Tag: ಪಿಎಂ ಮೋದಿ

  • ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’‌ ಪ್ರಶಸ್ತಿ ಪ್ರದಾನ

    ಪ್ರಧಾನಿ ಮೋದಿಗೆ ಶ್ರೀಲಂಕಾದ ಅತ್ಯುನ್ನತ ಗೌರವ ‘ಮಿತ್ರ ವಿಭೂಷಣ’‌ ಪ್ರಶಸ್ತಿ ಪ್ರದಾನ

    – ಭಾರತದ 140 ಕೋಟಿ ದೇಶವಾಸಿಗಳಿಂದ ಬಂದ ಗೌರವ ಎಂದ ಮೋದಿ

    ಕೊಲೊಂಬೊ: ಶ್ರೀಲಂಕಾ ಅಧ್ಯಕ್ಷ ಅನುರ ಕುಮಾರ ದಿಸಾನಾಯಕೆ (Anura Kumara Dissanayake) ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ (PM Modi) ‘ಮಿತ್ರ ವಿಭೂಷಣ’‌ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

    ಥೈಲ್ಯಾಂಡ್‌ ಬಳಿಕ ಈಗ ಪ್ರಧಾನಿ ಮೋದಿ ಅವರು ಶ್ರೀಲಂಕಾ ಪ್ರವಾಸದಲ್ಲಿದ್ದಾರೆ. ದೇಶದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಇದನ್ನೂ ಓದಿ: ಬ್ಯಾಂಕಾಕ್‌ನ ಬುದ್ಧ ಟೆಂಪಲ್‌ಗೆ ಭೇಟಿ ನೀಡಿದ ಪ್ರಧಾನಿ ಮೋದಿ

    ಬಳಿಕ ಮೋದಿಗೆ ‘ಮಿತ್ರ ವಿಭೂಷಣ’‌ (Mitra Vibhushana) ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶ್ರೀಲಂಕಾ ಸರ್ಕಾರವು ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧ ಹೊಂದಿರುವ ದೇಶಗಳ ಮುಖ್ಯಸ್ಥರಿಗೆ ಈ ಗೌರವವನ್ನು ನೀಡುತ್ತದೆ.

    ಭಾರತವು ಐತಿಹಾಸಿಕವಾಗಿ ಶ್ರೀಲಂಕಾದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಅಲ್ಲದೆ, ಶ್ರೀಲಂಕಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಗ, ಸಹಾಯಹಸ್ತ ಚಾಚಿದ ಮೊದಲ ದೇಶ ಭಾರತವಾಗಿತ್ತು. ಈಗ ಈ ಉತ್ತಮ ಸಂಬಂಧಗಳನ್ನು ಗುರುತಿಸಿ, ಶ್ರೀಲಂಕಾ ಸರ್ಕಾರ ಪ್ರಧಾನಿ ಮೋದಿಯವರಿಗೆ ಈ ಗೌರವವನ್ನು ನೀಡಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಭಾರತದ 140 ಕೋಟಿ ದೇಶವಾಸಿಗಳಿಂದ ಬಂದ ಗೌರವ ಎಂದು ಮೋದಿ ಬಣ್ಣಿಸಿದ್ದಾರೆ. ಇದನ್ನೂ ಓದಿ: ಥೈಲ್ಯಾಂಡ್‌ನಲ್ಲಿ ಮೋದಿಗೆ ಭವ್ಯ ಸ್ವಾಗತ – ಉನ್ನತ ಮಟ್ಟದ ಸಭೆಯಲ್ಲಿ ಪ್ರಧಾನಿ ಭಾಗಿ

  • ಭಾರತದ ಅಭಿವೃದ್ಧಿಗೆ ಆರ್‌ಎಸ್‌ಎಸ್‌ ಕೊಡುಗೆ ಅಪಾರ: ಮೋದಿ ಬಣ್ಣನೆ

    ಭಾರತದ ಅಭಿವೃದ್ಧಿಗೆ ಆರ್‌ಎಸ್‌ಎಸ್‌ ಕೊಡುಗೆ ಅಪಾರ: ಮೋದಿ ಬಣ್ಣನೆ

    ಮುಂಬೈ: ಭಾರತದ ಅಭಿವೃದ್ಧಿಗೆ ಆರ್‌ಎಸ್‌ಎಸ್‌ (RSS) ಕೊಡುಗೆ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ಹಿಂದಿನಿಂದಲೂ ರಾಷ್ಟ್ರೀಯ ಸೇವೆಗೆ ಸಂಸ್ಥೆ ಬದ್ಧವಾಗಿದೆ ಎಂದು ಮೋದಿ (PM Modi) ಬಣ್ಣಿಸಿದ್ದಾರೆ.

    ಹಿಂಗ್ನಾದಲ್ಲಿ ಮಾಧವ ನೇತ್ರಾಲಯದ ಹೊಸ ಆವರಣಕ್ಕೆ ಶಂಕುಸ್ಥಾಪನೆ ಸಮಾರಂಭದಲ್ಲಿ ಮಾತನಾಡಿದ ಮೋದಿ, ಮಾನವೀಯ ನೆರವಿನಲ್ಲಿ ಭಾರತದ ನಾಯಕತ್ವವನ್ನು ಒತ್ತಿ ಹೇಳಿದ್ದಾರೆ. ಜಾಗತಿಕ ಬಿಕ್ಕಟ್ಟುಗಳಿಗೆ ದೇಶದ ತ್ವರಿತ ಪ್ರತಿಕ್ರಿಯೆಗೆ ಆರ್‌ಎಸ್‌ಎಸ್ ಮೌಲ್ಯಗಳ ಬಗ್ಗೆ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಆರ್‌ಎಸ್‌ಎಸ್‌ ಕಚೇರಿಗೆ ಮೋದಿ ಭೇಟಿ

    ಆರ್‌ಎಸ್‌ಎಸ್‌ ಸಾಮಾಜಿಕ ಸೇವೆಯ ಆಧಾರಸ್ತಂಭ. 1925 ರಲ್ಲಿ ಸ್ಥಾಪನೆಯಾದಾಗಿನಿಂದ ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ರೂಪಿಸುವಲ್ಲಿ ಅದರ ಪ್ರಸ್ತುತ ಪಾತ್ರದವರೆಗೆ ಗಮನಾರ್ಹ ಕೊಡುಗೆ ನೀಡಿದೆ. ಆರ್‌ಎಸ್‌ಎಸ್‌ನ ಅಭಿವೃದ್ಧಿ ಹೊಂದಿದ ಭಾರತದ ಕನಸು ರೂಪ ಪಡೆಯುತ್ತಿದೆ. ಮುಂದಿನ ವರ್ಷದಲ್ಲಿ, ನಾವು ಸಾಧಿಸಬೇಕಾದ ಮಹತ್ವದ ಮೈಲಿಗಲ್ಲುಗಳಿವೆ. ಮುಂದಿನ 1,000 ವರ್ಷಗಳಲ್ಲಿ ದೇಶದ ಪ್ರಗತಿಗೆ ಅಡಿಪಾಯ ಹಾಕುತ್ತೇವೆ ಎಂದು ತಿಳಿಸಿದ್ದಾರೆ.

