Tag: ಪಿಎಸ್‍ಐ ನೇಮಕಾತಿ ಹಗರಣ

  • ಪಿಎಸ್‍ಐ ಹಗರಣ – ಎಡಿಜಿಪಿ ಅಮೃತ್ ಪೌಲ್‌ಗೆ ಮತ್ತೊಂದು ಸಂಕಷ್ಟ

    ಪಿಎಸ್‍ಐ ಹಗರಣ – ಎಡಿಜಿಪಿ ಅಮೃತ್ ಪೌಲ್‌ಗೆ ಮತ್ತೊಂದು ಸಂಕಷ್ಟ

    ಬೆಂಗಳೂರು: ಪಿಎಸ್‍ಐ ನೇಮಕಾತಿ ಹಗರಣ (PSI Scam) ಸಂಬಂಧ ಎಡಿಜಿಪಿ ಅಮೃತ್ ಪೌಲ್ (Amrit Paul) ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಸಿಕ್ಕಿದೆ.

    ಭ್ರಷ್ಟಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ಮಾಡಲು ಅವಕಾಶ ಇದೆ. ಆರೋಪಿ ವಿರುದ್ಧ ಚಾರ್ಜ್ ಫ್ರೇಮ್ ಮಾಡಲು ಅನುಮತಿ ನೀಡಲಾಗಿದೆ. ಈಗಾಗಲೇ ಅಮೃತ್ ಪೌಲ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಇದನ್ನೂ ಓದಿ: ಮುರುಘಾ ಮಠಕ್ಕೆ ಜಿಲ್ಲಾ ನ್ಯಾಯಾಧೀಶರನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ ಹೈಕೋರ್ಟ್

     

    ಅಮೃತ್ ಪೌಲ್ ಐಪಿಎಸ್ ಅಧಿಕಾರಿ ಆಗಿದ್ದ ಹಿನ್ನೆಲೆಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ಕಡ್ಡಾಯವಾಗಿತ್ತು. ಈಗ ಅನುಮತಿ ದೊರೆತಿದ್ದು, ಪಿಎಸ್‍ಐ ಹಗರಣದ ತನಿಖೆಯಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಂತಾಗಿದೆ. ಈ ಮೂಲಕ ಬಿಜೆಪಿ (BJP) ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಿಟ್‍ಕಾಯಿನ್ ಹಾಗೂ ಪಿಎಸ್‍ಐ ಹಗರಣಕ್ಕೆ ಒಂದೇ ದಿನ ಮರು ಜೀವ ಬಂದಂತಾಗಿದೆ.

    ಏನಿದು ಪ್ರಕರಣ?
    ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿತ್ತು. ಬಳಿಕ ತನಿಖೆಯ ವೇಳೆ ಪರೀಕ್ಷಾ ಕೇಂದ್ರಗಳನ್ನು ಬುಕ್ ಮಾಡಿಕೊಂಡು ಅಕ್ರಮ ಎಸಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಆಡಿಯೋ ಸಹ ವೈರಲ್ ಆಗಿತ್ತು. ಇದಾದ ಬಳಿಕ ಈ ನೇಮಕಾತಿಯನ್ನು ರದ್ದು ಮಾಡಲಾಗಿತ್ತು. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈಗಲೂ ಪ್ರಕರಣ ವಿಚಾರಣೆ ಹಂತದಲ್ಲಿದೆ. ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಸಚಿವರು ಹಾಗೂ ಅಧಿಕಾರಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಅಲ್ಲದೇ ಹಗರಣಕ್ಕೆ ಸಂಬಂಧಿಸಿದಂತೆ ಅಕ್ರಮ ಎಸಗಿರುವ 52 ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆ ನಡೆಸುವ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಡಿಬಾರ್ ಮಾಡಿ ಇತ್ತೀಚೆಗೆ ಆದೇಶಿಸಲಾಗಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಮರುತನಿಖೆಗೆ ಎಸ್‍ಐಟಿ ರಚನೆ – ನಾಳೆಯಿಂದಲೇ ತನಿಖೆಗೆ ಮರುಜೀವ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

