Tag: ಪಾಲಕ್ ಪಲಾವ್

  • ಪಾಲಕ್ ಪಲಾವ್ ಮಾಡುವ ಸರಳ ವಿಧಾನ ನಿಮಗಾಗಿ

    ಪಾಲಕ್ ಪಲಾವ್ ಮಾಡುವ ಸರಳ ವಿಧಾನ ನಿಮಗಾಗಿ

    ಇಂದು ಮಾಡುವ ಅಡುಗೆಗಳೆಲ್ಲವು ಮಸಾಲೆ ಪದಾರ್ಥಗಳನ್ನು ಒಳಗೊಂಡಿರುತ್ತದೆ. ಇಂದು ನಾವು ಪೋಷಕಾಂಶಗಳನ್ನು ಒಳಗೊಂಡಿರುವ ಸೊಪ್ಪನ್ನು ಬಳಕೆ ಮಾಡಿಕೊಂಡು ಬೆಳಗ್ಗಿನ ತಿಂಡಿಗೆ ಅಡುಗೆ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಬನ್ನಿ ಇನ್ಯಾಕೆ ತಡ ಪಾಲಕ್ ಪಲಾವ್ ಮಾಡುವ ಸರಳ ವಿಧಾನ ನೋಡೋಣ

    ಬೇಕಾಗುವ ಸಾಮಗ್ರಿಗಳು:
    * ಪಾಲಕ್ ಸೊಪ್ಪು – ಎರಡು ಕಟ್ಟು
    * ಚೆಕ್ಕೆ, ಏಲಕ್ಕಿ, ಲವಂಗ – ಸ್ವಲ್ಪ
    * ಕಾಳುಮೆಣಸು- ಸ್ವಲ್ಪ
    * ದಾಲ್ಚಿನ್ನಿ ಎಲೆ – ಒಂದು
    * ಜೀರಿಗೆ- 1 ಚಮಚ
    * ಟೊಮೆಟೋ – 1
    * ತುಪ್ಪ- ಅರ್ಧ ಕಪ್
    * ಹಸಿಮೆಣಸಿನಕಾಯಿ- 4
    * ಅರಿಶಿಣ- 1 ಚಮಚ
    * ದಿನಿಯಾ ಪೌಡರ್- 1 ಚಮಚ
    * ಜೀರಿಗೆ ಪುಡಿ- 1 ಚಮಚ
    * ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಕುಕ್ಕರ್‌ಗೆ ತುಪ್ಪ, ದಾಲ್ಚಿನ್ನಿ ಎಲೆ, ಜೀರಿಗೆ, ಹಸಿಮೆಣಸು, ಏಲಕ್ಕಿ, ಕಾಳುಮೆಣಸು, ಚೆಕ್ಕೆ ಹಾಕಿ ಹುರಿಯಿರಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ನಂತರ ಪಾಲಕ್ ಸೊಪ್ಪು, ಟೊಮೆಟೋ, ಉಪ್ಪು, ಅರಿಶಿನ, ದನಿಯಾ ಪುಡಿ, ಜೀರಿಗೆ ಪುಡಿ ಹಾಕಿ ಕೊಂಚ ಸಮಯ ಬೇಯಿಸಿಕೊಳ್ಳಿ.

    * ನಂತರ ಕುಕ್ಕರ್‌ಗೆ ಅಕ್ಕಿ ಹಾಗೂ ಅಳತೆಗೆ ತಕ್ಕಂತೆ ನೀರು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ ಬೇಯಿಸಿದರೆ ಪಾಲಕ್ ಪಲಾವ್ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಮೆಲೆನಾಡ ಸ್ಪೆಷಲ್ ಮಾವಿನಕಾಯಿ ಅಪ್ಪೆಹುಳಿ ಮಾಡುವ ವಿಧಾನ