Tag: ಪಿಂಕ್ ಬಾಲ್ ಟೆಸ್ಟ್

  • ಡೇ – ನೈಟ್ ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಸಜ್ಜು – 2 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಾದಾಟ

    ಡೇ – ನೈಟ್ ಪಿಂಕ್ ಬಾಲ್ ಟೆಸ್ಟ್‌ಗೆ ಬೆಂಗಳೂರು ಸಜ್ಜು – 2 ವರ್ಷಗಳ ಬಳಿಕ ಚಿನ್ನಸ್ವಾಮಿಯಲ್ಲಿ ಟೀಂ ಇಂಡಿಯಾ ಕಾದಾಟ

    ಬೆಂಗಳೂರು: ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಸಜ್ಜಾಗಿದೆ.

    ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದಿನಿಂದ ಭಾರತ ಮತ್ತು ಶ್ರೀಲಂಕಾ ನಡುವೆ ಡೇ-ನೈಟ್ ಪಿಂಕ್ ಬಾಲ್ ಟೆಸ್ಟ್ ನಡೆಯುತ್ತಿದೆ. ಕೊರೊನಾ ಕಾಟದಿಂದ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅಂತರಾಷ್ಟ್ರೀಯ ಪಂದ್ಯಗಳು ನಡೆದಿರಲಿಲ್ಲ. ಇದೀಗ 2 ವರ್ಷಗಳ ಬಳಿಕ ಟೀಂ ಇಂಡಿಯಾ ಚಿನ್ನಸ್ವಾಮಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಅಲ್ಲದೆ ಟೆಸ್ಟ್ ಪಂದ್ಯ ವೀಕ್ಷಣೆಗಾಗಿ ಚಿನ್ನಸ್ವಾಮಿ ಸ್ಟೇಡಿಯಂಗೆ ಪ್ರೇಕ್ಷಕರಿಗೂ ಪ್ರವೇಶ ನೀಡಲಾಗಿದೆ. ಇದರಿಂದ ಅಭಿಮಾನಿಗಳು ಸ್ಟೇಡಿಯಂನಲ್ಲಿ ಕೂತು ಕೊರೊನಾ ಅಡೆತಡೆಗಳ ಬಳಿಕ ಪಂದ್ಯ ವೀಕ್ಷಿಸುತ್ತಿದ್ದಾರೆ. ಇದನ್ನೂ ಓದಿ: ಐಸಿಸಿ ಮಹಿಳಾ ವಿಶ್ವಕಪ್ 2022: ಬೃಹತ್ ದಾಖಲೆ ಬರೆದ ಮಿಥಾಲಿ ರಾಜ್

    ಕೊಹ್ಲಿ ವಿಶೇಷ ಆಕರ್ಷಣೆ:
    ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ ಶತಕ ಸಿಡಿಸಿ ಬರೋಬ್ಬರಿ 28 ತಿಂಗಳುಗಳು ಕಳೆದಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಐಪಿಎಲ್ ಆಡುವ ವಿರಾಟ್ ಕೊಹ್ಲಿಗೆ ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ತವರು ಅಂಗಣವಾಗಿದೆ. ಹಾಗಾಗಿ ಕೊಹ್ಲಿಯ ಶತಕದ ಬರ ನೀಗುವ ಸಾಧ್ಯತೆ ಇದೆ. ಮತ್ತೊಂದೆಡೆ ಕೊಹ್ಲಿ ಕೊನೆಯ ಶತಕ ಸಿಡಿಸಿದ್ದು ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿಯೇ ಆಗಿದ್ದು, ಹಾಗಾಗಿ ಬೆಂಗಳೂರಿನಲ್ಲಿ ನಡೆಯುವ ಟೆಸ್ಟ್‌ನಲ್ಲಿ ಕೊಹ್ಲಿ ಬ್ಯಾಟ್‍ನಿಂದ ಶತಕ ಸಿಡಿಯಬಹುದೆಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಲಸಿತ್‌ ಮಾಲಿಂಗ ನೇಮಕ

    ಟೀಂ ಇಂಡಿಯಾ, ಶ್ರೀಲಂಕಾ ವಿರುದ್ಧ ಈಗಾಗಲೇ ಮೊದಲ ಪಂದ್ಯವನ್ನು ಗೆದ್ದು 1-0 ಮುನ್ನಡೆ ಪಡೆದುಕೊಂಡಿದೆ. ಹಾಗಾಗಿ ಎರಡನೇ ಪಂದ್ಯದಲ್ಲೂ ಗೆದ್ದು ಸರಣಿ ಕ್ಲೀನ್ ಸ್ವೀಪ್ ಸಾಧಿಸುವ ನಿರೀಕ್ಷೆಯಲ್ಲಿದೆ. ಎರಡನೇ ಪಂದ್ಯಕ್ಕೆ ಸಿದ್ಧವಾಗಿರುವ ಶ್ರೀಲಂಕಾ ತಂಡಕ್ಕೆ ಗಾಯದ ಸಮಸ್ಯೆ ಎದುರಾಗಿದೆ. ಲಂಕಾ ವೇಗಿ ದುಷ್ಮಂತ್ ಚಮೀರ ಗಯಾಳುವಾಗಿದ್ದಾರೆ ಎಂದು ವರದಿಯಾಗಿದೆ.