    ಪಿಎಸ್‍ಐ ಅಕ್ರಮ ನೇಮಕಾತಿ ಪ್ರಕರಣ – ಸ್ಫೋಟಕ ಆಡಿಯೋ ಔಟ್

    ಕಲಬುರಗಿ: 545 ಪಿಎಸ್‍ಐ ಹುದ್ದೆಗಳ ನೋಟಿಫಿಕೇಶನ್ ಮುಗಿದಿದೆ. 402ರಲ್ಲಿ ಮಾಡೋಣ ಎಂಬ ಮಾತುಗಳ ಜೊತೆಗೆ ಪರೀಕ್ಷಾ ಕೇಂದ್ರವನ್ನೇ ಮೊದಲು ಬುಕ್ ಮಾಡಲು ಅರ್ಜಿ ಸಂಖ್ಯೆಯನ್ನು ಬೇಗನೇ ಕಳುಹಿಸಿ ಎಂಬ ಹಲವಾರು ಸಂಭಾಷಣೆಗಳನ್ನು ಹೊಂದಿರುವ ಸ್ಫೋಟಕ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು, ಪಿಎಸ್‍ಐ ನೇಮಕಾತಿಯ ಸಂಬಂಧ ಇಬ್ಬರು ಆರೋಪಿಗಳ ಸಂಭಾಷಣೆಯಿದೆ. ಇದರಲ್ಲಿ ಓರ್ವ ವ್ಯಕ್ತಿ ಪಿಎಸ್‍ಐ ಆಗಿ ಆಯ್ಕೆಯಾಗಿದ್ದಾನೆ. ಇನ್ನೋರ್ವ ವ್ಯಕ್ತಿ ಮಧ್ಯವರ್ತಿಯಾಗಿದ್ದಾನೆ. ಈ ಪ್ರಕರಣದಲ್ಲಿ ಮೇಲಿಂದ ಕೆಳಗಿನವರೆಗೂ ಭ್ರಷ್ಟಾಚಾರ ನಡೆದಿದೆ ಎಂದು ಕಿಡಿಕಾರಿದ್ದಾರೆ.

    priyank kharge

    ಈ ಆಡಿಯೋ ಮೂಲಕ ತಿಳಿಯುವುದೆನೆಂದರೆ, ಈ 545ರ ಅಕ್ರಮ ಜೊತೆ, ಜೊತೆಗೆ ಮುಂದಿನ 402 ಪೋಸ್ಟ್‌ಗಳನ್ನು ಸಹ ಬುಕ್ ಮಾಡಲಾಗಿದೆ. ಈ ಸಂಬಂಧ 371 ಜೆ ಸರಿಯಾಗಿ ಜಾರಿ ಆಗಿಲ್ಲ ಅಕ್ರಮ ನಡೆದಿದೆ ಎಂದು ಹೈದರಾಬಾದ್ ಕರ್ನಾಟಕದ ಅಭ್ಯರ್ಥಿಗಳು ಕೋರ್ಟ್‍ಗೆ ಹೋಗಿದ್ದಾರೆ. ಆದರೂ ಏನು ಆಗಲ್ಲ ಅಂತ ಆಯ್ಕೆಯಾದ ಪಿಎಸ್‍ಐ ಹೇಳುತ್ತಾನೆ. ಈ ಸರ್ಕಾರದಲ್ಲಿ ನಮ್ಮ ಭಾಗದವರ ಪರಿಸ್ಥಿತಿ ನೋಡಿ. ಈ ಪ್ರಕರಣದಲ್ಲಿ ಸರ್ಕಾರ, ಪರೀಕ್ಷಾ ಕೇಂದ್ರ, ಸಿಬ್ಬಂದಿ ಎಲ್ಲರೂ ಶಾಮಿಲಾಗಿದ್ದಾರೆ. ಅಭ್ಯರ್ಥಿಯ ಎಕ್ಸಾಂ ಸೆಂಟರ್ ಬುಕ್ ಮಾಡುವುದರಿಂದ ಹಿಡಿದು ಎಲ್ಲಾ ಕೂಡ ನೇಮಕಾತಿ ಪರೀಕ್ಷೆಯಲ್ಲಿ ಬುಕ್ ಆಗುತ್ತವೆ ಎಂದು ತಿಳಿಸಿದ್ದಾರೆ.

