Tag: ಪಾರ್ಟಿ

  • ಅಪಘಾತ ಪ್ರಕರಣಕ್ಕೆ ಸ್ಫೋಟಕ ತಿರುವು – ಕೇರಳ ಮಾಡೆಲ್‍ಗಳಿಗಿತ್ತಾ ಡ್ರಗ್ ಪೆಡ್ಲರ್‌ಗಳ ನಂಟು?

    ಅಪಘಾತ ಪ್ರಕರಣಕ್ಕೆ ಸ್ಫೋಟಕ ತಿರುವು – ಕೇರಳ ಮಾಡೆಲ್‍ಗಳಿಗಿತ್ತಾ ಡ್ರಗ್ ಪೆಡ್ಲರ್‌ಗಳ ನಂಟು?

    ತಿರುವನಂತಪುರ: ಕೊಚ್ಚಿಯಲ್ಲಿ ನವೆಂಬರ್ 1 ರಂದು ಅಪಘಾತದಲ್ಲಿ ಮೃತಪಟ್ಟ ಮಾಡೆಲ್‍ಗಳಿಗೆ ಡ್ರಗ್ ಪೆಡ್ಲರ್‌ಗಳ ನಂಟು ಇತ್ತಾ ಎಂಬ ಪ್ರಶ್ನೆ ಎದ್ದಿದೆ.

    ಮೃತಪಟ್ಟ ಮಾಡೆಲ್‍ಗಳ ಪ್ರಕರಣ ಕುರಿತಂತೆ ತನಿಖೆ ಚುರುಕಾಗಿದ್ದು, ಇದೀಗ ಪಾರ್ಟಿಯಲ್ಲಿ ಭಾಗವಹಿಸಿದ್ದ ಅತಿಥಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ. ಈ ವೇಳೆ ಡ್ರಗ್ಸ್ ಲಿಂಕ್ ಬಗ್ಗೆ ಅನುಮಾನ ಬಂದಿದೆ.

    Kerala Model

    ನವೆಂಬರ್ 1 ರಂದು ಫೋರ್ಟ್ ಕೊಚ್ಚಿಯ ನಂ.18 ಎಂಬ ಐಷಾರಾಮಿ ಹೋಟೆಲ್‍ನಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಈ ಪಾರ್ಟಿಯಲ್ಲಿ ಮಿಸ್ ಕೇರಳ 2019 ವಿಜೇತೆ ಆನ್ಸಿ ಕಬೀರ್, ರನ್ನರ್ ಅಪ್ ಅಂಜನಾ ಶಾಜನ್ ಭಾಗಿಯಾಗಿದ್ದರು. ಪಾರ್ಟಿ ಬಳಿಕ ಇಬ್ಬರು ರಸ್ತೆ ಅಪಘತಾದಲ್ಲಿ ಸಾವನ್ನಪ್ಪಿದ್ದರು. ಇದನ್ನೂ ಓದಿ:  ರಾಜ್ಯದಲ್ಲಿ ಅಕಾಲಿಕ ಮಳೆಗೆ ಜನಜೀವನ ಅಸ್ತವ್ಯಸ್ತ – ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಕಟ್ಟೆಚ್ಚರ

    Kerala Model

    ಪ್ರಕರಣಕ್ಕೆ ಸಂಬಂಧಿಸಿ ನಂ.18 ಹೋಟೆಲ್‍ನ ಮಾಲೀಕ ರಾಯ್ ವಯಲಾತ್ ಹಾಗೂ ಹೋಟೆಲ್‍ನ ಐವರು ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಮಾಡೆಲ್‍ಗಳು ಹೋಗುತ್ತಿದ್ದ ಕಾರನ್ನು ಆಡಿ ಕಾರೊಂದು ಹಿಂಬಾಲಿಸುತ್ತಿದ್ದ ಸಿಸಿಟಿವಿ ದೃಶ್ಯಗಳು ಪೊಲೀಸರಿಗೆ ದೊರೆತ್ತಿತ್ತು. ಕಾರನ್ನು ಚಲಾಯಿಸುತ್ತಿದ್ದ ಸೈಜು ತಂಕಚನ್‍ಗೆ ಕೊಚ್ಚಿಯಲ್ಲಿ ಡ್ರಗ್ ಪೆಡ್ಲರ್ ಸಂಪರ್ಕವಿದೆ. ಈತ ಬೆಂಗಳೂರಿನಿಂದ ಕೊಚ್ಚಿಗೆ ಡ್ರಗ್ಸ್ ಮಾರಾಟ ಮಾಡುವ ಗುಂಪಿನಲ್ಲಿ ಕೆಲಸ ಮಾಡುತ್ತಿದ್ದ ಎಂಬ ಆರೋಪ ಬಂದಿದೆ.

