Tag: ಪಾಲಕರು

  • ತರಗತಿಯಲ್ಲೇ ಕುಳಿತು ಕುಡಿದ ಶಿಕ್ಷಕನ ಅಮಾನತ್ತಿಗೆ ಪೋಷಕರ ಮಾಸ್ಟರ್ ಪ್ಲ್ಯಾನ್

    ತರಗತಿಯಲ್ಲೇ ಕುಳಿತು ಕುಡಿದ ಶಿಕ್ಷಕನ ಅಮಾನತ್ತಿಗೆ ಪೋಷಕರ ಮಾಸ್ಟರ್ ಪ್ಲ್ಯಾನ್

    ಹೈದರಾಬಾದ್: ತರಗತಿಯಲ್ಲಿ ಕುಳಿತು ಕುಡಿಯುತ್ತಾ ವಿದ್ಯಾರ್ಥಿಗಳಿಗೆ ಅವಾಚ್ಯ ಶಬ್ಧಗಳಿಂದ ಬೈಯ್ಯುತ್ತಿದ್ದ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

    ಕೆ. ಕೋಟೇಶ್ವರ ರಾವ್ ಅಮಾನತು ಆಗಿರುವ ಶಿಕ್ಷಕ. ಈತ ಕೃಷ್ಣ ಜಿಲ್ಲೆಯ ಪಲಕ ಮಂಡಲ್ ಪ್ರದೇಶದವನಾಗಿದ್ದಾನೆ. ಶಾಲೆಯಲ್ಲಿ ಮದ್ಯ ಸೇವನೆಯನ್ನು ಮಾಡಿ ಅಮಾನತು ಆಗಿ ಕೆಲಸವನ್ನು ಕಳೆದುಕೊಂಡಿದ್ದಾನೆ.

    ಕೋಟೇಶ್ವರ ರಾವ್ ಶಿಕ್ಷಕರ ಕೊಠಡಿಯಲ್ಲಿ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡಿದ್ದನಂತೆ. ಈ ಕುರಿತಾಗಿ ಕೇಳಿದರೆ ಮಕ್ಕಳಿಗೆ ಮಕ್ಕಳ ಪಾಲಕರಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದನಂತೆ. ಈ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ಬಟ್ಟೆ ಬಿಚ್ಚು ಎಂದು ರಾವ್ ಹೇಳಿದ್ದನಂತೆ. ಈ ಶಿಕ್ಷಕ ಶಾಲೆಯಲ್ಲಿದ್ದರೆ ಮಕ್ಕಳ ಭವಿಷ್ಯ ಹಾಳಾಗುತ್ತದೆ ಎಂದು ನಿರ್ಧರಿಸಿದ ಪೋಷಕರು ರಾವ್ ಶಾಲೆಯಲ್ಲಿ ಕುಳಿತು ಕುಡಿಯುತ್ತಾ ಇರುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.

    ಕೋಟೇಶ್ವರ ರಾವ್ ಶಾಲೆಯಲ್ಲಿ ಕುಳಿತು ಮದ್ಯ ಸೇವನೆ ಮಾಡುತ್ತಿದ್ದ ವೀಡಿಯೋವನ್ನು ಪೋಷಕರು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಶಿಕ್ಷಣ ಇಲಾಖೆಗೆ ಈ ಕುರಿತಾಗಿ ದೂರು ನೀಡಲಾಗಿತ್ತು. ತಕ್ಷಣ ಎಚ್ಚೆತ್ತುಕೊಂಡ ಅಧಿಕಾರಿಗಳು ಶಿಕ್ಷಕನ ಅಮಾನತು ಮಾಡಿದ್ದಾರೆ.

  • ಚೆನ್ನಾಗಿ ಓದು ಎಂದು ವಿದ್ಯಾರ್ಥಿನಿ ಬೆನ್ನು ತಟ್ಟಿದ್ದಕ್ಕೆ ಬಿಇಒಗೆ ಥಳಿತ

    ಚೆನ್ನಾಗಿ ಓದು ಎಂದು ವಿದ್ಯಾರ್ಥಿನಿ ಬೆನ್ನು ತಟ್ಟಿದ್ದಕ್ಕೆ ಬಿಇಒಗೆ ಥಳಿತ

    ಗದಗ: ಚೆನ್ನಾಗಿ ಓದು ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿ ಹೆಗಲ ಮೇಲೆ ಕೈಹಾಕಿದ ಬಿಇಓ ಅಧಿಕಾರಿಯನ್ನು ಪಾಲಕರು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ನಡೆದಿದೆ.

    ಮುಂಡರಗಿ ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ್ ಎನ್. ಹಳ್ಳಿಗುಡಿಯವರ ಮನೆಗೆ ನುಗ್ಗಿ 6 ಜನ ಪಾಲಕರ ಗುಂಪೊಂದು ಮನಬಂದಂತೆ ಹಲ್ಲೆ ಮಾಡಿದೆ. ಮನೆ-ಮನೆಗೆ ಭೇಟಿ ಕಾರ್ಯಕ್ರಮದ ಅಂಗವಾಗಿ ಕ್ಷೇತ್ರದ ಹಳ್ಳಿಕೇರಿ ಗ್ರಾಮಕ್ಕೆ ಶಂಕರ್ ಭೇಟಿ ನೀಡಿದ್ದಾರೆ. ಆಗ ರಾತ್ರಿ ವೇಳೆ ಗ್ರಾಮದ ವಿದ್ಯಾರ್ಥಿನಿ ಮನೆಗೆ ಹೋಗಿದ್ದಾರೆ. ಮನೆಯಲ್ಲಿ ವಿದ್ಯಾರ್ಥಿನಿ ಒಬ್ಬಳೇ ಇದ್ದಾಗ ಚೆನ್ನಾಗಿ ಓದು ಎಂದು ಬೆನ್ನುತಟ್ಟಿ ಪ್ರೋತ್ಸಾಹಿಸಿ ಹೆಗಲ ಮೇಲೆ ಕೈಹಾಕಿದ್ದಾರೆ.

    ಇದನ್ನೇ ಅಪಾರ್ಥ ತಿಳಿದ ಪಾಲಕರು, ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಮೇಲೆ 6 ಜನ ಪಾಲಕರ ತಂಡ ಮುಂಡರಗಿ ಪಟ್ಟಣದ ಅವರ ಮನೆಗೆ ನುಗ್ಗಿ ಮನಬಂದಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರ ಗಾಯಗೊಂಡಿರುವ ಕೇತ್ರ ಶಿಕ್ಷಣಾಧಿಕಾರಿ ಶಂಕರ್ ಹಳ್ಳಿಗುಡಿ ಅವರನ್ನು ಮುಂಡರಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

    ಈ ಕುರಿತು ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.