Tag: ಪಾ.ರಂಜಿತ್

  • ಕರ್ನಾಟಕದ ಚಿನ್ನದ ನೆಲದ ಕಥೆ ಹೇಳ್ತಿದ್ದಾರೆ ತಮಿಳಿನ ಖ್ಯಾತ ಡೈರೆಕ್ಟಕ್ ಪಾ.ರಂಜಿತ್

    ಕರ್ನಾಟಕದ ಚಿನ್ನದ ನೆಲದ ಕಥೆ ಹೇಳ್ತಿದ್ದಾರೆ ತಮಿಳಿನ ಖ್ಯಾತ ಡೈರೆಕ್ಟಕ್ ಪಾ.ರಂಜಿತ್

    ಜನಿಕಾಂತ್ ಸೇರಿದಂತೆ ಹಲವು ಸ್ಟಾರ್ ನಟರುಗಳಿಗೆ ಸಿನಿಮಾ ಮಾಡಿರುವ ಖ್ಯಾಥ ನಿರ್ದೇಶಕ ಪಾ.ರಂಜಿತ್ (Pa. Ranjith) ಕನ್ನಡಿಗರ ತಲೆಗೆ ಹುಳು ಬಿಟ್ಟುಕೊಳ್ಳುವಂತಹ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ತಾವು ತಮಿಳು ನಿರ್ದೇಶಕರಾದರೂ, ಕನ್ನಡ ಸಿನಿಮಾ ರಂಗವನ್ನು ಜಗತ್ತಿಗೆ ಪರಿಚಯಿಸಿದ ‘ಕೆಜಿಎಫ್’ ಸಿನಿಮಾದ ಅಸಲಿ ಕಥೆಯನ್ನೂ ಅವರು ಬಿಚ್ಚಿಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ ಸಿನಿಮಾ ಅದೊಂದು ಕಾಲ್ಪನಿಕ ಕಥೆಯನ್ನು ಹೊಂದಿತ್ತು. ತಾವು ಕೆಜಿಎಫ್ ನ ಅಸಲಿ ಕಥೆಯನ್ನು ಹೇಳಲು ಹೊರಟಿದ್ದಾರೆ.

    ಕೆಜಿಎಫ್ (KGF) ಸಿನಿಮಾ ಬರುವ ಮುಂಚೆಯೇ ಅವರು ಕೆಜಿಎಫ್ ನೆಲದ ಕರುಣಾಜನಕ ನೈಜ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದರಂತೆ. ಆದರೆ, ಕನ್ನಡದ ಕೆಜಿಎಫ್ ಸಿನಿಮಾ ಬಂದಿದ್ದರಿಂದ ಅದನ್ನು ಮುಂದೆಹಾಕಿದ್ದರಂತೆ. ಈ ವಿಷಯವನ್ನು ಸ್ವತಃ ರಂಜಿತ್ ಅವರೇ ಈ ಹಿಂದೆ ಕಾನ್ ಫೆಸ್ಟಿವೆಲ್ ನಲ್ಲಿ ಹೇಳಿದ್ದರುಇ. ಅಲ್ಲದೇ, ಕೆಜಿಎಫ್ ಸಿನಿಮಾದ ಪಾತ್ರಗಳು ಕಾಲ್ಪನಿಕವಾಗಿದ್ದವು. ರಂಜಿತ್ ಮಾಡಿರುವ ಕಥೆಯಲ್ಲಿ ಬಹುತೇಕ ಪಾತ್ರಗಳು ಆ ನೆಲದಲ್ಲಿ ಜೀವಿಸಿದ್ದವು ಎಂದಿದ್ದಾರೆ.

     

    ಚಿಯಾನ್ ವಿಕ್ರಮ್ (Chian Vikram) ಈ ಸಿನಿಮಾದ ಹೀರೋ. ಸಿನಿಮಾಗೆ ನಿರ್ದೇಶಕರು ಹೆಸರು ಇಟ್ಟಿದ್ದು ತಂಗಳಾನ್. ಈಗಾಗಲೇ ರಿಲೀಸ್ ಆಗಿರುವ ಫಸ್ಟ್ ಲುಕ್ ಮತ್ತು ಮಾಹಿತಿಗಳು ವೈರಲ್ ಆಗಿವೆ. ಈ ಸಿನಿಮಾದಲ್ಲಿ ಕೆಜಿಎಫ್ ಹುಟ್ಟಿದ್ದು ಹೇಗೆ? ಚಿನ್ನಕ್ಕಾಗಿ ಬ್ರಿಟಿಷರು ಹೂಡಿದ್ದ ಆಟವೇನು? ಈ ನೆಲದಲ್ಲಿ ತಮಿಳಿಗರ ಪಾತ್ರ ಏನಾಗಿತ್ತು? ಹೀಗೆ ಹಲವು ಸಂಗತಿಗಳನ್ನು ಚಿತ್ರದಲ್ಲಿ ತೋರಿಸಲಿದ್ದಾರಂತೆ. ಕನ್ನಡಿಗರಿಗಿಂತಲೂ ತಮಿಳಿಗರನ್ನು ಕರೆತಂದು ಈ ಚಿನ್ನದ ಗಣಿಯಲ್ಲಿ ಬಿಡುತ್ತಿದ್ದರಂತೆ ಬ್ರಿಟಿಷರು. ಪ್ರಮುಖವಾಗಿ ಕಥೆಯನ್ನು ಅವರು ಹೇಳಲಿದ್ದಾರಂತೆ.

  • ರಾಮಮಂದಿರ ವಿಚಾರ: ತನ್ನದೇ ನಿರ್ದೇಶಕನಿಗೆ ತಿರುಗೇಟು ನೀಡಿದ ರಜನಿ

    ರಾಮಮಂದಿರ ವಿಚಾರ: ತನ್ನದೇ ನಿರ್ದೇಶಕನಿಗೆ ತಿರುಗೇಟು ನೀಡಿದ ರಜನಿ

    ನವರಿ 22ರಂದು ಅಯೋಧ್ಯೆಯಲ್ಲಿ ನಡೆದ ರಾಮಲಲ್ಲಾನ (Ram Mandir) ಪ್ರಾಣ ಪ್ರತಿಷ್ಠಾಪನೆಗೆ ತಮಿಳಿನ ಹೆಸರಾಂತ ನಟ ರಜನಿಕಾಂತ್ (Rajinikanth) ಸೇರಿದಂತೆ ಭಾರತೀಯ ಸಿನಿಮಾ ರಂಗದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ರಜನಿಕಾಂತ್ ಆಡಿದ ಮಾತಿಗೆ ಅವರದ್ದೇ ಸಿನಿಮಾಗಳ ನಿರ್ದೇಶಕ ಪಾ.ರಂಜಿತ್ (Pa. Ranjith) ಆಕ್ಷೇಪ ವ್ಯಕ್ತ ಪಡಿಸಿದ್ದರು. ಪಾ.ರಂಜಿತ್ ಮತ್ತು ರಜನಿಯ ಪರ ವಿರೋಧದ ಮಾತುಗಳು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದ್ದವು.

