Tag: ಪಿಎಸ್‌ಐ ಅಕ್ರಮ ನೇಮಕಾತಿ

  • ಪಿಎಸ್‍ಐ ಹಗರಣದಲ್ಲಿ ಕೇವಲ 18-20 ಹುಡುಗರನ್ನ ಅರೆಸ್ಟ್ ಮಾಡಿದ್ರೆ ಸಾಲೋದಿಲ್ಲ: ಡಿಕೆಶಿ

    ಪಿಎಸ್‍ಐ ಹಗರಣದಲ್ಲಿ ಕೇವಲ 18-20 ಹುಡುಗರನ್ನ ಅರೆಸ್ಟ್ ಮಾಡಿದ್ರೆ ಸಾಲೋದಿಲ್ಲ: ಡಿಕೆಶಿ

    ರಾಮನಗರ: ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಕೇವಲ 18 – 20 ಜನ ಹುಡುಗರನ್ನ ಅರೆಸ್ಟ್ ಮಾಡಿದರೆ ಸಾಲುವುದಿಲ್ಲ, ನಮಗೂ ಎಲ್ಲಾ ವಿಚಾರ ಗೊತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

    ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಮಾಗಡಿಯ ದರ್ಶನ್ ಗೌಡ ಇಂದು ಅರೆಸ್ಟ್ ಆಗಿರುವ ವಿಚಾರವಾಗಿ ಕನಕಪುರದ ಯಡಮಾರನಹಳ್ಳಿ ಗ್ರಾಮದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ನನಗೆ ಏನು ಸತ್ಯ ಗೊತ್ತಿತ್ತು ಅದರ ಆಧಾರದ ಮೇಲೆ ಹೇಳಿದ್ದೆ. ಅವತ್ತು ಸಿಐಡಿಯವರು ಕರೆದುಕೊಂಡು ಹೋಗಿದ್ದರು, ಮತ್ತೆ ಕಳುಹಿಸಿದ್ದರು. ವಿಚಾರಣೆ ಮಾಡದೇ ಹೇಗೆ ಹೇಳಲು ಸಾಧ್ಯ? ಫೋನ್ ಯಾರು ಮಾಡಿದ್ದರು? ಯಾಕೆ ಮಾಡಿದ್ದರು ಎಂಬುದು ಹೇಳಿರಲಿಲ್ಲ. ಬಹಳ ಅಬ್ಬರದಿಂದ ಸರ್ಕಾರದವರು, ಮಂತ್ರಿಗಳು ಮಾತನಾಡುತ್ತಿದ್ದರು. ಈಗ ಕರೆದುಕೊಂಡು ಹೋಗಿದ್ದಾರೆ. ನಮಗೆ ಎಲ್ಲಾ ಗೊತ್ತಿತ್ತು. ನಮ್ಮ ಜಿಲ್ಲೆಯಲ್ಲಿ ಎಷ್ಟು ಜನ ಪಾಸಾಗಿದ್ದಾರೆ ಎನ್ನುವುದನ್ನು ಮುಚ್ಚಿ ಹಾಕುವುದಕ್ಕೆ ಏನೇನು ಪ್ರಯತ್ನ ಮಾಡಿದ್ದರು. ಈಗ ಕರೆದುಕೊಂಡು ಹೋಗಿ ಎಫ್‍ಐಆರ್ ದಾಖಲಿಸಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಹಗರಣ – ಆರೋಪಿ ದರ್ಶನ್ ಗೌಡ ಅರೆಸ್ಟ್

