Tag: ಪಾರ್ಲೆ ಜಿ

  • ಲಾಕ್‍ಡೌನ್ ವೇಳೆ 82 ವರ್ಷದ ದಾಖಲೆ ಮುರಿದ ಪಾರ್ಲೆ ಜಿ

    ಲಾಕ್‍ಡೌನ್ ವೇಳೆ 82 ವರ್ಷದ ದಾಖಲೆ ಮುರಿದ ಪಾರ್ಲೆ ಜಿ

    ಮುಂಬೈ: ಲಾಕ್‍ಡೌನ್ ವೇಳೆ ಪಾರ್ಲೆ ಜಿ ಬಿಸ್ಕಟ್ ತನ್ನ 82 ವರ್ಷಗಳ ದಾಖಲೆಯನ್ನು ಬ್ರೇಕ್ ಮಾಡಿ ಇತಿಹಾಸ ರಚಿಸಿದೆ. ಕೊರೊನಾ ತಡೆಗಾಗಿ ಸರ್ಕಾರ ಎರಡು ತಿಂಗಳು ಸಂಪೂರ್ಣ ಲಾಕ್‍ಡೌನ್ ವಿಧಿಸಿದ್ದರಿಂದ ಬಹುತೇಕ ಉದ್ಯಮಗಳು ನಷ್ಟ ಅನುಭವಿಸಿವೆ. ಆದ್ರೆ ಪಾರ್ಲೆ ಜಿ ಈ ಸಮಯದಲ್ಲಿ ತನ್ನ ವ್ಯಾಪಾರವನ್ನು ಹೆಚ್ಚಿಸಿಕೊಂಡಿದೆ.

    ಕೇವಲ 5 ರೂ.ಗೆ ದೊರೆಯುವ ಪಾರ್ಲೆ ಜಿ ಬಿಸ್ಕಟ್ ಎಷ್ಟೋ ಪ್ರವಾಸಿ ಕಾರ್ಮಿಕರಿಗೆ ಸಂಜೀವಿನಿ ಆಗಿತ್ತು. ಕಾಲ್ನಡಿಗೆಯಲ್ಲಿ ಗೂಡು ಸೇರಿಕೊಳ್ಳಲು ಹೊರಟ್ಟಿದ್ದ ಕಾರ್ಮಿಕರಿಗೆ ಪಾರ್ಲೆ ಜೀ ಆಸರೆಯಾಗಿತ್ತು. ಹಲವರು ದುಡ್ಡು ನೀಡಿ ಖರೀದಿಸಿದ್ರೆ, ಕಾರ್ಮಿಕರ ಕಷ್ಟಕ್ಕೆ ನೆರವಾಗಲು ಪಾರ್ಲೆ ಜಿ ಖರೀದಿಸಿ ನೀಡುತ್ತಿದ್ದರು. ಇನ್ನು ಲಾಕ್‍ಡೌನ್ ಆಹಾರ ಕೊರತೆ ಉಂಟಾಗಬಹುದು ಎಂಬ ಭಯದಿಂದ ಪಾರ್ಲೆ ಜಿ ಬಿಸ್ಕಟ್ ಗಳನ್ನು ಮನೆಯಲ್ಲಿ ಸ್ಟಾಕ್ ಮಾಡಿಕೊಂಡಿದ್ದರು.

    ದಾಖಲೆ ಬ್ರೇಕ್: ಪಾರ್ಲೆ ಜಿ 1938ರಿಂದಲೂ ಜನರ ಫೇವರೇಟ್ ಬಿಸ್ಕಟ್. ಲಾಕ್‍ಡಭನ್ ಮಧ್ಯೆ ಪಾರ್ಲೆ ತನ್ನ 82 ವರ್ಷಗಳ ದಾಖಲೆಯನ್ನು ಪುಡಿಗಟ್ಟಿದೆ. ಆದ್ರೆ ಪಾರ್ಲೆ ಕಂಪನಿ ಉತ್ಪನ್ನಗಳ ಮಾರಾಟದ ಅಂಕಿ ಅಂಶಗಳನ್ನು ರಿವೀಲ್ ಮಾಡಿಲ್ಲ. ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ಎಂಟು ದಶಕಗಳಲ್ಲಿಯೇ ಕಂಪನಿಯ ಉತ್ಪನ್ನಗಳು ಮಾರಾಟವಾಗಿವೆ ಎಂದು ವರದಿಯಾಗಿದೆ.

