Tag: ಪಾರ್ಕಿಂಗ್‌ ಸಮಸ್ಯೆ

  • ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ನಿಲ್ದಾಣಗಳಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್‌ಗೆ ಚಿಂತನೆ

    ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್ – ನಿಲ್ದಾಣಗಳಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್‌ಗೆ ಚಿಂತನೆ

    – ಶೀಘ್ರದಲ್ಲೇ ಪ್ರಯಾಣಿಕರಿಗೆ ಡಿಸ್ಕೌಂಟ್ ಆಧಾರದಲ್ಲಿ ಮೆಟ್ರೋ ಪಾರ್ಕಿಂಗ್

    ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರ ಪಾರ್ಕಿಂಗ್ ಸಮಸ್ಯೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಎಂಆರ್‌ಸಿಎಲ್ (BMRCL) ಹೊಸ ಪ್ಲ್ಯಾನ್ ಮಾಡಿಕೊಂಡಿದೆ. ಶೀಘ್ರದಲ್ಲೇ ಮೆಟ್ರೋ ಪ್ರಯಾಣಿಕರಿಗೆ ತಮ್ಮ ವಾಹನಗಳ ಪಾರ್ಕ್ ಮಾಡುವ ಸಂಬಂಧ ಗುಡ್‌ನ್ಯೂಸ್ ನೀಡಲು ಮುಂದಾಗಿದೆ.

    ಮೆಟ್ರೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರು ನಗರದ ಹಲವು ಮೆಟ್ರೋ ನಿಲ್ದಾಣಗಳ ಬಳಿ ಅಡ್ಡಾದಿಡ್ಡಿ ಪಾರ್ಕ್ ಮಾಡಿ, ಅನೇಕ ಸಮಸ್ಯೆಗಳಿಗೆ ಕಾರಣ ಆಗುತ್ತಿದ್ದಾರೆ. ಅಲ್ಲದೇ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಜಾಗ ಕೂಡ ಸಾಲದ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಈ ಎಲ್ಲಾ ಕಾರಣಕ್ಕಾಗಿ ಮೆಟ್ರೋ, ತನ್ನ ನಿಲ್ದಾಣಗಳಲ್ಲೇ ಪಾರ್ಕಿಂಗ್ ಜಾಗದಲ್ಲಿ ಹೊಸ ಟಚ್ ಕೊಡಲು ಚಿಂತನೆ ನಡೆಸಿದೆ. ಇದನ್ನೂ ಓದಿ: ಶಾಲೆಯಲ್ಲಿ ಮಕ್ಕಳು ಟಾಯ್ಲೆಟ್‌ ಸ್ವಚ್ಛ ಮಾಡಿದ್ರೆ ಶಿಕ್ಷಕರ ಮೇಲೆ ಕೇಸ್‌

    ಹೌದು, ನಗರದ ಹಲವು ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ಜಾಗ ಇದ್ದರೂ ಅನೇಕರು, ನಿಲ್ದಾಣಗಳ ಅಕ್ಕಪಕ್ಕ ಬೇಕಾಬಿಟ್ಟಿ ವಾಹನಗಳನ್ನು ನಿಲ್ಲಿಸಿ ಹೋಗುತ್ತಿದ್ದಾರೆ. ಇದು ನಿಲ್ದಾಣಗಳ ಅಕ್ಕಪಕ್ಕದ ನಿವಾಸಿಗಳಿಗೂ ಸಾಕಷ್ಟು ಸಮಸ್ಯೆಯನ್ನ ತಂದೊಡ್ಡಿದ್ದು, ನಿತ್ಯ ಅನೇಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಇದನ್ನೂ ಓದಿ: ಇಂದು ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ

    ಬೈಕ್, ಕಾರ್ ಯಾವುದೇ ವಾಹನವಾದರೂ ಅಡ್ಡಾದಿಡ್ಡಿ ನಿಲ್ಲಿಸಿ ಹೋಗುವ ಕಾರಣ ಸಾರ್ವಜನಿಕರಿಗೆ ಸಮಸ್ಯೆ ಜೊತೆಗೆ ವಾಹನ ಮಾಲೀಕರಿಗೂ ಸೇಫ್ಟಿಯ ಸಮಸ್ಯೆಯಾಗುತ್ತಿದೆ. ಈ ಎಲ್ಲಾ ಸಮಸ್ಯೆ ತಪ್ಪಿಸಲು, ಆಯ್ದ ಮೆಟ್ರೋ ನಿಲ್ದಾಣಗಳಲ್ಲಿ ಇರುವಂತಹ ಮಲ್ಟಿ ಲೆವಲ್ ಪಾರ್ಕಿಂಗ್ ಮಾದರಿಯನ್ನ ಅನುಸರಿಸಲು ಮುಂದಾಗಿದೆ. ಇದನ್ನೂ ಓದಿ: ಸಂಜನಾಗೆ ವಂಚನೆ – ಅಪರಾಧಿಗೆ 61.50 ಲಕ್ಷ ದಂಡ, 6 ತಿಂಗಳು ಜೈಲು

