Tag: ಪಾರ್ಕ್

  • ರಸ್ತೆಯಲ್ಲೇ ಮಹಿಳೆಯರನ್ನ ತಬ್ಬಿಕೊಂಡು ತುಟಿಗೆ ಚುಂಬಿಸ್ತಿದ್ದ – ಬೆಂಗಳೂರಿನ ಬೀದಿ ಕಾಮಣ್ಣ ಪೊಲೀಸ್‌ ವಶಕ್ಕೆ

    ರಸ್ತೆಯಲ್ಲೇ ಮಹಿಳೆಯರನ್ನ ತಬ್ಬಿಕೊಂಡು ತುಟಿಗೆ ಚುಂಬಿಸ್ತಿದ್ದ – ಬೆಂಗಳೂರಿನ ಬೀದಿ ಕಾಮಣ್ಣ ಪೊಲೀಸ್‌ ವಶಕ್ಕೆ

    ಬೆಂಗಳೂರು: ರೋಡು.. ಪಾರ್ಕು (Park) ಅಂತ ನೋಡದೇ ಸಿಕ್ಕ ಸಿಕ್ಕ ಮಹಿಳೆಯರನ್ನ ತಬ್ಬಿಕೊಂಡು, ಮುತ್ತು ಕೊಡುತ್ತಿದ್ದ ಬೀದಿ ಕಾಮಣ್ಣನೊಬ್ಬನನ್ನು ಪೊಲೀಸರು (Pulikeshi Nagar Police) ವಶಕ್ಕೆ ಪಡೆದಿರುವ ಘಟನೆ ಪುಲಕೇಶಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಬಂಧಿತ ಆರೋಪಿಯ (Accused) ಎದುರು ಹೆಣ್ಣುಮಕ್ಕಳು ಓಡಾಡೋದೇ ಕಷ್ಟ ಎನ್ನುವಂತಾಗಿತ್ತು. ರೋಡು, ಪಾರ್ಕು ಅಂತ ನೋಡ್ತಿರಲಿಲ್ಲ, ಬರುವ ಹೋಗುವ ಮಹಿಳೆಯರು (Bengaluru Women), ಹೆಣ್ಣುಮಕ್ಕಳನ್ನ ತಪ್ಪಿಕೊಂಡು ಬಲವಂತವಾಗಿ ತುಟಿಗೆ ಚುಂಬಿಸುತ್ತಿದ್ದ ಎಂದು ಪೊಲೀಸರಿಗೆ ಮಹಿಳೆಯೊಬ್ಬರು ನೀಡಿದ ದೂರಿನಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್‌ ಕಿಲ್ಲರ್ಸ್‌.. ಫೋನ್‌ಕಾಲ್‌ನಲ್ಲೇ ಪಿನ್‌ ಟು ಪಿನ್‌ ಅಪ್ಡೇಟ್‌ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ

    ಜೂನ್‌ 6ರಂದು ಸಂಜೆ 7 ಗಂಟೆ ಸುಮಾರಿಗೆ ಕೂಕ್‌ಟೌನ್‌ನ ಮಿಲ್ಟನ್‌ ಪಾರ್ಕ್‌ ಬಳಿ ನಿಂತಿದ್ದ ಮಹಿಳೆಯೊಬ್ಬರ ಬಳಿ ಕಾಮುಕ ದುರ್ವರ್ತನೆ ತೋರಿದ್ದ ಘಟನೆ ಬೆಳಕಿಗೆ ಬಂದಿತ್ತು. ಮಹಿಳೆಯನ್ನ ತಬ್ಬಿಕೊಂಡ ಕಾಮುಕ ಬಲವಂತವಾಗಿ ತುಟಿಗೆ ಮುತ್ತುಕೊಟ್ಟಿದ್ದನಂತೆ. ಮತ್ತೊಂದು ಪಾರ್ಕ್‌ನಲ್ಲೂ ಮಹಿಳೆಯೊಬ್ಬರ ಬಳಿ ಇದೇ ರೀತಿ ವರ್ತಿಸಿದ್ದನಂತೆ. ಮಹಿಳೆ ಪ್ರಶ್ನೆ ಮಾಡಿದ್ರೆ ಯಾರಿಗೆ ಬೇಕಾದ್ರೋ ಹೇಳಿಕೊ ಅಂತ ಎಸ್ಕೇಪ್‌ ಆಗ್ತಿದ್ದನಂತೆ. ಈ ಕುರಿತು ಸಂತ್ರಸ್ತ ಮಹಿಳೆ ಪುಲಕೇಶಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಇದನ್ನೂ ಓದಿ: ಜಾತ್ರೆಯಲ್ಲಿ ಲವ್‌… ಓಯೋ ರೂಮಲ್ಲಿ ಕೆಲಸ ಮುಗಿದ್ಮೇಲೆ ಆಂಟಿಯನ್ನ ಇರಿದು ಕೊಂದ ಟೆಕ್ಕಿ

    ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯ ಬಗ್ಗೆ ಹೆಚ್ಚಿನ ವಿವರ ಇನ್ನೂ ತಿಳಿದು ಬಂದಿಲ್ಲ. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಮಾಡೆಲ್ ಆತ್ಮಹತ್ಯೆ

  • ವಾಯುವಿಹಾರಿಗಳ ಮೇಲೂ ಸರ್ಕಾರ ತೆರಿಗೆ? – ಮೈದಾನದಲ್ಲಿ ಪ್ರಾಕ್ಟೀಸ್ ಮಾಡೋರಿಗೆ ಗಂಟೆಗೆ 200 ರೂ.

    ವಾಯುವಿಹಾರಿಗಳ ಮೇಲೂ ಸರ್ಕಾರ ತೆರಿಗೆ? – ಮೈದಾನದಲ್ಲಿ ಪ್ರಾಕ್ಟೀಸ್ ಮಾಡೋರಿಗೆ ಗಂಟೆಗೆ 200 ರೂ.

