Tag: ಪಿಎಂ ಮೋದಿ

  • ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್‌ ದಾಸ್‌ ನೇಮಕ

    ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್‌ ದಾಸ್‌ ನೇಮಕ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಆರ್‌ಬಿಐ ಮಾಜಿ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರನ್ನು ನೇಮಕ ಮಾಡಲಾಗಿದೆ ಸರ್ಕಾರದ ಅಧಿಸೂಚನೆ ತಿಳಿಸಿದೆ.

    ದಾಸ್ ಅವರ ನೇಮಕಾತಿ ಪ್ರಧಾನ ಮಂತ್ರಿಯ ಅವಧಿಯವರೆಗೆ ಅಥವಾ ಮುಂದಿನ ಆದೇಶದ ವರೆಗೆ ಇರಲಿದೆ ಎಂದು ಕ್ಯಾಬಿನೆಟ್‌ನ ನೇಮಕಾತಿ ಸಮಿತಿ ಹೇಳಿದೆ.

    SHAKTIKANTA DAS

    ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರ ಅವಧಿಯನ್ನು ಸಹ ವಿಸ್ತರಿಸಲಾಗಿದೆ. 1987-ಬ್ಯಾಚ್‌ನ ನಿವೃತ್ತ ಐಎಎಸ್‌ ಅಧಿಕಾರಿಯನ್ನು 2023ರ ಫೆಬ್ರವರಿಯಲ್ಲಿ ಎರಡು ವರ್ಷಗಳ ಕಾಲ ನೀತಿ ಆಯೋಗ ಸಿಇಒ ಆಗಿ ನೇಮಿಸಲಾಗಿತ್ತು.

    ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ್‌ ದಾಸ್‌ ಅವರು ಭಾರತದ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು ಹಲವಾರು ಕ್ರಮಗಳ ಮುಂಚೂಣಿಯಲ್ಲಿದ್ದರು.

    ಆರ್ಥಿಕತೆಯ ಮೇಲೆ ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮ ಹೆಚ್ಚು ಬೀಳದಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದರು. ಹಣಕಾಸು ನೀತಿ, ನಿಯಂತ್ರಕ ನೀತಿ ಸೇರಿದಂತೆ ಹಲವಾರು ಕ್ರಮಗಳ ಮೂಲಕ ಆರ್‌ಬಿಐ ಅನ್ನು ಮುನ್ನಡೆಸಿದ್ದರು.

  • ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ

    ತುಂಬಾ ಅನ್ಯಾಯ: ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಟ್ರಂಪ್‌ ಅಪಸ್ವರ

    ವಾಷಿಂಗ್ಟನ್‌: ಭಾರತದಲ್ಲಿ ಟೆಸ್ಲಾ ವಿದ್ಯುತ್‌ಚಾಲಿತ ಕಾರು ತಯಾರಿಕಾ ಘಟಕ ಸ್ಥಾಪನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅಪಸ್ವರ ಎತ್ತಿದ್ದಾರೆ. ‘ಇದು ತುಂಬಾ ಅನ್ಯಾಯ’ ಎಂದು ಹೇಳಿದ್ದಾರೆ.

    ಭಾರತ ವಿಧಿಸುವ ಸುಂಕಗಳನ್ನು ತಪ್ಪಿಸಲು ಭಾರತದಲ್ಲಿ ಟೆಸ್ಲಾ ಘಟಕ ನಿರ್ಮಿಸುವ ಇವಿ ತಯಾರಕರ ಯಾವುದೇ ಸಂಭಾವ್ಯ ಯೋಜನೆಗಳು ‘ತುಂಬಾ ಅನ್ಯಾಯ’ ಎಂದು ಟ್ರಂಪ್ ವಿರೋಧಿಸಿದ್ದಾರೆ.

    ಫಾಕ್ಸ್‌ ನ್ಯೂಸ್‌ಗೆ ಎಲಾನ್‌ ಮಸ್ಕ್‌ ಜೊತೆ ನೀಡಿದ ಸಂದರ್ಶನದಲ್ಲಿ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ. ‘ವಿಶ್ವದ ಎಲ್ಲಾ ರಾಷ್ಟ್ರಗಳೂ ಅಮೆರಿಕದಿಂದ ಪ್ರಯೋಜನ ಪಡೆಯುತ್ತಿವೆ. ಆದರೂ ನಮ್ಮ ಸರಕುಗಳ ಮೇಲೆ ದುಬಾರಿ ಸುಂಕ ವಿಧಿಸಲಾಗುತ್ತಿದೆ. ಭಾರತ ಕೂಡ ಇದರಿಂದ ಹೊರತಾಗಿಲ್ಲ. ಹೆಚ್ಚು ಸುಂಕ ವಿಧಿಸುವ ಭಾರತದಲ್ಲಿ ಟೆಸ್ಲಾ ಘಟಕ ಸ್ಥಾಪಿಸಿ ಕಾರುಗಳನ್ನು ಮಾರಾಟ ಮಾಡಲು ಸಾಧ್ಯವೇ’ ಎಂದು ಟ್ರಂಪ್‌ ಪ್ರಶ್ನಿಸಿದ್ದಾರೆ.

    ಭಾರತ ಅತಿಹೆಚ್ಚು ಪ್ರಮಾಣದಲ್ಲಿ ಸುಂಕ ವಿಧಿಸುತ್ತಿದೆ. ಹೀಗಾಗಿ, ನಾವು ಕೂಡ ಪ್ರತಿಯಾಗಿ ಅಷ್ಟೇ ಸುಂಕವನ್ನು ವಿಧಿಸುತ್ತೇವೆ ಎಂದು ಟ್ರಂಪ್‌ ತಿಳಿಸಿದ್ದಾರೆ. ಟ್ರಂಪ್‌ ಮಾತಿಗೆ ‘ಇದು ನ್ಯಾಯಯೋಚಿತ ನಿರ್ಧಾರ’ ಎಂದು ಮಸ್ಕ್‌ ಧ್ವನಿಗೂಡಿಸಿದ್ದಾರೆ.

