Tag: ಪಿಎಫ್‍ಐ

  • ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ನಿರಂತರ ತುಷ್ಟೀಕರಣ ನೀಡುತ್ತಿದೆ: ಅಮಿತ್ ಶಾ

    ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ನಿರಂತರ ತುಷ್ಟೀಕರಣ ನೀಡುತ್ತಿದೆ: ಅಮಿತ್ ಶಾ

    ಬೆಳಗಾವಿ: ಕಾಂಗ್ರೆಸ್‌ನವರು (Congress) ಮುಸ್ಲಿಮರಿಗೆ ಶೇ.6ರಷ್ಟು ಮೀಸಲಾತಿ ಕೊಡುತ್ತೇವೆ ಎನ್ನುತ್ತಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕೆ ಕಾಂಗ್ರೆಸ್ ನಿರಂತರ ತುಷ್ಟೀಕರಣ ನೀಡುತ್ತಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

    ಸವದತ್ತಿಯಲ್ಲಿ (Savadatti) ನಡೆದ ಬಿಜೆಪಿ (BJP) ಚುನಾವಣಾ (Election) ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚುನಾವಣೆ ಬಂದಾಗ ಮಾತ್ರ ಕಾಂಗ್ರೆಸ್‌ಗೆ ಮರಾಠರ ನೆನಪಾಗುತ್ತದೆ. ಆದರೆ ಬಿಜೆಪಿ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಸಂವಿಧಾನ ಬಾಹಿರವಾಗಿ ಮುಸ್ಲೀಮರ ಶೇ.4ರಷ್ಟು ಮೀಸಲಾತಿಯನ್ನು ಕಾಂಗ್ರೆಸ್ ನೀಡಿತ್ತು. ಇದನ್ನು ತೆಗೆದು ಲಿಂಗಾಯತರಿಗೆ ಮೀಸಲಾತಿ ನೀಡಲಾಗಿದೆ ಎಂದರು. ಇದನ್ನೂ ಓದಿ: ಬಜರಂಗಬಲಿ ಕೀ ಜೈ ಎಂದಿರೋ ಹೆಬ್ಬಾಳ್ಕರ್ ವೀಡಿಯೋ ವೈರಲ್

    ರೈತ ಸಮ್ಮಾನ್ ಯೋಜನೆಗೆ ರೈತರ ಪಟ್ಟಿ ಕೊಡುವಲ್ಲಿಯೂ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಹಿಂದೇಟು ಹಾಕಿತ್ತು. ಬಿಜೆಪಿ ಭದ್ರಾ ಮತ್ತು ಕೃಷ್ಣ ಮೇಲ್ದಂಡೆ ಯೋಜನೆಗೆ ಅನುಮೋದನೆ ನೀಡಿದೆ. ಮೂರು ವರ್ಷಗಳಲ್ಲಿ ರೈತರಿಗೆ ವರ್ಷಕ್ಕೆ ಎರಡು ಬೆಳೆ ತೆಗೆಯುವಷ್ಟು ನೀರು ಕೊಡಲಾಗುವುದು. ಎಥನಾಲ್ ಯೋಜನೆ ಅನುಷ್ಠಾನ ಮಾಡಿ ರೈತರಿಗೆ ಅನುಕೂಲ ಮಾಡಿದೆ. ಉತ್ತರ ಕರ್ನಾಟಕದ ರೈತರ ಜೊತೆಗೆ ನರೇಂದ್ರ ಮೋದಿ (Narendra Modi) ಬೆಟ್ಟದಂತೆ ನಿಂತಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ ಚುನಾವಣೆ – ಡಿಜಿಟಲ್‌ ಮೀಡಿಯಾ ಹವಾ ಹೇಗಿದೆ?