    – ವಾಯುವಿಹಾರಿಗಳಿಗೆ ತಿಂಗಳಿಗೆ 300 ರೂ. ಶುಲ್ಕ?

    ತುಮಕೂರು: ರಾಜ್ಯ ಸರ್ಕಾರದಿಂದ ಸಾರ್ವಜನಿಕರಿಗೆ ತೆರಿಗೆ ಬರೆ ಮುಂದುವರಿದಿದೆ. ವಾಯುವಿಹಾರಿಗಳ ಮೇಲೂ ಶುಲ್ಕ ವಿಧಿಸಲು ಸರ್ಕಾರ ಮುಂದಾಗಿರುವ ವಿಲಕ್ಷಣ ಪ್ರಕರಣ ಬಯಲಾಗಿದೆ.

    ಗ್ಯಾರಂಟಿಗಳಿಗೆ ಹಣ ಹೊಂದಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ತೆರಿಗೆ ಹಾಕ್ತಿದೆ ಎಂಬ ಆರೋಪ ಕೇಳಿಬಂದಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ತೆರಿಗೆ, ಶುಲ್ಕ ಅಂತ ರಾಜ್ಯ ಸರ್ಕಾರ ಸಾರ್ವಜನಿಕರಿಂದ ವಸೂಲಿ ಮಾಡುತ್ತಿದೆ ಎಂದು ಜನರು ಅಸಮಾಧಾನ ಹೊರಹಾಕಿದ್ದಾರೆ. ಈ ಮಧ್ಯೆ ವಾಯುವಿಹಾರಿಗಳಿಗೂ, ಕ್ರೀಡಾಪಟುಗಳಿಗೂ ತೆರಿಗೆ ಹಾಕಲು ಸರ್ಕಾರ ಹೊರಟಿದೆ.

    ಸರ್ಕಾರಿ ಕ್ರೀಡಾಂಗಣಗಳಲ್ಲಿ ತರಬೇತಿ ಪಡೆಯುವ ಕ್ರೀಡಾಪಟುಗಳಿಗೆ ಹಾಗೂ ವಾಯುವಿಹಾರ ಮಾಡುವ ಸಾರ್ವಜನಿಕರಿಗೂ ಶುಲ್ಕ ವಿಧಿಸುವ ಸುತ್ತೋಲೆ ಹೊರಡಿಸಿದೆ. ಇದು ಇಡೀ ರಾಜ್ಯಾದ್ಯಂತ ಮಾ.1 ರಿಂದ ಜಾರಿಯಾಗಲಿದೆ. ವಿಶೇಷವಾಗಿ ತುಮಕೂರು ನಗರದ ಮಹಾತ್ಮಾ ಗಾಂಧಿ ಕ್ರೀಡಾಂಗಣ ವಿಶ್ವ ದರ್ಜೆಯ ಸ್ಥಾನಕ್ಕೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಪ್ರಾಕ್ಟಿಸ್ ಮಾಡುವ ಪ್ರತಿ ಕ್ರೀಡಾಪಟುಗಳಿಗೂ ವಾಕಿಂಗ್ ಮಾಡೋರಿಗೂ ಶುಲ್ಕ ವಿಧಿಸಲಾಗುತ್ತದೆ. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ವಾಕ್ ಮಾಡುವ ವಯೋವೃದ್ಧರಿಗೆ ತಿಂಗಳಿಗೆ 300 ರೂ. ಶುಲ್ಕ ವಿಧಿಸುವ ಸುತ್ತೋಲೆ ಹೊರಡಿಸಲಾಗಿದೆ.

    ಯುವ ಸಬಲೀಕರಣ & ಕ್ರೀಡಾ ಇಲಾಖೆ ಹೊರಡಿಸಿರುವ ಪ್ರಕಟಣೆಯಲ್ಲಿ ಏನಿದೆ?
    * ವಾಯುವಿಹಾರಿಗಳಿಗೆ ಮಾಸಿಕ ಶುಲ್ಕ 300 ರೂ.
    * ಕ್ರೀಡಾಪಟುಗಳಿಗೆ ವಾರ್ಷಿಕ ಶುಲ್ಕ 5000 ರೂ.
    * ಕ್ರೀಡಾಪಟುಗಳಿಗೆ ಮಾಸಿಕ ಶುಲ್ಕ 500 ರೂ.
    * ಬ್ಯಾಡ್ಮಿಂಟನ್ ಅಂಕಣಕ್ಕೆ 200 ರೂ. (ಪ್ರತಿ ಗಂಟೆಗೆ)
    * ಅಥ್ಲೆಟಿಕ್ ಕ್ರೀಡಾಪಟುಗಳಿಗೆ ಮಾಸಿಕ 150 ರೂ.
    * ವಾಲಿಬಾಲ್, ಖೋಖೋ ಅಂಕಣಕ್ಕೆ ಮಾಸಿಕ 500 ರೂ.
    * ಕಬ್ಬಡಿ, ಬಾಸ್ಕೆಟ್ ಬಾಲ್ ಅಂಕಣಕ್ಕೆ ಮಾಸಿಕ 500 ರೂ.
    * ಮಲ್ಟಿ ಜಿಮ್ ಕ್ರೀಡಾಪಟುಗಳಿಗೆ ಮಾಸಿಕ 300 ರೂ.
    * ಪ.ಜಾತಿ-ಪ.ಪಂಗಡ ಕ್ರೀಡಾಪಟುಗಳಿಗೆ 150 ರೂ.
    * ಕ್ರೀಡಾಂಗಣ ಪ್ರವೇಶ ಗುರುತಿನ ಚೀಟಿ 50 ರೂ.