    ಅಮೆರಿಕಗೆ ಪ್ರವಾಸ ಕೈಗೊಂಡಿದ್ದಾಗ ಪ್ರಧಾನಿ ಮೋದಿ ಅವರು ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ, ಭಾರತದ ಮುಂಬೈ ಮತ್ತು ನವದೆಹಲಿಯಲ್ಲಿ ಟೆಸ್ಲಾ ಘಟಕ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿದೆ. ವಿವಿಧ ಹುದ್ದೆಗಳ ಭರ್ತಿಗೆ ಟೆಸ್ಲಾ ಅರ್ಜಿ ಕೂಡ ಆಹ್ವಾನಿಸಿದೆ.

  • ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    ಎಲಾನ್ ಮಸ್ಕ್-ಮೋದಿ ಭೇಟಿ ಬೆನ್ನಲ್ಲೇ ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರು

    – 13 ಹುದ್ದೆಗಳಿಗೆ ಅರ್ಜಿ ಆಹ್ವಾನ

    ನವದೆಹಲಿ: ಟೆಸ್ಲಾದಿಂದ ಭಾರತದಲ್ಲಿ ನೇಮಕಾತಿ ಶುರುವಾಗಿದೆ. ಎಲಾನ್‌ ಮಸ್ಕ್‌ ಮತ್ತು ಪ್ರಧಾನಿ ಮೋದಿ ಭೇಟಿ ಬೆನ್ನಲ್ಲೇ ನೇಮಕಾತಿ ಆರಂಭವಾಗಿದ್ದು, 13 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಮಸ್ಕ್ ಅವರ ಎಲೆಕ್ಟ್ರಿಕ್ ವೆಹಿಕಲ್ (ಇವಿ) ದೈತ್ಯ ಟೆಸ್ಲಾ Inc. ಭಾರತದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಿದೆ. ಟೆಸ್ಲಾ ಸಲಹೆಗಾರ, ಇನ್ಸೈಡ್‌ ಸೇಲ್ ಅಡ್ವೈಸರ್, ಕಸ್ಟಮರ್‌ ಸಪೋರ್ಟ್‌ ಸ್ಪೆಷಲಿಸ್ಟ್‌, ಕನ್ಸ್ಯೂಮರ್‌ ಎಂಗೇಜ್‌ಮೆಂಟ್‌ ಮ್ಯಾನೇಜರ್, ಆರ್ಡರ್‌ ಆಪರೇಷನ್ಸ್‌ ಸ್ಪೆಷಲಿಸ್ಟ್‌, ಸರ್ವೀಸ್‌ ಮ್ಯಾನೇಜರ್, ಬಿಸಿನೆಸ್‌ ಆಪರೇಷನ್ಸ್‌ ಅನಾಲಿಸ್ಟ್‌, ಸ್ಟೋರ್‌ ಮ್ಯಾನೇಜರ್, ಪಾರ್ಟ್ಸ್‌ ಅಡ್ವೈಸರ್, ಸರ್ವೀಸ್‌ ಅಡ್ವೈಸರ್‌, ಡೆಲಿವರಿ ಆಪರೇಷನ್ಸ್‌ ಸ್ಪೆಷಲಿಸ್ಟ್‌ ಮತ್ತು ಕಸ್ಟಮರ್‌ ಸಪೋರ್ಟ್‌ ಸೂಪರ್‌ವೈಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

    ಹೆಚ್ಚಿನ ಆಮದು ಸುಂಕದ ಕಳವಳದಿಂದಾಗಿ EV ತಯಾರಕರು ಇಲ್ಲಿಯವರೆಗೆ ಭಾರತದಿಂದ ದೂರ ಉಳಿದಿದ್ದರು.

  • ರಕ್ಷಣಾ ಒಪ್ಪಂದ – ಭಾರತಕ್ಕೆ ಅಮೆರಿಕದ F-35 ಯುದ್ಧ ವಿಮಾನ

    ರಕ್ಷಣಾ ಒಪ್ಪಂದ – ಭಾರತಕ್ಕೆ ಅಮೆರಿಕದ F-35 ಯುದ್ಧ ವಿಮಾನ

    ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

    ಟ್ರಂಪ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾಪಾರವನ್ನು ಹೆಚ್ಚಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. ಪ್ರಧಾನಿ ಮೋದಿ ಮತ್ತು ಭಾರತದೊಂದಿಗೆ ವಿಶೇಷ ಬಾಂಧವ್ಯ ಹೊಂದಿದ್ದೇನೆ ಎಂದು ಟ್ರಂಪ್‌ ತಿಳಿಸಿದ್ದಾರೆ.

    ಇತ್ತ ಚೀನಾ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರವಾಗಿದೆ. ಅಮೆರಿಕದ ಆಡಳಿತವು ಭಾರತವನ್ನು ಸಮಾನ ಮನಸ್ಸಿನ ಹಿತಾಸಕ್ತಿಗಳೊಂದಿಗೆ ಪ್ರಮುಖ ಪಾಲುದಾರ ಎಂದು ನೋಡಿದೆ. ಟ್ರಂಪ್ ಹೊಸ ಆಡಳಿತವು ಅಮೆರಿಕದ ಉನ್ನತ ಮಿಲಿಟರಿ ವ್ಯವಸ್ಥೆಯಲ್ಲಿ ಒಂದಾದ F-35 ಯುದ್ಧ ವಿಮಾನಗಳನ್ನು ಮಾರಾಟ ಮಾಡಲು ಸಿದ್ಧವಾಗಿದೆ ಎಂದು ಟ್ರಂಪ್‌ ಘೋಷಿಸಿದ್ದಾರೆ.

