Tag: ಪಿಎಂ ಆವಾಸ್ ಯೋಜನೆ

  • ಪ್ರಧಾನಿ ಮೋದಿಗೆ 74ರ ಸಂಭ್ರಮ – ಪಿಎಂ ಆವಾಸ್‌ ಯೋಜನೆಯ 26 ಲಕ್ಷ ಮನೆಗಳ ಉದ್ಘಾಟನೆ ಇಂದು

    ಪ್ರಧಾನಿ ಮೋದಿಗೆ 74ರ ಸಂಭ್ರಮ – ಪಿಎಂ ಆವಾಸ್‌ ಯೋಜನೆಯ 26 ಲಕ್ಷ ಮನೆಗಳ ಉದ್ಘಾಟನೆ ಇಂದು

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) 74ರ ಸಂಭ್ರಮದಲ್ಲಿದ್ದಾರೆ. ಜನ್ಮದಿನದ ಅಂಗವಾಗಿ ಮಂಗಳವಾರ ಹಲವಾರು ಕಾರ್ಯಕ್ರಮಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

    ಭುವನೇಶ್ವರದ ಗಡಕಾನಾದಲ್ಲಿ 26 ಲಕ್ಷ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆಗಳನ್ನು ಅನಾವರಣಗೊಳಿಸಲಿದ್ದಾರೆ. ಭುವನೇಶ್ವರಕ್ಕೆ ಆಗಮಿಸಿದ ನಂತರ, ಮೋದಿ ಅವರು ಗಡಕಾನಾ ಕೊಳಚೆ ಪ್ರದೇಶಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ವಸತಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ. ಇದನ್ನೂ ಓದಿ: ಇಂದು ಮಧ್ಯಾಹ್ನ ದೆಹಲಿಗೆ ನೂತನ ಮುಖ್ಯಮಂತ್ರಿ ಘೋಷಣೆ

    ಇದರ ಬೆನ್ನಲ್ಲೇ ಜನತಾ ಮೈದಾನದಲ್ಲಿ ಪ್ರಧಾನಮಂತ್ರಿ ಸುಭದ್ರಾ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ ಐದು ವರ್ಷಗಳ ಕಾಲ 1 ಕೋಟಿಗೂ ಅಧಿಕ ಬಡ ಮಹಿಳೆಯರಿಗೆ ಎರಡು ಸಮಾನ ಕಂತುಗಳಲ್ಲಿ ವಾರ್ಷಿಕ 10,000 ರೂ. ನೀಡಲಾಗುವುದು.

    ಈ ಕಲ್ಯಾಣ ಯೋಜನೆಗಳ ಜೊತೆಗೆ, ಮೋದಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. 2,871 ಕೋಟಿ ರೂ. ಮೌಲ್ಯದ ರೈಲ್ವೆ ಮತ್ತು 1,000 ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದು ಪ್ರದೇಶದ ಸಂಪರ್ಕ ಮತ್ತು ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್‌- ಇಂದು ಸುಪ್ರೀಂನಲ್ಲಿ ವಿಚಾರಣೆ

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ಮೋದಿಗೆ ಭಾರತದಾದ್ಯಂತದ ರಾಜಕೀಯ ನಾಯಕರು ಶುಭಾಶಯ ತಿಳಿಸಿದ್ದಾರೆ. ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಾರತದ ಬೆಳವಣಿಗೆಗೆ ಮೋದಿ ಅವರ ದೂರದೃಷ್ಟಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

  • ಪಿಎಂ ಆವಾಸ್ ಯೋಜನೆಯ ಹಣ ಪಡೆದು 4 ಮಹಿಳೆಯರು ಪ್ರೇಮಿಗಳೊಂದಿಗೆ ಪಲಾಯನ

    ಪಿಎಂ ಆವಾಸ್ ಯೋಜನೆಯ ಹಣ ಪಡೆದು 4 ಮಹಿಳೆಯರು ಪ್ರೇಮಿಗಳೊಂದಿಗೆ ಪಲಾಯನ

    ಲಕ್ನೋ: ಪ್ರಧಾನ ಮಂತಿ ಆವಾಸ್ ಯೋಜನೆಯ (PMAY) ಅಡಿಯಲ್ಲಿ ಹಣವನ್ನು (Money) ಪಡೆದ ನಾಲ್ವರು ವಿವಾಹಿತ ಮಹಿಳೆಯರು (Women) ತಮ್ಮ ಪತಿಯರನ್ನು ಬಿಟ್ಟು ಪ್ರೇಮಿಗಳೊಂದಿಗೆ (Lovers) ಓಡಿಹೋಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.

