Tag: ಪಿಎಸ್‍ಐ ಸಮವಸ್ತ್ರ

  • ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚೋದಿಲ್ಲ, ಆದರೆ ….. : ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?

    ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚೋದಿಲ್ಲ, ಆದರೆ ….. : ಸಚಿವ ಬಿ.ಸಿ.ನಾಗೇಶ್ ಹೇಳಿದ್ದೇನು?

    ಬೆಂಗಳೂರು: ರಾಜ್ಯದಲ್ಲಿರುವ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚುವುದಿಲ್ಲ. ಆದರೆ ಕಡಿಮೆ ಮಕ್ಕಳಿರುವ 2-3 ಶಾಲೆಗಳನ್ನು ಸಂಯೋಜಿಸಿ ನಡೆಸುತ್ತೇವೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

    ನಗರದ ಪರ್ತಕರ್ತರ ಭವನದಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ಮುಚ್ಚೋದಿಲ್ಲ. ಈಗ ಒಂದೇ ಒಂದು ಮಗು ಇದ್ದರೂ ಶಾಲೆ ನಡೆಸುತ್ತಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ದೂರು ಕೊಟ್ಟ ರಾಜಕುಮಾರ ನನ್ನ ಗಂಡ – ಕಾಂಗ್ರೆಸ್‌ ಕಾರ್ಯಕರ್ತೆ ನವ್ಯಶ್ರೀ

    ಸಾಂರ್ಭಿಕ ಚಿತ್ರ

    ರಾಜ್ಯದಲ್ಲಿ ಸುಮಾರು 48 ಸಾವಿರ ಸರ್ಕಾರಿ ಶಾಲೆಗಳಿವೆ. ಅದರಲ್ಲಿ 13 ಸಾವಿರಕ್ಕೂ ಹೆಚ್ಚು ಶಾಲೆಗಳಲ್ಲಿ 25 ಮಕ್ಕಳಿಗಿಂತ ಕಡಿಮೆ ಮಕ್ಕಳಿದ್ದಾರೆ. ಹೀಗಾಗಿ ಶಾಲೆ ಮುಚ್ಚದೇ ಅವುಗಳನ್ನು ಮಾದರಿ ಶಾಲೆ ಮಾಡಲು ತೀರ್ಮಾನಿಸಲಾಗಿದೆ. 709 ಸಿಂಗಲ್ ವಿಲೇಜ್ ಗ್ರಾಮ ಪಂಚಾಯತಿಗಳು ಇವೆ. ಕಡಿಮೆ ಇರುವ ಮಕ್ಕಳ 2-3 ಶಾಲೆಗಳನ್ನ ಒಂದು ಮಾಡಿ ಮಾದರಿ ಶಾಲೆ ಮಾಡ್ತೀವಿ ಅಂದಿದ್ದಾರೆ. ಅಲ್ಲದೆ, ಹೋಬಳಿ ಮಟ್ಟದಲ್ಲಿ ಮಾದರಿ ಶಾಲೆ ಪ್ರಾರಂಭಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಈ ವರ್ಷದಲ್ಲೆ ನೈತಿಕ ಶಿಕ್ಷಣ ಜಾರಿ ಮಾಡುತ್ತೇವೆ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರಾ ‘ಮೈನಾ’ ಹುಡುಗಿ ನಿತ್ಯಾ ಮೆನನ್?

