Tag: ಪಾಲಿಕೆ ಸದಸ್ಯ

  • ಅಯೂಬ್‌ಖಾನ್ ಹತ್ಯೆ – ಎಫ್‌ಬಿಯಲ್ಲಿ ಬಿಲ್ಡಪ್ ಕೊಟ್ಟಿದ್ದ ಆರೋಪಿ ಮತೀನ್ ಖಾನ್ ಬಂಧನ

    ಅಯೂಬ್‌ಖಾನ್ ಹತ್ಯೆ – ಎಫ್‌ಬಿಯಲ್ಲಿ ಬಿಲ್ಡಪ್ ಕೊಟ್ಟಿದ್ದ ಆರೋಪಿ ಮತೀನ್ ಖಾನ್ ಬಂಧನ

    ಬೆಂಗಳೂರು: ಚಾಮರಾಜಪೇಟೆ ಮಾಜಿ ಕಾರ್ಪೊರೇಟರ್ ಪತಿ ಅಯೂಬ್ ಖಾನ್ ಹತ್ಯೆ ಆರೋಪಿ ಮತೀನ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

    ಇದೇ ತಿಂಗಳ ಜುಲೈ 13ರಂದು ಅಯೂಬ್ ಖಾನ್ ಹತ್ಯೆ ಮಾಡಲಾಗಿತ್ತು. 4 ದಿನಗಳಿಂದ ಮಂಡ್ಯ, ರಾಮನಗರ, ಕೋಲಾರ ಸೇರಿದಂತೆ ಹಲವು ಕಡೆಗಳಲ್ಲಿ ಸುತ್ತಾಡಿಕೊಂಡು ಆರೋಪಿ ಮತೀನ್ ಖಾನ್ ತಲೆಮರೆಸಿಕೊಂಡಿದ್ದ. ನಂತರ ನಾಜೀಮಾ ಖಾನ್ ಹಂತಕರ ತಲೆಗೆ 10 ಕೋಟಿ ಆಫರ್ ನೀಡಿರುವ ಬಗ್ಗೆ ವಿಡಿಯೋವೊಂದನ್ನು ಹರಿಬಿಟ್ಟಿದ್ದ. ಇದೀಗ ಕೆಂಗೇರಿ ಬಳಿ ಪೊಲೀಸರು ಮತೀನ್ ಖಾನ್‌ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಂತ್, ಪಾಂಡ್ಯ ಪರಾಕ್ರಮ ಭಾರತಕ್ಕೆ ಏಕದಿನ ಸರಣಿ – ಇಂಗ್ಲೆಂಡ್‍ಗೆ ತವರಿನಲ್ಲಿ ಮುಖಭಂಗ

    ಏನಿದು ಘಟನೆ?
    ಜುಲೈ 13 ರಂದು ಬೆಂಗಳೂರಿನ ಚಾಮರಾಜಪೇಟೆ ಬಳಿಯ ಟಿಪ್ಪು ನಗರದ ಮಾಜಿ ಕಾರ್ಪೋರೇಟರ್ ನಾಜಿಮಾ ಖಾನ್ ಪತಿ ಅಯೂಬ್ ಖಾನ್‌ನನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಖುದ್ದು ಅಯೂಬ್ ಖಾನ್ ಅಣ್ಣನ ಮಗ ಮತೀನ್ ಖಾನ್ ಚಾಕು ಇರಿದಿದ್ದ. ನಡುರಸ್ತೆಯಲ್ಲೇ ಕುಸಿದುಬಿದ್ದಿದ್ದ ಆಯೂಬ್ ಖಾನ್‌ನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರೂ ಬದುಕುಳಿಯಲಿಲ್ಲ. ಇದನ್ನೂ ಓದಿ: ಪರಿಹಾರದ ಹಣ ಪಡೆಯಲು ಜನರು ಉದ್ದೇಶಪೂರ್ವಕವಾಗಿ ಮನೆ ಬೀಳಿಸುತ್ತಿದ್ದಾರೆ – ತಹಶೀಲ್ದಾರ್ ಪತ್ರ ತಂದ ಅನುಮಾನ