    ಪಿಎಂಎವೈ ಯೋಜನೆ ಕೇಂದ್ರ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಬಡವರಿಗೆ ನಗರ ವಸತಿ ಕೊರತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಆರ್ಥಿಕವಾಗಿ ದುರ್ಬಲರಾದವರು, ಕಡಿಮೆ ಹಾಗೂ ಮಧ್ಯಮ ಆದಾಯದ ಗುಂಪುಗಳಿಗೆ ಸೇರಿದವರಿಗೆ ಈ ಯೋಜನೆ ನಗದು ರೂಪದಲ್ಲಿ ಸಹಾಯ ಮಾಡುತ್ತದೆ. ಇದನ್ನು ಬಳಸಿಕೊಂಡು ಜನರು ಮನೆಗಳನ್ನು ಹೊಂದಬಹುದಾಗಿದೆ.

    ಪಿಎಂಎವೈ ಅಡಿಯಲ್ಲಿ ಕುಟುಂಬದ ಒಬ್ಬ ಮಹಿಳಾ ಸದಸ್ಯೆ ಮನೆಯ ಮಾಲಕಿ ಅಥವಾ ಸಹ-ಮಾಲಕಿಯಾಗಿರುವುದು ಕಡ್ಡಾಯವಾಗಿದೆ. ವರದಿಗಳ ಪ್ರಕಾರ ಈ ಯೋಜನೆಯ ಫಲಾನುಭವಿಗಳಾದ ನಾಲ್ವರು ಮಹಿಳೆಯರು ತಮ್ಮ ಖಾತೆಗೆ 50,000 ರೂ. ಅನುದಾನ ಬಂದ ತಕ್ಷಣವೇ ತಮ್ಮ ಪತಿಯರನ್ನು ತೊರೆದು ಓಡಿ ಹೋಗಿದ್ದಾರೆ.

    ಈ ಘಟನೆಯ ಪರಿಣಾಮವಾಗಿ ಮಹಿಳೆಯರ ಗಂಡಂದಿರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದೆಡೆ ಮನೆಯ ನಿರ್ಮಾಣದ ಕಾಮಗಾರಿ ಇನ್ನೂ ಪ್ರಾರಂಭವಾಗದ ಕಾರಣ ಜಿಲ್ಲಾ ನಗರಾಭಿವೃದ್ಧಿ ಸಂಸ್ಥೆ (DUDA) ಎಚ್ಚರಿಕೆಯನ್ನು ನೀಡುವ ಭೀತಿಯಲ್ಲಿದ್ದರೆ, ಇನ್ನೊಂದೆಡೆ ತಮ್ಮ ಪತ್ನಿಯರ ಖಾತೆಗಳಿಗೆ ಮುಂದಿನ ಕಂತಿನ ಹಣ ವರ್ಗಾವಣೆಯಾಗುವ ಆತಂಕದಲ್ಲಿದ್ದಾರೆ.

    ಇದೀಗ ಗೊಂದಲದಲ್ಲಿರುವ ಪತಿಯರು ಏನು ಮಾಡಬೇಕೆಂದು ತೋಚದೇ ಓಡಿ ಹೋಗಿರುವ ಪತ್ನಿಯರ ಖಾತೆಗೆ ವರ್ಗಾವಣೆಯಾಗಬಹುದಾದ ಮುಂದಿನ ಕಂತನ್ನು ಕಳುಹಿಸದಂತೆ ಡಿಯುಡಿಎಯ ಯೋಜನಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬೆಂಗಳೂರು ಚಿತ್ರೋತ್ಸವಕ್ಕೆ ರೂ. 4.49 ಕೋಟಿ ಮೀಸಲು : ಆರ್.ಅಶೋಕ್