    ಪ್ರತಿ ಕ್ರೀಡೆಗೂ ಶುಲ್ಕ ನಿಗದಿಪಡಿಸಲಾಗಿದೆ. ರಾಜ್ಯ, ರಾಷ್ಟç, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಕೀರ್ತಿ ತಂದ ಕ್ರೀಡಾಪಟುಗಳಿಗೂ ಉಚಿತ ತರಬೇತಿ ಇಲ್ಲಿ ಸಿಗೋದಿಲ್ಲ. ಕ್ರೀಡಾಂಗಣ ನಿರ್ವಹಣೆ ಮಾಡಲು ಸರ್ಕಾರದ ಬಳಿ ಹಣ ಇಲ್ಲ. ಉಚಿತವಾಗಿ ತರಬೇತಿ ಕೊಡಬೇಕಾದ ಸರ್ಕಾರವೇ ಶುಲ್ಕ ವಿಧಿಸಲು ಮುಂದಾಗಿದೆ ಎಂದು ವಿರೋಧ ವ್ಯಕ್ತವಾಗಿದೆ.

  • ವಿವಿಧ ಖಾದ್ಯಗಳನ್ನು ತಂದು ವೃಕ್ಷಗಳ ಮಧ್ಯೆ ಕುಳಿತು ಊಟ ಮಾಡಿ ಸಂಭ್ರಮಿಸಿದ ಜನತೆ

    ವಿವಿಧ ಖಾದ್ಯಗಳನ್ನು ತಂದು ವೃಕ್ಷಗಳ ಮಧ್ಯೆ ಕುಳಿತು ಊಟ ಮಾಡಿ ಸಂಭ್ರಮಿಸಿದ ಜನತೆ

    ಗದಗ: ಮುದ್ರಣ ಕಾಶಿ ಗದಗ್‌ನಲ್ಲಿ (Gadag) ಮಂಗಳವಾರ ಸಂಕ್ರಾಂತಿ ಸಡಗರ ಕಳೆಗಟ್ಟಿತ್ತು. ಬಿಂಕದಕಟ್ಟಿ ಬಳಿಯ ಸಾಲುಮರದ ತಿಮ್ಮಕ್ಕ (Saalumarada Thimmakka) ಸಸ್ಯೋದ್ಯಾನಕ್ಕೆ ಬೆಳಿಗ್ಗೆಯಿಂದಲೇ ಪ್ರವಾಸಿಗರು ಪಾರ್ಕ್‌ಗೆ ದೌಡಾಯಿಸುತ್ತಿದ್ದರು.

    ಸಾಲು ಸಾಲು ವೃಕ್ಷಗಳ ಉದ್ಯಾನವನದಲ್ಲಿ ಕುಳಿತು ಒಂದಿಷ್ಟು ಹರಟೆ ಹೊಡೆಯುತ್ತಾ, ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಆಟವವಾಡಿಸುತ್ತಾ ಹಬ್ಬದ ಸಂಭ್ರಮದ ಖುಷಿ ಪಟ್ಟರು.  ಇದನ್ನೂ ಓದಿ: ಗವಿಗಂಗಾಧರನಿಗೆ ಸೂರ್ಯ ಪೂಜೆ ಆಗಿದೆ: ಸೋಮಸುಂದರ್ ದೀಕ್ಷಿತ್

     

    ಪಾರ್ಕ್‌ನಲ್ಲಿ ವಿಶೇಷವಾಗಿ ಸಾಹಸಮಯ ಕ್ರೀಡೆಗಳನ್ನು ಆಡುವುದಕ್ಕೆ ಅವಕಾಶವಿದ್ದು, ದೊಡ್ಡವರು, ಚಿಕ್ಕವರು ಎನ್ನದೇ ಕುಟುಂಬದ ಸದಸ್ಯರೆಲ್ಲರೂ ತಮ್ಮ ಎಲ್ಲ ಒತ್ತಡದ ಬದುಕನ್ನ ಮರೆತು ಸಂಕ್ರಾಂತಿ ನೆಪದಲ್ಲಿ ಕೆಲಹೊತ್ತು ಸಂಭ್ರಮಿಸಿದರು.

    ಸಂಕ್ರಾತಿ ಹಬ್ಬದ ನಿಮಿತ್ತ ವಿವಿಧ ಖಾದ್ಯಗಳನ್ನು ತಯಾರಿಸಿಕೊಂಡು ಬಂದು, ಮನೆಮಂದಿಯೆಲ್ಲಾ ವೃಕ್ಷಗಳ ಮಧ್ಯೆ ಕೂತು, ಎಲ್ಲರೂ ಊಟ ಮಾಡಿ ಸಂತಸ ಪಟ್ಟರು.

    ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಪ್ರತಿ ಹಬ್ಬಕ್ಕೆ ತನ್ನದೇ ಆದ ಮಹತ್ವವಿದ್ದು, ವರ್ಷದ ಮೊದಲ ಹಬ್ಬವನ್ನ ಜಿಲ್ಲೆಯ ಜನರು ಅತ್ಯಂತ, ಸಡಗರ ಸಂಭ್ರಮದಿಂದ ಆಚರಿಸಿದರು.

     

  • ಬೆಳ್ಳಂಬೆಳಗ್ಗೆ ರಾಮನಗರ ಟೌನ್ ವ್ಯಾಪ್ತಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ

    ಬೆಳ್ಳಂಬೆಳಗ್ಗೆ ರಾಮನಗರ ಟೌನ್ ವ್ಯಾಪ್ತಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ

    – ಕಾಡಾನೆ ಕಂಡು ಕಾಲ್ಕಿತ್ತ ವಾಕಿಂಗ್‌ಗೆ ಬಂದಿದ್ದ ಮಂದಿ

    ರಾಮನಗರ: ಜಿಲ್ಲೆಯಲ್ಲಿ ಕಾಡಾನೆಗಳ (Wild Elephant) ಉಪಟಳ ನಿರಂತರವಾಗಿ ಮುಂದುವರೆದಿದ್ದು, ಬೆಳ್ಳಂಬೆಳಗ್ಗೆ ರಾಮನಗರ ನಗರ (Ramanagara Town)  ವ್ಯಾಪ್ತಿಯಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿ ಜನರಲ್ಲಿ ಆತಂಕ ಹೆಚ್ಚಿಸಿವೆ.

