Tag: ಪಾರ್ಟಿ

  • Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್‌

    Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್‌

    ಮೈಸೂರು: ನಗರದ ಹೊರವಲಯದಲ್ಲಿ ಅನುಮತಿ ಪಡೆಯದೇ ಪಾರ್ಟಿ ನಡೆಸಿದ್ದ ಅಲ್ಲದೇ 64 ಮಂದಿ ವಿರುದ್ಧ ಪೊಲೀಸರು (Mysuru Police) ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಬಿಎನ್‌ಎಸ್‌ ಕಲಂ 221, 223, 121(2), 15(A), 32, 34, 38(A) KE ಅನ್ವಯ ಪ್ರಕರಣ ದಾಖಲಾಗಿದೆ. ಬಂಧಿತರು ಮೈಸೂರು, ಮಡಿಕೇರಿ, ಬೆಂಗಳೂರು ಹಾಗೂ ತಮಿಳುನಾಡು (Tamil Nadu) ಮೂಲದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು: ಪ್ರೊ.ಕೆ.ಎಸ್.ಭಗವಾನ್

    ಏನಾಗಿತ್ತು?
    ಕೆಆರ್‌ಎಸ್‌ ಹಿನ್ನೀರಿನ (KRS Back Water) ಬಳಿಯಿರುವ ಎಡಹಳ್ಳಿ ಗ್ರಾಮದಲ್ಲಿ ಮಧು ಎಂಬಾತನಿಗೆ ಸೇರಿದ ಜಮೀನಿನಲ್ಲಿ ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಸಂತೋಷ್ ಅಂಬಾತ ಪಾರ್ಟಿ ಆಯೋಜನೆ ಮಾಡಿದ್ದ. ಅಧಿಕೃತವಾಗಿ ಪಾರ್ಟಿಗೆ ಅನುಮತಿ ಪಡೆಯಲಾಗಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿಯೂ ಬರೆದುಕೊಂಡಿದ್ದ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ನೋಂದಣಿ ಮಾಡಿಕೊಂಡಿದ್ದರು. ಆದ್ರೆ ಡಿಜೆ ಮೂಲಕ ಅಬ್ಬರದ ಮ್ಯೂಸಿಕ್ ಹಾಕಿದ್ದ ಕಾರಣ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರಿಗೆ ಮಾಹಿತಿ ನೀಡಲಾಗಿತ್ತು. ಎಸ್ಪಿ ಆದೇಶದಂತೆ ಹೆಚ್ಚುವರಿ ಎಸ್ಪಿ ನಾಗೇಶ್ ಹಾಗೂ ಡಿವೈಎಸ್‌ಪಿ ಕರೀಂ ರಾವತರ್‌ ದಾಳಿ ನಡೆಸಿ ಸಾಕಷ್ಟು ಯುವಕ-ಯುವತಿಯರನ್ನ ವಶಕ್ಕೆ ಪಡೆದುಕೊಂಡಿದ್ದರು. ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪವೂ ವ್ಯಕ್ತವಾಗಿದೆ.

    ಇದಕ್ಕೆ ಸಂಬಂಧಿಸಿದಂತೆ ಎಸ್‌ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಆದರೆ ಸ್ಥಳದಲ್ಲಿ ಮದ್ಯ ಹಾಗೂ ಸಿಗರೇಟ್ ದೊರೆತಿದೆ. ಎಫ್‌ಎಸ್‌ಎಲ್ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೊತೆಗೆ ಪಾರ್ಟಿಯಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಹಾಗೂ ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ರೇವ್ ಪಾರ್ಟಿ? – ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಯುವಕರು ವಶಕ್ಕೆ

    ಇಸ್ರೇಲ್‌ನ ರ‍್ಯಾಪರ್ ಗ್ರೇನ್ ರಿಪ್ಪರ್ ಭಾಗಿ:
    ಒಟ್ಟು 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಪಾರ್ಟಿಯಲ್ಲಿ ಇಸ್ರೇಲ್‌ನಿಂದ ರ‍್ಯಾಪರ್ ಗ್ರೇನ್ ರಿಪ್ಪರ್ ಬಂದಿದ್ದನು. ಆಯೋಜಕರಿಂದ ಪಾರ್ಟಿಗೆ ಬರಲು ತಲಾ 2000 ರೂ. ಹಣವನ್ನು ನಿಗದಿ ಮಾಡಿದ್ದರು. ಪೊಲೀಸರ ದಾಳಿ ವೇಳೆ ಅಲ್ಲಿದ್ದ ಯುವಕ-ಯುವತಿಯರು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ. ಇದನ್ನೂ ಓದಿ: ಲಾ ಕಾಲೇಜ್‌ಗೆ ಸೇರಿಸದಿದ್ದರೇ ಆಸ್ತಿಯಲ್ಲಿ ಭಾಗ ಕೊಡು ಅಂತ ನಮ್ಮಪ್ಪನನ್ನ ಕೇಳಿದ್ದೆ: ಸಿಎಂ

  • ಮೈಸೂರಿನಲ್ಲಿ ರೇವ್ ಪಾರ್ಟಿ? – ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಯುವಕರು ವಶಕ್ಕೆ

    ಮೈಸೂರಿನಲ್ಲಿ ರೇವ್ ಪಾರ್ಟಿ? – ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಯುವಕರು ವಶಕ್ಕೆ