     

    View this post on Instagram

     

    A post shared by Ansi Kabeer (@ansi_kabeer)

    ಪಾರ್ಟಿ ನಂತರ ಭೇಟಿಯಾಗುವಂತೆ ಸೈಜು ತಿಳಿಸಿದ್ದ. ಆದರೆ ಆತನ ಆಹ್ವಾನವನ್ನು ಮಾಡೆಲ್‍ಗಳು ನಿರಾಕರಿಸಿದ್ದರು. ಆದಾದ ಬಳಿಕ ಈ ಅಪಘಾತ ನಡೆದಿದೆ. 2021 ಮೇನಲ್ಲಿ ಸೈಜು ಹೋಟೆಲ್ ಪಾರ್ಟಿಯಲ್ಲಿ ಮಾದಕ ದ್ರವ್ಯ ಸೇವೆಸಿದ್ದ ಫೋಟೋ ಲಭ್ಯವಾಗಿದೆ. ಆದರೆ ಹೋಟೆಲ್ ಮಾಲೀಕ ರಾಯ್ ವಯಲಾತ್ ಪೊಲೀಸರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದ ತನಿಖೆಗೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ:  1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

    ಘಟನೆಯಾಗಿ ಮೂರು ವಾರ ಕಳೆದರೂ ಪೊಲೀಸರು ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗದ ಕಾರಣ ಇದೀಗ ಅಪರಾಧ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಿಜಿ ಜಾರ್ಜ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

  • ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    ಸಮುದ್ರದ ಮಧ್ಯೆ ಡ್ರಗ್ಸ್ ಪಾರ್ಟಿ- ಸ್ಟಾರ್ ನಟನ ಮಗ ಸೇರಿ ಹತ್ತು ಮಂದಿ ವಶಕ್ಕೆ

    – ಗೋವಾಕ್ಕೆ ಹೋಗ್ತಿದ್ದ ಐಷಾರಾಮಿ ಹಡಗಿನ ಮೇಲೆ ದಾಳಿ

    ಮುಂಬೈ: ಸಮುದ್ರದ ಮಧ್ಯದಲ್ಲಿ ಗೋವಾಕ್ಕೆ ಹೋಗುತ್ತಿದ್ದ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದ್ದು, ಬಾಲಿವುಡ್ ಸ್ಟಾರ್ ನಟನ ಮಗ ಸೇರಿ ಒಟ್ಟು ಹತ್ತು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

    ಮುಂಬೈ ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಎನ್‍ಸಿಬಿ ಅಧಿಕಾರಿಗಳು ಐಷಾರಾಮಿ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ಡ್ರಗ್ಸ್ ರೇವ್ ಪಾರ್ಟಿ ಮಾಡುತ್ತಿದ್ದ ಸ್ಟಾರ್ ನಟನ ಮಗ ಸೇರಿ ಒಟ್ಟು 10 ಮಂದಿಯನ್ನು ಎನ್‍ಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಕೊಕೇನ್, ಎನ್‍ಡಿಎಂ, ಹಾಶಿಶ್ ಮಾದಕ ದ್ರವ್ಯಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಸ್ವಿಗ್ಗಿ ಮೂಲಕ ಗಾಂಜಾ ಸಪ್ಲೈ – 7 ಮಂದಿ ಬಂಧನ

    ಮುಂಬೈನಿಂದ ಗೋವಾಕ್ಕೆ ತೆರಳುತ್ತಿದ್ದ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಲಾಗ್ತಿತ್ತು. ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಮಾದಕ ದ್ರವ್ಯ ತಡೆ ದಳದಿಂದ ಕಾರ್ಯಾಚರಣೆ ನಡೆದಿದ್ದು, ಮಾಲ್ ಸಮೇತ 10 ಜನರನ್ನು ವಶಕ್ಕೆ ಪಡೆದಿದ್ದಾರೆ.

  • ಚಂಪೂ, ಗುಡ್ಡು ಜೊತೆ ಪಾರ್ಟಿ ಮಾಡಿದ ಗುಂಡಮ್ಮ

    ಚಂಪೂ, ಗುಡ್ಡು ಜೊತೆ ಪಾರ್ಟಿ ಮಾಡಿದ ಗುಂಡಮ್ಮ

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ರ ಮನೆಮಾತಾಗಿದ್ದ ಸ್ಪರ್ಧಿಗಳು ಎಂದರೆ ಅದು ಶುಭಾ ಪೂಂಜಾ ಹಾಗೂ ಮಂಜು. ದೊಡ್ಮನೆಯಲ್ಲಿ ಸದಾ ಪ್ರೇಕ್ಷಕರಿಗೆ ನಗುವಿನ ಕಚಗುಳಿ ನೀಡುತ್ತಿದ್ದ ಶುಭಾ ಪೂಂಜಾ ಮಂಜು ಹಾಗೂ ರಾಜೀವ್ ಜೊತೆಗೆ ಪಾರ್ಟಿ ಮಾಡಿದ್ದಾರೆ.

    shubha

    ತಮ್ಮ ಚೇಷ್ಟೆ ಮತ್ತು ತಮಾಷೆ ಮೂಲಕ ಸದಾ ಮನೆಮಂದಿಯನ್ನೆಲ್ಲಾ ಸಿಕ್ಕಾಪಟ್ಟೆ ಗೋಳು ಹೊಯ್ದುಕೊಳ್ಳುತ್ತಿದ್ದ ಶುಭಾ ಪೂಂಜಾ ತಮ್ಮ ಪ್ರೀತಿ ಪಾತ್ರರಿಗೆ ಒಂದೊಂದು ಕ್ಯೂಟ್ ಕ್ಯೂಟ್ ಹೆಸರಿಟ್ಟಿದ್ದರು. ಅದರಲ್ಲಿ ಶುಭಾ ಪೂಂಜಾಗೆ ಬಹಳ ಹತ್ತಿರವಾಗಿದ್ದ ರಾಜೀವ್‍ರನ್ನು ಗುಡ್ಡು ಅಂತ ಮತ್ತು ಮಂಜುರನ್ನು ಚಂಪೂ ಎಂದು ಕರೆಯುತ್ತಿದ್ದರು. ಅದೇ ರೀತಿ ಶುಭಾ ಪೂಂಜಾಗೆ ಮಂಜು ಕೂಡ ಪ್ರೀತಿಯಿಂದ ಗುಂಡಮ್ಮ ಎಂದು ಕರೆಯುತ್ತಿದ್ದರು. ಇದನ್ನೂ ಓದಿ: ನಾನು ಶಾಲೆಗೆ ಹೋಗ್ಬೇಕು – ಅಫ್ಘಾನ್ ಬಾಲಕಿಯ ಖಡಕ್ ಭಾಷಣ

