Tag: ಪಾಲಕ್ ದೋಸೆ

  • ಗರಿಗರಿಯಾಗಿ ಮಾಡಿ ಪಾಲಕ್ ದೋಸೆ

    ಗರಿಗರಿಯಾಗಿ ಮಾಡಿ ಪಾಲಕ್ ದೋಸೆ

    ದೋಸೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುತ್ತಾರೆ. ಚಳಿಗೆ ಬಿಸಿಬಿಸಿ ದೋಸೆ ಅದರಲ್ಲೂ ಗರಿಗರಿಯಾದ ದೋಸೆ ತಿನ್ನುವ ಮಜಾನೇ ಬೇರೆ. ದೋಸೆಗಳಲ್ಲಿ ಹಲವಾರು ಬಗೆಯಿವೆ. ಇವತ್ತಿನ ನಮ್ಮ ರೆಸಿಪಿಯಲ್ಲಿ ಪಾಲಕ್ ದೋಸೆ ಹೇಗೆ ಮಾಡುವುದೆಂದು ತಿಳಿಸಿಕೊಡುತ್ತೇವೆ. ನೀವೂ ಕೂಡಾ ಇದನ್ನು ನಿಮ್ಮ ಮನೆಯಲ್ಲಿ ಬ್ರೇಕ್‌ಫಾಸ್ಟ್‌ಗೆ ಟ್ರೈ ಮಾಡಿ ನೋಡಿ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂದು ತಿಳಿದುಕೊಳ್ಳೋಣ. ಇದನ್ನೂ ಓದಿ: ಮಳೆಗಾಲದ ತಂಪಲ್ಲಿ ಸವಿಯಿರಿ ಚಾಕೊಲೇಟ್ ಫಲೂಡಾ!

    ಬೇಕಾಗುವ ಸಾಮಾಗ್ರಿಗಳು:
    ಗೋಧಿ ಹಿಟ್ಟು – 2 ಕಪ್
    ಕಡ್ಲೆ ಹಿಟ್ಟು – 2 ಕಪ್
    ಗಟ್ಟಿ ಮಜ್ಜಿಗೆ – 1 ಕಪ್
    ಪಾಲಕ್ ಸೊಪ್ಪು – 2 ಕಟ್ಟು
    ಹಸಿ ಶುಂಠಿ – ಸ್ವಲ್ಪ
    ಹಸಿ ಮೆಣಸಿನಕಾಯಿ – 12
    ಈರುಳ್ಳಿ – 2
    ಉಪ್ಪು – ರುಚಿಗೆ ತಕ್ಕಷ್ಟು
    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಾಡುವ ವಿಧಾನ:

    * ಮೊದಲಿಗೆ ಪಾಲಕ್ ಸೊಪ್ಪನ್ನು ತೊಳೆದು ಬಿಡಿಸಿ, ಸಣ್ಣಗೆ ಹೆಚ್ಚಿಕೊಳ್ಳಿ.
    * ಬಳಿಕ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಹೆಚ್ಚಿಕೊಳ್ಳಿ.
    * ನಂತರ ಒಂದು ಪಾತ್ರೆಯಲ್ಲಿ ಕಡಲೆಹಿಟ್ಟು ಮತ್ತು ಗೋಧಿ ಹಿಟ್ಟನ್ನು ಹಾಕಿಕೊಂಡು ಅದಕ್ಕೆ ಹೆಚ್ಚಿದ ತರಕಾರಿಗಳನ್ನು ಹಾಕಿಕೊಳ್ಳಿ.
    * ಬಳಿಕ ಅದಕ್ಕೆ ಮಜ್ಜಿಗೆ, ಉಪ್ಪು ಮತ್ತು ನೀರನ್ನು ಸೇರಿಸಿಕೊಂಡು ದೋಸೆ ಹಿಟ್ಟಿನ ಹದಕ್ಕೆ ಕಲಸಿ.
    * ಒಗ್ಗರಣೆ ಇಷ್ಟಪಡುವವರು ಇದಕ್ಕೆ ಒಗ್ಗರಣೆ ಸೇರಿಸಿಕೊಳ್ಳಬಹುದು.
    * ಬಳಿಕ ತವಾ ಬಿಸಿಗೆ ಇಟ್ಟು ಕಾದಮೇಲೆ ಎಣ್ಣೆಯನ್ನು ಸವರಿಕೊಂಡು ದೋಸೆಯನ್ನು ಹುಯ್ಯಿರಿ.
    * ದೋಸೆ ಬೆಂದ ಬಳಿಕ ಅದನ್ನು ತಿರುವಿ ಹಾಕಿ ಬೇಯಿಸಿಕೊಳ್ಳಿ.
    * ಈಗ ಗರಿಗರಿಯಾದ ಪಾಲಕ್ ದೋಸೆ ತಿನ್ನಲು ರೆಡಿ.
    * ಇದನ್ನು ಒಂದು ಪ್ಲೇಟ್‌ನಲ್ಲಿ ಹಾಕಿ ಚಟ್ನಿಯೊಂದಿಗೆ ಸವಿಯಲು ಕೊಡಿ. ಇದನ್ನೂ ಓದಿ: ಕುರುಕಲು ತಿಂಡಿಗೆ ಹಠ ಹಿಡಿಯೋ ಮಕ್ಕಳಿಗಾಗಿ ಮಾಡಿ ರಿಬ್ಬನ್ ಸೇವ್

