ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು. ಇದರೊಂದಿಗೆ ಕೆಂಪುಕೋಟೆಯಿಂದ ದೇಶವನ್ನು ಉದ್ದೇಶಿಸಿ ಸತತ 12ನೇ ಭಾಷಣ ಮಾಡಿದರು. ‘ನಯಾ ಭಾರತ್’ (ನವ ಭಾರತ) ಘೋಷವಾಕ್ಯದೊಂದಿಗೆ ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಪ್ರಧಾನಿ ಮೋದಿಯವರನ್ನ ಸರ್ಕಾರಿ ಮತ್ತು ಸೇನಾಧಿಕಾರಿಗಳು ಬರಮಾಡಿಕೊಳ್ಳುವ ಮೂಲಕ ಸಮಾರಂಭ ಶುರುವಾಯಿತು. ಬಳಿಕ ಸೇನಾ ಗೌರವ ವಂದನೆ ಸ್ವೀಕಾರ ನಡೆಯಿತು. ಅಲ್ಲದೇ ಪಾಕ್ ವಿರುದ್ಧ ಪ್ರತೀಕಾರ ತೀರಿಸಿಕೊಂಡ ಸಲುವಾಗಿ ʻಆಪರೇಷನ್ ಸಿಂಧೂರʼ ಕಾರ್ಯಾಚರಣೆಯನ್ನ ಇಲ್ಲಿ ಸ್ಮರಿಸಲಾಯಿತು. ಈ ಸಂಭ್ರಮದ ಕ್ಷಣ ಫೋಟೋದಲ್ಲಿ ಸೆರೆಯಾಗಿರುವುದನ್ನು ನೀವು ಕಾಣಬಹುದು.
ನವದೆಹಲಿ: ಕೆಂಪು ಕೋಟೆಯಲ್ಲಿ ಸತತ 12 ಬಾರಿ ಸ್ವಾತಂತ್ರ್ಯೋತ್ಸವದಲ್ಲಿ ಭಾಷಣ ಮಾಡಿ ದಾಖಲೆ ಬರೆದ ಪ್ರಧಾನಿ ನರೇಂದ್ರ ಮೋದಿ (PM Modi) ಉಡುಗೆ-ತೊಡುಗೆ ವಿಚಾರಕ್ಕೂ ಸುದ್ದಿಯಲ್ಲಿದ್ದಾರೆ. ಪ್ರತಿ ವರ್ಷ ಅವರು ತೊಡುತ್ತಿದ್ದ ಉಡುಪು, ಧರಿಸುತ್ತಿದ್ದ ಪೇಟ ಗಮನ ಸೆಳೆದಿದೆ. ಪೇಟದ ಬಣ್ಣ ಮತ್ತು ಅದನ್ನು ಕಟ್ಟುವ ಶೈಲಿ ಅತ್ಯಂತ ಆಕರ್ಷಕ. 2014ರಿಂದ 2025 ರ ವರೆಗೆ ಪ್ರಧಾನಿ ಮೋದಿ ಅವರ ಉಡುಗೆ-ತೊಡುಗೆ ಶೈಲಿ ಬದಲಾಗುತ್ತಿದೆ. 12 ಬಾರಿಯೂ ಬಗೆ ಬಗೆಯ ಆಕರ್ಷಕ ಪೇಟಗಳನ್ನು ಧರಿಸಿದ್ದಾರೆ. ಆ ಪೇಟಗಳು ಯಾವುವು? ವಿಶೇಷತೆ ಏನು? ಎಂಬುದರ ವಿವರ ಇಲ್ಲಿದೆ.
2014: ಈ ವರ್ಷದ ಸ್ವಾತಂತ್ರ್ಯ ದಿನದಂದು ನರೇಂದ್ರ ಮೋದಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದರು. ಆಗ ಬಿಳಿ ಖಾದಿ ಅರ್ಧ ತೋಳಿನ ಕುರ್ತಾ ಮತ್ತು ಚೂಡಿದಾರ್ ಪೈಜಾಮ ಧರಿಸಿದ್ದರು. ಇದರ ಜೊತೆಗೆ, ಕೇಸರಿ ಬಣ್ಣದ ಜೋಧಪುರಿ ಬಂದೇಜ್ ಪೇಟವನ್ನು ಧರಿಸಿದ್ದರು.
2015: ಪ್ರಧಾನಿ ಮೋದಿ ಕ್ರೀಮ್ ಬಣ್ಣದ ಕುರ್ತಾ, ಬಿಳಿ ಚೂಡಿದಾರ್ ಪೈಜಾಮಾ ಮತ್ತು ಖಾದಿ ಜಾಕೆಟ್ ಧರಿಸಿದ್ದರು. ಕೆಂಪು ಮತ್ತು ಹಸಿರು ಪಟ್ಟೆಗಳನ್ನು ಹೊಂದಿದ್ದ ಕಿತ್ತಳೆ ಬಣ್ಣದ ಬಂಧಾನಿ ಪೇಟವನ್ನು ಧರಿಸಿದ್ದರು.
2016: ಕೆಂಪು, ಗುಲಾಬಿ ಮತ್ತು ಹಳದಿ ರಾಜಸ್ಥಾನಿ ಪೇಟವನ್ನು ಸರಳ ಕುರ್ತಾ ಮತ್ತು ಚೂಡಿದಾರ್ ಪೈಜಾಮಾದೊಂದಿಗೆ ಮೋದಿ ಧರಿಸಿದ್ದು ವಿಶೇಷವಾಗಿತ್ತು.
2017: ಪ್ರಧಾನಿ ಮೋದಿ ತಮ್ಮ ಟ್ರೇಡ್‌ಮಾರ್ಕ್ ಅರ್ಧ ತೋಳಿನ ಕುರ್ತಾ ಧರಿಸಿದ್ದರು. ಪ್ರಕಾಶಮಾನವಾದ ಕೆಂಪು ಮತ್ತು ಹಳದಿ ಬಣ್ಣದ ಪೇಟವನ್ನು ಧರಿಸಿದ್ದರು. ಪೇಟದ ಹಿಂಭಾಗದಲ್ಲಿ ಉದ್ದವಾದ ಬಟ್ಟೆಯ ಜೋಡಣೆ ಇತ್ತು.
2018: ಪೂರ್ಣ ತೋಳಿನ ಕುರ್ತಾ-ಪೈಜಾಮ ಮತ್ತು ಉಪರ್ಣ ಧರಿಸಿದ್ದರು. ಗಾಢವಾದ ಕೇಸರಿ ಮತ್ತು ಕೆಂಪು ಪೇಟವನ್ನು ಮೋದಿ ಧರಿಸಿದ್ದು ಗಮನ ಸೆಳೆದಿತ್ತು.
2019: ಅರ್ಧ ತೋಳಿನ ಕುರ್ತಾ, ಪೈಜಾಮಾ ಮತ್ತು ಕೇಸರಿ ಬಣ್ಣದ ಅಂಚುಳ್ಳ ಮೇಲ್ಭಾಗದಲ್ಲಿ ಹಳದಿ, ಕೆಂಪು ಮತ್ತು ಹಸಿರು ಬಣ್ಣದ ಲಹರಿಯಾ ಮಾದರಿಯ ಪೇಟವನ್ನು ಪ್ರಧಾನಿ ಧರಿಸಿದ್ದರು.
2020: ಕೇಸರಿ ಮತ್ತು ಕ್ರೀಮ್ ಬಣ್ಣದ ಪೇಟವನ್ನು ಪ್ರಧಾನಿ ಧರಿಸಿದ್ದರು. ಅದು ಅರ್ಧ ತೋಳಿನ ಕುರ್ತಾಗೆ ಮ್ಯಾಚ್ ಆಗಿತ್ತು. ಕೇಸರಿ ಬಾರ್ಡರ್ ಇದ್ದ ಬಿಳಿ ದುಪಟ್ಟಾವನ್ನು ಮೋದಿ ಧರಿಸಿದ್ದರು.
2021: 75ನೇ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಸಾಂಪ್ರದಾಯಿಕ ಕುರ್ತಾ-ಚೂಡಿದಾರ್, ನೀಲಿ ಜಾಕೆಟ್ ಧರಿಸಿ ಕೇಸರಿ ಪೇಟದೊಂದಿಗೆ ಸ್ಟೋಲ್ ಧರಿಸಿ ಆಕರ್ಷಕ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು.
2022: 76 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ‘ಹರ್ ಘರ್ ತಿರಂಗಾ’ ಅಭಿಯಾನದ ಉತ್ಸಾಹವನ್ನು ಪ್ರತಿಬಿಂಬಿಸುವ ತ್ರಿವರ್ಣ ಧ್ವಜದ ಆಕಾರದ ಬಿಳಿ ಪೇಟವನ್ನು ಧರಿಸಿದ್ದರು. ಈ ಪೇಟವನ್ನು ಬಿಳಿ ಕುರ್ತಾ ಮತ್ತು ನೀಲಿ ಜಾಕೆಟ್‌ನೊಂದಿಗೆ ಜೋಡಿಸಲಾಗಿತ್ತು.
2023: ಹಳದಿ ಮತ್ತು ಕೆಂಪು ಬಣ್ಣದ ಸಫಾ ಧರಿಸಿದ್ದರು, ಅದರಲ್ಲಿ ಹಲವು ಬಣ್ಣಗಳ ಪಟ್ಟೆಗಳಿದ್ದವು. ಇದರ ಜೊತೆಗೆ ಮೋದಿ ಬಿಳಿ ಕುರ್ತಾ ಮತ್ತು ಕಪ್ಪು ಜಾಕೆಟ್ ಧರಿಸಿದ್ದರು.
2024: 78ನೇ ವಾರ್ಷಿಕೋತ್ಸವದಂದು ಪ್ರಧಾನಿ ಮೋದಿ ಅವರು ಬಿಳಿ ಕುರ್ತಾ-ಪೈಜಾಮ ಮತ್ತು ನೀಲಿ ಸದ್ರಿ ಜೊತೆಗೆ ಕೇಸರಿ, ಹಸಿರು ಮತ್ತು ಹಳದಿ ಪೇಟವನ್ನು ಧರಿಸಿದ್ದರು.
2025: ಈ ಬಾರಿ ಪ್ರಧಾನಿ ಮೋದಿಯವರ ಲುಕ್ ತುಂಬಾ ವಿಶಿಷ್ಟವಾಗಿದೆ. ವಿಶೇಷವಾಗಿ ಪೇಟ ಕಟ್ಟುವ ಶೈಲಿ ಅದ್ಭುತವಾಗಿದೆ. ಈ ಸಲ ಪ್ರಧಾನಿ ಮೋದಿಯವರ ಪೇಟ ಕೇಸರಿ ಬಣ್ಣದ್ದಾಗಿತ್ತು. ಇದರ ಜೊತೆಗೆ, ಅವರು ಕಿತ್ತಳೆ ಬಣ್ಣದ ನೆಹರೂ ಜಾಕೆಟ್ ಮತ್ತು ಬಿಳಿ ಕುರ್ತಾ ಧರಿಸಿದ್ದರು. ಅದರೊಂದಿಗೆ ಟವಲ್ ಕೂಡ ಹಾಕಿದ್ದರು.