    ಮೈಸೂರು: ನಗರದ ಹೊರವಲಯದಲ್ಲಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಅನುಮಾನದ ಮೇರೆಗೆ (Rave Party) ಪೊಲೀಸರು ದಾಳಿ ನಡೆಸಿ, 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

    ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಹೊರವಲಯದಲ್ಲಿ ರೇವ್ ಪಾರ್ಟಿ ಬಗ್ಗೆ ಅನುಮಾನಗೊಂಡು ಮೈಸೂರು ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ತಡರಾತ್ರಿ ಪಾರ್ಟಿ ಮಾಡುತಿದ್ದ ವೇಳೆ ಪೊಲೀಸರು ದಿಢೀರ್ ಎಂಟ್ರಿ ಕೊಟ್ಟಿದ್ದು, ಪಾರ್ಟಿಯಲ್ಲಿ 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಅಡಿಷನಲ್ ಎಸ್‌ಪಿ ನಾಗೇಶ್ ಹಾಗೂ ಡಿವೈಎಸ್‌ಪಿ ಕರೀಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.ಇದನ್ನೂ ಓದಿ: ಕ್ರಿಮಿನಲ್‍ಗಳ ಮಾಹಿತಿ ನೀಡಲು ನಿರಾಕರಣೆ – ವಾಟ್ಸಾಪ್ ನಿರ್ದೇಶಕರ ವಿರುದ್ಧ ಎಫ್‍ಐಆರ್

    ಇದಕ್ಕೆ ಸಂಬಂಧಿಸಿದಂತೆ ಎಸ್‌ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಆದರೆ ಸ್ಥಳದಲ್ಲಿ ಮದ್ಯ ಹಾಗೂ ಸಿಗರೇಟ್ ದೊರೆತಿದೆ. ಎಫ್‌ಎಸ್‌ಎಲ್ ತಂಡ (FSL) ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೊತೆಗೆ ಪಾರ್ಟಿಯಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಹಾಗೂ ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಒಟ್ಟು 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಪಾರ್ಟಿಯಲ್ಲಿ ಇಸ್ರೇಲ್‌ನಿಂದ ರ‍್ಯಾಪರ್ ಗ್ರೇನ್ ರಿಪ್ಪರ್ (Rapper Grain Ripper) ಬಂದಿದ್ದನು. ಆಯೋಜಕರಿಂದ ಪಾರ್ಟಿಗೆ ಬರಲು ತಲಾ 2000 ರೂ. ಹಣವನ್ನು ನಿಗದಿ ಮಾಡಿದ್ದರು. ಪೊಲೀಸರ ದಾಳಿ ವೇಳೆ ಅಲ್ಲಿದ್ದ ಯುವಕ-ಯುವತಿಯರು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ.ಇದನ್ನೂ ಓದಿ: ತಮಿಳುನಾಡು ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಇಂದು ಪ್ರಮಾಣವಚನ

  • ಸೋನಲ್-ತರುಣ್ ಮದುವೆ ಸಂಭ್ರಮ: ಬ್ಯಾಚುಲರೇಟ್ ಪಾರ್ಟಿಯ ಗುಂಗಲಿ ನಟಿ

    ಸೋನಲ್-ತರುಣ್ ಮದುವೆ ಸಂಭ್ರಮ: ಬ್ಯಾಚುಲರೇಟ್ ಪಾರ್ಟಿಯ ಗುಂಗಲಿ ನಟಿ

    ಕಾಟೇರ ಚಿತ್ರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಕಾರ್ಯಕ್ರಮಗಳು ಶುರುವಾಗಿವೆ. ಮದುವೆಗೂ ಮುನ್ನ ಫ್ಯಾಮಿಲಿ ಜೊತೆ ಸೋನಲ್ ಪಾರ್ಟಿ ಮಾಡಿದ್ದಾರೆ. ಕುಟುಂಬದ ಜೊತೆ ಬ್ಯಾಚುಲರೇಟ್ ಪಾರ್ಟಿಯಲ್ಲಿ ಸೋನಲ್ ಕುಣಿದು ಕುಪ್ಪಳಿಸಿದ್ದಾರೆ.  ಮಗಳಿಗಾಗಿ ಸರ್ಪ್ರೈಸ್ ಪಾರ್ಟಿ ಕೊಟ್ಟ ಸಂಭ್ರಮಕ್ಕೆ ಕಾರಣರಾಗಿದ್ದಾರೆ ಸೋನಲ್ ತಾಯಿ ಮತ್ತು ತಂಗಿ.

    ಗಸ್ಟ್ 10 ಮತ್ತು 11ನೇ ತಾರೀಖು ಬೆಂಗಳೂರಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ  ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ (Tarun Sudhir) ಮತ್ತು ನಟಿ ಸೋನಲ್‍ (Sonal). 10ನೇ ತಾರೀಖು ಆರತಕ್ಷತೆ ಕಾರ್ಯಕ್ರಮವಿದ್ದರೆ 11ನೇ ತಾರೀಖು ಈ ಜೋಡಿ ಸಪ್ತಪದಿ ತುಳಿಯಲಿದೆ. ಮದುವೆ (Marriage) ಕುರಿತಾಗಿ ಮಾಧ್ಯಮಗಳ ಜೊತೆ ಅನೇಕ ವಿಷಯಗಳನ್ನು ಹಂಚಿಕೊಂಡಿದೆ ಈ ಜೋಡಿ.