    ಕಾಂಗ್ರೆಸ್ ನಾಯಕರೇ ಕಿವಿಯೊಡ್ಡಿ ಕೇಳಿ. ನಿಮ್ಮ ಸರ್ಕಾರ ಅಧಿಕಾರಕ್ಕೆ ಬರುವುದಿಲ್ಲ. ಯಾರ ಮೀಸಲಾತಿ ತೆಗೆಯುತ್ತೀರಿ ಎಂದು ಹೇಳಿ. ನೀವು ಅಧಿಕಾರಕ್ಕೆ ಬರಲ್ಲ, ಲಿಂಗಾಯತ ಮೀಸಲಾತಿ ತೆಗೆಯಲು ಸಾಧ್ಯವಿಲ್ಲ. ಪ್ರಭು ಶ್ರೀರಾಮನನ್ನು ಕಾಂಗ್ರೆಸ್‌ನವರು ಬಂಧಿಸಿ ಇಟ್ಟಿದ್ದರು. 2024ರಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ. ಬಜರಂಗದಳ (Bajarang Dal) ನಿಷೇಧ ಮಾಡುವ ಮಾತನ್ನು ಕಾಂಗ್ರೆಸ್ ಆಡಿದೆ. ಹನುಮಾನ್ ಜನ್ಮದಿನದ ಬಗ್ಗೆ ದಾಖಲೆ ಕೇಳಿ ಕಾಂಗ್ರೆಸ್ ನಾಯಕರು ಅಪಮಾನ ಮಾಡಿದ್ದಾರೆ. ಇಡೀ ದೇಶಕ್ಕೆ ಹನುಮಾನ್ ಜಯಂತಿ ಯಾವಾಗ ಎಂದು ಗೊತ್ತು. ದೇಶ ವಿರೋಧಿ ಕೆಲಸ ಮಾಡುವವರನ್ನು ಜೈಲಿನ ಕಂಬಿಯ ಹಿಂದೆ ಕಳುಹಿಸಲಾಗುವುದು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಕಾಂಗ್ರೆಸ್ ಮುಸ್ಲಿಂ ಪಾರ್ಟಿ, ಕಾಂಗ್ರೆಸ್‌ನಲ್ಲಿ ಅರ್ಧಂಬರ್ಧ ಹಿಂದೂಗಳಿದ್ದಾರೆ: ಯತ್ನಾಳ್

    ಪಿಎಫ್‌ಐ (PFI) ನಿಷೇಧ ಮಾಡಿದ್ದು ನಮ್ಮ ಸರ್ಕಾರ. ಪಿಎಫ್‌ಐ ಏಜೆಂಟ್ ರೀತಿಯಲ್ಲಿ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಬಸವಣ್ಣನ ಸಿದ್ಧಾಂತದ ಮೇಲೆ ಕೆಲಸ ಮಾಡುವವರಿಗೆ ಕಾಂಗ್ರೆಸ್ ಅಪಮಾನ ಮಾಡಿದೆ. ಲಿಂಗಾಯತರನ್ನು ಅಪಮಾನ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ. ಬಸವಣ್ಣನ ಸಂದೇಶ ಸಾರುವವರನ್ನು ಅಪಮಾನ ಮಾಡುತ್ತೀರಿ. ಭ್ರಷ್ಟಾಚಾರವನ್ನು ಒಂದು ಸಮುದಾಯಕ್ಕೆ ಹೋಲಿಸೋದು ಎಷ್ಟರ ಮಟ್ಟಿಗೆ ಸರಿ? ಇಂದಿರಾ ಗಾಂಧಿ ನಿಜಲಿಂಗಪ್ಪರಿಗೆ ಅವಮಾನ ಮಾಡಿದರು. ರಾಜೀವ್ ಗಾಂಧಿಯವರು ವೀರೇಂದ್ರ ಪಾಟೀಲ್‌ಗೆ ಅಪಮಾನ ಮಾಡಿದರು. ಬಿಜೆಪಿ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರನ್ನು ಸಿಎಂ ಮಾಡಿದೆ. ಲಿಂಗಾಯತರಿಗೆ ಸನ್ಮಾನ ಮಾಡುವ ಕೆಲಸವನ್ನು ಬಿಜೆಪಿ ಮಾಡಿದೆ ಎಂದರು. ಇದನ್ನೂ ಓದಿ: ಖರ್ಗೆ ಸಾಹೇಬ್ರು ಏನ್ ತಪ್ಪು ಮಾಡಿದ್ದಾರೆ ಸಾಯಿಸೋಕೆ?- ಪ್ರಿಯಾಂಕ್ ಖರ್ಗೆ ಕಿಡಿ