ಈ ದೀಪಾವಳಿಗೆ, ನಾನು ನಿಮಗಾಗಿ ಡಬಲ್ ಧಮಾಕ ನೀಡಲಿದ್ದೇನೆ. ಈ ದೀಪಾವಳಿಯಲ್ಲಿ ನಾಗರಿಕರು ದೊಡ್ಡ ಉಡುಗೊರೆಯನ್ನು ಪಡೆಯಲಿದ್ದಾರೆ. ನಾವು ಮುಂದಿನ ಪೀಳಿಗೆಯ ಜಿಎಸ್‌ಟಿ ಸುಧಾರಣೆಗಳನ್ನು ತರುತ್ತಿದ್ದೇವೆ. ಇದು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡುತ್ತದೆ. ಇದು ದೀಪಾವಳಿ ಉಡುಗೊರೆಯಾಗಲಿದೆ ಎಂದು ಹೇಳಿದ್ದಾರೆ.
ಎಂಟು ವರ್ಷಗಳ ಹಿಂದೆ ಸರ್ಕಾರವು ಪ್ರಮುಖ ಸುಧಾರಣೆಗಳನ್ನು ಕೈಗೊಂಡಿದೆ. ಸರ್ಕಾರವು ದೇಶಾದ್ಯಂತ ತೆರಿಗೆ ಹೊರೆಯನ್ನು ಕಡಿಮೆ ಮಾಡಿ, ತೆರಿಗೆ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಭರವಸೆ ನೀಡಿದ್ದಾರೆ.
ಇದು ಸಾಮಾನ್ಯ ಜನರಿಗೆ ವಸ್ತುಗಳ ಮೇಲಿನ ತೆರಿಗೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನಮ್ಮ MSME ಗಳು ಭಾರಿ ಲಾಭ ಪಡೆಯುತ್ತವೆ. ದಿನನಿತ್ಯ ಬಳಸುವ ವಸ್ತುಗಳು ಅಗ್ಗವಾಗುತ್ತವೆ. ಇದು ನಮ್ಮ ಆರ್ಥಿಕತೆಯನ್ನು ಬಲಪಡಿಸುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: 79th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
2017 ರ ಜುಲೈನಲ್ಲಿ ಜಿಎಸ್‌ಟಿ ಜಾರಿಗೆ ತರಲಾಯಿತು. ಪರೋಕ್ಷ ತೆರಿಗೆ ಪದ್ಧತಿಯ ಎಂಟು ವರ್ಷಗಳು ಪೂರ್ಣಗೊಂಡ ನಂತರ, ಈ ಬದಲಾವಣೆಗಳನ್ನು ಪರಿಶೀಲಿಸುವ ಸಮಯ ಬಂದಿದೆ. ಪರಿಶೀಲನೆಗಾಗಿ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಯಿತು. ರಾಜ್ಯಗಳೊಂದಿಗೆ ಸಹ ಸಮಾಲೋಚಿಸಲಾಯಿತು. ಅದರ ನಂತರ ಸರ್ಕಾರವು ಹೊಸ ಜಿಎಸ್‌ಟಿ ಸುಧಾರಣೆಗಳನ್ನು ಸಿದ್ಧಪಡಿಸಿದೆ.
ವಿಕಸಿತ ಭಾರತ ರೋಜ್‌ಗಾರ್ ಯೋಜನೆಯಡಿಯಲ್ಲಿ ಮೊದಲ ಬಾರಿಗೆ ಖಾಸಗಿ ವಲಯದ ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ ಯುವಕರಿಗೆ 15,000 ರೂ. ನೆರವನ್ನು ಮೋದಿ ಘೋಷಿಸಿದ್ದಾರೆ. ಈ ಯೋಜನೆಯಿಂದ 3.5 ಕೋಟಿಗೂ ಹೆಚ್ಚು ಯುವಜನರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ನನ್ನ ದೇಶದ ಯುವಕರೇ, ಈ ದಿನವೇ ನಮ್ಮ ದೇಶದ ಯುವಕರಿಗಾಗಿ 1 ಲಕ್ಷ ಕೋಟಿ ಮೌಲ್ಯದ ಯೋಜನೆಯನ್ನು ನಾವು ಪ್ರಾರಂಭಿಸುತ್ತಿದ್ದೇವೆ. ಇಂದಿನಿಂದ ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಖಾಸಗಿ ವಲಯದಲ್ಲಿ ಮೊದಲ ಉದ್ಯೋಗ ಪಡೆಯುವ ಯುವಕ-ಯುವತಿಯರು ಸರ್ಕಾರದಿಂದ 15,000 ರೂ. ಪಡೆಯುತ್ತಾರೆ. ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಕಂಪನಿಗಳಿಗೆ ಪ್ರೋತ್ಸಾಹ ಮೊತ್ತವನ್ನು ಸಹ ನೀಡಲಾಗುತ್ತದೆ. ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯು ಯುವಕರಿಗೆ ಸುಮಾರು 3.5 ಕೋಟಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ತಿಳಿಸಿದ್ದಾರೆ.
– ಭಯೋತ್ಪಾದನೆ & ಅದರ ಪೋಷಕರನ್ನು ಪ್ರತ್ಯೇಕವಾಗಿ ನೋಡಲ್ಲ ಎಂದ ಪ್ರಧಾನಿ
– ಆಪರೇಷನ್ ಸಿಂಧೂರ ಸ್ಮರಣೆ, ನಯಾ ಭಾರತ ಬಗ್ಗೆ ಮೋದಿ ಮಾತು
ನವದೆಹಲಿ: ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗಲ್ಲ ಎಂದು ಪಾಕಿಸ್ತಾನಕ್ಕೆ ಪ್ರಧಾನಿ ನರೇಂದ್ರ ಮೋದಿ (PM Modi) ತಿರುಗೇಟು ನೀಡಿದ್ದಾರೆ.
79ನೇ ಸ್ವಾತಂತ್ರ್ಯೋತ್ಸವ (Independence Day 2025) ಹಿನ್ನೆಲೆ ಕೆಂಪು ಕೋಟೆಯಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮೋದಿ, ಪೆಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಯಿತು. ಧರ್ಮ ಕೇಳಿ ಹತ್ಯೆ ಮಾಡಲಾಯಿತು. ಪತ್ನಿ ಎದುರು ಪತಿಯನ್ನು, ಮಗನ ಮುಂದೆ ತಂದೆಯನ್ನು ಹತ್ಯೆ ಮಾಡಲಾಯಿತು. ಇಡೀ ದೇಶದಲ್ಲಿ ಆಕ್ರೋಶ ಮಡುಗಟ್ಟಿತ್ತು. ಆಪರೇಷನ್ ಸಿಂಧೂರ ಈ ಆಕ್ರೋಶದ ಪ್ರತಿಬಿಂಬವಾಗಿತ್ತು. ನಾವು ನಮ್ಮ ಸೇನೆಗೆ ಪೂರ್ಣ ಸ್ವಾತಂತ್ರ‍್ಯ ನೀಡಿದೆವು. ದಾಳಿ, ಸಮಯ, ಗುರಿ ಎಲ್ಲವನ್ನು ನಿರ್ಧರಿಸಲು ಸ್ವಾತಂತ್ರ‍್ಯ ನೀಡಲಾಯಿತು. ಸೇನೆ ಹಿಂದೆ ಮಾಡದ ಸಾಹಸವನ್ನು ಮೊದಲ ಬಾರಿಗೆ ಮಾಡಿತು. ಪಾಕಿಸ್ತಾನದ ಒಳಗೆ ನುಗ್ಗಿ ದಾಳಿ ಮಾಡಿತು. ಪಾಕಿಸ್ತಾನದ ಆದ ನಷ್ಟ ಎಷ್ಟಿದೆ ಅಂದರೆ ನಿತ್ಯ ಹೊಸ ಮಾಹಿತಿ ಬರ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 79th Independence Day: ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ನಮ್ಮ ದೇಶ ದಶಕಗಳಿಂದ ಭಯೋತ್ಪಾದನೆಯನ್ನು ಸಹಿಸಿಕೊಂಡಿದೆ. ಈಗ ನಾವು ಹೊಸ ನಿರ್ಧಾರ ತೆಗೆದುಕೊಂಡಿದ್ದೇವೆ. ಭಯೋತ್ಪಾದನೆ ಮತ್ತು ಅದರ ಪೋಷಕರನ್ನು ಪ್ರತ್ಯೇಕವಾಗಿ ನೋಡುವುದಿಲ್ಲ. ಅವರು ಮಾನವತವಾದದ ವಿರುದ್ಧ ವ್ಯಕ್ತಿಗಳು. ನ್ಯೂಕ್ಲಿಯರ್ ಬೆದರಿಕೆಗೆ ಭಾರತ ಬಗ್ಗುವುದಿಲ್ಲ. ಇಂತಹ ಬೆದರಿಕೆ ಬಹಳ ವರ್ಷಗಳಿಂದ ನೋಡಿದ್ದೇವೆ. ಇದು ಮುಂದೆ ನಡೆಯುವುದಿಲ್ಲ. ಇಂತಹದೇ ಘಟನೆ ಮುಂದುವರಿದರೆ ಮತ್ತೆ ನಮ್ಮ ಸೇನೆ ಪ್ರತಿಕ್ರಿಯೆ ನಿರ್ಧಾರ ಮಾಡಲಿದೆ. ನಾವು ಸರಿಯಾದ ಪ್ರತಿಕ್ರಿಯೆ ನೀಡಲಿದ್ದೇವೆ. ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ. ಸಿಂಧೂ ಜಲ ಒಪ್ಪಂದದಿಂದ ಭಾರತಕ್ಕೆ ಅನ್ಯಾಯವಾಗಿದೆ. ಭಾರತದಲ್ಲಿ ಹರಿಯುವ ನದಿ ನಮ್ಮ ಬಳಕೆಗೆ ಸಿಗುತ್ತಿಲ್ಲ. ನಮ್ಮ ಜನರು ನೀರಿದ್ದರೂ ಬಾಯಾರಿಕೊಂಡಿದ್ದಾರೆ. ಏಕಮುಖ ನ್ಯಾಯವನ್ನು ಈ ಒಪ್ಪಂದದಲ್ಲಿ ಮಾಡಿದೆ. ಭಾರತದ ನೀರಿನ ಮೇಲಿನ ಅಧಿಕಾರ ಭಾರತ ಮತ್ತು ನಮ್ಮ ರೈತರದ್ದು. ರೈತರ ಹಿತ, ರಾಷ್ಟ್ರದ ಹಿತದ ಕಾರಣ ಈ ಒಪ್ಪಂದಕ್ಕೆ ನಮ್ಮ ಒಪ್ಪಿಗೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸ್ವಾತಂತ್ರ‍್ಯಕ್ಕಾಗಿ ಕೋಟ್ಯಂತರ ಜನರು ಯಾವುದೇ ಆಪೇಕ್ಷೆ ಇಲ್ಲದೇ ತಮ್ಮ ಜೀವನವನ್ನು ಬಲಿದಾನ ಮಾಡಿದರು. ಗುಲಾಮಿ ಸ್ಥಿತಿಯಿಂದ ಹೊರಬರಲು ಹೋರಾಟ ಮಾಡಿದರು. ಸ್ವಾತಂತ್ರ‍್ಯದ ಬಳಿಕ ಕೋಟ್ಯಂತರ ಜನರ ಹೊಟ್ಟೆ ತುಂಬಿಸುವುದು ಕಷ್ಟವಾಗಿತ್ತು. ನಮ್ಮ ರೈತರು ದೇಶದ ಜನರ ಹೊಟ್ಟೆ ತುಂಬಿಸಿದರು. ಆತ್ಮ ನಿರ್ಭರ್ ಘೋಷಣೆ ಕೇವಲ ಆರ್ಥಿಕತೆಗೆ ಸೀಮಿತವಾಗಿಲ್ಲ. ಆತ್ಮ ನಿರ್ಭರ್ ನಮ್ಮ ಸಾಮರ್ಥ್ಯದೊಂದಿಗೆ ಸಂಪರ್ಕಿಸಿದೆ. ಆತ್ಮ ನಿರ್ಭರ್ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 79ನೇ ಸ್ವಾತಂತ್ರ‍್ಯ ದಿನ – ಕೆಂಪು ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿರುವ ಮೋದಿ
