Tag: ಪಿಂಚಣಿ ಯೋಜನೆ

  • ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯೋರಿಗೆ ಶಾಕ್ – 23 ಲಕ್ಷ ಪಿಂಚಣಿದಾರರ ಮೇಲೆ ಕಂದಾಯ ಇಲಾಖೆ ಅನುಮಾನ

    ಸುಳ್ಳು ಮಾಹಿತಿ ನೀಡಿ ಪಿಂಚಣಿ ಪಡೆಯೋರಿಗೆ ಶಾಕ್ – 23 ಲಕ್ಷ ಪಿಂಚಣಿದಾರರ ಮೇಲೆ ಕಂದಾಯ ಇಲಾಖೆ ಅನುಮಾನ

    ಬೆಂಗಳೂರು: ಅರ್ಹರಿಗೆ ಗ್ಯಾರಂಟಿ ಯೋಜನೆಗಳು (Guarantee Scheme) ಸಿಗಬೇಕು ಅನರ್ಹರಿಗೆ ಅಲ್ಲ ಅನ್ನೋದನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಅನರ್ಹರಿಗೆ ಶಾಕ್ ಕೊಡಲು ಮುಂದಾಗಿದೆ. ಅದರ ಭಾಗವಾಗಿ ಸುಳ್ಳು ಹೇಳಿ ಪಿಂಚಣಿ ಪಡೆಯುತ್ತಿರುವವರ ಮೇಲೆ ಕಂದಾಯ ಇಲಾಖೆ ಕಣ್ಣಿಟ್ಟಿದೆ.

    ವಯಸ್ಸಿನ ಮಿತಿ ತಪ್ಪು ಮಾಹಿತಿ ನೀಡಿ ಸರ್ಕಾರಿ ನೌಕರರು ಆದಾಯ ತೆರಿಗೆ ಪಾವತಿ ಮಾಡ್ತಾ ಇರುವವರು ಪಿಂಚಣಿ (Pension) ಪಡೆಯುತ್ತಿದ್ದಾರೆ ಅಂತಾ 23 ಲಕ್ಷ ಪಿಂಚಣಿದಾರರ ಮೇಲೆ ಕಂದಾಯ ಇಲಾಖೆ (Revenue Department) ಕಣ್ಣಿಟ್ಟಿದೆ. ಹೀಗಾಗಿ 23 ಲಕ್ಷ ಪಿಂಚಣಿದಾರರನ್ನ ಬಗ್ಗೆ ಪರಿಶೀಲಿಸುವಂತೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ – ಗೋಕಾಕ್ ಜಲಪಾತಕ್ಕೆ ಜೀವಕಳೆ

    ಅಂಕಿ-ಅಂಶ
    ವೃದ್ಧಾಪ್ಯ ವೇತನ ಫಲಾನುಭವಿಗಳು – 21.87 ಲಕ್ಷ
    ವೃದ್ಧಾಪ್ಯ ವೇತನ ಅನರ್ಹ ಫಲಾನುಭವಿಗಳು – 9.04 ಲಕ್ಷ
    ಸಂಧ್ಯಾ ಸುರಕ್ಷಾ ಫಲಾನುಭವಿಗಳು – 31.33 ಲಕ್ಷ ಜನ
    ಸಂಧ್ಯಾ ಸುರಕ್ಷಾ ಅನರ್ಹ ಫಲಾನುಭವಿಗಳು – 14.15 ಲಕ್ಷ