    ರಾಮನಗರ ಟೌನ್ ವ್ಯಾಪ್ತಿಯ ರಂಗರಾಯರ ಕೆರೆ ಸಮೀಪ ಕಾಡಾನೆ ಕಂಡು ಪಕ್ಕದ ಪಾರ್ಕ್ನಲ್ಲಿ ವಾಕಿಂಗ್ ಮಾಡುತ್ತಿದ್ದ ಜನ ಎದ್ನೋ ಬಿದ್ನೋ ಎಂದು ಓಡಿದ್ದಾರೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ವಾಪಸ್ ಕಾಡಿಗಟ್ಟುವ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಐಶ್ವರ್ಯ ಗೌಡಳಿಂದ ವಂಚನೆಗೆ ಒಳಗಾಗಿದ್ರೆ ದೂರು ನೀಡಿ: ಎಸ್ಪಿ

    ಪಕ್ಕದ ದೊಡ್ಡಮಣ್ಣುಗುಡ್ಡೆ ಅರಣ್ಯ ವ್ಯಾಪ್ತಿಯಿಂದ ನಗರ ಪ್ರದೇಶಕ್ಕೆ ಬಂದಿರುವ ಕಾಡಾನೆಗಳು ರಂಗರಾಯರದೊಡ್ಡಿ ಲೇಔಟ್‌ನಲ್ಲಿ ಓಡಾಡಿ ಬಳಿಕ ಪಕ್ಕದ ಬೆಟ್ಟವನ್ನೇರಿವೆ. ನಿತ್ಯ ಒಂದಲ್ಲ ಒಂದು ಕಡೆ ಕಾಡಾನೆಗಳು ಉಪಟಳ ನೀಡುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಇದನ್ನೂ ಓದಿ: ಚೀನಾದಲ್ಲಿ ಮತ್ತೆ ವೈರಸ್‌ ಸ್ಫೋಟ; ರೋಗಿಗಳಿಂದ ತುಂಬಿ ತುಳುಕುತ್ತಿವೆ ಆಸ್ಪತ್ರೆಗಳು

  • 1,000 ಕೆಜಿ ಗಂಧದ ಕಟ್ಟಿಗೆಯಲ್ಲಿ ಎಸ್‌ಎಂ ಕೃಷ್ಣ ಅಂತ್ಯಸಂಸ್ಕಾರ: ಗಣಿಗ ರವಿ

    1,000 ಕೆಜಿ ಗಂಧದ ಕಟ್ಟಿಗೆಯಲ್ಲಿ ಎಸ್‌ಎಂ ಕೃಷ್ಣ ಅಂತ್ಯಸಂಸ್ಕಾರ: ಗಣಿಗ ರವಿ

    ಬೆಂಗಳೂರು: ಎಸ್‌ಎಂ ಕೃಷ್ಣ (SM Krishna) ಸಿಎಂ ಆಗಿದ್ದಾಗ ರೈತರು ಗಂಧದ ಮರವನ್ನು ಬೆಳೆಯಲು ಅವಕಾಶ ಮಾಡಿಕೊಟ್ಟಿದ್ದರು. ಈ ಹಿನ್ನೆಲೆ 1,000 ಕೆಜಿ ಗಂಧದ (Sandalwood) ಕಟ್ಟಿಗೆಯಲ್ಲಿ ಎಸ್‌ಎಂ ಕೃಷ್ಣ ಅವರ ಅಂತಿಮ ಸಂಸ್ಕಾರ ನೇರವೆರಿಸಲಾಗುತ್ತದೆ ಎಂದು ಶಾಸಕ ಗಣಿಗ ರವಿ (Ganiga Ravi) ತಿಳಿಸಿದ್ದಾರೆ.

    ಎಸ್‌ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಡ್ಯದ ನೂತನ ಹೆರಿಗೆ ಆಸ್ಪತ್ರೆಗೆ ಎಸ್‌ಎಂಕೆ ಹೆಸರು ಇಡಲಾಗುತ್ತದೆ. ಬಿ ಹಸೂರು ಕಾಲೋನಿಯಲ್ಲಿರುವ 100 ಹಾಸಿಗೆಯ ಆಸ್ಪತ್ರೆಗೆ ಎಸ್ ಎಂಕೆ ಹೆಸರು ಇಡಲು ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು. ಇದನ್ನೂ ಓದಿ: ಎಸ್‌ಎಂ ಕೃಷ್ಣ ಸಜ್ಜನಿಕೆ, ಸಭ್ಯತೆ, ಸದಾಚಾರದ ರಾಜಕಾರಣಿ: ಪೇಜಾವರ ಶ್ರೀ

    ಇಷ್ಟು ಮಾತ್ರವಲ್ಲದೇ ಮಂಡ್ಯದಲ್ಲಿ ಒಂದು ಪಾರ್ಕಿಗೆ ಎಸ್‌ಎಂ ಕೃಷ್ಣ ಅವರ ಹೆಸರು ಇಡಲಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ -ಹೋರಾಟಗಾರರ ಮೇಲೆ ಲಾಠಿಚಾರ್ಜ್‌

  • ಪರಪುರುಷನ ಜೊತೆ ಕಾರೊಳಗೆ ಚಕ್ಕಂದವಾಡ್ತಿದ್ದ ಪತ್ನಿ- ರೊಚ್ಚಿಗೆದ್ದ ಪತಿ ಮಾಡಿದ್ದೇನು?

    ಪರಪುರುಷನ ಜೊತೆ ಕಾರೊಳಗೆ ಚಕ್ಕಂದವಾಡ್ತಿದ್ದ ಪತ್ನಿ- ರೊಚ್ಚಿಗೆದ್ದ ಪತಿ ಮಾಡಿದ್ದೇನು?