    ಲವ್‍ ಸ್ಟೋರಿಗೆ ದರ್ಶನ್ ಕಾರಣ

    ಈ ಜೋಡಿಯ ಲವ್ ಸ್ಟೋರಿಗೆ ದರ್ಶನ್ ಕಾರಣವಂತೆ. ಈ ಕುರಿತಂತೆ ಮಾತನಾಡಿದ್ದಾರೆ ತರುಣ್. ‘ರಾಬರ್ಟ್‌ ಸೆಟ್ ನಲ್ಲಿ ದರ್ಶನ್ ಸರ್ ತಮಾಷೆಯಾಗಿ ರೇಗಿಸ್ತಿದ್ರು. ಸೋನಾಲ್ ಮದುವೆ ಮಾಡಿಕೊಳ್ತಿಯಾ ಅಂತ ರೇಗಿಸ್ತಿದ್ರು.  ಸೋನಾಲ್ ಯಾವ ಸೆಟ್ ಗೆ ಹೋದ್ರೂ ಮದ್ವೆ ಬಗ್ಗೆ ಕೇಳ್ತಿದ್ರಂತೆ. ಸೋನಾಲ್ ಫೋನ್ ಮಾಡಿ ಅವತ್ತು ರೂಮರ್ಸ್ ಬಗ್ಗೆ ಹೇಳಿದ್ರು. 2023 ಜನವರಿಯಲ್ಲಿ ಮತ್ತಷ್ಟು ಕ್ಲೋಸ್ ಆಗ್ತಾ ಹೋದ್ವಿ. ಅವ್ರ ಪ್ರೂಚರ್, ಫ್ಯಾಮಿಲಿ ಬಗ್ಗೆ ನೋಡ್ತಾ ಬಂದ್ವಿ. ಕಾಟೇರ ರಿಲೀಸ್ ಆಗೋವರೆಗೂ ಮದುವೆಗೆ ಟೈಂ ಕೇಳಿದ್ದೆ. ಕಾಟೇರ ಸಿನಿಮಾ ರೆಸ್ಪಾನ್ಸ್ ಮೇಲೆ ನನ್ ಮದ್ವೆಗೆ ಡಿಸೈಡ್ ಮಾಡಿದ್ದು. ದರ್ಶನ್ ಸರ್ ಕೂಡಾ ಸೋನಲ್ ಮನೇಲಿ ಮಾತಾಡಿದ್ರು. ಫೈನಲಿ ಈಗ ಫ್ಯಾಮಿಲಿಯಲ್ಲಿ ಮಾತುಕತೆ ಮಾಡಿ ಮದುವೆಗೆ ನಿರ್ಧಾರ ಮಾಡಿದ್ವಿ’ ಅಂತಾರೆ.

    ತಮಾಷೆನೇ ನಿಜಾ ಆಯ್ತು..

    ಲವ್ ಮತ್ತು ಮದುವೆ ಕುರಿತಂತೆ ಮಾತಾಡಿದ ಸೋನಲ್ ಮಂಥೆರೋ ‘ನಾವು ಟಚ್ ಅಲ್ಲಿ ಇರ್ತಿರಲಿಲ್ಲ. ರಾಬರ್ಟ್ ಸಿನಿಮಾ ಟೈಮ್ ನಲ್ಲಿ  ದರ್ಶನ್ ಸರ್ ತಮಾಷೆ ಮಾಡ್ತಿದ್ರು. ರೀಸೆಂಟ್ ಆಗಿ ಎಲ್ರು ಹೇಳೋದನ್ನ ಒಮ್ಮೆ ಥಿಂಕ್ ಮಾಡೋಣ ಅಂತ ಟ್ರೈ ಮಾಡಿದ್ವಿ. ನಾವು ನಮ್ಮ ಲವ್ ನ ಸೀಕ್ರೆಟ್ ಆಗಿ ಇಡೋದು ನನ್ನ ಡಿಸಿಷನ್ ಆಗಿತ್ತು. ಮದ್ವೆ ಆದ್ಮೇಲೂ ಸಿನಿಮಾ ನಿಲ್ಲಸಲ್ಲ ಮಾಡ್ತೀನಿ. ದರ್ಶನ್ ಸರ್ ನ ತರುಣ್ ಮೀಟ್ ಆಗಿದ್ದಾರೆ. ನನಗೆ ಅಲ್ಲಿ‌ಹೋಗೋಕೆ ಅವ್ರನ್ನ ಆತರ ನೋಡೋಕೆ ಇಷ್ಟ ಇಲ್ಲ. ಅವ್ರು ಅಷ್ಟರಲ್ಲಿ ಬರ್ತಾರೆ ಅನ್ನಿಸುತ್ತೆ ನೋಡೋಣ’ ಅಂತಾರೆ.