    ಆರ್‌ಎಸ್‌ಎಸ್‌ನ ಸ್ಥಾಪಕ ಡಾ. ಕೇಶವ್ ಹೆಡ್ಗೆವಾರ್ ಅವರ ಆರಂಭಿಕ ಹೋರಾಟಗಳನ್ನು ಮೋದಿ ಶ್ಲಾಘಿಸಿದ್ದಾರೆ. ವಿಪತ್ತು ಪರಿಹಾರದಿಂದ ಹಿಡಿದು ಧಾರ್ಮಿಕ ಸಭೆಗಳಲ್ಲಿ ಯಾತ್ರಾರ್ಥಿಗಳಿಗೆ ಸಹಾಯ ಮಾಡುವವರೆಗೆ ಅವರ ನಿರಂತರ ಮಾನವೀಯ ಪ್ರಯತ್ನಗಳ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಜಡ್ಜ್‌ ಮನೆಯಲ್ಲಿ ಕಂತೆ ಕಂತೆ ನೋಟು – ಸಿಜೆಐ ಅನುಮತಿ ನೀಡದ ಹೊರತು ಎಫ್‌ಐಆರ್‌ ದಾಖಲಾಗಲ್ಲ: ಅಮಿತ್‌ ಶಾ

    ಬ್ರಿಟಿಷ್ ಯುಗದ ಭಾರತೀಯ ದಂಡ ಸಂಹಿತೆಯನ್ನು ಭಾರತೀಯ ನ್ಯಾಯ ಸಂಹಿತೆ ಅಂತ ಬದಲಾಯಿಸಲಾಯಿತು. ದೆಹಲಿಯ ರಾಜಪಥವನ್ನು ಕರ್ತವ್ಯ ಪಥ ಅಂತ ಹೆಸರಿಸಲಾಯಿತು. ಭಾರತದ ವಸಾಹತುಶಾಹಿ ಭೂತಕಾಲದ ಅವಶೇಷಗಳನ್ನು ಅಳಿಸಿಹಾಕುವ ತನ್ನ ಸರ್ಕಾರದ ಬದ್ಧತೆಯನ್ನು ಮೋದಿ ಪುನರುಚ್ಚರಿಸಿದ್ದಾರೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದಲ್ಲಿರುವ ದ್ವೀಪಗಳಿಗೆ ವಿನಾಯಕ ಸಾವರ್ಕರ್ ಮತ್ತು ಸುಭಾಷ್ ಚಂದ್ರ ಬೋಸ್ ಅವರಂತಹ ರಾಷ್ಟ್ರೀಯತಾವಾದಿ ಐಕಾನ್‌ಗಳ ಹೆಸರನ್ನು ಇಡಲಾಗುವುದು ಎಂದು ತಿಳಿಸಿದ್ದಾರೆ.

  • ಅಂಬೇಡ್ಕರ್‌ ಜಯಂತಿ: ಏ.14 ರಂದು ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ

    ಅಂಬೇಡ್ಕರ್‌ ಜಯಂತಿ: ಏ.14 ರಂದು ಸಾರ್ವತ್ರಿಕ ರಜೆ ಘೋಷಿಸಿದ ಕೇಂದ್ರ ಸರ್ಕಾರ

    – ಬಾಬಾ ಸಾಹೇಬರ ಕಟ್ಟಾ ಅನುಯಾಯಿ ಪ್ರಧಾನಿ ಮೋದಿ ಅವರ ನಿರ್ಧಾರ ಇದು: ಕೇಂದ್ರ ಸಚಿವ ಪೋಸ್ಟ್

    ನವದೆಹಲಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ (Dr. B.R.Ambedkar) ಅವರು ಹುಟ್ಟಿದ ದಿನ ಏ.14 ರಂದು ಭಾರತದಾದ್ಯಂತ ಕೇಂದ್ರದ ಎಲ್ಲಾ ಸರ್ಕಾರಿ ಕಚೇರಿಗಳಿಗೆ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ. ಅಂಬೇಡ್ಕರರ ಜಯಂತಿ ದಿನದಂದು ಇನ್ಮುಂದೆ ರಾಷ್ಟ್ರೀಯ ರಜೆ ಇರಲಿದೆ.

    ಕೇಂದ್ರ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಈ ಘೋಷಣೆ ಮಾಡಿದ್ದಾರೆ. ‘ಸಮಾಜದಲ್ಲಿ ಸಮಾನತೆಯ ಹೊಸ ಯುಗವನ್ನು ಸ್ಥಾಪಿಸಿದ ಸಂವಿಧಾನ ಶಿಲ್ಪಿ, ನಮ್ಮ ಬಾಬಾ ಸಾಹೇಬ್ ಪೂಜ್ಯ ಡಾ. ಭೀಮರಾವ್ ಅಂಬೇಡ್ಕರ್ ಜಿ ಅವರ ಜನ್ಮ ವಾರ್ಷಿಕೋತ್ಸವದಂದು ಈಗ ಸಾರ್ವಜನಿಕ ರಜೆ ಇರುತ್ತದೆ. ಬಾಬಾ ಸಾಹೇಬರ ಕಟ್ಟಾ ಅನುಯಾಯಿ, ಗೌರವಾನ್ವಿತ ಪ್ರಧಾನಿ ಜಿ ಅವರು ಈ ನಿರ್ಧಾರವನ್ನು ತೆಗೆದುಕೊಳ್ಳುವ ಮೂಲಕ ರಾಷ್ಟ್ರದ ಭಾವನೆಗಳನ್ನು ಗೌರವಿಸಿದ್ದಾರೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ ಆರ್‌ಜಿ ಕರ್ ವೈದ್ಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ: ಸಿಬಿಐ ವರದಿ

    ಭಾರತದಾದ್ಯಂತ ಕೈಗಾರಿಕಾ ಸಂಸ್ಥೆಗಳು ಸೇರಿದಂತೆ ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಏಪ್ರಿಲ್ 14 ರ ಸೋಮವಾರದಂದು ಮುಚ್ಚಲಿವೆ. ಈ ನಿರ್ಧಾರದ ಬಗ್ಗೆ ಸಂಬಂಧಪಟ್ಟ ಎಲ್ಲರಿಗೂ ತಿಳಿಸಲು ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳಿಗೆ ಸೂಚಿಸಲಾಗಿದೆ.