    shubha

    ಇದೀಗ ಬಿಗ್‍ಬಾಸ್ ಕಾರ್ಯಕ್ರಮ ಮುಕ್ತಾಯದ ನಂತರ ಹಲವು ದಿನಗಳ ಬಳಿಕ ಶುಭಾ ಪೂಂಜಾ, ಮಂಜು ಹಾಗೂ ರಾಜೀವ್ ಒಟ್ಟಿಗೆ ಸೇರಿ ಪಾರ್ಟಿ ಮಾಡಿದ್ದಾರೆ. ವಿಶೇಷವೆಂದರೆ ಈ ಪಾರ್ಟಿಯಲ್ಲಿ ಶುಭಾ ಪೂಂಜಾ ಭಾವಿ ಪತಿ ಸುಮಂತ್, ರಾಜೀವ್ ಪತ್ನಿ ಮತ್ತು ಮಜಾ ಭಾರತ ಕಾರ್ಯಕ್ರಮದ ಕಲಾವಿದರೂ ಕೂಡ ಪಾಲ್ಗೊಂಡಿದ್ದಾರೆ. ಇದನ್ನೂ ಓದಿ: ಮೂರು ತಿಂಗಳ ಹಿಂದೆ ಹೂತಿದ್ದ ಶವವನ್ನೇ ಹೊತ್ತೊಯ್ದ ಕಿಡಿಗೇಡಿಗಳು- ವಾಮಾಚಾರದ ಶಂಕೆ

    ಸದ್ಯ ಪಾರ್ಟಿಯ ಕೆಲವೊಂದು ಫೋಟೋವನ್ನು ಶುಭಾ ಪೂಂಜಾ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದು, ಮಂಜು ಕೂಡ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಫೋಟೋಗಳಿಗೆ ಶುಭಾ ಫ್ರೆಂಡ್ ಶಿಪ್ ಹಾಡುಗಳನ್ನು ಸೆಟ್ ಮಾಡಿಕೊಂಡು ಹಂಚಿಕೊಂಡಿದ್ದಾರೆ. ಒಟ್ಟಾರೆ ಮೂವರು ಒಟ್ಟಾಗಿ ಸೇರಿ ಪಾರ್ಟಿ ಮಾಡಿ ಸಖತ್ ಎಂಜಾಯ್ ಮಾಡಿದ್ದಾರೆ ಎಂದೇ ಹೇಳಬಹುದು.

  • ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

    ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್? – ಜೊಮಾಟೊ ಡೆಲಿವರಿ ಬಾಯ್ ಜಸ್ಟ್ ಮಿಸ್

    ಬೆಂಗಳೂರು: ಕರುಣಾ ಸಾಗರ್ ಮತ್ತು ಸ್ನೇಹಿತರು ಮಿಡ್‍ನೈಟ್ ಪಾರ್ಟಿ ಮಾಡಿ ಜಾಲಿ ರೈಡ್ ಮಾಡಿರಬಹುದು ಎಂಬ ಬಲವಾದ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದಾರೆ.

    ಪೊಲೀಸರು ಈ ಅನುಮಾನ ವ್ಯಕ್ತಪಡಿಸಲು ಕಾರಣವಿದೆ. ಬೆಂಗಳೂರು ರಸ್ತೆಗಳಲ್ಲಿ 90-100 ಕಿ.ಮೀ ವೇಗದಲ್ಲಿ ಹೋಗುವುದೇ ಕಷ್ಟ. ಹೀಗಿರುವಾಗ 150 ಕಿ.ಮೀಗಿಂತಲೂ ಹೆಚ್ಚಿನ ವೇಗದಲ್ಲಿ ಕಾರು ಸಂಚರಿಸಿದೆ ಎಂದರೆ ಯಾವುದಾದರೂ ನಶೆ ಇರಲೇಬೇಕು ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಹೀಗಾಗಿ ಎಚ್‍ಎಸ್‍ಆರ್ ಲೇಔಟ್, ಕೋರಮಂಗಲ, ಎಂಜಿ ರಸ್ತೆ, ಇಂದಿರಾನಗರದ ಹೋಟೆಲ್, ಪಬ್‍ಗಳ ಪರಿಶೀಲನೆಗೆ ಈಗ ಪೊಲೀಸರು ಮುಂದಾಗಿದ್ದಾರೆ.