    2024ರಲ್ಲಿ ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣ ಆಗುತ್ತದೆ. ಟಿಕೆಟ್ ರಿಸರ್ವೇಷನ್ ಮಾಡಿ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಮಾಡಿದ್ದಾರೆ. ನಿಮಗೆ ಕೇವಲ ತುಷ್ಟೀಕರಣ ನೆನಪಿದೆ. ಪಿಎಫ್‌ಐ ಬ್ಯಾನ್ ಮಾಡಿದ್ದು ಸರಿನಾ ಇಲ್ವಾ ನೀವು ಹೇಳಬೇಕು. ದೇಶ ವಿರೋಧಿ ಕೆಲಸ ಮಾಡುವವರು ಜೈಲಿಗೆ ಹೋಗುತ್ತಾರೆ. ಪಿಎಫ್‌ಐ ಅಜೆಂಡಾ ಮೇಲೆ ಸರ್ಕಾರ ನಡೆಯುತ್ತದೆ. ಕಾಂಗ್ರೆಸ್ ಅಧ್ಯಕ್ಷರು ಮೋದಿಗೆ ವಿಷ ಸರ್ಪ ಎನ್ನುತ್ತಾರೆ. ಇದು ಕಾಂಗ್ರೆಸ್‌ನ ಲೆವೆಲ್ ತೋರಿಸುತ್ತದೆ ಎಂದು ಹರಿಹಾಯ್ದರು. ಇದನ್ನೂ ಓದಿ: ಚಿಕ್ಕಮಗಳೂರು ಅಖಾಡ ಹೇಗಿದೆ? – ಸತತ 5ನೇ ಬಾರಿ ಗೆಲ್ತಾರಾ ಸಿಟಿ ರವಿ?

    ನಾವು ನಮ್ಮ ಪ್ರಣಾಳಿಕೆಯಲ್ಲಿ ಮೂರು ಉಚಿತ ಸಿಲಿಂಡರ್ ನೀಡುವುದಾಗಿ ಘೋಷಿಸಿದ್ದೇವೆ. ಗಣೇಶ ಚತುರ್ಥಿ, ಯುಗಾದಿ ಹಾಗೂ ದೀಪಾವಳಿಗೆ ಉಚಿತ ಸಿಲಿಂಡರ್ ನೀಡುತ್ತೇವೆ. ಸಮಾನ ನಾಗರಿಕ ಹಕ್ಕು ತರುವ ಭರವಸೆಯನ್ನು ಬಿಜೆಪಿ ನೀಡಿದೆ. ಕಿತ್ತೂರು ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದೆ. ಕಿತ್ತೂರು – ಧಾರವಾಡ ನೇರ ರೈಲು ಮಾರ್ಗ ಯೋಜನೆ ಆರಂಭಿಸಿದೆ. ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆ ಮಾಡಲು ಘೋಷಣೆ ಮಾಡಿದೆ. ಕರ್ನಾಟಕ ಅಭಿವೃದ್ಧಿ, ದೇಶದ ಸುರಕ್ಷತೆ ಮತ್ತು ದೇಶದ ಅಭಿವೃದ್ಧಿಯನ್ನು ಬಿಜೆಪಿ ಸರ್ಕಾರ ಮಾಡುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ರವಿ ಕುಮಾರ್ ಶಾಸಕರಾಗುವುದು ಸತ್ಯ, ಕುಮಾರಸ್ವಾಮಿ ಸಿಎಂ ಆಗೋದು ಅಷ್ಟೇ ಸತ್ಯ: ಹೆಚ್‌ಡಿಡಿ

  • ಕಾಂಗ್ರೆಸ್‌ಗೆ ಠಕ್ಕರ್ – ಗುರುವಾರ ಏಕಕಾಲಕ್ಕೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ

    ಕಾಂಗ್ರೆಸ್‌ಗೆ ಠಕ್ಕರ್ – ಗುರುವಾರ ಏಕಕಾಲಕ್ಕೆ ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ ಪಠಣ