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಆರೋಗ್ಯಕರವಾದ ಬಿಸಿಯಾದ ಪಾಲಕ್ ದೋಸೆ

    ಆರೋಗ್ಯಕರವಾದ ಬಿಸಿಯಾದ ಪಾಲಕ್ ದೋಸೆ

    ರಾಗಿ, ಗೋಧಿ ಎಂದು ವಿಧ ವಿಧವಾದ ದೋಸೆ ಮಾಡುವ ನಾವು ಪಾಲಕ್ ದೋಸೆ ಮಾಡಲು ಒಮ್ಮೆ ಟ್ರೈ ಮಾಡಬಹುದಾಗಿದೆ.  ಪಾಲಕ್  ಸೊಪ್ಪನ್ನು ಬಳಸಿ ನೀವು ರುಚಿ ರುಚಿಯಾದ ದೋಸೆ ಮಾಡಬಹುದು.  ನಿಮ್ಮ ಹಸಿವನ್ನು ಇಂಗಿಸಿ ನಾಲಗೆಯಲ್ಲಿ ಆ ರುಚಿ ಇನ್ನೂ ಇರುವಂತೆ ಈ ದೋಸೆ ಮಾಡುತ್ತದೆ. ರಾಗಿ ದೋಸೆ, ಗೋಧಿ ದೋಸೆಗಳಿಗಿಂತ ಈ ದೋಸೆ ವಿಭಿನ್ನವಾಗಿದೆ.


    ಬೇಕಾಗುವ ಸಾಮಗ್ರಿಗಳು:
    * ಪಾಲಕ್ ಸೊಪ್ಪು- 1 ಕಟ್ಟು
    * ರುಬ್ಬಿದ ದೋಸೆ ಹಿಟ್ಟು – 2ಕಪ್
    * ಅಡುಗೆ ಎಣ್ಣೆ- ಅರ್ಧ ಕಪ್
    * ರುಚಿಗೆ ತಕ್ಕಷ್ಟು ಉಪ್ಪು
    * ಈರುಳ್ಳಿ-1
    * ಜೀರಿಗೆ- ಸ್ವಲ್ಪ
    * ಬೆಳ್ಳುಳ್ಳಿ- 1
    * ಕೊತ್ತಂಬರಿ ಸೊಪ್ಪು- ಸ್ವಲ್ಪ
    * ಹಸಿಮೆಣಸಿನಕಾಯಿ-4
    * ಮೆಣಸಿನಪುಡಿ- ಸ್ವಲ್ಪ  ಇದನ್ನೂ ಓದಿ:  ನೀವೂ ಮಾಡಿ ಗರಿಗರಿಯಾದ ಚಿಕನ್ ಪಕೋಡಾ

    ಮಾಡುವ ವಿಧಾನ:
    * ಒಂದು ಬಾಣಲೆಗೆ ಅಡುಗೆ ಎಣ್ಣೆಯನ್ನು ಹಾಕಿ ಜೊತೆಗೆ ತೊಳೆದ ಪಾಲಕ್ ಸೊಪ್ಪು ಹಾಕಿ ಬಾಡುವ ತನಕ ಹುರಿಯಿರಿ.
    * ನಂತರ ಒಂದು ಮಿಕ್ಸಿಯಲ್ಲಿ ಸೊಪ್ಪು ಮತ್ತು ಉಪ್ಪನ್ನು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಇದನ್ನೂ ಓದಿ:  ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ

    * ನಂತರ ಒಂದು ಚಿಕ್ಕ ಪಾತ್ರೆ ಅಥವಾ ಬಾಣಲೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ ಇದಕ್ಕೆ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನ ಪುಡಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ. ಎಲ್ಲ ಪದಾರ್ಥಗಳು ಆರಿದ ನಂತರ ಮತ್ತೊಮ್ಮೆ ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

    * ನಂತರ ಒಂದು ಪಾತ್ರೆಯಲ್ಲಿ ದೋಸೆಹಿಟ್ಟನ್ನು ಹಾಕಿ ಇದಕ್ಕೆ ಪಾಲಕ್ ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಕೊಂಚ ಉಪ್ಪು ಸೇರಿಸಿ ಇನ್ನಷ್ಟು ಚೆನ್ನಾಗಿ ಮಿಶ್ರಣ ಮಾಡಿ. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್

    * ನಂತರ ದೋಸೆ ಕಾವಲಿಯನ್ನು ಒಲೆಯ ಮೇಲಿಟ್ಟು ಎಣ್ಣೆ ಹಚ್ಚಿ ದೋಸೆ ಹಾಕಬೇಕು. ಚೆನ್ನಾಗಿ ಬೇಯಿಸಿದರೆ ರುಚಿಯಾದ ಪಾಲಕ್ ದೋಸೆ ಸವಿಯಲು ಸಿದ್ಧವಾಗುತ್ತದೆ.