     

    ದರ್ಶನ್ ಸರ್ ನ ಮಿಸ್ ಮಾಡ್ಕೋತೀವಿ ಅಂತಾರೆ ತರುಣ್ ಮತ್ತು ಸೋನಲ್.  ದರ್ಶನ್ ಸರ್ ಎಲ್ಲಿದ್ರೂ ಅವ್ರ ವಿಶಸ್ ಇರುತ್ತೆ.  ದರ್ಶನ್ ಸರ್ ಆಶೀರ್ವಾದ ಯಾವಾಗ್ಲೂ ಇರುತ್ತೆ. ನಮ್ ತಂದೆಯಷ್ಟೇ ದರ್ಶನ್ ಸರ್ ನ ಗೌರವಿಸ್ತೀನಿ. ಬಾಬಿಗೆ (ವಿಜಯಲಕ್ಷ್ಮಿ) ಇನ್ವಿಟೇಷನ್ ಕೊಟ್ಟಿದ್ದೀನಿ. ಅವ್ರು ಬರ್ತೀನಿ ಅಂದಿದಾರೆ. ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗ್ತೀವಿ. ಬೆಂಗಳೂರಿನಲ್ಲಿ ಮದುವೆ ನಂತರ ಮಂಗಳೂರಿನಲ್ಲೂ ಒಂದು ಫಂಕ್ಷನ್ ಮಾಡ್ತಾರಂತೆ ತರುಣ್ ಮತ್ತು ಸೋನಲ್.

  • ಹೊಸ ಹುಡುಗಿ ಜೊತೆ ವರ್ಮಾ ನೈಟ್ ಪಾರ್ಟಿ

    ಹೊಸ ಹುಡುಗಿ ಜೊತೆ ವರ್ಮಾ ನೈಟ್ ಪಾರ್ಟಿ

    ಹೆಸರಾಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ನೈಟ್ ಪಾರ್ಟಿ (Party) ಮಾಡುವುದಕ್ಕಾಗಿಯೇ ಇತ್ತೀಚೆಗೆ ಫೇಮಸ್ ಆಗುತ್ತಿದ್ದಾರೆ. ಅದರಲ್ಲೂ ಹಾಟ್ ಹಾಟ್ ಹುಡುಗಿಯರ ಜೊತೆ ತಮ್ಮ ಪಾರ್ಟಿಗಳನ್ನು ಕಳೆಯುತ್ತಿದ್ದಾರೆ. ಇದೀಗ ಹೊಸ ಹುಡುಗಿಯೊಂದಿಗೆ ವರ್ಮಾ ನೈಟ್ ಪಾರ್ಟಿ ಮಾಡಿದ್ದು, ಆ ಹುಡುಗಿ ಸುಪ್ರಿತಾ (supreetha) ಎಂದು ಹೇಳಲಾಗುತ್ತಿದೆ.

    ಖ್ಯಾತ ನಟಿ ಸುರೇಖಾ ರಾಣಿ ಅವರ ಪುತ್ರಿ ಸುಪ್ರಿತಾ ಈ ಬಾರಿ ವರ್ಮಾ ಅವರ ನೈಟ್ ಪಾರ್ಟಿಯಲ್ಲಿ ಕಂಡಿದ್ದಾರೆ. ಅವರ ಜೊತೆ ಪಾರ್ಟಿ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

    ತಮ್ಮ ಮಗಳನ್ನು ಸಿನಿಮಾ ರಂಗಕ್ಕೆ ಪರಿಚಯಿಸುವುದಾಗಿ ಈ ಹಿಂದೆ ಸುರೇಖಾ ರಾಣಿ ಹೇಳಿದ್ದರು. ಆದರೆ, ಹೆಚ್ಚಿನ ಮಾಹಿತಿಯನ್ನು ಅವರು ನೀಡಿರಲಿಲ್ಲ. ವರ್ಮಾ ಸಿನಿಮಾ ಮೂಲಕ ಏನಾದರೂ ಸುಪ್ರಿತಾ ಚಿತ್ರರಂಗಕ್ಕೆ ಬರುತ್ತಾರಾ? ಗೊತ್ತಿಲ್ಲ. ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

     

    ಈಗಾಗಲೇ ಸುಪ್ರಿಯಾ ಯೂಟ್ಯೂಬರ್ ಆಗಿ ಕ್ರೇಜ್ ಕ್ರಿಯೇಟ್ ಮಾಡಿದ್ದಾರೆ. ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಅಲ್ಲದೇ ಕವರ್ ಸಾಂಗ್ ಗಳನ್ನೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ರಂಗದಲ್ಲಿ ಲಾಂಚ್ ಆಗುವ ಕನಸು ಕಂಡಿದ್ದಾರೆ.

  • ಕುಡಿಯಲ್ಲ, ಸಿಗರೇಟ್ ಸೇದಲ್ಲ: ಪಾರ್ಟಿ ಬಗ್ಗೆ ನಟಿ ತಾಪ್ಸಿ ಕಿಡಿಕಿಡಿ

    ಕುಡಿಯಲ್ಲ, ಸಿಗರೇಟ್ ಸೇದಲ್ಲ: ಪಾರ್ಟಿ ಬಗ್ಗೆ ನಟಿ ತಾಪ್ಸಿ ಕಿಡಿಕಿಡಿ

    ಬಾಲಿವುಡ್ (Bollywood) ನಟಿ ತಾಪ್ಸಿ ಪನ್ನು ಬಿಟೌನ್ ನಲ್ಲಿ ನಡೆಯುವ ಪಾರ್ಟಿ ಬಗ್ಗೆ ಮಾತನಾಡಿದ್ದಾರೆ. ಅವಕಾಶಕ್ಕಾಗಿ ಅಲ್ಲಿ ತಡರಾತ್ರಿ ಪಾರ್ಟಿ ಮಾಡಬೇಕು, ಸ್ಟಾರ್ ಗಳ ಜೊತೆ ಚಾಟ್ ಮಾಡಬೇಕು ಅಂತೆಲ್ಲ ಹೇಳಿದ್ದಾರೆ. ನಾನು ಕುಡಿಯಲ್ಲ, ಸಿಗರೇಟು ಸೇದಲ್ಲ. ಹಾಗಾಗಿ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ.  ಈ ಕಾರಣಕ್ಕಾಗಿಯೇ ನನಗೆ ಅವಕಾಶ ಸಾಕಷ್ಟು ಸಿಗಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