    ಪಾಪ ಆ ಹುಡುಗರು ಬಾಳೆಹಣ್ಣು ತಿನ್ನುವುದಕ್ಕೆ ಬಂದವರು, ಅಂಗಡಿ ಓಪನ್ ಇದ್ದರೆ ವ್ಯಾಪಾರಕ್ಕೆ ಬರುತ್ತಾರೆ. ಇದರಲ್ಲಿ ಯಾವ ರಾಜಕಾರಣಿ, ಆಫೀಸರ್ ಇದ್ದರೂ ಹೊರ ತರಬೇಕು. ಬರೀ 18 – 20 ಜನ ಹುಡುಗರನ್ನ ಅರೆಸ್ಟ್ ಮಾಡಿದರೆ ಸಾಲುವುದಿಲ್ಲ. ನಮಗೂ ಎಲ್ಲಾ ವಿಚಾರ ಗೊತ್ತಿದೆ. ಒಬ್ಬನಿಗೆ ಪ್ರತ್ಯೇಕವಾಗಿ ಇನ್ ಸರ್ವೀಸ್ ಆರ್ಡರ್ ಮಾಡಿದ್ದಾರೆ ಎಂಬುದು ಗೊತ್ತಿದೆ. ಬಹಳ ದೊಡ್ಡ ಭ್ರಷ್ಟಾಚಾರದ ಕೂಪ ಕರ್ನಾಟಕದಲ್ಲಿದೆ. ಇದರ ವಿರುದ್ಧ ಅಲ್ಲ. ಎಲ್ಲಾ ನೇಮಕಾತಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ನಮ್ಮ ಹೋರಾಟ ನಡೆಯಲಿದೆ. ನನ್ನ ಹೋರಾಟ ಇದೊಂದೇ ಅಲ್ಲ, ಎಲ್ಲಾ ನಿರುದ್ಯೋಗ ಯುವಕರ ಹಿತದೃಷ್ಟಿಯಿಂದ ನಾನು ಹೋರಾಟ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ದೇಶಕ್ಕೆ RSS-BJP ಕೊಡುಗೆ ಏನು, ತಾಕತ್ತಿದ್ರೆ ಚರ್ಚೆಗೆ ಬನ್ನಿ: ಉಗ್ರಪ್ಪ ಸವಾಲ್

    ಡಿ.ಕೆ.ಶಿವಕುಮಾರ್ ಭ್ರಷ್ಟಾಚಾರದ ಬ್ರಾಂಡ್ ಎಂಬ ಅಶ್ವಥ್ ನಾರಾಯಣ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರ ಮಾಡಿರುವವರ ಬಗ್ಗೆ ತನಿಖೆ ಮಾಡಲು ಹೇಳಿ. ನೇಮಕಾತಿ ಅಥವಾ ಅರ್ಕಾವತಿ ವಿಷಯದಲ್ಲಿ ಹಗರಣ ಮಾಡಿದರೆ ತನಿಖೆ ಮಾಡಲಿ. ಅವರ ಬಳಿ ಇನ್ನೂ ಅಧಿಕಾರ ಇದೆ. ತನಿಖೆ ಮಾಡಲು ಇಲ್ಲಿ ಯಾರೂ ಬೇಡ ಎನ್ನುವುದಿಲ್ಲ. ಇಲ್ಲಿ ಜನ ಯಾರ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಎಲ್ಲಾ ಸಾಕ್ಷಿ ಕಣ್ಣಲ್ಲೇ ಸಿಗುತ್ತದೆ ಎಂದು ಟಾಂಗ್ ನೀಡಿದ್ದಾರೆ.

  • PSI ಅಕ್ರಮ ನೇಮಕಾತಿಯಲ್ಲಿ ಗೃಹ ಸಚಿವರ ಪಾತ್ರವಿದೆ: ದಿನೇಶ್ ಗುಂಡೂರಾವ್

    PSI ಅಕ್ರಮ ನೇಮಕಾತಿಯಲ್ಲಿ ಗೃಹ ಸಚಿವರ ಪಾತ್ರವಿದೆ: ದಿನೇಶ್ ಗುಂಡೂರಾವ್

    ಬೆಂಗಳೂರು: ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇರ ಪಾತ್ರವಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಗೃಹ ಸಚಿವ ಆರಗ ಜ್ಞಾನೇಂದ್ರ 545 ಪಿಎಸ್‍ಐ ನೇಮಕಾತಿಯಲ್ಲಿ ಅಕ್ರಮವೇ ನಡೆದಿಲ್ಲ ಎಂದಿದ್ದರು. ಈಗ ಸರ್ಕಾರ ಇಡೀ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಪಡಿಸಿ ಮರು ಪರೀಕ್ಷೆಗೆ ಮುಂದಾಗಿದೆ. ಸರ್ಕಾರ ಮರು ಪರೀಕ್ಷೆಗೆ ಮುಂದಾಗಿರುವುದು ಡ್ಯಾಮೇಜ್ ಕಂಟ್ರೋಲರ್ ತಂತ್ರವಷ್ಟೆ. ಆದರೆ ಗೃಹ ಸಚಿವರ ಪಾತ್ರವಿಲ್ಲದೇ ಪಿಎಸ್‍ಐ ಅಕ್ರಮ ನೇಮಕಾತಿ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಪರೀಕ್ಷೆಗೆ ಹಿಜಬ್ ಧರಿಸಿ ಬಂದ ಡಿಗ್ರಿ ವಿದ್ಯಾರ್ಥಿನಿಗೆ ಅನುಮತಿ ನಿರಾಕರಣೆ