    ರಜನಿ ಕುರಿತಂತೆ ಮಾತನಾಡಿದ್ದ ಪಾ.ರಂಜಿತ್, ‘ರಜನಿಕಾಂತ್ ಅಯೋಧ್ಯೆಗೆ ಹೋಗಿದ್ದು, ರಾಮನ ದರ್ಶನ ಪಡೆದದ್ದು ತಪ್ಪಲ್ಲ. ಆದರೆ, 500 ವರ್ಷಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ ಎಂದು ಹೇಳದ್ದನ್ನು ನಾನು ಒಪ್ಪಲಾರೆ. ಇದರ ಹಿಂದಿನ ರಾಜಕಾರಣವನ್ನು ಪ್ರಶ್ನೆ ಮಾಡಬೇಕು. ಸಮಸ್ಯೆ ಮತ್ತು ಪರಿಹಾರ ಎನ್ನುವುದನ್ನು ನಾನು ಟೀಕಿಸುತ್ತೇನೆ’ ಎಂದಿದ್ದರು.

    ಪಾ.ರಂಜಿತ್ ಆಡಿದ ಮಾತುಗಳು ರಜನಿಕಾಂತ್ ಮತ್ತು ರಾಮನ ಭಕ್ತರನ್ನು ಕೆರಳಿಸಿದ್ದವು. ಪಾ.ರಂಜಿತ್ ವಿರುದ್ಧ ಟೀಕೆಗಳು ಕೇಳಿ ಬಂದಿದ್ದವು. ಹಾಗಾಗಿ ಇದಕ್ಕೆ ರಜನಿಕಾಂತ್ ಹೇಗೆ ಪ್ರತಿಕ್ರಿಯಿಸುತ್ತಾರೆ ಎನ್ನುವು ಕುತೂಹಲ ಸಹಜವಾಗಿಯೇ ಇತ್ತು. ಅಯೋಧ್ಯೆಯಿಂದ ಬಂದ ರಜನಿಯನ್ನೂ ಕೊನೆಗೂ ಪ್ರಶ್ನೆ ಮಾಡಿದ್ದಾರೆ ಮಾಧ್ಯಮಗಳು.

    ರಾಮಮಂದಿರ ಓಪನ್ ಆದ ತಕ್ಷಣ ರಾಮನ ದರ್ಶನ ಪಡೆದ ಮೊದಲ 150 ಜನರಲ್ಲಿ ನಾನೂ ಒಬ್ಬ. ನನಗೆ ರಾಮನ ಒಳ್ಳೆಯ ದರ್ಶನ ಸಿಕ್ಕಿದೆ. ನನಗೆ ಇದು ಆಧ್ಯಾತ್ಮ. ರಾಜಕೀವಲ್ಲ ಎಂದು ಹೇಳುವ ಮೂಲಕ ಪಾ.ರಂಜಿತ್ ಆಡಿದ ಮಾತಿಗೆ ರಜನಿ ಹೀಗೆ ಉತ್ತರಿಸಿದ್ದಾರೆ. ಅಲ್ಲದೇ, ತಾವು ಇದರಲ್ಲಿ ರಾಜಕೀಯ ಹುಡುಕುವುದಕ್ಕೆ ಹೋಗುದಿಲ್ಲವೆಂದು ತಿರುಗೇಟು ನೀಡಿದ್ದಾರೆ.

  • ಕನ್ನಡದ ಚಿತ್ರವನ್ನು ಬೆಂಬಲಿಸಿದ ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್

    ಕನ್ನಡದ ಚಿತ್ರವನ್ನು ಬೆಂಬಲಿಸಿದ ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್

    ಎ.ಆರ್.ಸಾಯಿರಾಮ್ ಕಥೆ,ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿ ಆಕ್ಷನ್ ಕಟ್ ಹೇಳಿರುವ ವಿನೂತನ ಶೀರ್ಷಿಕೆ ಹೊಂದಿರುವ ’ಧೈರ್ಯಂ ಸರ್ವತ್ರ ಸಾಧನಂ’ (ಡಿಎಸ್‌ಎಸ್)  (Dariyam Sarvatra Sadhanam) ಚಿತ್ರದ ಟೀಸರ್‌ ಅನ್ನು ನಟ ವಸಿಷ್ಠ ಸಿಂಹ (Vasishtha Simha)ಅನಾವರಣಗೊಳಿಸಿ ಶುಭ ಹಾರೈಸಿದ್ದಾರೆ. ನಂತರ ಮಾತನಾಡಿದ ಅವರು ಒಂದು ದೃಶ್ಯದಲ್ಲಿ ಮಲಗಿರುವ ವ್ಯಕ್ತಿಯ ಮೇಲೆ, ಒಬ್ಬರ ಮೇಲೊಬ್ಬರು ಒಟ್ಟು ಮೂರು ಜನ ನಿಂತಿರುವುದು ಕುತೂಹಲ ಕೆರಳಿಸಿದೆ. ಇದನ್ನು ತಿಳಿಯಲು ಚಿತ್ರಮಂದಿರಕ್ಕೆ ತಾವುಗಳು ಬರಬೇಕು. ಒಳ್ಳೆ ಸಂದೇಶದೊಂದಿಗೆ ಸಮಾಜದಲ್ಲಿ ನಡೆದಿರುವ ವಿಷಯಗಳನ್ನು ಪರದೆ ಮೇಲೆ ತೋರಿಸಿರುವುದು ಕಂಡು ಬಂದಿದೆ. ಇಂತಹ ಸಿನಿಮಾಗಳು ಜನರಿಗೆ ತಲುಪಬೇಕು ಎಂದರು. ಅಲ್ಲದೆ ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ನಿರ್ದೇಶನ ಮಾಡಿರುವ ಪಾ.ರಂಜಿತ್ (Pa. Ranjith) ಡಿಜಿಟಲ್‌ನಲ್ಲಿ ಟೀಸರ್ ಬಿಡುಗಡೆ ಮಾಡಿ, ಚಿತ್ರ ನೋಡಲು ನಾನು ಉತ್ಸುಕನಾಗಿದ್ದೇನೆಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    ಟೀಸರ್ ಹೊರಬಂದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿರುವುದು ತಂಡಕ್ಕೆ ಸಂತಸ ತಂದಿದೆ. ಎಲ್ಲಿಯೂ ಗ್ರಾಫಿಕ್ಸ್ ಬಳಸದೆ ನೈಜತೆಯಲ್ಲಿ ಶೂಟ್ ಮಾಡಿರುವುದು ವಿಶೇಷ. ತುಣುಕುಗಳಲ್ಲಿ ಕೆಲವೊಂದು ಅಂಶಗಳನ್ನು ಗಮನಿಸಿದಾಗ ಇದೊಂದು  ಶೋಷಿತರ ಸಿನಿಮಾ, ಬಡವ ಶ್ರೀಮಂತ, ಅಪ್ಪ ಮಗನ ಬಾಂಧ್ಯವ, ಅಸ್ತಿತ್ವ, ಜ್ಞಾನ ಶಕ್ತಿ ಹೀಗೆ ಎಲ್ಲದರ ಸಂಕೇತ ಇರಲಿದೆಯಾ ಎನ್ನುವ ಬಗ್ಗೆ ಪ್ರಶ್ನೆ ಮೂಡುತ್ತದೆ.

