Tag: ಪಿಎಸ್‍ಐ ಹಗರಣ

  • ರಾಜಸ್ಥಾನದಲ್ಲೂ ಕರ್ನಾಟಕ ಮಾದರಿ ಪಿಎಸ್‌ಐ ಹಗರಣ – ತಪ್ಪು ರಜಾ ಚೀಟಿ ಬರೆದು ಸಿಕ್ಕಿಬಿದ್ದ ಟಾಪರ್!

    ರಾಜಸ್ಥಾನದಲ್ಲೂ ಕರ್ನಾಟಕ ಮಾದರಿ ಪಿಎಸ್‌ಐ ಹಗರಣ – ತಪ್ಪು ರಜಾ ಚೀಟಿ ಬರೆದು ಸಿಕ್ಕಿಬಿದ್ದ ಟಾಪರ್!

    ಜೈಪುರ: ರಾಜಸ್ಥಾನದಲ್ಲೂ (Rajasthan) ಕರ್ನಾಟಕ (Karnataka) ಮಾದರಿ ಪಿಎಸ್‌ಐ (PSI) ಹಗರಣವೊಂದು ನಡೆದಿದ್ದು, ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ ಮೋನಿಕಾ ಎಂಬುವವರು ಟಾಪರ್ ಆಗಿದ್ದ ಕೂತುಹಲಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ರಾಜಸ್ಥಾನದ ಝುಂಝುನು ನಗರದಲ್ಲಿ ನಡೆದಿದೆ.

    ರಾಜಸ್ಥಾನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮವೊಂದು, ಪಿಎಸ್‌ಐ ಬರೆದಿದ್ದ ರಜಾಚೀಟಿಯ ತಪ್ಪು ಅಕ್ಷರಗಳಿಂದ ಬೆಳಕಿಗೆ ಬಂದಿದೆ. ಹೀಗಾಗಿ ಅಕ್ರಮವಾಗಿ ನೇಮಕಗೊಂಡಿದ್ದ ಪಿಎಸ್‌ಐ ಮೋನಿಕಾ ಹಾಗೂ ಆಕೆಯು ಪರೀಕ್ಷೆಯಲ್ಲಿ ಬ್ಲೂಟೂತ್ ಮೂಲಕ ಆಕೆಗೆ ಉತ್ತರ ಹೇಳಿಕೊಟ್ಟಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ.ಇದನ್ನೂ ಓದಿ:ಹೇಮಾವತಿ ಕೆನಾಲ್ ಕದನ | ಮಂತ್ರಿ ಮಗನಿಗೆ ಬೆದರಿಕೆ ಹಾಕೋಕಾಗುತ್ತಾ? – ರಾಜಣ್ಣ ಪುತ್ರನಿಗೆ ಕುಣಿಗಲ್‌ ರಂಗನಾಥ್‌ ತಿರುಗೇಟು

    2021ರ ಸಬ್ ಇನ್ಸ್‌ಪೆಕ್ಟರ್‌ ನೇಮಕಾತಿ ಪರೀಕ್ಷೆಯಲ್ಲಿ ಮೋನಿಕಾ ಎಂಬಾಕೆ ಹಿಂದಿ ಪರೀಕ್ಷೆಯಲ್ಲಿ 200ಕ್ಕೆ 184 ಹಾಗೂ ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ 200ಕ್ಕೆ 161 ಅಂಕ ಹಾಗೂ ಸಂದರ್ಶನದಲ್ಲಿ 15 ಅಂಕ ಪಡೆದಿದ್ದರು. ಈ ಮೂಲಕ 34ನೇ ರ‍್ಯಾಂಕ್ ಗಳಿಸಿದ್ದರು. ಬಳಿಕ ಅವರನ್ನು ಟ್ರೈನಿ ಪಿಎಸ್‌ಐ ಆಗಿ ನೇಮಿಸಿಕೊಳ್ಳಲಾಗಿತ್ತು.

    ತರಬೇತಿಗೆ ಸೇರಿದ ಬಳಿಕ 2024ರ ಜೂ.5 ರಿಂದ ಜು.2ರವರೆಗೆ ವೈದ್ಯಕೀಯ ರಜೆಯಲ್ಲಿದ್ದರು, ಆದರೆ ಯಾವುದೇ ವೈದ್ಯಕೀಯ ದಾಖಲೆಗಳನ್ನು ಒದಗಿಸಿರಲಿಲ್ಲ. ಹೀಗಾಗಿ ಪುನಃ ಕರ್ತವ್ಯಕ್ಕೆ ಹಾಜರಾಗಲು ಆಕೆ ನ.11ರಂದು ಕೈಬರಹದಲ್ಲಿ ಬರೆದು ರಜಾಚೀಟಿ ಸಲ್ಲಿಸಿದ್ದರು. ಆಗ ಅದರಲ್ಲಿದ್ದ ಅಕ್ಷರದೋಷಗಳನ್ನು ಕಂಡು ಹಿರಿಯ ಅಧಿಕಾರಿಗಳು ತಬ್ಬಿಬ್ಬಾಗಿದ್ದಾರೆ.

    ಹಿಂದಿ ಭಾಷೆಯಲ್ಲಿದ್ದ ಕೇವಲ 20 ಸಾಲುಗಳ ಅರ್ಜಿಯಲ್ಲಿ ‘ನಾನು’, ‘ಇನ್ಸ್ಪೆಕ್ಟರ್’, ‘ಡಾಕ್ಯುಮೆಂಟ್’, ‘ಪ್ರೊಬೆಷನರ್’, ‘ಝುಂಝುನು’, ಇತ್ಯಾದಿ ಸರಳ ಪದಗಳೇ ತಪ್ಪಾಗಿದ್ದವು. ರಜಾಚೀಟಿಯಲ್ಲಿ ಭಾರೀ ಪ್ರಮಾಣದ ಕಾಗುಣಿತ ದೋಷ ಪತ್ತೆಯಾಗಿದ್ದನ್ನು ಕಂಡ ಅಧಿಕಾರಿಗಳು ಅನುಮಾನಗೊಂಡು ಪರಿಶೀಲಿಸಿದಾಗ ಮೋನಿಕಾಳ ಮೋಸ ಬೆಳಕಿಗೆ ಬಂದಿದೆ.

    ಮೋನಿಕಾ ಸ್ವಂತವಾಗಿ ಉತ್ತರ ಬರೆಯದೇ ಬ್ಲೂಟೂತ್ ಸಾಧನ ಬಳಸಿ ಆಕೆ ನಕಲು ಮಾಡಿದ್ದಳು. ಪರೀಕ್ಷಾ ಅಕ್ರಮದ ಮಾಸ್ಟರ್‌ಮೈಂಡ್ ಪೌರವ್ ಕಲೀರ್, ಮೋನಿಕಾಗೆ ಉತ್ತರಗಳನ್ನು ಪೂರೈಸಲು 15 ಲಕ್ಷ ರೂ. ಪಡೆದಿದ್ದ. ಆತನೇ ಬ್ಲೂಟೂತ್ ಮೂಲಕ ಆಕೆಗೆ ಉತ್ತರ ಹೇಳಿಕೊಟ್ಟಿದ್ದ ಎಂದು ಗೊತ್ತಾಗಿದೆ.ಇದನ್ನೂ ಓದಿ:ಕಲಬುರಗಿಯಲ್ಲಿ ಬಾಣಂತಿ, ನವಜಾತ ಶಿಶು ಸಾವು – ಕುಟುಂಬಸ್ಥರಿಂದ ಆಸ್ಪತ್ರೆ ಗಾಜು ಪುಡಿ ಪುಡಿ, ಪೀಠೋಪಕರಣ ಧ್ವಂಸ

  • PSI Scam: ರದ್ದಾಗಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಡಿ.23ಕ್ಕೆ ಮರು‌ ಪರೀಕ್ಷೆ

    PSI Scam: ರದ್ದಾಗಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಡಿ.23ಕ್ಕೆ ಮರು‌ ಪರೀಕ್ಷೆ

    ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA), ಹಗರಣದಿಂದ ರದ್ದಾಗಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿಯ ಮರು ಪರೀಕ್ಷೆಯನ್ನು ಡಿಸೆಂಬರ್ ‌23 ರಂದು ಬೆಂಗಳೂರಿನಲ್ಲಿ ನಡೆಸಲಿದೆ.

    ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಿಎಸ್ಐ‌ (PSI Scam) ಮರು ಪರೀಕ್ಷೆ ನಡೆಸುತ್ತಿದ್ದು, ಈ ಹಿಂದಿನ ಪರೀಕ್ಷೆಗೆ ಅರ್ಹತೆ ಪಡೆದವರು ಈ ಮರು‌ ಪರೀಕ್ಷೆಗೂ ಅರ್ಹತೆ ಪಡೆಯುತ್ತಾರೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: PSI Scam: ಪಿಎಸ್‌ಐ ಮರುಪರೀಕ್ಷೆಗೆ ಹೈಕೋರ್ಟ್‌ ಆದೇಶ – ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಜಾ

    2021ರ ಜನವರಿ 21ರಂದು ಪೊಲೀಸ್‌ ಇಲಾಖೆಯಿಂದ 545 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಟಿಸಿತ್ತು. ಅದೇ ವರ್ಷದ ಅಕ್ಟೋಬರ್‌ 3 ರಂದು ಲಿಖಿತ ಪರೀಕ್ಷೆ ನಡೆದಿತ್ತು. ಆದರೆ ಪರೀಕ್ಷೆಯಲ್ಲಿ ಅಕ್ರಮ ನಡೆದ ಕಾರಣ ರದ್ದುಗೊಳಿಸಲಾಗಿತ್ತು.

    ಏನಿದು ಪ್ರಕರಣ?
    ಸುಮಾರು 54,289 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ‌ ಬಗ್ಗೆ ದೂರು ದಾಖಲಾಗಿ ಅಂದಿನ ಸರ್ಕಾರ ತನಿಖೆ ನಡೆಸಿತ್ತು. ಎಡಿಜಿಪಿ, ಪರೀಕ್ಷೆ ಬರೆದ ಅಭ್ಯರ್ಥಿಗಳು ಸೇರಿ ಸುಮಾರು 110 ಕ್ಕೂ ಹೆಚ್ಚು ಜನರನ್ನ ಪರೀಕ್ಷಾ ಅಕ್ರಮದಡಿ ಬಂಧಿಸಲಾಗಿತ್ತು. ತನಿಖೆ ವೇಳೆ ಅಕ್ರಮ ಆಗಿರುವುದು ಬೆಳಕಿಗೆ ಬಂದಿತ್ತು. ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದನ್ನೂ ಓದಿ: PSI scam – ಇಂದು ಹೈಕೋರ್ಟ್‍ನಲ್ಲಿ ಮರುಪರೀಕ್ಷೆ ಅರ್ಜಿ ವಿಚಾರಣೆ

    ಅಕ್ರಮದ ಹಿನ್ನಲೆಯಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳು ಮರು ಪರೀಕ್ಷೆ ಆಗಬೇಕು ಅಂತ ಕೋರ್ಟ್‌ಗೆ ಮನವಿ ಮಾಡಿದ್ದರು. ಆಯ್ಕೆ ಆದ ಅಭ್ಯರ್ಥಿಗಳು ಮರು ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರು. ಕೋರ್ಟ್‌ನಲ್ಲಿ ವಾದ-ಪ್ರತಿವಾದ ನಡೆದು ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಆದೇಶ ಮಾಡಿತ್ತು.

  • ಬಿಜೆಪಿಗರು ಪ್ರಾಮಾಣಿಕರಾಗಿದ್ದರೆ ನ್ಯಾಯಾಂಗ ತನಿಖೆ ಬಗ್ಗೆ ಭಯವೇಕೆ? – ಡಿಕೆಶಿ ಪ್ರಶ್ನೆ

    ಬಿಜೆಪಿಗರು ಪ್ರಾಮಾಣಿಕರಾಗಿದ್ದರೆ ನ್ಯಾಯಾಂಗ ತನಿಖೆ ಬಗ್ಗೆ ಭಯವೇಕೆ? – ಡಿಕೆಶಿ ಪ್ರಶ್ನೆ

    ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರದ (BJP Government) ವಿರುದ್ಧ ಕೋವಿಡ್‌ ಹಗರಣ, ಆಕ್ಸಿಜನ್‌ ದುರಂತ, ಪಿಎಸ್‌ಐ ಹಗರಣ (PSI Scam) ಸೇರಿದಂತೆ ನಾವು ನೂರಾರು ಆರೋಪ ಮಾಡಿದ್ದೇವೆ. ಅವರು ಯಾವ ರೀತಿ ತನಿಖೆ ಮಾಡಿದ್ದರು ಎಂಬುದು ನಮಗೆ ಗೊತ್ತಿದೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ಮುಂದುವರಿಯುತ್ತಾ ಇದ್ದೇವೆ. ಬಿಜೆಪಿಯವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಂಗ ತನಿಖೆ ಬಗ್ಗೆ ಭಯವೇಕೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ (DK Shivakumar) ಪ್ರಶ್ನಿಸಿದ್ದಾರೆ.

    ಸದಾಶಿವನಗರ ನಿವಾಸ ಹಾಗೂ ಶೇಷಾದ್ರಿಪುರ ಅಪೋಲೋ ಆಸ್ಪತ್ರೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೋವಿಡ್ ಹಗರಣಗಳನ್ನ (Covid Scams) ನ್ಯಾಯಾಂಗ ತನಿಖೆಗೆ ಆದೇಶಿಸಿರುವುದರ ಹಿಂದೆ ದ್ವೇಷದ ರಾಜಕೀಯವಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: INDIA ಒಕ್ಕೂಟಕ್ಕೆ ಅಶೋಕ ಚಕ್ರವಿಲ್ಲದ ತ್ರಿವರ್ಣ ಧ್ವಜ ಬಳಕೆಗೆ ಚಿಂತನೆ

    ಬೆಳಗಾವಿಯಲ್ಲಿ (Belagavi) ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಅವರ ಪತ್ನಿ ಇತ್ತೀಚೆಗೆ ಮುಖ್ಯಮಂತ್ರಿಗಳು ಹಾಗೂ ನನ್ನನ್ನು ಭೇಟಿಯಾಗಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು, ಅವರ ಮನವಿಗೆ ಸ್ಪಂದಿಸಿದ್ದೇವೆ. ಬಿಜೆಪಿಯವರು ಈ ಪ್ರಕರಣದಲ್ಲಿ ಏನು ಮಾಡಿದ್ದರು? ತನಿಖೆ ನಡೆಯುವುದ್ದಕ್ಕೆ ಮುಂಚಿತವಾಗಿಯೇ ಅಂದಿನ ಮುಖ್ಯಮಂತ್ರಿಗಳಾದಿಯಾಗಿ, ಸಚಿವರು, ಯಡಿಯೂರಪ್ಪ ಅವರೆಲ್ಲಾ ಈಶ್ವರಪ್ಪ ದೋಷಮುಕ್ತರಾಗಿ ಬರುತ್ತಾರೆ ಎಂದು ತನಿಖಾಧಿಕಾರಿಗಳಿಗೆ ಸುಳಿವು ನೀಡಿದ್ದರು. ಆದ್ರೆ ನಾವು ಆ ರೀತಿಯ ಕೆಲಸ ಮಾಡಲು ಹೋಗುವುದಿಲ್ಲ, ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಕಾನೂನಿನ ಚೌಕಟ್ಟಿನಲ್ಲೇ ತನಿಖಾ ಆಯೋಗ ರಚಿಸಿದ್ದೇವೆ. ಇದರಲ್ಲಿ ಯಾವುದೇ ದ್ವೇಷ ರಾಜಕಾರಣವಿಲ್ಲ ಎಂದು ಹೇಳಿದ್ದಾರೆ.

