Tag: ಪಾಲಕ್ ಸೂಪ್

  • ಸುಲಭದ ಪಾಲಕ್ ಸೂಪ್ ಮಾಡಿ ರುಚಿ ನೋಡಿ

    ಸುಲಭದ ಪಾಲಕ್ ಸೂಪ್ ಮಾಡಿ ರುಚಿ ನೋಡಿ

    ದೀಗ ಚಳಿಯ ವಾತಾವರಣ ಹೆಚ್ಚಿದ್ದು, ಈ ವೇಳೆ ಯಾವಾಗಲೂ ಬಿಸಿಬಿಸಿಯಾದ ಅಡುಗೆ ಮಾಡಿ ಸವಿಯಬೇಕು ಎಂದು ಎಲ್ಲರಿಗೂ ಎನಿಸುತ್ತದೆ. ನಾವಿಂದು ಸುಲಭವಾಗಿ ಮಾಡಬಹುದಾದ ಕ್ರೀಮಿ ಪಾಲಕ್ ಸೂಪ್ (Palak Soup) ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೀವೊಮ್ಮೆ ಇದನ್ನು ಮಾಡಿ ರುಚಿ ನೋಡಿ. ಮೈ ಕೊರೆಯುವ ಚಳಿಗೆ ಸೂಪ್ ಅನ್ನು ಆನಂದಿಸಿ.

    ಬೇಕಾಗುವ ಪದಾರ್ಥಗಳು:
    ಪಾಲಕ್ ಸೊಪ್ಪು – 2 ಕಪ್
    ಹಸಿರು ಬಟಾಣಿ – 1 ಕಪ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಶುಂಠಿ – 1 ಇಂಚು
    ಹೆಚ್ಚಿದ ಬೆಳ್ಳುಳ್ಳಿ – 2
    ಸೀಳಿದ ಹಸಿ ಮೆಣಸಿನಕಾಯಿ – 2
    ಹಾಲು – ಅರ್ಧ ಕಪ್
    ಕಾರ್ನ್ ಫ್ಲೋರ್ – ಅರ್ಧ ಟೀಸ್ಪೂನ್
    ಕರಿಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಬೆಣ್ಣೆ – 1 ಟೀಸ್ಪೂನ್
    ಕ್ರೀಂ – 2 ಟೀಸ್ಪೂನ್ ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್‌ನ ಟೇಸ್ಟಿ ಪನೀರ್ ಪಸಂದ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಹೆಚ್ಚಿಟ್ಟುಕೊಳ್ಳಿ.
    * ಒಂದು ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಬೆಣ್ಣೆ ಬಿಸಿ ಮಾಡಿ ಬಳಿಕ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸು ಹಾಕಿ 2-3 ನಿಮಿಷ ಫ್ರೈ ಮಾಡಿ.
    * ಈಗ ಹಸಿರು ಬಟಾಣಿ ಹಾಗೂ ಪಾಲಕ್ ಸೊಪ್ಪು ಹಾಕಿ 1-2 ನಿಮಿಷ ಹುರಿಯಿರಿ.
    * ಈಗ 1 ಕಪ್ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
    * ಬಳಿಕ ಮಧ್ಯಮ ಉರಿಯಲ್ಲಿ 2-3 ನಿಮಿಷ ಆಗಾಗ ಕೈಯಾಡಿಸುತ್ತಾ ಕುದಿಸಿಕೊಳ್ಳಿ.
    * ಈಗ ಮಿಶ್ರಣವನ್ನು ತಣ್ಣಗಾಗಲು ಬಿಡಿ.

    * ಮಿಶ್ರಣ ಸಂಪೂರ್ಣ ತಣ್ಣಗಾದ ಬಳಿಕ ಅದನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ನಯವಾದ ಪೇಸ್ಟ್ ತಯಾರಿಸಿ.
    * ಈಗ ಪೇಸ್ಟ್ ಅನ್ನು ಮತ್ತೆ ಪ್ಯಾನ್‌ಗೆ ವರ್ಗಯಿಸಿ, ಸ್ವಲ್ಪ ನೀರು ಸೇರಿಸಿ, ಮಧ್ಯಮ ಉರಿಯಲ್ಲಿ ಮಿಶ್ರಣ ಮಾಡುತ್ತಾ ಕುದಿಸಿಕೊಳ್ಳಿ.
    * ನೀವು ಸೂಪ್ ದಪ್ಪವಾಗಿಸಲು ಬಯಸುತ್ತೀರಾದರೆ ಕಾರ್ನ್ ಫ್ಲೋರ್ ಅನ್ನು ಹಾಲಿನಲ್ಲಿ ಹಾಕಿ ಮಿಶ್ರಣ ಮಾಡಿ, ಬಳಿಕ ಸೂಪ್‌ಗೆ ಸೇರಿಸಿ. ನಿಮಗೆ ಸೂಪ್ ದಪ್ಪ ಬೇಡ ಎನಿಸಿದರೆ ಈ ಹಂತವನ್ನು ಬಿಡಬಹುದು.
    * ಈಗ ಸೂಪ್‌ಗೆ ಉಪ್ಪು ಹಾಗೂ ಕರಿಮೆಣಸಿನ ಪುಡಿ ಸೇರಿಸಿ, ಮಿಶ್ರಣ ಮಾಡಿ.
    * ಅಗತ್ಯವಿದ್ದರೆ ಇನ್ನಷ್ಟು ನಿರು ಸೇರಿಸಿ, ಸ್ಥಿರತೆಯನ್ನು ಹೊಂದಿಸಿ. ಬಳಿಕ 4-5 ನಿಮಿಷ ಕುದಿಸಿ.
    * ಕೊನೆಯಲ್ಲಿ ಕ್ರೀಂ ನಿಂದ ಸೂಪ್ ಅನ್ನು ಅಲಂಕರಿಸಿ, ಪಾಲಕ್ ಸೊಪ್ಪಿನ ಸೂಪ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಕ್ರಿಸ್ಮಸ್ ಸ್ಪೆಷಲ್ – ತಂದೂರಿ ಚಿಕನ್ ಮಾಡುವುದು ಹೇಗೆ?

    Live Tv
    [brid partner=56869869 player=32851 video=960834 autoplay=true]