    ಚಂಡೀಗಢ: ಪರಪುರುಷನ ಜೊತೆ ತನ್ನ ಪತ್ನಿ ಕಾರೊಳಗೆ ಕುಳಿತುಕೊಂಡು ಚಕ್ಕಂದವಾಡುತ್ತಿದ್ದನ್ನು ಕಂಡು ವ್ಯಕ್ತಿಯೊಬ್ಬ ಆಕೆಯನ್ನು ಮನಬಂದಂತೆ ಥಳಿಸಿದ ಘಟನೆ ಹರಿಯಾಣದಲ್ಲಿ (Haryana) ನಡೆದಿದೆ.

    ಹರಿಯಾಣದ ಪಂಚುಕಾದ ಪಾರ್ಕ್‌ ಒಂದರಲ್ಲಿ ಪತಿ ಬ್ಯಾಟಿನಿಂದ ತನ್ನ ಪತ್ನಿಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡುತ್ತಿರುವ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

    ಆಗಿದ್ದೇನು..?: ವ್ಯಕ್ತಿಯ ಪತ್ನಿಯು ಕಾರಿನಲ್ಲಿ ಪರಪುರುಷನ ಜೊತೆ ಕುಳಿತುಕೊಂಡಿರುವುದು ಗಮನಕ್ಕೆ ಬಂದಿದೆ. ಕೂಡಲೇ ವ್ಯಕ್ತಿ ಕಾರಿನ ಬಳಿ ತೆರಳಿ ಮೊದಲು ಕಾರಿನ ಗ್ಲಾಸ್‌ ಒಡೆದು ಹಾಕಿದ್ದಾರೆ. ನಂತರ ಪತ್ನಿಯನ್ನು ಕಾರಿನಿಂದ ಎಳೆದು ಬ್ಯಾಟ್‌ನಿಂದ ಮನಬಂದಂತೆ ಹಲ್ಲೆ ಮಾಡಿದ್ದಾನೆ.

    ತನ್ನ ಮೇಲಿನ ಹಲ್ಲೆಯಿಂದ ಪಾರಾಗಲು ಮಹಿಳೆ ಜೋರಾಗಿ ಕೂಗಿಕೊಳ್ಳುತ್ತಾಳೆ. ಹೀಗಾಗಿ ಪಾರ್ಕ್‌ ನಲ್ಲಿದ್ದ ಮಂದಿ ಓಡೋಡಿ ಬಂದು ಹಲ್ಲೆಯನ್ನು ತಡೆಯುತ್ತಾರೆ. ಆದರೆ ಕಾರೊಳಗಡೆ ಇದ್ದ ವ್ಯಕ್ತಿ ಮಾತ್ರ ಮಹಿಳೆಯ ರಕ್ಷಣೆಗೆ ಬರಲಿಲ್ಲ. ಬದಲಾಗಿ ಗಲಾಟೆ ನೋಡಿಕೊಂಡೇ ಕಾರಿನಲ್ಲಿ ಕುಳಿತಿದ್ದನು. ಇದನ್ನೂ ಓದಿ: ಪಾಕ್‌ನಲ್ಲಿ ನನ್ನ ಮಕ್ಕಳ ಜೀವಕ್ಕೆ ಅಪಾಯವಿದೆ.. ಅವರನ್ನು ಬಿಟ್ಟು ತವರಿಗೆ ಹೋಗಲ್ಲ: ಭಾರತದ ಮಹಿಳೆ ಅಳಲು

    ಈ ಎಲ್ಲಾ ದೃಶ್ಯಗಳನ್ನು ಪಾರ್ಕ್‌ ನಲ್ಲಿದ್ದ ಇತರ ಕೆಲ ವ್ಯಕ್ತಿಗಳು ತಮ್ಮ ಮೊಬೈಲ್‌ ನಲ್ಲಿ ಸೆರೆಹಿಡಿದಿದ್ದಾರೆ. ಬಳಿಕ ಸೋಶಿಯಲ್‌ ಮೀಡಿಯಾಕ್ಕೆ ಹರಿಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ವೈರಲ್‌ ಆಗಿದೆ. ವೀಡಿಯೋದಲ್ಲಿ ವ್ಯಕ್ತಿಯು ನನಗೆ ಮೋಸ ಮಾಡುತ್ತಿದ್ದಿ ಎಂದು ಹೇಳುತ್ತಿರುವುದಾಗಿ ವರದಿಯಾಗಿದೆ.

    https://twitter.com/Fightter_Punch/status/1780349356467478577

    ಸದ್ಯ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆಕೆಯ ಪತಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪತಿಯ ವಿರುದ್ಧ ದೈಹಿಕ ಹಲ್ಲೆಯ ದೂರು ದಾಖಲಾಗಿದೆ. ಶೀಘ್ರವೇ ಆರೋಪಿಯನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • ಕಾರೊಳಗೆ ಕುಳಿತಿದ್ದ ಯುವತಿ ಮುಂದೆ ವ್ಯಕ್ತಿ ಅಸಭ್ಯ ವರ್ತನೆ

    ಕಾರೊಳಗೆ ಕುಳಿತಿದ್ದ ಯುವತಿ ಮುಂದೆ ವ್ಯಕ್ತಿ ಅಸಭ್ಯ ವರ್ತನೆ

    ಬೆಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಯುವತಿಯ ಎದುರು ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದಾನೆ. ಮಹದೇವಪುರ ಪಾರ್ಕ್ (Mahadevapura Park) ಎದುರು ಈ ಘಟನೆ ನಡೆದಿದೆ.