ಆಪರೇಷನ್ ಸಿಂಧೂರನಲ್ಲಿ ಭಾರತದ ಶಸ್ತ್ರಾಸ್ತ್ರಗಳು ಅದ್ಭುತವಾಗಿ ಕೆಲಸ ಮಾಡಿವೆ. ಶತ್ರು ದೇಶಗಳು ಇವು ಎಂತಹ ಶಸ್ತ್ರಾಸ್ತ್ರಗಳು ಅಂತ ಗೊಂದಲಕ್ಕೆ ಒಳಗಾದರು. ಯುದ್ಧದ ಸನ್ನಿವೇಶದಲ್ಲಿ ಶಸ್ತ್ರಾಸ್ತ್ರಗಳು ದೊರೆಯುವ ಗೊಂದಲ ಆತಂಕ ಇರುತ್ತದೆ. ಆದರೆ, ಭಾರತ ತನ್ನ ಶಸ್ತ್ರಾಸ್ತ್ರಗಳನ್ನು ತಾನೇ ಉತ್ಪಾದನೆ ಮಾಡುತ್ತಿದೆ ಎಂದು ಹೇಳಿದ್ದಾರೆ.
ನವದೆಹಲಿ: ದೇಶಾದ್ಯಂತ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ನೆರವೇರಿಸಿದರು.
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಘೋಷವಾಕ್ಯ ‘ನಯ ಭಾರತ’. ಸಮೃದ್ಧ, ಸುರಕ್ಷಿತ ಮತ್ತು ದಿಟ್ಟ ನವ ಭಾರತದ ನಿರಂತರ ಉದಯವನ್ನು ಸ್ಮರಿಸುವ ಧ್ಯೇಯವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಧ್ವಜಾರೋಹಣಕ್ಕೂ ಮುನ್ನ ದೆಹಲಿಯ ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ನಂತರ ರಾಷ್ಟ್ರದ ನೇತೃತ್ವ ವಹಿಸಿ ಸಂಭ್ರಮಿಸಲು ಕೆಂಪು ಕೋಟೆಗೆ ಆಗಮಿಸಿದರು. ಮೋದಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸ್ವಾಗತಿಸಿದರು.
ಬಳಿಕ ಪಿಎಂ ಮೋದಿ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆ ಮೊಳಗಿತು. ಎಲ್ಲರೂ ಎದ್ದು ನಿಂತು ಗೌರವ ಸಲ್ಲಿಸಿದರು. ಈ ವೇಳೆ ಭಾರತೀಯ ವಾಯುಪಡೆಯ ಎರಡು Mi-17 ಹೆಲಿಕಾಪ್ಟರ್‌ಗಳು ಕೆಂಪು ಕೋಟೆಯ ಮೇಲೆ ಹಾರಾಟ ನಡೆಸಿ, ಪುಷ್ಪವೃಷ್ಟಿಗೈದವು. ಒಂದು ಹೆಲಿಕಾಪ್ಟರ್ ತಿರಂಗವನ್ನು ಹಾರಾಡಿಸಿತು. ಮತ್ತೊಂದು ಹೆಲಿಕಾಪ್ಟರ್, ಆಪರೇಷನ್ ಸಿಂಧೂರ್‌ನ ಬ್ಯಾನರ್ ಅನ್ನು ಪ್ರದರ್ಶಿಸಿತು. ಆ ಮೂಲಕ ಶತ್ರು ದೇಶಗಳಿಗೆ ದಿಟ್ಟ ಉತ್ತರ ಕೊಟ್ಟ ಆಪರೇಷನ್ ಸಿಂಧೂರ ಬಗ್ಗೆ ಅರಿವು ಮೂಡಿಸಿತು.
ಹಳದಿ ಹಾಗೂ ಕಿತ್ತಳೆ ಮೆಟ್ರೋ ಮಾರ್ಗಗಳು ಬೆಂಗಳೂರು ಸಂಚಾರಕ್ಕೆ ದೊಡ್ಡ ಬಲ
ಎರಡೂ ಮಾರ್ಗಗಳಿಂದ 25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಆಗಲಿದೆ
3 months agoAugust 10, 2025 2:41 pm
ಆಪರೇಷನ್ ಸಿಂಧೂರದ ಸಫಲತೆ ಹಿಂದೆ ಮೇಕ್ ಇನ್ ಇಂಡಿಯಾದ ಶಕ್ತಿ ಇದೆ
ಇದರಲ್ಲಿ ಬೆಂಗಳೂರು ಹಾಗೂ ಇಲ್ಲಿನ ಯುವ ತಂತ್ರಜ್ಞರ ಯೋಗದಾನವೂ ಇದೆ: ಮೋದಿ ಹೇಳಿಕೆ
3 months agoAugust 10, 2025 2:31 pm
ಮೋದಿ ಭಾಷಣ..
ಬೆಂಗಳೂರು ನ್ಯೂ ಇಂಡಿಯಾದ ಪ್ರಗತಿಯ ಸಂಕೇತ
ಈ ನಗರ ಗ್ಲೋಬಲ್ ಐಟಿಯಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದೆ
ಬೆಂಗಳೂರು ಯಶಸ್ಸಿಗೆ ಇಲ್ಲಿನ ಜನರ ಶ್ರಮ, ಪ್ರತಿಭೆ ಕಾರಣ
ಬೆಂಗಳೂರಿನಂಥ ನಗರಗಳನ್ನು ಭವಿಷ್ಯಕ್ಕಾಗಿ ರೂಪಿಸಬೇಕು
ಅದಕ್ಕಾಗಿ ಕೇಂದ್ರದ ಅನುದಾನ ಹರಿದು ಬರ್ತಿದೆ
ಇಂದು ಮೆಟ್ರೋ ಹಳದಿ ಮಾರ್ಗ, ಮೂರು ವಂದೇ ಭಾರತ್ ರೈಲುಗಳಿಗೆ ಚಾಲನೆ ಕೊಡಲಾಗಿದೆ
3 months agoAugust 10, 2025 2:28 pm
ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ
ಬೆಂಗಳೂರು ನಗರದ ಆತ್ಮೀಯ ನಾಗರಿಕ ಬಂಧು-ಭಗಿನಿಯರೇ, ನಿಮಗೆಲ್ಲ ನನ್ನ ನಮಸ್ಕಾರಗಳು ಅಂತ ಕನ್ನಡದಲ್ಲೇ ಹೇಳಿದ ಪ್ರಧಾನಿ
3 months agoAugust 10, 2025 2:17 pm
3ನೇ ಹಂತದ ಮೆಟ್ರೋ ಮಾರ್ಗಕ್ಕೆ ಮೋದಿ ಶಂಕುಸ್ಥಾಪನೆ
ಮೋದಿ ಭಾಷಣಕ್ಕೂ ಮುನ್ನ ಕಿರು ವಿಡಿಯೋ ಪ್ರಸಾರ
3 months agoAugust 10, 2025 2:00 pm
ನಮ್ಮ ಮೆಟ್ರೋಗೆ ರಾಜ್ಯದ ಪಾಲು ಹೆಚ್ಚು: ಸಿಎಂ
ಪ್ರಧಾನಿ ಮೋದಿ ಎದುರು ಕ್ರೆಡಿಟ್ ತಗೊಂಡ ಸಿಎಂ ಸಿದ್ದರಾಮಯ್ಯ
ಈಗಾಗಲೇ 96.10 ಕಿ.ಮೀ ಮೆಟ್ರೋ ರೈಲು ಕೆಲಸ ಮುಗಿದಿದೆ
ಇದಕ್ಕೆ ರಾಜ್ಯ 25,387 ಕೋಟಿ ರೂ ಕರ್ಚು ಮಾಡಿದೆ
ಕೇಂದ್ರ 7,468.86 ಕೋಟಿ ಕರ್ಚು ಮಾಡಿದೆ
ಹಳದಿ ಮಾರ್ಗಕ್ಕೆ 7,160 ಕೋಟಿ ಖರ್ಚಾಗಿದೆ ಎಂದ ಸಿಎಂ
3 months agoAugust 10, 2025 1:53 pm
ಕಾರ್ಯಕ್ರಮದಲ್ಲಿ ಮೋದಿ-ಡಿಕೆಶಿ ಟಾಕ್
ಮೋದಿಯವರ ಪಕ್ಕ ಕೂತು ಕಿವಿಯಲ್ಲಿ ಮಾತಾಡಿದ ಡಿಕೆಶಿ
ಸಿಎಂ ಭಾಷಣಕ್ಕೆ ಎದ್ದು ಹೋದ ಬೆನ್ನಲ್ಲೇ ಮೋದಿ ಪಕ್ಕ ಬಂದು ಕೂತು ಮಾತಾಡಿದ ಡಿಕೆಶಿ
3 months agoAugust 10, 2025 1:49 pm
ವೇದಿಕೆ ಮೇಲೆ ಅಕ್ಕಪಕ್ಕ ಕೂತ ಸಿದ್ದರಾಮಯ್ಯ ಮತ್ತು ಹೆಚ್‌ಡಿಕೆ
3 months agoAugust 10, 2025 1:33 pm
ಪಂಚಮುಖಿ ಗಣೇಶ ಮೂರ್ತಿ ನೀಡಿ ಮೋದಿಯವರಿಗೆ ಸನ್ಮಾನ
3 months agoAugust 10, 2025 1:25 pm
ವೇದಿಕೆಯಲ್ಲಿ ಪ್ರಧಾನಿಯವರ ಜೊತೆ 13 ಗಣ್ಯರಿಗೆ ಸ್ಥಾನ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಕೇಂದ್ರ ಸಚಿವ ಮನೋಹರ ಲಾಲ್ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಕೇಂದ್ರದ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸಂಸದ ತೇಜಸ್ವಿ ಸೂರ್ಯ ಸಚಿವ ಬೈರತಿ ಸುರೇಶ್ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿಪಕ್ಷ ನಾಯಕ ಆರ್.ಅಶೋಕ್ ಸಂಸದ ಡಾ.ಸಿ.ಎನ್.ಮಂಜುನಾಥ್
3 months agoAugust 10, 2025 1:20 pm
ರಾಷ್ಟ್ರಗೀತೆ, ನಾಡಗೀತೆ ಗಾಯನ ಬಳಿಕ ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ
3 months agoAugust 10, 2025 1:19 pm
ಐಐಐಟಿ ಕಾರ್ಯಕ್ರಮದಲ್ಲಿ ಮೋದಿ.. ಮೋದಿ ಜಯಘೋಷ
3 months agoAugust 10, 2025 1:14 pm
ಐಐಐಟಿಗೆ ಇನ್ಫೋಸಿಸ್‌ನ ಸುಧಾಮೂರ್ತಿ, ನಾರಾಯಣ ಮೂರ್ತಿ ಆಗಮನ
3 months agoAugust 10, 2025 1:11 pm
ಐಐಐಟಿಗೆ ಆಗಮಿಸಿದ ಪ್ರಧಾನಿ ಮೋದಿ
3 months agoAugust 10, 2025 1:06 pm
ಮೆಟ್ರೋದಲ್ಲಿ ಮೋದಿ ಅಕ್ಕ-ಪಕ್ಕ ಕುಳಿತು ಸಿದ್ದರಾಮಯ್ಯ, ಡಿಕೆಶಿ ಪ್ರಯಾಣ.