    ಸಾಂರ್ಭಿಕ ಚಿತ್ರ

    ಶಿಕ್ಷಣ ಸಚಿವರ ಹತ್ತು ಹಲವು ಭರವಸೆಗಳು

    • 15 ಸಾವಿರ ಶಿಕ್ಷಕರ ನೇಮಕಕ್ಕೆ ಆದೇಶ ಹೊರಡಿಸಲಾಗಿದ್ದು, 2-3 ತಿಂಗಳ ಒಳಗೆ ನೇಮಕಾತಿ ಪ್ರಕ್ರಿಯೆ ಪೂರ್ಣ ಆಗಲಿದೆ. ನೇಮಕಾತಿ ಶಿಕ್ಷಕರನ್ನ ಗ್ರಾಮೀಣ ಭಾಗಕ್ಕೆ ನಿಯೋಜನೆ ಮಾಡ್ತೀವಿ.
    • ಈ ವರ್ಷ 7 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಇದೇ ತಿಂಗಳಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ.
    • 35 ಸಾವಿರ ಅತಿಥಿ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಅತಿಥಿ ಶಿಕ್ಷಕರ ಗೌರವ ಧನ ಹೆಚ್ಚಳ ಮಾಡಲಾಗಿದೆ.
    • ಕೊರೊನಾ ಸಮಯದಲ್ಲಿ ಆದ ಶೈಕ್ಷಣಿಕ ಕೊರತೆ ನೀಗಿಸಲು ಕಲಿಕಾ ಚೇತರಿಕೆ ಜಾರಿ ಮಾಡಿದ್ದೇವೆ.
    • ಸರ್ಕಾರಿ ಶಾಲೆಗಳಲ್ಲೇ ಸ್ಪೋಕನ್ ಇಂಗ್ಲೀಷ್ ಪ್ರಾರಂಭ ಮಾಡಲಾಗ್ತಿದೆ. ಶಾಸಕರ ನಿಧಿಯಿಂದ ಸರ್ಕಾರಿ ಶಾಲೆಗಳಿಗೆ ವಾಹನ ಖರೀದಿಗೆ ಆದೇಶ.
    • ಸಾರ್ವಜನಿಕ ಶಿಕ್ಷಣ ಇಲಾಖೆ ಹೆಸರನ್ನ `ಶಾಲಾ ಶಿಕ್ಷಣ ಇಲಾಖೆ’ ಅಂತ ಬದಲಾವಣೆ.
    • ಶಾಲೆಗಳ ಆಸ್ತಿ ರಕ್ಷಣೆಗೆ 3 ತಿಂಗಳು ಆಸ್ತಿ ರಕ್ಷಣೆ ಅಭಿಯಾನ ಪ್ರಾರಂಭ.
    • ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ಮೊಟ್ಟೆ, ಬಾಳೆಹಣ್ಣು ಮತ್ತು ಚಿಕ್ಕಿ ನೀಡಲು ತೀರ್ಮಾನ.
    • ಶೂ ಮತ್ತು ಸಾಕ್ಸ್ ಖರೀದಿಗೆ ಹಣ ಬಿಡುಗಡೆ. ಎಸ್‌ಡಿಎಂ ಗಳಿಗೆ ಶೂ, ಸಾಕ್ಸ್ ಖರೀದಿಗೆ ಅಧಿಕಾರ ನೀಡಲಾಗಿದೆ.
    • ಸಮವಸ್ತ್ರಕ್ಕೆ ಟೆಂಡರ್ ಕರೆಯಲಾಗಿದೆ. ಇನ್ನೊಂದು ತಿಂಗಳಲ್ಲಿ ಎರಡು ಜೊತೆ ಸಮವಸ್ತ್ರ ಮಕ್ಕಳಿಗೆ ಸಿಗಲಿದೆ.
    • ನನ್ನ ಶಾಲೆ ನನ್ನ ಕೊಡುಗೆ ಆಪ್ ಮೂಲಕ ದಾನಿಗಳ ಸಹಾಯದಿಂದ ಶಾಲೆಗಳ ಅಭಿವೃದ್ಧಿಗೆ ಕ್ರಮವಹಿಸಲಾಗಿದೆ.
    • ಈಗಾಗಲೇ ಶೇ.97 ಪಠ್ಯ ಮಕ್ಕಳಿಗೆ ತಲುಪಿದೆ. ತಪ್ಪಾಗಿರುವ ಪಠ್ಯ ತಿದ್ದುಪಡಿಗೆ ಆದೇಶ ನೀಡಲಾಗಿದೆ.
    • ವರ್ಗಾವಣೆ ನೀತಿ ಸರಳ ಮಾಡಿ ಪ್ರಕ್ರಿಯೆ ಮುಕ್ತಾಯ ಮಾಡಿದ್ದೇವೆ ಅಂತ ತಿಳಿಸಿದ್ರು.
    • ಎನ್‌ಇಪಿ- ಅನುಷ್ಠಾನಕ್ಕೆ ಕ್ರಮ ಆಗುತ್ತಿದೆ. 1,2,3 ನೇ ತರಗತಿಯಲ್ಲಿ ಅನುಷ್ಠಾನಕ್ಕೆ ಕ್ರಮವಹಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಪಿಎಸ್‌ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಯೂನಿಫಾರ್ಮ್‌ ಹಾಕ್ಕೊಂಡು ಬಿಲ್ಡಪ್‌