    ಈ ನಡುವೆ ತಾಪ್ಸಿ ಪನ್ನು ಮದುವೆಯ ಸಡಗರದಲ್ಲಿದ್ದಾರೆ. ಬಾಲಿವುಡ್ ಅಂಗಳದಲ್ಲಿ ಮದುವೆಯ ಸಂಭ್ರಮ ಜೋರಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ರಕುಲ್ (Rakul Preet Singh) ಮತ್ತು ಜಾಕಿ ಭಗ್ನಾನಿ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದರು. ಗೂಗ್ಲಿ ಬೆಡಗಿ ಕೃತಿ ಕರಬಂಧ ಮಾರ್ಚ್‌ನಲ್ಲಿ ಮದುವೆ ಆಗೋದಾಗಿ ಅನೌನ್ಸ್ ಮಾಡಿದ್ದರು. ಇದೀಗ ತಾಪ್ಸಿ ಸರದಿ.

    ತಾಪ್ಸಿ (Taapsee Pannu) ತಮ್ಮ ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾಗಿದ್ದು, ಮಾರ್ಚ್ ಅಂತ್ಯದಲ್ಲಿ ಉದಯಪುರದಲ್ಲಿ ಮದುವೆ (Wedding) ನಡೆಯಲಿದೆ. ಕ್ರಿಶ್ಚಿಯನ್ ಮತ್ತು ಸಿಖ್ ಸಂಪ್ರದಾಯದಂತೆ ಈ ಜೋಡಿ ಮದುವೆ ಆಗಲಿದೆ. ‌

    ಬ್ಯಾಡ್ಮಿಂಟನ್ ಆಟಗಾರ ಮಥಿಯಾಸ್ ಬೋ (Mathias Boe) ಜೊತೆ 10 ವರ್ಷಗಳ ಕಾಲ ಡೇಟಿಂಗ್ ಮಾಡ್ತಿದ್ದರು ತಾಪ್ಸಿ. ಈಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆಯಾಗುತ್ತಿದ್ದಾರೆ. ಮದುವೆಗೆ 2 ಕುಟುಂಬದವರು ಮತ್ತು ಆಪ್ತರಷ್ಟೇ ಭಾಗಿಯಾಗಲಿದ್ದಾರೆ. ಹಾಗಾಗಿ ಬಾಲಿವುಡ್ ಮತ್ತು ಸೌತ್ ಸಿನಿಮಾರಂಗದ ಸೆಲೆಬ್ರಿಟಿಗಳಿಗೆ ಮದುವೆಗೆ ಆಹ್ವಾನವಿಲ್ಲ ಎನ್ನಲಾಗುತ್ತಿದೆ.

     

    ಸದ್ಯ ಪಡ್ಡೆಹುಡುಗರ ನೆಚ್ಚಿನ ನಟಿ ತಾಪ್ಸಿ ಮದುವೆಗೆ ಸಿದ್ಧತೆ ಮಾಡಿಕೊಳ್ತಿರೋದಕ್ಕೆ ನಿರಾಸೆಯಾಗಿದ್ದಾರೆ. ಏನೇ ಆಗಲಿ ನಮ್ಮ ನಾಯಕಿಗೆ ಶುಭವಾಗಲಿ ಎಂದು ಹಾರೈಸುತ್ತಿದ್ದಾರೆ ಫ್ಯಾನ್ಸ್.

  • ದರ್ಶನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇಂದು ವಿಚಾರಣೆಗೆ ಹಾಜರ್

    ದರ್ಶನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಇಂದು ವಿಚಾರಣೆಗೆ ಹಾಜರ್

    ಕಾಟೇರ’ (Katera) ಚಿತ್ರದ ಸಕ್ಸಸ್ ಪಾರ್ಟಿಯಲ್ಲಿ (Party) ಅವಧಿ ಮೀರಿ ಬೆಳಗಿನ ಜಾವದವರೆಗೆ ಚಿತ್ರತಂಡ ಪಾರ್ಟಿ ಮಾಡಿತ್ತು ಎಂಬ ಆರೋಪದ ಮೇಲೆ ಬೆಂಗಳೂರಿನ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಕೆಲವು ಚಿತ್ರತಂಡದ ಸದಸ್ಯರು ಹಾಗೂ ಕೆಲವು ಸೆಲೆಬ್ರಿಟಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದರು. ಹಾಗಾಗಿ 12.1.24(ಇಂದು) ಶುಕ್ರವಾರ ಮಧ್ಯಾಹ್ನ 2.30ಕ್ಕೆ ರಾಕ್ ಲೈನ್ ವೆಂಕಟೇಶ್, ದರ್ಶನ್,  ತರುಣ್ ಸುಧೀರ್ ಅವರು ಸೇರಿದಂತೆ ನೋಟಿಸ್ ಜಾರಿಯಾಗಿರುವ ಎಲ್ಲರೂ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹೋಗುತ್ತಿದ್ದಾರೆ‌.