    ಪಿಎಸ್‍ಐ ಅಕ್ರಮ ನೇಮಕಾತಿಯಲ್ಲಿ ಗೃಹ ಸಚಿವರ ನೇರ ಪಾತ್ರವಿದೆ. ಪ್ರಕರಣದ ಕಿಂಗ್‍ಪಿನ್ ಬಂಧಿತೆ ದಿವ್ಯಾ ಹಾಗರಗಿ ಮನೆಗೆ ಜ್ಞಾನೇಂದ್ರರವರು ಡೀಲಿಂಗ್ ಮಾಡಲು ಹೋಗಿದ್ದು ಸತ್ಯವಲ್ಲವೆ? ಪ್ರಕರಣದ ಬಗ್ಗೆ ಮಾಹಿತಿ ಕೊಡುವವರಿಗೆ ನೋಟಿಸ್ ಕೊಡುವ ಸಿಐಡಿ ಜ್ಞಾನೇಂದ್ರರ ವಿಚಾರಣೆಯನ್ನು ಇನ್ನೂ ಯಾಕೆ ನಡೆಸಿಲ್ಲ? ಸಿಐಡಿ ಯಾರನ್ನು ರಕ್ಷಿಸುತ್ತಿದೆ ಎಂದು ಪ್ರಶ್ನಿಸುವ ಮೂಲಕ ಕಿಡಿಕಾರಿದ್ದಾರೆ. ಇದನ್ನೂ ಓದಿ: ಊಟ ನಿರಾಕರಣೆ, ಎಸಿ ಇಲ್ದೆ ನಿದ್ರೆ ಇಲ್ಲ – PSI ಅಕ್ರಮದಲ್ಲಿ ಅರೆಸ್ಟ್ ಆದ ದಿವ್ಯಾ ಹಾಗರಗಿ ಹೈಡ್ರಾಮಾ

    ಪಿಎಸ್‍ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಸಾಥ್ ನೀಡಿರುವ ಆರೋಪದಡಿ ಬಿಜೆಪಿ ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ದಿವ್ಯಾ ಹಾಗರಗಿಯನ್ನು ಶುಕ್ರವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದರು. ಸದ್ಯ 11 ದಿನಗಳ ಕಾಲ ದಿವ್ಯಾ ಹಾಗರಗಿಯನ್ನು ನ್ಯಾಯಾಲಯ ಸಿಐಡಿ ಕಸ್ಟಡಿಗೆ ನೀಡಿದೆ.

  • ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡೋದು ಅನಿರ್ವಾಯ : ಹಾಲಪ್ಪ ಆಚಾರ್

    ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡೋದು ಅನಿರ್ವಾಯ : ಹಾಲಪ್ಪ ಆಚಾರ್

    ಬೀದರ್: ಕೊರೋನಾ ಸಂಖ್ಯೆ ಹೆಚ್ಚಾದ್ರೆ ಕೊರೊನಾ ನಿಯಂತ್ರಣಕ್ಕೆ ಟಫ್ ರೂಲ್ಸ್ ಜಾರಿ ಮಾಡೋದು ಅನಿರ್ವಾಯ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ಟಫ್ ರೂಲ್ಸ್ ಸುಳಿವು ನೀಡಿದ್ದಾರೆ.

    corona

    ಪ್ರಗತಿ ಪರಿಶೀಲನಾ ಸಭೆ ಬಳಿಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಜೀವ ರಕ್ಷಣೆ ಮಾಡೋದು ನಮ್ಮ ಜವಾಬ್ದಾರಿಯಾಗಿದ್ದು ಆ ಜವಾಬ್ದಾರಿ ನಿರ್ವಹಿಸುವ ಸಮಯದಲ್ಲಿ ಅನಿವಾರ್ಯತೆ ಬಂದರೆ ಟಫ್ ರೂಲ್ಸ್ ಜಾರಿ ಮಾಡುತ್ತೆವೆ ಎಂದರು. ಇದನ್ನೂ ಓದಿ: ಕಾನೂನು ಬಾಹಿರ ಚಟುವಟಿಕೆ ಮಾಡಿದವರನ್ನು ಕ್ಷಮಿಸಲು ಸಾಧ್ಯವಿಲ್ಲ: ಹಾಲಪ್ಪ ಆಚಾರ್

