Tag: ಪಾಲಕ್ ಪನೀರ್

  • ಹೋಟೆಲ್ ಶೈಲಿಯ ಪಾಲಕ್ ಪನೀರ್ ಹೀಗೆ ಮಾಡಿ

    ಹೋಟೆಲ್ ಶೈಲಿಯ ಪಾಲಕ್ ಪನೀರ್ ಹೀಗೆ ಮಾಡಿ

    ಹೋಟೆಲ್‌ಗಳಲ್ಲಿ ಸಾಮಾನ್ಯವಾಗಿ ರೋಟಿ, ಬಟರ್ ನಾನ್, ಕುಲ್ಚಾ ಮುಂತಾದ ಆಹಾರಗಳೊಂದಿಗೆ ಗ್ರೇವಿ ತಿಂದಿರುತ್ತೀರಿ. ಗ್ರೇವಿಗಳಲ್ಲಿ ಅನೇಕ ವಿಧಗಳಿವೆ. ಕಾಜೂ ಗ್ರೇವಿ, ಪನೀರ್ ಗ್ರೇವಿ, ಪಾಲಕ್ ಪನೀರ್ ಮುಂತಾದವುಗಳು ರೋಟಿಗಳಿಗೆ ಅದ್ಭುತ ಕಾಂಬಿನೇಷನ್ ಆಗಿದೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಾಲಕ್ ಪನೀರ್ ಯಾವ ರೀತಿ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವರೀತಿ ತಯಾರಿಸುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ರಿಚ್ ಫ್ಲೇವರ್‌ನ ನವಾಬಿ ಪನೀರ್

    ಬೇಕಾಗುವ ಸಾಮಗ್ರಿಗಳು:
    ಪಾಲಕ್ ಸೊಪ್ಪು – 1 ಕಪ್
    ಪನೀರ್ ಕ್ಯೂಬ್ಸ್ – 100 ಗ್ರಾಂ
    ಪಲಾವ್ ಎಲೆ -2
    ಜೀರಿಗೆ – ಅರ್ಧ ಚಮಚ
    ಚೆಕ್ಕೆ – ಸ್ವಲ್ಪ
    ಏಲಕ್ಕಿ – 1
    ಬೆಣ್ಣೆ – 2 ಚಮಚ
    ಕಸೂರಿ ಮೇತಿ – 2 ಚಮಚ
    ಹಸಿರು ಮೆಣಸಿನ ಕಾಯಿ – 3
    ಬೆಳ್ಳುಳ್ಳಿ – 5 ಎಸಳು
    ಶುಂಠಿ – ಅರ್ಧ ಇಂಚು
    ಗರಂ ಮಸಾಲ – ಅರ್ಧ ಚಮಚ
    ಅಚ್ಚ ಖಾರದ ಪುಡಿ – ಅರ್ಧ ಚಮಚ
    ಅರಶಿಣ – ಕಾಲು ಚಮಚ
    ಫ್ರೆಶ್ ಕ್ರೀಮ್ – 2 ಚಮಚ
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಟೊಮೆಟೊ – 1
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:
    * ಮೊದಲಿಗೆ ಒಂದು ಪಾತ್ರೆಯಲ್ಲಿ ನೀರು ಕಾಯಲು ಇಟ್ಟು ಕುದಿಯಲು ಆರಂಭವಾದ ಬಳಿಕ ಅದಕ್ಕೆ ಪಾಲಕ್ ಸೊಪ್ಪನ್ನು ಹಾಕಿ 3 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.
    * ಬಳಿಕ ಅದನ್ನು ಬಿಸಿನೀರಿನಿಂದ ತೆಗೆದು ತಣ್ಣಿರಿಗೆ ಹಾಕಿಕೊಳ್ಳಿ. ಬಳಿಕ ಪಾಲಕ್ ಸೊಪ್ಪನ್ನು ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು, ಅದಕ್ಕೆ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿಕೊಳ್ಳಿ. ಬಳಿಕ ಅರ್ಧ ಲೋಟ ನೀರನ್ನು ಸೇರಿಸಿಕೊಂಡು ಚನ್ನಾಗಿ ರುಬ್ಬಿಕೊಳ್ಳಿ.
    * ಈಗ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ 2 ಚಮಚ ಬೆಣ್ಣೆ ಹಾಕಿಕೊಳ್ಳಿ. ಬೆಣ್ಣೆ ಕರಗಿದ ಬಳಿಕ ಅದಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿಕೊಳ್ಳಿ. ಬಿಸಿಯಾದ ಬಳಿಕ ಅದಕ್ಕೆ ಪನೀರ್ ಅನ್ನು ಹಾಕಿಕೊಂಡು 2ರಿಂದ 3 ನಿಮಿಷ ಫ್ರೈ ಮಾಡಿಕೊಳ್ಳಿ.
    * ಬಳಿಕ ಪನೀರ್ ಅನ್ನು ಒಂದು ಪ್ಲೇಟ್‌ನ್ಲಲಿ ತೆಗೆದಿಡಿ. ಈಗ ಅದೇ ಪ್ಯಾನ್‌ಗೆ ಚೆಕ್ಕೆ, ಜೀರಿಗೆ, ಪಲಾವ್ ಎಲೆ, ಏಲಕ್ಕಿ ಹಾಕಿಕೊಂಡು ಅದಕ್ಕೆ ಹೆಚ್ಚಿದ ಈರುಳ್ಳಿಯನ್ನು ಹಾಕಿಕೊಳ್ಳಿ.
    * ಈರುಳ್ಳಿ ಗೋಲ್ಡನ್ ಬಣ್ಣ ಬಂದ ಬಳಿಕ ಅದಕ್ಕೆ ಹೆಚ್ಚಿದ ಟೊಮೊಟೊ ಹಾಕಿಕೊಂಡು ಚನ್ನಾಗಿ ಬೇಯಿಸಿಕೊಳ್ಳಿ. ಬಳಿಕ ಇದಕ್ಕೆ ಅರಶಿಣ, ಅಚ್ಚಖಾರದ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
    * ಈಗ ಇದಕ್ಕೆ ರುಬ್ಬಿದ ಪಾಲಕ್ ಮಿಶ್ರಣವನ್ನು ಹಾಕಿಕೊಳ್ಳಿ. ಮಿಶ್ರಣ ಚನ್ನಾಗಿ ಕುದಿದ ಬಳಿಕ ಅದಕ್ಕೆ ಪನೀರ್ ಅನ್ನು ಸೇರಿಸಿಕೊಳ್ಳಿ. ಬಳಿಕ ಅದಕ್ಕೆ ಫ್ರೆಶ್ ಕ್ರೀಮ್ ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ.
    * ನಂತರ ಇದಕ್ಕೆ ಗರಂ ಮಸಾಲೆಯನ್ನು ಹಾಕಿಕೊಳ್ಳಿ. ಈಗ ಇದಕ್ಕೆ ಕಸೂರಿ ಮೇತಿಯನ್ನು ಸೇರಿಸಿಕೊಂಡು 2 ನಿಮಿಷಗಳ ಕಾಲ ಮೀಡಿಯಮ್ ಫ್ಲೇಮ್‌ನಲ್ಲಿ ಕುದಿಸಿಕೊಳ್ಳಿ.
    * ಈಗ ಇದನ್ನು ಒಂದು ಸರ್ವಿಂಗ್ ಬೌಲ್‌ಗೆ ಹಾಕಿಕೊಂಡು ಬಿಸಿಬಿಸಿಯಾಗಿ ಸರ್ವ್ ಮಾಡಿ. ಇದನ್ನೂ ಓದಿ: ಕಾಶ್ಮೀರಿ ಪಿಂಕ್ ಚಹಾ ಟ್ರೈ ಮಾಡಿದ್ದೀರಾ?