    ಬಾಬಾಸಾಹೇಬ್ ಅಂಬೇಡ್ಕರ್ ಎಂದೇ ಜನಪ್ರಿಯರಾಗಿರುವ ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು 1891 ರ ಏಪ್ರಿಲ್ 14 ರಂದು ಮಧ್ಯಪ್ರದೇಶದ ಮಾವ್‌ನಲ್ಲಿ ಜನಿಸಿದರು. ಸಾಮಾಜಿಕ ತಾರತಮ್ಯದ ವಿರುದ್ಧದ ಹೋರಾಟದಲ್ಲಿ ಪ್ರವರ್ತಕ ನಾಯಕರಾಗಿ ಗುರುತಿಸಿಕೊಂಡ ಅಂಬೇಡ್ಕರ್‌, ತಮ್ಮ ಇಡೀ ಜೀವನವನ್ನು ತುಳಿತಕ್ಕೊಳಗಾದ ಸಮುದಾಯಗಳ, ವಿಶೇಷವಾಗಿ ದಲಿತರ ಹಕ್ಕುಗಳಿಗಾಗಿ ಮುಡಿಪಾಗಿಟ್ಟರು.

    ಅಂಬೇಡ್ಕರ್ ಅವರು ಭಾರತೀಯ ಸಂವಿಧಾನ ರಚನೆಗೆ ನೀಡಿದ ಮಹತ್ವದ ಕೊಡುಗೆಯೊಂದಿಗೆ ಆಧುನಿಕ ಭಾರತವನ್ನು ರೂಪಿಸಿದರು. ಅರ್ಥಶಾಸ್ತ್ರಜ್ಞರು, ವಿದ್ವಾಂಸರು ಮತ್ತು ದೇಶದ ಮೊದಲ ಕಾನೂನು ಮತ್ತು ನ್ಯಾಯ ಸಚಿವರಾಗಿದ್ದರು. ಅವರ ಕೊಡುಗೆಗಳು ಭಾರತದ ಕಾನೂನು ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದವು. ಒಂಬತ್ತು ಭಾಷೆಗಳನ್ನು ಮಾತನಾಡುವ ಬಹುಭಾಷಾ ಪಂಡಿತರಾಗಿದ್ದ ಅಂಬೇಡ್ಕರ್ ಶಿಕ್ಷಣ ಮತ್ತು ಆಡಳಿತದ ಮೇಲೆ ಪ್ರಭಾವ ಬೀರಿದ್ದರು. ಇದನ್ನೂ ಓದಿ: ಕೇತಗಾನಹಳ್ಳಿ‌ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ; ಹೆಚ್‌ಡಿಕೆ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿದ ಸುಪ್ರೀಂ

  • ಮೋದಿ ಬಳಿ ಉದ್ಧವ್‌ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಮೈತ್ರಿಗೆ ಸಿದ್ಧ ಎಂದಿದ್ರು: ಏಕನಾಥ್‌ ಶಿಂಧೆ

    ಮೋದಿ ಬಳಿ ಉದ್ಧವ್‌ ಠಾಕ್ರೆ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಮೈತ್ರಿಗೆ ಸಿದ್ಧ ಎಂದಿದ್ರು: ಏಕನಾಥ್‌ ಶಿಂಧೆ

    ಮುಂಬೈ: ದೆಹಲಿಯಲ್ಲಿ ನಡೆದ ಸಭೆಯೊಂದರಲ್ಲಿ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರು ಪ್ರಧಾನಿ ಮೋದಿ (PM Modi) ಅವರ ಬಳಿ ಕ್ಷಮೆಯಾಚಿಸಿ, ಬಿಜೆಪಿ ಜೊತೆ ಮತ್ತೆ ಕೈಜೋಡಿಸುವ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಮುಂಬೈಗೆ ಹಿಂದಿರುಗಿದ ಬೆನ್ನಲ್ಲೇ ಠಾಕ್ರೆ ನಿರ್ಧಾರ ಬದಲಿಸಿದರು ಎಂದು ಮಹಾರಾಷ್ಟ್ರ ಡಿಸಿಎಂ ಏಕನಾಥ್‌ ಶಿಂಧೆ (Eknath Shinde) ಆರೋಪಿಸಿದ್ದಾರೆ.

    ಉದ್ಧವ್ ಠಾಕ್ರೆ (Uddhav Thackeray) ದೆಹಲಿಯಲ್ಲಿ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ, ‘ದಯವಿಟ್ಟು ನನ್ನನ್ನು ಕ್ಷಮಿಸಿ… ನಾವು ಮತ್ತೆ ನಿಮ್ಮೊಂದಿಗೆ ಕೈಜೋಡಿಸಲು ಬಯಸುತ್ತೇವೆ’ ಎಂದು ಹೇಳಿದ್ದರು. ಆದರೆ ಮುಂಬೈಗೆ ಹಿಂದಿರುಗಿದ ನಂತರ ಅವರು ತಮ್ಮ ನಿಲುವನ್ನು ಬದಲಾಯಿಸಿದರು ಎಂದು ವಿಧಾನ ಪರಿಷತ್‌ನಲ್ಲಿ ಶಿಂಧೆ ತಿಳಿಸಿದ್ದಾರೆ. ಇದನ್ನೂ ಓದಿ: ಕೊಂಕಣ ರೈಲ್ವೆ ವಿಲೀನ, ಮಂಗಳೂರು ರೈಲು ವ್ಯಾಪ್ತಿ ಪುನರ್ ರಚನೆ – ಲೋಕಸಭೆಯಲ್ಲಿ ಧ್ವನಿಯೆತ್ತಿದ ಕ್ಯಾ.ಬ್ರಿಜೇಶ್ ಚೌಟ

    ಶಿವಸೇನೆ (ಉದ್ಧವ್‌ ಬಣ) ನಾಯಕ ಅನಿಲ್ ಪರಬ್ ಕೂಡ ಇದೇ ರೀತಿಯ ಹಿಂಬಾಗಿಲಿನ ಮಾತುಕತೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಶಿಂಧೆ ಆರೋಪಿಸಿದ್ದಾರೆ. ಅನಿಲ್ ಪರಬ್, ನಿಮಗೆ ನೋಟಿಸ್ ಬಂದಾಗ ನೀವು (ಬಿಜೆಪಿ ನಾಯಕರನ್ನು ಭೇಟಿ ಮಾಡಲು) ಹೋಗಿದ್ದೀರಿ. ಪ್ರಕರಣದಿಂದ ಪಾರಾಗಲು ನೀವು ಕೇಳಿದ್ದೀರಿ. ನಿಮಗೆ ಪರಿಹಾರ ಸಿಕ್ಕ ನಂತರ, ನೀವು ಪಕ್ಷ ಬದಲಾಯಿಸಿದ್ದೀರಿ. ಇದು ನನಗೆ ಚೆನ್ನಾಗಿ ತಿಳಿದಿದೆ ಎಂದು ಡಿಸಿಎಂ ಕಾಲೆಳೆದಿದ್ದಾರೆ.