    ಇನ್ನು ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾದ ಹಿನ್ನೆಲೆ ಕಂಪನಿಯ ಶೇರುಗಳ ಬೆಲೆ ಶೇ.5ರಷ್ಟು ಏರಿಕೆ ಕಂಡಿವೆ. ಮಾರಾಟದ ದರ ಸಹ ಶೇ.80 ರಿಂದ 90ಕ್ಕೆ ಏರಿಕೆಯಾಗಿದೆ. ಲಾಕ್‍ಡೌನ್ ಸಮಯದಲ್ಲಿ ಬ್ರಿಟಾನಿಯಾದ ಗುಡ್ ಡೇ, ಟೈಗರ್, ಮಿಲ್ಕ್ ಬಿಕಿಸ್, ಬಾರ್ಬರ್ನ್ ಮತ್ತು ಮಾರಿ ಬಿಸ್ಕಟ್ ಗಳು ಅಧಿಕ ಮಾರಾಟಗೊಂಡಿವೆ. ಪಾರ್ಲೆಯ ಇನ್ನಿತರ ಉತ್ಪನ್ನಗಳಾದ ಕ್ರ್ಯಾಕ್‍ಜ್ಯಾಕ್, ಮೊನೆಕಾ, ಹೈಡ್ ಆ್ಯಂಡ್ ಸೀಕ್ ಬಿಸ್ಕಟ್ ಗಳು ಮಾರಾಟ ಆಗಿವೆ.

  • 10 ಸಾವಿರ ಉದ್ಯೋಗ ಕಡಿತ – ಸುದ್ದಿ ನಿರಾಕರಿಸಿದ ಪಾರ್ಲೆ ಜಿ

    10 ಸಾವಿರ ಉದ್ಯೋಗ ಕಡಿತ – ಸುದ್ದಿ ನಿರಾಕರಿಸಿದ ಪಾರ್ಲೆ ಜಿ

    ನವದೆಹಲಿ: ಭಾರತದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವ ಪಾರ್ಲೆ ಜಿ ಬಿಸ್ಕತ್ ತಯಾರಿಕ ಕಂಪನಿ ತನ್ನ ಸಂಸ್ಥೆಯ 10 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲು ಚಿಂತನೆ ನಡೆಸಿದೆ ಎಂಬ ಸುದ್ದಿಯನ್ನು ನಿರಾಕರಿಸಿದೆ.

    ಸಂಸ್ಥೆಯ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಕೆಲ ಉತ್ಪನ್ನಗಳ ತಯಾರಿಕೆಯನ್ನು ಕಡಿತಗೊಳಿಸಲು ಅನಿವಾರ್ಯವಾಗಿ ನಿರ್ಧರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಸಂಸ್ಥೆಯ ವಕ್ತಾರರು, 8 ರಿಂದ 10 ಸಾವಿರ ಉದ್ಯೋಗ ಕಡಿತ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ನಾವು ಈ ಕುರಿತು ಯಾವುದೇ ಮಾಧ್ಯಮಕ್ಕೆ ಹೇಳಿಕೆ ನೀಡಿಲ್ಲ ಎಂದಿದ್ದಾರೆ.