    ಅಪಘಾತ ಆಗಿರುವ ಕಾರಿನಲ್ಲಿ ಮೂರು ಮೊಬೈಲ್ ಫೋನ್‍ಗಳು ಸಿಕ್ಕಿದೆ. ಮೂರು ಮೊಬೈಲ್ ಫೋನ್‍ಗಳ ಡಿಸ್‍ಪ್ಲೇ ಒಡೆದು ಹೋಗಿದೆ. ಈ ಮೊಬೈಲ್ ಮೂಲಕ ಕಾಲ್ ಲಿಸ್ಟ್ ಆಧರಿಸಿ ಟವರ್ ಲೊಕೇಷನ್ ಮೂಲಕ ಪಾರ್ಟಿ ಸ್ಥಳ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ಸುಮಾರು 30 ಪೊಲೀಸರಿಗೆ ಪಾರ್ಟಿ ಜಾಗವನ್ನು ಪತ್ತೆ ಮಾಡಲು ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.

    ಬಹುತೇಕ ಕುಡಿದು ವಾಹನ ಚಲಾಯಿಸಿರುವ ಸಾಧ್ಯತೆಯೇ ಜಾಸ್ತಿ ಇದ್ದು, ಈಗಾಗಲೇ ಮೃತರ ರಕ್ತದ ಮಾದರಿಯನ್ನು ಸಂಗ್ರಹ ಮಾಡಲಾಗಿದೆ. ಒಂದೆರಡು ದಿನದಲ್ಲಿ ವೈದ್ಯಕೀಯ ಪರೀಕ್ಷೆಯ ವರದಿ ಬರುವ ನಿರೀಕ್ಷೆಯಿದೆ. ಇದನ್ನೂ ಓದಿ : ಫೋನ್ ಟ್ಯಾಪಿಂಗ್‍ನಲ್ಲಿ ಐಪಿಎಸ್ ಅಧಿಕಾರಿಗಳ ಫೈಟ್

    ಮೃತಪಟ್ಟ 7 ಮಂದಿಯ ಪೈಕಿ ಆಡಿ ಕಾರಿನ ಚಾಲಕನಾಗಿದ್ದ ಕರುಣಾ ಸಾಗರ್ ಮರಣೋತ್ತರ ಪರೀಕ್ಷೆಯ ವರದಿ ಮುಖ್ಯವಾಗುತ್ತದೆ. ನಿರ್ಲಕ್ಷ್ಯದ ಚಾಲನೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದರೂ ಈ ರೀತಿ ವೇಗದ ಚಾಲನೆಗೆ ಕಾರಣವಾದ ಅಂಶ ಏನು ಎನ್ನುವುದು ತನಿಖೆಗೆ ಬಹಳ ಅಗತ್ಯ. ಹೊಸೂರು ಡಿಎಂಕೆ ಶಾಸಕ ಪ್ರಕಾಶ್ ಅವರ ಪುತ್ರನಾಗಿರುವ ಕಾರಣ ಇದು ಹೈಪ್ರೊಫೈಲ್ ಅಪಘಾತ ಪ್ರಕರಣವೂ ಹೌದು.  ಅಷ್ಟೇ ಅಲ್ಲದೇ ರಾತ್ರಿ ಆ ಸಮಯದಲ್ಲಿ ಎಲ್ಲರೂ ಪ್ರಯಾಣ ಹೊರಟಿದ್ದು ಎಲ್ಲಿಗೆ ಎನ್ನುವುದು ತಿಳಿಯಬೇಕಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲ ಆಯಾಮಗಳಿಂದ ತನಿಖೆಗೆ ಇಳಿದಿದ್ದಾರೆ. ಇದನ್ನೂ ಓದಿ :ಪಿ.ವಿ. ಸಿಂಧುಗೆ ಮೆಗಾ ಸ್ಟಾರ್ ಸನ್ಮಾನ

    ತಪ್ಪಿತು ಮತ್ತೆರಡು ದುರಂತ:
    ಕೋರಮಂಗಲ ಅಪಘಾತ ಪ್ರಕರಣದ ತನಿಖೆ ವೇಳೆ ಮತ್ತೆರಡು ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ. ಅಪಘಾತಕ್ಕೂ ಮುನ್ನ ಮತ್ತೆರಡು ದೊಡ್ಡ ದುರಂತಗಳು ನಡೆಯುವ ಸಾಧ್ಯತೆಯಿತ್ತು. ಸೋನಿ ವರ್ಲ್ಡ್ ಸಿಗ್ನಲ್ ಬಳಿ ಜೊಮಾಟೊ ಡೆಲಿವರಿ ಬಾಯಿಗೆ ಕಾರು ಗುದ್ದುವ ಸಾಧ್ಯತೆ ಇತ್ತು. ಇದನ್ನು ನೋಡಿ ಕಾರು ತಡೆಯಲು ಹೋದ ಪೊಲೀಸರ ಮೇಲೆ ಜಿಗ್ ಜ್ಯಾಗ್ ರೀತಿಯಲ್ಲಿ ಕಾರು ಹರಿಸಲು ಯತ್ನ ನಡೆದಿತ್ತು. ಅದೃಷ್ಟವಶಾತ್ ಕಾರಿನ ವೇಗ ನೋಡಿ ರಸ್ತೆಯ ಪಕ್ಕಕ್ಕೆ ಪೊಲೀಸರು ಸರಿದಿದ್ದರು.