    ಸದ್ಯ ಕೊರೊನಾ ಹೋಗಿದೆ ಎಂದು ಜನ ಕೊರೊನಾವನ್ನು ಮರೆತೇ ಬಿಟ್ಟಿದ್ದು ವಿಶ್ವದಲ್ಲಿ ಹಾಗೂ ದೇಶದಲ್ಲಿ ಕೊರೊನಾ ಹೆಚ್ಚಳವಾಗುತ್ತಿರುವ ವಿದ್ಯಮಾನಗಳನ್ನು ನಾವು ನೋಡುತ್ತಿದ್ದು ಚೀನಾ 4ನೇ ಅಲೆಗೆ ಸಿಲುಕಿ ಹೇಗೆ ಒದ್ದಾಡುತ್ತಿದೆ ಎಂದು ನೀವು ನೋಡುತ್ತಿದ್ದೀರಿ ಎಂದು ಎಚ್ಚರಿಕೆ ನೀಡಿದರು.

    CORONA-VIRUS.

    ನಮ್ಮಲ್ಲಿ ಕೂಡಾ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ದ್ವಿಗುಣವಾಗುತ್ತಿದ್ದು, ಇದನ್ನು ನಿಯಂತ್ರಣ ಮಾಡೋದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಸರ್ಕಾರ ಪ್ರಾಥಮಿಕ ಹಂತವಾಗಿ ಮಾಸ್ಕ್ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ ಎಂದರು. ಇದನ್ನೂ ಓದಿ: ಪಿಎಸ್‌ಐ ನೇಮಕಾತಿ ಅಕ್ರಮ – ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್ ಎತ್ತಂಗಡಿ

    ಇನ್ನೂ ಪಿಎಸ್‍ಐ ಅಕ್ರಮ ನೇಮಕಾತಿಯ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ನಾಪತ್ತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ದಿವ್ಯ ಹಾಗರಗಿ ಎಷ್ಟು ದಿನ ತಪ್ಪಿಸಿಕೊಳ್ಳೊಕೆ ಆಗುತ್ತೆ? ಭೂಮಿ ಒಳಗಡೆ ಶಾಶ್ವತವಾಗಿ ಅಲ್ಲೆ ಇರೋಕೆ ಆಗುತ್ತಾ? ಇಂದಿನ ಅಡ್ವಾನ್ಸ್ ಯುಗದಲ್ಲಿ ಮೊಬೈಲ್ ಟ್ರಾಕ್ ಮಾಡಿ ಹಿಡಿಯುತ್ತಾರೆ ಎಂದು ಹೇಳಿದರು.

  • PSI ಅಕ್ರಮ ಪ್ರಕರಣದಲ್ಲಿ ಸಿಎಂಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿಲ್ಲ ಯಾಕೆ: ಪ್ರಿಯಾಂಕ್‌ ಖರ್ಗೆ ಪ್ರಶ್ನೆ

    PSI ಅಕ್ರಮ ಪ್ರಕರಣದಲ್ಲಿ ಸಿಎಂಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆದಿಲ್ಲ ಯಾಕೆ: ಪ್ರಿಯಾಂಕ್‌ ಖರ್ಗೆ ಪ್ರಶ್ನೆ

    ಬೆಂಗಳೂರು: ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ಪ್ರಕರಣದಲ್ಲಿ ಅಂದಿನ ಗೃಹ ಸಚಿವರು ಹಾಗೂ ಪರೀಕ್ಷಾ ಪ್ರಕ್ರಿಯೆಯ ಮುಖ್ಯಸ್ಥರಾದ ಇಂದಿನ ಸಿಎಂಗೆ ಯಾಕೆ ನೋಟಿಸ್ ನೀಡಿಲ್ಲ. ಯಾಕೆ ಅವರನ್ನು ತನಿಖೆಗೆ ಒಳಪಡಿಸಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ.