    ಟೀಂ ಇಂಡಿಯಾಗೆ ಕೊನೆಯ ತವರಿನ ಸರಣಿ:
    ಟೀಂ ಇಂಡಿಯಾಗೆ ಇಂದಿನ ಚಿನ್ನಸ್ವಾಮಿ ಪಂದ್ಯ 2022ರ ಕೊನೆಯ ತವರಿನ ಸರಣಿ ಐಪಿಎಲ್ ಬಳಿಕ ಭಾರತ ತಂಡ ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ಕೊನೆಯ ತವರಿನ ಪಂದ್ಯ ಗೆದ್ದು ವಿದೇಶಿ ಪ್ರವಾಸಕ್ಕೆ ಭಾರತ ಅಣಿಯಾಗಬೇಕಾಗಿದೆ. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್‌ ಎಸೆಯುವ ಮುನ್ನ ನಾನ್‍ಸ್ಟ್ರೈಕ್‍ ಬಿಟ್ಟರೆ ಉಳಿಗಾಲವಿಲ್ಲ

    ಪಿಂಕ್ ಬಾಲ್ ರೆಕಾರ್ಡ್:
    ಇದುವರೆಗೂ ಮೂರು ಪಿಂಕ್ ಬಾಲ್ ಟೆಸ್ಟ್ ಆಡಿರುವ ಟೀಂ ಇಂಡಿಯಾ. ಎರಡು ಪಂದ್ಯಗಳಲ್ಲಿ ಗೆಲುವು ಮತ್ತು ಒಂದು ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧ ಡೇ-ನೈಟ್ ಟೆಸ್ಟ್ ಪಂದ್ಯ ಜಯಿಸಿದ್ರೆ, ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಇದೀಗ ಲಂಕಾ ವಿರುದ್ಧ ಗೆಲ್ಲುವ ವಿಶ್ವಾಸದಲ್ಲಿದೆ.

  • ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯರು

    ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಇತಿಹಾಸ ಸೃಷ್ಟಿಸಿದ ಭಾರತೀಯರು

    ಸಿಡ್ನಿ: ಪುರುಷರ ಪಿಂಕ್ ಬಾಲ್ ಟೆಸ್ಟ್ ಕ್ರಿಕೆಟ್‍ನಲ್ಲಿ ಶತಕ ಸಿಡಿಸಿದ ವಿರಾಟ್ ಕೊಹ್ಲಿ ಮೊದಲ ಭಾರತೀಯ ಬ್ಯಾಟ್ಸ್‌ಮ್ಯಾನ್‌ ಆದರೆ, ಇದೀಗ ಮಹಿಳಾ ಕ್ರಿಕೆಟ್‍ನಲ್ಲಿ ಸ್ಮೃತಿ ಮಂಧಾನ ಪಿಂಕ್‍ಬಾಲ್ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದ ಭಾರತದ ಮಹಿಳಾ ಬ್ಯಾಟರ್ ಎಂಬ ಇತಿಹಾಸ ಸೃಷ್ಟಿಸಿದ್ದಾರೆ.

    ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ತನ್ನ ಮೊದಲ ಪಿಂಕ್‍ಬಾಲ್ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ ತನ್ನ ಮೊದಲ ಟೆಸ್ಟ್ ಶತಕ 127ರನ್(216 ಎಸೆತ, 22 ಬೌಂಡರಿ, 1 ಸಿಕ್ಸ್) ಬಾರಿಸಿ ಆಸ್ಟ್ರೇಲಿಯಾ ನೆಲದಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ್ತಿಯಾಗಿ ಮಿಂಚಿದ್ದಾರೆ. ಈ ಮೂಲಕ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ ಭಾರತದ ಎರಡನೇ ಮಹಿಳಾ ಅಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಈ ಮೊದಲು 1984ರಲ್ಲಿ ಸಂಧ್ಯಾ ಅಗರ್ವಾಲ್ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿದ್ದರು, ಬಳಿಕ ಇದೀಗ ಮಂಧಾನ ಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: 14ನೇ ಐಪಿಎಲ್‍ಗೆ ಗುಡ್‍ಬೈ ಹೇಳಿದ ಗೇಲ್

    ಪುರಷರ ವಿಭಾಗದ ಕ್ರಿಕೆಟ್‍ನಲ್ಲಿ 18 ನಂಬರ್ ಜೆರ್ಸಿಧಾರಿ ವಿರಾಟ್ ಕೊಹ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಮೊದಲ ಶತಕ ಸಿಡಿಸಿದ್ದರೆ, ಕಾಕತಾಳಿಯವೆಂಬಂತೆ ಮಹಿಳಾ ಕ್ರಿಕೆಟ್‍ನಲ್ಲಿ 18 ನಂಬರ್ ಜೆರ್ಸಿ ತೊಡುವ ಸ್ಮೃತಿ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ನಲ್ಲಿ ಮೊದಲ ಶತಕ ಸಿಡಿಸಿ ಮೆರೆದಿದ್ದಾರೆ. ಇದನ್ನೂ ಓದಿ: ಆರ್​ಸಿಬಿಗೆ ಹರ್ಷ ತಂದ ಅನ್​ಕ್ಯಾಪ್ಡ್​ ಪ್ಲೇಯರ್

    ಭಾರತದ ಪುರುಷರ ತಂಡದಲ್ಲಿ ವಿರಾಟ್ ಕೊಹ್ಲಿ ರನ್ ಮೆಷಿನ್ ಆಗಿ ಗುರುತಿಸಿಕೊಂಡರೆ, ಮಹಿಳಾ ಕ್ರಿಕೆಟ್‍ನಲ್ಲಿ ಸ್ಮೃತಿ ಮಂಧಾನ ರನ್ ಮೆಷಿನ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರೂ ಕೂಡ ಸ್ಟೈಲಿಷ್ಟ್ ಬ್ಯಾಟರ್‍ ಗಳಾಗಿದ್ದು, ಭಾರತಕ್ಕಾಗಿ ಇನ್ನಷ್ಟು ರನ್ ಸಿಡಿಸಿ ದಾಖಲೆಗಳ ಒಡೆಯರಾಗಲಿ ಎಂಬುದು ಅಭಿಮಾನಿಗಳ ಆಶಯ.

