Tag: ಪಾರ್ವತಿ

  • ವಿಘ್ನೇಶ್ವರನಿಗೆ ಮೊದಲ ಪೂಜೆ – ಗಣೇಶ ಚತುರ್ಥಿ ಯಾಕೆ ಆಚರಿಸಲಾಗುತ್ತದೆ?

    ವಿಘ್ನೇಶ್ವರನಿಗೆ ಮೊದಲ ಪೂಜೆ – ಗಣೇಶ ಚತುರ್ಥಿ ಯಾಕೆ ಆಚರಿಸಲಾಗುತ್ತದೆ?

    ಭಾರತದ ಮತ್ತೊಂದು ಪ್ರಮುಖ ಹಬ್ಬವಾದ ಗಣೇಶ ಚತುರ್ಥಿಯ (Ganesh Chaturthi) ಸಂಭ್ರಮದಲ್ಲಿ ನಾವಿದ್ದೇವೆ. ಪ್ರತಿ ವರ್ಷ ಆಗಸ್ಟ್ ಸೆಪ್ಟೆಂಬರ್‌ನಲ್ಲಿ ಬರುವ ಈ ಹಬ್ಬ ಜಾತಿ ಮತವನ್ನು ಮೀರಿ ನಿಂತಿದೆ. ಈ ಹಬ್ಬವು ಭಗವಾನ್ ಶಿವ ಮತ್ತು ಪಾರ್ವತಿ ದೇವಿಯ ಮಗನಾದ ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಜನಿಸಿದ ಗಣೇಶನ ಜನ್ಮವನ್ನು ಸೂಚಿಸುತ್ತದೆ. ಈ ಬಾರಿ ಆಗಸ್ಟ್ 27 ರಂದು ಗಣೇಶ ಚತುರ್ಥಿ ಬಂದಿದೆ. ಈ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆಯ ಬಗ್ಗೆ ತಿಳಿದುಕೊಳ್ಳೋಣ..

    ಇತಿಹಾಸದ ಸುತ್ತ
    ಇತಿಹಾಸಕಾರರ ಪ್ರಕಾರ, ಗಣೇಶನು ಪಾರ್ವತಿ ದೇವಿಯ ಸೃಷ್ಟಿ ಎಂದು ನಂಬಲಾಗಿದೆ. ಭಗವಾನ್ ಶಿವನ ಅನುಪಸ್ಥಿತಿಯಲ್ಲಿ, ಪಾರ್ವತಿ ದೇವಿಯು ತನ್ನ ಮೈಯಲ್ಲಿದ್ದ ಶ್ರೀಗಂಧದಿಂದ ಗಣೇಶನನ್ನು ಸೃಷ್ಟಿಸಿದಳು. ಮತ್ತು ತಾನು ಸ್ನಾನಕ್ಕೆಂದು ಹೋಗುವಾಗ ಗಣೇಶನನ್ನು ಕಾವಲಿಗಾಗಿ ನಿಲ್ಲಿಸಿ ಹೋದಳು. ಆದರ್ಶ ಮಗುವಾಗಿ, ಗಣೇಶನು ತನ್ನ ತಾಯಿಯ ಸೂಚನೆಗಳನ್ನು ಅನುಸರಿಸಿದನು ಮತ್ತು ಯಾರನ್ನೂ ಮನೆಗೆ ಬಿಡಲಿಲ್ಲ. ಶಿವನ ಅರಿವಿಲ್ಲದಿದ್ದರೂ, ಅವನು ಬರುವಾಗ ಅವನನ್ನು ಮನೆಯೊಳಗೆ ಪ್ರವೇಶಿಸದಂತೆ ತಡೆದನು. ಇದು ಇಬ್ಬರ ನಡುವೆ ಯುದ್ಧಕ್ಕೆ ಕಾರಣವಾಯಿತು ಮತ್ತು ಕೋಪಗೊಂಡ ಶಿವನು ಅವನ ತಲೆಯನ್ನು ಕತ್ತರಿಸಿದನು. ಇದನ್ನು ನೋಡಿದ ಪಾರ್ವತಿಯು ಕ್ರೋಧಳಾದಳು ಮತ್ತು ಕಾಳಿ ದೇವತೆಯಾಗಿ ರೂಪಾಂತರಗೊಂಡಳು. ಅವಳು ಜಗತ್ತನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕಿದಳು. ದೇವರು ಮತ್ತು ದೇವತೆಗಳು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಮತ್ತು ಕಾಳಿ ದೇವಿಯ ಕೋಪವನ್ನು ಶಾಂತಗೊಳಿಸಲು ಶಿವನನ್ನು ಪ್ರಾರ್ಥಿಸಿದರು.

    ಭಗವಾನ್‌ ಶಿವನು ಅಂತಿಮವಾಗಿ ಒಂದು ಪರಿಹಾರವನ್ನು ಕಂಡುಹಿಡಿದನು. ಯಾರು ಉತ್ತರ ದಿಕ್ಕಿಗೆ ತಲೆಯನ್ನಿಟ್ಟು ಮಲಗಿರುತ್ತಾರೋ ಅವರ ತಲೆಯನ್ನು ಕಡಿದು ತರುವಂತೆ ತನ್ನ ಎಲ್ಲಾ ಅನುಯಾಯಿಗಳಿಗೆ ಆದೇಶಿಸಿದನು. ಅನುಯಾಯಿಗಳು ಕೆಲ ಸಮಯಗಳವರೆಗೆ ಹುಡುಕಿದ ನಂತರ ಅವರಿಗೆ ಆನೆ ಮರಿಯು ಉತ್ತರ ದಿಕ್ಕಿಗೆ ತಲೆಯಿಟ್ಟು ಮಲಗಿರುವುದು ಕಾಣಿಸಿತು. ಶಿವನ ಅನುಯಾಯಿಗಳು ಅದನ್ನು ಕತ್ತರಿಸಿ ತಂದು ಶಿವನಿಗೆ ನೀಡುತ್ತಾರೆ. ಶಿವನು ಅದನ್ನು ಗಣೇಶನ ದೇಹಕ್ಕೆ ಜೋಡಿಸಿ ಅವನನ್ನು ಜೀವಂತಗೊಳಿಸಿದನು.

    ಗಣೇಶ ಚತುರ್ಥಿ ಆಚರಣೆ ಹೇಗೆ?
    ಮನೆಗಳಲ್ಲಿ, ದೇವಾಲಯಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ವಿಗ್ರಹಗಳನ್ನು ಪೆಂಡಲ್‌ಗಳಲ್ಲಿ ಇರಿಸಲಾಗುತ್ತದೆ. ಹೆಚ್ಚುವರಿಯಾಗಿ, ಪ್ರತಿಮೆಯನ್ನು ಅಲಂಕರಿಸಲು ಹೂವುಗಳು, ಹೂಮಾಲೆಗಳು ಮತ್ತು ದೀಪಗಳನ್ನು ಬಳಸಲಾಗುತ್ತದೆ. ಒಬ್ಬ ಪುರೋಹಿತನು ದೇವತೆಗೆ ಜೀವ ತುಂಬಲು ಪ್ರಾಣಪ್ರತಿಷ್ಠೆ ಎಂದು ಕರೆಯಲ್ಪಡುವ ಮಂತ್ರಗಳನ್ನು ಪಠಿಸುತ್ತಾನೆ.

    ಈ ಆಚರಣೆಗಾಗಿ ಗಣೇಶನ ವಿಗ್ರಹವನ್ನು 16 ವಿಭಿನ್ನ ರೀತಿಯಲ್ಲಿ ಪವಿತ್ರಗೊಳಿಸಲಾಗುತ್ತದೆ. ‘ಷೋಡಶೋಪಚಾರ’ ಎಂಬುದು ಈ ಆಚರಣೆಯ ಹೆಸರು. ನಂತರ ಧಾರ್ಮಿಕ ಸಂಗೀತವನ್ನು ಹಾಡಲಾಗುತ್ತದೆ ಅಥವಾ ನುಡಿಸಲಾಗುತ್ತದೆ, ಜನರು ಡ್ರಮ್ ಬೀಟ್‌ಗಳಿಗೆ ನೃತ್ಯ ಮಾಡುತ್ತಾರೆ ಮತ್ತು ಆಚರಣೆಗಳ ಭಾಗವಾಗಿ ಪಟಾಕಿಗಳನ್ನು ಹಾರಿಸಲಾಗುತ್ತದೆ. ಕೆಲವು ಭಕ್ತರು ಮನೆಯಲ್ಲಿ ಈ ಹಬ್ಬವನ್ನು ಆಚರಿಸಿದರೆ, ಇನ್ನು ಕೆಲವರು ಗಣೇಶನನ್ನು ಪೂಜಿಸಲು ಪೆಂಡಲ್‌ಗಳಿಗೆ ಹೋಗುತ್ತಾರೆ. ಪ್ರಸಾದಕ್ಕಾಗಿ, ನಾವು ಭಗವಾನ್ ಗಣೇಶನಿಗೆ, ಅವನ ನೆಚ್ಚಿನ ಮೋದಕ, ಕಡಲೆ ಪ್ರಸಾದ, ಲಡ್ಡುಗಳನ್ನು ನೀಡುತ್ತೇವೆ.