    ಎ.ಪಿ.ಪ್ರೊಡಕ್ಷನ್ ಅಡಿಯಲ್ಲಿ ಉದ್ಯಮಿ ಆನಂದ್ ಬಾಬು.ಜಿ ನಿರ್ಮಾಣ ಮಾಡಿದ್ದಾರೆ. ನಾಯಕನಾಗಿ ವಿವಾನ್.ಕೆ.ಕೆ. ನಾಯಕಿಯಾಗಿ ಅನುಷಾ ರೈ. ವಿಶಿಷ್ಟ ಪಾತ್ರಗಳಲ್ಲಿ ಯಶ್‌ ಶೆಟ್ಟಿ, ಬಲರಾಜ ವಾಡಿ, ಚಕ್ರವರ್ತಿ ಚಂದ್ರಚೂಡ್, ವರ್ಧನ್, ಪ್ರದೀಪ್‌ ಪೂಜಾರಿ ರಾಮ್‌ ಪವನ್. ಉಳಿದಂತೆ ಪದ್ಮಿನಿ ಶೆಟ್ಟಿ, ಅರ್ಜುನ್‌ ಪಾಳೆಗಾರ, ರಾಮ್‌ ನಾಯಕ್, ಹೊಂಗಿರಣ ಚಂದ್ರು ಮತ್ತು ರಂಗಭೂಮಿ ಕಲಾವಿದರುಗಳಿಗೆ ಅವಕಾಶ ಮಾಡಿಕೊಡಲಾಗಿದೆ.

     

    ಹೃದಯಶಿವ, ಕಿನ್ನಾಳ್‌ ರಾಜ್, ಅರಸು ಅಂತಾರೆ ಸಾಹಿತ್ಯದ ಐದು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಭಾರತದ ಎಲ್ಲಾ ಭಾಷೆಯ ಸೂಪರ್ ಹಿಟ್ ಚಿತ್ರಗಳಿಗೆ ಕೆಲಸ ಮಾಡಿರುವ ರವಿಕುಮಾರ್ ಸನಾ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ, ಕುಂಗುಫು ಚಂದ್ರು ಸಾಹಸ, ಕ್ಯಾಪ್ಟನ್ ಕಿಶೋರ್ ನೃತ್ಯ ಇರಲಿದೆ. ತುಮಕೂರು, ಕೊರಟಗೆರೆ, ದೇವರಾಯನದುರ್ಗ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ತಾಂತ್ರಿಕತೆಯಲ್ಲಿ  ಅದ್ದೂರಿತನ ಇರಲಿದ್ದು, ಈಗಾಗಲೇ ಪ್ರಚಾರ ಕಾರ್ಯ ಶುರು ಮಾಡಿಕೊಂಡಿದೆ. ಮುಂದಿನ ತಿಂಗಳು ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

  • ವಿಕ್ರಮ್ ನಟನೆಯ ‘ತಂಗಲಾನ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ವಿಕ್ರಮ್ ನಟನೆಯ ‘ತಂಗಲಾನ್’ ಚಿತ್ರದ ರಿಲೀಸ್ ಡೇಟ್ ಫಿಕ್ಸ್

    ಸ್ಟ್ ಲುಕ್ ನಿಂದಾಗಿ ಸಖತ್ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವ ತಂಗಲಾನ್ (Tangalan) ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಇದೇ ಏಪ್ರಿಲ್ ನಲ್ಲಿ ತಮ್ಮ ಚಿತ್ರವನ್ನು ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಚಿಯಾನ್ ವಿಕ್ರಮ್ (Vikram) ಹಾಗೂ ಪ.ರಂಜಿತ್  (Pa. Ranjith)ಕಾಂಬಿನೇಷನ್ ಚಿತ್ರವಿದು.

    ರಜನಿಕಾಂತ್ ಅಭಿನಯದ ಕಬಾಲಿ, ಕಾಲ ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದ ಪ. ರಂಜಿತ್ ಈ ಬಾರಿ ಕೋಲಾರ ಗೋಲ್ಡ್ ಫೀಲ್ಡ್ ಹಿನ್ನೆಲೆಯ ಕಥೆಯನ್ನು ಈ ಚಿತ್ರಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

    ಈ ಚಿತ್ರದಲ್ಲಿ ವಿಕ್ರಮ್ ಜೊತೆಗೆ ಪಾರ್ವತಿ, ಮಾಳವಿಕಾ ಮೋಹನನ್, ಪಶುಪತಿ, ಹರಿಕೃಷ್ಣನ್, ಅನ್ಬುದುರೈ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಈ ಚಿತ್ರಕ್ಕೆ ಎ. ಕಿಶೋರ್ ಛಾಯಾಗ್ರಹಣ ಮಾಡುತ್ತಿದ್ದು, ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಪ. ರಂಜಿತ್ ಅವರೇ ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದು ಅವರಿಗೆ ಬರವಣಿಗೆಯಲ್ಲಿ ತಮಿಳ್ ಪ್ರಭಾ ಸಹಾಯ ಮಾಡಿದ್ದಾರೆ. ಎಸ್.ಎಸ್. ಮೂರ್ತಿ ಕಲಾನಿರ್ದೇಶನ ಮತ್ತು ಆರ್.ಕೆ. ಸೆಲ್ವಾ ಅವರ ಸಂಕಲನವಿದೆ.