    ಮಹಾ ವಿಕಾಸ್ ಅಘಾಡಿ (ಎಂವಿಎ)ಯಿಂದ ಹೊರಬಂದು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಶಿಂಧೆ, ತಮ್ಮ ಬಣವು ಠಾಕ್ರೆಗಿಂತ ಭಿನ್ನವಾಗಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ನಾಗ್ಪುರ ಹಿಂಸಾಚಾರವು ಆಕಸ್ಮಿಕವಲ್ಲ, ಪೂರ್ವ ಯೋಜಿತ ದಾಳಿ – ʻಮಹಾʼ ಸಿಎಂ ದೇವೇಂದ್ರ ಫಡ್ನವೀಸ್

    ನಾವು ಎಲ್ಲವನ್ನೂ ಬಹಿರಂಗವಾಗಿ ಮಾಡಿದ್ದೇವೆ. ನಾವು ಗೌಪ್ಯವಾಗಿ ಏನೂ ಮಾಡಲಿಲ್ಲ. ಬಿಲ್ಲು-ಬಾಣದ ಸಂಕೇತವಾದ ಶಿವಸೇನೆ ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತ ಅಪಾಯದಲ್ಲಿದ್ದಾಗ ನಾವು ಈ ನಿಲುವು ತೆಗೆದುಕೊಂಡೆವು. ನೀವು (ಠಾಕ್ರೆ) ಔರಂಗಜೇಬ್ ಅವರ ಸಿದ್ಧಾಂತವನ್ನು ಸ್ವೀಕರಿಸಿದಾಗ, ನಾವು ನಿಮ್ಮ ಬಂಡಿಯನ್ನು ಉರುಳಿಸಿದೆವು ಎಂದು ಶಿಂಧೆ ಸದನದಲ್ಲಿ ಹೇಳಿದ್ದಾರೆ.

  • ನಿಮ್ಮನ್ನು ಭಾರತದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ: ಸುನಿತಾ ವಿಲಿಯಮ್ಸ್‌ಗೆ ಮೋದಿ ಪತ್ರ

    ನಿಮ್ಮನ್ನು ಭಾರತದಲ್ಲಿ ನೋಡಲು ಕಾತರದಿಂದ ಕಾಯುತ್ತಿದ್ದೇವೆ: ಸುನಿತಾ ವಿಲಿಯಮ್ಸ್‌ಗೆ ಮೋದಿ ಪತ್ರ

    ನವದೆಹಲಿ: ಸತತ ಒಂಬತ್ತು ತಿಂಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡು ಸಂಕಷ್ಟ ಅನುಭವಿಸಿ ಕೊನೆಗೂ ಭೂಮಿಗೆ ವಾಪಸ್‌ ಆಗುತ್ತಿರುವ ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನಿತಾ ವಿಲಿಯಮ್ಸ್‌ (Sunita Williams) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ.

    ಪ್ರಧಾನಿ ಮೋದಿ (PM Modi) ಅವರ ಪತ್ರವನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಭೂಮಿಗೆ ಬರುತ್ತಿದ್ದಾರೆ ಸುನಿತಾ ವಿಲಿಯಮ್ಸ್‌ – ಎಲ್ಲಿ ಇಳಿಯುತ್ತಾರೆ? ಇಳಿಯುವ ಪ್ರಕ್ರಿಯೆ ಹೇಗೆ? ಇಳಿದ ನಂತರ ಮುಂದೇನು?

    ಪತ್ರದಲ್ಲಿ ಏನಿದೆ?
    ಭಾರತದ ಜನರ ಪರವಾಗಿ ನಾನು ನಿಮಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಇಂದು ನಡೆದ ಕಾರ್ಯಕ್ರಮದಲ್ಲಿ, ನಾನು ಪ್ರಸಿದ್ಧ ಗಗನಯಾತ್ರಿ ಮೈಕ್ ಮಾಸ್ಸಿಮಿನೊ ಅವರನ್ನು ಭೇಟಿಯಾದೆ. ನಮ್ಮ ಸಂಭಾಷಣೆಯ ಸಮಯದಲ್ಲಿ, ನಿಮ್ಮ ಹೆಸರು ಪ್ರಸ್ತಾಪವಾಯಿತು. ನಾವು ನಿಮ್ಮ ಬಗ್ಗೆ ಮತ್ತು ನಿಮ್ಮ ಕೆಲಸದ ಬಗ್ಗೆ ಎಷ್ಟು ಹೆಮ್ಮೆಪಡುತ್ತೇವೆ ಎಂದು ಚರ್ಚಿಸಿದೆವು. ಈ ಸಂವಾದದ ನಂತರ, ನಾನು ನಿಮಗೆ ಪತ್ರ ಬರೆಯಲೇಬೇಕು ಎನಿಸಿತು.

    ನಾನು ಅಮೆರಿಕಕ್ಕೆ ಭೇಟಿ ನೀಡಿದ ಸಮಯದಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಜೋ ಬೈಡೆನ್ ಅವರನ್ನು ಭೇಟಿಯಾದಾಗ‌ ನಿಮ್ಮ ಯೋಗಕ್ಷೇಮದ ಬಗ್ಗೆ ವಿಚಾರಿಸಿದೆ. 1.4 ಶತಕೋಟಿಗೂ ಹೆಚ್ಚು ಭಾರತೀಯರು ನಿಮ್ಮ ಸಾಧನೆಗಳ ಬಗ್ಗೆ ಯಾವಾಗಲೂ ಹೆಮ್ಮೆ ಪಡುತ್ತಾರೆ. ಇತ್ತೀಚಿನ ಬೆಳವಣಿಗೆಗಳು ಮತ್ತೊಮ್ಮೆ ನಿಮ್ಮ ಸ್ಪೂರ್ತಿದಾಯಕ ಧೈರ್ಯ ಮತ್ತು ಪರಿಶ್ರಮವನ್ನು ಪ್ರದರ್ಶಿಸಿವೆ.

    ಸುನಿತಾ ಅವರು ಸಾವಿರಾರು ಮೈಲುಗಳಷ್ಟು ದೂರದಲ್ಲಿದ್ದರೂ, ಅವರು ಹೃದಯಗಳಿಗೆ ಹತ್ತಿರವಾಗಿದ್ದರು. ಭಾರತದ ಜನರು ಅವರ ಉತ್ತಮ ಆರೋಗ್ಯ ಮತ್ತು ಅವರ ಧ್ಯೇಯದಲ್ಲಿ ಯಶಸ್ಸಿಗೆ ಪ್ರಾರ್ಥಿಸುತ್ತಿದ್ದಾರೆ. ಇದನ್ನೂ ಓದಿ: ನಾಳೆ ಭೂಮಿಗೆ ಮರಳಲಿದ್ದಾರೆ ಸುನಿತಾ ವಿಲಿಯಮ್ಸ್