    ನಂತರ ಪತಿಯ ಹತ್ಯೆ ಖಂಡಿಸಿದ ಪತ್ನಿ ನಾಜೀಮಾ ಖಾನ್ ತನ್ನ ಪತಿ ಹಂತಕರ ತಲೆ ಕಡಿದವರಿಗೆ 10 ಕೋಟಿ ಕೊಡುವುದಾಗಿ ಘೋಷಿಸಿದ್ದರು. ಇದಕ್ಕೆ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಒಂದಷ್ಟು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದ ಮತೀನ್ ಖಾನ್ `ಹತ್ತಾರು ವರ್ಷಗಳಿಂದ ಮಸೀದಿಯನ್ನು ಅಭಿವೃದ್ದಿ ಮಾಡಿದ್ದೆ, ಅಧ್ಯಕ್ಷ ಸ್ಥಾನ ಕೊಡ್ತಿನಿ ಅಂದಿದ್ದ ಚಿಕ್ಕಪ್ಪ ಅಯೂಬ್ ಖಾನ್ ಕೊನೆ ಕ್ಷಣದಲ್ಲಿ ತನ್ನ ಮಗನನ್ನು ಅಧ್ಯಕ್ಷನಾಗಿ ಮಾಡಿದ್ದ. ಆಗಲೂ ನಾನು ಸುಮ್ಮನಿದ್ದೆ. ಆದರೆ ಅಯೂಬ್ ಖಾನ್‌ಗೆ ನಾನು ಏರಿಯಾದಲ್ಲಿರೋದು ಇಷ್ಟ ಇರಲಿಲ್ಲ. ಇದೇ ಕಾರಣಕ್ಕೆ ಗಲಾಟೆ ತೆಗೆದು ನನಗೆ ತೊಂದರೆ ಕೊಡ್ತಿದ್ದ. ಕೊಲೆಯಾದ ದಿನ ಕೂಡ ಅಯೂಬ್ ಖಾನ್ ಮತ್ತು ಮಗ ಇಬ್ಬರು ನನ್ನ ಮೇಲೆ ಲಾಂಗ್‌ನಿಂದ ಹಲ್ಲೆ ಮಾಡೋಕೆ ಮುಂದಾದ್ರು. ಪ್ರಾಣ ರಕ್ಷಣೆ ವೇಳೆ ಚಾಕು ತಗುಲಿ ಅಯೂಬ್ ಖಾನ್ ಮೃತಪಟ್ಟರು. ಅಯೂಬ್ ಖಾನ್ ಹೆಂಡತಿ ನಾಜೀಮಾ, ನನ್ನ ತಲೆ ಕಡಿದು ತಂದವರಿಗೆ ಹತ್ತು ಕೋಟಿ ಕೊಡ್ತೀನಿ ಅಂತಾ ಸಾರ್ವಜನಿಕವಾಗಿ ಘೋಷಣೆ ಮಾಡಿದ್ದಾರೆ. ಆ 10 ಕೋಟಿನಾ, ಯಾರಿಗೆ ಕೊಡ್ತೀರಿ ಹೇಳಲಿ, ದರ್ಗಾದವರಿಗೆ, ನನ್ನ ಕುಟುಂಬದವರಿಗೆ ಕೊಡ್ತೀರಾ? ಒಂದು ಕೆಲಸ ಮಾಡಿ ಶಾಸಕ ಜಮೀರ್ ಅಹಮದ್ ಖಾನ್‌ಗೆ ಕೊಡಲಿ, ನಾನೇ ತಲೆ ಕಡಿದುಕೊಳ್ತೀನಿ’ ಎಂದು ಘೋಷಣೆ ಮಾಡಿದ್ದ.