    ʻಪಬ್ಲಿಕ್ ಟಿವಿʼಗೆ ಹೇಳಿಕೆ ನೀಡಿದ ಅವರು, ಪಿಎಸ್ಐ ಅಕ್ರಮ ಪ್ರಕರಣದಲ್ಲಿ ನಾನು ಆರೋಪಿಯಲ್ಲ, ಸಾಕ್ಷಿ ಕೂಡ ಅಲ್ಲ. ಆದರೂ ನನಗೆ ನೋಟಿಸ್ ಕೊಟ್ಟಿದ್ದಾರೆ. ಯಾವ ರೂಲ್ ಅಡಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ ಅನ್ನೋದು ಅವರಿಗೂ ಗೊತ್ತಿಲ್ಲ. ನಾನು ಲಿಖಿತ ರೂಪದಲ್ಲಿ ಇಂದು ಪ್ರತಿಕ್ರಿಯೆ ಕೊಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ರೇವಣ್ಣನಿಗೆ ಶಿಕ್ಷಣ ಅಂದರೆ ಏನು ಅಂತ ಗೊತ್ತಿಲ್ಲ: ಅಶ್ವತ್ಥ್ ನಾರಾಯಣ್

    ನನ್ನ ಪ್ರಶ್ನೆ, ನನ್ನ ಮಾಧ್ಯಮ ಹೇಳಿಕೆಗೆ ನೋಟಿಸ್ ಬರುತ್ತೆ. ಆದರೆ ಸಚಿವರಾದ ಪ್ರಭು ಚೌಹಾಣ್ ಮೊದಲೇ ಪತ್ರ ಬರೆದಿದ್ದಾರೆ. ಅವರಿಗೆ ನೋಟಿಸ್ ಕೊಟ್ಟಿಲ್ಲ. ಸಂಕನೂರು ಪತ್ರ ಬರೆದಿದ್ದಾರೆ ಅವರನ್ನೂ ವಿಚಾರಣೆಗೆ ಕರೆದಿಲ್ಲ. ಪ್ರಮುಖ ಪ್ರಶ್ನೆ ದಿವ್ಯ ಹಾಗರಗಿ ಬಂಧನ ಯಾಕಿನ್ನೂ ಆಗಿಲ್ಲ? ಗೃಹ ಸಚಿವರೇ ರಕ್ಷಣೆ ನೀಡ್ತಿದಾರಾ? ಇಡಿ ಸರ್ಕಾರವೇ ದಿವ್ಯ ಹಾಗರಗಿ ರಕ್ಷಣೆಗೆ ನಿಂತಂತಿದೆ ಎಂದು ಆರೋಪಿಸಿದ್ದಾರೆ.

    ಅಂದಿನ ನೇಮಕಾತಿ ಪ್ರಕ್ರಿಯೆಯ ಪ್ರಮುಖರಾಗಿದ್ದವರು ಈಗಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ, ವಿಚಾರಣೆಗೆ ಕರೆದಿಲ್ಲಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಶಾಲೆಗಳನ್ನ ಕ್ಲೋಸ್ ಮಾಡಲ್ಲ: ಬಿ.ಸಿ ನಾಗೇಶ್

    ನಾನು ಮಾಧ್ಯಮ ಹೇಳಿಕೆ ಕೊಟ್ಟು ಆಡಿಯೋ ಬಿಡುಗಡೆ ಮಾಡಿದ ನಂತರ ನನ್ನ ಟ್ಟಿಟ್ಟರ್ ಅಕೌಂಟ್ ಹ್ಯಾಕ್ ಆಗುತ್ತೆ. ನನಗೆ ಬೆದರಿಕೆ ಕರೆ ಬರುತ್ತೆ. ಇದೆಲ್ಲಾ ನೋಡಿದರೆ ವ್ಯವಸ್ಥಿತವಾಗಿ ಹೆದರಿಸುವ ಕೆಲಸ ಮಾಡಲಾಗುತ್ತಿದೆ ಎನ್ನಿಸುತ್ತೆ. ಹಿಂದೆ ಬೆದರಿಕೆ ಕರೆ ಬಂದಾಗಲೇ ಪೊಲೀಸ್ ದೂರು ಕೊಟ್ಟಿದ್ದೇವೆ. ಆಗಲೇ ಸರಿಯಾಗಿ ತನಿಖೆ ನಡೆಯಲಿಲ್ಲ‌. ಪೊಲೀಸರು ಇದು ಅಂತಾರಾಷ್ಟ್ರೀಯ ಕರೆ, ತನಿಖೆ ಮಾಡುವುದಕ್ಕೆ ಆಗಲ್ಲ ಅಂದಿದ್ದರು. ಅದಕ್ಕೆ ಈಗ ದೂರು ಕೊಡೋಕೆ ಹೋಗಿಲ್ಲ ಎಂದು ಖರ್ಗೆ ಹೇಳಿದ್ದಾರೆ.