    ಬೊಮ್ಮಾಯಿ ಅವರಿಂದ ನಮಗೆ ಪ್ರಮಾಣ ಪತ್ರ ಬೇಡ. ಆಕ್ಸಿಜನ್ ದುರಂತದಲ್ಲಿ 36 ಜನ ಸತ್ತಿದ್ದರು. ಆದರೆ ಆಗಿನ ಸಚಿವರು ಕೇವಲ 3 ಜನ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಹೊಣೆಗಾರಿಕೆ ಮಾಡಿಲ್ಲ. ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ. ಈ ಪ್ರಕರಣ ತನಿಖೆ ಆಗಬಾರದೇ? ಕೋವಿಡ್ ಉಪಕರಣಗಳ ಖರೀದಿಯಲ್ಲಿ ಕೇಂದ್ರ ಸರ್ಕಾರ ಮಾಡಿರುವ ವೆಚ್ಚದ ದರಕ್ಕೂ ರಾಜ್ಯ ಸರ್ಕಾರದ ವೆಚ್ಚದ ದರಕ್ಕೂ ಭಾರೀ ವ್ಯತ್ಯಾಸವಿದೆ. ಇನ್ನು ಬೆಡ್ ಬ್ಲಾಕಿಂಗ್ ದಂಧೆ ವಿಚಾರವಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಆರೋಪ ಮಾಡಿದ್ದರು. ಇದೆಲ್ಲದರ ಬಗ್ಗೆ ತನಿಖೆ ಮಾಡಬೇಕಲ್ಲವೇ? ಇನ್ನೂ ಸರ್ಕಾರ ರೂಪಿಸಿದ 10 ಸಾವಿರ ಹಾಸಿಗೆಗಳ ಆರೋಗ್ಯ ಕೇಂದ್ರದಲ್ಲಿ ಯಾರೂ ಚಿಕಿತ್ಸೆ ಪಡೆದಿಲ್ಲ. ಇದಕ್ಕೆ ಸಂಬಂಧಿಸಿದ ಗುತ್ತಿಗೆದಾರರು ಕಣ್ಣೀರು ಹಾಕುತ್ತಿದ್ದಾರೆ. ಈ ಎಲ್ಲದರ ಬಗ್ಗೆ ತನಿಖೆ ಮಾಡಿ ರಾಜ್ಯದ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಎಂಬುದು ನಮ್ಮ ಬದ್ಧತೆ ಎಂದಿದ್ದಾರೆ.

    ಬಿಜೆಪಿ ನಾಯಕರು ನಮ್ಮ ಮೇಲೆ ಸುಳ್ಳು ಆರೋಪ ಮಾಡಿ, ನಾವು ಕಷ್ಟ ಅನುಭವಿಸುವಂತೆ ಮಾಡಿಲ್ಲವೇ? ಎಷ್ಟೊಂದು ಪ್ರಕರಣಗಳನ್ನು ತನಿಖೆಗೆ ತೆಗೆದುಕೊಳ್ಳಬೇಕಿತ್ತು? ಆಸ್ತಿಗಳ ಮೌಲ್ಯ ಮಾಪನದಲ್ಲಿ ಅಕ್ರಮ ಎಸಗಿಲ್ಲವೇ? ಹೀಗೆ ಬೆಂಗಳೂರು ಸುತ್ತಾಮುತ್ತಾ ನಡೆದಿರುವ ಭೂ ಹಗರಣಗಳ ಪಟ್ಟಿ ಹೇಳುತ್ತಾ ಹೋಗ್ಲಾ? ಇನ್ನೂ ಏನೇನ ತೆಗೆಯಬೇಕು ಕೇಳಿ ಅವರನ್ನ, ನನ್ನ ಬಳಿಯಿರುವ ಎಲ್ಲ ದಾಖಲೆಗಳನ್ನೂ ಹೊರಗೆ ತೆಗೆಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಈಗ ಇಸ್ರೋದಿಂದ ಸೂರ್ಯನ ಅಧ್ಯಯನ – ಆದಿತ್ಯ ಉಡಾವಣೆಗೆ ಮುಹೂರ್ತ ಫಿಕ್ಸ್

    ನೈಸ್ ವಿಚಾರವಾಗಿ ಯಾವ್ದೇ ದಾಖಲೆ ಬೇಕಾದ್ರೂ ಬಿಚ್ಚಿಡಲಿ:
    ನೈಸ್‌ ಯೋಜನೆಯಲ್ಲಿ ಅಕ್ರಮ ವಿಚಾರವಾಗಿ ಮಾತನಾಡಿದ ಡಿಕೆಶಿ, ಯಾರು ಏನು ಬೇಕಾದ್ರೂ ಆರೋಪ ಮಾಡಲಿ, ಯಾವುದೇ ದಾಖಲೆ ಬೇಕಾದರೂ ಬಿಚ್ಚಿಡಲಿ, ಈಗಲೂ ದೂರು ಕೊಟ್ಟು ತನಿಖೆ ಮಾಡಿಸಲಿ, ತಪ್ಪು ಮಾಡಿದ್ದರೆ ಗಲ್ಲಿಗೆ ಹಾಕಲಿ. ಈಗಾಗಲೇ ಸಿಬಿಐ, ಇಡಿಯವರು ಏನೇನು ಸ್ಕ್ಯಾನ್ ಮಾಡಬೇಕೋ ಎಲ್ಲವನ್ನೂ ನನ್ನ ವಿರುದ್ಧ ಮಾಡಿದ್ದಾರೆ. ನೈಸ್ ವಿಚಾರ ಏನೂ ಹೊಸದಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಕನಕಪುರಕ್ಕೆ ಮೆಡಿಕಲ್ ಕಾಲೇಜಿಗೆ ಈಗ ವಿರೋಧ ಏಕೆ?
    ವೈದ್ಯಕೀಯ ಕಾಲೇಜನ್ನು ರಾಮನಗರದಿಂದ ಕನಕಪುರಕ್ಕೆ ವರ್ಗಾವಣೆ ಮಾಡುತ್ತಿರುವುದ್ದಕ್ಕೆ ಕುಮಾರಸ್ವಾಮಿ ಅವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅಧಿವೇಶನದಲ್ಲಿ ಕನಕಪುರದಲ್ಲಿ ಮೆಡಿಕಲ್ ಕಾಲೇಜು ಮಾಡಲು ಮನವಿ ಮಾಡಿದ್ದೆ, ಅದಕ್ಕೆ ಅವರು ಸಮ್ಮತಿ ಸೂಚಿಸಿದ್ದರು. ನಮಗೆ ನಮ್ಮ ಕ್ಷೇತ್ರದ ಮೇಲೆ ಸ್ವಾರ್ಥ, ಅಭಿಮಾನ ಇಲ್ಲವೇ? ಈಗ ಏಕೆ ರಾಜಕೀಯ? ಪ್ರಸ್ತುತ ವೈದ್ಯಕೀಯ ಕಾಲೇಜು ರಾಮನಗರ ಕ್ಷೇತ್ರದ ಗಡಿಯಿಂದ 3 ಕಿಲೋ ಮೀಟರ್ ದೂರದಲ್ಲಿದೆ. ಈ ಕಾಲೇಜು ಸ್ಥಾಪನೆಯಿಂದ ಎರಡು ತಾಲೂಕುಗಳಿಗೆ ಉಪಯೋಗವಾಗಲಿದೆ ಎಂದು ಹೇಳಿದ್ದಾರೆ.