  • ಭಾರತದ ಪರ ದಾಖಲೆ ಬರೆದ ಅಶ್ವಿನ್‌

    ಭಾರತದ ಪರ ದಾಖಲೆ ಬರೆದ ಅಶ್ವಿನ್‌

    ಅಹಮದಾಬಾದ್‌: ಟೀಂ ಇಂಡಿಯಾದ ಸ್ಪಿನ್ನರ್‌ ಆರ್‌ ಅಶ್ವಿನ್‌ ಭಾರತದ ಪರ ದಾಖಲೆ ಬರೆದಿದ್ದಾರೆ.

    ಅತಿ ಕಡಿಮೆ ಪಂದ್ಯದಲ್ಲಿ 400 ವಿಕೆಟ್‌ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಅಶ್ವಿನ್‌ ಪಾತ್ರವಾಗಿದ್ದಾರೆ. 77ನೇ ಪಂದ್ಯವನ್ನು ಆಡುತ್ತಿರುವ ಅಶ್ವಿನ್‌ ಇಂಗ್ಲೆಂಡಿನ ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್‌ ಸ್ಟೋಕ್ಸ್‌ ವಿಕೆಟ್‌ ಪಡೆಯುವ ಈ ಸಾಧನೆ ಮಾಡಿದ್ದಾರೆ.

    ವಿಶ್ವದಲ್ಲಿ ಈ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಅಶ್ವಿನ್‌ ಎರಡನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್‌(72) ಮೊದಲ ಸ್ಥಾನದಲ್ಲಿದ್ದಾರೆ.

    400 ವಿಕೆಟ್‌ ಗಡಿ ದಾಟಿದ ಭಾರತದ 4ನೇ ಬೌಲರ್‌ ಅಶ್ವಿನ್‌ ಆಗಿದ್ದಾರೆ. ಲೆಗ್‌ ಸ್ಪಿನ್ನರ್‌ ಅನಿಲ್‌ ಕುಂಬ್ಳೆ 619, ಕಪಿಲ್‌ ದೆವ್‌ 434, ಹರ್ಭಜನ್‌ ಸಿಂಗ್‌ 417 ವಿಕೆಟ್‌ ಪಡೆದಿದ್ದಾರೆ.

    ಮೊದಲ ಇನ್ನಿಂಗ್ಸ್‌ನಲ್ಲಿ 3 ವಿಕೆಟ್‌, ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್‌ 4 ವಿಕೆಟ್‌ ಪಡೆದಿದ್ದಾರೆ. ಈ ಪಂದ್ಯಕ್ಕೂ ಮೊದಲು 76 ಪಂದ್ಯಗಳ 142 ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ ಮಾಡಿ 394 ವಿಕೆಟ್‌ ಪಡೆದಿದ್ದರು.

  • ಪಿಂಕ್ ಬಾಲ್ ಟೆಸ್ಟ್: 4, 5ನೇ ದಿನದ ಟಿಕೆಟ್ ಹಣ ವಾಪಸ್ ನೀಡಲು ಮುಂದಾದ ಸಿಎಬಿ

    ಪಿಂಕ್ ಬಾಲ್ ಟೆಸ್ಟ್: 4, 5ನೇ ದಿನದ ಟಿಕೆಟ್ ಹಣ ವಾಪಸ್ ನೀಡಲು ಮುಂದಾದ ಸಿಎಬಿ

    ಕೋಲ್ಕತಾ: ಮೂರೇ ದಿನದೊಳಗೆ ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಮುಗಿದ ನಂತರ ಉಳಿದ 4 ಮತ್ತು 5 ದಿನದ ಅಭಿಮಾನಿಗಳು ಖರೀದಿಸಿದ ಟಿಕೆಟ್ ಹಣವನ್ನು ಹಿಂದಿರುಗಿಸಲು ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ನಿರ್ಧರಿಸಿದೆ.

    ಭಾನುವಾರ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಮೊದಲ ಐತಿಹಾಸಿಕ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದು ಇತಿಹಾಸ ನಿರ್ಮಿಸಿದೆ. ಭಾರತದ ಮೊದಲ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಒಂದು ಇನ್ನಿಂಗ್ಸ್ ಮತ್ತು 46 ರನ್ ಗಳಿಂದ ಗೆಲ್ಲುವ ಮೂಲಕ ಬಾಂಗ್ಲಾದೇಶದ ವಿರುದ್ಧದ 2 ಪಂದ್ಯಗಳ ಸರಣಿಯನ್ನು ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿದೆ.