  • ರೆಸ್ಟೋರೆಂಟ್ ಶೈಲಿಯಲ್ಲಿ ಮಾಡಿ ಸವಿಯಿರಿ ‘ಪಾಲಕ್ ಪನೀರ್’

    ರೆಸ್ಟೋರೆಂಟ್ ಶೈಲಿಯಲ್ಲಿ ಮಾಡಿ ಸವಿಯಿರಿ ‘ಪಾಲಕ್ ಪನೀರ್’

    ನೀರ್‌ನಲ್ಲಿ ಸಾಕಷ್ಟು ಪೋಷಕಾಂಶವಿರುತ್ತೆ. ಇತ್ತೀಚೆಗೆ ಪನೀರ್‌ನಲ್ಲಿ ಮಾಡುವ ಎಲ್ಲ ತಿನಿಸುಗಳು ಸಖತ್ ಟ್ರೆಂಡಿಯಾಗುತ್ತಿದೆ. ಇಂದು ನಾವು ನಿಮಗೆ ಹೆಚ್ಚು ಪ್ರಚಲಿತದಲ್ಲಿರುವ ‘ಪಾಲಕ್ ಪನೀರ್’ ಮಾಡುವ ವಿಧಾನವನ್ನು ಹೇಳಿಕೊಡುತ್ತಿದ್ದೇವೆ. ಇದನ್ನು ಮಾಡುವುದು ತುಂಬಾ ಸುಲಭವಾಗಿರುತ್ತೆ.