    ರಾಮನಗರ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಜಿಲ್ಲಾ ಆಸ್ಪತ್ರೆ ನಿರ್ಮಾಣ ಮಾಡಲಾಯಿತು. ಈ ಆಸ್ಪತ್ರೆ ನಿರ್ಮಾಣ ಪೂರ್ಣವಾಗಿ ಉದ್ಘಾಟನೆಗೊಳ್ಳಬೇಕು ಎನ್ನುವ ಹೊತ್ತಿನಲ್ಲಿ ಯಡಿಯೂರಪ್ಪ ಅವರ ಸರ್ಕಾರ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆ ಮಾಡಿತು. ಆಗ ಯಡಿಯೂರಪ್ಪ ಅವರು ರಾಮನಗರಕ್ಕೆ ಅನ್ಯಾಯ ಮಾಡುವುದಿಲ್ಲ ಎಂದು ಆಶ್ವಾಸನೆ ನೀಡಿದ್ದರು. ಬೊಮ್ಮಾಯಿಯವರ ಮಧ್ಯಸ್ಥಿಕೆಯಲ್ಲಿ ಮನವಿ ಮಾಡಿದ್ದೇವು ಆಗ ವಿಧಾನಸಭಾ ಅಧಿವೇಶನದಲ್ಲೂ ಭರವಸೆ ನೀಡಿದ್ದರು. ಈಗ ನಾವೇನು ಬದಲಾವಣೆ ಮಾಡಿಲ್ಲ, ಎರಡೂ ತಾಲ್ಲೂಕುಗಳ ಜನರಿಗೆ ಉಪಯೋಗವಾಗಲಿ ಎಂದು ಈ ತೀರ್ಮಾನ ಮಾಡಿದ್ದೇವೆ. ವಿಶ್ವವಿದ್ಯಾಲಯ ಅಲ್ಲಿಯೇ ಇರುತ್ತದೆ. ಆಸ್ಪತ್ರೆ ಎರಡೂ ಕಡೆ ಇರುತ್ತದೆ. ಇದೇ ಕುಮಾರಸ್ವಾಮಿ ಅವರು ಪ್ರತಿಭಟನೆ ಮಾಡಲಿ. ಅವರೇ ಬಜೆಟ್ ಭಾಷಣ ಮಾಡುವಾಗ ಕನಕಪುರಕ್ಕೆ ಮೆಡಿಕಲ್ ಕಾಲೇಜು ಮಂಜೂರು ಮಾಡಲಾಗುವುದು ಎಂದು ಓದಿದ ಸಾಕ್ಷಿ ಇದೆ. ಈಗ ಏಕೆ ಈ ಹೋರಾಟ? ಚುನಾವಣೆ ಹತ್ತಿರ ಬರುತ್ತಿದೆ ಎನ್ನುವ ಕಾರಣಕ್ಕೆ ಇದೆಲ್ಲಾ ಮಾಡಲು ಹೊರಟಿದ್ದಾರೆ. ಆಗ ಬುದ್ದಿ ಇರಲಿಲ್ಲವೇ ಅವರಿಗೆ, ನಮ್ಮ 80 ಜನ ಶಾಸಕರ ಬೆಂಬಲದಿಂದ ಅವರು ಸಿಎಂ ಆಗಿದ್ದು ನೆನಪಿರಲಿ ಎಂದಿದ್ದಾರೆ.

    ಗೃಹಲಕ್ಷ್ಮಿ ಸರ್ಕಾರಿ ಕಾರ್ಯಕ್ರಮ:
    ಗೃಹಲಕ್ಷ್ಮಿ ಇದು ಸರ್ಕಾರಿ ಕಾರ್ಯಕ್ರಮ, ಇಲ್ಲಿ ಜನರನ್ನು ಯಾರೂ ಸೇರಿಸಬೇಕಿಲ್ಲ. ನಾವು ಕೇವಲ ಆಮಂತ್ರಣ ನೀಡುತ್ತೇವೆ. ಇದು ಪಕ್ಷದ ಕಾರ್ಯಕ್ರಮವಲ್ಲ. ಪಕ್ಷಬೇಧ ಮರೆತು ಕಾರ್ಯಕ್ರಮ ಮಾಡಬೇಕು. ಬಿಜೆಪಿ ಹಾಗೂ ದಳದ ಶಾಸಕರು ಅವರ ಅಧ್ಯಕ್ಷತೆಯಲ್ಲಿ ತಮ್ಮ ಕ್ಷೇತ್ರಗಳಲ್ಲಿ ಈ ಕಾರ್ಯಕ್ರಮ ಮಾಡಬೇಕು ಎಂದು ಹೇಳಿದ್ದೇವೆ. ಕಾಂಗ್ರೆಸ್ ಪಕ್ಷದ ಪರವಾಗಿ ಜನ ಸೇರಿಸುವುದನ್ನು ಅವರು ನನಗೆ ಹೇಳಿಕೊಡಬೇಕಿಲ್ಲ. ಅವರು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದಾರೆ? ಅವರಂತೆ ಶಾಲೆ-ಕಾಲೇಜುಗಳಿಗೆ ಪತ್ರ ಬರೆದು ಮಕ್ಕಳನ್ನು ಕರೆತನ್ನಿ ಎಂದು ಹೇಳುತ್ತಿಲ್ಲ. ನಾವು ಕಾರ್ಯಕ್ರಮಕ್ಕೆ ಆಗಮಿಸುವಂತೆ ಈ ಯೋಜನೆ ಫಲಾನುಭವಿಗಳಿಗೆ ಆಮಂತ್ರಣ ನೀಡುತ್ತಿದ್ದೇವೆ ಎಂದು ಕುಟುಕಿದ್ದಾರೆ.