    ಉದ್ಯೋಗ ಕಡಿತ ಸುದ್ದಿಯನ್ನು ಮಾಧ್ಯಮಗಳೇ ಹೆಚ್ಚು ಹೈಪ್ ಮಾಡಿವೆ. ನಾವು ಉದ್ಯೋಗ ಕಡಿತದ ಕುರಿತು ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಆದರೆ ತೆರಿಗೆ ಕಡಿತಗೊಳಿಸುವ ನಮ್ಮ ಬೇಡಿಕೆ ಈಡೇರದಿದ್ದರೆ ಉದ್ಯೋಗ ನಷ್ಟ ಸಂಭವಿಸುತ್ತದೆ ಎಂದು ಹೇಳಿದ್ದಾರೆ.

    ನಿಜ ಸಂಗತಿ ಎಂದರೆ ನಾವು ಈ ಮೊದಲಿನಂತೆ ಉತ್ಪಾದನಾ ಪ್ರಮಾಣವನ್ನು ಹೊಂದಿಲ್ಲವಾದರೂ ಸಂಸ್ಥೆಯ ಮಾನವ ಸಂಪನ್ಮೂಲವನ್ನು ಇದುವರೆಗೂ ಕಡಿತಗೊಳಿಸಿಲ್ಲ. ಸಂಸ್ಥೆಯ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ ಎಂಬುವುದು ಸತ್ಯವಲ್ಲ. ಆದರೆ ಬಿಸ್ಕತ್ ಮೇಲೆ ಸದ್ಯ ವಿಧಿಸಲಾಗುತ್ತಿರುವ ಶೇ.18 ಜಿಎಸ್‍ಟಿ ತುಂಬಾ ಹೆಚ್ಚು ಎಂಬುವುದು ನಮ್ಮ ಭಾವನೆಯಾಗಿದೆ. ಈ ಹಿಂದೆ ಬಿಸ್ಕತ್‍ಗಳನ್ನು ತೆರಿಗೆಯಿಂದ ಮುಕ್ತಗೊಳಿಸಲಾಗಿತ್ತು. ಆದರೆ ಈಗ ಶೇ. 18 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ರಸ್ಕ್ ನಂತಹ ಉತ್ಪನ್ನಗಳಿಗೆ ಶೇ.5 ರಷ್ಟು ತೆರಿಗೆ ಮಾತ್ರ ವಿಧಿಸಲಾಗುತ್ತಿದೆ. ಇದೇ ವ್ಯಾಪ್ತಿಗೆ ಬಿಸ್ಕತ್ ಗಳನ್ನು ಕೂಡ ತರಬೇಕು ಎಂದರು.

    ಭಾರತ ಮಾತ್ರವಲ್ಲದೇ ನೈಜಿರಿಯಾ, ಘಾನಾ, ಇಥಿಯೋಪಿಯಾ, ಕೀನ್ಯಾ, ನೇಪಾಳ ಹಾಗೂ ಮೆಕ್ಸಿಕೋ ದೇಶಗಳಲ್ಲಿಯೂ ಪಾರ್ಲೆ ತನ್ನ ಶಾಖೆಗಳನ್ನು ಒಳಗೊಂಡಿದೆ. ಭಾರತದಲ್ಲಿ 1929 ರಲ್ಲಿ ಸ್ಥಾಪನೆಯಾದ ಪಾರ್ಲೆ ಜಿ 10 ತಯಾರಿಕಾ ಘಟಕಗಳನ್ನು ಹೊಂದಿದೆ. ಅಲ್ಲದೇ 125 ಗುತ್ತಿಗೆ ತಯಾರಿಕಾ ಘಟಕಗಳನ್ನು ಒಳಗೊಂಡಿದ್ದು, ಮುಂಬೈನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. ಸುಮಾರು ಸಂಸ್ಥೆಯಲ್ಲಿ ಪೂರ್ಣಾವಧಿ ಹಾಗೂ ಗುತ್ತಿಗೆ ಸೇರಿದಂತೆ ಸುಮಾರು 1 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.