  • ರಾತ್ರಿ ಫುಲ್ ಪಾರ್ಟಿ- ಎಣ್ಣೆ ಮತ್ತಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ರಾತ್ರಿ ಫುಲ್ ಪಾರ್ಟಿ- ಎಣ್ಣೆ ಮತ್ತಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

    ಬೆಂಗಳೂರು: ಸ್ನೇಹಿತರಿಬ್ಬರು ರಾತ್ರಿ ಫುಲ್ ಪಾರ್ಟಿ ಮಾಡಿದ್ದು, ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ನಗರದ ಡಿಜೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

    ಪ್ರಶಾಂತ್ ತನ್ನ ಸ್ನೇಹಿತ ನಿತೇಶ್ ನನ್ನು ಕೊಲೆ ಮಾಡಿದ್ದಾನೆ. ರಾತ್ರಿ ಇಬ್ಬರೂ ಒಟ್ಟಿಗೆ ಪಾರ್ಟಿ ಮಾಡಿದ್ದು, ಪಾರ್ಟಿ ಬಳಿಕ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದೆ. ಈ ವೆಳೆ ನಿತೇಶ್ ಸ್ನೇಹಿತ ಪ್ರಶಾಂತ್ ಗೆ ಕಾಲಿನಿಂದ ಒದ್ದಿದ್ದ. ಕಾಲಿನಿಂದ ಒದ್ದ ಬಳಿಕ ಇಬ್ಬರು ಒಟ್ಟಿಗೆ ಮಲಗಿದ್ದರು. ಮಲಗಿ ಸ್ವಲ್ಪ ಸಮಯದ ನಂತರ ಕೋಪಗೊಂಡು ಮತ್ತೆ ಎಚ್ಚರಗೊಂಡಿದ್ದ ಪ್ರಶಾಂತ್, ನನಗೇ ಒದೆಯುತ್ತೀಯಾ ಎಂದು ಹಾಲೊ ಬ್ರಕ್ಸ್ ಎತ್ತಿ ನಿತೇಶ್ ತಲೆಮೇಲೆ ಹಾಕಿದ್ದಾನೆ. ಪರಿಣಾಮ ನಿತೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಕಾಮುಕ ವೃದ್ಧನಿಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ

    ಸ್ಥಳಕ್ಕೆ ಡಿಜೆಹಳ್ಳಿ ಪೊಲೀಸರು ಭೇಟಿ ನೀಡಿದ್ದು, ಪರಾರಿಯಾಗುತ್ತಿದ್ದ ಪ್ರಶಾಂತ್ ನನ್ನು ಡಿಜೆಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

  • ಎಣ್ಣೆ ಪಾರ್ಟಿ ವೇಳೆ ನಡೆದ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

    ಎಣ್ಣೆ ಪಾರ್ಟಿ ವೇಳೆ ನಡೆದ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ

    ಮಂಡ್ಯ: ಸ್ನೇಹಿತರಿಬ್ಬರು ಒಟ್ಟಿಗೆ ಎಣ್ಣೆ ಪಾರ್ಟಿ ನಂತರ ಇಬ್ಬರ ಮಧ್ಯೆ ಜಗಳ ಉಂಟಾಗಿ ಕೊನೆಗೆ ಕೊಲೆಯ ಮೂಲಕ ಜಗಳ ಅಂತ್ಯವಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಹಳ್ಳಿ ಗ್ರಾಮದಲ್ಲಿ ಜರುಗಿದೆ.

    ಚೆನ್ನನಹಳ್ಳಿ ಗ್ರಾಮದ ಕುಮಾರ್(30) ಮೃತ ಯುವಕ. ಅದೇ ಗ್ರಾಮದ ಮಹದೇವು ಎಂಬ ಸ್ನೇಹಿತ ಕುಮಾರ್‌ನನ್ನು ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ. ನಿನ್ನೆ ರಾತ್ರಿ ಕುಮಾರ್ ಹಾಗೂ ಮಹದೇವು ಇಬ್ಬರು ಮದ್ಯ ಸೇವನೆ ಮಾಡಬೇಕು ಎಂದು ನಿರ್ಧಾರ ಮಾಡುತ್ತಾರೆ. ಈ ವೇಳೆ ಮಹದೇವು ನಮ್ಮ ಮನೆಯಲ್ಲಿ ಯಾರೂ ಇಲ್ಲ, ಇಲ್ಲೇ ಪಾರ್ಟಿ ಮಾಡೋಣ ಬಾ ಎಂದು ಕುಮಾರನನ್ನು ಮನೆಗೆ ಕರೆದೊಯ್ಯುತ್ತಾನೆ.