    ಶ್ರೀಮತಿ ಬೋನಿ ಪಾಂಡ್ಯ ನಿಮ್ಮ ಮರಳುವಿಕೆಗಾಗಿ ಕಾತರದಿಂದ ಕಾಯುತ್ತಿರಬೇಕು ಮತ್ತು ದಿವಂಗತ ದೀಪಕ್‌ಭಾಯ್ ಅವರ ಆಶೀರ್ವಾದಗಳು ನಿಮ್ಮೊಂದಿಗಿವೆ. 2016 ರಲ್ಲಿ ನಾನು ಅಮೆರಿಕಕ್ಕೆ ಭೇಟಿ ನೀಡಿದ್ದಾಗ ಅವರನ್ನು ನಿಮ್ಮೊಂದಿಗೆ ಭೇಟಿಯಾಗಿದ್ದನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ನೀವು ಹಿಂದಿರುಗಿದ ನಂತರ, ನಿಮ್ಮನ್ನು ಭಾರತದಲ್ಲಿ ನೋಡಲು ನಾವು ಎದುರು ನೋಡುತ್ತಿದ್ದೇವೆ. ಭಾರತವು ತನ್ನ ಪ್ರಸಿದ್ಧ ಹೆಣ್ಣುಮಕ್ಕಳಲ್ಲಿ ಒಬ್ಬರಿಗೆ ಆತಿಥ್ಯ ವಹಿಸಿಕೊಳ್ಳಲು ಸಂತೋಷವಾಗುತ್ತದೆ. ಮೈಕೆಲ್ ವಿಲಿಯಮ್ಸ್ ಅವರಿಗೆ ನನ್ನ ಆತ್ಮೀಯ ಶುಭಾಶಯಗಳನ್ನು ಕಳುಹಿಸುತ್ತೇನೆ. ಭೂಮಿಗೆ ವಾಪಸ್‌ ಆಗುತ್ತಿರುವ ನಿಮಗೆ ಮತ್ತು ವಿಲ್ಮೋರ್‌ ಅವರಿಗೆ ಶುಭಾಶಯಗಳು ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ. ಸುನಿತಾ ವಿಲಿಯಮ್ಸ್‌ ಮತ್ತು ಬುಜ್‌ ವಿಲ್ಮೋರ್‌ ಅವರು ಭೂಮಿಗೆ ಮಾ.19 ರಂದು ವಾಪಸ್‌ ಆಗುವ ಸಾಧ್ಯತೆ ಇದೆ.

  • ಪ್ರಧಾನಿ ಮೋದಿ ಹೇಳಿಕೆಗೆ ಚೀನಾ ಮೆಚ್ಚುಗೆ

    ಪ್ರಧಾನಿ ಮೋದಿ ಹೇಳಿಕೆಗೆ ಚೀನಾ ಮೆಚ್ಚುಗೆ

    ನವದೆಹಲಿ: AI ಸಂಶೋಧಕ ಲೆಕ್ಸ್ ಫ್ರಿಡ್ಮನ್ ಅವರೊಂದಿಗಿನ ಪಾಡ್‌ಕಾಸ್ಟ್‌ ನಂತರ ಪ್ರಧಾನಿ ಮೋದಿ ಅವರನ್ನು ಅಪರೂಪಕ್ಕೆ ಚೀನಾ ಹಾಡಿ ಹೊಗಳಿದೆ.

    ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಚೀನಾ-ಭಾರತ ಸಂಬಂಧಗಳ ಕುರಿತು ಪ್ರಧಾನಿ ಮೋದಿಯವರ ಸಕಾರಾತ್ಮಕ ಹೇಳಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿ ಅವರ ಹೇಳಿಕೆಯು ಭಿನ್ನಾಭಿಪ್ರಾಯಕ್ಕಿಂತ ಮಾತುಕತೆಗೆ ಒಲವು ತೋರುತ್ತದೆ ಎಂದು ತಿಳಿಸಿದ್ದಾರೆ.

    2000 ವರ್ಷಗಳಿಗೂ ಹೆಚ್ಚಿನ ಕಾಲದ ಇತಿಹಾಸದಲ್ಲಿ, ಎರಡೂ ದೇಶಗಳು (ಭಾರತ ಮತ್ತು ಚೀನಾ) ಸ್ನೇಹಪರ ವಿನಿಮಯವನ್ನು ಉಳಿಸಿಕೊಂಡಿವೆ ಎಂದು ನಾನು ಒತ್ತಿ ಹೇಳುತ್ತೇನೆ ಎಂದು ಮಾವೋ ನಿಂಗ್ ಸೋಮವಾರ ಬೀಜಿಂಗ್‌ನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎರಡೂ ದೇಶಗಳು ಪರಸ್ಪರ ಕಲಿತು ನಾಗರಿಕತೆಯ ಸಾಧನೆಗಳು ಮತ್ತು ಮಾನವ ಪ್ರಗತಿಗೆ ಕೊಡುಗೆ ನೀಡಿವೆ ಎಂದಿದ್ದಾರೆ.

    ಈ ಹೇಳಿಕೆಯು ಪ್ರಧಾನಿ ಮೋದಿಯವರ ಭಾವನೆಗಳನ್ನು ಪ್ರತಿಧ್ವನಿಸುವಂತಿದೆ. ಭಾರತ ಮತ್ತು ಚೀನಾ ನಡುವೆ ನಿಜವಾದ ಸಂಘರ್ಷದ ಇತಿಹಾಸವಿಲ್ಲ. ಅವರ ಸಂಬಂಧ ಹೊಸದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

    ನೀವು ಐತಿಹಾಸಿಕ ದಾಖಲೆಗಳನ್ನು ನೋಡಿದರೆ, ಶತಮಾನಗಳಿಂದ ಭಾರತ ಮತ್ತು ಚೀನಾ ಪರಸ್ಪರ ಕಲಿತಿವೆ. ಅವರು ಯಾವಾಗಲೂ ಒಂದಲ್ಲ ಒಂದು ರೀತಿಯಲ್ಲಿ ಜಾಗತಿಕ ಒಳಿತಿಗೆ ಕೊಡುಗೆ ನೀಡಿದ್ದಾರೆ. ಹಳೆಯ ದಾಖಲೆಗಳು ಒಂದು ಹಂತದಲ್ಲಿ, ಭಾರತ ಮತ್ತು ಚೀನಾ ಮಾತ್ರ ವಿಶ್ವದ ಜಿಡಿಪಿಯ ಶೇಕಡಾ 50 ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದವು ಎಂದು ಸೂಚಿಸುತ್ತವೆ. ಭಾರತದ ಕೊಡುಗೆ ಅಷ್ಟೊಂದು ದೊಡ್ಡದಾಗಿತ್ತು. ನಮ್ಮ ಸಂಬಂಧ ಆಳವಾದ ಸಾಂಸ್ಕೃತಿಕ ಸಂಪರ್ಕಗಳೊಂದಿಗೆ ಅತ್ಯಂತ ಪ್ರಬಲವಾಗಿವೆ ಎಂದು ನಾನು ನಂಬುತ್ತೇನೆ ಎಂದು ಪ್ರಧಾನಿ ಮೋದಿ, ಫ್ರಿಡ್ಮನ್‌ಗೆ ತಿಳಿಸಿದ್ದರು.