    ಬೆಂಗಳೂರು: ಚುನಾವಣೆಗೆ ಬೆರಳೆಣಿಕೆಯಷ್ಟು ದಿನಗಳು ಉಳಿದುಕೊಂಡಿರುವ ಸಮಯದಲ್ಲಿ ಕಾಂಗ್ರೆಸ್ (Congress) ಬಜರಂಗದಳವನ್ನು (Bajrang Dal) ನಿಷೇಧಿಸುವ ನಿರ್ಧಾರವನ್ನು ಪ್ರಣಾಳಿಕೆಯಲ್ಲಿ ಹಾಕಿ ವಿವಾದವನ್ನು ಎಳೆದುಕೊಂಡಿದೆ. ಇದೀಗ ಬಜರಂಗದಳ ಸೇರಿದಂತೆ ಹಿಂದೂ ಸಂಘಟನೆಗಳು ಕಾಂಗ್ರೆಸ್‌ಗೆ ಠಕ್ಕರ್ ಕೊಡಲು ಮುಂದಾಗಿದೆ.

    ಗುರುವಾರ ಏಕಕಾಲಕ್ಕೆ ದೇವಾಲಯಗಳಲ್ಲಿ (Temple) ಹನುಮಾನ್ ಚಾಲೀಸಾ (Hanuman Chalisa) ಪಠಿಸಲು ಬಜರಂಗದಳ ನಿರ್ಧರಿಸಿದೆ. ಸಂಜೆ 7 ಗಂಟೆಗೆ ಹನುಮಾನ್ ಚಾಲೀಸಾ ಪಠಣ ಆಯೋಜನೆಗೆ ಸಿದ್ಧತೆ ನಡೆಸುತ್ತಿದೆ.

    ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ ಚಿಂತಕ ಚಕ್ರವರ್ತಿ ಸೂಲಿಬೆಲೆ, ಬಜರಂಗ ದಳ ನಾಳೆ ಸಂಜೆ 7 ಗಂಟೆಗೆ ರಾಜ್ಯದಾದ್ಯಂತ ಸಾಮೂಹಿಕ ಹನುಮಾನ್ ಚಾಲಿಸಾ ಪಠಣವನ್ನು ಆಯೋಜಿಸಿದೆ. ಇದು ಧರ್ಮಕ್ಕೆ ಸಂಕಟವೆರಗಿರುವ ಸಮಯ. ಒಟ್ಟಾಗಿ ನಿಲ್ಲುವುದೊಂದೇ ಪರಿಹಾರ. ನಮ್ಮೆಲ್ಲ ಭೇದಗಳನ್ನು ಒತ್ತಟ್ಟಿಗಿಟ್ಟು ಧರ್ಮರಕ್ಷಣೆಗೆ ಜೊತೆಯಾಗೋಣ, ಕೈ ಜೋಡಿಸೋಣ ಎಂದು ಬರೆದುಕೊಂಡಿದ್ದಾರೆ.

    ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಏನಿದೆ?
    ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧ ಸೇರಿದ್ದು ಹೇಗೆ? – ಇನ್‌ಸೈಡ್‌ ಸ್ಟೋರಿ

    ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗ ಬಜರಂಗದಳ ಮತ್ತು ಪಿಎಫ್‌ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಇದನ್ನೂ ಓದಿ: ಕಾಂಗ್ರೆಸ್‌ಗೆ ಮತ ನೀಡಿದ್ರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ: ಯತ್ನಾಳ್

  • ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

    ಭಯೋತ್ಪಾದನೆಗೆ ಉತ್ತೇಜನ ಕೊಟ್ರೆ, PFI, ಭಜರಂಗದಳ ಆದ್ರೂ ಬ್ಯಾನ್ ಮಾಡಲಾಗುತ್ತೆ: ಬಿ.ಕೆ‌ ಹರಿಪ್ರಸಾದ್

    ಮಡಿಕೇರಿ: ಭಯೋತ್ಪಾದನೆಗೆ ಉತ್ತೇಜನ ಹಾಗೂ ಸಮಾಜದಲ್ಲಿ ಆ ಶಾಂತಿ ಕದಡುವ ಯಾವುದೇ ಸಂಘಟನೆಯಾದರೂ ಅದನ್ನು ಬ್ಯಾನ್‌ ಮಾಡಲಾಗುತ್ತದೆ ಎಂದು ವಿಧಾನ ಪರಿಷತ್ ಪ್ರತಿ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ತಿಳಿಸಿದರು.