    ಭಾರತದ ಬೌಲರ್ ಗಳ ಮಾರಕ ದಾಳಿ ಮತ್ತು ನಾಯಕ ವಿರಾಟ್ ಕೊಹ್ಲಿ ಅವರ ಅಬ್ಬರದ ಶತಕಕ್ಕೆ ಹೆದರಿದ ಬಾಂಗ್ಲಾ ತನ್ನ ಮೊದಲ ಪಿಂಕ್ ಬಾಲ್ ಪಂದ್ಯದಲ್ಲಿ ಕೇವಲ ಮೂರೇ ದಿನಕ್ಕೆ ಭಾರತಕ್ಕೆ ಶರಣಾಗಿತು. ಇದರಿಂದ ಭಾರತದ ಮೊದಲ ಪಿಂಕ್ ಬಾಲ್ ಪಂದ್ಯವನ್ನು ನೋಡಲು ಐದು ದಿನಗಳವರೆಗೂ ಟಿಕೆಟ್ ಖರೀದಿಸಿದ್ದ ಅಭಿಮಾನಿಗಳು ನಿರಾಶೆಯಾದಂತೆ ಆಗಿತ್ತು. ಆದರೆ ಈ ಉಳಿದ ಎರಡು ದಿನಗಳ ಟಿಕೆಟ್ ಹಣವನ್ನು ಸಿಎಬಿ ವಾಪಸ್ ಮಾಡುತ್ತೇವೆ ಎಂದು ಹೇಳಿದೆ.

    ಮಳೆಯಿಂದ ಪಂದ್ಯ ರದ್ದಾದರೆ. ಬೇರೆ ಯಾವುದೋ ಕಾರಣಕ್ಕೆ ಪಂದ್ಯವನ್ನು ಆಡಿಸದೆ ಇದ್ದಾಗ ಮಾತ್ರ ವಿಶ್ವಾದಾದ್ಯಂತ ಅಭಿಮಾನಿಗಳು ಖರೀದಿಸಿದ್ದ ಟಿಕೆಟ್ ಹಣವನ್ನು ವಾಪಸ್ ನೀಡುವ ಅಭ್ಯಾಸವಿದೆ. ಆದರೆ ಇದೇ ಮೊದಲ ಬಾರಿಗೆ ಟೆಸ್ಟ್ ಪಂದ್ಯವು ಎರಡು ದಿನ ಬೇಗ ಮುಗಿದಿದೆ ಎಂದು ಕ್ರಿಕೆಟ್ ಅಸೋಸಿಯೇಷನ್ ಆಫ್ ಬಂಗಾಳ ಅಭಿಮಾನಿಗಳು ಖರೀದಿಸಿದ್ದ 4 ಮತ್ತು 5 ನೇ ದಿನದ ಟಿಕೆಟ್ ಹಣವನ್ನು ವಾಪಸ್ ನೀಡುತ್ತೇವೆ ಎಂದು ಹೇಳಿರುವುದು ವಿಶೇಷ.

    ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಸಿಎಬಿಯ ಅಡಳಿತ ಮಂಡಳಿ, ಈಗಾಗಲೇ ನಾಲ್ಕು ಮತ್ತು ಐದನೇ ದಿನದ ಟಿಕೆಟ್ ಹಣವನ್ನು ಮರುಪಾವತಿ ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಎರಡು ದಿನದ ಟಿಕೆಟ್ ಅನ್ನು ಆನಲೈನ್ ಮೂಲಕ ಬುಕ್ ಮಾಡಿದವರಿಗೆ ನಾವು ಸಂದೇಶ ಕಳುಹಿಸುತ್ತೇವೆ ಎಂದು ಹೇಳಿದೆ. ಇದರ ಜೊತೆ ಐತಿಹಾಸಿಕ ಪಂದ್ಯದಲ್ಲಿ ಭಾಗವಹಿಸಿದ ಕ್ರೀಡಾಭಿಮಾನಿಗಳನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಶ್ಲಾಘಿಸಿದ್ದಾರೆ.

    ವಿಶೇಷವೆಂದರೆ, ಇದು ಭಾರತದಲ್ಲಿ ಆಡಿದ ಅತ್ಯಂತ ಚಿಕ್ಕದಾದ ಟೆಸ್ಟ್ (ಎಸೆದ ಚೆಂಡುಗಳ ಸಂಖ್ಯೆಗೆ ಅನುಗುಣವಾಗಿ). ಯಾಕೆಂದರೆ ಈ ಪಂದ್ಯ ಕೇವಲ 968 ಎಸೆತಗಳಲ್ಲಿ ಪೂರ್ಣಗೊಂಡಿದೆ. ಇದನ್ನು ಬಿಟ್ಟರೆ ಅಫ್ಘಾನಿಸ್ತಾನದ ಚೊಚ್ಚಲ ಟೆಸ್ಟ್ ಅನ್ನು ಭಾರತ 2018 ರಲ್ಲಿ 1028 ಎಸೆತಗಳಲ್ಲಿ ಪೂರ್ಣಗೊಳಿಸಿತ್ತು. ಭಾರತದ ಬಾಂಗ್ಲಾ ವಿರುದ್ಧದ ಪಂದ್ಯಲ್ಲಿ ಒಟ್ಟು 161.2 ಓವರ್ ಆಟವಾಡಿದರೆ. ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ 171.2 ಓವರ್ ಆಟವಾಡಿತ್ತು.