    ಪಿಎಸ್‍ಐ 545 ಪರೀಕ್ಷೆಗೂ ಮ್ಯಾಚ್ ಫಿಕ್ಸಿಂಗ್, ನಂತರ ಮುಂದೆ ನಡೆಯುವ 402 ಪಿಎಸ್‍ಐ ಪರೀಕ್ಷೆಗೂ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ. ಇಡೀ ಪ್ರಕರಣದ ಸಾಮಾನ್ಯ ಮಾಹಿತಿ ಕಣ್ಣ ಮುಂದೆಯೇ ಕಾಣುತ್ತಿದೆ. ಆದರೆ ತನಿಖಾ ಅಧಿಕಾರಿಗಳ ಮಾಹಿತಿ ಗೊತ್ತಿಲ್ಲವಾ? ಈ ಅಕ್ರಮದಲ್ಲಿ ನೇಮಕವಾದವರು ಶ್ರೀರಾಮ ಸೇನೆ, ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಈ ಜ್ಞಾನ ಜ್ಯೋತಿ ಶಾಲೆ ಪರೀಕ್ಷಾ ಕೇಂದ್ರ ನೀಡದಂತೆ ಹಿಂದಿನ ಡಿಡಿಪಿಐ ತಿರಸ್ಕರಿಸಿದರು. ಆದರೂ ಸಹ ರೆಕೆಮೆಂಡ್ ಮಾಡಿ ಸೆಂಟರ್ ನೀಡಿದ್ದು ಯಾರು? ಸಂಸದರು, ಶಾಸಕರು ಯಾಕೆ ಶಿಫಾರಸ್ಸು ಪತ್ರ ಕೊಟ್ಟರು. 545 ಜನ ಆಯ್ಕೆಯಾದವರಲ್ಲಿ, ಈಗಾಗಲೇ ಮುಂದಿನ 402 ಪಿಎಸ್‍ಐ ನೇಮಕಾತಿ ಡ್ಯೂಟಿ ಸಹ ನೀಡಲಾಗಿದೆ. ರಾಜೇಶ್ ಹಾಗರಗಿ ಅವರ ಜಾಮೀನು ತಿರಸ್ಕೃತಗೊಂಡಿದೆ. ದಿವ್ಯಾ ಸಹ ಬೆಲ್‍ಗೆ ಅರ್ಜಿ ಹಾಕಿದ್ದಾರೆ. ಲಾಯರ್ ಜೊತೆ ಲಿಂಕ್ ಇರುವ ದಿವ್ಯಾಳನ್ನು ಏಕೆ ಬಂಧಿಸುತ್ತಿಲ್ಲ. ನೇಮಕಾತಿಯಲ್ಲಿ ಎಡಿಜಿಪಿ ಹೆಸರು ಸಹ ಈ ಪ್ರಕರದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಅವರ ಮೇಲೆ ಕೂಡ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.

    57 ಸಾವಿರ ಯುವಕರ ನೌಕರಿಯ ಭವಿಷ್ಯವಿದೆ. ತನಿಖಾಧಿಕಾರಿ ಚೇಂಜ್ ಮಾಡುವುದು ಸರಿಯಲ್ಲ. ಈ ಪರೀಕ್ಷೆಯಲ್ಲಿ ಸಾಕಷ್ಟು ಜನ ಅಕ್ರಮದಿಂದ ನೇಮಕವಾಗಿದ್ದಾರೆ. ಹೀಗಾಗಿ ಈ ಪರೀಕ್ಷೆ ಬಗ್ಗೆ ಸರ್ಕಾರ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಈ ಆಡಿಯೋದಲ್ಲಿರುವ ಓರ್ವ ವ್ಯಕ್ತಿ ಯಾರು ಅಂತ ನನಗೆ ಗೊತ್ತಿದೆ. ನನಗೆ ಸಿಕ್ಕ ಆಡಿಯೋ ಪೊಲೀಸರಿಗೆ ಸಿಗಲ್ವಾ ಎಂದು ಪ್ರಶ್ನಿಸಿದ್ದಾರೆ.