    ಭಾರತದ ಸುಂಕಗಳ ಬಗ್ಗೆ ಈ ಹಿಂದೆ ದೂರಿದ್ದ ಟ್ರಂಪ್, ಎರಡೂ ದೇಶಗಳು ವ್ಯಾಪಾರ ಒಪ್ಪಂದದಲ್ಲಿ ಒಟ್ಟಾಗಿ ಕೆಲಸ ಮಾಡುತ್ತವೆ ಎಂಬ ಪ್ರಧಾನಿ ಮೋದಿಯವರ ಮಾತಿಗೆ ಸಮ್ಮತಿಸಿದ್ದಾರೆ.

  • 2008ರ ಮುಂಬೈ ಭಯೋತ್ಪಾದಕ ದಾಳಿ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ – ಮೋದಿ ಎದುರೇ ಟ್ರಂಪ್‌ ಘೋಷಣೆ

    2008ರ ಮುಂಬೈ ಭಯೋತ್ಪಾದಕ ದಾಳಿ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ – ಮೋದಿ ಎದುರೇ ಟ್ರಂಪ್‌ ಘೋಷಣೆ

    ವಾಷಿಂಗ್ಟನ್‌: 2008ರ ಮುಂಬೈ ಭಯೋತ್ಪಾದಕ ದಾಳಿಯ (Mumbai Terror Attack) ಆರೋಪಿ ತಹವ್ವೂರ್‌ ರಾಣಾನನ್ನು (Tahawwur Rana) ಭಾರತಕ್ಕೆ ಹಸ್ತಾಂತರಿಸಲು ಅಮೆರಿ ಒಪ್ಪಿಕೊಂಡಿದೆ. ಪ್ರಧಾನಿ ಮೋದಿ ಎದುರಲ್ಲೇ ಅಮೆರಿಕ ಅಧ್ಯಕ್ಷ ಟ್ರಂಪ್ ‌ಈ ಘೋಷಣೆ ಮಾಡಿದ್ದಾರೆ.

    ಪ್ರಧಾನಿ ಮೋದಿ (PM Modi) ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. 2ನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್‌ (Donald Trump) ಅಧಿಕಾರ ವಹಿಸಿಕೊಂಡ ಬಳಿಕ ಇದು ಮೋದಿ ಅವರ ಮೊದಲ ಭೇಟಿ.

    ಪ್ರಧಾನಿ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಂತರ, ಮುಂಬೈ ದಾಳಿ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಒಪ್ಪಿಕೊಂಡಿದೆ ಎಂದು ಟ್ರಂಪ್‌ ತಿಳಿಸಿದ್ದಾರೆ. ನಾವು 26/11 ಮುಂಬೈ ಭಯೋತ್ಪಾದಕ ದಾಳಿಯ ಆರೋಪಿಯಾಗಿರುವ ಅತ್ಯಂತ ಅಪಾಯಕಾರಿ ವ್ಯಕ್ತಿಯನ್ನು ಭಾರತಕ್ಕೆ ಹಸ್ತಾಂತರಿಸುತ್ತಿದ್ದೇವೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ.

    26/11 ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ಪ್ರಸ್ತುತ ಅಮೆರಿಕದಲ್ಲಿ ಹೆಚ್ಚಿನ ಭದ್ರತೆಯ ಜೈಲಿನಲ್ಲಿದ್ದಾನೆ. ಭಾರತ ಹಲವು ವರ್ಷಗಳಿಂದ ಆತನನ್ನು ಹಸ್ತಾಂತರಿಸುವಂತೆ ಕೋರುತ್ತಿದೆ.

    ಇದೇ ಜನವರಿ ತಿಂಗಳಲ್ಲಿ ಅಮೆರಿಕದ ಸುಪ್ರೀಂ ಕೋರ್ಟ್, ತಹವ್ವೂರ್ ರಾಣಾನ ಪರಿಶೀಲನಾ ಅರ್ಜಿಯನ್ನು ತಿರಸ್ಕರಿಸಿ, ಆತನನ್ನು ಭಾರತಕ್ಕೆ ಗಡೀಪಾರು ಮಾಡಲು ದಾರಿ ಮಾಡಿಕೊಟ್ಟಿತು.

  • ಫ್ರಾನ್ಸ್‌ನ ಮಾರ್ಸಿಲ್ಲೆಸ್‌ಗೆ ಪ್ರಧಾನಿ ಮೋದಿ ಭೇಟಿ – ಬಲಿದಾನಗೈದ ಭಾರತೀಯ ಯೋಧರಿಗೆ ಗೌರವ ನಮನ

