಕ್ಷ್ಯ
    – ಪಿಎಸ್‍ಐ ಹಗರಣ – ಖಡಕ್ ನಿರ್ಧಾರಕ್ಕೆ ಬರಲು ವಿಳಂಬ
    – ಪೊಲೀಸ್ ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಡಲು ವಿಫಲ

  • ಪ್ರತಿ ಹಗರಣಗಳ ಬುಡ ಅಗೆದಾಗ, ಅದರ ಬೇರುಗಳು ಕೆಪಿಸಿಸಿ ಕಚೇರಿಯನ್ನು ತಲುಪುತ್ತಿದೆ: ಬಿಜೆಪಿ

    ಪ್ರತಿ ಹಗರಣಗಳ ಬುಡ ಅಗೆದಾಗ, ಅದರ ಬೇರುಗಳು ಕೆಪಿಸಿಸಿ ಕಚೇರಿಯನ್ನು ತಲುಪುತ್ತಿದೆ: ಬಿಜೆಪಿ

    ಬೆಂಗಳೂರು: ಪ್ರತಿ ಹಗರಣಗಳ ಬುಡ ಅಗೆದಾಗ, ಅದರ ಬೇರುಗಳು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯನ್ನು ತಲುಪುತ್ತಿದೆ ಎಂದು ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ ಕುರಿತಾಗಿ ಬಿಜೆಪಿ ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

    DK SHIVAKUMAR

    ಟ್ವೀಟ್‍ನಲ್ಲಿ ಏನಿದೆ?
    ಪಿಎಸ್‍ಐ ಹಗರಣದಲ್ಲಿ ಕಾಂಗ್ರೆಸ್ ನಾಯಕರ ಅತ್ಯಾಪ್ತರ ಬಂಧನವಾಗಿದೆ. ಕಲಬುರ್ಗಿಯ ಕಾಂಗ್ರೆಸ್ ಮುಖಂಡನಿಗೆ ಸೇರಿದ ಪಾಲಿಟೆಕ್ನಿಕ್ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಪತ್ರಿಕೆ ಸೋರಿಕೆಯಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ದಂಧೆಯ ಹಣ ಸದಾಶಿವ ನಗರದ ಭವ್ಯ ಬಂಗಲೆಗೆ ರವಾನೆಯಾಗುತ್ತಿತ್ತೇ? ಭ್ರಷ್ಟಾಧ್ಯಕ್ಷರೇ ಏನು ಹೇಳುವಿರಿ ಇದಕ್ಕೆ?. ಇದನ್ನೂ ಓದಿ: ಪಕ್ಷದ ಎಲ್ಲಾ ಸ್ಥಾನಗಳಿಂದ ಸುನೀಲ್ ಜಾಖರ್, ಥಾಮಸ್‍ರನ್ನು ತೆಗೆದು ಹಾಕಿದ ಕಾಂಗ್ರೆಸ್

    ಪಿಡಬ್ಲ್ಯೂಡಿ ಪತ್ರಿಕೆ ಲೀಕ್ ಹಿಂದೆಯೂ ಕಾಂಗ್ರೆಸ್ ಹಸ್ತವಿದೆ. ಭ್ರಷ್ಟನೊಬ್ಬ ಪಕ್ಷದ ಸಾರಥಿಯಾದರೆ ಇನ್ನೇನು ನಿರೀಕ್ಷಿಸಲು ಸಾಧ್ಯ?. ಮಾಧ್ಯಮದವರ ಮುಂದೆ ಪ್ರಕರಣದ ತನಿಖಾಧಿಕಾರಿಯಂತೆ ವರ್ತಿಸುವ ಕಾಂಗ್ರೆಸ್ ನಾಯಕರು, ತನಿಖೆಗೆ ಸಹಕರಿಸುವಂತೆ ಪೊಲೀಸ್ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದಾಗ ಕಳ್ಳರಂತೆ ಹಿಂದೆ ಸರಿದ್ದೇಕೆ? ಕಾಂಗ್ರೆಸ್ ನಾಯಕರ ಕಳ್ಳ-ಪೊಲೀಸ್ ಆಟದ ಹಿಂದೆ ಡಿ.ಕೆ ಶಿವಕುಮಾರ್ ಪಾತ್ರವಿರುವುದು ನಿಜವಲ್ಲವೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಇಂಧನಗಳ ಮೇಲಿನ ತೆರಿಗೆ ಕಡಿತಗೊಳಿಸಿ: ರಾಜ್ಯಗಳಿಗೆ ಮೋದಿ ಮನವಿ