    ಬೇಕಾಗಿರುವ ಪದಾರ್ಥಗಳು:
    * ಒಂದು ಕಟ್ಟು ಪಾಲಕ್ ಸೊಪ್ಪು
    * ಕಟ್ ಮಾಡಿದ ಟೊಮೆಟೊ – 1
    * ಬೆಳ್ಳುಳ್ಳಿ, ಲವಂಗವನ್ನು – 5
    * ಶುಂಠಿ – 1 ಇಂಚು
    * ಹಸಿರು ಮೆಣಸಿನಕಾಯಿ – 1
    *ಎಣ್ಣೆ – 2 ಚಮಚ

     * ಕಟ್ ಮಾಡಿದ ಈರುಳ್ಳಿ – 1
    * ನೀರು – 1/2 ಕಪ್
    * ಗರಂ ಮಸಾಲಾ – 3/4-1 ಟೀ ಚಮಚ
    * ಅರಿಶಿನ ಪುಡಿ – 1/4 ಟೀ ಚಮಚ
    * ಕೆಂಪು ಮೆಣಸಿನಪುಡಿ – 1/4 ಟೀ ಚಮಚ
    * ರುಚಿಗೆ ತಕ್ಕಷ್ಟು ಉಪ್ಪು


    * ಕೆನೆ – 1 ಕಪ್
    * ಪನೀರ್ – 225 ಗ್ರಾಂ
    * ಕಸೂರಿ ಮೇಥಿ ಪುಡಿ – 1/2 ಚಮಚ
    * ನಿಂಬೆ ರಸ – 2 ಚಮಚ

    ಮಾಡುವ ವಿಧಾನ:
    * ಕುದಿಯುವ ನೀರಿಗೆ ಸ್ವಲ್ಪ ಉಪ್ಪು ಮತ್ತು ಪಾಲಕ್ ಎಲೆಗಳನ್ನು ಹಾಕಿ. ಪಾಲಕ್ ಎಲೆಗಳನ್ನು 2 ರಿಂದ 3 ನಿಮಿಷಗಳ ಕಾಲ ತಣ್ಣಗಾಗಲು ಬಿಡಿ
    * ನಂತರ ಒಂದು ಬಾಣಲೆಗೆ ಟೊಮೆಟೊ, ಲವಂಗ ಬೆಳ್ಳುಳ್ಳಿ, ಶುಂಠಿ ಮತ್ತು ಹಸಿರು ಮೆಣಸಿನಕಾಯಿ ಮತ್ತು ಪಾಲಕ್ ಹಾಕಿ ಹುರಿಯಿರಿ. ಈ ಮಿಶ್ರಣವನ್ನು ರುಬ್ಬಿಕೊಳ್ಳಿ.
    * ಮಧ್ಯಮ ಉರಿಯಲ್ಲಿ ಪ್ಯಾನ್ ಅನ್ನು ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ ಅದಕ್ಕೆ ಬೆಳ್ಳುಳ್ಳಿ, ಲವಂಗವನ್ನು ಸೇರಿಸಿ ಕಂದು ಬಣ್ಣ ಬರುವವರೆಗೂ ಹುರಿಯಿರಿ. ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ.


    * ಇದಕ್ಕೆ ಪಾಲಕ್ ಮಿಶ್ರಣವನ್ನು ಸೇರಿಸಿ, ಮಿಕ್ಸ್ ಮಾಡಿ, ಸುಮಾರು 1/2 ಕಪ್ ನೀರು ಸೇರಿಸಿ. ಪ್ಯಾನ್ ಮುಚ್ಚಿ ಮತ್ತು ಮಧ್ಯಮ ಉರಿಯಲ್ಲಿ 10 ನಿಮಿಷ ಬೇಯಿಸಿ.
    * ಪಾಲಕ್ ಮಿಶ್ರಣ ಕುದಿಯುವವರೆಗೂ ಚೆನ್ನಾಗಿ ಬೇಯಿಸಿದ ನಂತರ, ಗರಂ ಮಸಾಲಾ, ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ ಮತ್ತು ಉಪ್ಪು ಸೇರಿಸಿ 1 ನಿಮಿಷ ಬೇಯಿಸಿ. ಒಂದು ವೇಳೆ ನಿಮಗೆ ಇಷ್ಟವಿದ್ರೆ ಸಕ್ಕರೆ ಸೇರಿಸಿ.
    * ಕೆನೆ, ಪನೀರ್ ಬೆರೆಸಿ ಮಿಶ್ರಣ ಮಾಡಿ 3 ರಿಂದ 4 ನಿಮಿಷಗಳ ಕಾಲ ಕುದಿಯಲು ಬಿಡಿ. ಅದಕ್ಕೆ ನಿಂಬೆ ರಸ ಮತ್ತು ಕಸೂರಿ ಮೇಥಿ ಸೇರಿಸಿ ಮಿಶ್ರಣ ಮಾಡಿ.

    ಪಾಲಕ್ ಪನೀರ್ ಅನ್ನು ನಾನ್ ಅಥವಾ ರೋಟಿ ಅಥವಾ ಅನ್ನದೊಂದಿಗೆ ಬಿಸಿಯಾಗಿ ಬಡಿಸಿ.