     

    ಕೆಜಿಎಫ್ ಹಿನ್ನೆಲೆಯಲ್ಲಿ ಸಾಗುವ ಈ ಆಕ್ಷನ್ ಚಿತ್ರವನ್ನು ಸ್ಟುಡಿಯೋ ಗ್ರೀನ್ ಸಂಸ್ಥೆಯಡಿ ಕೆ.ಇ. ಜ್ನಾನವೇಲ್ ರಾಜ ನಿರ್ಮಿಸುತ್ತಿದ್ದಾರೆ. ದೊಡ್ಡ ಬಜೆಟ್ನಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ನಿರ್ಮಾಣದಲ್ಲಿ ಪ. ರಂಜಿತ್ ಅವರ ನೀಲಂ ಪ್ರೊಡಕ್ಷನ್ಸ್ ಸಹ ಕೈಜೋಡಿಸಿದೆ.

  • ‘ಅಡವಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಮಾಡಿದ ಪಾ.ರಂಜಿತ್

    ‘ಅಡವಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್ ಮಾಡಿದ ಪಾ.ರಂಜಿತ್

    ಸಂವಿಧಾನ ಹಾಗೂ ಅದರ ಮಹತ್ವದ ಬಗ್ಗೆ ಅರಿವು ಮೂಡಿಸುವ, ಕಾಡಿನ ಸಂರಕ್ಷಣೆ,ಕಾಡಿನ ಮೂಲ ನಿವಾಸಿಗಳ ಬದುಕು ಮತ್ತು ಸಂಘರ್ಷದ ಕಥೆಯನ್ನು ತೆರೆದಿಡುವ ಚಿತ್ರ ಅಡವಿ (Adavi). ಈ ‌ಚಿತ್ರದ ಸಿಂಗಾರ ಸಿಂಗಾರ ತ್ವಾಟ ಹಾಡಿನ ಲಿರಿಕಲ್ ವೀಡಿಯೋವನ್ನು  ಕೆಜಿಎಫ್ ಮುನಿಸಿಪಲ್ ಗ್ರೌಂಡ್ ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಾಲ, ಕಬಾಲಿ, ತಂಗಲಾನ್ ಚಿತ್ರಗಳ ನಿರ್ದೇಶಕ ಪ.ರಂಜಿತ್ (Pa. Ranjith) ಅವರು ಬಿಡುಗಡೆ ಮಾಡಿದರು. ಹಿರಿಯ ಸಂಗೀತ ನಿರ್ದೇಶಕ  ವಿ.ಮನೋಹರ್ ಅವರ ಸಾಹಿತ್ಯದ 2500ನೇ ಗೀತೆ ಇದಾಗಿದ್ದು, ನವೀನ್ ಸಜ್ಜು ಈ ಹಾಡಿಗೆ ದನಿಯಾಗಿದ್ದಾರೆ. ಸಂವಿಧಾನ ಸಿನಿ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಟೈಗರ್ ನಾಗ್ ಅವರು ಚಿತ್ರಕಥೆ ಬರೆದ ನಿರ್ಮಿಸಿ, ನಿರ್ದೇಶಿಸಿರುವ  ಕಾದಂಬರಿ ಆಧಾರಿತ ಚಿತ್ರ ಇದಾಗಿದೆ.

    ವೇದಿಕೆಯಲ್ಲಿ  ಪಾ.ರಂಜೀತ್ ಮಾತನಾಡಿ  ಅಡವಿ ಚಿತ್ರದಲ್ಲಿ ನೆಲದ ಮಣ್ಣಿನ ಮಕ್ಕಳ ಕಥೆಯೊಂದಿಗೆ ಸಂವಿಧಾನ ಮತ್ತು ಅಂಬೇಡ್ಕರ್ ಅವರ ವಿಚಾರಗಳನ್ನು ಬಹಳ‌ ಚೆನ್ನಾಗಿ ತಂದಿದ್ದಾರೆ.‌  ನಿರ್ದೇಶಕ ಟೈಗರ್ ನಾಗ್ ಅವರು ಚಿತ್ರದ ಟೈಟಲ್ ಮತ್ತು ಹಾಡಿನಲ್ಲಿ ಕುತೂಹಲ ಮೂಡಿಸಿದ್ದಾರೆ, ಚಿತ್ರತಂಡಕ್ಕೆ ಯಶ ಸಿಗಲಿ ಎಂದು  ಹಾರೈಸಿದರು. ಈ ಸಂದರ್ಭದಲ್ಲಿ  ಪ್ರಗತಿಪರ ಚಿಂತಕ ಸಂಪತ್ ಸುಬ್ಬಯ್ಯ, ಬೌದ್ಧ ಮಹಾಸಭಾದ ರಾಜ್ಯಾದ್ಯಕ್ಷ ಹ.ರ.ಮಹೇಶ್ ಬೌದ್ಧ, ಜೀವಾ ನವೀನ್, ಮೋಹನ್ ಮೌರ್ಯ, ಮಾಸ್ಟರ್ ಚಿರುಶ್ರೀನಾಗ್, ಶಿಲ್ಪ, ಆರುಂಧತಿ ಲಾಲ್, ಅರ್ಜುನ್ ಪಾಳ್ಳೇಗಾರ್, ಸಹನಿರ್ದೇಶಕ ಕೆ. ಮಂಜು ಕೋಟೆಕೆರೆ ಹಾಜರಿದ್ದರು.