  • ಇಶಾಂತ್ ಕಮಾಲ್ ಭಾರತದ ಸರಣಿ ಗೆಲುವಿಗೆ ಬೇಕಿದೆ 4 ವಿಕೆಟ್

    ಇಶಾಂತ್ ಕಮಾಲ್ ಭಾರತದ ಸರಣಿ ಗೆಲುವಿಗೆ ಬೇಕಿದೆ 4 ವಿಕೆಟ್

    – ಶತಕ ಸಿಡಿಸಿ ದಾಖಲೆ ಬರೆದ ವಿರಾಟ್
    – ಉತ್ತಮ ಸ್ಥಿತಿಯಲ್ಲಿ‌ ಭಾರತ

    ಕೋಲ್ಕತ್ತಾ: ಬಾಂಗ್ಲಾದೇಶದ ವಿರುದ್ಧದ ಪಿಂಕ್ ಬಾಲ್ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲೂ ಭಾರತದ ವೇಗಿ ಇಶಾಂತ್ ಶರ್ಮಾ ಉತ್ತಮ ಬೌಲಿಂಗ್ ಮುಂದುವರಿಸಿದ್ದು, ಭಾರತ ಉತ್ತಮ ಸ್ಥಿತಿಯಲ್ಲಿದೆ.

    ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಡೇ-ನೈಟ್ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಬಾಂಗ್ಲಾದೇಶವು ಎರಡನೇ ದಿನದಾಟದ ಅಂತ್ಯಕ್ಕೆ 32.3 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಗಳಿಸಿ, ನಾಳೆಗೆ ಬ್ಯಾಟಿಂಗ್ ಮುಂದುವರಿಸಿದೆ.

    ಮೊದಲ ದಿನದಾಟದ ಅಂತ್ಯಕ್ಕೆ ಭಾರತ 46 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ 68 ರನ್‍ಗಳ ಮುನ್ನಡೆ ಸಾಧಿಸಿತ್ತು. 59 ರನ್ ಸಿಡಿಸಿದ್ದ ಕೊಹ್ಲಿ ಹಾಗೂ 23 ರನ್ ಗಳಿಸಿದ್ದ ಅಜಿಂಕ್ಯಾ ರಹಾನೆ ಇಂದು ಬ್ಯಾಟಿಂಗ್ ಮುಂದುರಿಸಿ, 99 ರನ್‍ಗಳ ಜೊತೆಯಾಟ ನೀಡಿದರು. ಆದರೆ  ಅಜಿಂಕ್ಯಾ ರಹಾನೆ 69 ಎಸೆತಗಳಲ್ಲಿ 7 ಬೌಂಡರಿ ಸೇರಿ 51 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಸ್ಫೋಟಕ ಬ್ಯಾಟಿಂಗ್ ಮುಂದುವರಿಸುವ 159 ಎಸೆತಗಳಲ್ಲಿ ಶತಕ ಸಿಡಿಸಿದರು.

    ವಿರಾಟ್ ದಾಖಲೆ:
    ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ ವಿಶ್ವದ 16ನೇ ಬ್ಯಾಟ್ಸ್ ಮನ್ ಮತ್ತು ನಾಯಕನಾಗಿ 5ನೇ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಪಾಕಿಸ್ತಾನದ ಅಜರ್ ಅಲಿ ಡೇ-ನೈಟ್ ಟೆಸ್ಟ್ ಇತಿಹಾಸದಲ್ಲಿ ಮೊದಲ ಶತಕವನ್ನು ಗಳಿಸಿದ್ದರು. ಅವರು ಅಕ್ಟೋಬರ್ 2016ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 302 ರನ್ ಗಳಿಸಿದ್ದರು. ಪಾಕಿಸ್ತಾನದ ಅಸಾದ್ ಶಫೀಕ್ ಮಾತ್ರ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಎರಡು ಶತಕಗಳನ್ನು ಗಳಿಸಿದ್ದಾರೆ.

    ವಿರಾಟ್ ಕೊಹ್ಲಿ 194 ಎಸೆತಗಳಲ್ಲಿ 18 ಬೌಂಡರಿ ಸೇರಿ 136 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಮೈದಾನಕ್ಕಿದ ರವೀಂದ್ರ ಜಡೇಜಾ 12 ರನ್, ವೃದ್ಧಿಮಾನ್ ಸಹಾ ಔಟಾಗದೆ 17 ರನ್ ಗಳಿಸಿದರು ಶಕ್ತವಾದರು. 9 ವಿಕೆಟ್ ನಷ್ಟಕ್ಕೆ 347 ರನ್ ಗಳಿಸಿದಾಗ
    ಕೊಹ್ಲಿ ಡಿಕ್ಲೇರ್ ಘೋಷಿಸಿದರು.

    ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾ ತಂಡಕ್ಕೆ ಭಾರತದ ವೇಗದ ಬೌಲರ್ ಕಾಡಿದರು. ಮೊದಲ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಪಡೆದಿದ್ದ ಇಶಾಂತ್ ಶರ್ಮಾ ಎರಡನೇ ಇನ್ನಿಂಗ್ಸ್ ನಲ್ಲೂ ಅಮೋಘ ಬೌಲಿಂಗ್ ಪ್ರದರ್ಶನ ಮುಂದುವರಿಸಿದರು. ಇದಕ್ಕೆ ಉಮೇಶ್ ಯಾದವ್ ಕೂಡ ಸಾಥ್ ನೀಡಿದರು.