    ಕೆಲ ದಿನಗಳ ಹಿಂದೆಯಷ್ಟೇ ಪೊಲೀಸರು ನೋಟಿಸ್ ಕಳುಹಿಸಿದ್ದರು. ದರ್ಶನ್ (Darshan) ಮತ್ತು ತಂಡ ದುಬೈನಲ್ಲಿದ್ದ ಕಾರಣದಿಂದಾಗಿ ಹಾಜರಾಗಲು ಆಗಿರಲಿಲ್ಲ. ನೆನ್ನೆಯಷ್ಟೇ ದುಬೈನಿಂದ ಚಿತ್ರತಂಡ ಬೆಂಗಳೂರಿಗೆ ವಾಪಸ್ಸಾಗಿದ್ದು, ಇಂದು ಎಲ್ಲರೂ ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ.

    ದರ್ಶನ್ ನಟನೆಯ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಆಯೋಜನೆಯಾಗಿತ್ತು. ಸೆಲೆಬ್ರಿಟಿ ಶೋ ಮುಗಿಸಿಕೊಂಡು ಪಕ್ಕದಲ್ಲೇ ಇದ್ದ ಪಬ್ ನಲ್ಲಿ ತಡರಾತ್ರಿವರೆಗೂ ದರ್ಶನ್ ಮತ್ತು ಹಲವು ನಟರು ಪಾರ್ಟಿ ಮಾಡಿದ್ದಾರೆ ಎನ್ನುವ ಆರೋಪವಿದೆ. ಈ ಘಟನೆಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಕೂಡ ಆಗಿತ್ತು. ಅದಕ್ಕೆ ಇಂದು ದರ್ಶನ್ ಮತ್ತು ತಂಡ ಸ್ಪಷ್ಟನೆ ನೀಡಲಿದೆ.

  • ಅಭಿ-ಅವಿವಾ ಪಾರ್ಟಿ : ‘ಹೇ ಜಲೀಲಾ..’ ಹಾಡಿಗೆ ಡಾನ್ಸ್ ಮಾಡಿದ ಸುಮಲತಾ-ಯಶ್

    ಅಭಿ-ಅವಿವಾ ಪಾರ್ಟಿ : ‘ಹೇ ಜಲೀಲಾ..’ ಹಾಡಿಗೆ ಡಾನ್ಸ್ ಮಾಡಿದ ಸುಮಲತಾ-ಯಶ್

    ಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ್ಪ ಮದುವೆ ನಂತರ ಅವರ ಆಪ್ತರಿಗಾಗಿ ಪಾರ್ಟಿಯೊಂದನ್ನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಆಯೋಜನೆ ಮಾಡಲಾಗಿತ್ತು. ಈ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ಹಲವು ತಾರೆಯರು ಆಗಮಿಸಿದ್ದರು. ಅಂಬರೀಶ್ ಅವರ ಜನಪ್ರಿಯ ಹಾಡಿಗೆ ನೃತ್ಯ ಕೂಡ ಮಾಡಿದರು.

    ಅದರಲ್ಲೂ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾದ ಫೇಮಸ್ ಸಾಂಗ್ ‘ಹೇ ಜಲೀಲಾ..’ ಹಾಡಿಗೆ ಸುಮಲತಾ (Sumalatha) ಅಂಬರೀಶ್ ಜೊತೆ ಯಶ್ (Yash) ಡಾನ್ಸ್ ಮಾಡಿದರು. ನಂತರ ಇವರಿಗೆ ಅಭಿಷೇಕ್ ಮತ್ತು ಅವಿವಾ ಕೂಡ ಸಾಥ್ ನೀಡಿದ್ದು ವಿಶೇಷವಾಗಿತ್ತು. ಕಬ್ಲ್ ಅವಿವಾ ಹೆಸರಿನಲ್ಲಿ ಆಯೋಜನೆಯಾಗಿದ್ದ ಪಾರ್ಟಿಯಲ್ಲಿ (Aviva, Party) ರಮ್ಯಾಕೃಷ್ಣ, ಮಾಲಾಶ್ರೀ ಸೇರಿದಂತೆ ಹಲವು ನಾಯಕಿಯರು ಕೂಡ ಹಾಜರಿದ್ದರು.

    ಅಭಿಷೇಕ್ ಅಂಬರೀಶ್ (Abhishek Ambarish) ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವಿವಾ ಬಿಡಪ್ಪ (Aviva Bidappa) ಮೊನ್ನೆಯಷ್ಟೇ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಗೌಡರ ಸಂಪ್ರದಾಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದ್ದಾರೆ. ಇದನ್ನೂ ಓದಿ:ಎಂಗೇಜ್‌ಮೆಂಟ್‌ ಸಂಭ್ರಮದಲ್ಲಿ ‘ಅಣ್ಣ- ತಂಗಿ’ ಸೀರಿಯಲ್‌ ನಟಿ ಅಖಿಲಾ ಪ್ರಕಾಶ್

    ಈ ಮದುವೆಗೆ (Marriage) ಅನೇಕ ಗಣ್ಯರು ಸಾಕ್ಷಿಯಾಗಿದ್ದರು ನಟ ರಜನಿಕಾಂತ್, ತೆಲುಗು ನಟ ಚಿರಂಜೀವಿ,  ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಸಾಕಷ್ಟು ಕಲಾವಿದರು ಹಾಗೂ ತಂತ್ರಜ್ಞರು ಆಗಮಿಸಿದ್ದರು.

     

    ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ವಾರಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿತ್ತು. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿತ್ತು. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿತ್ತು.