3 months agoAugust 10, 2025 12:54 pm
ಮೆಟ್ರೋದಲ್ಲಿ ಪ್ರಯಾಣಿಸುತ್ತ ಮಕ್ಕಳ ಜೊತೆ ಮೋದಿ ಸಂವಾದ
3 months agoAugust 10, 2025 12:48 pm
ಮೋದಿಗೆ ಡಿಕೆಶಿಯಿಂದ ಮೆಟ್ರೋ ವಿವರಣೆ
3 months agoAugust 10, 2025 12:44 pm
12:55 ಕ್ಕೆ ಐಐಐಟಿಗೆ ಆಗಮಿಸಲಿರುವ ಮೋದಿ
3 months agoAugust 10, 2025 12:41 pm
3 months agoAugust 10, 2025 12:29 pm
ಬಹುನಿರೀಕ್ಷಿತ ಯೆಲ್ಲೋ ಮೆಟ್ರೋ ಮಾರ್ಗ ಉದ್ಘಾಟಿಸಿದ ಮೋದಿ
3 months agoAugust 10, 2025 12:26 pm
ಮಳೆಯನ್ನೂ ಲೆಕ್ಕಿಸದೇ ಮೋದಿಗಾಗಿ ಕಾದು ನಿಂತ ಜನ.
3 months agoAugust 10, 2025 12:20 pm
ರಾಗಿಗುಡ್ಡ ಬಳಿ ಮೋದಿಗೆ ಪುಷ್ಪವೃಷ್ಟಿ
3 months agoAugust 10, 2025 12:13 pm
3 months agoAugust 10, 2025 12:09 pm
ರಾಗಿಗುಡ್ಡ ಮೆಟ್ರೋ ನಿಲ್ದಾಣಕ್ಕೆ ಮೋದಿ ಆಗಮನ
3 months agoAugust 10, 2025 12:06 pm
ಬೆಂಗಳೂರಲ್ಲಿ ಮೋದಿಗೆ ಜನರ ಜೈಕಾರ
3 months agoAugust 10, 2025 12:05 pm
3 months agoAugust 10, 2025 11:51 am
3 ವಂದೇ ಭಾರತ್ ರೈಲುಗಳಿಗೆ ಮೋದಿ ಚಾಲನೆ
ಕೆಎಸ್‌ಆರ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ
* ಬೆಂಗಳೂರು-ಬೆಳಗಾವಿ ವಂದೇ ಭಾರತ್ ರೈಲು
* ನಾಗಪುರ-ಪುಣೆ ವಂದೇ ಭಾರತ್ ರೈಲು
* ಅಮೃತಸರ-ಶ್ರೀಮಾತಾ ವೈಷ್ಣೋದೇವಿ ಕತ್ರಾ ವಂದೇ ಭಾರತ್ ರೈಲು
3 months agoAugust 10, 2025 11:40 am
ಮೋದಿ ಸ್ವಾಗತಿಸಿದ ಸಿಎಂ ಸಿದ್ದರಾಮಯ್ಯ
ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಉಪಸ್ಥಿತಿ.
3 months agoAugust 10, 2025 11:36 am
ಉದ್ಘಾಟನೆಗೆ ಕಾದು ನಿಂತಿರುವ ವಂದೇ ಭಾರತ್ ರೈಲು
3 months agoAugust 10, 2025 11:28 am
ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಕ್ಕೆ ಬಂದಿಳಿಯಲಿರುವ ಮೋದಿ
ಕೋನಪ್ಪನ ಅಗ್ರಹಾರ ಮೆಟ್ರೋ ಬಳಿ ಜಮಾಯಿಸಿದ ಜನ
ಫ್ಲೈಓವರ್ ಸಮೀಪ ಜಮಾಯಿಸಿದ ಜನ
ಮಳೆಯ ನಡುವೆಯೂ ಮೋದಿ ನೋಡಲು ಕಾಯುತ್ತಿರುವ ಕಾರ್ಯಕರ್ತರು
3 months agoAugust 10, 2025 11:27 am
ಸಂಗೊಳ್ಳಿ ರಾಯಣ್ಣ ಜಂಕ್ಷನ್‌ನಿಂದ ರೈಲ್ವೆ ನಿಲ್ದಾಣ ಕಡೆಗೆ ತೆರಳಿದ ನರೇಂದ್ರ ಮೋದಿ
3 months agoAugust 10, 2025 11:24 am
3 months agoAugust 10, 2025 11:21 am
ಸಂಗೊಳ್ಳಿ ರಾಯಣ್ಣ ಜಂಕ್ಷನ್‌ನತ್ತ ಮೋದಿ ಪ್ರಯಾಣ
3 months agoAugust 10, 2025 11:18 am
ಜನರತ್ತ ಕೈ ಬೀಸಿದ ಮೋದಿ
ಪ್ರಧಾನಿ ನೋಡಲು ರಸ್ತೆಯ ಇಕ್ಕೆಲಗಳಲ್ಲಿ ಬಿಜೆಪಿ ಕಾರ್ಯಕರ್ತರ ಜಮಾವಣೆ.
ಬೆಂಗಳೂರಿನ ಹೆಚ್‌ಎಎಲ್‌ಗೆ ವಿಶೇಷ ವಿಮಾನದಲ್ಲಿ ಬಂದಿಳಿದ ಮೋದಿ
ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ. ನಂತರ ವಂದೇ ಭಾರತ ಬೆಂಗಳೂರು-ಬೆಳಗಾವಿ ನೂತನ ಪ್ರಯಾಣಿಕ ರೈಲಿಗೆ ಚಾಲನೆ ಕೊಡಲಿದ್ದಾರೆ.
– ಯುರೋಪ್‌ನಿಂದಲೇ ರಷ್ಯಾದಿಂದ ಅತಿ ಹೆಚ್ಚು ತೈಲ ಖರೀದಿ ಆಗ್ತಿದ್ಯಾ?
ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಟೀಕೆ, ಟ್ಯಾರಿಫ್, ನಿರ್ಬಂಧಗಳ ಬೆದರಿಕೆ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಭಾರತದ ಕೂಡ ಅದಕ್ಕೆ ಬಲವಾದ ಪ್ರತಿದಾಳಿ ಒಡ್ಡುತ್ತಿದೆ. ಪ್ರಸ್ತುತ ದಿನಮಾನಗಳಲ್ಲಿ ಭಾರತ-ಅಮೆರಿಕ ಸಂಯುಕ್ತ ಸಂಸ್ಥಾನಗಳ ಕಾರ್ಯತಂತ್ರದ ಪಾಲುದಾರಿಕೆಯು ಹೊಸ ತಿರುವನ್ನು ಪಡೆದುಕೊಂಡಿದೆ. ಉಕ್ರೇನ್ ವಿರುದ್ಧ ಯುದ್ಧ ನಡೆಯುತ್ತಿರುವ ರಷ್ಯಾ ಜೊತೆ ಭಾರತ ಸಂಬಂಧ ಚೆನ್ನಾಗಿದೆ. ಪಾಶ್ಚಾತ್ಯ ರಾಷ್ಟ್ರಗಳ ನಿರ್ಬಂಧಗಳ ನಡುವೆಯೂ ರಷ್ಯಾದಿಂದ ಭಾರತ (India) ರಕ್ಷಣಾ ಮತ್ತು ಇಂಧನ ಆಮದು ಮಾಡಿಕೊಳ್ಳುತ್ತಿದೆ. ಇದಕ್ಕೆ ಟ್ರಂಪ್ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ತನ್ನ ಮಾತು ಕೇಳದ ಭಾರತದ ಮೇಲೆ ಸುಂಕದ (Tariff) ಅಸ್ತ್ರವನ್ನು ಅಮೆರಿಕ ಪ್ರಯೋಗಿಸಿದೆ.