    ಕಾರನ್ನು ಪಾರ್ಕ್ ಮಾಡಿ ಕಾರಿನಲ್ಲಿ ಯುವತಿ ಕುಳಿತುಕೊಂಡಿದ್ದಳು. ಆ ಸಮಯದಲ್ಲಿ ಕಾರಿನ ಮುಂಭಾಗದಲ್ಲಿ ಬಂದ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಆತಂಕಗೊಂಡ ಯುವತಿ ಡೋರ್ ಲಾಕ್ ಮಾಡಿದ್ದಾಳೆ. ಬಳಿಕ ಕಾರಿನ ಬಳಿ ಬಂದ ಅಪರಿಚಿತ ವ್ಯಕ್ತಿ ಕಾರಿನ ಸುತ್ತ ಓಡಾಡಿದ್ದಾನೆ.

    ಭಯಭೀತಗೊಂಡ ಯುವತಿ ಕಾರಿನ ಸ್ಟೇರಿಂಗ್ ಕೆಳಗೆ ಅವಿತುಕೊಂಡಿದ್ದಾಳೆ. ಆಕೆಯ ಸ್ನೇಹಿತರೊಬ್ಬರು ಬಂದ ನಂತರ ಕಾರಿನ ಯುವತಿ ಕೆಳಗಿಳಿದಿದ್ದಾಳೆ. ತಾನು ಅನುಭವಿಸಿದ ಸಮಸ್ಯೆಯನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾಳೆ. ಜನವರಿ 5ರಂದು ಈ ಘಟನೆ ನಡೆದಿದೆ. ಇದನ್ನೂ ಓದಿ: ಅಪರೂಪದ ಬೃಹತ್ ಹಿಮಾಲಯನ್ ಗ್ರಿಫನ್ ಓಲ್ಚರ್ ರಣಹದ್ದು ಕಾರವಾರದಲ್ಲಿ ಪ್ರತ್ಯಕ್ಷ

  • ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    ಬಾಯಿಂದ ಬಾಯಿಗೆ ಎಂಜಲು ನೀರು ಉಗಿದುಕೊಂಡು ಚೆಲ್ಲಾಟ – ಪ್ರೇಮಿಗಳಿಗೆ ಶುರುವಾಯ್ತು ಪೀಕಲಾಟ

    ಲಕ್ನೋ: ಇತ್ತೀಚೆಗೆ ಪ್ರೀತಿಯ (Love) ಪರಿಭಾಷೆಯೇ ಬದಲಾಗಿದೆ. ಪ್ರೀತಿಯ ಹುಟ್ಟಿನ ರೀತಿಯೂ ಬದಲಾಗಿದೆ. ಪ್ರೀತಿ ಎಂಬುದು ಹೇಳಿ ಕೇಳಿ ಹುಟ್ಟುವುದಿಲ್ಲ. ಇದರ ಹುಟ್ಟಿಗೆ ದಿನಾಂಕ, ಸಮಯ ಬೇಕಿಲ್ಲ. ಪ್ರೀತಿಯ ಭಾವ ಮನಸ್ಸಿನೊಳಗೆ ಮೂಡಿದಾಗ ಹೊಟ್ಟೆಯೊಳಗೆ ಕಚಗುಳಿ ಇಟ್ಟಂತಾಗುವುದು ಸುಳ್ಳಲ್ಲ. ಅದರಲ್ಲೂ ಮಾಡರ್ನ್ ಪ್ರೇಮಿಗಳಿಗೆ (Lovers) ಮೊದಲ ನೋಟದಲ್ಲೇ ಪ್ರೀತಿ ಚಿಗುರುತ್ತದೆ. ಇಂತ ಪ್ರೇಮಿಗಳ ನಡುವೆ ಕೆಲವರು ಹುಚ್ಚುತನದಿಂದ ಪೆಚ್ಚಾಗಿ ಪೇಚಿಗೆ ಸಿಲುಕುತ್ತಾರೆ. ಉತ್ತರ ಪ್ರದೇಶದಲ್ಲಿ (Uttar Pradesh) ನಡೆದ ಘಟನೆಯೊಂದು ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಹೌದು. ಉತ್ತರ ಪ್ರದೇಶದ ನೋಯ್ಡಾದ ಪಾರ್ಕ್‌ವೊಂದರಲ್ಲಿ (Noida Park) ಪ್ರೇಮಿಗಳಿಬ್ಬರು ಅತಿರೇಖದ ವರ್ತನೆ ತೋರಿದ್ದು, ವಿವಾದಕ್ಕೆ ಕಾರಣವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪ್ರೇಮಿಗಳ ವಿರುದ್ಧ ನೆಟ್ಟಿಗರು ಸಿಡಿದಿದ್ದಾರೆ. ಇದನ್ನೂ ಓದಿ: Delhi Metro: ಮೆಟ್ರೋ ರೈಲಿನಲ್ಲಿ ಲಿಪ್‌ ಲಾಕ್‌ ಮಾಡಿದ ಪ್ರೇಮಿಗಳು – ವೀಡಿಯೋ ವೈರಲ್‌ 

    ನೋಯ್ಡಾದಲ್ಲಿರುವ ವಾನ್‌ವೇದ್‌ ಪಾರ್ಕ್‌ನಲ್ಲಿ ಚಿತ್ರೀಕರಿಸಿದ ವೀಡಿಯೋದಲ್ಲಿ, ಯುವಕ ಮೊದಲು ತನ್ನ ಪ್ರೇಯಸಿಗೆ ಉಂಗುರ ತೊಡಿಸಿದ್ದಾನೆ. ನಂತರ ಆಕೆ ತನ್ನ ಪ್ರೀತಿ ವ್ಯಕ್ತಪಡಿಸಿಲು ತನ್ನ ಬಾಯಿಂದ ಎಂಜಲು ನೀರನ್ನು ತನ್ನ ಪ್ರೇಮಿ ಬಾಯಿಗೆ ಉಗುಳಿದ್ದಾಳೆ. ಅದಕ್ಕೆ ಪ್ರತಿಯಾಗಿ ಯುವಕನೂ ಅದೇ ರೀತಿ ಮಾಡಿದ್ದಾನೆ. ಇದು ಅಸಭ್ಯ ವರ್ತನೆಯಂತೆ ತೋರಿದು, ವೀಡಿಯೋ ಸದ್ದು ಮಾಡುತ್ತಿದ್ದಂತೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