    ಚಿತ್ರರಂಗದಲ್ಲಿ  ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಅಡವಿ ಚಿತ್ರದ ನಿರ್ಮಾಪಕ ಟೈಗರ್ ನಾಗ್ ಅವರು ಸೆನ್ಸಾರ್ ಮಂಡಳಿ ಅಧಿಕಾರಿಗಳ ಭ್ರಷ್ಟಾಚಾರದ ವಿರುದ್ಧ ಸಿಬಿಐಗೆ ದೂರು ನೀಡಿದ್ದರು. ಬಳಿಕ ಸಿಬಿಐ ಬಲೆಗೆ ಪ್ರಾದೇಶಿಕ ಸೆನ್ಸಾರ್ ಅಧಿಕಾರಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಅರಣ್ಯವೇ ಸರ್ವಸ್ವ ಎಂದು ನಂಬಿರುವ ಕಾಡಿನ ಮೂಲ ನಿವಾಸಿಗಳ ಜೀವನ, ತಮ್ಮ ಸ್ವಚ್ಛಂದ ಬದುಕಿಗಾಗಿ ಅವರು ನಡೆಸುವ ಹೋರಾಟ,  ಬುಡಕಟ್ಟು ಜನರು ಮತ್ತು ಪ್ರಸ್ತುತ ವ್ಯವಸ್ಥೆಯ ನಡುವಿನ ಸಂಘರ್ಷವನ್ನು ತೆರೆಯುವ ಪ್ರಯತ್ನ ಕಥೆಯಲ್ಲಿದೆ. ಈಗಾಗಲೇ ಅಡವಿ ಚಿತ್ರದ ಚಿತ್ರೀಕರಣ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಚಿತ್ರತಂಡವೀಗ ಬಿಡುಗಡೆಯ ಸಿದ್ಧತೆ ನಡೆಸಿದೆ. ಅಡವಿ ಚಿತ್ರವನ್ನು ಐತಿಹಾಸಿಕ ಸಿದ್ದರಬೆಟ್ಟ,  ಸಂಜೀವಿನಿ ಕ್ಷೇತ್ರ, ಸೂರ್ಯ ಗವಿ, ತಿಮ್ಮಲಾಪುರ ಅಭಯಾರಣ್ಯ, ಚಿಕ್ಕಮಗಳೂರು, ಸಕಲೇಶಪುರ, ತುಮಕೂರು ಮತ್ತು ಕೊರಟಗೆರೆ ಅಲ್ಲದೆ  ಆದಿವಾಸಿಗಳು ವಾಸಿಸುವ ಗುಡಿಸಲುಗಳಲ್ಲಿ ಚಿತ್ರೀಕರಿಸಲಾಗಿದೆ.

     

    ಅಡವಿ ಚಿತ್ರಕ್ಕೆ ಮಂಜು ಮಹಾದೇವ್ ಅವರ ಸಂಗೀತ ಸಂಯೋಜನೆ, ವಿಪಿನ್ ವಿ ರಾಜ್ ಅವರ ಛಾಯಾಗ್ರಹಣ, ಸಂಜೀವ ರೆಡ್ಡಿ ಸಂಕಲನ, ಕೆ ಮಂಜು ಕೋಟೆಕೆರೆ ಟೈಗರ್ ನಾಗ್ ಸಂಭಾಷಣೆ, ಕೆ.ಮಂಜು ಕೋಟೆಕೆರೆ, ನಿರ್ಮಾಣ ನಿರ್ವಹಣೆ ವಿಜಯಕುಮಾರ್ ಎವಿ, ಸಹ ನಿರ್ದೇಶನ, ಬಾಬು ಖಾನ್ ಕಲಾ ನಿರ್ದೇಶನವಿದೆ. ರಾಮಾನಾಯಕ್, ಉಗ್ರಂ ದೇವು, ರವಿಕುಮಾರ್ ಸನ, ಅನಂತರಾಜು, ವಕೀಲ ಜಗದೀಶ್ ಮಹಾದೇವ್, ಹ.ರ.ಮಹೇಶ್, ವಾಲೆ ಚಂದ್ರಣ್ಣ, ಮಂಜೀವ, ವೃಶ್ಚಿಕ ಶಿಲ್ಪಾ, ಟೈಗರ್ ನಾಗ್, ಆನಂದ್, ಶಿವಾನಂದ್ , ನವೀನ್, ಅರುಣ್, ಸಿದ್ದರಾಜು, ಕೆ.ಆರ್. ಓಬಳರಾಜು, ಕುಣಿಗಲ್ ರಮೇಶ್, ಮಂಜುಳಾ ರಾಜಕುಮಾರ್, ನಾಗಮಣಿ, ಬೇಬಿ ಸಿಂಚನಾ ಪ್ರಮುಖ ಪಾತ್ರಗಳಲ್ಲಿದ್ದಾರೆ.

  • ತಮಿಳಿನಲ್ಲಿ ಶುರುವಾಯಿತು ‘ಕೆಜಿಎಫ್’ ಸಿನಿಮಾದ ಶೂಟಿಂಗ್: ಹೀರೋ ಯಶ್ ಅಲ್ಲ, ಬೇರೆ

    ತಮಿಳಿನಲ್ಲಿ ಶುರುವಾಯಿತು ‘ಕೆಜಿಎಫ್’ ಸಿನಿಮಾದ ಶೂಟಿಂಗ್: ಹೀರೋ ಯಶ್ ಅಲ್ಲ, ಬೇರೆ

    ಭಾರತೀಯ ಸಿನಿಮಾ ರಂಗದಲ್ಲೇ ದಾಖಲೆ ಸೃಷ್ಟಿ ಮಾಡಿರುವ ಕನ್ನಡದ ಕೆಜಿಎಫ್ ಸಿನಿಮಾ, ಮುಂದುವರೆದ ಭಾಗ ಬರತ್ತಾ ಎಂದು ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಪ್ರಶಾಂತ್ ನೀಲ್ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಂತೆ ಸದ್ಯಕ್ಕಂತೂ ಕೆಜಿಎಫ್ 3 ಸಿನಿಮಾ ಇಲ್ಲವೆಂದು, ಮುಂದೆ ತಾವು ಮಾಡಬೇಕಾದ ಸಿನಿಮಾಗಳ ಕಾರಣದಿಂದಾಗಿ ಕೆಜಿಎಫ್ 3 ಚಿತ್ರವನ್ನು ಮಾಡುತ್ತಿಲ್ಲವೆಂದು ಘೋಷಿಸಿಯಾಗಿದೆ. ಆದರೂ, ತಮಿಳಿನಲ್ಲೊಂದು ಕೆಜಿಎಫ್ ಸಿನಿಮಾ ಮೂಡಿ ಬರಲಿದೆ.