    ಚುನಾವಣೆ ಸಮಯದಲ್ಲಿ ನಾನು ಹಾಗೂ ಸಿದ್ದರಾಮಯ್ಯ ಅವರು ನಾಡದೇವತೆ ತಾಯಿ ಚಾಂಮುಂಡೇಶ್ವರಿ ಸನ್ನಿಧಾನಕ್ಕೆ ಹೋಗಿ, ಗ್ಯಾರಂಟಿ ಕಾರ್ಡ್‌ಗೆ ಸಹಿ ಹಾಕಿ ಈ ಯೋಜನೆ ಜಾರಿ ಮಾಡುವ ಶಕ್ತಿ ನೀಡುವಂತೆ ಪ್ರಾರ್ಥನೆ ಮಾಡಿದ್ದೆವು. ಹೀಗಾಗಿ ಈ ಯೋಜನೆಯನ್ನು ತಾಯಿಯ ಆಶೀರ್ವಾದದ ಮೂಲಕ ಜಾರಿ ಮಾಡಲು ಮೈಸೂರಿನಲ್ಲೇ ಕಾರ್ಯಕ್ರಮ ಮಾಡುತ್ತಿದ್ದೇವೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಿಎಸ್‍ಐ ಹಗರಣ ನ್ಯಾಯಾಂಗ ತನಿಖೆ ಕಾಂಗ್ರೆಸ್‍ನ ದ್ವೇಷದ ರಾಜಕಾರಣ: ಬೊಮ್ಮಾಯಿ

    ಪಿಎಸ್‍ಐ ಹಗರಣ ನ್ಯಾಯಾಂಗ ತನಿಖೆ ಕಾಂಗ್ರೆಸ್‍ನ ದ್ವೇಷದ ರಾಜಕಾರಣ: ಬೊಮ್ಮಾಯಿ

    ಬೆಂಗಳೂರು: ಪಿಎಸ್‍ಐ ಹಗರಣವನ್ನು (PSI Scam) ನ್ಯಾಯಾಂಗ ತನಿಖೆಗೆ ವಹಿಸಿರುವುದು ಕಾಂಗ್ರೆಸ್‍ನ (Congress) ದ್ವೇಷದ ರಾಜಕಾರಣ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನ ದ್ವೇಷದ ರಾಜಕಾರಣ ಎಲ್ಲಿಗೆ ಹೋಗುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಪಿಎಸ್‍ಐ ಹಗರಣ ನಾವೇ ಹೊರಗೆ ತಂದು ಸಿಐಡಿ ತನಿಖೆಗೆ ಆದೇಶ ಮಾಡಿದ್ದೆವು. ಪ್ರಕರಣದಲ್ಲಿ ಎಡಿಜಿಪಿ ಹುದ್ದೆಯ ಅಧಿಕಾರಿಯನ್ನು ಜೈಲಿಗೆ ಕಳುಹಿಸಿದ್ದೇವೆ. ಈ ಹಗರಣದಲ್ಲಿ ಕಾಂಗ್ರೆಸ್‍ನವರೂ ಇದ್ದಾರೆ. ಪ್ರಕರಣದ ತನಿಖೆ ನಡೆದು ಕೋರ್ಟ್‍ನಲ್ಲಿದೆ. ಈ ಸಂದರ್ಭ ಮತ್ತೆ ತನಿಖೆಗೆ ಆದೇಶ ಮಾಡಿರುವುದು ದ್ವೇಷ ರಾಜಕೀಯವನ್ನು ತೋರಿಸುತ್ತದೆ ಎಂದಿದ್ದಾರೆ. ಇದನ್ನೂ ಓದಿ: 21 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ- ಜಾಮೀನು ನೀಡಿದ್ದಕ್ಕೆ ಹೈಕೋರ್ಟ್ ಕಿಡಿ

    ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಜೀವನ ದುಸ್ತರವಾಗಿದೆ. ಸರ್ಕಾರ ಬಂದ ತಕ್ಷಣ ವಿದ್ಯುತ್ ದರ ಹೆಚ್ಚಳ ಮಾಡಿದರು. ಎಲ್ಲಾ ತರಕಾರಿಗಳ ದರ ಹೆಚ್ಚಳ ಆಗಿದೆ. ಈಗ ಹಾಲಿನ ದರ ಹೆಚ್ಚಳ ಮಾಡಿದ್ದಾರೆ. ಆಗಸ್ಟ್ 1ರ ನಂತರ ಸೈಟ್, ಕಾರು, ಹೊಸ ಮನೆ ಖರೀದಿ ದರವೂ ಹೆಚ್ಚಳವಾಗಲಿದೆ ಎಂದು ಹೇಳಿದ್ದಾರೆ.

    ಸಿದ್ದರಾಮಯ್ಯ ಅವರು, ಬಿಜೆಪಿಯವರು ಗೋಡ್ಸೆ ಪ್ರತಿಮೆ ಮುಂದೆ ಪ್ರತಿಭಟನೆ ಮಾಡಲಿ ಎಂದು ಹೇಳಿದ್ದಾರೆ. ನಕಲಿ ಗಾಂಧಿಗಳ ಜಪ ಮಾಡುತ್ತಿರುವವರು ಕಾಂಗ್ರೆಸ್‍ನವರು. ಗಾಂಧೀಜಿಯನ್ನು ಹೆಚ್ಚು ದುರುಪಯೋಗ ಮಾಡಿಕೊಂಡವರು ಅವರೇ. ಸ್ವಾತಂತ್ರ್ಯದ ನಂತರದ ಕಾಂಗ್ರೆಸ್‍ನ್ನು ವಿಸರ್ಜಿಸಿ ಎಂದು ಗಾಂಧೀಜಿ ಹೇಳಿದ್ದರು. ಯಾಕೆಂದರೆ ಕಾಂಗ್ರೆಸ್‍ನವರಿಗೆ ದೇಶ ಆಳಲು ಬರುವುದಿಲ್ಲ ಎಂದು ಅವರಿಗೆ ಗೊತ್ತಿತ್ತು. ಆದರೆ ಇವರು ಗಾಂಧೀಜಿ ಹೆಸರು ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆ.1 ರಿಂದ ಹಾಲಿನ ದರ 3 ರೂ. ಹೆಚ್ಚಳ- ಯಾವುದಕ್ಕೆ ಎಷ್ಟು?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಿಎಸ್‌ಐ ನೇಮಕಾತಿ ಹಗರಣ – ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶ

    ಪಿಎಸ್‌ಐ ನೇಮಕಾತಿ ಹಗರಣ – ನ್ಯಾಯಾಂಗ ತನಿಖೆಗೆ ಸರ್ಕಾರ ಆದೇಶ

    ಬೆಂಗಳೂರು: ಕರ್ನಾಟಕ ಪಿಎಸ್‌ಐ ನೇಮಕಾತಿ (PSI Scam) ಹಗರಣ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ರಾಜ್ಯ ಸರ್ಕಾರ (Karnataka Govt) ಆದೇಶ ಹೊರಡಿಸಿದೆ.

    ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರ ನಿವೃತ್ತ ನ್ಯಾ. ವೀರಪ್ಪ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಪೊಲೀಸ್‌ ಇಲಾಖೆ ಹಾಗೂ ಸಿಐಡಿ ತನಿಖೆಗೆ ಸಹಕಾರ ನೀಡಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಮಾಜಿ ಸಿಎಂ ಬಿಎಸ್‌ವೈಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ

    ಪ್ರಕರಣ ಏನು?
    2021ರ ಅಕ್ಟೋಬರ್‌ 3 ರಂದು ನಡೆದಿದ್ದ, 545 ಪಿಎಸ್‌ಐ ಹುದ್ದೆಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮ ನಡೆದಿತ್ತು. ಈ ಬಗ್ಗೆ ದೂರು ಕೇಳಿ ಬಂದಿದ್ದರಿಂದ ಸಿಐಡಿ ಇದರ ತನಿಖೆ ನಡೆಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಮೊಕದ್ದಮೆ ದಾಖಲಿಸಿತ್ತು.