    ಕೆಲ ದಿನಗಳ ಹಿಂದೆ ದೆಹಲಿಯ ಮೆಟ್ರೋದಲ್ಲಿ (Delhi Metro) ಪ್ರೇಮಿಗಳಿಬ್ಬರು ಲಿಪ್‌ ಲಾಕ್‌ ಮಾಡಿದ್ದ ದೃಶ್ಯ ಕಂಡುಬಂದಿತ್ತು. ಇದೀಗ ಪಾರ್ಕ್‌ಗಳಲ್ಲಿ ಹೀಗೆ ಆದ್ರೆ, ಸಭ್ಯಸ್ಥರು ಓಡಾಡುವುದು ಹೇಗೆ? ಹೇಳುವವರು ಕೇಳುವವರು ಇಲ್ಲದಂತಾಗಿದೆ ಪೊಲೀಸರು ಕ್ರಮ ಕೈಗೊಂಡು ಬಿಸಿ ಮುಟ್ಟಿಸಬೇಕು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಝಿಕಾ ಆತಂಕ; ಚಿಕ್ಕಬಳ್ಳಾಪುರದ 5 ಗ್ರಾಮಗಳಲ್ಲಿ ಅಲರ್ಟ್‌ – 31 ಮಂದಿ ಗರ್ಭಿಣಿಯರಿಗೆ ರಕ್ತ ಪರೀಕ್ಷೆ

    ಅಲ್ಲದೇ ವೀಡಿಯೋವನ್ನು ಟ್ಬಿಟ್ಟರ್‌ ಎಕ್ಸ್‌ ಖಾತೆಯಲ್ಲಿ ನೋಯ್ಡಾದ ಉಪ ಪೊಲೀಸ್‌ ಆಯುಕ್ತರಿಗೆ ಟ್ಯಾಗ್‌ ಮಾಡಲಾಗಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಇದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು, ನೋಯ್ಡಾದ ಸೆಕ್ಟರ್-113 ಠಾಣೆಗೆ ಮತ್ತು ಸೈಬರ್‌ ಸೆಲ್‌ ವಿಭಾಗಕ್ಕೆ ಸೂಚಿಸಿದ್ದಾರೆ. ಪಾರ್ಕ್‌ನಲ್ಲಿ ಚೆಲ್ಲಾಟವಾಡಿದ ಪ್ರೇಮಿಗಳಿಗೆ ಈಗ ಪೀಕಲಾಟ ಶುರುವಾಗಿದೆ. ಇದನ್ನೂ ಓದಿ: ರಾಜಕೀಯ ಪ್ರೇರಿತವಾಗಿ ನೀಡಿರುವ ನೋಟಿಸ್‌ ಹಿಂಪಡೆಯಿರಿ: EDಗೆ ಕೇಜ್ರಿವಾಲ್‌ ಪ್ರತಿಕ್ರಿಯೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳೆಗೆ ಮುತ್ತಿಟ್ಟು, ಪೊಲೀಸ್‌ ಕಾರಿನಲ್ಲೇ ರೊಮ್ಯಾನ್ಸ್‌ – US ಅಧಿಕಾರಿ ಅಮಾನತು

    ಮಹಿಳೆಗೆ ಮುತ್ತಿಟ್ಟು, ಪೊಲೀಸ್‌ ಕಾರಿನಲ್ಲೇ ರೊಮ್ಯಾನ್ಸ್‌ – US ಅಧಿಕಾರಿ ಅಮಾನತು

    ವಾಷಿಂಗ್ಟನ್‌: ಕರ್ತವ್ಯ ಸಮಯದಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸುತ್ತಿದ್ದ, ನಂತರ ಕಾರಿನ ಹಿಂಬದಿ ಸೀಟಿನಲ್ಲಿ ಅದೇ ಮಹಿಳೆಯೊಂದಿಗೆ (US Women) ರೊಮ್ಯಾನ್ಸ್‌ ಮಾಡ್ತಿದ್ದ ಅಮೆರಿಕದ ಪೊಲೀಸ್‌ ಅಧಿಕಾರಿಯನ್ನ (US Police Officer) ಅಮಾನತುಗೊಳಿಸಲಾಗಿದೆ.

    ಪ್ರಿನ್ಸ್ ಜಾರ್ಜ್‌ನ ಕೌಂಟಿ ಪೊಲೀಸ್ (County Police) ಅಧಿಕಾರಿಯನ್ನ ಫ್ರಾನ್ಸೆಸ್ಕೊ ಮಾರ್ಲೆಟ್ ಎಂದು ಗುರುತಿಸಲಾಗಿದೆ. ಈತ ಪಾರ್ಕ್‌ನಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸಿದ್ದಾನೆ. ಬಳಿಕ ಆಕೆಯನ್ನ ಪೊಲೀಸ್‌ ಇಲಾಖೆಯ ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡಿದ್ದಾನೆ. ಆಕೆಯೊಂದಿಗೆ ರೊಮ್ಯಾನ್ಸ್‌ ಮಾಡಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ. ಇದನ್ನೂ ಓದಿ: ಜಿ20 ಶೃಂಗಸಭೆಗೆ ಅಮೆರಿಕ ಅಧ್ಯಕ್ಷರ ಪ್ರವಾಸ – ಬೈಡನ್ ಪ್ರವಾಸಕ್ಕೂ ಮುನ್ನ ಜಿಲ್ ಬೈಡನ್‍ಗೆ ಕೊರೊನಾ ಸೋಂಕು