    ನಂತರ ಮಹದೇವು ಹಾಗೂ ಕುಮಾರ್ ಇಬ್ಬರು ಚೆನ್ನಾಗಿ ಮದ್ಯ ಸೇವನೆ ಮಾಡಿದ್ದಾರೆ. ಬಳಿಕ ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ಉಂಟಾಗುತ್ತದೆ. ಈ ವೇಳೆ ಇಬ್ಬರ ನಡುವಿನ ಜಗಳ ತಾರಕಕ್ಕೆ ಏರುತ್ತದೆ. ನಂತರ ಮಹದೇವು ಕುಮಾರ್‌ಗೆ ಬಾಟಲಿ ಹಾಗೂ ರಾಡಿನಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಸದ್ಯ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ – 37 ಮಂದಿ ಬಂಧನ

  • ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ – 37 ಮಂದಿ ಬಂಧನ

    ಕೋವಿಡ್ ರೂಲ್ಸ್ ಬ್ರೇಕ್ ಮಾಡಿ ಪಾರ್ಟಿ – 37 ಮಂದಿ ಬಂಧನ

    ಕೋಲ್ಕತ್ತಾ: ಕೋವಿಡ್ ನಿಯಮವನ್ನು ಉಲ್ಲಂಘಿಸಿ ನಗರದ ಫೈ ಸ್ಟಾರ್ ಹೋಟೆಲ್‍ನಲ್ಲಿ ಪಾರ್ಟಿ ಮಾಡುತ್ತಿದ್ದ 37 ಮಂದಿಯನ್ನು ಕೋಲ್ಕತಾ ಪೊಲೀಸರು ಬಂಧಿಸಿದ್ದಾರೆ.

    ಆರೋಪಿಗಳು ಕೋವಿಡ್ ನಿಯಮವನ್ನು ಮರೆತು ಹೋಟೆಲ್‍ನ ಎರಡನೇ ಹಾಗೂ ಮೂರನೇ ಮಹಡಿಯಲ್ಲಿ ತಡರಾತ್ರಿ 1.15ಕ್ಕೆ ಪಾರ್ಟಿ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿದ್ದಾರೆ.

    ಈ ವೇಳೆ ಪೊಲೀಸರು ಆರೋಪಿಗಳಿಂದ ಎರಡು ಕಾರು, ಗಾಂಜಾ, ಮದ್ಯದ ಬಾಟಲ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಘಟನೆ ವೇಳೆ ವ್ಯಕ್ತಿಯೋರ್ವ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸದ್ಯ ಘಟನೆ ಸಂಬಂಧ ಭಾರತೀಯ ದಂಡ ಸಂಹಿತೆ ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್‍ಗಳ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಪಶ್ಚಿಮ ಬಂಗಾಳ ಸರ್ಕಾರವು ರಾಜ್ಯವ್ಯಾಪ್ತಿ ಜುಲೈ 15ರವರೆಗೆ ಕೋವಿಡ್ ನಿರ್ಬಂಧಗಳನ್ನು ವಿಸ್ತರಿಸಿದ್ದು, ರಾತ್ರಿ 9ರಿಂದ ಬೆಳಗ್ಗೆ 5ರವರೆಗೂ ಕರ್ಫ್ಯೂ ವಿಧಿಸಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಯಾವುದೇ ಚಟುವಟಿಕೆಗಳಿಗೆ ಅನುಮತಿ ನೀಡಲು ಆಗುತ್ತಿಲ್ಲ ಎಂದು ಸೂಚಿಸಿದೆ. ಇದನ್ನೂ ಓದಿ: ಫೇಸ್‍ಬುಕ್ ನಲ್ಲಿ ಪರಿಚಯ – 2.50 ಲಕ್ಷ ರೂ. ಯುವಕನಿಗೆ ಪಂಗನಾಮ

  • ರಾಜ್ಯದಲ್ಲಿ ಲೇಟ್‍ನೈಟ್ ಪಾರ್ಟಿ ಬ್ಯಾನ್ – ಶೀಘ್ರವೇ ಮದುವೆಗೂ ಕಠಿಣ ನಿಯಮ

    ರಾಜ್ಯದಲ್ಲಿ ಲೇಟ್‍ನೈಟ್ ಪಾರ್ಟಿ ಬ್ಯಾನ್ – ಶೀಘ್ರವೇ ಮದುವೆಗೂ ಕಠಿಣ ನಿಯಮ

    ಬೆಂಗಳೂರು: ಗುರುವಾರ ಒಂದೇ ದಿನ ರಾಜ್ಯದಲ್ಲಿ 783 ಮಂದಿಗೆ ಸೋಂಕು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ ಲೇಟ್‌ ನೈಟ್‌ ಪಾರ್ಟಿಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಮಹಾರಾಷ್ಟ್ರದ ಮುಂಬೈನಲ್ಲಿ ನೈಟ್‌ ಕರ್ಫ್ಯೂ, ನಾಗಪುರದಲ್ಲಿ 1 ವಾರ ಲಾಕ್‌ಡೌನ್‌ ಘೋಷಣೆಯ ಬೆನ್ನಲ್ಲೇ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

    ಕೊರೋನಾ ಸೂಪರ್ ಸ್ಪ್ರೆಡರ್‌ಗಳನ್ನು ತಡೆಯುವ ನಿಟ್ಟಿನಲ್ಲಿ ಹೋಟೆಲ್, ರೆಸ್ಟೋರೆಂಟ್‍ಗಳಲ್ಲಿ ಮಿಡ್ ನೈಟ್ ಪಾರ್ಟಿಗೆ ನಿಷೇಧ ಹೇರಲಾಗಿದೆ. ಮಧ್ಯರಾತ್ರಿಯಿಂದಲೇ ಆದೇಶ ಜಾರಿಯಾಗಿದ್ದು ಮಾರ್ಚ್ 31ರವರೆಗೂ ಲೇಟ್ ನೈಟ್ ಪಾರ್ಟಿಯನ್ನು ನಿಷೇಧಿಸಲಾಗಿದೆ.