    Live Tv
    [brid partner=56869869 player=32851 video=960834 autoplay=true]

  • ದಾವಣಗೆರೆ ಪಾಲಿಕೆ ಸದಸ್ಯನಿಗೆ ವಾರ್ನ್ ಮಾಡಿದ ಯಮ!

    ದಾವಣಗೆರೆ ಪಾಲಿಕೆ ಸದಸ್ಯನಿಗೆ ವಾರ್ನ್ ಮಾಡಿದ ಯಮ!

    ದಾವಣಗೆರೆ: ರಸ್ತೆಯಲ್ಲಿ ಬೈಕ್ ಚಲಿಸುತ್ತಿದ್ದಾಗ ಸಂಚಾರಿ ನಿಯಮಗಳನ್ನು ಪಾಲನೆ ಮಾಡದೇ ಬೈಕ್ ಚಲಾಯಿಸುತ್ತಿದ್ದ ಪಾಲಿಕೆ ಸದಸ್ಯನೊಬ್ಬರಿಗೆ ಯಮ ಕಿಂಕರರೇ ಆಗಮಿಸಿ ಸಂಚಾರಿ ನಿಯಮಗಳ ಬಗ್ಗೆ ತಿಳಿ ಹೇಳಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ನಗರದ ಜಯದೇವ ಸರ್ಕಲ್‍ನಲ್ಲಿ ಸಂಚಾರಿ ಪೊಲೀಸರು ರಾಷ್ಟ್ರೀಯ ರಸ್ತೆ ಸುರಕ್ಷತಾ ದಿನಾಚರಣೆಯ ಹಿನ್ನೆಲೆಯಲ್ಲಿ ಸಿಬ್ಬಂದಿಗೆ ಯಮ ಕಿಂಕರರ ವೇಷಭೂಷಣಗಳನ್ನು ಹಾಕಿಸಿ, ರಸ್ತೆ ಸಂಚಾರ ನಿಯಮಗಳನ್ನು ವಿನೂತನವಾಗಿ ಜನರಿಗೆ ಹಾಗೂ ಸವಾರರಿಗೆ ತಿಳಿ ಹೇಳುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಯಮಕಿಂಕರರು ಸಂಚಾರಿ ನಿಯಮ ಉಲ್ಲಂಘನೆ ಮಾಡುವವರಿಗೆ ಪಾಶ ಹಾಕಿ ಸಂಚಾರಿ ನಿಯಮಗಳ ಬಗ್ಗೆ ತಿಳಿ ಹೇಳುತ್ತಿದ್ದರು.

    ಅದೇ ರಸ್ತೆಯಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯ ಎ ನಾಗರಾಜ್ ರನ್ನು ಹಿಡಿದ ಯಮ ಕಿಂಕರರು, ಸಂಚಾರಿ ನಿಯಮಗಳ ಬಗ್ಗೆ ತಿಳಿ ಹೇಳಿದರು.

    ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದರೆ ನನ್ನ ಲೋಕಕ್ಕೆ ಕರೆದೊಯ್ಯುತ್ತೇನೆ ಎಂದು ವಾಹನ ಸವಾರರಿಗೆ ಹೆದರಿಸಿದರು. ಇದಕ್ಕೆ ಇನ್ನೊಮ್ಮೆ ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದಿಲ್ಲ ಎಂದು ಹೇಳಿ ಪಾಲಿಕೆ ಸದಸ್ಯ ಅಲ್ಲಿಂದ ಹೊರಟು ಹೋದರು. ಹೀಗೆ ಇನ್ನೂ ಕೆಲಕಾಲ ಹಾಸ್ಯದ ವಾತವರಣ ಸೃಷ್ಟಿಯಾಗಿತ್ತು.