    ಮಡಿಕೇರಿಯಲ್ಲಿ (Madikeri) ಮಾತಾನಾಡಿದ ಅವರು, ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ಭಯೋತ್ಪಾದನೆಗೆ ಉತ್ತೇಜನ ಕೊಟ್ಟರೇ ಆ ಸಂಘಟನೆಗಳನ್ನು ಬ್ಯಾನ್‌ ಮಾಡಬಹುದು. ಅದು PFI, FIA, ಭಜರಂಗದಳ (Bajrang Dal) ಆಗಿದ್ದರೂ ನಾವು ಬ್ಯಾನ್‌ ಮಾಡುತ್ತೇವೆ, ಯಾರು ದೇಶದಲ್ಲಿ ಶಾಂತಿಯನ್ನು ಕದಡಿ, ಭಯೋತ್ಪಾದನೆಗೆ ಬೆಂಬಲ ಕೊಡುತ್ತದೆಯೋ ಅದನ್ನು ನಾವು ಬ್ಯಾನ್‌ ಮಾಡಬೇಕಾಗುತ್ತದೆ, ನಮ್ಮ ದೇಶವು ಸರ್ವಜನಾಂಗದ ಶಾಂತಿ ತೋಟವಾಗಿದೆ. ಆದರೆ ಇಲ್ಲಿ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಜೆಪಿ ಪ್ರಣಾಳಿಕೆಯಲ್ಲಿ ಪಂಚರತ್ನ ಯೋಜನೆ ನಕಲು ಮಾಡಿದ್ದಾರೆ: ಕುಮಾರಸ್ವಾಮಿ

    ಇಂದು ಚಾಣಕ್ಯ ಅಮಿತ್‌ ಶಾ ಇತರರು ರಾಜ್ಯಕ್ಕೆ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಆದರೆ ಯಾವತ್ತೂ ಬಿಜೆಪಿ ಸ್ಪಷ್ಟವಾಗಿ ಬಹುಮತ ಬಂದಿಲ್ಲ. ದೇಶದಲ್ಲಿ ತೆಗೆದುಕೊಂಡರೂ ಅವರಿಗೆ 3 ರಾಜ್ಯದಲ್ಲಿ ಮಾತ್ರ ಸ್ಪಷ್ಟ ಬಹುಮತ ಬಂದಿದೆ. ಬಾಕಿ ಎಲ್ಲಾ ರಾಜ್ಯದಲ್ಲೂ ಖರೀದಿ ಹಾಗೂ ಕುದುರೆ ವ್ಯಾಪಾರ ಮಾಡಿ ಸರ್ಕಾರ ಮಾಡುತ್ತಿದ್ದಾರೆ. ಆದ್ದರಿಂದ ಧರ್ಮ ಆಧಾರಿತ ರಾಜಕಾರಣ ಕಾಂಗ್ರೆಸ್‌ ಪಕ್ಷ ಮಾಡುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ತಂದೆ-ಮಗ ಆಯ್ತು, ಇದೀಗ ಅವರ ಮಗ: ರಾಮನಗರದಲ್ಲಿ ಸುಮಲತಾ ವಾಗ್ದಾಳಿ

  • ಪಿಎಫ್‌ಐ ಪ್ರಚೋದಿತ, ಮುಸ್ಲಿಂ ಮೂಲಭೂತವಾದಿಗಳು ಕಾಂಗ್ರೆಸ್ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ: ಭಜರಂಗ ದಳ ನಿಷೇಧಕ್ಕೆ ಬಿಸ್ವಾ ಕಿಡಿ

    ಪಿಎಫ್‌ಐ ಪ್ರಚೋದಿತ, ಮುಸ್ಲಿಂ ಮೂಲಭೂತವಾದಿಗಳು ಕಾಂಗ್ರೆಸ್ ಪ್ರಣಾಳಿಕೆ ಸಿದ್ದಪಡಿಸಿದ್ದಾರೆ: ಭಜರಂಗ ದಳ ನಿಷೇಧಕ್ಕೆ ಬಿಸ್ವಾ ಕಿಡಿ