    ರಾಜ್ಯದಲ್ಲಿ 2ನೇ ಅಲೆ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಸರ್ಕಾರ ಈಗ ಮತ್ತೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಜನ ಹೆಚ್ಚಾಗಿ ಸೇರುವ ಕಾರ್ಯಕ್ರಮಗಳ ಮೇಲೆ ಸರ್ಕಾರ ನಿರ್ಬಂಧ ಹೇರುವ ಸಾಧ್ಯತೆಯಿದೆ.

    ಮದುವೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರುವಂತಿಲ್ಲ. ಮದುವೆಗಳಲ್ಲಿ ಎಷ್ಟು ಮಂದಿ ಪಾಲ್ಗೊಳ್ಳಬೇಕು ಎಂಬುದರ ಬಗ್ಗೆ ಶೀಘ್ರವೇ ಆದೇಶ ಪ್ರಕಟವಾಗುವ ಸಾಧ್ಯತೆಯಿದೆ.

  • ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ, ಫುಲ್ ಟೈಟ್, ಬಾಗಿಲು ಹಾಕದೆ ನಿದ್ದೆಗೆ ಜಾರಿದ್ರು

    – ಗ್ರಾಮಸ್ಥರೇ ಕಚೇರಿಗೆ ಬೀಗ ಹಾಕಿದ್ರು

    ಚಿಕ್ಕಮಗಳೂರು: ಗ್ರಾಮ ಪಂಚಾಯಿತಿಯಲ್ಲೇ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿ ಬಾಗಿಲನ್ನೂ ಹಾಕದೆ ಬಾಗಿಲ ಬಳಿಯೇ ನಿದ್ದೆಗೆ ಜಾರಿರುವ ಘಟನೆ ಜಿಲ್ಲೆಯ ಕಡೂರು ತಾಲೂಕಿನ ದೇವನೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.

    ಮಾರ್ಚ್ 7 ಭಾನುವಾರವಾದ್ದರಿಂದ ಗ್ರಾಮ ಪಂಚಾಯಿತಿಯ ವಾಟರ್ ಮ್ಯಾನ್ ಅರುಣ್ ಹಾಗೂ ಅಟೆಂಡರ್ ಅವಿನಾಶ್ ಗ್ರಾಮ ಪಂಚಾಯಿತಿಯಲ್ಲೇ ಸಂಡೇ ಸ್ಪೆಷಲ್ ಡ್ರಿಂಕ್ಸ್ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಬಳಿಕ ಫುಲ್ ಟೈಟ್ ಆದ ಇಬ್ಬರೂ ಗ್ರಾಮ ಪಂಚಾಯಿತಿ ಕಚೇರಿಯ ಬಾಗಿಲನ್ನೂ ಹಾಕಿಲ್ಲ. ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಿದ್ದೆಗೆ ಜಾರಿದ್ದಾರೆ.

    ರಾತ್ರಿ 11 ಗಂಟೆಯಾದರೂ ಗ್ರಾಮ ಪಂಚಾಯಿತಿ ಬಾಗಿಲು ಹಾಕದ್ದನ್ನ ಗಮನಿಸಿದ ಸ್ಥಳೀಯರು, ಹೋಗಿ ನೋಡಿದ್ದಾರೆ. ಸಿಬ್ಬಂದಿ ನಶೆಯಲ್ಲಿ ತೇಲುತ್ತಿದ್ದು, ಗಾಢ ನಿದ್ದೆಗೆ ಜಾರಿದ್ದರು. ಇದನ್ನು ಕಂಡ ಸ್ಥಳಿಯರೇ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿಕೊಂಡು ಬಂದಿದ್ದಾರೆ. ವಿಷಯವನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇಬ್ಬರನ್ನೂ ಕೆಲಸದಿಂದ ವಜಾಗಿಳಿಸುವಂತೆ ಆಗ್ರಹಿಸಿದ್ದಾರೆ.

  • ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಮಾಧುರಿ ದೀಕ್ಷಿತ್

    ವೈಯಕ್ತಿಕ ಜೀವನದ ಗುಟ್ಟು ಬಿಚ್ಚಿಟ್ಟ ಮಾಧುರಿ ದೀಕ್ಷಿತ್

    ಮುಂಬೈ: ಬಾಲಿವುಡ್ ಎವರ್ ಗ್ರೀನ್ ನಟಿ ಮಾಧುರಿ ದೀಕ್ಷಿತ್ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮಕ್ಕಳು, ಮೊಮ್ಮಕ್ಕಳಿದ್ದರೂ ಕೂಡ ಮಾಧುರಿ ದೀಕ್ಷಿತ್ ಇಂದಿನ ನಟಿಯರಿಗೆ ಪೈಪೋಟಿ ನೀಡುವಂತ ಸುಂದರ ನಟಿ. ಅಲ್ಲದೆ ಮಾಧುರಿ ದೀಕ್ಷಿತ್ ಫಿಟ್ ನೆಸ್ ಬಗ್ಗೆ ಹೇಳುವುದಾದರೆ ಇಂದಿನ ಯುವತಿಯರು ನಾಚುವಂತೆ ಮೆಂಟೇನ್ ಮಾಡಿದ್ದಾರೆ. ಸಾಮಾಜಿಕ ಜಾಲಾತಾಣಗಳಲ್ಲಿ ಅಷ್ಟಾಗಿ ಹೆಚ್ಚು ಸುದ್ದಿಯಲ್ಲಿರದಿದ್ದರೂ, ಮಾಧುರಿ ತಮ್ಮ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ಕುರಿತಂತೆ ಅಭಿಮಾನಿಗಳ ಕೆಲ ಪ್ರಶ್ನೆಗಳಿಗೆ ಇನ್‍ಸ್ಟಾಗ್ರಾಮ್ ಮೂಲಕ ಉತ್ತರಿಸಿದ್ದಾರೆ. ಈ ಕುರಿತಂತೆ ನನ್ನ ಬಗ್ಗೆ ತಿಳಿದುಕೊಳ್ಳಬೇಕಾ? ಎಂದು ಕ್ಯಾಪ್ಷನ್ ಹಾಕಿ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