ಭಾರತದ ಜೊತೆಗಿನ ಅಮೆರಿಕದ (US) ಮುಸುಕಿನ ಗುದ್ದಾಟ ಇದೇ ಮೊದಲೇನಲ್ಲ. ಶತಮಾನಗಳ ಹಿಂದಿನಿಂದಲೂ ಉಭಯ ದೇಶಗಳ ರಾಜತಾಂತ್ರಿಕತೆಯು ಅನೇಕ ಸವಾಲುಗಳನ್ನು ಕಂಡಿದೆ. ಯುರೋಪಿಯನ್ ಒಕ್ಕೂಟ, ಅಮೆರಿಕ ಮತ್ತು ಭಾರತದ ನಡುವಿನ ರಾಜತಾಂತ್ರಿಕ ಸಂಬಂಧ ಹಿಂದೆ ಹೇಗಿತ್ತು? ಈಗಿನ ಸವಾಲುಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಇದನ್ನೂ ಓದಿ: ಟ್ರಂಪ್ ಸುಂಕ ಶಾಕ್ ಬೆನ್ನಲ್ಲೇ ಈ ವರ್ಷ ಭಾರತಕ್ಕೆ ಪುಟಿನ್ ಭೇಟಿ
ಭಾರತದ ಮೇಲೆ 50% ಟ್ಯಾರಿಫ್!
ರಷ್ಯಾದಿಂದ (Russia) ತೈಲ ಖರೀದಿ ಮಾಡುತ್ತಿರುವ ಭಾರತದ ಮೇಲೆ ಟ್ರಂಪ್ 50% ಟ್ಯಾರಿಫ್ ವಿಧಿಸಿದ್ದಾರೆ. ಟ್ರಂಪ್ ನಡೆಗೆ ಭಾರತ ಅಸಮಾಧಾನ ಹೊರಹಾಕಿದೆ. ‘ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಭಾರತವನ್ನು ಗುರಿಯಾಗಿಸಿಕೊಂಡಿರುವುದು ಅಸಮಂಜಸ. ಭಾರತ ತನ್ನ ರಾಷ್ಟ್ರೀಯ ಹಿತಾಸಕ್ತಿಗಳು ಮತ್ತು ಆರ್ಥಿಕ ಭದ್ರತೆ ಕಾಪಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ’ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ. ಟ್ರಂಪ್ ಬೆದರಿಕೆಗೆ ಡೋಂಟ್ ಕೇರ್ ಎಂದಿರುವ ಅಜಿತ್ ದೋವಲ್ ರಷ್ಯಾಗೆ ಭೇಟಿ ನೀಡಿದ್ದರೆ. ಉಭಯ ದೇಶಗಳ ನಡುವಿನ ಸಂಬಂಧ ಬಲಪಡಿಸಲು ಮುಂದಾಗಿದ್ದಾರೆ. ಇತ್ತ ಹಲವು ವರ್ಷಗಳ ಬಳಿಕ ಪ್ರಧಾನಿ ಮೋದಿ ಅವರು ಚೀನಾಗೆ ಭೇಟಿ ನೀಡಲಿದ್ದಾರೆ.
ಯುರೋಪ್‌ನಿಂದಲೇ ರಷ್ಯಾದಿಂದ ಹೆಚ್ಚು ತೈಲ ಖರೀದಿ!
* ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಕಳೆದ ಮೂರು ವರ್ಷಗಳಿಂದ ಜಾಗತಿಕ ವೇದಿಕೆಯಲ್ಲಿ ಭಾರತದ ನಿಲುವನ್ನು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಿದ್ದಾರೆ. 2022ರ ಮಾರ್ಚ್‌ನಲ್ಲಿ ಆಗಿನ ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಅವರ ಸಮ್ಮುಖದಲ್ಲಿ ಮಾತನಾಡಿದ್ದ ಜೈಶಂಕರ್, ನಿರ್ಬಂಧಗಳ ಬಗ್ಗೆ ಮಾತನಾಡುವುದು ಒಂದು ಅಭಿಯಾನದಂತೆ ಕಾಣುತ್ತದೆ. ಯುರೋಪ್ ವಾಸ್ತವವಾಗಿ ಉಕ್ರೇನ್ ಯುದ್ಧಕ್ಕಿಂತ ಮೊದಲು ರಷ್ಯಾದಿಂದ ಹೆಚ್ಚು ತೈಲವನ್ನು ಖರೀದಿಸಿದೆ. ಆ ಸಂದರ್ಭದಲ್ಲಿ ಯುರೋಪ್ ಹಿಂದಿನ ತಿಂಗಳಿಗಿಂತ ಶೇ.15 ಕ್ಕಿಂತ ಹೆಚ್ಚು ರಷ್ಯಾದಿಂದ ತೈಲ ಮತ್ತು ಅನಿಲವನ್ನು ಖರೀದಿಸಿದೆ ಎಂದು ಗಮನಸೆಳೆದಿದ್ದರು. ರಷ್ಯಾದಿಂದ ತೈಲ ಮತ್ತು ಅನಿಲದ ಪ್ರಮುಖ ಖರೀದಿದಾರರನ್ನು ನೋಡಿದರೆ, ಅವರಲ್ಲಿ ಹೆಚ್ಚಿನವರು ಯುರೋಪಿನಲ್ಲಿದ್ದಾರೆ. ನಾವು ನಮ್ಮ ಇಂಧನ ಪೂರೈಕೆಯ ಬಹುಪಾಲು ಮಧ್ಯಪ್ರಾಚ್ಯದಿಂದ ಪಡೆಯುತ್ತೇವೆ. ಹಿಂದೆ ನಮ್ಮ ತೈಲದ ಸುಮಾರು 7.5-8% ಯುಎಸ್‌ನಿಂದಲೇ ಬಂದಿದೆ. ಬಹುಶಃ ಇದು ರಷ್ಯಾದಿಂದ ಶೇಕಡ ಪ್ರಮಾಣಕ್ಕೆ ಹೋಲಿಸಿದರೆ ಹೆಚ್ಚಿದೆ ಎಂದು ಜೈಶಂಕರ್ ತಿಳಿಸಿದ್ದರು.
* 2022ರ ಏಪ್ರಿಲ್‌ನಲ್ಲಿ ಜೈಶಂಕರ್ ವಾಷಿಂಗ್ಟನ್ ಡಿಸಿಯಲ್ಲಿ ಮಾತನಾಡುತ್ತಾ, ಯುರೋಪ್ ಕೇವಲ ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಖರೀದಿಸಿದ್ದಕ್ಕಿಂತಲೂ ಕಡಿಮೆ ತೈಲವನ್ನು ಭಾರತವು ಒಂದು ತಿಂಗಳಲ್ಲಿ ರಷ್ಯಾದಿಂದ ಖರೀದಿಸಿದೆ. ರಷ್ಯಾದಿಂದ ಇಂಧನ ಖರೀದಿಯನ್ನು ನೋಡುವುದಾದರೆ, ನಿಮ್ಮ ಗಮನ ಯುರೋಪಿನ ಮೇಲೆ ಕೇಂದ್ರೀಕರಿಸಬೇಕು. ನಾವು ಸ್ವಲ್ಪವನ್ನಷ್ಟೇ ಖರೀದಿಸುತ್ತೇವೆ. ಅದು ನಮ್ಮ ಇಂಧನ ಸುರಕ್ಷತೆಗೆ ಅವಶ್ಯಕವಾಗಿದೆ. ಆದರೆ ಅಂಕಿಅಂಶಗಳನ್ನು ನೋಡಿದಾಗ, ಬಹುಶಃ ತಿಂಗಳಿಗೆ ನಮ್ಮ ಒಟ್ಟು ಖರೀದಿಗಳು, ಯುರೋಪ್ ಒಂದೇ ದಿನಕ್ಕೆ ಮಧ್ಯಾಹ್ನದ ವೇಳೆ ಮಾಡುವ ಖರೀದಿಗಿಂತ ಕಡಿಮೆಯಿದೆ ಎಂದು ತಿಳಿಸಿದ್ದಾರೆ. ಯುರೋಪಿನ ಸಮಸ್ಯೆಗಳು ಪ್ರಪಂಚದ ಸಮಸ್ಯೆಗಳು. ಆದರೆ, ಪ್ರಪಂಚದ ಸಮಸ್ಯೆಗಳು ಯುರೋಪಿನ ಸಮಸ್ಯೆಗಳಲ್ಲ ಎಂಬ ಮನಸ್ಥಿತಿಯಿಂದ ಯುರೋಪ್ ಹೊರಬರಬೇಕು ಎಂದಿದ್ದರು. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ಶಾಕ್ – ಆಮದುಗಳ ಮೇಲೆ 50% ಸುಂಕ ವಿಧಿಸಿದ ಟ್ರಂಪ್
* 2022ರ ಡಿಸೆಂಬರ್‌ನಲ್ಲಿ ಜೈಶಂಕರ್ ಮಾತನಾಡಿ, ಉಕ್ರೇನ್-ರಷ್ಯಾ ಯುದ್ಧ ಪ್ರಾರಂಭವಾದ ಒಂಬತ್ತು ತಿಂಗಳಲ್ಲಿ ಭಾರತದ ಖರೀದಿಗಳು ಯುರೋಪ್‌ನ ಆರನೇ ಒಂದು ಭಾಗದಷ್ಟಿದೆ. ಪ್ರಸ್ತುತ ಯುರೋಪ್ ಮಧ್ಯಪ್ರಾಚ್ಯದಿಂದ ಬಹಳಷ್ಟು [ಕಚ್ಚಾ] ತೈಲವನ್ನು ಖರೀದಿಸುತ್ತಿದೆ ಎಂಬುದನ್ನು ನೆನಪಿನಲ್ಲಿಡಿ. ಭಾರತದಂತಹ ಆರ್ಥಿಕತೆಗೆ ಮಧ್ಯಪ್ರಾಚ್ಯವು ಸಾಂಪ್ರದಾಯಿಕವಾಗಿ ಪೂರೈಕೆದಾರರಾಗಿದ್ದರು. ಆದ್ದರಿಂದ ಇದು ಮಧ್ಯಪ್ರಾಚ್ಯದಲ್ಲಿಯೂ ಬೆಲೆಗಳ ಮೇಲೆ ಒತ್ತಡ ಹೇರುತ್ತದೆ. ಯುರೋಪಿಯನ್ ಒಕ್ಕೂಟದಲ್ಲಿ ತೈಲ ಆಮದು, ಭಾರತ ಮಾಡಿಕೊಂಡಿದ್ದಕ್ಕಿಂತ ಆರು ಪಟ್ಟು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ಭಾರತ-ಯುಎಸ್ ಸಂಬಂಧದ ಸವಾಲು
ಭಾರತ ಮತ್ತು ಅಮೆರಿಕ ನಡುವಿನ ಸಂಬಂಧವು ದಶಕಗಳಿಂದ ಹಲವಾರು ಸವಾಲುಗಳನ್ನು ಎದುರಿಸಿದೆ. 1971 ರ ಯುದ್ಧದ ಸಮಯದಲ್ಲಿ ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದರು. ಆಗಿನಿಂದ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಭಾರತ-ಯುಎಸ್ ಸಂಬಂಧಗಳಲ್ಲಿ ಏರಿಳಿತವನ್ನು ಗುರುತಿಸಬಹುದು. ಯುಎಸ್ ನೌಕಾಪಡೆಯು ಬಂಗಾಳ ಕೊಲ್ಲಿಗೆ ಎಂಟ್ರಿ ಕೊಟ್ಟಿತ್ತು. ಆದರೆ, ಸೋವಿಯತ್ ಒಕ್ಕೂಟದೊಂದಿಗಿನ ಭಾರತದ ಸ್ನೇಹ ಒಪ್ಪಂದವು ಅಮೆರಿಕನ್ನರು ನೇರವಾಗಿ ಯುದ್ಧಕ್ಕೆ ಪ್ರವೇಶಿಸುವುದನ್ನು ತಡೆಯಿತು.