    ಹೀಗೆ 23 ಲಕ್ಷ ಅನರ್ಹ ಪಿಂಚಣಿದಾರರಿಗೆ ಕಡಿವಾಣ ಹಾಕಲು ಕಂದಾಯ ಇಲಾಖೆ ಮುಂದಾಗಿದೆ. ಇನ್ನೂ 23 ಲಕ್ಷ ಪಿಂಚಣಿದಾರರು ಅನರ್ಹರು ಅಂತಾ ಹೇಳ್ತಿಲ್ಲ. ಅವರ ಬಗ್ಗೆ ಅನುಮಾನ ಇದೆ. ಆಧಾರ್ ಕಾರ್ಡ್‌ನಲ್ಲಿ 40 ವರ್ಷ ಇರುವವರು ಕೂಡ ಪಿಂಚಣಿ ಪಡೆಯುತ್ತಿದ್ದಾರೆ. ಈ ರೀತಿ ಮಾಡೋದು ಫ್ರಾಡ್. ಕೂಡಲೇ ಪರಿಶೀಲನೆ ಮಾಡ್ತೇವೆ. ಅನರ್ಹರನ್ನು ಕೂಡಲೇ ರದ್ದು ಮಾಡ್ತೇವೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಇದನ್ನೂ ಓದಿ: Chikkamagaluru | ವಸತಿ ಶಾಲೆಯ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿ ನೇಣಿಗೆ ಶರಣು

  • ಹಿರಿಯ ನಾಗರಿಕರ ಮಾಸಾಶನ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ- ಲಕ್ಷ್ಮಿ ಹೆಬ್ಬಾಳ್ಕರ್

    ಹಿರಿಯ ನಾಗರಿಕರ ಮಾಸಾಶನ ಹೆಚ್ಚಳಕ್ಕೆ ಸಿಎಂ ಜೊತೆ ಚರ್ಚೆ- ಲಕ್ಷ್ಮಿ ಹೆಬ್ಬಾಳ್ಕರ್

    – ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗೆ 10.47 ಕೋಟಿ ರೂ. ಅನುದಾನ ನಿಗದಿ

    ಬೆಂಗಳೂರು: ಹಿರಿಯ ನಾಗರಿಕರಿಗೆ ಗೌರವ ಮತ್ತು ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಸರ್ಕಾರ ಬದ್ಧವಾಗಿದ್ದು, ಹಿರಿಯರಿಗಾಗಿ ಆರೋಗ್ಯ ವಿಮೆ ಯೋಜನೆಯನ್ನು (Health Insurance Scheme) ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಹೇಳಿದ್ದಾರೆ.

    ಬೆಂಗಳೂರಿನ (Bengaluru) ರವೀಂದ್ರ ಕಲಾಕ್ಷೇತ್ರದಲ್ಲಿ ಮಂಗಳವಾರ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ನಿರ್ದೇಶನಾಲಯ ವತಿಯಿಂದ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ, ಅವರ ಅಭ್ಯುದಯಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಹಿರಿಯ ನಾಗರಿಕರ ಮಾಸಾಶನ ಹೆಚ್ಚಳ ಮಾಡುವ ಬಗ್ಗೆ ಬೇಡಿಕೆ ಇದೆ. ಈ ಬಗ್ಗೆ ಮುಖ್ಯಮಂತ್ರಿಯವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಮರಿಗೌಡನಿಂದ ಸಿದ್ದರಾಮಯ್ಯಗೆ ಕಳಂಕ – ಸಿಎಂ ಬಾಲ್ಯ ಸ್ನೇಹಿತ

    ನಮ್ಮ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ. ಗ್ಯಾರಂಟಿ ಯೋಜನೆಗಳಿಂದ ಹಿರಿಯ ನಾಗರಿಕರಿಗೆ ಬಹಳಷ್ಟು ಅನುಕೂಲವಾಗುತ್ತಿದೆ. ಶಕ್ತಿ ಯೋಜನೆಯಡಿ ನಮ್ಮ ಹಿರಿಯ ತಾಯಿಂದಿರರು ಕೂಡ ಉಚಿತವಾಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದು ಸಂತಸದ ಸಂಗತಿ ಆಗಿದೆ ಎಂದರು. ರಾಜ್ಯದಲ್ಲಿ ಸದ್ಯ 57.91 ಲಕ್ಷ ಹಿರಿಯ ನಾಗರಿಕರಿದ್ದಾರೆ. ಇಲಾಖೆಗೆ 2024 -25ನೇ ಸಾಲಿನಲ್ಲಿ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಸರ್ಕಾರ 10.47 ಕೋಟಿ ರೂ. ಅನುದಾನ ನಿಗದಿಪಡಿಸಿದೆ. ಈ ಮೂಲಕ ಅನೇಕ ಜನಸ್ನೇಹಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಒಂದು ದಿನವಾದ್ರೂ ನನ್ನನ್ನ ಜೈಲಿಗೆ ಕಳಿಸಲು ರಾಜ್ಯ ಸರ್ಕಾರದಿಂದ ಸಂಚು – ಹೆಚ್‌ಡಿಕೆ ಗಂಭೀರ ಆರೋಪ