  • ಪ್ರಧಾನಿ ಮೋದಿ ಭೇಟಿಯಾದ ಯುಎಸ್‌ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್‌

    ಪ್ರಧಾನಿ ಮೋದಿ ಭೇಟಿಯಾದ ಯುಎಸ್‌ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್‌

    – ಗಬ್ಬಾರ್ಡ್‌ಗೆ ಮಹಾಕುಂಭದ ಗಂಗಾ ನೀರಿನ ಹೂದಾನಿ ಗಿಫ್ಟ್‌ ಕೊಟ್ಟ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸೋಮವಾರ ಸಂಜೆ ದೆಹಲಿಯಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ (Tulsi Gabbard) ಅವರನ್ನು ಭೇಟಿಯಾದರು.

    ಭೇಟಿಯ ಸಮಯದಲ್ಲಿ ಪರಸ್ಪರರು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು. ಮೋದಿ ಅವರು ಅಮೆರಿಕದ ಗುಪ್ತಚರ ಮುಖ್ಯಸ್ಥರಿಗೆ ಮಹಾಕುಂಭವನ್ನು ಆಯೋಜಿಸಿದ್ದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ತಂದ ಗಂಗಾ ನೀರಿನ ಹೂದಾನಿಯನ್ನು ಉಡುಗೊರೆಯಾಗಿ ನೀಡಿದರು. ಭಯೋತ್ಪಾದನೆ ಮತ್ತು ಸೈಬರ್ ಅಪರಾಧಗಳನ್ನು ನಿಭಾಯಿಸಲು ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಜಡ್ಜ್ ಆಗಿ ಬಾಗ್ಚಿ ಅಧಿಕಾರ ಸ್ವೀಕಾರ – 2031ರಲ್ಲಿ ಸಿಜೆಐ ಅಗಲಿದ್ದಾರೆ ಬಾಗ್ಚಿ

    ಇದಕ್ಕೂ ಮುನ್ನ ತುಳಸಿ ಗಬ್ಬಾರ್ಡ್‌ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಖಲಿಸ್ತಾನಿ ಭಯೋತ್ಪಾದಕ ಗುಂಪು ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಮತ್ತು ಅದರ ಸಂಸ್ಥಾಪಕ ಗುರುಪತ್ವಂತ್ ಪನ್ನುನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಸರ್ಕಾರಕ್ಕೆ ಸಿಂಗ್‌ ಮನವಿ ಮಾಡಿದ್ದರು.

    ಎರಡು ತಿಂಗಳಲ್ಲಿ ಗಬ್ಬಾರ್ಡ್ ಅವರು ಪ್ರಧಾನ ಮಂತ್ರಿಯೊಂದಿಗಿನ ಎರಡನೇ ಭೇಟಿ ಇದಾಗಿದೆ. ಫೆಬ್ರವರಿಯಲ್ಲಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಾಗಿ ವಾಷಿಂಗ್ಟನ್ ಡಿ.ಸಿ.ಯಲ್ಲಿದ್ದಾಗ ಇಬ್ಬರೂ ಭೇಟಿಯಾಗಿದ್ದರು. ಇದನ್ನೂ ಓದಿ: ಏಪ್ರಿಲ್ 1 ರಿಂದ ಮಾರುತಿ ಸುಝುಕಿ ಕಂಪನಿ ಕಾರುಗಳು ದುಬಾರಿ

  • ನನ್ನ ಜೀವನವು ಕೋಟ್ಯಂತರ ತಾಯಂದಿರ ಆಶೀರ್ವಾದ: ಲಕ್‌ಪತಿ ದೀದಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಮಾತು

    ನನ್ನ ಜೀವನವು ಕೋಟ್ಯಂತರ ತಾಯಂದಿರ ಆಶೀರ್ವಾದ: ಲಕ್‌ಪತಿ ದೀದಿಯರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಮಾತು

    ಗಾಂಧೀನಗರ: ನನ್ನ ಜೀವನವು ಕೋಟ್ಯಂತರ ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದ. ನಾನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ. ತಾಯಂದಿರು ಮತ್ತು ಸಹೋದರಿಯರ ಆಶೀರ್ವಾದವೇ ನನ್ನ ದೊಡ್ಡ ಶಕ್ತಿ. ಮಹಿಳೆಯರನ್ನು ಗೌರವಿಸುವುದೇ ಅಭಿವೃದ್ಧಿ ಹೊಂದಿದ ಭಾರತಕ್ಕೆ ಮೊದಲ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಗುಜರಾತ್‌ನ ನವಸಾರಿಯಲ್ಲಿ ಲಕ್‌ಪತಿ ದೀದಿಯರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ ಅವರು ವನಸಿ ಬೋರ್ಸಿ ಗ್ರಾಮದಲ್ಲಿ 25,000 ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳ (ಸ್ವಸಹಾಯ ಗುಂಪುಗಳು) 2.5 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ 450 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ವಿತರಿಸಿದರು. ಗುಜರಾತ್‌ಗೆ 2,587 ಕೋಟಿ ರೂ.ಗಳ ಯೋಜನೆಗಳನ್ನು ಉಡುಗೊರೆಯಾಗಿ ನೀಡಿದರು.

    ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಗುಜರಾತ್ ಸಫಲ್ ಮತ್ತು ಗುಜರಾತ್ ಮೈತ್ರಿ ಎಂಬ ಎರಡು ಯೋಜನೆಗಳನ್ನು ಇಂದು ಇಲ್ಲಿ ಪ್ರಾರಂಭಿಸಲಾಗಿದೆ. ಸರ್ಕಾರದ ಅನೇಕ ಯೋಜನೆಗಳ ಹಣವನ್ನು ನೇರವಾಗಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ. ಇದಕ್ಕಾಗಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಎಂದರು.

    ಇಂದು ಮಹಿಳೆಯರಿಗೆ ಮೀಸಲಾದ ದಿನ. ‘ಮುಸ್ಲಿಂ ಮಹಿಳೆಯರು ರಕ್ಷಣೆ ಕೋರಿದರು ಮತ್ತು ಅವರ ಜೀವನವು ಮುಸ್ಲಿಂ ಮಹಿಳೆಯರ (ವಿವಾಹದ ಹಕ್ಕುಗಳ ರಕ್ಷಣೆಯ ಹಕ್ಕು) ಕಾಯ್ದೆ, 2019 ರ ಅಡಿಯಲ್ಲಿ ಹಾಳಾಗದಂತೆ ರಕ್ಷಿಸಲಾಗಿದೆ. ಕಾಶ್ಮೀರದಲ್ಲಿ 370ನೇ ವಿಧಿ ಜಾರಿಯಲ್ಲಿದ್ದಾಗ, ಅಲ್ಲಿನ ಮಹಿಳೆಯರು ಅನೇಕ ಹಕ್ಕುಗಳಿಂದ ವಂಚಿತರಾಗಿದ್ದರು. ಅವರು ರಾಜ್ಯದ ಹೊರಗೆ ಮದುವೆಯಾದರೆ, ಅವರಿಗೆ ಆಸ್ತಿಯ ಹಕ್ಕು ಸಿಗುತ್ತಿರಲಿಲ್ಲ. 370 ನೇ ವಿಧಿಯನ್ನು ತೆಗೆದುಹಾಕಿದ ನಂತರ, ಈಗ ಅವರು ದೇಶದ ಇತರ ಮಹಿಳೆಯರಂತೆ ಸಮಾನ ಹಕ್ಕುಗಳನ್ನು ಹೊಂದಿದ್ದಾರೆ ಎಂದು ತಿಳಿಸಿದರು.