    ಮೋದಕಪ್ರಿಯ ಏಕೆ?
    ಭಗವಾನ್ ಗಣೇಶನನ್ನು ಎಲ್ಲಾ ದೇವರುಗಳಲ್ಲಿ ಮೊದಲು ಪೂಜಿಸಲಾಗುತ್ತದೆ ಮತ್ತು ಯಾವುದೇ ಆಚರಣೆ, ಸಮಾರಂಭ ಅಥವಾ ಪೂಜೆಯ ಪ್ರಾರಂಭದ ಮೊದಲು ಪೂಜಿಸಲಾಗುತ್ತದೆ ಎಂದು ವರವನ್ನು ನೀಡಿದನು. ಪೂಜೆಯ ಸಮಯದಲ್ಲಿ, ಭಕ್ತರು ಗಣೇಶನಿಗೆ ಪ್ರಿಯವಾದ ಸಿಹಿತಿಂಡಿಗಳಲ್ಲಿ ಒಂದಾದ ಮೋದಕವನ್ನು ಅರ್ಪಿಸುತ್ತಾರೆ ಮತ್ತು ಇತರರಿಗೆ ಪ್ರಸಾದವಾಗಿ ಅದನ್ನು ಹಂಚುತ್ತಾರೆ.

  • ಏನಿದು ಗೌರಿ ಹಬ್ಬ? ಆಚರಣೆ ಹೇಗೆ?

    ಏನಿದು ಗೌರಿ ಹಬ್ಬ? ಆಚರಣೆ ಹೇಗೆ?

    ಅಂತೂ ಇಂತೂ ಗಣೇಶ ಹಬ್ಬವೂ ಬಂತು. ಮಕ್ಕಳಿಗೆ, ಪುರುಷರಿಗೆ ವಿಘ್ನ ವಿನಾಯಕನಿಗೆ ಬಪ್ಪ ಮೋರೆಯಾ ಎಂದು ಜಯಘೋಷ ಕೂಗುತ್ತಾ ಆತನನ್ನು ಮೂರ್ತಿಯನ್ನು ಮನೆಗೆ ತರೋದು ಒಂದು ಖುಷಿಯಾದರೆ, ಹೆಣ್ಮಕ್ಕಳಿಗೆ ಗಣೇಶ ಹಬ್ಬದ ಮುಂದಿನ ಆಚರಿಸುವ ಗೌರಿ ಹಬ್ಬ ತುಂಬಾ ವಿಶೇಷವಾಗಿರುತ್ತದೆ.

    ಹೌದು, ಆ.27 ಗಣೇಶ ಹಬ್ಬ ಆದ್ರೆ, ಅದರ ಮುಂದಿನ ದಿನ ಅಂದ್ರೆ ಆ.26 ಮಂಗಳವಾರ ಗೌರಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ವಿವಾಹಿತ ಮಹಿಳೆಯರು ಆಚರಿಸುತ್ತಾರೆ. ದಾಂಪತ್ಯ ಜೀವನವು ಸದಾ ಸಂತೋಷದಿಂದ, ಸುಖ ನೆಮ್ಮದಿಯಿಂದ ಕೂಡಿರಲ್ಲಿ ಎಂದು ಮಹಿಳೆಯರು ಗೌರಿಯನ್ನು ಪೂಜಿಸುತ್ತಾರೆ.

    ಗೌರಿ ಹಬ್ಬದ ಇತಿಹಾಸವೇನು?
    ಪಾರ್ವತಿಯು ಶಿವನನ್ನೇ ವಿವಾಹವಾಗಬೇಕೆಂಬ ಬಯಕೆಯಿಂದ ತಪಸ್ಸು ಮಾಡುತ್ತಾಳೆ. ಶಿವ ಅವಳಿಗೆ ಒಲಿದು, ಕೈಲಾಸದಿಂದ ಭೂಮಿಗೆ ಬಂದು ಅವಳನ್ನು ವರಿಸುತ್ತಾನೆ. ಸಂಪ್ರದಾಯದಂತೆ ಪತ್ನಿಯನ್ನು ತಾನಿರುವ ಸ್ಥಳಕ್ಕೆ ಅಂದರೆ ಕೈಲಾಸಕ್ಕೆ ಕರೆದೊಯ್ಯುತ್ತಾನೆ.

    ಮದುವೆಯಾದ ಹೆಣ್ಣುಮಕ್ಕಳು ವರ್ಷಕ್ಕೊಮ್ಮೆಯಾದರೂ ತವರಿಗೆ ಹೋಗುವ ಪದ್ಧತಿ ಇದೆ. ಅಂತೆಯೇ ಪಾರ್ವತಿ ದೇವಿಯು ಭಾದ್ರಪದ ಶುಕ್ಲದ ತೃತೀಯದಂದು ಭೂಲೋಕಕ್ಕೆ ಬರುತ್ತಾಳೆ. ಈ ಸಂದರ್ಭ ತವರಿನಲ್ಲಿ ಮನೆಮಗಳನ್ನು ತುಂಬು ಪ್ರೀತಿಯಿಂದ ಸತ್ಕರಿಸಲಾಗುತ್ತದೆ. ಸಂಭ್ರಮದಿಂದ ಆಕೆಯ ಇರುವಿಕೆಯನ್ನು ಆಚರಿಸಲಾಗುತ್ತದೆ. ಮರುದಿನ ಪಾರ್ವತಿ ಸುತ ಗಣೇಶನು ತನ್ನ ತಾಯಿಯನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾನೆ. ಹಾಗಾಗಿ, ಪಾರ್ವತಿ ದೇವಿಯ ತವರು ಮನೆಗೆ ಆಗಮಿಸುವುದನ್ನು ಗೌರಿ ಹಬ್ಬವಾಗಿ ಆಚರಿಸಲಾಗುತ್ತದೆ.

    ಏಕೆ ಆಚರಿಸುತ್ತಾರೆ?
    ಗೌರಿ ಹಬ್ಬದ ಆಚರಣೆಯ ಹಿಂದೆಯೂ ಪುರಾಣ ಕಥೆಯಿದೆ. ಹಿಂದೆ ಪಾರ್ವತಿ ದೇವಿಯು ಕಠಿಣ ತಪಸ್ಸು ಮಾಡುವ ಮೂಲಕ ಮಹಾಶಿವನನ್ನು ಒಲಿಸಿಕೊಂಡಳು. ವಿವಾಹಿತ ಮಹಿಳೆಯರು ತಮ್ಮ ಗಂಡನ ಯೋಗಕ್ಷೇಮ ಮತ್ತು ದೀರ್ಘಾಯುಷ್ಯಕ್ಕಾಗಿ ಗೌರಿಯನ್ನು ಪ್ರಾರ್ಥಿಸುತ್ತಾರೆ. ಇನ್ನು ಅವಿವಾಹಿತರು ಒಳ್ಳೆಯ ಬಾಳ ಸಂಗಾತಿ ಸಿಗಲೆಂದು ಪ್ರಾರ್ಥಿಸುತ್ತಾರೆ.

     

    ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆಗಳನ್ನು ಮಾಡುವುದರಿಂದ ತಮ್ಮ ಮನೆಗಳಿಗೆ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ಮನೆಮಾಡುತ್ತದೆ ಎಂಬುದು ನಂಬಿಕೆ. ಮುಖ್ಯವಾಗಿ ದಾಂಪತ್ಯ ಜೀವನವು ಚೆನ್ನಾಗಿರಲು ಗೌರಿ ಹಬ್ಬವನ್ನು ಮಹಿಳೆಯರು ಆಚರಿಸುತ್ತಾರೆ.

    ಗೌರಿ ಪೂಜೆ ಮಾಡುವ ವಿಧಾನ
    ಮೊದಲಿಗೆ ಹೆಣ್ಣುಮಕ್ಕಳು ಬೆಳಗ್ಗೆ ಬೇಗನೇ ಎದ್ದು ಸ್ನಾನ ಮಾಡಿ, ಮನೆ ಸ್ವಚ್ಛಗೊಳಿಸಿ, ಹೂವುಗಳು, ರಂಗೋಲಿ ಮತ್ತು ದೀಪಗಳಿಂದ ಅಲಂಕರಿಸಲಾಗುತ್ತದೆ. ಅರಿಶಿನ, ಕುಂಕುಮ, ಹೂವುಗಳು, ಹಣ್ಣುಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಪೂಜೆಗೆ ಅಗತ್ಯವಿರುವ ಎಲ್ಲಾ ವಸ್ತುಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.
    ಗೌರಿ ಹಬ್ಬದ ದಿನದಂದು ಗೌರಿ ದೇವಿಯ ವಿಗ್ರಹ ಹೂವಿನಿಂದ ಅಲಂಕರಿಸಲಾಗುತ್ತದೆ. ತಾಯಿ ಗೌರಿಗೆ ಹೊಸ ಸೀರೆ, ಆಭರಣ ಹಾಕಿ, ಹೂವುಗಳಿಂದ ಅಲಂಕರಿಸುತ್ತಾರೆ. ನಂತರ ಕಲಶವನ್ನ ಸಿದ್ಧ ಮಾಡಬೇಕು. ಬಳಿಕ ತಾಯಿ ಗೌರಿಗೆ ಭಕ್ತಿಯಿಂದ ಪೂಜೆ ಮಾಡಬೇಕು. ಪೂಜೆಯ ಕೊನೆಯಲ್ಲಿ ಸುಮಂಗಲಿಯರಿಗೆ ಬಾಗಿನ ನೀಡುವುದು ಕೂಡ ಗೌರಿ ಹಬ್ಬದ ವಿಶೇಷವಾಗಿದೆ.