    ಎರಡನೇ ಇನ್ನಿಂಗ್ಸ್ ನ ಆರಂಭದಲ್ಲೇ ಬಾಂಗ್ಲಾ 7ನೇ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 13 ರನ್ ಗಳಿಸಿತ್ತು. ಬಳಿಕ ಮೊಹಮ್ಮದುಲ್ಲಾ ಹಾಗೂ ಮುಷ್ಫಿಕುರ್ ರಹೀಂ 5ನೇ ವಿಕೆಟ್ ನಷ್ಟಕ್ಕೆ 69 ರನ್‍ಗಳ ಜೊತೆಯಾಟ ನೀಡಿದರು. ಇನ್ನಿಂಗ್ಸ್ ನ 26ನೇ ಓವರ್ ನಲ್ಲಿ ಮೊಹಮ್ಮದುಲ್ಲಾ 41 ಎಸೆತಗಳಲ್ಲಿ 39 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಬಾಂಗ್ಲಾದೇಶವು ಎರಡನೇ ದಿನದಾಟದ ಅಂತ್ಯಕ್ಕೆ 6 ವಿಕೆಟ್ ನಷ್ಟದಿಂದ 152 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಮುಂದುವರಿಸಿದೆ.

    ಎರಡನೇ ಇನ್ನಿಂಗ್ಸ್ ನಲ್ಲಿ ಇಶಾಂತ್ ಶರ್ಮಾ 4 ವಿಕೆಟ್ ಪಡೆದರೆ, ಉಮೇಶ್ ಯಾದವ್ 2 ವಿಕೆಟ್ ಕಿತ್ತಿದ್ದಾರೆ. ಮೊದಲ ಇನ್ನಿಂಗ್ಸ್ ನಲ್ಲಿ ಇಶಾಂತ್ ಶರ್ಮಾ 5 ವಿಕೆಟ್, ಉಮೇಶ್ ಯಾದವ್ 3 ಹಾಗೂ ಮೊಹಮ್ಮದ್ ಶಮಿ 2 ವಿಕೆಟ್ ಪಡೆದಿದ್ದರು.

  • ಮದುಮಗಳಂತೆ ಸಿಂಗಾರಗೊಂಡ ಈಡನ್ ಗಾರ್ಡನ್ಸ್ – ವಿಶೇಷ ಟಾಕ್ ಶೋ, ಕ್ರೀಡಾ ತಾರೆಯರಿಗೆ ಸನ್ಮಾನ

    ಮದುಮಗಳಂತೆ ಸಿಂಗಾರಗೊಂಡ ಈಡನ್ ಗಾರ್ಡನ್ಸ್ – ವಿಶೇಷ ಟಾಕ್ ಶೋ, ಕ್ರೀಡಾ ತಾರೆಯರಿಗೆ ಸನ್ಮಾನ

    ಕೋಲ್ಕತ್ತಾ: ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಈ ಐತಿಹಾಸಿಕ ಪಂದ್ಯಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನ ಮದುಮಗಳಂತೆ ಸಿಂಗಾರಗೊಂಡಿದೆ.

    ಸೌರವ್ ಗಂಗೂಲಿ ಅವರು ಬಿಸಿಸಿಐನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲು ಅನುಮತಿ ನೀಡಿದ್ದಾರೆ. ನವೆಂಬರ್ 22 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳೆರಡು ಮೊದಲ ಬಾರಿಗೆ ಪಿಂಕ್ ಬಾಲ್‍ನಲ್ಲಿ ಟೆಸ್ಟ್ ಪಂದ್ಯವನ್ನು ಆಡಲು ಸಿದ್ಧವಾಗಿವೆ.

    ಈ ಐತಿಹಾಸಿಕ ಪಂದ್ಯಕ್ಕೆ ಮೈದಾನವನ್ನು ಅಸೋಸಿಯೇಷನ್ ಆಫ್ ಬಂಗಾಳ (ಸಿಎಬಿ) ಸಂಪೂರ್ಣ ಸಿದ್ಧಗೊಳಿಸಿದ್ದು, ಬಣ್ಣ ಬಣ್ಣದ ಲೈಟುಗಳಿಂದ ಅಲಂಕಾರ ಮಾಡಲಾಗಿದೆ. ಪಿಂಕ್ ಬಾಲ್ ಪಂದ್ಯಕ್ಕೆ ಮದುಮಗಳಂತೆ ಸಿಂಗಾರಗೊಂಡಿರುವ ಈಡನ್ ಗಾರ್ಡನ್ಸ್ ಮೈದಾನದ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಬಿಸಿಸಿಐ ಪಿಂಕ್ ಬಾಲ್ ಪಂದ್ಯಕ್ಕೆ ನಾವು ಸಿದ್ಧ ಎಂದು ಬರೆದುಕೊಂಡಿದೆ.

    ಕೋಲ್ಕತಾದಲ್ಲಿ ನಡೆಯುವ ಈ ಪಂದ್ಯಕ್ಕೆ ಕ್ರಿಕೆಟ್ ಅಭಿಮಾನಿಗಳು ಸಿದ್ಧವಾಗಿದ್ದು, ಭಾರತದಲ್ಲಿ ಮೊದಲ ಬಾರಿಗೆ ನಡೆಯುವ ಹಗಲು ಮತ್ತು ರಾತ್ರಿ ಟೆಸ್ಟ್ ಪಂದ್ಯವನ್ನು ನೋಡಲು ಮುಂಗಡವಾಗಿಯೇ ಟೆಕೆಟ್ ಬುಕ್ ಮಾಡಿದ್ದಾರೆ. ಈ ಪಂದ್ಯದ ನಾಲ್ಕು ದಿನದ ಟೆಕೆಟ್ ಆಗಾಲೇ ಸೋಲ್ಡ್ ಔಟ್ ಆಗಿವೆ ಎಂದು ಬಿಸಿಸಿಐ ಅಧಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