    ಹೌದು, ನಿರ್ದೇಶಕ ಪ್ರಶಾಂತ್ ನೀಲ್ ಮಾಡಿರುವ ಕೆಜಿಎಫ್ ಸಿನಿಮಾದಲ್ಲಿ ಕಾಲ್ಪನಿಕ ಕಥೆಗೆ ಹೆಚ್ಚು ಒತ್ತು ನೀಡಲಾಗಿತ್ತು. ಕೆಜಿಎಫ್ ಕಥೆಯನ್ನು ಅದು ಒಳಗೊಂಡಿರಲಿಲ್ಲ. ಹಾಗಾಗಿ ಕೆಜಿಎಫ್ ನಲ್ಲಿ ನಡೆದ ರಿಯಲ್ ಘಟನೆಯನ್ನು ಕೆಜಿಎಫ್ ಹೆಸರಿನ ಸಿನಿಮಾದಲ್ಲಿ ತೋರಿಸಲು ಹೊರಟಿದ್ದಾರಂತೆ ತಮಿಳಿನ ಖ್ಯಾತ ನಿರ್ದೇಶಕ ಪಾ.ರಂಜಿತ್. ಅಲ್ಲಿ ರಿಯಲ್ ಆಗಿ ನಡೆದ ಸಂಘರ್ಷಗಳನ್ನು ಈ ಸಿನಿಮಾದಲ್ಲಿ ತೋರಿಸಲಿದ್ದಾರಂತೆ. ಹಾಗಾಗಿ ಇದೇ ಮೊದಲ ಬಾರಿಗೆ ಕೆಜಿಎಫ್ ಕುರಿತಾಗಿ ರಿಯಲ್ ಆಗಿ ಬರುತ್ತಿರುವ ಸಿನಿಮಾ ಇದಾಗಲಿದೆಯಂತೆ. ಇದನ್ನೂ ಓದಿ: ನೂಡಲ್ಸ್ ಬಿಡಿಸು ಅಂದ್ರೆ ಮೂಲಂಗಿ ಬಿಡಿಸ್ತಾಳೆ – ಸೋನು ಪೇಂಟಿಂಗ್‌ಗೆ ರಾಕೇಶ್ ಫುಲ್ ಶಾಕ್..!

    ಕೆಜಿಎಫ್ ಸಿನಿಮಾಗೆ ಚಿಯಾನ್ ವಿಕ್ರಮ್ ನಾಯಕನಾಗಿ ಆಯ್ಕೆಯಾಗಿದ್ದು, ಇದೊಂದು ಒಳ್ಳೆಯ ಸಿನಿಮಾ ಆಗಲಿದೆ ಎಂದಿದ್ದಾರೆ ವಿಕ್ರಮ್. ಆಸ್ಕರ್ ಪ್ರಶಸ್ತಿ ಸಲ್ಲಬೇಕಾದ ಸಿನಿಮಾ ಇದಾಗಲಿದೆ ಎಂದೂ ಅವರು ಹಾಡಿ ಹೊಗಳಿದ್ದಾರೆ. ಪಾ.ರಂಜಿತ್ ದೇಸಿಯ ಕಥೆಗಳನ್ನು ಸಿನಿಮಾ ಮಾಡಿದ ನಿರ್ದೇಶಕ. ಶೋಷಿತರ ನೋವುಗಳನ್ನು ದೃಶ್ಯಕ್ಕೆ ತಂದ ಹೆಗ್ಗಳಿಕೆ ಇವರದ್ದು. ಹಾಗಾಗಿ ಕೆಜಿಎಫ್ ಸಿನಿಮಾ ಹೊಸ ರೀತಿಯೊಂದಿಗೆ ಬರುವುದು ಗ್ಯಾರಂಟಿ.

    Live Tv
    [brid partner=56869869 player=32851 video=960834 autoplay=true]

  • `ವಿಕ್ರಮ್’ ಚಿತ್ರದ ಸಕ್ಸಸ್ ಬಳಿಕ ಕಮಲ್ ಹಾಸನ್ ಮುಂದಿನ ಚಿತ್ರ ಯಾವುದು?

    `ವಿಕ್ರಮ್’ ಚಿತ್ರದ ಸಕ್ಸಸ್ ಬಳಿಕ ಕಮಲ್ ಹಾಸನ್ ಮುಂದಿನ ಚಿತ್ರ ಯಾವುದು?

    ಕಾಲಿವುಡ್‌ನಲ್ಲಿ ಹೊಸ ಹವಾ ಸೃಷ್ಟಿ ಮಾಡಿದ ಸಿನಿಮಾ `ವಿಕ್ರಮ್’, ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿರುವ ಈ ಸಿನಿಮಾ ನಂತರ ಕಮಲ್ ಹಾಸನ್ ಮತ್ತೆ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಫ್ಯಾನ್ಸ್ ಕಾಯ್ತಿದ್ದರು. ಈಗ ಕಮಲ್ ಹಾಸನ್ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ಸಿಕ್ಕಿದೆ.

    `ವಿಕ್ರಮ್ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ ಕಮಲ್ ಹಾಸನ್ ಉಗ್ರಾವತಾರಕ್ಕೆ ಇಡೀ ಸಿನಿ ಪ್ರಪಂಚನೇ ತಲೆಬಾಗಿತ್ತು. ಹೀಗಿರುವಾಗ ವಿಕ್ರಮ್ ಚಿತ್ರದ ನಂತರ ಯಾವ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಡಿಟೈಲ್ಸ್ ಸಿಕ್ಕಿದೆ. ವಿಕ್ರಮ್ ಚಿತ್ರದ ಸಕ್ಸಸ್ ನಂತರ ಸಖತ್ ಸೆಲೆಕ್ಟಿವ್ ಆಗಿರುವ ಕಮಲ್ ಹಾಸನ್ ಪಾ ರಂಜಿತ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:ಸುಶ್ಮಿತಾ ಸೇನ್ ಮತ್ತು ಲಲಿತ್ ಮೋದಿ ಲವರ್ಸ್ ಅಲ್ಲ ತಂದೆ ಮಗಳು : ರಾಖಿ ಸಾವಂತ್