    ಮೂಲಗಳ ಪ್ರಕಾರ ಆಕ್ಸನ್ ಹಿಲ್ ಪ್ರೌಢಶಾಲೆ ಪಕ್ಕದಲ್ಲಿರುವ ಕಾರ್ಸನ್ ಪಾರ್ಕ್‌ನಲ್ಲಿ (Park) ಈ ಘಟನೆ ನಡೆದಿದೆ. ಬೋರೆಕ್ಯೂರ್ ಹೆಸರಿನ ಟ್ವಿಟ್ಟರ್‌ (X) ಖಾತೆಯು ಈ ಕುರಿತ ವೀಡಿಯೋ ತುಣುಕನ್ನು ಹಂಚಿಕೊಂಡಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. 47 ಸೆಕೆಂಡುಗಳ ವೀಡಿಯೋದಲ್ಲಿ ಪೊಲೀಸ್‌ ಅಧಿಕಾರಿ ಪಾರ್ಕ್‌ನಲ್ಲಿ ಮಹಿಳೆಯನ್ನ ತಬ್ಬಿಕೊಂಡು ಚುಂಬಿಸಿದ್ದಾನೆ. ಬಳಿಕ ಆಕೆಯನ್ನ ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು ಅಸಭ್ಯ ವರ್ತನೆ ತೋರಿದ್ದಾನೆ. ಸುಮಾರು 40 ನಿಮಿಷಗಳ ಕಾಲ ಕಾರಿನಲ್ಲೇ ಇದ್ದರು ಎನ್ನಲಾಗಿದೆ.

    ಮಾರ್ಲೆಟ್ ಮತ್ತು ವಿಡಿಯೋದಲ್ಲಿರುವ ಮಹಿಳೆಯ ನಡುವಿನ ಸಂಬಂಧ ಏನು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದ್ರೆ ಪೊಲೀಸ್‌ ಅಧಿಕಾರಿ ಕರ್ತವ್ಯದಲ್ಲಿದ್ದ ಎಂಬ ಕಾರಣಕ್ಕೆ ಆತನನ್ನ ಅಮಾನತುಗೊಳಿಸಿದ್ದು, ತನಿಖೆ ಮುಂದುವರಿದಿದೆ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    ಮಾರ್ಲೆಟ್‌ ಮೇಲಿನ ಆರೋಪ ಇದೇ ಮೊದಲೇನಲ್ಲ ಈ ಹಿಂದೆಯೂ ಮಾಜಿ ಗೆಳತಿಯಿಂದ ಮಗು ಪಡೆದಿದ್ದ, ನಂತರ ಆಕೆಯನ್ನ ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ಕೌಟುಂಬಿಕ ಹಿಂಸಾಚಾರ ಆರೋಪದ ಮೇಳೆ ಒಂದು ತಿಂಗಳು ವೇತನ ರಹಿತವಾಗಿ ಅಮಾನತುಗೊಳಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾತ್ರಿ ಪಾರ್ಕ್‍ನಲ್ಲಿ ಗೆಳೆಯನ ಜೊತೆ ಕುಳಿತಿದ್ದ ಹುಡುಗಿ ಮೇಲೆ ಗ್ಯಾಂಗ್‍ರೇಪ್!

    ರಾತ್ರಿ ಪಾರ್ಕ್‍ನಲ್ಲಿ ಗೆಳೆಯನ ಜೊತೆ ಕುಳಿತಿದ್ದ ಹುಡುಗಿ ಮೇಲೆ ಗ್ಯಾಂಗ್‍ರೇಪ್!

    ನವದೆಹಲಿ: 16 ವರ್ಷದ ಹುಡುಗಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣವೊಂದು ದೆಹಲಿಯ ಶಹಬಾದ್ ಡೈರಿ (Shahbad Dairy Rape Case) ಪ್ರದೇಶದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಈ ಘಟನೆ ಜೂನ್ 27ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮದುವೆಯಾಗಲು ಹೆಣ್ಣು ಸಿಗದೆ ಮನನೊಂದು ಯುವಕ ಆತ್ಮಹತ್ಯೆ

    ಸಂತ್ರಸ್ತೆ ತನ್ನ ಗೆಳೆಯನ ಜೊತೆ ರಾತ್ರಿ ಸಮಯದಲ್ಲಿ ಪಾರ್ಕ್‍ನಲ್ಲಿ ಕುಳಿತಿದ್ದಳು. ಹೀಗೆ ಕುಳಿತುಕೊಂಡು ಮಾತನಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಮೂವರು ಎಂಟ್ರಿ ಕೊಡುತ್ತಾರೆ. ಅಲ್ಲದೆ ಕುಳಿತಿರುವ ಇಬ್ಬರ ಜೊತೆ ಮಾತಿಗಿಳಿಯುತ್ತಾರೆ. ಮಾತು ಮಾತಿಗೆ ಬೆಳೆಯುತ್ತಾ ಮೂವರು ಹುಡುಗಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡುತ್ತಾರೆ.

    ತಮ್ಮ ಕಾಮತೃಷೆ ತೀರಿಸಿಕೊಂಡ ಬಳಿಕ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇತ್ತ ಘಟನೆ ಸಂಬಂಧ ದೆಹಲಿ ಪೊಲೀಸರಿಗೆ (Delhi Police) ಮಾಹಿತಿ ರವಾನೆಯಾಗುತ್ತದೆ. ಸ್ಥಳಕ್ಕೆ ಬಂದ ಪೊಲೀಸರು ಹುಡುಗಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇತ್ತ ಕೃತ್ಯ ಎಸಗಿ ಪರಾರಿಯಾಗಿರುವ ಕಾಮುಕರ ಪತ್ತೆಗೆ ಬಲೆ ಬೀಸಿದ್ದಾರೆ.

    ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಎಫ್‍ಐಆರ್ (FIR) ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೆಂ-ಮೈ ಎಕ್ಸ್‌ಪ್ರೆಸ್‌ವೇಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಸ್ಕೂಟರ್ ಡಿಕ್ಕಿ – ದಂಪತಿ ಸಾವು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]