  • ಪತ್ನಿ ನೀಡಿದ ಅರ್ಜಿಯಲ್ಲಿ ವೈಟ್ನರ್‌ ಬಳಕೆ ಮಾಡಿದ್ದು ತಿಳಿದಿಲ್ಲ: ಲೋಕಾ ಪೊಲೀಸರಿಗೆ ಸಿಎಂ ನೀಡಿದ ಉತ್ತರದಲ್ಲಿ ಏನಿದೆ?

    ಪತ್ನಿ ನೀಡಿದ ಅರ್ಜಿಯಲ್ಲಿ ವೈಟ್ನರ್‌ ಬಳಕೆ ಮಾಡಿದ್ದು ತಿಳಿದಿಲ್ಲ: ಲೋಕಾ ಪೊಲೀಸರಿಗೆ ಸಿಎಂ ನೀಡಿದ ಉತ್ತರದಲ್ಲಿ ಏನಿದೆ?

    ಬೆಂಗಳೂರು: ನನ್ನ ಪತ್ನಿ ಪಾರ್ವತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ(MUDA) ನೀಡಿರುವ ಅರ್ಜಿಯಲ್ಲಿ ವೈಟ್ನರ್‌ ಬಳಕೆ ಮಾಡಿದ ಬಗ್ಗೆ ನನಗೆ ತಿಳಿದಿಲ್ಲ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಲೋಕಾಯುಕ್ತಕ್ಕೆ ತಿಳಿಸಿದ್ದಾರೆ.

    ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬಕ್ಕೆ ಲೋಕಾಯುಕ್ತ ಪೊಲೀಸರು (Lokayukta Police) ಕ್ಲೀನ್‌ಚಿಟ್‌ ನೀಡಿದ್ದಾರೆ. ಈಗ ಲೋಕಾಯುಕ್ತ ಪೊಲೀಸರ (Lokayukta Police) ವಿಚಾರಣೆಯಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಅವರ ಪತ್ನಿ ಪಾರ್ವತಿ, ಇತರರು ನೀಡಿದ್ದ ಉತ್ತರಗಳ ಪ್ರತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಈ ಮಧ್ಯೆ ತನಿಖೆಯ ಅಂತಿಮ ವರದಿಯ ಪ್ರತಿಯನ್ನು ದೂರುದಾರನಿಗೆ ಕೊಡಲು ಕೋರ್ಟ್ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಮಾರ್ಚ್ ಏಳಕ್ಕೆ ಮುಂದೂಡಿದೆ.

    ಸಿಎಂ ಹೇಳಿದ್ದೇನು?
    1977 ರಲ್ಲಿ ವಿವಾಹಕ್ಕೂ ಮುನ್ನ ಮಲ್ಲಿಕಾರ್ಜುನಸ್ವಾಮಿ ಮತ್ತು ಅವರ ಕುಟಂಬದ ಪರಿಚಯವಿದೆ . ಮದುವೆ ನಂತರ ಮಲ್ಲಿಕಾರ್ಜುನ ಸ್ವಾಮಿ ಜೊತೆ ಯಾವುದೇ ಹಣಕಾಸಿನ ವ್ಯವಹಾರವಿಲ್ಲ, ಕೇವಲ ನನ್ನ ಬಾಮೈದ. ಕೆಸರೆ ಗ್ರಾಮದ 3 ಎಕರೆ 16 ಗುಂಟೆ ಜಮೀನು ಖರೀದಿ ವಿಚಾರ ನನಗೆ ಗೊತ್ತಿಲ್ಲ. 2013 ರಲ್ಲಿ ನನ್ನ ಪತ್ನಿ, ನನಗೆ ಹಾಗೂ ನನ್ನ ಮಗನಿಗೆ ತಿಳಿಸಿದ್ದಾರೆ.

    ಜಮೀನು ಖರೀದಿ ವೇಳೆ ಯಾವುದೇ ಹಣಕಾಸಿನ ಸಹಾಯ ಮಾಡಿರುವುದಿಲ್ಲ, ಅವರೂ ಸಹ ಕೇಳಿಲ್ಲ. ಜಮೀನಿನ ಮಾಲೀಕತ್ವ ಯಾರಿಗೆ ಯಾರ ಹೆಸರಿಗೆ ಬದಲಾಯಿತು ಎಂಬ ವಿಚಾರ ಸಹ ನನಗೆ ತಿಳಿದಿಲ್ಲ. ಮೂಲ ಜಮೀನು ಮಾಲೀಕರಾದ ದೇವರಾಜು ಪರಿಚಯವೂ ನನಗಿಲ್ಲ. ಇದನ್ನೂ ಓದಿ: ಮತ್ತೆ ಒಂದಾಗ್ತಾರಾ ಉದ್ಧವ್, ರಾಜ್ ಠಾಕ್ರೆ? – ಆ ಫೋಟೋ ಮೂಡಿಸಿತು ಕುತೂಹಲ

    1998ರಲ್ಲಿ ತಮ್ಮ ಜಮೀನನ್ನು ಭೂಸ್ವಾಧೀನದಿಂದ ಕೈಬಿಡುವಂತೆ ಕೋರಿದ ಬಗ್ಗೆಯೂ ತಿಳಿದಿಲ್ಲ, ಸಹಾಯವನ್ನೂ ನಾನು ಮಾಡಿರುವುದಿಲ್ಲ. ಮಲ್ಲಿಕಾರ್ಜುನ ಸ್ವಾಮಿ ಜಮೀನು ಭೂ ಪರಿವರ್ತನೆ ಮಾಡುವ ಸಮಯದಲ್ಲಿ ನನ್ನನ್ನು ಭೇಟಿಯಾಗಿಲ್ಲ, ಯಾವುದೇ ಸಹಾಯವನ್ನೂ ಕೇಳಿಲ್ಲ. ಆ ಸಮಯದಲ್ಲಿ ಕುಮಾರ್‌ ನಾಯಕ್ ಜಿಲ್ಲಾಧಿಕಾರಿಯಾಗಿದ್ದರು. ನಾನು ಯಾವುದೇ ಅಧಿಕಾರಿಗಳಿಗೂ ಶಿಫಾರಸು ಮಾಡಿಲ್ಲ.

     

    ನನ್ನ ಪತ್ನಿಗೆ ಜಮೀನು ದಾನವಾಗಿ ಬಂದ ವಿಚಾರವನ್ನು 2013 ರ ಮಧ್ಯಭಾಗದಲ್ಲಿ ತಿಳಿಸಿರುತ್ತಾರೆ. 2013 ರಲ್ಲಿ ನಾನು ಸಿಎಂ ಆಗಿದ್ದ ಸಮಯದಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. 50:50 ಅನುಪಾತದಲ್ಲಿ ಪರಿಹಾರ ನೀಡುವ ವಿಚಾರ ನನಗೆ ತಿಳಿದಿಲ್ಲ. ಆ ಸಮಯದಲ್ಲಿ ಶಾಸಕರಾಗಿದ್ದವರು ಮುಡಾ ಸದಸ್ಯರಾಗಿರುತ್ತಾರೆ. ನನ್ನ ಮಗ ಯತೀಂದ್ರ ಸಹ ಮುಡಾ ಸದಸ್ಯರಾಗಿದ್ದರು, ಆಗ ನಾನು ವಿಪಕ್ಷ ನಾಯಕನಾಗಿದ್ದೆ. 14 ನಿವೇಶನಗಳು ನೋಂದಣಿ ಬಳಿಕ ನನ್ನ ಪತ್ನಿ ತಿಳಿಸಿದರು.

    ಯಾವ ಬಡಾವಣೆಯಲ್ಲಿ ನೀಡಿದ್ದಾರೆಂಬ ವಿಷಯ ನನಗೆ ತಿಳಿದಿರಲಿಲ್ಲ. 14 ನಿವೇಶನಗಳಿಗೆ ಎಂದೂ ಭೇಟಿ ನೀಡಿರುವುದಿಲ್ಲ. ಈ ಬಗ್ಗೆ ಮುಡಾ ಯಾವ ಅಧಿಕಾರಿಗಳೂ ನನ್ನನ್ನು ಸಂಪರ್ಕಿಸಿಲ್ಲ. ನಾನು ಯಾವುದೇ ನಿರ್ದೇಶನ ನೀಡಿಲ್ಲ, ನಾನು ಆಗ ಅಧಿಕಾರದಲ್ಲೂ ಇರಲಿಲ್ಲ . 2023ರ ಚುನಾವಣಾ ಘೋಷಣಾ ಪ್ರಮಾಣ ಪತ್ರದಲ್ಲಿ 14 ನಿವೇಶನಗಳ ಬಗ್ಗೆ ನಮೂದಿಸಿರುವ ವಿಚಾರ ನೆನಪಿಲ್ಲ. ನನ್ನ ಹೆಸರನ್ನು ಅನಗತ್ಯವಾಗಿ ಎಳೆದು ತಂದಿದ್ದರಿಂದ 14 ನಿವೇಶನಗಳನ್ನು ವಾಪಸ್ ಕೊಡುವ ನಿರ್ಧಾರ ನನ್ನ ಪತ್ನಿಯದ್ದೇ ಆಗಿದೆ.

    14 ನಿವೇಶನಗಳ ಖಾತೆ ಮಾಡಿಕೊಡಲು ನನ್ನ ಪತ್ನಿ ಸಹಿ ಮಾಡುವ ಸ್ಥಳದಲ್ಲಿ ಕುಮಾರ್ ಸಹಿ ಮಾಡಿರುವ ವಿಚಾರ ನನಗೆ ತಿಳಿದು ಬಂತು. ನನ್ನ ಪತ್ನಿ ಅವರಿಗೆ ಸಹಿ ಮಾಡಲು ಅನುಮತಿಸಿರಬಹುದು. ನನ್ನ ಪತ್ನಿ ಮುಡಾಗೆ ನೀಡಿರುವ ಅರ್ಜಿಯಲ್ಲಿ ವೈಟ್ನರ್ ಹಾಕಿರುವ ಬಗ್ಗೆ ನನಗೆ ತಿಳಿದಿಲ್ಲ.

  • MUDA Scam| ಸಿಎಂಗೆ ಸಂಕಷ್ಟ – ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಇಡಿ ಸಮನ್ಸ್‌

    MUDA Scam| ಸಿಎಂಗೆ ಸಂಕಷ್ಟ – ವಿಚಾರಣೆಗೆ ಹಾಜರಾಗುವಂತೆ ಪತ್ನಿಗೆ ಇಡಿ ಸಮನ್ಸ್‌

    ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸೈಟ್‌ ಹಗರಣ (MUDA Scam) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ತನಿಖೆಯಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಈಗ ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ನಿ ಪಾರ್ವತಿ ಮತ್ತು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಿದೆ.

    ಜ. 23 ರಂದು ಇಡಿ ನೋಟಿಸ್‌ ಜಾರಿ ಮಾಡಿದ್ದ ಇಡಿ ಜ.27 ರಂದು (ಇಂದು) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇಂದು ಬೆಳಗ್ಗೆ ಹೈಕೋರ್ಟ್‌ನಲ್ಲಿ ಪಾರ್ವತಿ (Parvathi) ಮತ್ತು ಬೈರತಿ ಸುರೇಶ್‌ (Byrathi Suresh) ಅವರು ಇಡಿ ನೋಟಿಸ್‌ ನೀಡಿದ್ದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದು ಮಧ್ಯಾಹ್ನ 2:30ಕ್ಕೆ ಅರ್ಜಿ ವಿಚಾರಣೆಗೆ ಬರಲಿದೆ. ಇದನ್ನೂ ಓದಿ: ಮುಡಾ ಕೇಸಲ್ಲಿ ಸಿಎಂ ಬಾಮೈದನಿಗೆ ಇಡಿ ವಿಚಾರಣೆ – ಸತತ 4 ಗಂಟೆ ಡ್ರಿಲ್

    ಗುರುವಾರ (ಜ.23) ಬೆಳಗ್ಗೆ ಸಿಎಂ ಕುಟುಂಬಕ್ಕೆ ಲೋಕಾಯುಕ್ತದಿಂದ ಕ್ಲೀನ್ ಚಿಟ್ ಎಂದು ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಕೇಳಿದ ಪ್ರಶ್ನೆಗೆ ನನಗೇನೂ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆ ಬಳಿಕ ಗುರುವಾರ ಸಂಜೆಯೇ ಸಿಎಂ ಪತ್ನಿ ಪಾರ್ವತಿ ಅವರಿಗೆ ಇಡಿ ಸಮನ್ಸ್‌ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇದನ್ನೂ ಓದಿ: MUDA ಅಕ್ರಮದಲ್ಲಿ ʼಕೋಕನಟ್‌ʼ ಡೀಲ್‌ – 50, 100 ಕೋಕನಟ್‌ ಕಳುಹಿಸಿ ಸಿಕ್ಕಿಬಿದ್ದ ಬಿಲ್ಡರ್‌

    ಈಗಾಗಲೇ ಸಿಎಂ ಪತ್ನಿ ಅವರು ತನಗೆ ನೀಡಿದ 14 ಸೈಟ್‌ಗಳು ಮುಡಾಗೆ ಮರಳಿಸಿದ್ದಾರೆ. ಲೋಕಾಯುಕ್ತ, ಇಡಿಯಲ್ಲಿ ಎಫ್‌ಐಆರ್‌ ಬೆನ್ನಲ್ಲೇ ಕಳೆದ ಸೆ.30 ರಂದು 14 ನಿವೇಶನ ಹಿಂದಿರುಗಿಸುವುದಾಗಿ ಮುಡಾ ಆಯುಕ್ತರಿಗೆ ಪಾರ್ವತಿ ಅವರು ಪತ್ರ ಬರೆದಿದ್ದರು.

  • ಸಿಎಂ ಪತ್ನಿ ಪತ್ರದ ಬೆನ್ನಲ್ಲೇ 14 ಸೈಟ್‌ಗಳ ಸೇಲ್ ಡೀಡ್ ರದ್ದು; ಅಧಿಕಾರಿಗಳಿಂದ ಭೂಮಿ ಪರಿಶೀಲನೆ

    ಸಿಎಂ ಪತ್ನಿ ಪತ್ರದ ಬೆನ್ನಲ್ಲೇ 14 ಸೈಟ್‌ಗಳ ಸೇಲ್ ಡೀಡ್ ರದ್ದು; ಅಧಿಕಾರಿಗಳಿಂದ ಭೂಮಿ ಪರಿಶೀಲನೆ

    ಬೆಂಗಳೂರು: ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಇಡಿ ECIR ದಾಖಲಿಸುತ್ತಿದ್ದಂತೆ ಮುಡಾ ಕೇಸ್‌ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಹತ್ವದ ಬೆಳವಣಿಗೆಯಲ್ಲಿ ಸಿಎಂ ಪತ್ನಿ ಪಾರ್ವತಿ 14 ಸೈಟ್‌ಗಳನ್ನು ವಾಪಸ್ ಮಾಡಿ ಮುಡಾಗೆ ಪತ್ರ ಬರೆದಿದ್ದಾರೆ.

    40 ವರ್ಷದ ರಾಜಕಾರಣದಲ್ಲಿ ಸಣ್ಣ ಕಳಂಕ ಹೊಂದಿಲ್ಲದ ನನ್ನ ಪತಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ, ನನ್ನ ಪಾಲಿಗೆ ಅರಿಶಿನ-ಕುಂಕುಮದ ರೂಪದಲ್ಲಿ ತವರಿನಿಂದ ಸಿಕ್ಕಿದ ಜಮೀನು (Land) ಕಂಟಕವಾಗುತ್ತೆ ಎಂದು ಎಣಿಸಿರಲಿಲ್ಲ. ಹೀಗಾಗಿ 14 ಸೈಟ್ ವಾಪಸ್ ನೀಡ್ತಿದ್ದೇನೆ ಎಂದು ಸಿಎಂ ಪತ್ನಿ ಪಾರ್ವತಿ (Parvathy) ಮುಡಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ವಿಚಾರ ತಮ್ಮ ಪತಿಗೂ ಗೊತ್ತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಅಕ್ಟೋಬರ್ 3ಕ್ಕೆ PSI ಪರೀಕ್ಷೆ; ಕ್ಯಾಮೆರಾ ಕಣ್ಗಾವಲಿನಲ್ಲಿ ಪರೀಕ್ಷೆ, ENT ವೈದ್ಯರ ನಿಯೋಜನೆ: – ಕೆಇಎ

    ಈ ಬೆನ್ನಲ್ಲೇ ಪತ್ನಿ ನಿರ್ಧಾರವನ್ನು ಸಿಎಂ ಸ್ವಾಗತಿಸಿದ್ದಾರೆ. ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡಿದ್ದಾರೆ. ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ, ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸ್ತಿದ್ದಾರೆ ಎಂದು ಸಿಎಂ ಹೇಳಿದ್ದಾರೆ. ಇದರ ಮಧ್ಯೆ, ಪಾರ್ವತಿ ಪತ್ರವನ್ನು ಸಿಎಂ ಪುತ್ರ, ಎಂಎಲ್‌ಸಿ ಯತೀಂದ್ರ ಮುಡಾ ಆಯುಕ್ತರಿಗೆ ಮಂಗಳವಾರ ಬೆಳಗ್ಗೆ ತಲುಪಿಸಿದ್ದಾರೆ. ಇದನ್ನು ಪರಿಶೀಲಿಸಿದ ಮುಡಾ, 14 ಸೈಟ್‌ಗಳ ಸೇಲ್ ಡೀಡ್ ರದ್ದು ಮಾಡಿದೆ. ವಿಜಯನಗರದಲ್ಲಿ ಸಿಎಂ ಪತ್ನಿಗೆ ನೀಡಿದ್ದ 14 ಸೈಟ್‌ಗಳನ್ನು ಮುಡಾ ವಾಪಸ್ ಪಡೆದಿದೆ.

    ಸಿಎಂ ಪತ್ನಿ ಸೈಟ್ ವಾಪಸ್.. ಮುಂದೇನು?
    * ಕಾನೂನಾತ್ಮಕವಾಗಿ ಯಾವುದೇ ಪರಿಣಾಮ ಬೀರಲ್ಲ
    * ಈಗಾಗಲೇ ತನಿಖೆಗೆ ಆದೇಶ ಆಗಿದ್ದು, ತನಿಖೆ ನಡೆಯಲೇಬೇಕು
    * ತನಿಖೆಯಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ
    * ಸಿಎಂ, ಸಿಎಂ ಪತ್ನಿ, ಉಳಿದ ಆರೋಪಿಗಳು ತನಿಖೆ ಎದುರಿಸಲೇಬೇಕು
    * ಪ್ರಕರಣದಲ್ಲಿ ಸಿಎಂಗೆ ಕಾನೂನು ಹೋರಾಟ ಅನಿವಾರ್ಯ

    ಅಧಿಕಾರಿಗಳ ಸಮ್ಮುಖದಲ್ಲೇ ಭೂಮಿ ಪರಿಶೀಲನೆ:
    ಮುಡಾಗೆ ಸಿಎಂ ಪತ್ನಿ ಸೈಟ್‌ಗಳನ್ನು ವಾಪಸ್ ಮಾಡಿದ ಬೆಳವಣಿಗೆ ಮಧ್ಯೆ ಮೈಸೂರು ಲೋಕಾಯುಕ್ತದಲ್ಲಿ ತನಿಖೆ ಚುರುಕಾಗಿದೆ. ಇವತ್ತು ದೂರುದಾರ ಸ್ನೇಹಮಯಿ ಕೃಷ್ಣರನ್ನು ವಿಚಾರಣೆಗೆ ಒಳಪಡಿಸಿದ್ರು. ಅಲ್ಲದೇ, ಸ್ನೇಹಮಯಿ ಕೃಷ್ಣ ಸಮ್ಮುಖದಲ್ಲಿ ಕೆಸರೆ ಗ್ರಾಮದ ವಿವಾದಿತ ಜಮೀನಲ್ಲಿ ಮಹಜರು ನಡೆಸಿದ್ರು. ಬಳಿಕ ಮಾತಾಡಿದ ಸ್ನೇಹಮಯಿ ಕೃಷ್ಣ, ಇವತ್ತಿನ ಸ್ಥಳ ಮಹಜರು ಪ್ರಕ್ರಿಯೆ ತೃಪ್ತಿ ನೀಡಿದೆ. ಲೋಕಾಯುಕ್ತ ಅಧಿಕಾರಿಗಳೇ ಖುದ್ದು ಸ್ನೇಹಮಯಿ ಕೃಷ್ಣ ಅವರೊಂದಿಗೆ ತೆರಳಿ, ಮೈಸೂರು ತಾಲೂಕು ಕೆಸರೆ ಗ್ರಾಮದಲ್ಲಿರೋ ಸರ್ವೆ ನಂ. 464ರ 3.16 ಎಕರೆ ಭೂಮಿಯನ್ನ ಸ್ಥಳ ಮಹಜರು ನಡೆಸಿದ್ದಾರೆ. ಸಿಎಂ ಪತ್ನಿ ಖರೀದಿಸಿರುವ ಜಮೀನಿನಲ್ಲಿ ನಿವೇಶನ ರಚನೆ ಕುರುಹುಗಳು ಕಂಡುಬಂದಿವೆ. ಗುರುವಾರ ವಿಜಯನಗರ 3-4ನೇ ಹಂತದಲ್ಲಿರುವ 14 ಸೈಟ್‌ಗಳಲ್ಲಿ ಮಹಜರು ನಡೆಯಲಿದೆ. ನನಗೆ ಹಾಜರಿರಲು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆಂದರು.

    ಈ ಮಧ್ಯೆ, ದೂರುದಾರ ಸ್ನೇಹಮಯಿ ಕೃಷ್ಣಗೆ ಜೀವಕ್ಕೆ ಅಪಾಯ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ ಅವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಿ ಗೃಹ ಸಚಿವರು ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ನಸ್ರಲ್ಲಾ ಹತ್ಯೆ ಬಳಿಕ ಹಿಜ್ಬುಲ್ಲಾ ಪ್ರತೀಕಾರದ ದಾಳಿ – ಮೊಸಾದ್‌ ಹೆಡ್‌ಕ್ವಾರ್ಟಸ್‌ ಮೇಲೆ ಅಟ್ಯಾಕ್‌

    ಸಿಎಂ ತಲೆದಂಡಕ್ಕೆ ವಿಪಕ್ಷಗಳ ಪಟ್ಟು:
    ಸಿಎಂ ಪತ್ನಿ ಸೈಟ್ ವಾಪಸ್ ನೀಡಿದ ಬೆನ್ನಲ್ಲೇ ವಿಪಕ್ಷಗಳ ವಾಗ್ದಾಳಿ ಇನ್ನಷ್ಟು ತೀವ್ರಗೊಂಡಿದೆ. ತಪ್ಪು ಮಾಡಿಲ್ಲ ಅಂದ್ಮೇಲೆ ಸೈಟ್ ಏಕೆ ವಾಪಸ್ ಕೊಡ್ಬೇಕಿತ್ತು? ಅವರು ಸೈಟ್ ವಾಪಸ್ ಮಾಡಿದ್ದಾರೆ ಅಂದ್ಮೇಲೆ ಅವರು ತಪ್ಪು ಒಪ್ಪಿಕೊಂಡಂತೆ ಆಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎನ್ನುತ್ತಾ ಕೇಸರಿ ಪಡೆ ಮುಗಿಬಿದ್ದಿದೆ. ಕಾನೂನು ಕುಣಿಕೆಯಿಂದ ಬಚಾವ್ ಆಗಲು, ರಾಜಕೀಯವಾಗಿ ಅನುಕಂಪ ಪಡೆಯಲು ಸೈಟು ವಾಪಸ್ ಮಾಡಿದ್ದಾರೆ. ಭಾವನಾತ್ಮಕ ದಾಳ ಉರುಳಿಸಿದ್ದಾರೆ. ಆದ್ರೆ, ಇದು ವರ್ಕೌಟ್ ಆಗಲ್ಲ ಎಂದು ಬಿಜೆಪಿ ಹೇಳಿದೆ.

    ಸಿದ್ದರಾಮಯ್ಯ ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು ಎಂದು ವಿಜಯೇಂದ್ರ ಭವಿಷ್ಯ ಹೇಳಿದ್ದಾರೆ. ಜಂಬೂಸವಾರಿಗೆ ಸಿಎಂ ಪುಷ್ಪಾರ್ಚನೆ ಮಾಡೋದೇ ಅನುಮಾನ ಎಂದು ಶಾಸಕ ಶ್ರೀವತ್ಸ ಹೇಳಿದ್ದಾರೆ. ನಾನು ಹಿಂದೆನೇ ಸಿಎಂಗೆ ಹೇಳಿದ್ದೇ. ಅವರು ಮಾತೇ ಕೇಳಲಿಲ್ಲ, ಈಗ ಸೈಟ್ ವಾಪಸ್ ಮಾಡಿದ್ರೂ ಏನು ಪ್ರಯೋಜನ ಇಲ್ಲ. ತನಿಖೆ ಎದುರಿಸಲೇಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇದನ್ನೂ ಓದಿ: ಒಂದು ದಿನವಾದ್ರೂ ನನ್ನನ್ನ ಜೈಲಿಗೆ ಕಳಿಸಲು ರಾಜ್ಯ ಸರ್ಕಾರದಿಂದ ಸಂಚು – ಹೆಚ್‌ಡಿಕೆ ಗಂಭೀರ ಆರೋಪ

  • ಪ್ರಜ್ವಲ್‌ ಪ್ರಕರಣಕ್ಕೆ ಭವಾನಿಯನ್ನು ಎಳೆ ತಂದಾಗ ಸರಿ ಅನ್ನಿಸಿತ್ತಾ: ಕಾಂಗ್ರೆಸ್‌ಗೆ ಟೀಕೆಗೆ ಅಶೋಕ್‌ ಪ್ರಶ್ನೆ

    ಪ್ರಜ್ವಲ್‌ ಪ್ರಕರಣಕ್ಕೆ ಭವಾನಿಯನ್ನು ಎಳೆ ತಂದಾಗ ಸರಿ ಅನ್ನಿಸಿತ್ತಾ: ಕಾಂಗ್ರೆಸ್‌ಗೆ ಟೀಕೆಗೆ ಅಶೋಕ್‌ ಪ್ರಶ್ನೆ

    ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಭವಾನಿ ರೇವಣ್ಣ ಅವರನ್ನು ಎಳೆದು ತಂದಿದ್ದು ಸರಿಯೇ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌ ಅವರು ಕಾಂಗ್ರೆಸ್‌ ನಾಯಕರಿಗೆ ಪ್ರಶ್ನೆ ಮಾಡಿದ್ದಾರೆ.

    ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಬರೆದ ಪತ್ರವನ್ನು ಉಲ್ಲೇಖಿಸಿ ಕಾಂಗ್ರೆಸ್‌ ಮಾಡುತ್ತಿರುವ ಟೀಕೆಗೆ ಪ್ರತಿಕ್ರಿಯಿಸಿ, ನಾನು ಸಿಎಂ ಪತ್ನಿಯವರ ಪತ್ರ ನೋಡಿದ್ದೇನೆ. ಯಾರೂ ಸಹ ಸುಖಾಸುಮ್ಮನೇ ಕುಟುಂಬದ ಹೆಸರನ್ನು ತರಬಾರದು. ಆದರೆ ಕಾಂಗ್ರೆಸ್ ಭವಾನಿ ರೇವಣ್ಣ ಹೆಸರು ತಂದಿದ್ದರು. ಆಗ ಅವರಿಗೆ ಅದು ಸರಿ ಅನ್ನಿಸಿತ್ತಾ ಎಂದು ಮರು ಪ್ರಶ್ನೆ ಹಾಕಿ ತಿರುಗೇಟು ನೀಡಿದರು. ಇದನ್ನೂ ಓದಿ: ಅಂದು ಹುಬ್ಲೋಟ್‌ ವಾಚ್‌, ಇಂದು ಮುಡಾ ಸೈಟ್‌ಗಳು! – ಭಾರೀ ಚರ್ಚೆಗೆ ಗ್ರಾಸವಾಗಿದ್ದ ಗಿಫ್ಟ್‌

     

    ಸೈಟ್ ವಾಪಸ್ ಕೊಟ್ಟಿದ್ದು ತುಂಬಾ ತಡವಾಗಿದೆ. ಇಷ್ಟು ದಿನ ನಾನು ತಪ್ಪೇ ಮಾಡಿಲ್ಲ ಎನ್ನುತ್ತಿದ್ದರು. ಈಗ ಯೂ ಟರ್ನ್ ಹೊಡೆದು ಸೈಟ್‌ ವಾಪಸ್‌ ನೀಡಿದ್ದಾರೆ. ರಾಜ್ಯದ ಜನತೆಗೆ ಈಗ ಎಲ್ಲವೂ ಅರ್ಥವಾಗಿದೆ ಎಂದು ಹೇಳಿದರು. ಇದನ್ನೂ ಓದಿ: ನಟ ಗೋವಿಂದ ಕಾಲಿಗೆ ಗುಂಡೇಟು – ಆಸ್ಪತ್ರೆಗೆ ದಾಖಲು : ಆಗಿದ್ದೇನು?

    ಮೂಡಾ ಕೇಸ್ ಹಾಕಿದ್ದು ರಾಜಕೀಯ ಪಕ್ಷಗಳಲ್ಲ. ಮೂಡಾ ಅಕ್ರಮದ ಬಗ್ಗೆ ಮೊದಲು ಮಾಧ್ಯಮಗಳಲ್ಲಿ ಸುದ್ದಿಗಳು ಪ್ರಕಟವಾಗಿತ್ತು. ತಪ್ಪು ಮಾಡಿಲ್ಲ ಅಂದಮೇಲೆ ಯಾಕೆ ಸೈಟ್ ವಾಪಸ್ ಕೊಟ್ಟಿದ್ದೀರಿ. ಸೈಟ್ ಇಟ್ಟುಕೊಂಡು ಕಾನೂನು ಹೋರಾಟ ಎದುರಿಸಬೇಕಿತ್ತು ಎಂದು ತಿಳಿಸಿದರು.

     

    ಬಿಜೆಪಿ ಸಿಎಂ ವಿರುದ್ಧ ಹೋರಾಟ ಮುಂದುವರೆಸುತ್ತದೆ. ನಮ್ಮ ಹೋರಾಟದಿಂದಲೇ ವಾಲ್ಮೀಕಿ ಹಗರಣ ಅಂತ್ಯಕ್ಕೆ ಬಂದು ನಿಂತಿದೆ. ಸಿಎಂ ಈಗಲಾದ್ರೂ ರಾಜೀನಾಮೆ ಕೊಡಬೇಕು. ಒಂದು ವೇಳೆ ಈಗ ರಾಜೀನಾಮೆ ನೀಡದೇ ಇದ್ದರೆ ರಾಜ್ಯವ್ಯಾಪಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

     

  • MUDA Case| ಪತ್ನಿ ನಿರ್ಧಾರ ಆಶ್ಚರ್ಯ ತಂದಿದೆ: ಸಿದ್ದರಾಮಯ್ಯ

    MUDA Case| ಪತ್ನಿ ನಿರ್ಧಾರ ಆಶ್ಚರ್ಯ ತಂದಿದೆ: ಸಿದ್ದರಾಮಯ್ಯ

    ಬೆಂಗಳೂರು: ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

    14 ಸೈಟ್‌ಗಳನ್ನು ಪಾರ್ವತಿ (Parvathi) ಅವರು ಮರಳಿ ಮುಡಾಕ್ಕೆ (MUDA Case) ನೀಡಿದ ಬಗ್ಗೆ ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣದಲ್ಲಿ ದ್ವೇಷ ರಾಜಕಾರಣ, ಸತ್ಯಮೇವ ಜಯತೆ ಎಂದು ಹ್ಯಾಶ್‌ ಟ್ಯಾಗ್‌ ಬಳಸಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮುಡಾ ಸೈಟ್‌ ವಾಪಸ್‌ಗೆ ಸಿಎಂ ಪತ್ನಿ ನಿರ್ಧಾರ – ಕಾನೂನು ಹೋರಾಟದ ಪರಿಣಾಮ ಏನು?

     

    ಸಿಎಂ ಪೋಸ್ಟ್‌ನಲ್ಲಿ ಏನಿದೆ?
    ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ ಜಮೀನಿಗೆ ಪರಿಹಾರ ರೂಪದಲ್ಲಿ ನೀಡಿದ್ದ ನಿವೇಶನಗಳನ್ನು ನನ್ನ ಪತ್ನಿ ಪಾರ್ವತಿ ಹಿಂದಿರುಗಿಸಿದ್ದಾರೆ.

    ನನ್ನ ವಿರುದ್ದ ರಾಜಕೀಯ ದ್ವೇಷ ಸಾಧನೆಗಾಗಿ ವಿರೋಧ ಪಕ್ಷಗಳು ಸುಳ್ಳು ದೂರನ್ನು ಸೃಷ್ಟಿಸಿ ನನ್ನ ಕುಟುಂಬವನ್ನು ವಿವಾದಕ್ಕೆ ಎಳೆದು ತಂದಿರುವುದು ರಾಜ್ಯದ ಜನತೆಗೂ ತಿಳಿದಿದೆ.

    ಈ ಅನ್ಯಾಯಕ್ಕೆ ತಲೆಬಾಗದೆ ಹೋರಾಟ ಮಾಡಬೇಕೆಂಬುದು ನನ್ನ ನಿಲುವಾಗಿತ್ತು. ಆದರೆ ನನ್ನ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರದಿಂದ ನೊಂದಿರುವ ನನ್ನ ಪತ್ನಿ ಈ ನಿವೇಶನಗಳನ್ನು ಹಿಂದಿರುಗಿಸುವ ನಿರ್ಧಾರ ಕೈಗೊಂಡು, ನನಗೂ ಆಶ್ಚರ್ಯ ಉಂಟು ಮಾಡಿದ್ದಾರೆ.

     

    ನನ್ನ ನಾಲ್ಕು ದಶಕಗಳ ಸುದೀರ್ಘ ರಾಜಕಾರಣದಲ್ಲಿ ಎಂದೂ ಕೂಡಾ ಮಧ್ಯೆಪ್ರವೇಶಿಸದೆ ಕುಟುಂಬಕ್ಕಷ್ಟೆ ಸೀಮಿತವಾಗಿದ್ದ ನನ್ನ ಪತ್ನಿ ನನ್ನ ವಿರುದ್ಧದ ದ್ವೇಷದ ರಾಜಕಾರಣಕ್ಕೆ ಬಲಿಯಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುವಂತಾಗಿರುವುದಕ್ಕೆ ನನಗೆ ವಿಷಾದ ಇದೆ. ಹೀಗಿದ್ದರೂ ನಿವೇಶನಗಳನ್ನು ಹಿಂದಿರುಗಿಸಿದ ನನ್ನ ಪತ್ನಿಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ.

     

  • MUDA Scam | ಹೊಸ ಟ್ವಿಸ್ಟ್‌ – ಸಿಎಂ ಪತ್ನಿ ಬರೆದ ಪತ್ರವನ್ನೇ ಅಧಿಕಾರಿಗಳು ವೈಟ್​ನರ್ ಬಳಸಿ ತಿರುಚಿದ್ದಾರಾ?

    MUDA Scam | ಹೊಸ ಟ್ವಿಸ್ಟ್‌ – ಸಿಎಂ ಪತ್ನಿ ಬರೆದ ಪತ್ರವನ್ನೇ ಅಧಿಕಾರಿಗಳು ವೈಟ್​ನರ್ ಬಳಸಿ ತಿರುಚಿದ್ದಾರಾ?

    ಮೈಸೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ (Siddaramaiah) ಪತ್ನಿ ಪಾರ್ವತಿ ಬರೆದ ಪತ್ರವನ್ನು ಅಧಿಕಾರಿಗಳು ತಿರುಚಿದ್ದಾರಾ ಎಂಬ ಗಂಭೀರ ಪ್ರಶ್ನೆ ಈಗ ಎದ್ದಿದೆ.

    ಹೌದು. ಸಿಎಂ ಪತ್ನಿ ಬರೆದ ಬರೆದ ಪತ್ರ ಈಗ ಮಾಧ್ಯಮಗಳಿಗೆ ಲಭ್ಯವಾಗಿದೆ. ಈ ಪತ್ರದಿಂದಾಗಿ ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಸಿಎಂ ಪತ್ನಿ ಬರೆದ ಪತ್ರವನ್ನೇ ಅಧಿಕಾರಿಗಳು ತಿರುಚಿದ್ದಾರಾ ಎಂಬ ಅನುಮಾನ ಎದ್ದಿದೆ.

    ಅನುಮಾನ ಯಾಕೆ?
    ನಾವು ವಿಜಯನಗರ ಬಡಾವಣೆಯಲ್ಲೇ ಸೈಟ್‌ ನೀಡಬೇಕೆಂದು ಕೇಳಿಲ್ಲ. ಮುಡಾದಿಂದಲೇ 14 ಸೈಟ್‌ ಹಂಚಿಕೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಪಾರ್ವತಿ ಬರೆದ ಪತ್ರದಲ್ಲಿ ವಿಜಯನಗರದ 2 ಮತ್ತು ಮೂರನೇ ಹಂತದಲ್ಲೇ ನಿವೇಶನ ಕೊಡುವಂತೆ ಕೇಳಿದ್ದಾರಾ ಎಂಬ ಅನುಮಾನ ಎದ್ದಿದೆ. ಲಭ್ಯವಾಗಿರುವ ಪತ್ರದಲ್ಲಿ ವೈಟ್​ನರ್ ಹಾಕಿ ಅಳಿಸಿದ್ದರಿಂದ ಈ ಪ್ರಶ್ನೆ ಮೂಡಿದೆ.

    ಕೆಸರೆ ಗ್ರಾಮದ ಜಮೀನನ್ನು ದೇವನೂರು ಮೂರನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಮುಡಾ ಸ್ವಾಧಿನ ಪಡಿಸಿಕೊಂಡಿತ್ತು. ಈ ಜಮೀನನ್ನು ಸಿಎಂ ಪತ್ನಿಯ ಸಹೋದರ 2004 ರಲ್ಲಿ ಖರೀದಿ ಮಾಡುತ್ತಾರೆ. ಮುಡಾ ಸ್ವಾಧೀನ ಪಡಿಸಿಕೊಂಡ ನಿವೇಶನ ಹಂಚಿದ ಜಾಗವನ್ನು ಸಿಎಂ ಸಹೋದರ ಖರೀದಿ ಮಾಡಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ ಎದ್ದಿದೆ. ಸಿಎಂ ಪತ್ನಿ ಪ್ರಾಧಿಕಾರಕ್ಕೆ ಬರೆದ ಪತ್ರದಿಂದ ಈಗ ಈ ಎಲ್ಲಾ ಅನುಮಾನಗಳು ಎದ್ದಿದೆ ಮತ್ತು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

  • MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?

    MUDA Scam | ಸಿದ್ದರಾಮಯ್ಯಗೆ ಉರುಳಾದ 14 ಸೈಟ್‌ – ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಬೆಳಕಿಗೆ ಬಂದಿದ್ದು ಹೇಗೆ?

    ಮೈಸೂರು: ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ದ ಈಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಇದಕ್ಕೆ ಕಾರಣ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ (Paravathi) ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ (MUDA) ಬಂದ 14 ಸೈಟ್. ಹಾಗಾದರೆ ಏನಿದು ಹಗರಣ? ವಿಪಕ್ಷಗಳ ಆರೋಪ ಏನು? ಈ ಹಗರಣ ಬೆಳಕಿಗೆ ಬಂದಿದ್ದು ಹೇಗೆ? ಇತ್ಯಾದಿ ವಿವರಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ವಿವಾದ?
    ಸಿದ್ದರಾಮಯ್ಯನವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಹೆಸರಿನಲ್ಲಿದ್ದ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನನ್ನು ದೇವನೂರು ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ಜಾಗವನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ದಾನ ಪತ್ರದ ಮೂಲಕ ಅವರ ಸಹೋದರ ಕೊಟ್ಟಿದ್ದರು. ಇದು ಒಟ್ಟು 1,48,104 ಚದರ ಅಡಿ ಜಾಗ ಇತ್ತು. ಅದರ ಬದಲಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ 2021ರಲ್ಲಿ ಪಾರ್ವತಿ ಅವರಿಗೆ ಮೈಸೂರಿನ ಪ್ರತಿಷ್ಠಿತ ವಿಜಯನಗರ ಬಡಾವಣೆಯಲ್ಲಿ 38,284 ಚದರ ಅಡಿ ಜಾಗ ನೀಡಿದ್ದು ಈಗ ವಿವಾದದ ಕೇಂದ್ರಬಿಂದು. ಇದನ್ನೂ ಓದಿ: ಬಿಜೆಪಿಯಿಂದ ಸಿದ್ದರಾಮಯ್ಯರ ಒಂದು ಕೂದಲು ಅಲುಗಾಡಿಸಲು ಸಾಧ್ಯವಿಲ್ಲ: ಹೆಚ್‌ಸಿ ಬಾಲಕೃಷ್ಣ

    ಬದಲಿ ನಿವೇಶನಕ್ಕೆ ಪತ್ರ
    ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರ ಸಹೋದರ, ಪಾರ್ವತಿಯವರಿಗೆ ದಾನವಾಗಿ ನೀಡಿದ್ದರು. ಈ ಜಾಗವನ್ನು ಅಭಿವೃದ್ಧಿಗಾಗಿ ಪ್ರಾಧಿಕಾರ ಕಾನೂನು ಪ್ರಕಾರವೇ ವಶಪಡಿಸಿಕೊಂಡಿತ್ತು. 1998 ರಲ್ಲಿ ನೋಟಿಫೈ ಮಾಡಿತ್ತು. ಇದೇ ಜಾಗದಲ್ಲಿ ದೇವನೂರು 3ನೇ ಹಂತದ ಬಡಾವಣೆಯನ್ನೂ ಅಭಿವೃದ್ಧಿ ಮಾಡಿದೆ. ವಿಷಯ ಏನೆಂದರೆ ವಶಪಡಿಸಿಕೊಂಡ ಜಾಗಕ್ಕೆ ಬದಲಿ ಭೂಮಿ ಕೊಡುವುದು ಪ್ರಾಧಿಕಾರದ ಕರ್ತವ್ಯ. ಹೀಗಾಗಿ ಬದಲಿ ಭೂಮಿ ನೀಡುವಂತೆ 2014ರಲ್ಲಿ ಸಿಎಂ ಪತ್ನಿ ಅರ್ಜಿ ಹಾಕಿದ್ದರು. 2017ರಲ್ಲಿ ನಡೆದ ಸಭೆಯಲ್ಲಿ ಅಭಿವೃದ್ಧಿಪಡಿಸದೇ ಇರುವ ಭೂಮಿ ನೀಡಲು ತೀರ್ಮಾನಿಸಲಾಗಿತ್ತು. ಆದರೆ ಇದಕ್ಕೆ ಒಪ್ಪದ ಸಿಎಂ ಪತ್ನಿ ಪಾರ್ವತಿ 2021ರಲ್ಲಿ ಮತ್ತೊಂದು ಪತ್ರ ಬರೆದು 50:50 ಅನುಪಾತದಲ್ಲಿ ಬದಲಿ ನಿವೇಶನ ಕೊಡಿ ಎಂದು ಮನವಿ ಸಲ್ಲಿಸಿದ್ದರು. ಸಿಎಂ ಪತ್ನಿ ಕೋರಿಕೆಯಂತೆ 2021ರಲ್ಲಿ 50:50 ಅನುಪಾತದಲ್ಲಿ ಭೂಮಿ ನೀಡಲಾಗಿದೆ.

    ಹಗರಣದ ವಾಸನೆ ಬಂದಿದ್ದು ಯಾಕೆ?
    ಭೂಮಿ ವಶಪಡಿಸಿಕೊಂಡ ಜಾಗ ಬಿಟ್ಟು ಅಥವಾ ಸಮಾನಾಂತರವಾದ ಜಾಗ ಬಿಟ್ಟು ವಿಜಯನಗರದಲ್ಲಿ ಅಭಿವೃದ್ಧಿ ಆಗಿರುವ 38,284 ಚದರಡಿ ಭೂಮಿ ಹಂಚಿಕೆ ಮಾಡಲಾಗಿದೆ. ಅಲ್ಲದೇ 1998ರಲ್ಲಿ ಕಳೆದುಕೊಂಡ ಭೂಮಿಗೆ 2021ರಲ್ಲಿ ಪರಿಹಾರ ನೀಡಲಾಗಿದೆ ಎಂಬುದು ಆರ್‌ಟಿಐ ಕಾರ್ಯಕರ್ತರ ಆರೋಪ. ಭೂಮಿ ವಶಪಡಿಸಿಕೊಂಡ ಜಾಗದಲ್ಲಿ, ಅಥವಾ ಸಮಾನಾಂತರ ಜಾಗದಲ್ಲಿ ಬದಲಿ ಭೂಮಿ ನೀಡಬೇಕು ಎಂಬುದು ಕಾನೂನಿನಲ್ಲಿದೆ. ಆದರೆ ಸಿಎಂ ಪತ್ನಿಗೆ ಭೂಸ್ವಾಧೀನವಾದ ಜಾಗ ಬಿಟ್ಟು, ವಿಜಯನಗರದಲ್ಲಿ ಭೂಮಿ ಕೊಡಲಾಗಿದೆ. ಸಿಎಂ ಪತ್ನಿ ಅಲ್ಲದೇ ಹಲವು ಮಂದಿ ಭೂಮಿಯನ್ನು ಮುಡಾ ವಶಪಡಿಸಿಕೊಂಡಿದೆ. ಸಿಎಂ ಪತ್ನಿಗೆ ಹಂಚಿಕೆ ಮಾಡಿದಂತೆ ಇವರಿಗೂ ಜಾಗವನ್ನು ವಿಜಯನಗರ ಬಡಾವಣೆಯಲ್ಲಿ ಜಾಗ ಹಂಚಿಕೆ ಮಾಡಿಲ್ಲ. 50:50 ಅನುಪಾತ ನಿಯಮವನ್ನ ದುರುಪಯೋಗಪಡಿಸಿಕೊಂಡು 1998ರಲ್ಲಿ ವಶಪಡಿಸಿಕೊಂಡ ಜಾಗಕ್ಕೆ 2020ರಲ್ಲಿ ಜಾರಿಗೆ ಬಂದ 50-50 ಅನುಪಾತ ಬಳಸಿದ್ದೇಕೆ ಎನ್ನುವುದೇ ದೊಡ್ಡ ಪ್ರಶ್ನೆ. ಇದನ್ನೂ ಓದಿ: ರಕ್ಷಿತ್ ಶೆಟ್ಟಿಗೆ 20 ಲಕ್ಷ ರೂ. ಠೇವಣಿ ಇಡುವಂತೆ ಹೈಕೋರ್ಟ್ ನಿರ್ದೇಶನ