    ಇತ್ತೀಚೆಗಷ್ಟೇ ಫಿಲ್ಮ್ ಮೇಕರ್ ಪಾ ರಂಜಿತ್ ನೀಡಿದ ಸಂದರ್ಶನವೊಂದರಲ್ಲಿ ಕಮಲ್ ಹಾಸನ್ ಜತೆ ಸಿನಿಮಾ ಮಾಡುವುದಾಗಿ ರಿವೀಲ್ ಮಾಡಿದ್ದಾರೆ. ಸದ್ಯ ಚಿಯಾನ್ ವಿಕ್ರಮ್ ಸಿನಿಮಾ ಸೆಟ್ಟೇರುತ್ತಿದೆ. ಈ ಚಿತ್ರದ ಬಳಿಕ ಕಮಲ್ ಹಾಸನ್‌ಗೆ ಚಿತ್ರ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ. ಮತ್ತೆ ಭಿನ್ನ ಕಥೆಯ ಮೂಲಕ ಕಮಲ್ ಹಾಸನ್ ಬೆಳ್ಳಿತೆರೆಯಲ್ಲಿ ಮಿಂಚಲಿದ್ದಾರೆ. ಸಾಲು ಸಾಲು ಚಿತ್ರ ನಟನ ಕೈಯಲ್ಲಿದೆ. ಹೇಗೆ ಯಾವ ರೂಪದಲ್ಲಿ ಕಮಲ್ ಹಾಸನ್ ಬರಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಅಸಲಿ ‘ಕೆಜಿಎಫ್’ ಕಥೆ ಹೇಳ್ತಾರಂತೆ ತಮಿಳಿನ ಕಬಾಲಿ ಖ್ಯಾತಿಯ ನಿರ್ದೇಶಕ ಪಾ.ರಂಜಿತ್

    ಅಸಲಿ ‘ಕೆಜಿಎಫ್’ ಕಥೆ ಹೇಳ್ತಾರಂತೆ ತಮಿಳಿನ ಕಬಾಲಿ ಖ್ಯಾತಿಯ ನಿರ್ದೇಶಕ ಪಾ.ರಂಜಿತ್

    ಮಿಳಿನ ಖ್ಯಾತ ನಿರ್ದೇಶಕ, ರಜನಿಕಾಂತ್ ಸೇರಿದಂತೆ ಹಲವು ಸ್ಟಾರ್ ನಟರುಗಳಿಗೆ ಸಿನಿಮಾ ಮಾಡಿರುವ ಪಾ.ರಂಜಿತ್ ಕನ್ನಡಿಗರಿಗೆ ತಲೆಗೆ ಹುಳು ಬಿಟ್ಟುಕೊಳ್ಳುವಂತಹ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಕನ್ನಡ ಸಿನಿಮಾ ರಂಗವನ್ನು ಜಗತ್ತಿಗೆ ಪರಿಚಯಿಸಿದ ‘ಕೆಜಿಎಫ್’ ಸಿನಿಮಾದ ಅಸಲಿ ಕಥೆಯನ್ನೂ ಅವರು ಬಿಚ್ಚಿಟ್ಟಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿ ಬಂದ ಕೆಜಿಎಫ್ ಸಿನಿಮಾ ಅದೊಂದು ಕಾಲ್ಪನಿಕ ಕಥೆಯನ್ನು ಹೊಂದಿತ್ತು. ತಾವು ಅಸಲಿ ಕಥೆಯನ್ನು ಹೇಳುವುದಾಗಿ ತಿಳಿಸಿದ್ದಾರೆ.

    ಕೆಜಿಎಫ್ ಸಿನಿಮಾ ಬರುವ ಮುಂಚೆಯೇ ಅವರು ಕೆಜಿಎಫ್ ನೆಲದ ಕರುಣಾಜನಕ ನೈಜ ಕಥೆಯನ್ನು ಸಿನಿಮಾ ಮಾಡಲು ಹೊರಟಿದ್ದರಂತೆ. ಆದರೆ, ಕನ್ನಡದ ಕೆಜಿಎಫ್ ಸಿನಿಮಾ ಬಂದಿದ್ದರಿಂದ ಅದನ್ನು ಮುಂದೆಹಾಕಿದ್ದರಂತೆ. ಈ ವಿಷಯವನ್ನು ಸ್ವತಃ ರಂಜಿತ್ ಅವರೇ ಕಾನ್ ಫೆಸ್ಟಿವೆಲ್ ನಲ್ಲಿ ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಅಲ್ಲದೇ, ಕೆಜಿಎಫ್ ಸಿನಿಮಾದ ಪಾತ್ರಗಳು ಕಾಲ್ಪನಿಕವಾಗಿದ್ದವು. ರಂಜಿತ್ ಮಾಡಿರುವ ಕಥೆಯಲ್ಲಿ ಬಹುತೇಕ ಪಾತ್ರಗಳು ಆ ನೆಲದಲ್ಲಿ ಜೀವಿಸಿದ್ದವು ಎಂದಿದ್ದಾರೆ. ಇದನ್ನೂ ಓದಿ: ದಿಗಂತ್ ಡಿಸ್ಚಾರ್ಜ್ ಬೆನ್ನಲ್ಲೇ ಫ್ಯಾನ್ಸ್‌ಗೆ ಧನ್ಯವಾದ ತಿಳಿಸಿದ ನಟಿ ಐಂದ್ರಿತಾ ರೇ

    ಈಗಾಗಲೇ ಅವರು ಕಥೆಯನ್ನು ಬರೆದು ಮುಗಿಸಿದ್ದಾರಂತೆ. ಚಿಯಾನ್ ವಿಕ್ರಮ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರಂತೆ. ಕೆಜಿಎಫ್ ಹುಟ್ಟಿದ್ದು ಹೇಗೆ? ಚಿನ್ನಕ್ಕಾಗಿ ಬ್ರಿಟಿಷರು ಹೂಡಿದ್ದ ಆಟವೇನು? ಈ ನೆಲದಲ್ಲಿ ತಮಿಳಿಗರ ಪಾತ್ರ ಏನಾಗಿತ್ತು? ಹೀಗೆ ಹಲವು ಸಂಗತಿಗಳನ್ನು ಚಿತ್ರದಲ್ಲಿ ತೋರಿಸಲಿದ್ದಾರಂತೆ. ಕನ್ನಡಿಗರಿಗಿಂತಲೂ ತಮಿಳಿಗರನ್ನು ಕರೆತಂದು ಈ ಚಿನ್ನದ ಗಣಿಯಲ್ಲಿ ಬಿಡುತ್ತಿದ್ದರಂತೆ ಬ್ರಿಟಿಷರು. ಪ್ರಮುಖವಾಗಿ ಕಥೆಯನ್ನು ಅವರು ಹೇಳಲಿದ್ದಾರಂತೆ.