1998ರ ಮೇ ತಿಂಗಳಲ್ಲಿ ಪೋಖ್ರಾನ್‌ನಲ್ಲಿ ನಡೆದ ಪರಮಾಣು ಪರೀಕ್ಷೆಗಳ ನಂತರ ಅಮೆರಿಕ ಮತ್ತು ಹೆಚ್ಚಿನ ಪಶ್ಚಿಮ ದೇಶಗಳು ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಿದವು. ಭಾರತವು ಅಮೆರಿಕದೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಬಿಕ್ಕಟ್ಟಿನಿಂದ ಹೊರಬಂದಿತು. ಜಸ್ವಂತ್ ಸಿಂಗ್ ಮತ್ತು ಆಗಿನ ಅಮೆರಿಕದ ವಿದೇಶಾಂಗ ಉಪ ಕಾರ್ಯದರ್ಶಿ ಸ್ಟ್ರೋಬ್ ಟಾಲ್ಬಾಟ್ ನಡುವಿನ ಮಾತುಕತೆಗಳು ಅಂತಿಮವಾಗಿ ಒಂದು ದಶಕದ ನಂತರ 2008 ರಲ್ಲಿ ಭಾರತ-ಯುಎಸ್ ಪರಮಾಣು ಒಪ್ಪಂದಕ್ಕೆ ಕಾರಣವಾಯಿತು.
2013ರ ಡಿಸೆಂಬರ್‌ನಲ್ಲಿ ಭಾರತೀಯ ರಾಜತಾಂತ್ರಿಕ ಅಧಿಕಾರಿ ದೇವಯಾನಿ ಖೋಬ್ರಗಡೆ ಅವರಿಗೆ ಸಾಕಷ್ಟು ಸಹಾಯ ನೀಡುತ್ತಿಲ್ಲ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಿ ತಪಾಸಣೆ ನಡೆಸಲಾಯಿತು. ಈ ಘಟನೆಯು ಭಾರತೀಯ ರಾಜತಾಂತ್ರಿಕರನ್ನು ಕೆರಳಿಸಿತು. ಸರ್ಕಾರವು ಒಂದು ಅಂಶವನ್ನು ಸ್ಪಷ್ಟಪಡಿಸಲು ಕ್ರಮಗಳನ್ನು ತೆಗೆದುಕೊಂಡಿತು. ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಸುತ್ತಲಿನ ಭದ್ರತಾ ಬ್ಯಾರಿಕೇಡ್‌ಗಳನ್ನು ತೆಗೆದುಹಾಕುವುದು ಮತ್ತು ಭಾರತದಲ್ಲಿನ ಅಮೆರಿಕದ ರಾಜತಾಂತ್ರಿಕರಿಗೆ ರಾಜತಾಂತ್ರಿಕ ಸವಲತ್ತುಗಳನ್ನು ಪರಿಶೀಲಿಸುವ ಕ್ರಮಕೈಗೊಂಡಿತು. ಆ ಸಮಯದಲ್ಲಿ ಜೈಶಂಕರ್ ಅವರು ಅಮೆರಿಕದಲ್ಲಿ ಭಾರತದ ರಾಯಭಾರಿಯಾಗಿದ್ದರು. ಖೋಬ್ರಗಡೆ ಅವರ ಬಿಡುಗಡೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಯುಪಿಎ II ಸರ್ಕಾರದ ಕೊನೆಯ ಆರು ತಿಂಗಳಲ್ಲಿ ಅಮೆರಿಕದೊಂದಿಗಿನ ಸಂಬಂಧಗಳು ತೀವ್ರ ಹಿನ್ನಡೆಯನ್ನು ಅನುಭವಿಸಿದವು. ಸಂಬಂಧಗಳನ್ನು ಮತ್ತೆ ಹಳಿಗೆ ತರಲು 2014 ರಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವೆ ಮಾತುಕತೆ ನಡೆಯಿತು. ಇದನ್ನೂ ಓದಿ: ಭಾರತ ಕೊಟ್ಟ ತಿರುಗೇಟಿಗೆ ಸರಿಯಾಗಿ ಉತ್ತರ ನೀಡದೇ ನುಣುಚಿದ ಟ್ರಂಪ್
ಅಧ್ಯಕ್ಷ ಟ್ರಂಪ್ ಜೊತೆ ವ್ಯವಹಾರ
ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸುತ್ತಿದ್ದಾರೆ. ಅದಕ್ಕೆ ಭಾರತ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಟ್ರಂಪ್ ಆಡಳಿತದ ದ್ವಂದ್ವ ಮಾನದಂಡಗಳಿಗೆ ಭಾರತ ಕನ್ನಡಿ ಹಿಡಿದಿದೆ. ರಷ್ಯಾ ಜೊತೆಗಿನ ಭಾರತದ ತೈಲ ಖರೀದಿ ಒಪ್ಪಂದವನ್ನು ಖಂಡಿಸುತ್ತಿರುವ ಟ್ರಂಪ್, ಭಾರತದ ಮೇಲೆ ಒಟ್ಟಾರೆ 50% ಸುಂಕ ವಿಧಿಸಿದ್ದಾರೆ. ಆ ಮೂಲಕ ಬೆದರಿಸುವ ತಂತ್ರವನ್ನು ಅನುಸರಿಸಿದ್ದಾರೆ. ಆದರೆ, ಭಾರತ ಇದಕ್ಕೆ ಡೋಂಟ್ ಕೇರ್ ಎಂದಿದೆ. ಪ್ರಧಾನಿ ಮೋದಿ ಕೂಡ ಸುಂಕದ ಬಗ್ಗೆ ಮೌನ ಮುರಿದಿದ್ದಾರೆ. ಇತ್ತ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ರಷ್ಯಾಗೆ ಭೇಟಿ ನೀಡಿ ಪುಟಿನ್ ಜೊತೆ ಮಾತುಕತೆ ನಡೆಸಿದ್ದಾರೆ. ಶತಮಾನಗಳಿಂದ ಭಾರತದ ಜೊತೆ ಸ್ನೇಹಿತನಂತೆ ರಷ್ಯಾ ನಿಂತಿದೆ. ಆ ದೇಶದ ಜೊತೆಗಿನ ಸಂಬಂಧ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಹೆಜ್ಜೆ ಇಟ್ಟಿದೆ.
ಟ್ರಂಪ್ ಅವರ ಮಾತುಗಳು ಮತ್ತು ಕಾರ್ಯಗಳು, ಮಾಜಿ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸ್ಸಿಂಜರ್ ಅವರ ಮಾತುಗಳು ಸತ್ಯ ಎಂಬುದನ್ನು ಸಾಬೀತುಪಡಿಸುವಂತಿದೆ. ಅಮೆರಿಕದ ಶತ್ರುವಾಗುವುದು ಅಪಾಯಕಾರಿ, ಆದರೆ ಸ್ನೇಹಿತನಾಗಿರುವುದು ಮಾರಕವಾಗಬಹುದು ಎಂದು ಹೆನ್ರಿ ಹೇಳಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ, ಟ್ರಂಪ್ ಅವರನ್ನು ನಿಭಾಯಿಸುವುದು 1998 ರ ನಂತರದ ಭಾರತೀಯ ರಾಜತಾಂತ್ರಿಕತೆಗೆ ಇರುವ ದೊಡ್ಡ ಸವಾಲಾಗಿದೆ.
ಪ್ರಸ್ತುತ, ವಿಶ್ವ ಆರ್ಥಿಕತೆಯು ಅನೇಕ ಏರಿಳಿತಗಳನ್ನು ಎದುರಿಸುತ್ತಿದೆ. ಅನಿಶ್ಚಿತತೆಯ ವಾತಾವರಣವಿದೆ. ಇಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಂದು ದೇಶವೂ ತನ್ನದೇ ಆದ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುತ್ತಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ. ಆದ್ದರಿಂದ, ಅದರ ಆರ್ಥಿಕ ಹಿತಾಸಕ್ತಿಗಳ ಬಗ್ಗೆ ಎಚ್ಚರದಿಂದಿರಬೇಕು. ನಮ್ಮ ರೈತರು, ನಮ್ಮ ಕೈಗಾರಿಕೆಗಳು, ನಮ್ಮ ಯುವಜನರಿಗೆ ಉದ್ಯೋಗ, ಅವರ ಹಿತಾಸಕ್ತಿಗಳು.. ಇವೆಲ್ಲವೂ ನಮಗೆ ಅತ್ಯಂತ ಮುಖ್ಯ. ಸರ್ಕಾರ ಈ ದಿಕ್ಕಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ದೇಶದ ನಾಗರಿಕರಾಗಿ, ನಮಗೂ ಕೆಲವು ಜವಾಬ್ದಾರಿಗಳಿವೆ. ಇದು ಮೋದಿ ಮಾತ್ರವಲ್ಲ, ಎಲ್ಲರೂ ಹೇಳಲೇಬೇಕಾದ ವಿಷಯ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಬಯಸುವ ಯಾರಾದರೂ, ಯಾವುದೇ ರಾಜಕೀಯ ಪಕ್ಷ, ಯಾವುದೇ ನಾಯಕರು, ದೇಶದ ಹಿತಾಸಕ್ತಿಯಲ್ಲಿ ಮಾತನಾಡಬೇಕು. ‘ಸ್ವದೇಶಿ’ ಖರೀದಿಸಲು ನಿರ್ಧರಿಸಬೇಕೆಂದು ಜನರನ್ನು ಉತ್ತೇಜಿಸಬೇಕು. ಒಬ್ಬ ಭಾರತೀಯನು ಬೆವರು ಸುರಿಸಿ ತಯಾರಿಸುವ ವಸ್ತುಗಳನ್ನು ನಾವು ಖರೀದಿಸಲಿದ್ದೇವೆ ಎಂದು ಸಂಕಲ್ಪ ಮಾಡಬೇಕು. ನಾವು ‘ಸ್ಥಳೀಯರಿಗೆ ಧ್ವನಿ’ ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 69 ದೇಶಗಳಿಗೆ ಸುಂಕದ ಬರೆ – ಭಾರತಕ್ಕೆ 25%, ಪಾಕಿಸ್ತಾನಕ್ಕೆ 19% ಸುಂಕ ವಿಧಿಸಿದ ಟ್ರಂಪ್
‘ಮೇಕ್ ಇನ್ ಇಂಡಿಯಾ’ ಉತ್ಪನ್ನಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಜನರು ಖರೀದಿಸುವ ಎಲ್ಲಾ ಹೊಸ ವಸ್ತುಗಳು ‘ಸ್ವದೇಶಿ’ ಎಂದು ಸಂಕಲ್ಪ ಮಾಡಬೇಕೆಂದು ಮೋದಿ ಕರೆ ಕೊಟ್ಟಿದ್ದಾರೆ. ರಷ್ಯಾದಿಂದ ಇಂಧನ ಆಮದು ಮಾಡಿಕೊಳ್ಳುವುದರಿಂದ ಭಾರತೀಯ ರಫ್ತಿನ ಮೇಲೆ ಶೇ.25 ರಷ್ಟು ಸುಂಕ (Tariff) ಮತ್ತು ಅನಿರ್ದಿಷ್ಟ ದಂಡ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದರು. ಅದರ ಬೆನ್ನಲ್ಲೇ ಮೋದಿ ಅವರು ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡುವಂತೆ ಹೇಳಿದ್ದಾರೆ.
– ನಮ್ಮ ಮಿಸೈಲ್‌ಗಳ ದಾಳಿಗೆ ಪಾಕಿಸ್ತಾನ ಮಂಡಿಯೂರುವ ಸ್ಥಿತಿಗೆ ಬಂತು: ಪ್ರಧಾನಿ
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಗೆ ಜಾಗತಿಕ ದೇಶಗಳ ಬೆಂಬಲ ಸಿಕ್ಕಿತು. ಆದರೆ, ನಮ್ಮ ವೀರ ಯೋಧರ ಪರಾಕ್ರಮಕ್ಕೆ ಕಾಂಗ್ರೆಸ್ ಬೆಂಬಲ ಸಿಗಲಿಲ್ಲ, ಇದು ನಮ್ಮ ದೌರ್ಭಾಗ್ಯ ಎಂದು ಪ್ರಧಾನಿ ಮೋದಿ (PM Modi) ಬೇಸರ ವ್ಯಕ್ತಪಡಿಸಿದ್ದಾರೆ.
ಮೋದಿ ಎಲ್ಲಿ ಹೋದರು, ಎಲ್ಲಿದೆ 53 ಇಂಚು ಎದೆಗಾರಿಕೆ? ಹೀಗೆ ಸಾಕಷ್ಟು ತಮಾಷೆ ಮಾಡುತ್ತಿದ್ದರು. ಪೆಹಲ್ಗಾಮ್ ದಾಳಿಯಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿತ್ತು. ಸ್ವಾರ್ಥ ರಾಜಕೀಯಕ್ಕೆ ನನ್ನನ್ನು ಗುರಿಯಾಗಿಸಿಕೊಂಡಿದ್ದರು. ಇಂತಹ ಹೇಳಿಕೆ ದೇಶದ ಯೋಧರ ಮನೋಬಲ ಕುಗ್ಗಿಸುತ್ತಿತ್ತು. ಅವರಿಗೆ ಭಾರತದ ಸೇನೆ, ಶಕ್ತಿಯ ಮೇಲೆ ನಂಬಿಕೆ ಇಲ್ಲ. ಅದೇ ಕಾರಣಕ್ಕೆ ಆಪರೇಷನ್ ಸಿಂಧೂರ ಮೇಲೆ ಪ್ರಶ್ನೆ ಕೇಳಿದರು. ಇದನ್ನು ಮಾಡಿ ಮಾಧ್ಯಮದಲ್ಲಿ ಹೆಡ್‌ಲೈನ್ ಆಗಬಹುದು. ದೇಶದ ಜನರ ಹೃದಯದಲ್ಲಿ ಸ್ಥಳ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.
ನಾಚಿಕೆ ಬಿಟ್ಟು ಪಾಕಿಸ್ತಾನ ಭಯೋತ್ಪಾದಕರ ಜೊತೆಗೆ ನಿಂತಿತು. ನಾವು ಹೊಸ ಅವಕಾಶವನ್ನು ನೋಡುತ್ತಿದ್ದೇವೆ. ಮೊದಲು ನಾವು ಕೇವಲ ಭಯೋತ್ಪಾದಕರನ್ನು ಗುರಿಯಾಗಿಸಿದ್ದೆವು. ಆದರೆ, ಪಾಕಿಸ್ತಾನದ ಬೆಂಬಲದ ಬಳಿಕ ವರ್ಷಗಳ ಕಾಲ ನೆನಪಿರುವಂಥ ಉತ್ತರ ನೀಡಿದೆವು. ನಮ್ಮ ಮಿಸೈಲ್‌ಗಳು ಪಾಕಿಸ್ತಾನ ತಲುಪಿದವು. ಪಾಕಿಸ್ತಾನ ಮಂಡಿಯೂರುವ ಸ್ಥಿತಿಗೆ ಬಂತು. ಬಳಿಕ ಪಾಕಿಸ್ತಾನ ಡಿಜಿಎಂಒ ಮೂಲಕ ಸಂಧಾನಕ್ಕೆ ಬಂತು. ಸಾಕು ಮಾಡಿ, ಈಗಾಗಲೇ ಸಾಕಷ್ಟು ಹೊಡೆದ್ದೀರಿ. ಇನ್ನು ಹೊಡೆದರೆ ತಡೆಯುವ ಶಕ್ತಿ ಇಲ್ಲ. ದಾಳಿ ನಿಲ್ಲಿಸಿ ಎಂದು ಡಿಜಿಎಂಓ ಮನವಿ ಮಾಡಿದರು. ನಮ್ಮ ಟಾರ್ಗೆಟ್ ಭಯೋತ್ಪಾದನೆ ಅಂತ ನಾವು ಮೊದಲೇ ಹೇಳಿದ್ದೆವು. ಪಾಕಿಸ್ತಾನ ಅವರ ಬೆಂಬಲಕ್ಕೆ ನಿಂತು ತಪ್ಪು ಮಾಡಿತು. ನಾವು ಹೇಳಿ ಹೊಡೆದಿದ್ದೇವೆ, ಆಮೇಲೆ ಮನವಿ ಮೇರೆಗೆ ದಾಳಿ ನಿಲ್ಲಿಸಿದೆವು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇಂದಿರಾಗಾಂಧಿಯ ಅರ್ಧದಷ್ಟು ಧೈರ್ಯ ಇದ್ರೆ ಟ್ರಂಪ್ ಸುಳ್ಳುಗಾರ ಎಂದು ಮೋದಿ ಹೇಳಲಿ: ರಾಹುಲ್ ಗಾಂಧಿ ಸವಾಲ್
9ನೇ ತಾರೀಕಿಗೆ ಅಮೆರಿಕ ಉಪಾಧ್ಯಕ್ಷರು, ನನ್ನ ಸಂಪರ್ಕಕ್ಕೆ ಯತ್ನಿಸಿದ್ದರು. ಆದರೆ ಒಂದು ಗಂಟೆ ಕಾಲ ಸಂಪರ್ಕ ಸಾಧ್ಯವಾಗಲಿಲ್ಲ. ಮತ್ತೆ ನಾನೇ ವಾಪಸ್ ವ್ಯಾನ್ಸ್‌ಗೆ ಕಾಲ್ ಮಾಡಿದೆ. ಪಾಕಿಸ್ತಾನ ದೊಡ್ಡ ದಾಳಿ ಮಾಡಲಿದೆ ಎಂದು ಅಮೆರಿಕ ಉಪಾಧ್ಯಕ್ಷ ಹೇಳಿದ್ರು. ದಾಳಿ ಮಾಡಿದ್ರೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಬುಲೆಟ್‌ಗೆ ಬಾಂಬ್ ಮೂಲಕ ಉತ್ತರ ಕೊಡ್ತೇವೆ ಎಂದು ವ್ಯಾನ್ಸ್‌ಗೆ ಹೇಳಿದ್ದೆ ಎಂದು ಮೋದಿ ನೆನಪಿಸಿಕೊಂಡಿದ್ದಾರೆ.