    ಮೊಡಾಕ್‍ನಿಂದ ಸಬುದಾನ ಕಿ ಖಿಚ್ಡಿವರೆಗೂ ನಿಮ್ಮ ಫೇವರಿಟ್ ಫುಡ್ ಯಾವುದು ಎಂದು ಅಭಿಮಾನಿಯೊಬ್ಬರು ಕೇಳಿದ ಮೊದಲ ಪ್ರಶ್ನೆಗೆ, ನಾನು ಮಹಾರಾಷ್ಟ್ರಿಯನ್ ಫುಡ್‍ನನ್ನು ಬಹಳ ಪ್ರೀತಿಸುತ್ತೇನೆ ಎಂದು ಉತ್ತರಿಸಿದ್ದಾರೆ. ನೀವು ಇತ್ತೀಚೆಗೆ ನೋಡಿದ ಸಿನಿಮಾ ಯಾವುದು ಎಂದು ಕೇಳಿದ ಎರಡನೇ ಪ್ರಶ್ನೆಗೆ, ನಾನು ನೆಟ್‍ಫ್ಲಿಕ್ಸ್ ಸಿರಿಸ್‍ನಲ್ಲಿ ಬರುವ ಕ್ವೀನ್ಸ್ ಗ್ಯಾಂಬಿಟ್‍ನನ್ನು ನೋಡಿದೆ ಅದು ನನಗೆ ತುಂಬಾ ಇಷ್ಟವಾಯಿತು ಎಂದರು.

    ಕೊನೆಯದಾಗಿ ನಿಮ್ಮ ಪತಿ ಶ್ರೀರಾಮ್‍ರಲ್ಲಿ ನೀವು ಬಹಳ ಇಷ್ಟಪಡುವ ವಿಚಾರ ಯಾವುದು ಎಂದು ಕೇಳಿದ ಕೊನೆಯ ಪ್ರಶ್ನೆಗೆ, ಮಾಧುರಿ ನಾಚಿ ನಗುತ್ತಾ ನನಗೆ ಅವರಲ್ಲಿರುವ ಪ್ರಾಮಾಣಿಕತೆ ಬಹಳ ಇಷ್ಟ ಎಂದು ಪ್ರತಿಕ್ರಿಯಿಸಿದರು. ಇನ್ನೂ ಏನಾದರೂ ತಿಳಿದುಕೊಳ್ಳಬೇಕಾ? ಎಂದು ಪ್ರಶ್ನಿಸುವ ಮೂಲಕ ಕ್ಯಾಪ್ಷನ್ ಹಾಕಿ ಮಾಧುರಿ ವೀಡಿಯೋವನ್ನು ತಮ್ಮ ಇನ್ ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by Madhuri Dixit (@madhuridixitnene)

    ನಟಿ ಮಾಧುರಿ ದೀಕ್ಷಿತ್ ಅಭಿನಯಿಸಿದ್ದ ರಾಮ್ ಲಖಾನ್ ಸಿನಿಮಾ ಬಿಡುಗೆಡೆಯಾಗಿ ಜನವರಿ 27ಕ್ಕೆ 32 ವರ್ಷ ತುಂಬಿದ್ದು, ಹಿಂದೆ ಚಿತ್ರತಂಡದೊಂದಿಗೆ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಅನಿಲ್ ಕಪೂರ್, ಜಾಕಿ ಶ್ರಾಫ್, ಅನುಪಮ್ ಖೇರ್, ಸತೀಶ್ ಕೌಶಿಕ್, ಗುಲ್ಶನ್ ಗ್ರೋವರ್, ಮಾಧುರಿ ಮತ್ತು ರಾಮ್ ಲಖನ್ ಸೇರಿದಂತೆ ನಿರ್ದೇಶಕ ಸುಭಾಷ್ ಘೈ ಕಾಣಿಸಿಕೊಂಡಿದ್ದರು.

     

    View this post on Instagram

     

    A post shared by Madhuri Dixit (@madhuridixitnene)

    ಜೊತೆಗೆ 32 ವರ್ಷ ಪೂರೈಸಿರುವ ಹಿನ್ನೆಲೆ ಪಾರ್ಟಿ ಮಾಡಿರುವ ರಾಮ್ ಲಖನ್ ಸಿನಿಮಾ ತಂಡ, ಈ ಫೋಟೋವನ್ನು ಹಿಂದಿನ ಫೋಟೋ ಜೊತೆ ಕೊಲಾಜ್ ಮಾಡಿ ಶೇರ್ ಮಾಡಿಕೊಂಡಿದೆ.