  • ಗಂಡು ಮಗುವಾಯ್ತು ಅಂತ ಪಾರ್ಟಿ ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!

    ಗಂಡು ಮಗುವಾಯ್ತು ಅಂತ ಪಾರ್ಟಿ ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!

    ಬೆಂಗಳೂರು: ವ್ಯಕ್ತಿಯೊಬ್ಬ ತನಗೆ ಗಂಡು (Boy Baby) ಮಗುವಾಯಿತು ಎಂದು ಸ್ನೇಹಿತರಿಗೆ ಪಾರ್ಟಿ ಕೊಡಿಸಿದ. ಆದರೆ ಆ ಸ್ನೇಹಿತರು ಆತನ ತಲೆ ಬರುಡೆಯನ್ನೇ ಓಪನ್ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿ (Bengaluru) ನಲ್ಲಿ ನಡೆದಿದೆ.

    ರಂಗನಾಥ್ ಹಲ್ಲೆಗೊಳಗಾದ ವ್ಯಕ್ತಿ. ತನಗೆ ಗಂಡು ಮಗು ಆದ ಎಂಬ ಖುಷಿಯಲ್ಲಿ ಸ್ನೇಹಿತರಾದ ಮನೋಜ್, ಮಧುಸೂದ್, ಪ್ರಸಾದ್‍ಗೆ ಪಾರ್ಟಿ ಕೊಡಿಸಿದ್ದನು. ಈ ಪಾರ್ಟಿಯಲ್ಲಿ ರಾಜಕೀಯ ಪಕ್ಷದ ವಿಚಾರವಾಗಿ ಭಾರೀ ಚರ್ಚೆ ನಡೆದಿದೆ.

    ಪಾರ್ಟಿ ವೇಳೆ ರಂಗನಾಥ್ ಹಾಗೂ ಸ್ನೇಹಿತರ ನಡುವೆ ರಾಜಕೀಯ ಮಾತನಾಡುವಾಗ ಗಲಾಟೆ ಆಗಿದೆ. ಕಾಂಗ್ರೆಸ್ (Congress) ಪರ ಮಾತನಾಡುತ್ತಿದ್ದ ರಂಗನಾಥ್‍ಗೆ ಸ್ನೇಹಿತರು ಬಿಜೆಪಿ (BJP) ಪರ ಮಾತನಾಡಿಕೊಂಡು ಕಿಚಾಯಿಸಿದ್ದಾರೆ. ಆಗ ರಂಗನಾಥ್ ಹಾಗೂ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಆಗಿದೆ. ಜಗಳ ತಾರಕಕ್ಕೇರಿ ಪಕ್ಕದಲ್ಲಿದ್ದ ಬಿಯರ್ ಬಾಟ್ಲಿಯಿಂದ ರಂಗನಾಥ್ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆಯಿಂದ ತೀವ್ರ ರಕ್ತಸ್ರಾವ ಹಿನ್ನೆಲೆ ರಂಗನಾಥ್‍ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ರಂಗನಾಥ್ ಹಾಗೂ ಸ್ನೇಹಿತರು ಸ್ವಿಗ್ಗಿ ಡೆಲಿವರಿ ಬಾಯ್ (Swiggy Deliver Boy) ಆಗಿ ಕೆಲಸ ಮಾಡಿಕೊಂಡಿದ್ದು, ಅಮೃತಹಳ್ಳಿ ಬಳಿ ಇರುವ ಈಶ್ವರ ದೇವಸ್ಥಾನದ ಬಳಿ ರೂಂ ಮಾಡಿಕೊಂಡಿದ್ದರು. ಸದ್ಯ ಹಲ್ಲೆ ಸಂಬಂಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊಸ ವರ್ಷ ಪಾರ್ಟಿ  – ಕಟ್ಟಡದಿಂದ ಬಿದ್ದು ಯುವಕ ಸಾವು

    ಹೊಸ ವರ್ಷ ಪಾರ್ಟಿ – ಕಟ್ಟಡದಿಂದ ಬಿದ್ದು ಯುವಕ ಸಾವು

    ಬೆಂಗಳೂರು: ಹೊಸ ವರ್ಷದ ಪಾರ್ಟಿ ವೇಳೆ ಕುಡಿದು ಕಟ್ಟಡದಿಂದ ಬಿದ್ದ ಯುವಕ ಸಾವನ್ನಪ್ಪಿದ ಘಟನೆ ಕಾಮಾಕ್ಷಿಪಾಳ್ಯದ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ.

    ಒಡಿಶಾ ಮೂಲದ ಬಾಪಿ (30) ಮೃತ ಯುವಕ. ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ದಾಟುವ ಯತ್ನ ಮಾಡಿದ್ದ ಬಾಪಿ ಆಯತಪ್ಪಿ ಮೂರನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ ನಡುವೆ ಮೈಮರೆತ ಪ್ರೇಮಿಗಳು – ರಸ್ತೆ ಬ್ಲಾಕ್‍ಮಾಡಿ ನೋಡ್ಕೊಂಡು ನಿಂತಿದ್ದವರ ಮೇಲೆ ಲಾಠಿಚಾರ್ಜ್

    ಎರಡು ಕಟ್ಟಡಗಳ ನಡುವೆ ಹೋಗಿ ಬರಲು ಕಿಟಕಿ ಒಡೆದು ದಾರಿ ಮಾಡಿಕೊಂಡಿದ್ದರು. ಆ ಕಿಟಕಿಯ ಮೂಲಕವೇ ಒಂದು‌ ಕಟ್ಟಡದ ಟೆರೇಸ್ ಮೇಲೆ ಯುವಕರು ಹೋಗುತ್ತಿದ್ದರು. ಕೇಕ್‌ ತಂದು ಪಾರ್ಟಿ‌ ಮಾಡುವುದಕ್ಕೆ ಸ್ನೇಹಿತರು ಸಿದ್ಧತೆ ಮಾಡಿಕೊಂಡಿದ್ದರು. ರಾತ್ರಿ ಕಿಟಕಿ ಮೂಲಕ ಕಟ್ಟಡದಿಂದ ಜಂಪ್ ಮಾಡಲು ಹೋಗಿದ್ದ ಬಾಪಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.

