Tag: ಪಾಲಿ

  • 6 ವರ್ಷಗಳ ಕಾಲ ಕುತ್ತಿಗೆಯಲ್ಲಿ ಟೈರ್ ಸಿಕ್ಕಿಸಿಕೊಂಡಿದ್ದ ಮೊಸಳೆಗೆ ಕೊನೆಗೂ ಸಿಕ್ತು ಮುಕ್ತಿ!

    6 ವರ್ಷಗಳ ಕಾಲ ಕುತ್ತಿಗೆಯಲ್ಲಿ ಟೈರ್ ಸಿಕ್ಕಿಸಿಕೊಂಡಿದ್ದ ಮೊಸಳೆಗೆ ಕೊನೆಗೂ ಸಿಕ್ತು ಮುಕ್ತಿ!

    ಪಾಲಿ: ಆರು ವರ್ಷಗಳಿಂದ ಕುತ್ತಿಗೆಗೆ ಟೈರ್ ಸಿಕ್ಕಿಕೊಂಡು ನೀರಿನಲ್ಲಿ ಓಡಾಡುತ್ತಿದ್ದ ಮೊಸಳೆಗೆ ಮುಕ್ತಿ ಸಿಕ್ಕಿದೆ.

    14 ಅಡಿ ಉದ್ದದ ಮೊಸಳೆ ಆರು ವರ್ಷಗಳಿಂದ ಕೊರಳಿಗೆ ಸಿಕ್ಕಿಹಾಕಿಕೊಂಡಿದ್ದ ಮೋಟಾರು ಸೈಕಲ್ ಟೈರ್‍ನೊಂದಿಗೆ ನೀರಿನಲ್ಲಿ ಓಡಾಡುತ್ತಿತ್ತು. ಮೊಸಳೆಯನ್ನು ನೋಡಿದ ಇಂಡೋನೇಷ್ಯಾದ ಪಕ್ಷಿ ಹಿಡಿಯುವವರೊಬ್ಬರು ಕೊನೆಗೂ ಟೈರ್‌ಯಿಂದ ಮುಕ್ತಿ ಕೊಡಿಸಿದ್ದಾರೆ. ಈ ಮಾಹಿತಿ ತಿಳಿದ ವನ್ಯಜೀವಿ ಸಂರಕ್ಷಣಾ ಅಧಿಕಾರಿಗಳು ಇದನ್ನು ಒಂದು ಮೈಲಿಗಲ್ಲು ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಈ ಹಿಂದೂ ಕುಟುಂಬ ಫೇಮಸ್..!

    ಎಲ್ಲಿತ್ತು?
    ಸೆಂಟ್ರಲ್ ಸುಲವೆಸಿಯ ರಾಜಧಾನಿ ಪಾಲು ನಗರದ ನದಿಯಲ್ಲಿ 4.5-ಮೀಟರ್(14.8-ಅಡಿ) ಹೆಣ್ಣು ಮೊಸಳೆ ಕಾಣಿಸಿಕೊಂಡಿದೆ. ಈ ವೇಳೆ ಅದರ ಕುತ್ತಿಗೆಯ ಸುತ್ತ ಟೈರ್ ಇರುವುದನ್ನು ಗ್ರಾಮಸ್ಥರು ಗುರುತಿಸಿದ್ದಾರೆ. ಇದು ಹೆಚ್ಚು ಬಿಗಿಯಾಗಿದ್ದು, ಮೊಸಳೆಗೆ ಉಸಿರುಗಟ್ಟಿಸುವ ಅಪಾಯವಿತ್ತು. ಈ ಹಿನ್ನೆಲೆ ಮೊಸಳೆಯನ್ನು ರಕ್ಷಿಸಲು ಅನೇಕ ಪ್ರಯತ್ನಗಳನ್ನು ಮಾಡಿದರೂ ಅವರಿಂದ ಏನೂ ಪ್ರಯೋಜನವಾಗಿಲ್ಲ.

     

    ಇತ್ತೀಚೆಗೆ ನಗರಕ್ಕೆ ತೆರಳಿದ 35 ವರ್ಷದ ಪಕ್ಷಿ ಕ್ಯಾಚರ್ ಮತ್ತು ವ್ಯಾಪಾರಿ ಟಿಲಿ ಅವರಿಗೆ ನೆರೆಹೊರೆಯವರು ಈ ಮೊಸಳೆ ಬಗ್ಗೆ ಹೇಳಿದ್ದಾರೆ. ಆಗ ಆತ ಈ ಮೊಸಳೆಯನ್ನು ರಕ್ಷಿಸಲು ನಿರ್ಧರಿಸಿದ್ದು, ಈತನಿಗೆ ಗ್ರಾಮಸ್ಥರು ಮತ್ತು ಸ್ನೇಹಿತರು ನೆರವಾಗಿದ್ದಾರೆ. ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಗಾಯಕಿ ರಿಹಾನ್ನಾ ಬೋಲ್ಡ್ ಡ್ರೆಸ್ – ನೆಟ್ಟಿಗರು ಗರಂ

    Indonesia crocodile finally freed from tire after six years - NewsBreak

    ಎಲ್ಲರ ಸಹಾಯದಿಂದ ಟಿಲಿ ಮೊಸಳೆಯನ್ನು ಬಂಧನದಿಂದ ಮುಕ್ತಿಕೊಟ್ಟಿದ್ದು, ಅಲ್ಲಿದ ಜನರೆಲ್ಲ ದೃಶ್ಯ ನೋಡಿ ಸಂತೋಷ ವ್ಯಕ್ತಪಡಿಸಿದರು. ನಂತರ ಈ ನಿವಾಸಿಗಳು ಅಗ್ನಿಶಾಮಕ ಸಿಬ್ಬಂದಿ ಮತ್ತು ವನ್ಯಜೀವಿ ಸಂರಕ್ಷಣಾ ಸಂಸ್ಥೆಯನ್ನು ಸಂಪರ್ಕಿಸಿ ಮೊಸಳೆಯನ್ನು ನೀರಿನಲ್ಲಿ ಬಿಟ್ಟಿದ್ದಾರೆ.