Tag: ಪಾಲಕ್ ದಾಲ್

  • ರುಚಿಕರ, ಆರೋಗ್ಯಕರ ಊಟಕ್ಕಾಗಿ ಮಾಡಿ ಪಾಲಕ್ ದಾಲ್

    ರುಚಿಕರ, ಆರೋಗ್ಯಕರ ಊಟಕ್ಕಾಗಿ ಮಾಡಿ ಪಾಲಕ್ ದಾಲ್

    ನ್ನದೊಂದಿಗೆ ಸವಿಯಲು ನೀವು ರುಚಿಕರ, ಆರೋಗ್ಯಕರ ಹಾಗೂ ಸರಳವಾದ ಸಾರಿನ ರೆಸಿಪಿ ಹುಡುಕುತ್ತಿದ್ದರೆ ನೀವಿದನ್ನು ಒಮ್ಮೆ ಮಾಡಿ ನೋಡಿ. ಪಾಲಕ್ ದಾಲ್ ರುಚಿಕರವೂ ಪೌಷ್ಟಿಕಾಂಶದಿಂದಲೂ ಕೂಡಿರುವುದರಿಂದ ಊಟಕ್ಕೆ ಅತ್ಯುತ್ತಮ ಎನಿಸುತ್ತದೆ. ಪಾಲಕ್ ದಾಲ್ (Palak Dal) ಮಾಡುವ ಸಿಂಪಲ್ ವಿಧಾನ ಇಲ್ಲಿದೆ.

    ಬೇಕಾಗುವ ಪದಾರ್ಥಗಳು:
    ಪಾಲಕ್ ಸೊಪ್ಪು – 2 ಕಪ್
    ಹೆಸರು ಬೇಳೆ – ಅರ್ಧ ಕಪ್
    ಹೆಚ್ಚಿದ ಈರುಳ್ಳಿ – 1
    ಹೆಚ್ಚಿದ ಮೆಣಸಿನಕಾಯಿ – 2
    ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
    ಅರಿಶಿನ – ಅರ್ಧ ಟೀಸ್ಪೂನ್
    ತುಪ್ಪ – 2 ಟೀಸ್ಪೂನ್
    ಸಾಸಿವೆ – ಅರ್ಧ ಟೀಸ್ಪೂನ್
    ಜೀರಿಗೆ – 1 ಟೀಸ್ಪೂನ್
    ಹಿಂಗ್ – ಕಾಲು ಟೀಸ್ಪೂನ್
    ಮುರಿದ ಕೆಂಪು ಮೆಣಸಿನಕಾಯಿ – 1
    ಕೆಂಪು ಮೆಣಸಿನ ಪುಡಿ – ಅರ್ಧ ಟೀಸ್ಪೂನ್
    ನಿಂಬೆ ರಸ – 1 ಟೀಸ್ಪೂನ್
    ಸಕ್ಕರೆ – ಅರ್ಧ ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ರೆಸ್ಟೋರೆಂಟ್ ಸ್ಟೈಲ್‌ನ ಟೇಸ್ಟಿ ಪನೀರ್ ಪಸಂದ ರೆಸಿಪಿ

    ಮಾಡುವ ವಿಧಾನ:
    * ಮೊದಲಿಗೆ ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು, ಕತ್ತರಿಸಿ ಬದಿಗಿಟ್ಟುಕೊಳ್ಳಿ.
    * ಕುಕ್ಕರ್‌ಗೆ ಹೆಸರು ಬೇಳೆ, ಅರಿಶಿನ ಹಾಗೂ ನೀರು ಹಾಕಿ, 3-4 ಸೀಟಿ ಬರುವವರೆಗೆ ಚೆನ್ನಾಗಿ ಬೇಯಿಸಿಕೊಳ್ಳಿ. ಬಳಿಕ ಅದನ್ನು ಮ್ಯಾಶ್ ಮಾಡಿ ಪಕ್ಕಕ್ಕಿಡಿ.
    * ಈಗ ಒಂದು ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ, ಸಾಸಿವೆ, ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿರು ಮೆಣಸಿನಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ.
    * ಈರುಳ್ಳಿ ಮೆತ್ತಗಾದ ಬಳಿಕ ಪಾಲಕ್ ಸೊಪ್ಪು ಸೇರಿಸಿ ಮಿಶ್ರಣ ಮಾಡಿ.
    * ಬಳಿಕ ಉಪ್ಪು ಹಾಗೂ ಸಕ್ಕರೆ ಸೇರಿಸಿ 2-3 ನಿಮಿಷ ಹುರಿಯಿರಿ.
    * ಈಗ ಬೇಯಿಸಿಟ್ಟುಕೊಂಡಿದ್ದ ದಾಲ್ ಅನ್ನು ಸೇರಿಸಿ, 1-2 ಕಪ್ ನೀರು ಹಾಕಿ ಮಿಶ್ರಣ ಮಾಡಿ.
    * ಕಡಾಯಿಗೆ ಮುಚ್ಚಳ ಹಾಕಿ ಪಾಲಕ್ ಸೊಪ್ಪನ್ನು ಚೆನ್ನಾಗಿ ಬೇಯಿಸಿ.
    * ಈಗ ನಿಂಬೆ ಹಣ್ಣಿನ ರಸ ಸೇರಿಸಿ, ಉರಿಯನ್ನು ಆಫ್ ಮಾಡಿ.
    * ಒಗ್ಗರಣೆ ತಯಾರಿಸಲು ಒಂದು ಚಿಕ್ಕ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಜೀರಿಗೆ, ಹಿಂಗ್ ಮತ್ತು ಮುರಿದ ಒಣ ಕೆಂಪು ಮೆಣಸಿನಕಾಯಿ ಹಾಕಿ ಸಿಡಿಸಿ.
    * ಒಗ್ಗರಣೆಯನ್ನು ದಾಲ್ ಮಿಶ್ರಣಕ್ಕೆ ಹಾಕಿ.
    * ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸೇರಿಸಿದರೆ ಅನ್ನದೊಂದಿಗೆ ರುಚಿ ಎನಿಸುವ ಪಾಲಕ್ ದಾಲ್ ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಸುಲಭದ ಪಾಲಕ್ ಸೂಪ್ ಮಾಡಿ ರುಚಿ ನೋಡಿ

    Live Tv
    [brid partner=56869869 player=32851 video=960834 autoplay=true]