    ಬೆಂಗಳೂರು: ಕಾಂಗ್ರೆಸ್ (Congress) ಮುಸ್ಲಿಮರ ಓಲೈಕೆಗಾಗಿ ಬಜರಂಗದಳ (Bajrang Dal) ನಿಷೇಧದ ಬಗ್ಗೆ ಹೇಳಿದೆ. ಇದು ಪಿಎಫ್‌ಐ (PFI) ಪ್ರಚೋದಿತ ಪ್ರಣಾಳಿಕೆ. ಪಿಎಫ್‌ಐ ಮನಸ್ಥಿತಿಯವರು, ಮುಸ್ಲಿಂ ಮೂಲಭೂತವಾದಿ ಮನಸ್ಥಿತಿಯವರು ರಚಿಸಿರುವ ಪ್ರಣಾಳಿಕೆ ಎಂದು ಅಸ್ಸಾಂನ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ (Himanta Biswa Sarma) ಟೀಕಿಸಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನೀಡಿರುವಂತಹ ಗ್ಯಾರಂಟಿಗಳ ಬಗ್ಗೆ ವಾಗ್ದಾಳಿ ನಡೆಸಿರುವ ಶರ್ಮಾ, ಈಗಾಗಲೇ ಪಿಎಫ್‌ಐ ಬ್ಯಾನ್ ಆಗಿದೆ. ಈಗ ಪಿಎಫ್‌ಐ ಬ್ಯಾನ್ ಮಾಡುತ್ತೇವೆ ಎನ್ನುವುದರಲ್ಲಿ ಏನು ಅರ್ಥ ಇದೆ? ಇದರ ಅರ್ಥ ಇಷ್ಟೇ. ಅವರು ಪಿಎಫ್‌ಐ ಬ್ಯಾನ್ ಮಾಡಿದ್ದಾರೆ, ನಾವು ಅದಕ್ಕೆ ಪರ್ಯಾಯವಾಗಿ ಬಜರಂಗದಳ ಬ್ಯಾನ್ ಮಾಡುತ್ತೇವೆ ಎಂದು ಹೇಳಲು ಹೊರಟಿದ್ದಾರೆ. ಈ ಮೂಲಕ ಮುಸ್ಲಿಮರ ಓಲೈಕೆ ಮಾಡಲು ಕಾಂಗ್ರೆಸ್ ಹೊರಟಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ತಾಕತ್‌ ಇದ್ರೆ ಭಜರಂಗದಳ ನಿಷೇಧ ಮಾಡಿ ನೋಡಿ – ಕಾಂಗ್ರೆಸ್‌ಗೆ ಶೋಭಾ ಕರಂದ್ಲಾಜೆ ಸವಾಲು

    ಪರಮೇಶ್ವರ್ ಸಮರ್ಥನೆ:
    ಕಾಂಗ್ರೆಸ್ ಬಜರಂಗದಳ ಬ್ಯಾನ್ ಮಾಡುವುದಾಗಿ ಹೇಳಿರುವ ವಿಚಾರವನ್ನು ಸಮರ್ಥಿಸಿಕೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಜಿ ಪರಮೇಶ್ವರ್, ಶಾಂತಿ ಕದಡುವ ಯಾವುದೇ ಸಂಸ್ಥೆಯನ್ನು ನಾವು ನಿಯಂತ್ರಣ ಮಾಡುತ್ತೇವೆ. ಪ್ರಣಾಳಿಕೆಯಲ್ಲಿ ನಾವು ಹೇಳಿದ್ದೇವೆ. ಕರ್ನಾಟಕ ಶಾಂತಿಯ ತೋಟ ಆಗಬೇಕು. ಇದಕ್ಕಾಗಿ ನಾವು ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಮೀಸಲಾತಿ ಶೇ.75ರವರೆಗೆ ಹೆಚ್ಚಳ, NEP ರದ್ದು, ಭಜರಂಗದಳ ನಿಷೇಧ- ಕಾಂಗ್ರೆಸ್‍ನಿಂದ ಪ್ರಣಾಳಿಕೆ ರಿಲೀಸ್