    ಶುಕ್ರವಾರ ನಡೆಯುವ ಪಂದ್ಯವನ್ನು ಟಾಸ್‍ಗೂ ಮುನ್ನ ಭಾರತೀಯ ಸೇನೆಯ ಪ್ಯಾರಾಟ್ರೂಪರ್ ಗಳು ಮೈದಾನದ ಮೇಲೆ ಹಾರಿ ನಂತರ ಎರಡು ತಂಡದ ನಾಯಕರಿಗೆ ಪಿಂಕ್ ಬಾಲ್‍ನ್ನು ಹಸ್ತಾಂತರ ಮಾಡುವ ಮೂಲಕ ಆರಂಭ ಮಾಡಲು ಯೋಚನೆ ಮಾಡಲಾಗಿದೆ. ಇದಾದ ನಂತರದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಈಡನ್ ಮೈದಾನದ ಬೆಲ್ ಹೊಡೆಯುವ ಪಂದ್ಯಕ್ಕೆ ಅಧಿಕೃತ ಆರಂಭ ನೀಡಲಿದ್ದಾರೆ.

    ಪಂದ್ಯದ ಚಹಾ ವಿರಾಮದ ವೇಳೆ ಮಾಜಿ ನಾಯಕರನ್ನು ಓಪನ್ ವಾಹನದಲ್ಲಿ ಕುರಿಸಿ ಮೈದಾನದ ಸುತ್ತ ಮೆರವಣಿಗೆ ಮಾಡಲಾಗುತ್ತದೆ. ನಂತರ 40 ನಿಮಿಷಗಳ ವಿರಾಮದ ಸಮಯದಲ್ಲಿ, ‘ಫ್ಯಾಬುಲಸ್ ಫೈವ್’ ಎಂಬ ಹೆಸರಿನಲ್ಲಿ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ವಿವಿಎಸ್ ಲಕ್ಷ್ಮಣ್ ಅವರ ಒಳಗೊಂಡ ಟಾಕ್ ಶೋ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅವರು 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಸರಣಿಯ ಗೆಲುವಿನ ಬಗ್ಗೆ ಮಾತನಾಡಲಿದ್ದಾರೆ.

    ಇದಾದ ನಂತರ ಸಚಿನ್. 2008ರ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಅಭಿನವ್ ಬಿಂದ್ರಾ, ಟೆನಿಸ್ ತಾರೆ ಸಾನಿಯಾ ಮಿರ್ಜಾ, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ ಸಿಂಧು ಮತ್ತು ಆರು ಬಾರಿ ಬಾಕ್ಸಿಂಗ್ ವಿಶ್ವ ಚಾಂಪಿಯನ್ ಗೆದ್ದ ಎಂಸಿ ಮೇರಿ ಕೋಮ್ ಸೇರಿದಂತೆ ಭಾರತೀಯ ಕ್ರೀಡಾ ತಾರೆಗಳನ್ನು ಸಿಎಬಿ ಸನ್ಮಾನಿಸಲಿದೆ. ವಿಶೇಷವಾಗಿ ವಿನ್ಯಾಸಗೊಳಿಸಲಾದ ಮೆಮೆಂಟೋಗಳನ್ನು ಗಣ್ಯರಿಗೆ ನೀಡಲಾಗುವುದು ಮತ್ತು ಅವರನ್ನು ಕ್ರೀಡಾಂಗಣದ ಸುತ್ತ ಗಾಲ್ಫ್ ಗಾಡಿಗಳಲ್ಲಿ ಮೆರವಣಿಗೆ ಮಾಡಲಾಗುವುದು ಎಂದು ಸಿಎಬಿ ಕಾರ್ಯದರ್ಶಿ ಅವಿಶೇಕ್ ದಾಲ್ಮಿಯಾ ಹೇಳಿದ್ದಾರೆ.

    ಈ ಕಾರ್ಯಕ್ರಮಗಳ ಜೊತೆಗೆ 2000 ದಲ್ಲಿ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾಗವಹಿಸಿದ ಬಾಂಗ್ಲಾ ಆಟಗಾರರನ್ನು ಸನ್ಮಾನಿಸಲು ಸಿಎಬಿ ತೀರ್ಮಾನ ಮಾಡಿದೆ. ಈ ಪಂದ್ಯದಲ್ಲಿ ಸೌರವ್ ಗಂಗೂಲಿಯವರು ಟೆಸ್ಟ್ ನಾಯಕನಾಗಿ ಪಾದಾರ್ಪಣೆ ಮಾಡಿದ್ದರು.

  • ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಕನಸು ಕಾಣುತ್ತಿದ್ದ ರಹಾನೆಯ ಕಾಲೆಳೆದ ಕೊಹ್ಲಿ, ಧವನ್

    ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಕನಸು ಕಾಣುತ್ತಿದ್ದ ರಹಾನೆಯ ಕಾಲೆಳೆದ ಕೊಹ್ಲಿ, ಧವನ್

    ನವದೆಹಲಿ: ಕೋಲ್ಕತ್ತಾದಲ್ಲಿ ಮುಂಬರುವ ಹಗಲು-ರಾತ್ರಿ ಟೆಸ್ಟ್ ಬಗ್ಗೆ ಕನಸು ಕಾಣುತ್ತಿರುವ ಬಗ್ಗೆ ಸೋಮವಾರ ರಾತ್ರಿ ಫೋಟೋವೊಂದನ್ನು ಪೋಸ್ಟ್ ಮಾಡಿದ ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರನ್ನು ನಾಯಕ ವಿರಾಟ್ ಕೊಹ್ಲಿ ಮತ್ತು ತಂಡದ ಸಹ ಆಟಗಾರ ಶಿಖರ್ ಧವನ್ ಅವರು ಟ್ರೋಲ್ ಮಾಡಿದ್ದಾರೆ.