    ಮಹಿಳೆಯರಿಗೆ ಶೌಚಾಲಯ (ಇಜ್ಜತ್ ಘರ್) ಕಲ್ಪಿಸುವ ಮೂಲಕ ನಾವು ಅವರಿಗೆ ಗೌರವ ನೀಡಿದ್ದೇವೆ ಎಂದು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ತೆರೆಯುವ ಮೂಲಕ ಸಬಲೀಕರಣಗೊಂಡರು. ಅವರಿಗೆ ಉಜ್ವಲ್ ಯೋಜನೆಯಡಿ ಆರೋಗ್ಯ ಸೌಲಭ್ಯಗಳನ್ನು ನೀಡಲಾಯಿತು. ಮೊದಲು ಮಹಿಳೆಯರಿಗೆ 12 ವಾರಗಳ ಹೆರಿಗೆ ರಜೆ ಸಿಗುತ್ತಿತ್ತು. ಆದರೆ, ನಾವು ಅದನ್ನು 26 ವಾರಗಳಿಗೆ ಹೆಚ್ಚಿಸಿದ್ದೇವೆ ಎಂದು ಹೇಳಿದರು.

    ಇಂದು ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳು ನಮ್ಮ ಭಾರತದಲ್ಲಿದ್ದಾರೆ ಎಂದು ನೋಡಿ ನಮಗೆಲ್ಲರಿಗೂ ಹೆಮ್ಮೆಯಾಗುತ್ತದೆ. ಇದು ಮಹಿಳಾ ಸಬಲೀಕರಣದ ಶಕ್ತಿಯ ಒಂದು ಉದಾಹರಣೆಯಾಗಿದೆ. ಅದು ರಾಜಕೀಯ ಕ್ಷೇತ್ರವಾಗಿರಲಿ, ಕ್ರೀಡೆಯಾಗಿರಲಿ, ನ್ಯಾಯಾಂಗವಾಗಿರಲಿ ಅಥವಾ ಪೊಲೀಸ್ ಆಗಿರಲಿ, ದೇಶದ ಪ್ರತಿಯೊಂದು ವಲಯದಲ್ಲಿ, ಪ್ರತಿಯೊಂದು ಆಯಾಮದಲ್ಲಿ ಮಹಿಳೆಯರ ಧ್ವಜವು ಎತ್ತರಕ್ಕೆ ಹಾರುತ್ತಿದೆ.

    2014 ರಿಂದ ಸುಮಾರು 3 ಕೋಟಿ ಮಹಿಳೆಯರು ಗೃಹಿಣಿಯರಾಗಿದ್ದಾರೆ. ಇಂದು ಜಲ ಜೀವನ್ ಮಿಷನ್ ಬಗ್ಗೆ ಪ್ರಪಂಚದಾದ್ಯಂತ ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ. ಇಂದು, ಜಲ ಜೀವನ್ ಮಿಷನ್ ಮೂಲಕ ದೇಶದ ಪ್ರತಿಯೊಂದು ಹಳ್ಳಿಗೂ ನೀರು ತಲುಪುತ್ತಿದೆ. ದೇಶದ ಆತ್ಮ ಗ್ರಾಮೀಣ ಭಾರತದಲ್ಲಿದೆ ಎಂದು ಗಾಂಧೀಜಿ ಹೇಳುತ್ತಿದ್ದರು. ಇಂದು ನಾನು ಅದಕ್ಕೆ ಇನ್ನೊಂದು ಸಾಲನ್ನು ಸೇರಿಸುತ್ತೇನೆ. ಗ್ರಾಮೀಣ ಭಾರತದ ಆತ್ಮ ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿದೆ ಎಂದರು.

  • ಏಕತೆಯ ಮಹಾ ಯಜ್ಞ ಪೂರ್ಣಗೊಂಡಿತು: ಐತಿಹಾಸಿಕ ಕುಂಭಮೇಳದ ಬಗ್ಗೆ ಮೋದಿ ಬಣ್ಣನೆ

    ಏಕತೆಯ ಮಹಾ ಯಜ್ಞ ಪೂರ್ಣಗೊಂಡಿತು: ಐತಿಹಾಸಿಕ ಕುಂಭಮೇಳದ ಬಗ್ಗೆ ಮೋದಿ ಬಣ್ಣನೆ

    ನವದೆಹಲಿ: ದಾಖಲೆಗಳೊಂದಿಗೆ ತೆರೆ ಕಂಡ ಐತಿಹಾಸ ಮಹಾ ಕುಂಭಮೇಳವನ್ನು (Maha Kumbh) ಪ್ರಧಾನಿ ನರೇಂದ್ರ ಮೋದಿ (Narendra Modi) ಬಣ್ಣಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿರುವ ಮೋದಿ, ಈ ಏಕತೆಯ ಮಹಾಕುಂಭವನ್ನು ಯಶಸ್ವಿಗೊಳಿಸಲು ದೇಶವಾಸಿಗಳ ಕಠಿಣ ಪರಿಶ್ರಮ, ಪ್ರಯತ್ನಗಳು ಮತ್ತು ದೃಢಸಂಕಲ್ಪದಿಂದ ಪ್ರಭಾವಿತನಾಗಿದ್ದೇನೆ. ಹೀಗಾಗಿ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯ ಜ್ಯೋತಿರ್ಲಿಂಗವಾದ ಶ್ರೀ ಸೋಮನಾಥನ ದರ್ಶನಕ್ಕೆ ಹೋಗುತ್ತೇನೆ. ಭಕ್ತಿಯ ಸಂಕೇತವಾಗಿ ಸಂಕಲ್ಪ ಪುಷ್ಪವನ್ನು ಅರ್ಪಿಸುವ ಮೂಲಕ ಪ್ರತಿಯೊಬ್ಬ ಭಾರತೀಯನಿಗಾಗಿ ಪ್ರಾರ್ಥಿಸುತ್ತೇನೆ. ದೇಶವಾಸಿಗಳಲ್ಲಿ ಈ ಏಕತೆಯು ನಿರಂತರವಾಗಿ ಇರಲಿ ಎಂದು ನಾನು ಬಯಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ವಿಶ್ವ ದಾಖಲೆಯೊಂದಿಗೆ ಅತಿದೊಡ್ಡ ಅಧ್ಯಾತ್ಮಿಕ ಮೇಳಕ್ಕೆ ವಿದ್ಯುಕ್ತ ತೆರೆ – 45 ದಿನದಲ್ಲಿ 65 ಕೋಟಿ ಭಕ್ತರ ಪುಣ್ಯಸ್ನಾನ