    ಪಿಎಸ್‌ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಯೂನಿಫಾರ್ಮ್‌ ಹಾಕ್ಕೊಂಡು ಬಿಲ್ಡಪ್‌

    ಹಾವೇರಿ: ಪಿಎಸ್‍ಐ ನೇಮಕಾತಿ ಆದೇಶ ಕೈ ಸೇರುವ ಮುನ್ನವೇ ಪಿಎಸ್‍ಐ(Police sub-Inspector) ಸಮವಸ್ತ್ರ ಹಾಕಿಕೊಂಡು ಪೇದೆಯೊಬ್ಬ ಬಿಲ್ಡಪ್‌ ಕೊಟ್ಟ ಘಟನೆ ಹಾವೇರಿ ತಾಲೂಕಿನ ಗುಡಸಲಕೊಪ್ಪ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬಸನಗೌಡ ಕರೇಗೌಡ ಪಿಎಸ್‍ಐ ಸಮವಸ್ತ್ರ ಹಾಕಿಕೊಂಡು ಬಿಲ್ಡ್‌ಪ್ ಕೊಟ್ಟಿದ್ದಾರೆ. ಜನವರಿ 19 ರಂದು ಬಿಡುಗಡೆಯಾಗಿದ್ದ ಪಿಎಸ್‍ಐ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಬಸನಗೌಡ 27ನೇ ರ‍್ಯಾಂಕ್‍ನಲ್ಲಿದ್ದರು ಎನ್ನಲಾಗಿದೆ. 545 ಪಿಎಸ್‍ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿಯಲ್ಲಿ ಸೆಲೆಕ್ಟ್ ಆಗಿದ್ದು, ಸದ್ಯ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್  ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

    ಪಿಎಸ್‍ಐ ಸೆಲೆಕ್ಷನ್ ಆಗಿದ್ದಕ್ಕೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಿಎಸ್‍ಐ ಡ್ರೆಸ್ ಹಾಕ್ಕೊಂಡು ಬಸನಗೌಡ ಭಾಗವಹಿಸಿ ಭಾಷಣ ಮಾಡಿದ್ದರು. ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಲಾಗಿದ್ದು, ವೈರಲ್ ಆಗಿದೆ. ಏಪ್ರಿಲ್ 20 ರಂದು ತನಿಖೆಗೆ ಹಾಜರಾಗುವಂತೆ ಸಿಐಡಿ ಸಹಾಯಕ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ. ಐವತ್ತು ಜನರಿಗೆ ನೀಡಿದ್ದ ನೋಟಿಸ್ ಪಟ್ಟಿಯಲ್ಲಿದ್ದ ಬಸನಗೌಡ ಕರೇಗೌಡ ಹೆಸರು ಸಹ ಇದೆ.

    ಅ.3 ರಂದು ಪಿಎಸ್‍ಐ ನೇಮಕಾತಿ ಪರೀಕ್ಷೆಯನ್ನು ಬಸನಗೌಡ ಬರೆದಿದ್ದರು. ಈಗ ಬೆಂಗಳೂರಿನಲ್ಲಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣದ ಪ್ರಮುಖ ಆರೋಪಿ ಅರೆಸ್ಟ್