    Live Tv

  • ಪಾ ರಂಜಿತ್ ನಿರ್ದೇಶನದ ಹೊಸ ಚಿತ್ರದ ಟೈಟಲ್ ಪೋಸ್ಟರ್ ಲುಕ್ ಅನಾವರಣ

    ಪಾ ರಂಜಿತ್ ನಿರ್ದೇಶನದ ಹೊಸ ಚಿತ್ರದ ಟೈಟಲ್ ಪೋಸ್ಟರ್ ಲುಕ್ ಅನಾವರಣ

    ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಪಾ ರಂಜಿತ್ ಅವರ ಮುಂಬರುವ ‘ಜೆ ಬೇಬಿ’ ಚಿತ್ರದ ಟೈಟಲ್ ಪೋಸ್ಟರ್ ಇಂದು ಅನಾವರಣಗೊಂಡಿದೆ.

    ಕಳೆದ ವರ್ಷ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಬ್ಲಾಕ್‍ಬಸ್ಟರ್ ಹಿಟ್ ‘ಸರ್ಪಟ್ಟ ಪರಂಬರೈ’ ಚಿತ್ರವನ್ನು ನೀಡಿದ ರಂಜಿತ್ ಅವರು ತಮ್ಮ ಮುಂದಿನ ‘ನಚ್ಚತಿರಂ ನಗರಗಿರತ್ತು’ ಕಾಳಿದಾಸ್ ಜಯರಾಮ್ ಮತ್ತು ದುಶಾರಾ ವಿಜಯನ್ ಅಭಿನಯದ ಪ್ರಣಯ ಚಿತ್ರವನ್ನು ಕೂಡಾ ಪೂರ್ಣಗೊಳಿಸಿದ್ದಾರೆ. ಈ ವರ್ಷ ಬೇಸಿಗೆಯಲ್ಲಿ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.

    ಇದರ ಮಧ್ಯೆ, ರಂಜಿತ್ ನಿರ್ಮಾಪಕರಾಗಿಯೂ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಅವರು ‘ಜೆ ಬೇಬಿ’ ಎಂಬ ಚಮತ್ಕಾರಿ ಟೈಟಲ್‍ನ ಫಸ್ಟ್ ಲುಕ್ ಪೋಸ್ಟರ್ ಇದೀಗ ಅನಾವರಣಗೊಂಡಿದೆ.

    ‘ಜೆ ಬೇಬಿ’ ಚಿತ್ರದಲ್ಲಿ ಅಟ್ಟಕತಿ ದಿನೇಶ್ ಪ್ರಮುಖ ಪಾತ್ರದಲ್ಲಿ ಹಿರಿಯ ನಟಿ ಊರ್ವಶಿ ಮತ್ತು ‘ಲೊಲ್ಲು ಸಭೆ’ ಖ್ಯಾತಿಯ ಮಾರನ್ ಅವರು ಅಭಿನಯಿಸಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಸೂಚಿಸುವಂತೆ ಮೂವರು ಪ್ರಮುಖ ಪಾತ್ರಧಾರಿಗಳಾಗಿದ್ದಾರೆ. ಸುರೇಶ್ ಮಾರಿ ನಿರ್ದೇಶನದ ಈ ಚಿತ್ರಕ್ಕೆ ಟೋನಿ ಬ್ರಿಟ್ಟೋ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

  • ಕೆಜಿಎಫ್ ಟ್ರೈಲರ್ ನೋಡಿ ವಾವ್ ಅಂದ್ರು ಪಾ ರಂಜಿತ್!

    ಕೆಜಿಎಫ್ ಟ್ರೈಲರ್ ನೋಡಿ ವಾವ್ ಅಂದ್ರು ಪಾ ರಂಜಿತ್!

    ಬೆಂಗಳೂರು: ಈಗ ದೇಶಾದ್ಯಂತ ಮಂಡ್ಯ ಸೀಮೆಯ ಅಣ್ತಮ್ಮನ ಚಿತ್ರದ್ದೇ ಹವಾ. ಕೆಜಿಎಫ್ ಚಿತ್ರದ ಟ್ರೈಲರ್ ಬಗ್ಗೆ ಸಾಲು ಸಾಲಾಗಿ ಪರಭಾಷಾ ಚಿತ್ರರಂಗದ ಅತಿರಥ ಮಹಾರಥರೇ ಮೆಚ್ಚುಗೆಯ ಮಾತಾಡುತ್ತಿದ್ದಾರೆ. ಇದೀಗ ಕಬಾಲಿ ನಿರ್ದೇಶಕ ಪಾ. ರಂಜಿತ್ ಅವರ ಸರದಿ!

    ಕೆಜಿಎಫ್ ಚಿತ್ರದ ಟ್ರೈಲರ್ ನೋಡಿದಾಕ್ಷಣವೇ ಪಾ ರಂಜಿತ್ ಟ್ವಟರ್ ಮೂಲಕ ಹೊಗಳಿಕೆಯ ಮಾತಾಡಿದ್ದಾರೆ. ಇದೊಂದು ಅದ್ಭುತವಾದ ಟ್ರೈಲರ್ ಅಂದಿರೋ ರಂಜಿತ್ ಯಶ್ ಮತ್ತು ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ.

    ಕಾಳ, ಕಬಾಲಿಯಂಥಾ ಚಿತ್ರಗಳನ್ನು ನಿರ್ದೇಶನ ಮಾಡೋ ಮೂಲಕ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವವರು ಪಾ ರಂಜಿತ್. ಅಂಥವರೇ ಕೆಜಿಎಫ್ ಟ್ರೈಲರನ್ನು ಮೆಚ್ಚಿಕೊಂಡಿರೋದು ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆಯ ಸಂಗತಿ. ಅಂತೂ ಇಂಥಾದ್ದೊಂದು ಸಕಾರಾತ್ಮಕ ಬೆಳವಣಿಗೆಗೆ ಯಶ್ ಅಭಿನಯದ ಕೆಜಿಎಫ್ ಚಿತ್ರ ಶ್ರೀಕಾರ ಹಾಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews