Tag: ಪಾರ್ವತಮ್ಮ ರಾಜ್ ಕುಮಾರ್

  • ಡಾ. ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ: ಭಾವುಕರಾದ ರಾಮಯ್ಯ ಆಸ್ಪತ್ರೆ ವೈದ್ಯರು

    ಡಾ. ಪಾರ್ವತಮ್ಮ ರಾಜ್ ಕುಮಾರ್ ವಿಧಿವಶ: ಭಾವುಕರಾದ ರಾಮಯ್ಯ ಆಸ್ಪತ್ರೆ ವೈದ್ಯರು

    ಬೆಂಗಳೂರು: ಪಾರ್ವತಮ್ಮ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತಿದ್ದು, ಅವರು ಬದುಕಿ ಬರ್ತಾರೆ ಅನ್ನೋ ನಂಬಿಕೆ ಇತ್ತು ಅಂತಾ ರಾಮಯ್ಯ ಆಸ್ಪತ್ರೆ ವೈದ್ಯರು ಗದ್ಗದಿತರಾದ್ರು.

    ನಿನ್ನೆಯವರೆಗೂ ಅವರು ಚೇತರಿಕೆಯಾಗ್ತಾರೆ ಅಂತಾ ಅಂದುಕೊಂಡಿದ್ವಿ. ಯಾಕಂದ್ರೆ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡುಬಂದಿತ್ತು. ಅಂತೆಯೇ ಅವರು ಮಾತನಾಡಲು ಪ್ರಯತ್ನಿಸುತ್ತಿದ್ದರು. ಆದ್ರೆ ನಿನ್ನೆ ರಾತ್ರಿ ದಿಢೀರ್ ಬ್ಲಡ್ ಪ್ರೆಷರ್ ಜಾಸ್ತಿ ಆಗಿದ್ದು, ಕಂಟ್ರೋಲ್ ಗೆ ಸಿಕ್ಕಿಲ್ಲ. ಹೀಗಾಗಿ ರಾತ್ರಿ 10 ಗಂಟೆ ಸುಮಾರಿಗೆ ಕಂಪ್ಲೀಟ್ ಆಗಿ ನಮ್ಗೆ ಹೋಪ್ಸ್ ಹೋಯ್ತು ಅಂತಾ ಭಾವುಕರಾದ್ರು.

    ಪಾರ್ವತಮ್ಮ ಅವರಿಗೆ ಕ್ಯಾನ್ಸರ್, ಶುಗರ್, ಕಿಡ್ನಿ ಹಾಗೂ ಲಿವರ್ ಇನ್ ಫೆಕ್ಷನ್ ಆಗಿತ್ತು. ಹೀಗಾಗಿ ಇಂದು ಮುಂಜಾನೆ ಸುಮಾರು 4.40ರ ವೇಳೆಗೆ ಅವರಿಗೆ ಹೃದಯಾಘಾತವಾಯ್ತು. ಈ ಸಂದರ್ಭದಲ್ಲಿ ಅವರ ಪುತ್ರ ರಾಘವೇಂದ್ರ ರಾಜ್ ಕುಮಾರ್ ಇದ್ರು. ಬಳಿಕ ಅವರ ಕುಟುಂಬಸ್ಥರಿಗೆ ಮಾಹಿತಿ ನಿಡಿದ್ದೇವೆ ಅಂತಾ ಹೇಳಿದ್ರು.

  • ಕಣ್ಣು ದಾನ ಮಾಡಿದ ಪಾರ್ವತಮ್ಮ ರಾಜ್ ಕುಮಾರ್

    ಕಣ್ಣು ದಾನ ಮಾಡಿದ ಪಾರ್ವತಮ್ಮ ರಾಜ್ ಕುಮಾರ್

    ಬೆಂಗಳೂರು: ದಿವಂಗತ ರಾಜ್ ಕುಮಾರ್ ಅವರಂತೆಯೇ ಇದೀಗ ಪತ್ನಿ ಹಾಗೂ ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಕೂಡ ಕಣ್ಣು ದಾನ ಮಾಡಿದ್ದಾರೆ.

    ಈ ಹಿನ್ನೆಲೆಯಲ್ಲಿ ನಾರಾಯಣ ನೇತ್ರಾಲಯದ ವೈದ್ಯರು ಸದಾಶಿವನಗರ ನಿವಾಸಕ್ಕೆ ಭೇಟಿ ನೀಡಿದ್ದಾರೆ.

    78 ವರ್ಷ ವಯಸ್ಸಿನ ಪಾರ್ವತಮ್ಮ ಅವರು ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದಿಂದ ಆರೋಗ್ಯದಲ್ಲಿ ಏರುಪೇರಾಗಿ ಕಳೆದ 15 ದಿನಗಳಿಂದ ಎಂ ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 4.40ರ ಸುಮಾರಿಗೆ ನಿಧನರಾಗಿದ್ದಾರೆ.

    sಸದ್ಯ ಪಾರ್ವತಮ್ಮ ಮೃತದೇಹವನ್ನು ಪುತ್ರ ರಾಘವೇಂದ್ರ ರಾಜ್ ಕುಮಾರ್ ನಿವಾಸಕ್ಕೆ ರವಾನಿಸಲಾಗಿದೆ. ನಂತ್ರ ಸದಾಶಿವನಗರದ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುತ್ತಿದೆ.

    ಪಾರ್ವತಮ್ಮ ಅವರು ತಮ್ಮ ಮಕ್ಕಳಾದ ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

  • ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ವಿಧಿವಶ

    ಹಿರಿಯ ನಿರ್ಮಾಪಕಿ ಪಾರ್ವತಮ್ಮ ರಾಜ್‍ಕುಮಾರ್ ವಿಧಿವಶ

    ಬೆಂಗಳೂರು: ಹಿರಿಯ ನಿರ್ಮಾಪಕಿ ಡಾ. ಪಾರ್ವತಮ್ಮ ರಾಜ್‍ಕುಮಾರ್(78)  ವಿಧಿವಶರಾಗಿದ್ದಾರೆ.

    ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರದ ಪೂರ್ಣಪ್ರಜ್ಞಾ ಆಟದ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೂರ್ಣಪ್ರಜ್ಞ ಮೈದಾನಕ್ಕೆ ಆಗಮಿಸಿ ನಟ ಅಂಬರೀಶ್, ಮುನಿರತ್ನ, ರಾಕ್‍ಲೈನ್ ವೆಂಕಟೇಶ್ ಅಲ್ಲದೇ ಬೆಂಗಳುರು ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ವ್ಯವಸ್ಥೆ ಪರಿಶೀಲಿಸಿದ್ದಾರೆ.

    ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ಬಳುತ್ತಿದ್ದ ಪಾರ್ವತಮ್ಮ ಅವರು ನಗರದ ರಾಮಯ್ಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇದೀಗ ನಿಧನರಾಗಿದ್ದಾರೆ.

  • ಅಮ್ಮನ ಆರೋಗ್ಯದ ಬಗ್ಗೆ ಮುಚ್ಚಿಡೋ ಅಗತ್ಯ ನಮಗಿಲ್ಲ: ಶಿವರಾಜ್ ಕುಮಾರ್

    ಅಮ್ಮನ ಆರೋಗ್ಯದ ಬಗ್ಗೆ ಮುಚ್ಚಿಡೋ ಅಗತ್ಯ ನಮಗಿಲ್ಲ: ಶಿವರಾಜ್ ಕುಮಾರ್

    – ಆಸ್ಪತ್ರೆಗೆ ಬಿಎಸ್ ಯಡಿಯೂರಪ್ಪ ಭೇಟಿ

    ಬೆಂಗಳೂರು: ಪಾರ್ವತಮ್ಮ ರಾಜ್‍ಕುಮಾರ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರ ಆರೋಗ್ಯದ ಬಗ್ಗೆ ಮುಚ್ಚಿಡುವ ಅಗತ್ಯ ನಮಗಿಲ್ಲ. ಆದ್ರೆ ದಯವಿಟ್ಟು ಸುಳ್ಳು ಸುದ್ದಿ ಹರಡಿಸಬೇಡಿ ಅಂತಾ ನಟ ಶಿವರಾಜ್ ಕುಮಾರ್ ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.

    ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊನ್ನೇ ತಾನೇ ಉಸಿರಾಟದ ತೊಂದರೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ಪಾರ್ವತಮ್ಮ ಅವರಿಗೆ ವೆಂಟಿಲೇಟರ್ ಮೂಲಕ ಕೃತಕ ಉಸಿರಾಟಕ್ಕೆ ಅವಕಾಶಕೊಡಲಾಗಿತ್ತು. ಅಲ್ಲದೇ ಡಯಾಲಿಸಿಸ್ ನಿಲ್ಲಿಸಲಾಗಿದೆ. ಅವರ ಆರೋಗ್ಯದಲ್ಲಿ ಗುಣಮುಖರಾಗೋ ಲಕ್ಷಣ ಕಂಡುಬಂದಿದೆ ಅಂತಾ ಅವರು ಹೇಳಿದ್ದಾರೆ.

    ಅಮ್ಮನ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿ ಹರಡಬೇಡಿ. ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾದ್ರೆ ಖಂಡಿತಾ ನಿಮಗೆ ತಿಳಿಸುತ್ತೇವೆ. ಯಾಕಂದ್ರೆ ಏನೇನೊ ಮೆಸೇಜ್ ಗಳು ಹರಿದಾಡುತ್ತಿವೆ. ಹಾಗಂತ ಒಂದು ವೇಳೆ ಆಗಿದ್ರೆ ನಾವು ಇಂದು ಈ ರೀತಿ ಇರ್ತಿದ್ವಾ?. ಸುಮ್ನೆ ಇಂತಹ ವಿಷಯಗಳಲ್ಲಿ ಹುಡುಗಾಟ ಆಡಕ್ಕಾಗಲ್ಲ. ಅಮ್ಮನ ಆರೋಗ್ಯದ ಬಗ್ಗೆ ಜನಗಳ ಮುಂದೆ ಮುಚ್ಚುಮರೆ ಮಾಡೋ ಅಗತ್ಯವಿಲ್ಲ. ಯಾಕಂದ್ರೆ ಅಪ್ಪಾಜೀನೇ ನಿಮ್ಮ ಮುಂದೆ ಇಟ್ಟಿದ್ದೇವೆ. ನಮ್ಮ ಇಡೀ ಕುಟುಂಬಕ್ಕೇ ನೀವೆಲ್ಲರೂ ಬೆಂಬಲ ನೀಡಿದ್ದೀರಿ. ಈ ರೀತಿ ಇರಬೇಕಾದ್ರೆ ಮುಚ್ಚು ಮರೆ ಯಾಕ್ ಮಾಡ್ಬೇಕು ಅಂತಾ ಶಿವಣ್ಣ ಸ್ಪಷ್ಟಪಡಿಸಿದ್ದಾರೆ.

    ಈ ವೇಳೆ ರಾಘವೇಂದ್ರ ರಾಜ್ ಕುಮಾರ್, ಡಾ.ಸಂಜಯ್ ಕುಲಕರ್ಣಿ, ಡಾ. ನಳಿನಿ ಕಿಲಾರ, ಮೂತ್ರಪಿಂಡ ತಜ್ಞೆ ಡಾ. ಮಹೇಶ್, ಫಿಜಿಷಿಯನ್ ಡಾ ಕಾರ್ತಿಕ್, ಐಸಿಯು ಮುಖ್ಯಸ್ಥೆ ಡಾ.ರತ್ನ ಹಾಗೂ ಮುಖ್ಯ ವೈದ್ಯ ಡಾ.ನರೇಶ್ ಶೆಟ್ಟಿ ಉಪಸ್ಥಿತರಿದ್ದರು.

    ಆಸ್ಪತ್ರೆಗೆ ಬಿಎಸ್‍ವೈ ಭೇಟಿ: ಪಾರ್ವತಮ್ಮ ರಾಜ್ ಕುಮಾರ್ ಅವರ ಆರೊಗ್ಯ ವಿಚಾರಿಸಲೆಂದು ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಎಂ ಎಸ ರಾಮಯ್ಯ ಆಸ್ಪತ್ರೆಗೆ ಭೇಟಿ ನಿಡಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ವತಮ್ಮ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಕಳೆದ 2-3 ದಿವಸಕ್ಕೆ ಹೋಲಿಕೆ ಮಾಡಿದ್ರೆ ಸ್ವಲ್ಪ ನಗುಮುಖದಲ್ಲಿದ್ದಾರೆ. ಮಾತನಾಡಿದ್ರೆ ಪ್ರತಿಕ್ರಿಯಿಸುತ್ತಾರೆ. ಹೀಗೆ ಅವರ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ ಅಂತಾ ಹೇಳಿದ್ರು.

  • ಗಾಬರಿ ಸಹಜ, ಆದ್ರೆ ಬೇರೆ ರೀತಿ ಸುದ್ದಿ ಕೊಡಬೇಡಿ: ಶಿವರಾಜ್ ಕುಮಾರ್

    ಗಾಬರಿ ಸಹಜ, ಆದ್ರೆ ಬೇರೆ ರೀತಿ ಸುದ್ದಿ ಕೊಡಬೇಡಿ: ಶಿವರಾಜ್ ಕುಮಾರ್

    ಬೆಂಗಳೂರು: ಅಮ್ಮ ವೆಂಟಿಲೇಟರ್‍ನಲ್ಲಿದ್ದಾರೆ ಅಂದ್ರೆ ನಮ್ಗೂ ಭಯ ಇದೆ. ಗಾಬರಿ ಸಹಜ, ಆದ್ರೇ ಬೇರೆ ರೀತಿ ಸುದ್ದಿ ಕೊಡಬೇಡಿ ಅಂತಾ ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.

    ಪಾರ್ವತಮ್ಮ ರಾಜ್ ಕುಮಾರ್ ಆರೋಗ್ಯದ ಸ್ಥಿತಿ ಗಂಭೀರವಾಗಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆಗಿಂತ ಇಂದು ಅಮ್ಮಾ ಬೆಟರ್ ಇದ್ದಾರೆ ಅಂತಾ ವೈದ್ಯರು ಹೇಳಿದ್ದಾರೆ. ಆದ್ರೆ ವೆಂಟಿಲೇಟರ್‍ನಿಂದ ಹೊರಗೆ ಬಂದ ಮೇಲೆ ಔಟ್ ಆಫ್ ಡೇಂಜರಸ್ ಅನ್ನಬಹುದು ಅಂತಾ ಅವರು ಹೇಳಿದ್ರು.

    ಕೃತಕ ಉಸಿರಾಟಕ್ಕಾಗಿ ವೆಂಟಿಲೇಟರ್ ನಲ್ಲಿ ಅಮ್ಮನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ವೆಂಟಿಲೇಟರ್ ಅಂದ್ರೆ ನಮಗೂ ಗಾಬರಿಯಾಯಿತು. ಯಾಕಂದ್ರೆ ಎಷ್ಟಾದ್ರೂ ನಮ್ಮಮ್ಮ ತಾನೇ ಅಂತಾ ಭಾವುಕರಾದ್ರು.

    ವೆಂಟಿಲೇಟರ್ ನಿಂದ ಹೊರಬಂದ ಬಳಿಕ ಅಮ್ಮನ ಆರೋಗ್ಯದ ಬಗ್ಗೆ ಖಚಿತವಾಗಿ ಹೇಳಬಹುದು. ಅದಕ್ಕಿಂತ ಮೊದಲು ಯಾವುದೇ ಕಾರಣಕ್ಕೂ ಸುದ್ದಿಗಳನ್ನು ಹರಡಿಸಬೇಡಿ ಅಂತಾ ಹೇಳಿದ್ರು.

    ಅಮ್ಮನ ಆರೋಗ್ಯದ ಬಗ್ಗೆ ನಿಮ್ಮ ಪ್ರಾರ್ಥನೆ ಅಗತ್ಯ ಅಂತಾ ರಾಘವೇಂದ್ರ ರಾಜ್ ಕುಮಾರ್ ಇದೇ ವೇಳೆ ತಿಳಿಸಿದ್ರು.

    ಉಸಿರಾಟದ ತೊಂದರೆಯಿಂದಾಗಿ ದಿವಂಗತ ಡಾ. ರಾಜ್ ಕುಮಾರ್ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಸೋಮವಾರ ನಗರದಲ್ಲಿ ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಇಂದು ಅವರ ಆರೋಗ್ಯ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

    https://www.youtube.com/watch?v=hzotf2i2ehw