    ನವೆಂಬರ್ 22 ರಿಂದ 26 ರವರೆಗೆ ಬಾಂಗ್ಲಾದೇಶ ವಿರುದ್ಧ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆಯುವ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜಾಗಿದೆ. ಉಭಯ ತಂಡಗಳು ಇತಿಹಾಸದಲ್ಲಿ ಮೊದಲ ಬಾರಿಗೆ ದೀಪಗಳ ಅಡಿಯಲ್ಲಿ ಟೆಸ್ಟ್ ಪಂದ್ಯವನ್ನು ಆಡಲಿವೆ.

    https://www.instagram.com/p/B5AcA3ahWN0/?utm_source=ig_embed

    ಮೊದಲ ಹಗಲು ಮತ್ತು ರಾತ್ರಿ ಪಂದ್ಯವನ್ನು ಆಡಲು ಸಿದ್ಧವಾಗಿರುವ ಭಾರತ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಅವರು, ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪಿಂಕ್ ಬಾಲ್ ಪಕ್ಕದಲ್ಲಿ ಮಲಗಿರುವ ಫೋಟೋವನ್ನು ಹಾಕಿ, ನಾನು ಈಗಾಗಲೇ ಐತಿಹಾಸಿಕ ಪಿಂಕ್ ಬಾಲ್ ಟೆಸ್ಟ್ ಬಗ್ಗೆ ಕನಸು ಕಾಣುತ್ತಿರುವೆ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಗೆ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಅವರು ಕಮೆಂಟ್ ಮಾಡುವ ಮೂಲಕ ಕಾಲೆಳೆದಿದ್ದಾರೆ.

    ಶಿಖರ್ ಧವನ್,  ಕನಸಿನಲ್ಲಿಯೇ ಫೋಟೋ ತೆಗೆದುಕೊಂಡ ಎಂದು ಹೇಳುವ ಮೂಲಕ ರಹಾನೆ ಅವರನ್ನು ಕಾಲೆಳೆದರೆ, ಕೊಹ್ಲಿ ಅವರು ತುಂಬಾ ಒಳ್ಳೆಯ ಪೋಸ್ ಜಿಂಕ್ಸಿ ಎಂದು ಕಾಮೆಂಟ್ ಮಾಡಿದ್ದಾರೆ.

    ಬಹುನಿರೀಕ್ಷಿತ ಪಂದ್ಯವನ್ನು ಆಡಲು ನಾಯಕ ಕೊಹ್ಲಿ ಮತ್ತು ಉಪನಾಯಕ ರಹಾನೆ ಅವರು ತಂಡದ ಎಲ್ಲಾ ಆಟಗಾರಗಿಂತ ಮೊದಲೇ ಕೋಲ್ಕತ್ತಾಗೆ ಬಂದಿದ್ದಾರೆ. ಇಂದು ಬೆಳಗ್ಗೆ 9:40 ಸುಮಾರಿಗೆ ಕೊಹ್ಲಿ ಮತ್ತು ರಹಾನೆ ಕೋಲ್ಕತಾಗೆ ಬಂದಿದ್ದಾರೆ. ಇಂದು ನಾಯಕ ಕೊಹ್ಲಿ ಅವರು ಪಿಚ್ ನೋಡಲು ಈಡನ್ ಗಾರ್ಡನ್ಸ್ ಮೈದಾನಕ್ಕೆ ಹೋಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಮೂಲಗಳ ಪ್ರಕಾರ ಕೊಹ್ಲಿ ಅವರು ಈ ಯೋಜನೆಯನ್ನು ಕೈಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

    ರೋಹಿತ್ ಶರ್ಮಾ ಅವರು ಬುಧವಾರ ನಸುಕಿನ ಜಾವ 1:55 ಕ್ಕೆ ಬರಲಿದ್ದರೆ ವೇಗಿಗಳಾದ ಮೊಹಮ್ಮದ್ ಶಮಿ ಮತ್ತು ಉಮೇಶ್ ಯಾದವ್ ಅದೇ ದಿನ ಬೆಳಿಗ್ಗೆ 9.35 ಕ್ಕೆ ಆಗಮಿಸಲಿದ್ದಾರೆ. ಆದರೆ ಶುಕ್ರವಾರ ಪಂದ್ಯ ಆರಂಭವಾಗುವರೆಗೂ ಪಿಚ್‍ನಲ್ಲಿ ಪಿಂಕ್ ಬಾಲ್‍ನಲ್ಲಿ ಅಭ್ಯಾಸ ಮಾಡಲು ಬಿಡುವುದಿಲ್ಲ ಎಂದು ಪಿಚ್ ಕ್ಯೂರೇಟರ್ ಸುಜನ್ ಮುಖರ್ಜಿ ಹೇಳಿದ್ದಾರೆ.

    ಇಂದೋರ್ ನಲ್ಲಿ ನಡೆದ ಮೊದಲ ಪಂದ್ಯವನ್ನು ಇನ್ನಿಂಗ್ಸ್ ಮತ್ತು 130 ರನ್‍ಗಳಿಂದ ಭಾರತ ಗೆದ್ದಿದ್ದು ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.