    ರಾಜ್ಯದಲ್ಲಿ ಅಶಕ್ತ ಮತ್ತು ನಿರ್ಗತಿಕ ಹಿರಿಯ ನಾಗರಿಕರಿಗಾಗಿ ಸ್ವಯಂಸೇವಾ ಸಂಸ್ಥೆಗಳ ಮೂಲಕ ರಾಜ್ಯದೆಲ್ಲೆಡೆ 63 ವೃದ್ಧಾಶ್ರಮಗಳನ್ನು ತೆರೆದಿದೆ. ಸದ್ಯ 1,575 ಮಂದಿ ಅಶಕ್ತ ಹಿರಿಯ ನಾಗರಿಕರು ಆಶ್ರಯ ಪಡೆದಿದ್ದಾರೆ. ಕೇಂದ್ರ ಸರ್ಕಾರದಿಂದ ನಡೆಸುತ್ತಿರುವ ವೃದ್ಧಾಶ್ರಯಗಳಲ್ಲೂ ಹಿರಿಯ ನಾಗರಿಕರಿದ್ದಾರೆ. ಇನ್ನೂ 19 ವೃದ್ಧಾಶ್ರಮಗಳನ್ನು ತೆರೆಯುವ ಪ್ರಕ್ರಿಯೆ ಜಾರಿಯಲ್ಲಿದೆ. ಅವರಿಗಾಗಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಹಾಯವಾಣಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಸಹಾಯವಾಣಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಾಯವಾಣಿ ಸಿಬ್ಬಂದಿಗೆ ಶೇ.50ರಷ್ಟು ಗೌರವ ಧನ ಹೆಚ್ಚಿಸಲಾಗಿದೆ ಎಂದರು. ಇದನ್ನೂ ಓದಿ: ಮುಡಾ ಸೈಟು ವಿವಾದ | ಸಿಎಂ ಪತ್ನಿಯ 14 ಮುಡಾ ನಿವೇಶನಗಳ ಖಾತೆ ರದ್ದು

    ಹಿರಿಯ ನಾಗರಿಕರ ಜೀವನಾನುಭವ, ಅವರ ಸಹನೆ, ಸಾಮರ್ಥ್ಯ ನಮ್ಮೆಲ್ಲರಿಗೂ ಪ್ರೇರಣದಾಯಕ. ಅವರು ಅಶಕ್ತರಲ್ಲ ಸಶಕ್ತರು. ಹಿರಿಯರನ್ನು ಗೌರವಿಸುವುದು, ಪೋಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಹಿರಿಯರ ಬಗ್ಗೆ ಸಾಮಾಜಿಕ ಕಳಕಳಿ ಅತ್ಯಾವಶ್ಯಕ. ಯುವ ಜನಾಂಗಕ್ಕೆ ಹಿರಿಯರ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಅತ್ಯಗತ್ಯ ಎಂದು ನುಡಿದರು. ಇದನ್ನೂ ಓದಿ: ನಸ್ರಲ್ಲಾ ಹತ್ಯೆ ಬಳಿಕ ಹಿಜ್ಬುಲ್ಲಾ ಪ್ರತೀಕಾರದ ದಾಳಿ – ಮೊಸಾದ್‌ ಹೆಡ್‌ಕ್ವಾರ್ಟಸ್‌ ಮೇಲೆ ಅಟ್ಯಾಕ್‌

    ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಇಲಾಖಾ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಾದ ಟಿ. ರಾಘವೇಂದ್ರ, ವಿಕಲಚೇತನರ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತರಾದ ದಾಸ್ ಸೂರ್ಯವಂಶಿ, ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಅಕ್ಟೋಬರ್ 3ಕ್ಕೆ PSI ಪರೀಕ್ಷೆ; ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ, ENT ವೈದ್ಯರ ನಿಯೋಜನೆ: – ಕೆಇಎ

  • ಗುಜರಾತ್‍ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಳೆಯ ಪಿಂಚಣಿ ಯೋಜನೆ ಜಾರಿಗೆ: ರಾಹುಲ್ ಗಾಂಧಿ

    ಗುಜರಾತ್‍ನಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ, ಹಳೆಯ ಪಿಂಚಣಿ ಯೋಜನೆ ಜಾರಿಗೆ: ರಾಹುಲ್ ಗಾಂಧಿ

    ಹೈದರಾಬಾದ್: ಗುಜರಾತಿನಲ್ಲಿ (Gujrat) ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದರೆ ಗುತ್ತಿಗೆ ನೌಕರರಿಗೆ ಸ್ಥಿರ ಉದ್ಯೋಗಗಳನ್ನು ನೀಡಲಿದೆ, ಜೊತೆಗೆ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮತ್ತೆ ಜಾರಿಗೆ ತರಲಿದೆ ಮತ್ತು ಸಕಾಲಕ್ಕೆ ಬಡ್ತಿ ಸಿಗುವಂತೆ ನೋಡಿಕೊಳ್ಳುತ್ತದೆ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ.

    ಈ ಕುರಿತಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಅವರು, ಗುತ್ತಿಗೆ ಕಾರ್ಮಿಕರಿಗೆ ಸ್ಥಿರ ಉದ್ಯೋಗಗಳು, ಹಳೆಯ ಪಿಂಚಣಿ ಯೋಜನೆ (Pension Scheme) ಮತ್ತು ಸಕಾಲಿಕ ಬಡ್ತಿಗಳನ್ನು ಮರಳಿ ತರಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೇಕಿಲ್ಲ ಗೌರವ – ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

    ಈ ಯೋಜನೆಯನ್ನು ಈಗಾಗಲೇ ರಾಜಸ್ಥಾನದಲ್ಲಿ ಜಾರಿಗೊಳಿಸಲಾಗಿದೆ. ಈಗ ಗುಜರಾತ್‍ನಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದರೆ, ತಕ್ಷಣ ನೌಕರರು ತಮ್ಮ ವೇತನವನ್ನು ಪಡೆಯಲಿದ್ದಾರೆ ಎಂದು ‘ಕಾಂಗ್ರೆಸ್ ದೇಗಿ ಪಕ್ಕಿ ನೌಕ್ರಿ’ ಹ್ಯಾಶ್‍ಟ್ಯಾಗ್ ಹಾಕಿದ್ದಾರೆ. ಇದನ್ನೂ ಓದಿ: ಯಮುನಾ ಜಲ ಶುದ್ಧವಾಗಿದೆ ಎಂದು ನಿರೂಪಿಸಲು ಅದೇ ನೀರಿನಲ್ಲಿ ಸ್ನಾನ ಮಾಡಿದ ಜಲಮಂಡಳಿ ನಿರ್ದೇಶಕ

    ಇದನ್ನು ರಾಜಸ್ಥಾನದಲ್ಲಿ ಜಾರಿಗೊಳಿಸಲಾಗಿದೆ, ಈಗ ಗುಜರಾತಿನಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ತಕ್ಷಣ ನೌಕರರು ತಮ್ಮ ವೇತನವನ್ನು ಪಡೆಯುತ್ತಾರೆ ಎಂದು ರಾಹುಲ್ ಗಾಂಧಿ ಅವರು ‘ಕಾಂಗ್ರೆಸ್ ದೇಗಿ ಪಕ್ಕಿ ನೌಕ್ರಿ’ ಹ್ಯಾಶ್‍ಟ್ಯಾಗ್ ಬಳಸಿ ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]