    ಈ ಆಡಿಯೋದಲ್ಲಿ ಆಯ್ಕೆಯಾದವರು ನಾನು ಎಚ್.ಕೆ ಭಾಗದವರು ಸಿಂದಗಿಯಲ್ಲಿ ಇದ್ದಿನಿ ಅಂತ ಹೇಳಿದ್ದಾರೆ. ಅಕ್ರಮದಲ್ಲಿ ಭಾಗಿಯಾದ ಮಹಾಂತೇಷ್ ಪಾಟೀಲ್ 2019ರಲ್ಲಿ ರಾಜೀನಾಮೆ ನೀಡಿದ್ದಾರೆ.
    ಹಗರಣದಲ್ಲಿ ದಿವ್ಯಾ-ಮಹಾಂತೇಷ ಯಾರೇ ಆಗಿರಲಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

    ಆಡಿಯೋದಲ್ಲಿ ಏನಿದೆ?
    ವ್ಯಕ್ತಿ-1 ನಮಸ್ಕಾರ್ರಿ ಸರ
    ವ್ಯಕ್ತಿ-2 ನಮಸ್ಕಾರ್ ಪಿಎಸ್‍ಐ ಸಾಬ್ರಿಗೆ

    ವ್ಯಕ್ತಿ-1 ಹೈದ್ರಾಬಾದ್-ಕರ್ನಾಟಕದ ಪ್ರದೇಶದವರು ಕೋರ್ಟಿಗೆ ಹೋಗಿದಾರಂತೆ?
    ವ್ಯಕ್ತಿ-2 ವರ್ಷಾ ಇದ್ದುದ್ದೇ.. ಅದೆನ್ ಆಗೋಲ್ಲ

    ವ್ಯಕ್ತಿ-1 2004 ರ ಕೆಎಎಸ್‍ನಲ್ಲಿ ಆದಂತೆ ಮತ್ತೆನಾದರೂ
    ವ್ಯಕ್ತಿ-2 ಏನು ಆಗೋಲ್ಲ. ಎಲ್ಲಿ ಎಲ್ಲಾ ದೊಡ್ಡವರಿದ್ದಾರೆ ಜಾಸ್ತಿಯಿದಾರೆ. ದೊಡ್ಡವರೇ ಶಾಮೀಲಾಗಿದಾದ್ದಾರೆ. ಗೌಡ್ರೆ ನಮ್ಮವರು ಒಬ್ರಿದಾರೆ. ದುಡ್ಡು ಸಾಕಷ್ಟಿದೆ

    ವ್ಯಕ್ತಿ-1 ಈ ಸರ್ತಿ ಆಗೋಲ್ಲ, 402 ಗೆ ಹಾಕಿ. ಬೇಗ ಆಪ್ಲಿಕೇಶನ್ ನಂಬರ್ ವಾಟ್ಸಪ್ ಮಾಡ್ಲಿಕ್ಕೆ ಹೇಳಿ, ಬೇರೆ ನಂಬರ್‍ನಿಂದ ಮಾಡಲಿ. ಸೆಂಟರ್ ಹಾಕಿಸಿಕೊಂಡು ಬರಬೇಕು.
    ವ್ಯಕ್ತಿ-2 ಮುಂದಿನ ಪ್ರೋಸಿಜರ್ ಹೇಳ್ತೆನೆ, ಆಪ್ಲಿಕೇಶನ್ ನಂಬರ್‌ನಲ್ಲಿ ಹಾಕಿದ್ದ ಮೊಬೈಲ್ ನಂಬರ್ ಬಿಟ್ಟು ಬೇರೆ ನಂಬರ್‌ನಿಂದ ಆಪ್ಲಿಕೇಶನ್ ನಂಬರ್‌ನಿಂದ ಅಪ್ಲಿಕೇಶನ್ ನಂಬರ್ ಕಳುಹಿಸಲು ಹೇಳಿ

    ವ್ಯಕ್ತಿ-1 ಆಯ್ತು..