– ಪಾಕ್‌ನ ಪರಮಾಣು ಬೆದರಿಕೆ ನಡೆಯುವುದಿಲ್ಲ, ಇದಕ್ಕೆ ಭಾರತ ಬಗ್ಗಲ್ಲ ಎಂದ ಪ್ರಧಾನಿ
ನವದೆಹಲಿ: ಭಾರತ-ಪಾಕ್ (India-Pakistan) ನಡುವಿನ ಕದನ ವಿರಾಮ ವಿಚಾರವಾಗಿ ಟ್ರಂಪ್ ಮಾತು ಹಾಗೂ ವಿಪಕ್ಷಗಳ ಆರೋಪಕ್ಕೆ ಪ್ರಧಾನಿ ಮೋದಿ (PM Modi) ತಿರುಗೇಟು ಕೊಟ್ಟಿದ್ದಾರೆ. ವಿಶ್ವದ ಯಾವ ನಾಯಕನೂ ಆಪರೇಷನ್ ಸಿಂಧೂರ (Operation Sindoor) ನಿಲ್ಲಿಸಲು ಹೇಳಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಪರೇಷನ್ ಸಿಂಧೂರ ಚರ್ಚೆಗೆ ಲೋಕಸಭೆಯಲ್ಲಿ ಉತ್ತರಿಸಿದ ಅವರು, ವಿಶ್ವದ ಯಾವ ನಾಯಕನೂ ಆಪರೇಷನ್ ನಿಲ್ಲಿಸಲು ಹೇಳಲಿಲ್ಲ. ಅಮೆರಿಕ ಉಪಾಧ್ಯಕ್ಷ, ಪಾಕ್ ದೊಡ್ಡ ದಾಳಿ ಮಾಡಲಿದೆ ಎಂದಿದ್ದರು. ಪಾಕ್ ದಾಳಿ ಮಾಡಿದರೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದೆ. ಅಮೆರಿಕ ಉಪಾಧ್ಯಕ್ಷ ನನ್ನ ಜೊತೆಗೆ ಮಾತನಾಡಲು ಪ್ರಯತ್ನಿಸಿದರು. ಸೇನೆಯ ಜೊತೆಗೆ ಮಾತನಾಡುತ್ತಿದ್ದೆ, ಸಾಧ್ಯವಾಗಲಿಲ್ಲ. ಆಮೇಲೆ ವಾಪಸ್ ಫೋನ್ ಮಾಡಿ ಅವರ ಜೊತೆಗೆ ಮಾತನಾಡಿದೆ. ಪಾಕಿಸ್ತಾನ ದೊಡ್ಡ ದಾಳಿ ಮಾಡುವುದಿದೆ ಎಂದು ಎಚ್ಚರಿಕೆ ನೀಡಿದರು. ಅವರ ಉದ್ದೇಶ ದಾಳಿಯಾಗಿದ್ದರೆ, ಅದು ಅವರಿಗೆ ದುಬಾರಿಯಾಗಲಿದೆ ಎಂದು ಉತ್ತರಿಸಿದೆ. ನಾವು ಅದಕ್ಕಿಂತ ದೊಡ್ಡ ದಾಳಿ ನಡೆಸಿ ಉತ್ತರ ಕೊಡುತ್ತೇವೆ. ಗುಂಡಿನ ಉತ್ತರ ಗುಂಡಿನಿಂದಲೇ ಕೊಡುತ್ತೇವೆ ಎಂದು ಹೇಳಿದ್ದೆ ಎಂದು ಮೋದಿ ತಿಳಿಸಿದ್ದಾರೆ. ಇದನ್ನೂ ಓದಿ: ಇಂದಿರಾಗಾಂಧಿಯ ಅರ್ಧದಷ್ಟು ಧೈರ್ಯ ಇದ್ರೆ ಟ್ರಂಪ್ ಸುಳ್ಳುಗಾರ ಎಂದು ಮೋದಿ ಹೇಳಲಿ: ರಾಹುಲ್ ಗಾಂಧಿ ಸವಾಲ್
ಪೆಹಲ್ಗಾಮ್‌ನಲ್ಲಿ ಧರ್ಮ ಕೇಳಿ ಗುಂಡು ಹಾರಿಸಲಾಯಿತು. ಇದು ಕ್ರೂರತೆಯ ಪರಾಕಾಷ್ಠೆಯಾಗಿತ್ತು. ಭಾರತವನ್ನು ಹಿಂಸೆಯ ಬೆಂಕಿಯಲ್ಲಿ ಹಾಕುವುದು, ದಂಗೆ ಎಬ್ಬಿಸುವುದು ಇದರ ಉದ್ದೇಶವಾಗಿತ್ತು. ಈ ಉದ್ದೇಶವನ್ನು ದೇಶದ ಜನರು ಸುಳ್ಳು ಮಾಡಿದರು. ಅದಕ್ಕೆ ನಾನು ದೇಶದ ಜನರಿಗೆ ಧನ್ಯವಾದ ಹೇಳುತ್ತೇನೆ. ನಾವು ಭಯೋತ್ಪಾದಕರನ್ನು ಮಣ್ಣಲ್ಲಿ ಮಣ್ಣಾಗಿಸುತ್ತೇವೆ. ಕಲ್ಪನೆಗೂ ಮೀರಿದ ಶಿಕ್ಷೆಯಾಗಲಿದೆ. ದಾಳಿ ನಡೆದ ದಿನ ನಾನು ವಿದೇಶದಲ್ಲಿದ್ದೆ, ವಾಪಸ್ ಬಂದೆ. ಬಂದ ತಕ್ಷಣ ಸಭೆ ಕರೆದು, ಭಯೋತ್ಪಾದನೆ ವಿರುದ್ಧ ಕಠಿಣ ಉತ್ತರ ಕೊಡ ಬೇಕು ಎಂದು ಸೂಚನೆ ನೀಡಿದೆ. ಇದು ನಮ್ಮ ರಾಷ್ಟ್ರೀಯ ಸಂಕಲ್ಪವಾಗಿತ್ತು. ನಮ್ಮ ಸೇನೆಯ ಮೇಲೆ ವಿಶ್ವಾಸ ಮತ್ತು ಭರವಸೆ ಇದೆ. ಸೇನೆಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಯಿತು. ಸೇನೆ ಎಲ್ಲಿ ಹೇಗೆ ಬೇಕಾದರೂ ದಾಳಿ ಮಾಡಬಹುದು ಎನ್ನುವ ಸ್ವಾತಂತ್ರ‍್ಯವೂ ನೀಡಲಾಯಿತು. ನಮ್ಮ ಸೇನೆ ಭಯೋತ್ಪಾದಕರಿಗೆ ಶಿಕ್ಷೆ ನೀಡಿದೆ. ಆ ಶಿಕ್ಷೆ ಭಯೋತ್ಪಾದಕರ ನಿದ್ದೆಯನ್ನು ಇಂದಿಗೂ ಕಸಿದಿದೆ ಎಂದು ಹೇಳಿದ್ದಾರೆ.
ಪೆಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಕ್ಕೆ ಭಾರತದ ಪ್ರತಿದಾಳಿ ಬಗ್ಗೆ ಗೊತ್ತಿತ್ತು. ಹೀಗಾಗಿ ಪರಮಾಣು ದಾಳಿಯ ಬೆದರಿಕೆ ಬರಲು ಆರಂಭಿಸಿದ್ದವು. ನಾವು ಅಂದುಕೊಂಡಂತೆ ದಾಳಿ ನಡೆಸಿದೆವು. ಪಾಕಿಸ್ತಾನ ಏನು ಮಾಡಲು ಸಾಧ್ಯವಾಗಲಿಲ್ಲ. ಪೆಹಲ್ಗಾಮ್ ದಾಳಿಗೆ ಸೇನೆ ಪ್ರತಿಕಾರ ತೀರಿಸಿಕೊಂಡಿತು. ಈ ಮೊದಲು ನಾವು ಎಲ್ಲಿ ಹೋಗಲು ಸಾಧ್ಯವಾಗಿರಲಿಲ್ಲ, ಅಲ್ಲಿಗೆ ನಾವು ಹೋದೆವು. ಭಯೋತ್ಪಾದಕ ನೆಲೆಗಳನ್ನು ಹುಡುಕಿ ಹೊಡೆದು ಬೂದಿ ಮಾಡಿದೆವು. ಪಾಕ್ ಪರಮಾಣು ಬೆದರಿಕೆ ಸುಳ್ಳೆಂದು ಸಾಬೀತು ಮಾಡಿದೆವು. ಪರಮಾಣು ಬೆದರಿಕೆ ನಡೆಯುವುದಿಲ್ಲ, ಇದಕ್ಕೆ ಭಾರತ ಬಗ್ಗಲ್ಲ ಎನ್ನುವ ಸಂದೇಶ ರವಾನಿಸಿದ್ದೇವೆ ಎಂದು ಮೋದಿ ಮಾತನಾಡಿದ್ದಾರೆ. ಇದನ್ನೂ ಓದಿ: ಖರ್ಗೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ: ರಾಜ್ಯಸಭೆಯಲ್ಲಿ ಕೋಲಾಹಲ ಎಬ್ಬಿಸಿದ ನಡ್ಡಾ ಹೇಳಿಕೆ
ನಮ್ಮ ದಾಳಿಯಿಂದ ಪಾಕ್ ಏರ್‌ಬೇಸ್ ಐಸಿಯು ನಲ್ಲಿವೆ. ಆಪರೇಷನ್ ಸಿಂಧೂರದಲ್ಲಿ ಸಫಲತೆ ಸಿಕ್ಕಿದೆ. ತಂತ್ರಜ್ಞಾನದ ಯುದ್ಧದಲ್ಲಿ ಎಷ್ಟು ನಷ್ಟವಾಗಬಹುದಿತ್ತು. ನಾವು ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದೇವೆ. ಮೊದಲ ಬಾರಿಗೆ ಆತ್ಮನಿರ್ಭರ ಭಾರತ್ ತಾಕತ್ತನ್ನು ವಿಶ್ವ ನೋಡಿದೆ. ಮೇಡ್ ಇನ್ ಇಂಡಿಯಾ ಡ್ರೋನ್, ಮಿಸೈಲ್ ಶಕ್ತಿ ಪ್ರದರ್ಶನವಾಯಿತು. ಈ ಆಪರೇಷನ್‌ನಲ್ಲಿ ಮೂರು ಸೇನೆ ಜಂಟಿಯಾಗಿ ಕೆಲಸ ಮಾಡಿವೆ ಎಂದು ತಿಳಿಸಿದ್ದಾರೆ.
ದಾಳಿ ಬಳಿಕ ಮಾಸ್ಟರ್‌ಮೈಂಡ್‌ಗಳು ಆರಾಮವಾಗಿ ಇರುತ್ತಿದ್ದರು. ಮುಂದಿನ ದಾಳಿಗೆ ಸಂಚು ರೂಪಿಸುತ್ತಿದ್ದರು. ಈಗ ದಾಳಿ ಮಾಡಿದರೆ ಭಾರತ ಬರುತ್ತೆ, ದಾಳಿ ಮಾಡುತ್ತೆ ಎನ್ನುವ ಭಯ ಹುಟ್ಟಿಸಿದೆ. ಭಾರತದಲ್ಲಿ ದಾಳಿ ನಡೆಸಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಸ್ಪಷ್ಟವಾಗಿದೆ. ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆದರೆ ನಮ್ಮದೇ ರೀತಿಯಲ್ಲಿ ನಮ್ಮ ಟೈಮ್‌ನಲ್ಲಿ ಉತ್ತರ ಕೊಡುತ್ತೇವೆ. ಪರಮಾಣು ಬೆದರಿಕೆಗೆ ಭಾರತ ಬಗ್ಗುವುದಿಲ್ಲ. ನಾವು ಭಯೋತ್ಪಾದಕ ಪೋಷಿತ ಸರ್ಕಾರ ಮತ್ತು ಸಂಘಟನೆಯನ್ನು ಬೇರೆಯಾಗಿ ನೋಡುವುದಿಲ್ಲ ಎಂದು ಪಾಕ್‌ಗೆ ಖಡಕ್ ಸಂದೇಶ ಕೊಟ್ಟಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಹೋರಾಡಲು ಆಗದಿದ್ರೆ ಪಾಕ್‌ಗೆ ಸಹಾಯ ಮಾಡಲು ಸಿದ್ಧ: ರಾಜನಾಥ್ ಸಿಂಗ್