    ಫ್ರಾನ್ಸ್‌ನ ಮಾರ್ಸಿಲ್ಲೆಸ್‌ಗೆ ಪ್ರಧಾನಿ ಮೋದಿ ಭೇಟಿ – ಬಲಿದಾನಗೈದ ಭಾರತೀಯ ಯೋಧರಿಗೆ ಗೌರವ ನಮನ

    ಪ್ಯಾರಿಸ್: ಪ್ರಧಾನಿ ನರೇಂದ್ರ ಮೋದಿ ಬುಧವಾರ ಫೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಮಾರ್ಸಿಲ್ಲೆಸ್‌ನಲ್ಲಿರುವ ಮಜಾರ್ಗ್ಸ್ ಯುದ್ಧ ಸ್ಮಶಾನಕ್ಕೆ ಭೇಟಿ ನೀಡಿ ವಿಶ್ವ ಯುದ್ಧಗಳಲ್ಲಿ ಬಲಿದಾನಗೈದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿದರು. ಮೋದಿ ಅವರು ಸ್ಮಾರಕದಲ್ಲಿ ಪುಷ್ಪಗುಚ್ಛ ಇಟ್ಟು ನಮಿಸಿದರು.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಪ್ರಧಾನಿ ಮೋದಿ, ‘ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ಮಾರ್ಸಿಲ್ಲೆಗೆ ಬಂದಿದ್ದೇನೆ. ಭಾರತದ ಸ್ವಾತಂತ್ರ್ಯದ ಅನ್ವೇಷಣೆಯಲ್ಲಿ ಈ ನಗರವು ವಿಶೇಷ ಮಹತ್ವ ಹೊಂದಿದೆ. ಮಹಾನ್‌ ವೀರ್‌ ಸಾವರ್ಕರ್‌ ಧೈರ್ಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು ಇಲ್ಲಿಯೇ. ಅವರನ್ನು ಬ್ರಿಟಿಷ್‌ ಕಸ್ಟಡಿಗೆ ಹಸ್ತಾಂತರಿಸಬಾರದು ಎಂದು ಒತ್ತಾಯಿಸಿದ್ದ ಮಾರ್ಸೆಲ್ಲೆಯ ಜನರು ಮತ್ತು ಆ ಕಾಲದ ಫ್ರೆಂಚ್‌ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ವೀರ್‌ ಸಾವರ್ಕರ್‌ ಅವರ ಶೌರ್ಯವು ಪೀಳಿಗೆಗೆ ಸ್ಫೂರ್ತಿಯಾಗಿದೆ’ ಎಂದು ತಿಳಿಸಿದ್ದಾರೆ.

    ಕಳೆದ ನಾಲ್ಕು ವರ್ಷಗಳಿಂದ ಮಾರ್ಸಿಲ್ಲೆಯಲ್ಲಿ ವಾಸಿಸುತ್ತಿರುವ ಭಾರತೀಯ ಸಮುದಾಯದ ಸದಸ್ಯ ಅನುಪ್ ಗುಪ್ತಾ ಮಾತನಾಡಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರನ್ನು ಪ್ರತಿನಿಧಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಪ್ಯಾರಿಸ್‌ನಲ್ಲಿರುವ ರಾಯಭಾರ ಕಚೇರಿಯ ನಂತರ ಫ್ರಾನ್ಸ್‌ನಲ್ಲಿರುವ ಮೊದಲ ಕಾನ್ಸುಲೇಟ್ ಇದಾಗಿದೆ. ಇದು ಭಾರತೀಯ ಸಮುದಾಯ ಬೆಳೆಯಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

    ಪ್ರಧಾನಿ ಮೋದಿ ಫೆ.10 ರಿಂದ 12 ರ ವರೆಗೆ ಫ್ರಾನ್ಸ್‌ಗೆ ಭೇಟಿ ನೀಡಿದ್ದಾರೆ. ಮಂಗಳವಾರ ಪ್ಯಾರಿಸ್‌ನಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ AI ಕ್ರಿಯಾ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಿದ್ದರು. ಇದರ ನಂತರ, ಪ್ರಧಾನಿ ಮೋದಿ ಫೆ.12-13 ರಂದು ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅಮೆರಿಕ ಆಡಳಿತದ ಇತರ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ.

  • ಸಚಿವರ ವೇತನಕ್ಕೆ ಬಜೆಟ್‌ನಲ್ಲಿ 1,024 ಕೋಟಿ ರೂ. ಹಂಚಿಕೆ

    ಸಚಿವರ ವೇತನಕ್ಕೆ ಬಜೆಟ್‌ನಲ್ಲಿ 1,024 ಕೋಟಿ ರೂ. ಹಂಚಿಕೆ

    ನವದೆಹಲಿ: 2025-26ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ (Union Budget 2025) ಸಚಿವರ ವೇತನಕ್ಕಾಗಿ 1,024 ಕೋಟಿ ಹಣವನ್ನು ಹಂಚಿಕೆ ಮಾಡಲಾಗಿದೆ.

    ಶನಿವಾರ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ, ಸಚಿವ ಸಂಪುಟ, ಸಂಪುಟ ಸಚಿವಾಲಯ, ಪ್ರಧಾನ ಮಂತ್ರಿ ಕಚೇರಿಯ ವೆಚ್ಚಗಳು, ರಾಜ್ಯದ ಅತಿಥಿಗಳ ಆತಿಥ್ಯ ಮತ್ತು ಮನರಂಜನೆಗಾಗಿ 1,024.30 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 12 ಲಕ್ಷ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ – ಇಲ್ಲಿದೆ ಸರಳ ಲೆಕ್ಕಾಚಾರ

    2024-25 ರಲ್ಲಿ 1,021.83 ಕೋಟಿ ರೂ. ಮೀಸಲಿಡಲಾಗಿತ್ತು. ಆ ಮೊತ್ತದಲ್ಲಿ ಈ ಬಾರಿ ಹೆಚ್ಚಳ ಆಗಿದೆ. ಮುಂಬರುವ ಹಣಕಾಸು ವರ್ಷದಲ್ಲಿ ಸಚಿವ ಸಂಪುಟದ ವೆಚ್ಚಗಳಿಗಾಗಿ ಒಟ್ಟು 619.04 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ. 2024-25ರಲ್ಲಿ ಇದು 540.95 ಕೋಟಿ ರೂ.ಗಳಷ್ಟಿತ್ತು ಎಂದು ಹೇಳಿದ್ದಾರೆ.