     

    ಕೆಸರೆಯಲ್ಲಿ ಕಡಿಮೆ ಮೌಲ್ಯದ ಜಾಗ ಸ್ವಾಧೀನ ಮಾಡಿ, ವಿಜಯನಗರದಲ್ಲಿ ಹೆಚ್ಚಿನ ಮೌಲ್ಯದ ಬದಲಿ ಭೂಮಿ ನೀಡಲಾಗಿದೆ. ಅಂದರೆ, ದೇವನೂರು ಬಡಾವಣೆಯಲ್ಲಿ ಚದರ ಅಡಿಗೆ 2,500 ರೂ. ನಿಂದ 3,000 ರೂ.ವರೆಗೆ ದರ ಇದೆ. ಆದರೆ ವಿಜಯನಗರದಲ್ಲಿ ಚದರ ಅಡಿಗೆ 7 ರಿಂದ 8 ಸಾವಿರ ರೂಪಾಯಿ ಇದೆ. ಹೀಗಾಗಿ ಸಿಎಂ ಮತ್ತು ಸಿಎಂ ಪತ್ನಿಗೆ ಆರ್ಥಿಕ ಲಾಭ ಮಾಡಿಕೊಡಲು ಮುಡಾ ಅಧಿಕಾರಿಗಳು ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿದ್ದಾರೆ. ಸಿಎಂ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರಿಂದ ಈ ಜಾಗ ಹಂಚಿಕೆ ಮಾಡಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    ಒಂದನೇಯದಾಗಿ ಸಿಎಂ ಪತ್ನಿಗೆ 1998ರ ಜಾಗಕ್ಕೆ 2021ರಲ್ಲಿ ಪರಿಹಾರ ಸಿಕ್ಕಿರುವುದು, ಎರಡನೇಯದ್ದು ಬೇರೆ ಕಡೆ ಭೂಮಿ ಕೊಟ್ಟಿರುವುದು, ಮೂರನೇಯದ್ದು 50-50 ಅನುಪಾತ ದುರ್ಬಳಕೆ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿ ಈಗ ಸಿಎಂ ಸಂಕಷ್ಟಕ್ಕೆ ಕಾರಣವಾಗಿದೆ.

    ಬೆಳಕಿಗೆ ಬಂದಿದ್ದು ಹೇಗೆ?
    50:50 ಅನುಪಾತದ ಅಡಿ ನಿವೇಶನ ಹಂಚಿಕೆ ಬಗ್ಗೆ ಒಂದೂವರೆ ತಿಂಗಳ ಹಿಂದೆ ಆರ್‌ಟಿಐ (RTI) ಕಾರ್ಯಕರ್ತರು ಧ್ವನಿ ಎತ್ತಿದ್ದರು. ಈ ವೇಳೆ ಸಿಎಂ ಪತ್ನಿಗೂ ನಿವೇಶನ ಹಂಚಿಕೆ ಆಗಿರುವ ದಾಖಲೆ ಬೆಳಕಿಗೆ ಬಂದವು. ಹೀಗಾಗಿ ಹಗರಣ ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.

     

     

  • ಸಿಎಂ ಸಿದ್ದರಾಮಯ್ಯ ಪತ್ನಿಗೂ ಮುಡಾದಲ್ಲಿ ಬದಲಿ ನಿವೇಶನ!

    ಸಿಎಂ ಸಿದ್ದರಾಮಯ್ಯ ಪತ್ನಿಗೂ ಮುಡಾದಲ್ಲಿ ಬದಲಿ ನಿವೇಶನ!

    ಮೈಸೂರು: ಇಲ್ಲಿನ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದಲ್ಲಿ ಸೈಟ್ ಹಂಚಿಕೆ ವಿಚಾರದಲ್ಲಿ ಅಕ್ರಮ ನಡೆದಿದೆ ಎಂಬ ವಿಚಾರ ದೊಡ್ಡ ಸದ್ದು ಮಾಡ್ತಿರೋ ಬೆನ್ನಲ್ಲೇ 50:50 ಅನುಪಾತದಲ್ಲೇ ಸಿಎಂ (Siddaramaiah) ಪತ್ನಿಗೂ ಭಾರೀ ಪ್ರಮಾಣದ ಭೂಮಿ ದೊರಕಿರುವ ದಾಖಲೆ ಸಿಕ್ಕಿವೆ.

    ಸಿಎಂ ಪತ್ನಿ ಪಾರ್ವತಿ (Parvathamma) ಅವರ ಹೆಸರಿನಲ್ಲಿ ಇದ್ದ ಜಾಗವನ್ನು 1997 ರಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವಶಕ್ಕೆ ಪಡೆದು, ಆ ಭೂಮಿಗೆ 2021 ರಲ್ಲಿ ಪರಿಹಾರ ಕೊಟ್ಟಿದೆ. ಸಿಎಂ ಪತ್ನಿಗೆ ನೀಡಿರುವ 50:50 ಅನುಪಾತದ ಪರಿಹಾರದ ಸುತ್ತ ಅನುಮಾದ ಹುತ್ತ ಬೆಳೆದಿದೆ. 1997 ರ ಆಗಸ್ಟ್ 20 ರಂದು ಮೈಸೂರು ತಾಲೂಕು ಕೆಸೆರೆ ಗ್ರಾಮದ ಸರ್ವೆ ನಂ.464 ರಲ್ಲಿ 3.16 ಎಕರೆ ಭೂಮಿ ನೋಟಿಫೈ ಮಾಡಲಾಗಿತ್ತು.

    ದೇವನೂರು ಮೂರನೇ ಹಂತ ಬಡವಾಣೆ ಅಭಿವೃದ್ದಿಗೆ ಅದಿಸೂಚನೆ ಮಾಡಲಾಗಿದ್ದ ಭೂಮಿ ಇದಾಗಿತ್ತು. ಆ ಕಾಲದಲ್ಲೇ 3,24,700 ರೂ. ವೈಯಕ್ತಿಕ ಅವಾರ್ಡ್ ನೀಡಲಾಗಿತ್ತು. 2014ರ ಜೂನ್ 23ರಲ್ಲಿ ಮುಡಾಗೆ ಬದಲಿ ನಿವೇಶನ ನೀಡುವಂತೆ ಸಿಎಂ ಪತ್ನಿ ಪಾರ್ವತಿ ಪತ್ರ ಬರೆದಿದ್ದರು. ಈ ಸಂಬಂಧ 2017 ಡಿಸೆಂಬರ್ 15 ಹಾಗೂ 2014ರ ಡಿಸೆಂಬರ್ 30 ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಅರ್ಜಿದಾರರ ಭೂಮಿಗೆ ಸಮನಾಗಿ ಅಭಿವೃದ್ಧಿಪಡಿಸದ ಜಮೀನನ್ನ ನೀಡಲು ತೀರ್ಮಾನ ಮಾಡಿದ್ದಾರೆ. ಅದಕ್ಕೂ ಒಪ್ಪದ ಸಿಎಂ ಪತ್ನಿ 2021 ರ ಅಕ್ಟೋಬರ್ 25 ರಲ್ಲಿ ಮುಡಾಗೆ ಮತ್ತೊಂದು ಪತ್ರ ಬರೆದು 50:50 ಅನುಪಾತದಲ್ಲಿ ಬದಲಿ ನಿವೇಶನ ನೀಡುವಂತೆ ಕೋರಿ ಸಿಎಂ ಪತ್ನಿ ಪಾರ್ವತಿ ಪತ್ರ ಬರೆದಿದ್ದರು. ಈ ಕೋರಿಕೆಯಂತೆ 2021ರ ಅಕ್ಟೋಬರ್ 29 ರಂದು 50:50 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ 38,284 ಚದರ ಅಡಿ ಅಳತೆಯ ನಿವೇಶನವನ್ನ ಆಯುಕ್ತರು ನೀಡಿದ್ದರು. ಇದರೊಂದಿಗೆ 1997 ರಲ್ಲಿ ಕಳೆದುಕೊಂಡ ಭೂಮಿಗೆ 2021 ರಲ್ಲಿ ಸಿಎಂ ಪತ್ನಿ ಪರಿಹಾರ ಪಡೆದಿರುವು ದಾಖಲೆ ಬಯಲಾಗಿದೆ.