    ಪ್ರಕರಣಕ್ಕೆ ಸಂಬಂಧಿಸಿದಂತೆ 52 ಆರೋಪಿಗಳು ಪರೀಕ್ಷೆಯಲ್ಲಿ ಅಕ್ರಮ ಎಸಗಿರುವ ಬಗ್ಗೆ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗಿತ್ತು. ಸ್ಪಷ್ಟನೆ ಪಡೆದ ನಂತರ ಈ ಎಲ್ಲ 52 ಅಭ್ಯರ್ಥಿಗಳನ್ನು ಪೊಲೀಸ್‌ ಇಲಾಖೆಯ ಯಾವುದೇ ನೇಮಕಾತಿ ಪರೀಕ್ಷೆಗಳಿಂದ ಶಾಶ್ವತವಾಗಿ ಡಿಬಾರ್‌ ಮಾಡಲಾಗಿದೆ. ಇದನ್ನೂ ಓದಿ: ವನ್ಯಜೀವಿಯಿಂದ ಜೀವಹಾನಿ – ಸ್ಥಳ ಭೇಟಿಗೆ ಈಶ್ವರ್ ಖಂಡ್ರೆ ಸೂಚನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • PSI scam – ಇಂದು ಹೈಕೋರ್ಟ್‍ನಲ್ಲಿ ಮರುಪರೀಕ್ಷೆ ಅರ್ಜಿ ವಿಚಾರಣೆ

    ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣ (PSI scam) ಪ್ರಕರಣದಿಂದ ರದ್ದಾಗಿರುವ ಅಭ್ಯರ್ಥಿಗಳಿಗೆ ಮರುಪರೀಕ್ಷೆ ವಿಚಾರದ ಬಗ್ಗೆ ಕರ್ನಾಟಕ ಹೈಕೋರ್ಟ್ (High Cou) ಮಂಗಳವಾರ ವಿಚಾರಣೆ ನಡೆಸಲಿದೆ.

    ಮಧ್ಯಾಹ್ನ 2:30ಕ್ಕೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಈ ವೇಳೆ ಮರುಪರೀಕ್ಷೆಯ ಬಗ್ಗೆ ಸರ್ಕಾರ (Government of Karnataka) ತನ್ನ ನಿರ್ಧಾರ ತಿಳಿಸಲಿದೆ. ಈ ಹಿಂದೆ 510 ಅಭ್ಯರ್ಥಿಗಳಿಗೆ ಕಿರುಪರೀಕ್ಷೆಯ ಬಗ್ಗೆ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅಲ್ಲದೇ ಈ ಬಗ್ಗೆ ಸರ್ಕಾರ ತನ್ನ ನಿರ್ಧಾರವನ್ನು ತಿಳಿಸುವಂತೆ ಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನೂ ಓದಿ:  ಪಿಎಸ್‍ಐ ಹಗರಣ ಕೇಸ್‌- ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

    50 ಸಾವಿರ ಅಭ್ಯರ್ಥಿಗಳಿಗೂ ಮರು ಪರೀಕ್ಷೆ ನಡೆಯಲಿದೆಯೇ ಅಥವಾ 510 ಅಭ್ಯರ್ಥಿಗಳಿಗೆ ಮಾತ್ರ ಕಿರುಪರೀಕ್ಷೆ ನಡೆಯಲಿದೆಯೇ? ಇಲ್ಲವೇ ಸರ್ಕಾರದ ನಿರ್ಧಾರ ಏನಿದೆ? ನ್ಯಾಯಾಲಯ ಏನು ಆದೇಶ ನೀಡಲಿದೆ ಎಂಬುದು ಮಧ್ಯಾಹ್ನ ತಿಳಿಯಲಿದೆ.

    ಕಳೆದ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಡೆದ ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿತ್ತು. ಬಳಿಕ ತನಿಖೆಯ ವೇಳೆ ಪರೀಕ್ಷಾ ಕೇಂದ್ರಗಳನ್ನು ಬುಕ್ ಮಾಡಿಕೊಂಡು ಅಕ್ರಮ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಆಡಿಯೋ ಸಹ ವೈರಲ್ ಆಗಿತ್ತು. ಇದಾದ ಬಳಿಕ ಈ ನೇಮಕಾತಿಯನ್ನು ರದ್ದು ಮಾಡಲಾಗಿತ್ತು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈಗಲೂ ಪ್ರಕರಣ ವಿಚಾರಣೆ ಹಂತದಲ್ಲಿದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಸಚಿವರು ಹಾಗೂ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಅಲ್ಲದೇ ಪಿಎಸ್‍ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ 52 ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆ ನಡೆಸುವ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಡಿಬಾರ್ ಮಾಡಿ ಇತ್ತೀಚೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಪಿಎಸ್‍ಐ ಹಗರಣ ನೀವೇ ಸರಿಯಾಗಿ ಕೆಲಸ ಮಾಡ್ತಿರೋ? ಅಥ್ವಾ ಬೇರೆ ತನಿಖಾ ಸಂಸ್ಥೆಗೆ ವಹಿಸಬೇಕಾ: CID ವಿರುದ್ಧ ಹೈಕೋರ್ಟ್ ಗರಂ

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಚುನಾವಣಾ ಕಣಕ್ಕಿಳಿಯಲು ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್ ಸಜ್ಜು

    ಚುನಾವಣಾ ಕಣಕ್ಕಿಳಿಯಲು ಪಿಎಸ್‍ಐ ಹಗರಣದ ಕಿಂಗ್‍ಪಿನ್ ಆರ್‌ಡಿ ಪಾಟೀಲ್ ಸಜ್ಜು

    ಕಲಬುರಗಿ: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರುತ್ತಿದೆ. ಪಿಎಸ್‍ಐ ನೇಮಕಾತಿ ಪರೀಕ್ಷಾ ಅಕ್ರಮ (PSI recruiment scam) ಪ್ರಕರಣದ ಕಿಂಗ್‍ಪಿನ್ ಆರ್.ಡಿ ಪಾಟೀಲ್ ಚುನಾವಣಾ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾನೆ.

    ಅಫಜಲಪುರ (Afzalpur) ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧಿಸಲು ಈಗಾಗಲೇ ಎಲ್ಲಾ ತಯಾರಿ ನಡೆಸಿರುವ ಆರ್.ಡಿ ಪಾಟೀಲ್, ಪಕ್ಷೇತರನಾಗಿ ಅಖಾಡಕ್ಕೆ ಇಳಿಯಲು ಮುಂದಾಗಿದ್ದ. ಆದರೆ ಇದೀಗ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ (KRPP) ಸ್ಪರ್ಧಿಸಲು ತಯಾರಿ ನಡೆಸಿದ್ದಾನೆ. ಏ.10 ರಂದು ಅಫಜಲಪುರಕ್ಕೆ ಆಗಮಿಸುತ್ತಿರುವ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿಯವರ ಸಮ್ಮುಖದಲ್ಲಿ ಆರ್.ಡಿ ಪಾಟೀಲ್ ಸಹೋದರ ಮಹಾಂತೇಶ್ ಪಾಟೀಲ್ ಹಾಗೂ ಬೆಂಬಲಿಗರು ಕೆಆರ್‌ಪಿಪಿಗೆ ಸೇರ್ಪಡೆಯಾಗಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಮೀಸಲಾತಿ ತೆಗೆದವರಿಗೆ ಶಾಪ ತಟ್ಟಲಿದೆ: ಹೆಚ್‌ಡಿ ರೇವಣ್ಣ

    ಸದ್ಯ ಕಲಬುರಗಿ ಜೈಲಿನಲ್ಲಿರುವ ಆರ್.ಡಿ ಪಾಟೀಲ್ ಪರ ಆತನ ಸಹೋದರ ಮಹಾಂತೇಶ್ ಪಾಟೀಲ್ ಅಫಜಲಪುರ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದಾನೆ. ಇದನ್ನೂ ಓದಿ: ಪುನೀತ್ ಕೆರೆಹಳ್ಳಿ ಬಂಧನಕ್ಕೆ ನಾಲ್ಕು ತಂಡ ರಚನೆ, ಪ್ರಕರಣದಲ್ಲಿ 3 ಎಫ್‌ಐಆರ್ – ಎಸ್ಪಿ ಕಾರ್ತಿಕ್ ರೆಡ್ಡಿ

  • ಪಿಎಸ್‌ಐ ನೇಮಕಾತಿ ಹಗರಣ – 1 ವಾರದ ಒಳಗೆ ತನಿಖಾ ವರದಿ ಸಲ್ಲಿಸಿ

    ಪಿಎಸ್‌ಐ ನೇಮಕಾತಿ ಹಗರಣ – 1 ವಾರದ ಒಳಗೆ ತನಿಖಾ ವರದಿ ಸಲ್ಲಿಸಿ

    ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಹಗರಣ (Karnataka PSI scam) ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ (High Court) ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸೂಚನೆ ನೀಡಿದೆ.