    ಸಂಪುಟ ಸಚಿವರು, ರಾಜ್ಯ ಸಚಿವರು ಮತ್ತು ಮಾಜಿ ಪ್ರಧಾನ ಮಂತ್ರಿಗಳ ಸಂಬಳ, ಇತರ ಭತ್ಯೆಗಳು ಮತ್ತು ಪ್ರಯಾಣದ ವೆಚ್ಚಕ್ಕಾಗಿ ಹಣ ಮೀಸಲಿಡಲಾಗಿದೆ. ಇದು ವಿವಿಐಪಿಗಳಿಗಾಗಿ ವಿಶೇಷ ಹೆಚ್ಚುವರಿ ಅವಧಿ ವಿಮಾನ ಕಾರ್ಯಾಚರಣೆಗಳ ನಿಬಂಧನೆಯನ್ನು ಸಹ ಒಳಗೊಂಡಿದೆ. ಇದನ್ನೂ ಓದಿ: Union Budget 2025| ಬಜೆಟ್‌ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದು ಏನು?

    ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯಕ್ಕೆ 2024-25ರಲ್ಲಿ 270.08 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಬಾರಿ 182.75 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ಇದನ್ನೂ ಓದಿ: Budget 2025: ಬಾಡಿಗೆ ಮೇಲಿನ TDS ಕಡಿತ ಮಿತಿ 6 ಲಕ್ಷಕ್ಕೆ ಏರಿಕೆ

  • Budget 2025: ಬಾಡಿಗೆ ಮೇಲಿನ TDS ಕಡಿತ ಮಿತಿ 6 ಲಕ್ಷಕ್ಕೆ ಏರಿಕೆ

    Budget 2025: ಬಾಡಿಗೆ ಮೇಲಿನ TDS ಕಡಿತ ಮಿತಿ 6 ಲಕ್ಷಕ್ಕೆ ಏರಿಕೆ

    – ಹಿರಿಯ ನಾಗರಿಕರಿಗೆ ಬಡ್ಡಿ ಮೇಲಿನ ತೆರಿಗೆ ವಿನಾಯಿತಿ ಮಿತಿ 1 ಲಕ್ಷಕ್ಕೆ ಹೆಚ್ಚಳ

    ನವದೆಹಲಿ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಮಂಡಿಸಿದ 2025-26ನೇ ಸಾಲಿನ ಆಯವ್ಯಯದಲ್ಲಿ, ಬಾಡಿಗೆ ಪಾವತಿಗೆ ಟಿಡಿಎಸ್ (TDS) ಮಿತಿಯನ್ನು 6 ಲಕ್ಷ ರೂ. ಹೆಚ್ಚಿಸಲಾಗಿದೆ.

    ಬಾಡಿಗೆ ಪಾವತಿಗಳು, ಹಣ ರವಾನೆ, ಉನ್ನತ ಶಿಕ್ಷಣ, ಸರಕುಗಳ ಮಾರಾಟ ಮತ್ತು ಅಪರಾಧಿಗಳ ಅಪರಾಧಮುಕ್ತೀಕರಣಕ್ಕೆ ಸಂಬಂಧಿಸಿದಂತೆ ಅವರು ಹಲವಾರು ಪ್ರಮುಖ ಸುಧಾರಣೆಗಳನ್ನು ಬಜೆಟ್‌ನಲ್ಲಿ ಪರಿಚಯಿಸಿದ್ದಾರೆ. ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ

    ಹಿರಿಯ ನಾಗರಿಕರಿಗೆ ಗುಡ್‌ನ್ಯೂಸ್
    ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ವಿನಾಯಿತಿ ಮಿತಿಯನ್ನು 50,000 ರೂ. ನಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ.

    ಬಾಡಿಗೆ
    ಬಾಡಿಗೆ ಮೇಲಿನ ಟಿಡಿಎಸ್‌ನ ವಾರ್ಷಿಕ ಮಿತಿ 2.40 ಲಕ್ಷದಿಂದ 6 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಇದರರ್ಥ ಬಾಡಿಗೆದಾರರು ತಿಂಗಳಿಗೆ 20,000 ರೂ. ದರದಲ್ಲಿ ನೀಡಲಾಗುವ ಬಾಡಿಗೆಗೆ ಟಿಡಿಎಸ್ ಕಡಿತಗೊಳಿಸಬೇಕಾಗಿತ್ತು. ಆದರೆ, ಈಗ ಮಿತಿಯನ್ನು 50,000 ರೂ.ಗೆ ಹೆಚ್ಚಿಸಲಾಗಿದೆ.

    ಹಣ ರವಾನೆ
    ಆದಾಯ ಮೂಲದಿಂದ ತೆರಿಗೆ ಸಂಗ್ರಹ 7 ಲಕ್ಷದಿಂದ 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ವಿದೇಶದಿಂದ ರವಾನಿಸುವ ಹಣದ ಮೇಲಿನ ಟಿಡಿಎಸ್‌ ಕಡಿತಗೊಳಿಸಲಾಗಿದೆ. ಇದನ್ನೂ ಓದಿ: ಪ್ರವಾಸೋದ್ಯಮಕ್ಕೆ ಉತ್ತೇಜನ – ಹೋಂಸ್ಟೇ ನಿರ್ಮಾಣಕ್ಕೆ ಮುದ್ರಾ ಲೋನ್‌ ವಿಸ್ತರಣೆ

    ಉನ್ನತ ಶಿಕ್ಷಣ
    ಶೈಕ್ಷಣಿಕ ಉದ್ದೇಶಗಳಿಗಾಗಿ ಯಾರಾದರೂ ಬ್ಯಾಂಕಿನಿಂದ ಬ್ಯಾಂಕ್‌ನಿಂದ ಸಾಲ ಪಡೆದರೆ ಟಿಸಿಎಸ್ ಇರುವುದಿಲ್ಲ. ಹೆಚ್ಚಿನ ಟಿಡಿಎಸ್ ಕಡಿತದ ನಿಬಂಧನೆಗಳು ಪ್ಯಾನ್ ಅಲ್ಲದ ಪ್ರಕರಣಗಳಲ್ಲಿ ಮಾತ್ರ ಅನ್ವಯಿಸುತ್ತವೆ.