  • ಜನರು ರಸ್ತೆಯಲ್ಲಿ ಕಸ ಹಾಕೋದನ್ನ ತಡೆಯಲು ಪಾಲಿಕೆ ಸದಸ್ಯ ಗಾಂಧಿಗಿರಿ ಶುರು ಮಾಡಿದ್ರು!

    ಜನರು ರಸ್ತೆಯಲ್ಲಿ ಕಸ ಹಾಕೋದನ್ನ ತಡೆಯಲು ಪಾಲಿಕೆ ಸದಸ್ಯ ಗಾಂಧಿಗಿರಿ ಶುರು ಮಾಡಿದ್ರು!

    ಮೈಸೂರು: ಜನರು ರಸ್ತೆಗಳಲ್ಲಿ ಕಸ ಹಾಕುವುದನ್ನು ತಡೆಯುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಸದಸ್ಯರೊಬ್ಬರು ಗಾಂಧಿಗಿರಿ ಶುರು ಮಾಡಿದ್ದಾರೆ.

    ವಾರ್ಡ್ ನಂಬರ್ 10ರ ಪಾಲಿಕೆ ಸದಸ್ಯ ಸುನೀಲ್ ಎಂಬವರು ಜನರು ಹೆಚ್ಚಾಗಿ ಕಸ ಹಾಕುವ ಪ್ರದೇಶದಲ್ಲಿ ರಾತ್ರಿ-ಹಗಲು ಕುಳಿತು ಗಾಂಧಿಗಿರಿಯನ್ನು ಆರಂಭಿಸಿದ್ದಾರೆ. ಚೆನ್ನಾಗಿರುವ ಸ್ಥಳವನ್ನೇ ಕಸ ಹಾಕುವ ಜಾಗ ಮಾಡಿಕೊಂಡಿದ್ದ ಸ್ಥಳೀಯರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕಸ ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ. ಇದರಿಂದ ಗಾಂಧಿಗಿರಿ ಶುರು ಮಾಡಿದೆ ಎಂದು ಪಾಲಿಕೆ ಸದಸ್ಯ ಸುನೀಲ್ ಅವರು ಹೇಳಿದ್ದಾರೆ.

    ನಗರದ ವಿದ್ಯಾರಣ್ಯಪುರಂನಲ್ಲಿ ಸಿಕ್ಕ-ಸಿಕ್ಕಲ್ಲಿ ಕಸ ಹಾಕುವ ಸ್ಥಳವನ್ನು ಸದಸ್ಯರೇ ಸಂಪೂರ್ಣವಾಗಿ ಸ್ವಚ್ಛ ಮಾಡಿ ರಂಗೋಲಿ ಬಿಡಿಸಿದ್ದಾರೆ. ನಂತರ ಅದೇ ಸ್ಥಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಿಡಿದು ಕುಳಿತಿದ್ದಾರೆ. ಸುನೀಲ್ ಅವರಿಗೂ ಕೆಲವು ಸ್ಥಳೀಯರು ಸಾಥ್ ನೀಡಿ ಜೊತೆಗೆ ಕುಳಿತಿದ್ದಾರೆ. ಬೆಳಗ್ಗೆಯಿಂದ ಅದೇ ಸ್ಥಳದಲ್ಲಿ ಕುಳಿತು ಜನರು ಕಸ ಹಾಕುವುದನ್ನು ತಪ್ಪಿಸುವ ಪ್ರಯತ್ನ ಆರಂಭಿಸಿದ್ದಾರೆ. ಈ ಪ್ರಯತ್ನ ಮಧ್ಯರಾತ್ರಿವರೆಗೂ ಮುಂದುವರಿಯಲಿದೆ.

    ಇದನ್ನು ಓದಿ: ಮೈಸೂರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಸು ಮಾಡಿದವರಿಗೆ ಸನ್ಮಾನ – ಕ್ಲೀನ್ ಸಿಟಿ ಹೆಸರುಳಿಸಲು ಅಭಿಯಾನ