    ಇಲ್ಲಿಯವರೆಗೆ ನಡೆದಿರುವ ತನಿಖೆ, ತೆಗೆದುಕೊಂಡಂತಹ ಕ್ರಮದ ಬಗ್ಗೆ ವರದಿ (Investigation Report) ನೀಡುವಂತೆ ಸೂಚನೆ ನೀಡಿದ್ದು ವಾರದ ಒಳಗೆ ಎಲ್ಲಾ ವರದಿ ಸಲ್ಲಿಸಿ ಎಂದು ಸೂಚಿಸಿದೆ. ಇದನ್ನೂ ಓದಿ: ಅಂದು ಶಂಕುಸ್ಥಾಪನೆ, ಫೆ.6ಕ್ಕೆ ಮೋದಿಯಿಂದ ಉದ್ಘಾಟನೆ – ತುಮಕೂರು HAL ಹೆಲಿಕಾಪ್ಟರ್‌ ಘಟಕದ ವಿಶೇಷತೆ ಏನು?

    ಪ್ರಮುಖವಾಗಿ ಎಡಿಜಿಪಿ ಅಮೃತ್ ಪಾಲ್ (ADGP Amrit Paul) ಬಂಧಿಸಿರುವ ಬಗ್ಗೆ ಪ್ರತ್ಯೇಕವಾದ ಮಾಹಿತಿಯನ್ನು ಕೇಳಿದ್ದು, ಬಳಿಕ ತೆಗೆದುಕೊಂಡ ಪ್ರಸ್ತುತ ವರದಿ ಸಲ್ಲಿಸುವಂತೆ ಸೂಚನೆ ನೀಡಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಿಎಸ್‌ಐ ಗೋಲ್ಮಾಲ್‌ – ಜ್ಞಾನೇಂದ್ರ ಮೇಲೆಯೇ ಬಾಂಬ್‌ ಸಿಡಿಸಿದ ಪ್ರಿಯಾಂಕ್‌

    ಪಿಎಸ್‌ಐ ಗೋಲ್ಮಾಲ್‌ – ಜ್ಞಾನೇಂದ್ರ ಮೇಲೆಯೇ ಬಾಂಬ್‌ ಸಿಡಿಸಿದ ಪ್ರಿಯಾಂಕ್‌

    ಬೆಂಗಳೂರು: ಕೆಲ ದಿನ ಸಂಚಲನ ಸೃಷ್ಟಿಸಿ ಸೈಲೆಂಟ್ ಆಗಿದ್ದ ಪಿಎಸ್‍ಐ ನೇಮಕಾತಿ ಹಗರಣ(Karnataka PSI Scam) ಮತ್ತೆ ಸದ್ದು ಮಾಡಿದೆ. ಪಿಎಸ್‍ಐ ಗೋಲ್ಮಾಲ್ ಆಗಿದೆ ಅಂತ ಹೇಳಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಅವರೇ ಈ ಬಾರಿ ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ಮೇಲೆ ಬಾಂಬ್ ಸಿಡಿಸಿದ್ದಾರೆ.

    ಕಳೆದ ಬಾರಿ ಪಿಎಸ್‍ಐ ಪರೀಕ್ಷೆ ಬರೆದಿದ್ದ ಅಭ್ಯರ್ಥಿ ಮತ್ತು ಗೃಹ ಸಚಿವರ ಮಧ್ಯೆ ನಡೆದಿರುವ ಸಂಭಾಷಣೆಯ ಆಡಿಯೋವನ್ನು ಪ್ರಿಯಾಂಕ್ ರಿಲೀಸ್ ಮಾಡಿದ್ದಾರೆ. ಆಡಿಯೋದಲ್ಲಿ ಅಭ್ಯರ್ಥಿಯೊಬ್ಬ, ಸರ್ 545 ಹುದ್ದೆಗಳದ್ದು ಕ್ಲಿಯರ್ ಆಗಲಿ. ನಂತರ 402 ಹುದ್ದೆ ನೇಮಕ ಮಾಡಿ. ಇಲ್ಲವಾದಲ್ಲಿ 545 ಅಭ್ಯರ್ಥಿಗಳಿಗೆ ಅನ್ಯಾಯ ಆಗಲ್ವೇ ಅಂತ ಮನವಿ ಮಾಡಿದ್ದಾರೆ.

    ಇದಕ್ಕೆ ಉತ್ತರಿಸಿರುವ ಗೃಹ ಸಚಿವರು, ಸರ್ಕಾರ ನಿಮ್ಮನ್ನ ಕೇಳಿ ಮಾಡಬೇಕೇ? ಈಗಾಗಲೇ 15 ಜನರಿಗೆ ಜಾಮೀನು ಸಿಕ್ಕಿದೆ. ಯಾರದ್ದೋ ಖುಷಿಗೆ ಸರ್ಕಾರ ಕೆಲಸ ಮಾಡಲ್ಲ. ಕಾನೂನು ಪ್ರಕಾರವೇ ಸರ್ಕಾರ ಹೋಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ, ಅಭ್ಯರ್ಥಿ ಮಾತು ಮುಂದುವರಿಸಿ, ಅದು ಹೇಗೆ ಜಾಮೀನು ಸಿಗುತ್ತೆ? ಡಿಜಿ, ಐಜಿಪಿ, ಕಲಬುರಗಿ ಆಯುಕ್ತರಿಗೆ ಸಾಕ್ಷ್ಯ ಕೊಟ್ಟಿದ್ದೇವೆ. ನೀವೇಕೆ ತನಿಖೆ ಮಾಡಿಲ್ಲ ಎಂದು  ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನೇಕಾರರಿಗೆ 2 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ – ಸಿಎಂ ಘೋಷಣೆ

    ಇದಕ್ಕೆ ಉತ್ತರಿಸಿರುವ ಗೃಹ ಸಚಿವರು ಟೆಕ್ನಿಕಲ್ ಪ್ರಾಬ್ಲಂ ಇರಬಹುದು ಅಂದಿದ್ದಾರೆ. ಆಡಿಯೋ ರಿಲೀಸ್ ಬಳಿಕ ಸರ್ಕಾರದ ವಿರುದ್ಧ ಕಿಡಿಕಾರಿರುವ ಪ್ರಿಯಾಂಕ್, ಮೂವರು ಸಚಿವರ ಮೇಲೆ ದೂರಿದೆ. ಆ ಮೂವರು ಎಂಎಲ್‍ಎಗಳು ಯಾರು? ಶಾಸಕರ ಭವನದಲ್ಲೇ ಡೀಲ್ ಆಗಿದೆ. ಯಾಕೆ ಆ ಶಾಸಕರ ಮೇಲೆ ಕ್ರಮ ತೆಗೆದುಕೊಳ್ಳಲಿಲ್ಲ ಅಂತ ಪ್ರಶ್ನೆ ಹಾಕಿದ್ದಾರೆ.

    ಇದಕ್ಕೆ ಸಿಎಂ ತಿರುಗೇಟು ಕೊಟ್ಟಿದ್ದು, ಹಳೇ ಆಡಿಯೋ-ಈಗ ಹೊಸ ಆಡಿಯೋ ಎರಡರ ಬಗ್ಗೆಯೂ ಪ್ರಿಯಾಂಕ್‍ಗೆ ಸ್ಪಷ್ಟತೆಯೇ ಇಲ್ಲ ಅಂದಿದ್ದಾರೆ. ಇದನ್ನೂ ಓದಿ: ಸಿಕ್ಸರ್, ಬೌಂಡರಿಗಳ ಸುರಿಮಳೆ – ಭಾರತಕ್ಕೆ ಅಂಧರ ವಿಶ್ವಕಪ್

    ಈ ಮಧ್ಯೆ ಪಿಎಸ್‍ಐ ಅಕ್ರಮ ಆರೋಪಿ, ಜಾಮೀನಿನ ಮೇಲೆ ಹೊರ ಬಂದಿರುವ ಮಹಾಂತೇಶ್ ಪಾಟೀಲ್‍ಗೆ ಕಾಂಗ್ರೆಸ್‍ನ ಮುಖಂಡ ಅಲ್ಲಮಪ್ರಭು ಪಾಟೀಲ್ ಸನ್ಮಾನ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಿಎಸ್‍ಐ ಹಗರಣ: ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ: ಬಸವರಾಜ ದಡೇಸಗೂರು

    ಪಿಎಸ್‍ಐ ಹಗರಣ: ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ: ಬಸವರಾಜ ದಡೇಸಗೂರು

    ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ ಎಂದು ಪಿಎಸ್‍ಐ ಹಗರಣದಲ್ಲಿ (PSI Recruitment Scam) ತಮ್ಮ ಹೆಸರು ಕೇಳಿಬರುತ್ತಿರುವ ಹಿನ್ನೆಲೆ ಶಾಸಕ ಬಸವರಾಜ ದಡೇಸೂಗೂರು (Basavaraj Dadesugur) ಸ್ಪಷ್ಟೀಕರಣ ನೀಡಿದ್ದಾರೆ.

    ವಿಧಾನಭೆಯಲ್ಲಿ ಮಳೆಗಾಲದ ಅಧಿವೇಶನ ಹಿನ್ನೆಲೆ ವಿಧಾನಸೌಧದ (Vidhana Soudha)  ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ತಪ್ಪು ಮಾಡಿಲ್ಲ, ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ. ಮಾಧ್ಯಮದಲ್ಲಿ ಬಂದಿರುವ ಆಡಿಯೋ 2020ರದ್ದು, ಈಗಿನದ್ದಲ್ಲ. ಪಿಎಸ್ಐ ಹಗರಣಕ್ಕೂ ಅದಕ್ಕೂ ಸಂಬಂಧ ಇಲ್ಲ. ನಮ್ಮ ಕ್ಷೇತ್ರದ ಮಾಜಿ ಶಾಸಕರು ನಾನು ಯಾವಾಗ್ಯಾವಗಲೋ ಮಾತಾಡಿರೋದನ್ನು ಕಟ್ ಮಾಡಿ ವೀಡಿಯೋ ಮಾಡಿದ್ದಾರೆ. ಎಡಿಟ್ ಮಾಡಿರುವ ಆಡಿಯೋ ಅದು. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

    ನಾನು ತಪ್ಪು ಮಾಡಿಲ್ಲ. ಆಡಿಯೋಗಳನ್ನು ಎಡಿಟ್ ಮಾಡಿ ಸುಳ್ಳು ಆರೋಪ ಹೊರಿಸಲಾಗಿದೆ. ರಾಜಕೀಯವಾಗಿ ದ್ವೇಷ ಸಾಧಿಸುತ್ತಿದ್ದಾರೆ. ಪಿಎಸ್‍ಐ ಕುರಿತಾಗಿ ಅಲ್ಲ. ನಾನು ಈ ಹಿಂದೆ ರಾಜಿ ಪಂಚಾಯಿತಿ ಸಂಬಂಧ ಮಾತನಾಡಿದ್ದೆ, ಅದು ಹಳೆಯ ಆಡಿಯೋ ಅದನ್ನು ಎಡಿಟ್ ಮಾಡಿ ಇದೀಗ ಹರಿಬಿಡಲಾಗಿದೆ. ನನ್ನ ಬಳಿ ಎಲ್ಲಾ ದಾಖಲೆಗಳಿವೆ. ನಿವೃತ್ತ ಪೊಲೀಸ್ ಕಾನ್ಸ್‌ಟೇಬಲ್ ಪರಸಪ್ಪನ ಮಗ ದೈಹಿಕ ಪರೀಕ್ಷೆಯಲ್ಲಿ ಪಾಸ್ ಆಗಿಲ್ಲ ಮತ್ತೆ ಹೇಗೆ ಪರೀಕ್ಷೆ ಬರೆಯಲು ಸಾಧ್ಯ? ನಾನು ದಾಖಲೆ ಸಮೇತ ಸದನಕ್ಕೆ ಬಂದಿದ್ದೇನೆ. ಸಿಡಿ ಕೂಡ ತಂದಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗುಂಡಿ ಮುಚ್ಚಲು ಕಟ್ಟಡ ತ್ಯಾಜ್ಯ ಬಳಸಿದ ಪಾಲಿಕೆ – BBMP ಕಳಪೆ ಕಾಮಗಾರಿಗೆ ಜನರ ಛೀಮಾರಿ

    ಪಿಎಸ್‍ಐ ಪ್ರಕರಣ ಸಂಬಂಧ ಕನಕಗಿರಿಯ ಬಿಜೆಪಿ ಶಾಸಕ ಬಸವರಾಜ ದಡೇಸೂಗೂರು ಅವರ ಆಡಿಯೋ ಈ ಹಿಂದೆ ವೈರಲ್ ಆಗಿತ್ತು. ಪಿಎಸ್‍ಐ ಮಾಡಿಸ್ತೀನಿ ಎಂದು 15 ಲಕ್ಷ ರೂಪಾಯಿ ಲಂಚ ಪಡೆದಿರುವ ಆರೋಪವನ್ನು ದಡೇಸೂಗೂರು ಎದುರಿಸುತ್ತಿದರು. ಪರಸಪ್ಪ ಎಂಬುವವರ ಮಗನ ನೇಮಕಾತಿಗೆ ಹಣ ಪಡೆದಿದ್ದನ್ನು, ಸರ್ಕಾರಕ್ಕೆ ಆ ಹಣ ತಲುಪಿಸಿದ್ದೇನೆ ಎಂಬುದನ್ನು ಶಾಸಕರು ಫೋನ್‌ ಸಂಭಾಷಣೆಯಲ್ಲಿ ಒಪ್ಪಿಕೊಂಡಿದ್ದ ಆಡಿಯೋ ವೈರಲ್ ಆಗಿತ್ತು.

    Live Tv
    [brid partner=56869869 player=32851 video=960834 autoplay=true]