    ಸರಕುಗಳ ಮಾರಾಟ
    ಪ್ರಸ್ತುತ ಸರಕುಗಳ ಮಾರಾಟಕ್ಕೆ ಸಂಬಂಧಿಸಿದ ವಹಿವಾಟುಗಳಿಗೆ ಟಿಡಿಎಸ್ ಮತ್ತು ಟಿಸಿಎಸ್ ಎರಡೂ ಅನ್ವಯಿಸುತ್ತವೆ. ಟಿಸಿಎಸ್ ಅನ್ನು ಕೈಬಿಡುವ ಪ್ರಸ್ತಾಪ ಮಾಡಿದ್ದಾರೆ. ಇದನ್ನೂ ಓದಿ: Budget 2025 | ಉದ್ಯಮ ಆರಂಭಿಸುವ 5 ಲಕ್ಷ SC, ST ಮಹಿಳೆಯರಿಗೆ ಆರ್ಥಿಕ ನೆರವು: ನಿರ್ಮಲಾ ಸೀತಾರಾಮನ್‌

  • ಲೆಕ್ಕರಾಮಯ್ಯನವರೇ ನಿಮ್ಗೆ ಕೊಟ್ರೆ ತಿಂದು ಹಾಕ್ತೀರಾ, ಅದ್ಕೆ ಬಡವರಿಗೆ ಕೊಟ್ಟಿದ್ದಾರೆ – ಆರ್.ಅಶೋಕ್ ಲೇವಡಿ

    ಲೆಕ್ಕರಾಮಯ್ಯನವರೇ ನಿಮ್ಗೆ ಕೊಟ್ರೆ ತಿಂದು ಹಾಕ್ತೀರಾ, ಅದ್ಕೆ ಬಡವರಿಗೆ ಕೊಟ್ಟಿದ್ದಾರೆ – ಆರ್.ಅಶೋಕ್ ಲೇವಡಿ

    -ಸಿದ್ದರಾಮಯ್ಯ ಅವರಿಗೆ ಜನರೇ ಚೊಂಬು ಕೊಡುವ ಕಾಲ ಬರುತ್ತೆ ಎಂದ ವಿಪಕ್ಷ ನಾಯಕ

    ಬೆಂಗಳೂರು: ಕಾಂಗ್ರೆಸ್ ಅವರು ನಮಗೆ ಏನೂ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ನಿಮಗೆ ಕೊಟ್ಟರೆ ತಿಂದು ಹಾಕ್ತೀರಾ, ಅದಕ್ಕೆ ಬಡವರಿಗೆ ಕೊಟ್ಟಿದ್ದಾರೆ ಎಂದು ಆರ್.ಅಶೋಕ್ (R Ashok) ಕಾಂಗ್ರೆಸ್ (Congress) ಸರ್ಕಾರದ ವಿರುದ್ಧ ಲೇವಡಿ ಮಾಡಿದ್ದಾರೆ.

    ಕೇಂದ್ರ ಬಜೆಟ್‌ಗೆ ಸಂಬಂಧಿಸಿದಂತೆ ನಗರದಲ್ಲಿ ಮಾತನಾಡಿದ ಅವರು, ಕಿಸಾನ್ ಕ್ರೆಡಿಟ್ ಕಾರ್ಡ್ ರೈತರಿಗೆ ಸಾಲದ ಮಿತಿಯನ್ನು ಹೆಚ್ಚಿಸಿದೆ. ಈ ಮೂಲಕ ಮೋದಿ ರೈತ ಪರ ಎನ್ನುವುದನ್ನು ತೋರಿಸಿದ್ದಾರೆ. ಜೊತೆಗೆ ಪಿಎಂ ಧನ್ ಯೋಜನೆ ಅಡಿ ಸಾಲ ಸೌಲಭ್ಯ ಹೆಚ್ಚಿಸಿದ್ದಾರೆ. ಕೈಗಾರಿಕಾ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ನೀಡಿದ್ದಾರೆ. ಇನ್ನೂ ಮೊದಲ ಬಾರಿಗೆ ಉದ್ಯಮ ಸ್ಥಾಪಿಸುವ ಎಸ್‌ಸಿ, ಎಸ್‌ಟಿ ಮಹಿಳೆಯರಿಗೆ 5 ಲಕ್ಷ ರೂ. ಸಾಲ ಸೌಲಭ್ಯ ಒದಗಿಸಿದ್ದಾರೆ. ಮಧ್ಯಮ ವರ್ಗದವರಿಗೆ ಬಂಪರ್ ಮೇಲೆ ಬಂಪರ್ ಕೊಟ್ಟು, ತೆರಿಗೆ ವಿನಾಯಿತಿ ಘೋಷಿಸಿದ್ದಾರೆ. 1 ಲಕ್ಷ ರೂ. ಸಂಬಳ ತೆಗೆದುಕೊಳ್ಳುವವರಿಗೆ ನೋ ಟ್ಯಾಕ್ಸ್ ಎಂದಿದ್ದಾರೆ ಎಂದು ಹೇಳಿದರು.ಇದನ್ನೂ ಓದಿ: ಮಧ್ಯಮ ವರ್ಗಕ್ಕೆ ಮತ್ತೊಂದು ಸಿಹಿ – ಎರಡನೇ ಮನೆಗೂ ತೆರಿಗೆ ಪಾವತಿಯಿಂದ ವಿನಾಯಿತಿ