    ನಗರ ಪಂಚಾಯಿತಿ ಬೆಲ್ಹಾರ, ಬಂಕಿ, ಜೈದ್‌ಪುರ ಹಾಗೂ ಸಿದೌರ್‌ನ ನಾಲ್ವರು ಮಹಿಳೆಯರು ಯೋಜನೆಯ ಮೊದಲ ಕಂತಿನ ಹಣವನ್ನು ಪಡೆದಿದ್ದು, ಬಳಿಕ ತಮ್ಮ ಪ್ರೇಮಿಗಳೊಂದಿಗೆ ಓಡಿಹೋಗಿದ್ದಾರೆ. ಫಲಾನುಭವಿಗಳ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗದೇ ಹೋಗಿರುವ ಹಿನ್ನೆಲೆ ಈ ವಿಚಿತ್ರ ಪ್ರಕರಣ ಅಧಿಕಾರಿಗಳ ಗಮನಕ್ಕೆ ಬಂದಿದೆ.

    ಕುಟುಂಬಗಳಿಗೆ ಹಣ ವರ್ಗಾವಣೆಯಾಗಿದ್ದರೂ ಮನೆ ನಿರ್ಮಾಣ ಇನ್ನೂ ಪ್ರಾರಂಭವಾಗಿಲ್ಲ ಎಂಬ ಕಾರಣಕ್ಕೆ ದುಡಾದ ಯೋಜನಾಧಿಕಾರಿ ಸೌರಭ್ ತ್ರಿಪಾಠಿ ನೋಟಿಸ್ ಕಳುಹಿಸಿ ತಕ್ಷಣವೇ ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುವಂತೆ ಆದೇಶ ನೀಡಿದ್ದರು. ಕೊನೆಗೆ ಓಡಿಹೋದ ಮಹಿಳೆಯರ ಪತಿಯರು ಸರ್ಕಾರಿ ಕಚೇರಿಗೆ ತೆರಳಿ ನಡೆದಿರುವ ಘಟನೆಯನ್ನು ವಿವರಿಸಿದ್ದಾರೆ ಹಾಗೂ 2ನೇ ಕಂತು ಜಮಾ ಮಾಡದಂತೆ ಕೇಳಿಕೊಂಡಿದ್ದಾರೆ.

    ಇದೀಗ ಓಡಿಹೋಗಿರುವ ಮಹಿಳೆಯರಿಂದ ಹಣವನ್ನು ವಸೂಲಿ ಮಾಡುವುದು ಹೇಗೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದಾರೆ. ಆದರೂ ಪ್ರತಿ ಫಲಾನುಭವಿಗಳಿಂದಲೂ ಹಣವನ್ನು ಹಿಂಪಡೆಯಲು ಇಲಾಖೆ ಪ್ರಯತ್ನಿಸುತ್ತಿದೆ ಎಂದು ತ್ರಿಪಾಠಿ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತವನ್ನೂ ಟಾರ್ಗೆಟ್‌ ಮಾಡಿದೆ ಚೀನಾದ ಬೇಹುಗಾರಿಕಾ ಬಲೂನ್‌

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಿಎಂ ಆವಾಸ್ ಯೋಜನೆಯಲ್ಲಿ ರಾಜ್ಯಕ್ಕೆ ಅನುದಾನ ಕಡಿತ – ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ?: ದಿನೇಶ್ ಗುಂಡೂರಾವ್

    ಪಿಎಂ ಆವಾಸ್ ಯೋಜನೆಯಲ್ಲಿ ರಾಜ್ಯಕ್ಕೆ ಅನುದಾನ ಕಡಿತ – ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ?: ದಿನೇಶ್ ಗುಂಡೂರಾವ್