    ಬಾಪಿ ಕಾಟನ್ ಬಾಕ್ಸ್ ತಯಾರಿ ಮಾಡುವ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು (ಯುಡಿಆರ್) ಅಡಿ ಪ್ರಕರಣ ದಾಖಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ವಿಧಾನಸೌಧ ಮುಂಭಾಗದಲ್ಲೇ ಬಿಯರ್ ಪಾರ್ಟಿ – ನಾಲ್ವರು ಯುವಕರೊಂದಿಗೆ ಇಬ್ಬರು ಯುವತಿಯರ ಮೋಜು ಮಸ್ತಿ

    ವಿಧಾನಸೌಧ ಮುಂಭಾಗದಲ್ಲೇ ಬಿಯರ್ ಪಾರ್ಟಿ – ನಾಲ್ವರು ಯುವಕರೊಂದಿಗೆ ಇಬ್ಬರು ಯುವತಿಯರ ಮೋಜು ಮಸ್ತಿ

    ಬೆಂಗಳೂರು: ವಿಧಾನಸೌಧ (Vidhana Soudha) ಮುಂಭಾಗದಲ್ಲೇ ನಾಲ್ವರು ಯುವಕರೊಂದಿಗೆ ಇಬ್ಬರು ಯುವತಿಯರು ಬಿಯರ್ ಕುಡಿದು, ಸಿಗರೇಟ್ ಸೇದಿ ಬಿಂದಾಸ್ ಪಾರ್ಟಿ (Party) ಮಾಡಿರುವ ಘಟನೆ ನಡೆದಿದೆ.

    ವಿಧಾನಸೌಧ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಪಾರ್ಕ್‍ನಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬಂದ ನಾಲ್ವರು ಯುವಕರು, ಇಬ್ಬರು ಯುವತಿಯರ ಗ್ಯಾಂಗ್ ಕಾರಿನಿಂದ ಬಿಯರ್ ಬಾಟಲ್ ಓಪನ್ ಮಾಡಿ ಕುಡಿಯಲು ಮುಂದಾಗಿದ್ದಾರೆ. ಪಾರ್ಕ್ ನಲ್ಲಿದ್ದ ಹತ್ತಾರು ಜನರ ನಡುವೆಯೇ ಬಿಯರ್ ಬಾಟಲ್ ಓಪನ್ ಮಾಡಿದ ಈ ಗುಂಪು, ಸಾರ್ವಜನಿಕವಾಗಿಯೇ ಬಿಯರ್ ಕುಡಿದು ಸಿಗರೇಟು ಸೇದಿ ಸೆಲ್ಫಿ ಕ್ಲಿಕ್ಕಿಸಿಕೊಂಡ್ರು. ಇದನ್ನೂ ಓದಿ: ಬೆಂಗಳೂರಿನಲ್ಲಿ ಅಪಾರ್ಟ್‍ಮೆಂಟ್‍ನ 19ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

    ಆ ಗುಂಪಿನ ಪಾರ್ಟಿ ನೋಡಿದ ಸಾಕಷ್ಟು ಜನ ಅಲ್ಲಿಂದ ಮೆತ್ತಗೆ ಎಸ್ಕೇಪ್ ಆದ್ರು. ಬಳಿಕ ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಆರು ಜನರನ್ನು ಬಿಯರ್ ಸಮೇತ ಹಿಡಿದು ಪೊಲೀಸ್ ಠಾಣೆಗೆ ಕರೆದೊಯ್ಯದರು. ಒಂದು ಕಡೆ ವಿಧಾನಸೌಧ, ಎದುರಿಗೆ ಪೊಲೀಸ್ ಠಾಣೆ, ಸುತ್ತಲೂ ಸರ್ಕಾರಿ ಕಚೇರಿಗಳು, ಕಾಲೇಜುಗಳು ಹೀಗಿದ್ರು ಹಾಡಹಗಲೇ ಈ ರೀತಿ ವರ್ತನೆ ತೋರಿಸಿದ ಯುವಕ-ಯುವತಿಯರ ವರ್ತನೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ಆಕ್ರೋಶ ಕೇಳಿ ಬರುತ್ತಿದೆ. ಇದನ್ನೂ ಓದಿ: ಮದ್ಯವ್ಯಸನಿ ಅಧಿಕಾರಿಗಿಂತ ರಿಕ್ಷಾ ಎಳೆಯುವವನು ಉತ್ತಮ ವರನಾಗಬಹುದು: ಮಗನ ನೋವಿನ ಕಥೆ ವಿವರಿಸಿದ ಕೇಂದ್ರ ಸಚಿವ

    Live Tv
    [brid partner=56869869 player=32851 video=960834 autoplay=true]