    ಕರ್ನಾಟಕದಲ್ಲಿ ಸಿದ್ದರಾಮಯ್ಯ ಎಲ್ಲ ತೆರಿಗೆ ಹಾಕಿದ್ದಾರೆ. ಪಾಪಿ ಕಾಂಗ್ರೆಸ್ ಅವರು ತೆರಿಗೆ ಹಾಕಿ ಜನರ ಸುಲಿಗೆ ಮಾಡ್ತಿದ್ದಾರೆ. ಇನ್ನೂ ಕಾಂಗ್ರೆಸ್ ಅವರು ತಾರತಮ್ಯದ ಬಗ್ಗೆ ಮಾತಾಡ್ತಿದ್ದಾರೆ. ಆದರೆ 50 ವರ್ಷಗಳ ಅವಧಿಗೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ ಕೊಡುವ ಘೋಷಣೆ ಆಗಿದೆ. ಕಾಂಗ್ರೆಸ್ ಅವರು ನಮಗೆ ಏನೂ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಆದರೆ ಅವರಿಗೆ ಕೊಟ್ಟರೆ ತಿಂದು ಹಾಕಿ ಬಿಡುತ್ತಾರೆ ಎಂದು ಬಡವರಿಗೆ ಕೊಟ್ಟಿದ್ದಾರೆ. ನಿಮ್ಗೆ ಕೊಟ್ರೆ ತಿಂದು ಹಾಕ್ಬಿಡ್ತೀರಾ ಎಂದು ವ್ಯಂಗ್ಯವಾಡಿದರು.

    12 ಲಕ್ಷಕ್ಕೆ ಇಂದಿರಾ ಗಾಂಧಿ ಇದ್ದಾಗ ಟ್ಯಾಕ್ಸ್ ಇತ್ತು. ಈಗ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆ 12 ಲಕ್ಷದ ತನಕ ನೋ ಟ್ಯಾಕ್ಸ್ ಎಂದಿದ್ದಾರೆ. ತೆರಿಗೆಗಳ ಹೊರೆ ಇಲ್ಲದೇ ಮಧ್ಯಮ ವರ್ಗದವರಿಗೆ ವಿಕಸಿತ ಭಾರತ ಕಲ್ಪನೆ ಬಜೆಟ್ ಇದಾಗಿದೆ. ಕಾಂಗ್ರೆಸ್ ಅವರಿಗೆ ಕಾಮಾಲೆ ಕಣ್ಣು, ಅವರಿಗೆ ರೋಗ ಬಂದಿದೆ. ಅವರು ಇಷ್ಟಪಡುವ ಮುಸ್ಲೀಂ ರಾಷ್ಟ್ರ ಪಾಕಿಸ್ತಾನದ ಬಜೆಟ್ ನೋಡಲಿ. ನಮ್ಮ ನರೇಂದ್ರ ಮೋದಿ ಅವರ ಬಜೆಟ್ ನೋಡಲಿ, ಪ್ರಪಂಚದಲ್ಲಿ ನಾವು 5ನೇ ಸ್ಥಾನದಲ್ಲಿ ಇದ್ದೇವೆ, 4ರ ಗುರಿ ತಲುಪುತ್ತೇವೆ ಎಂದರು.

    ಗೌರವಾನ್ವಿತ ಲೆಕ್ಕರಾಮಯ್ಯನಿಗೆ ಕೇಳಲು ಬಯಸುತ್ತೇನೆ. ಬುರುಡೆ ಬಿಡಬೇಡಿ, ಸಂತೆ ಭಾಷಣ ಮಾಡಬೇಡಿ. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಎಷ್ಟು ಕೊಟ್ಟಿದ್ದಾರೆ ಹೇಳಿ? ಈಗಲೂ ಜಾಸ್ತಿ ತೆರಿಗೆ ಕೊಡುತ್ತಿದ್ದೇವೆ. ಮನಮೋಹನ್ ಸಿಂಗ್ ಕಾಲದಲ್ಲೂ ಜಾಸ್ತಿ ತೆರಿಗೆ ಕೊಡ್ತಿದ್ದೀವಿ. ಸಿದ್ದರಾಮಯ್ಯ ಅವರಿಗೆ ಜನರೇ ಚೊಂಬು ಕೊಡುವ ಕಾಲ ಬರುತ್ತದೆ. ಪೆಟ್ರೋಲ್, ಹಾಲಿಗೆ ತೆರಿಗೆ ಹಾಕಿ ಚೊಂಬು ಕೊಟ್ಟಿದ್ದೀರಿ. ಡಿಸಿಎಂ ಅವರೇ ಎಲ್ಲ ಫ್ರೀ ಫ್ರೀ ಕೊಡೋದಕ್ಕೆ ಆಗುತ್ತಾ ಎಂದಿದ್ದಾರೆ. ಮೊದಲು ನಿಮ್ಮ ಪಾರ್ಟಿ ಅವರಿಗೆ ಬುದ್ಧಿ ಹೇಳಿ ಆಮೇಲೆ ನಮ್ಮ ಬಗ್ಗೆ ಮಾತಾಡಿ ಎಂದರು.

    ಬಿಆರ್ ಪಾಟೀಲ್ ವಿಚಾರ:
    ಅಭಿವೃದ್ಧಿಗೆ ಅನುದಾನ ಕೊಟ್ಟಿಲ್ಲ ಎಂದು ಬಿಆರ್ ಪಾಟೀಲ್ ರಾಜೀನಾಮೆ ಕೊಟ್ಟಿದ್ದಾರೆ. ಕೆಲಸ ಆಗುತ್ತಿಲ್ಲ ಎಂದು ಅವರಿಗೆ ಗೊತ್ತಾಗಿದೆ. ಇದು ಮೊದಲ ಬಾರಿ ಅಲ್ಲ, ಈ ಹಿಂದೆಯು ಅವರು ರಾಜೀನಾಮೆ ಕೊಟ್ಟಿದ್ದರು. ಬಸವರಾಜ್ ರಾಯರೆಡ್ಡಿಯವರು ಈ ಹಿಂದೆ ಮಾತನಾಡಿ, ಅಭಿವೃದ್ಧಿಗೆ ಅನುದಾನ ಸಿಗುತ್ತಿಲ್ಲ. ಸರ್ಕಾರದ ಆಡಳಿತ ವಿರೋಧಿ ನೀತಿ ವಿರುದ್ಧ ಬಿಆರ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ಇದರ ಸಂಖ್ಯೆ ಮುಂದೆ ಇನ್ನು ಹೆಚ್ಚಾಗಲಿದೆ. ಇನ್ನು ಬಿರುಗಾಳಿ, ಭೂಕಂಪ ಆಗಲಿದೆ ಕಾದು ನೋಡಿ ಎಂದು ತಿಳಿಸಿದರು.ಇದನ್ನೂ ಓದಿ: ಕರ್ನಾಟಕಕ್ಕೆ ಬಜೆಟ್‌ನಲ್ಲಿ ದೊಡ್ಡ ಅನ್ಯಾಯ: ಸಿಎಂ