    ಬೆಂಗಳೂರು: ಪಿಎಂ ಆವಾಸ್ ಯೋಜನೆಯಲ್ಲಿ ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಿಗೆ ಅನುದಾನ ಹೆಚ್ಚಳವಾಗಿದೆ. ಆದರೆ ಕರ್ನಾಟಕಕ್ಕೆ ಅರ್ಧದಷ್ಟು ಅನುದಾನ ಕಡಿತವಾಗಿದೆ. ಕೇಂದ್ರದಿಂದ ಕರ್ನಾಟಕಕ್ಕೆ ಯಾಕೆ ಈ ತಾರತಮ್ಯ? ರಾಜ್ಯದ ಜನರು ಬಿಜೆಪಿಗೆ ವೋಟ್‌ ಹಾಕಿದ ತಪ್ಪಿಗೆ ಈ ಶಿಕ್ಷೆಯೇ ಎಂದು ಕೇಂದ್ರ ಸರ್ಕಾರದ ವಿರುದ್ಧ ದಿನೇಶ್ ಗುಂಡೂರಾವ್ ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಜಿಎಸ್‍ಟಿ ಪರಿಹಾರದಲ್ಲೂ ರಾಜ್ಯಕ್ಕೆ ಅನ್ಯಾಯ. ಜಿಎಸ್‍ಟಿ ಬಾಕಿಯಲ್ಲೂ ಅನ್ಯಾಯ. 5,495 ಕೋಟಿ ರೂ. ವಿಶೇಷ ಅನುದಾನದಲ್ಲೂ ರಾಜ್ಯಕ್ಕೆ ಅನ್ಯಾಯ. ಈಗ ಪಿಎಂ ಆವಾಸ್ ಯೋಜನೆಯ ಅನುದಾನದಲ್ಲೂ ಅನ್ಯಾಯ. ಬಿಜೆಪಿಯ 25 ಸಂಸದರನ್ನು ಆಯ್ಕೆ ಮಾಡಿದ ರಾಜ್ಯದ ಜನರಿಗೆ ಇದೇನಾ ಪ್ರತಿಫಲ? ಬಿಜೆಪಿಯವರೇ ಡಬಲ್ ಇಂಜಿನ್ ಸರ್ಕಾರದ ಸ್ವರ್ಗ ಸೃಷ್ಟಿಯೆಂದರೆ ರಾಜ್ಯಕ್ಕೆ ಅನ್ಯಾಯವೆಸಗುವುದೇ? ಇದನ್ನೂ ಓದಿ: ಸಂಪಾಜೆ ಘಾಟ್‌ ರಸ್ತೆಯಲ್ಲಿ ನಾಳೆಯಿಂದ ಎಲ್ಲ ವಾಹನಗಳ ಸಂಚಾರಕ್ಕೆ ಅನುಮತಿ: ಸಿಸಿ ಪಾಟೀಲ್‌

    ಪಿಎಂ ಆವಾಸ್ ಯೋಜನೆಯಲ್ಲಿ ನೆರೆಯ ಆಂಧ್ರ, ತಮಿಳುನಾಡು, ಮಹಾರಾಷ್ಟ್ರಗಳಿಗೆ ಅನುದಾನ ಹೆಚ್ಚಳವಾಗಿದೆ. ಆದರೆ ಕರ್ನಾಟಕಕ್ಕೆ ಅರ್ಧದಷ್ಟು ಅನುದಾನ ಕಡಿತವಾಗಿದೆ. ಕೇಂದ್ರದಿಂದ ಕರ್ನಾಟಕಕ್ಕೆ ಯಾಕೆ ಈ ತಾರತಮ್ಯ? ರಾಜ್ಯದ ಜನರು ಬಿಜೆಪಿಗೆ ವೋಟ್ ಹಾಕಿದ ತಪ್ಪಿಗೆ ಈ ಶಿಕ್ಷೆಯೇ? ಅಥವಾ ರಾಜ್ಯದ ಜನ ಹೇಗಿದ್ದರೂ ಕೇಳುವುದಿಲ್ಲ ಎಂಬ ಉದಾಸೀನವೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ದಂತಚೋರರ ಬೆನ್ನಿಗೆ ನಿಂತ್ರಾ ಪ್ರಜ್ವಲ್‌ ರೇವಣ್ಣ? – ಸಿಎಂಗೆ ಮನೇಕಾ ಪತ್ರ

    Live Tv
    [brid partner=56869869 player=32851 video=960834 autoplay=true]