    ಈ ಮಹಾ ಕುಂಭಮೇಳದಲ್ಲಿ ಸಮಾಜದ ಪ್ರತಿಯೊಂದು ಸ್ಥರದ ಮತ್ತು ಪ್ರತಿಯೊಂದು ಕ್ಷೇತ್ರದ ಜನರು ಒಟ್ಟುಗೂಡಿದರು. ‘ಏಕ ಭಾರತ ಶ್ರೇಷ್ಠ ಭಾರತ’ದ ಈ ಅವಿಸ್ಮರಣೀಯ ದೃಶ್ಯವು ಕೋಟ್ಯಂತರ ದೇಶವಾಸಿಗಳಲ್ಲಿ ಆತ್ಮವಿಶ್ವಾಸದ ಮಹಾ ಹಬ್ಬವಾಯಿತು ಎಂದು ಪ್ರಧಾನಿ ಕೊಂಡಾಡಿದ್ದಾರೆ.

    ಮಹಾ ಕುಂಭಮೇಳ ಪೂರ್ಣಗೊಂಡಿತು. ಏಕತೆಯ ಮಹಾ ಯಜ್ಞ ಪೂರ್ಣಗೊಂಡಿತು. ಪ್ರಯಾಗರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಏಕತೆಯ ಮಹಾಕುಂಭದಲ್ಲಿ 140 ಕೋಟಿ ಭಾರತೀಯರು ಒಂದೇ ಬಾರಿಗೆ ಒಟ್ಟುಗೂಡಿದ ನಂಬಿಕೆ ಅದ್ಭುತವಾಗಿದೆ. ಮಹಾ ಕುಂಭ ಮುಗಿದ ನಂತರ ನನ್ನ ಮನಸ್ಸಿಗೆ ಬಂದ ಆಲೋಚನೆಗಳನ್ನು ಬರೆಯಲು ಪ್ರಯತ್ನಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಇಂದು ಮಹಾ ಕುಂಭಮೇಳದ ಕಡೆಯ ದಿನ – ಕೋಟ್ಯಂತರ ಜನರಿಂದ ಪುಣ್ಯಸ್ನಾನ

  • ಗುಲಾಮಗಿರಿ ಮನಸ್ಥಿತಿ: ಕುಂಭಮೇಳ ಟೀಕಾಕಾರರ ವಿರುದ್ಧ ಮೋದಿ ಗುಡುಗು

    ಗುಲಾಮಗಿರಿ ಮನಸ್ಥಿತಿ: ಕುಂಭಮೇಳ ಟೀಕಾಕಾರರ ವಿರುದ್ಧ ಮೋದಿ ಗುಡುಗು

    ನವದೆಹಲಿ: ಮಹಾ ಕುಂಭಮೇಳದ ಟೀಕಾಕಾರರನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅವರದ್ದು ಗುಲಾಮಗಿರಿ ಮನಸ್ಥಿತಿ ಎಂದು ಟೀಕಿಸಿದ್ದಾರೆ.

    ದೇಶವನ್ನು ದುರ್ಬಲಗೊಳಿಸಲು ಪ್ರಯತ್ನಿಸುವ ವಿದೇಶಿ ಶಕ್ತಿಗಳು ಇವರಿಗೆ ಬೆಂಬಲ ನೀಡುತ್ತಿವೆ. ಇವರದು ಗುಲಾಮಗಿರಿ ಮನಸ್ಥಿತಿ ಎಂದು ಟೀಕಾಕಾರರ ವಿರುದ್ಧ ಮೋದಿ ವಾಗ್ದಾಳಿ ನಡೆಸಿದ್ದಾರೆ.

    ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ನಡೆದ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಧರ್ಮವನ್ನು ಅಪಹಾಸ್ಯ ಮಾಡುವ, ಜನರನ್ನು ವಿಭಜಿಸುವಲ್ಲಿ ತೊಡಗಿರುವ ನಾಯಕರ ಗುಂಪೊಂದು ಇರುವುದನ್ನು ನಾವು ನೋಡುತ್ತಿದ್ದೇವೆ. ಅನೇಕ ಬಾರಿ ವಿದೇಶಿ ಶಕ್ತಿಗಳು ಈ ಜನರನ್ನು ಬೆಂಬಲಿಸುವ ಮೂಲಕ ದೇಶ ಮತ್ತು ಧರ್ಮವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಹಿಂದೂ ನಂಬಿಕೆಯನ್ನು ದ್ವೇಷಿಸುವ ಜನರು ಶತಮಾನಗಳಿಂದ ಒಂದಲ್ಲ ಒಂದು ಹಂತದಲ್ಲಿ ಬದುಕುತ್ತಿದ್ದಾರೆ. ಗುಲಾಮ ಮನಸ್ಥಿತಿಗೆ ಬಿದ್ದ ಜನರು ನಮ್ಮ ನಂಬಿಕೆಗಳು, ದೇವಾಲಯಗಳು, ನಮ್ಮ ಧರ್ಮ, ಸಂಸ್ಕೃತಿ ಮತ್ತು ತತ್ವಗಳ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಈ ಜನರು ನಮ್ಮ ಹಬ್ಬಗಳು, ಸಂಪ್ರದಾಯಗಳು ಮತ್ತು ಪದ್ಧತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಸ್ವಭಾವತಃ ಪ್ರಗತಿಪರವಾದ ಧರ್ಮ ಮತ್ತು ಸಂಸ್ಕೃತಿಯ ಮೇಲೆ ದಾಳಿ ಮಾಡಲು ಅವರು ಧೈರ್ಯ ಮಾಡುತ್ತಾರೆ. ನಮ್ಮ ಸಮಾಜವನ್ನು ವಿಭಜಿಸುವುದು ಮತ್ತು ಅದರ ಏಕತೆಯನ್ನು ಮುರಿಯುವುದು ಅವರ ಕಾರ್ಯಸೂಚಿಯಾಗಿದೆ ಎಂದು ಟೀಕಿಸಿದ್ದಾರೆ.

    ಕುಂಭಮೇಳದಲ್ಲಿ ಕಾಲ್ತುಳಿತ ದುರಂತ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ, ಸಮಾಜವಾದಿ ಪಕ್ಷದ ಜಯಾ ಬಚ್ಚನ್‌ ಕೇಂದ್ರ ಹಾಗೂ ಯೋಗಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಂಗಮದ ನೀರಿನಲ್ಲಿ ಮಲದ ಅಂಶವಿದೆ ಎಂದು ಸಹ ವಿಪಕ್ಷ ನಾಯಕರು ಹೇಳಿಕೆ ನೀಡಿದ್ದರು. ಮಹಾಕುಂಭ ಮೃತ್ಯುಕುಂಭವಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ಟೀಕಿಸಿದ್ದರು.