  • ಇದು ಜನಸಾಮಾನ್ಯರ ಬಜೆಟ್‌.. ಉಳಿತಾಯ, ಹೂಡಿಕೆಗೆ ಉತ್ತೇಜನ: ಮೋದಿ ಬಣ್ಣನೆ

    ಇದು ಜನಸಾಮಾನ್ಯರ ಬಜೆಟ್‌.. ಉಳಿತಾಯ, ಹೂಡಿಕೆಗೆ ಉತ್ತೇಜನ: ಮೋದಿ ಬಣ್ಣನೆ

    ನವದೆಹಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (Nirmala Sitharaman) ಅವರು ಶನಿವಾರ ಮಂಡಿಸಿದ ಬಜೆಟ್‌ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಾತನಾಡಿದ್ದಾರೆ. ಇದು ಜನಸಾಮಾನ್ಯರ ಬಜೆಟ್‌ ಎಂದು ಬಣ್ಣಿಸಿದ್ದಾರೆ.

    ಬಜೆಟ್‌ ಮಂಡನೆ (Union Budget 2025) ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಮೋದಿ, 2025ರ ಕೇಂದ್ರ ಬಜೆಟ್ 2025 ಜನಸಾಮಾನ್ಯರ ಬಜೆಟ್. ಹಣ ಉಳಿತಾಯ ಮತ್ತು ಹೂಡಿಕೆಗೆ ಬಜೆಟ್‌ ಉತ್ತೇಜನ ನೀಡುತ್ತದೆ. ವಿಕಸಿತ ಭಾರತ ಮತ್ತು ಅಭಿವೃದ್ಧಿ ಹೊಂದಿದ ಭಾರತ ಗುರಿಗೆ ದಾರಿ ಮಾಡಿಕೊಡುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Union Budget 2025: 77 ನಿಮಿಷಗಳ ಕಾಲ 8ನೇ ಬಜೆಟ್ ಮಂಡಿಸಿದ ಸೀತಾರಾಮನ್

    ಈ ಬಜೆಟ್‌ನಲ್ಲಿ, ವಾರ್ಷಿಕ 12 ಲಕ್ಷ ರೂ. ವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸಲಾಗಿದೆ. ಎಲ್ಲಾ ಆದಾಯ ಗುಂಪುಗಳಿಗೆ ತೆರಿಗೆಗಳನ್ನು ಕಡಿಮೆ ಮಾಡಲಾಗಿದೆ. ಇದು ನಮ್ಮ ಮಧ್ಯಮ ವರ್ಗಕ್ಕೆ ಭಾರಿ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.

    ಮೋದಿ ಅವರು 2025 ರ ಜನೋಪಯೋಗಿ ಬಜೆಟ್‌ಗಾಗಿ ಹಣಕಾಸು ಸಚಿವರು ಮತ್ತು ಅವರ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ. ಇದು ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಿಗೆ, ಹಡಗು ನಿರ್ಮಾಣ ಮತ್ತು ಸಮುದ್ರ ಕೈಗಾರಿಕೆಗಳಿಗೆ ಹಾಗೂ ದೇಶಾದ್ಯಂತ ರೈತರಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ. ಇದನ್ನೂ ಓದಿ: Union Budget 2025: ಯಾವುದು ಅಗ್ಗ, ಯಾವುದು ದುಬಾರಿ?

    ಎಲ್ಲಾ ವಲಯಗಳಿಗೂ ಆದ್ಯತೆ ನೀಡಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ ದೊಡ್ಡ ಬದಲಾವಣೆಯನ್ನು ತರಲಿರುವ ಸುಧಾರಣೆಗಳ ಬಗ್ಗೆ ನಾನು ಚರ್ಚಿಸಲು ಬಯಸುತ್ತೇನೆ ಎಂದು ಮೋದಿ ಭರವಸೆ ಮಾತುಗಳನ್ನಾಡಿದ್ದಾರೆ.

    ನಮಗೆಲ್ಲರಿಗೂ ತಿಳಿದಿರುವಂತೆ ಹಡಗು ನಿರ್ಮಾಣವು ಹೆಚ್ಚಿನ ಉದ್ಯೋಗ ನೀಡುವ ಕ್ಷೇತ್ರವಾಗಿದೆ. ಅದೇ ರೀತಿ, ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. 50 ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಹೋಟೆಲ್‌ಗಳನ್ನು ನಿರ್ಮಿಸಲಾಗುವುದು. ಮೊದಲ ಬಾರಿಗೆ ಹೋಟೆಲ್‌ಗಳನ್ನು ಮೂಲಸೌಕರ್ಯ ವ್ಯಾಪ್ತಿಗೆ ತರುವ ಮೂಲಕ ಪ್ರವಾಸೋದ್ಯಮಕ್ಕೆ ದೊಡ್ಡ ಉತ್ತೇಜನ ಸಿಗುತ್ತದೆ ಎಂದು ತಿಳಿಸಿದ್ದಾರೆ.