    ಅದರಂತೆ ಪಾರ್ಕಿಂಗ್ ಸ್ಥಳದಲ್ಲಿ ಮೆಷಿನರಿಗಳನ್ನ ಬಳಸಿ, ಮಲ್ಟಿ ಲೆವಲ್ ಪಾರ್ಕಿಂಗ್ ಅನ್ನ ಆರಂಭಿಸಲು ಚಿಂತನೆ ನಡೆಸಿದೆ. ಸದ್ಯ ಮಲ್ಟಿ ಲೆವಲ್ ಪಾರ್ಕಿಂಗ್‌ಗೆ ಬೇಕಾದ ಮೆಷಿನ್‌ಗಳನ್ನ ಖರೀದಿ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಇದನ್ನೂ ಓದಿ: ಇಂದಿನಿಂದ ಬಿಜೆಪಿ ‘ಜನಾಕ್ರೋಶ ಕಹಳೆ’ – ಹಳೇ ಮೈಸೂರು ಭಾಗದಿಂದಲೇ ಯಾತ್ರೆ

    ಆರಂಭದಲ್ಲಿ ಕೆ.ಆರ್ ಪುರ (K R Pura) ಮತ್ತು ಮೆಜೆಸ್ಟಿಕ್‌ನಲ್ಲಿ (Majestic) ಈ ಯೋಜನೆ ಆರಂಭಿಸಲು ಚಿಂತನೆ ನಡೆಸಿದೆ. ಬಳಿಕ ಹಂತ ಹಂತವಾಗಿ ಇತರೆ ನಿಲ್ದಾಣಗಳಿಗೂ ಇದನ್ನ ವಿಸ್ತರಿಸುವ ಚಿಂತನೆಯಲ್ಲಿದೆ. ಇನ್ನೂ ಇದನ್ನ ಬಳಕೆ ಮಾಡುವ ಪ್ರಯಾಣಿಕರಿಗೂ ಡಿಸ್ಕೌಂಟ್ ನೀಡುವ ಸಂಬಂಧ ಕೆಲ ಯೋಜನೆಗಳನ್ನ ರೂಪಿಸುತ್ತಿದೆ. ಅದರಂತೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಮೆಟ್ರೋ ಕಾರ್ಡ್, ಅಥವಾ ಪೇಪರ್ ಟಿಕೆಟ್, ಯುಪಿಐ ಆಧಾರಿಸಿ ಶೇಕಡವಾರು ಪಾರ್ಕಿಂಗ್ ದರದಲ್ಲೂ ಡಿಸ್ಕೌಂಟ್ ನೀಡಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ.

  • BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್‌ ಪಾರ್ಕಿಂಗ್!‌

    BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್‌ ಪಾರ್ಕಿಂಗ್!‌

    ಬೆಂಗಳೂರು: ನಗರದ ಪಾರ್ಕಿಂಗ್‌ ಸಮಸ್ಯೆ ನಿವಾರಣೆಗೆ ಬಿಬಿಎಂಪಿ ಹೊಸ ಸೂತ್ರ ಕಂಡು ಹಿಡಿದಿದೆ. ನೀವು ಆಟವಾಡುವ ಬಿಬಿಎಂಪಿ ಆಟದ ಮೈದಾನದ ತಳಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಬರುವ ಸಾಧ್ಯತೆ ದಟ್ಟವಾಗಿ ಬಿಬಿಎಂಪಿ ಬಜೆಟ್‌ನಲ್ಲಿ (BBMP Budget 2024) ಗೋಚರಿಸಿದೆ.

    ವಾಹನ ಸಾಂದ್ರತೆ ಇರುವ ಪ್ರದೇಶದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಆಟದ ಮೈದಾನದ ತಳಭಾಗದಲ್ಲಿ ಪಾರ್ಕಿಂಗ್‌ (Underground Parking facilities below Play Grounds) ಎಂಬ ವಿನೂತನ ಯೋಜನೆ ಜಾರಿಗೆ ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: BBMP Budget 2024: 350 ಕೋಟಿ ರೂ. ವೆಚ್ಚದಲ್ಲಿ ಸ್ಕೈ-ಡೆಕ್‌ ನಿರ್ಮಾಣ

    ಆಟದ ಮೈದಾನಕ್ಕೆ ಏನೂ ಆಗಲ್ಲ!
    ಅಂಡರ್‌ ಗ್ರೌಂಡ್‌ ಪಾರ್ಕಿಂಗ್‌ ಯೋಜನೆಯಿಂದ ಆಟದ ಮೈದಾನದ ಸೌಲಭ್ಯಕ್ಕೆ ಯಾವುದೇ ತೊಂದರೆಯಾಗದಂತೆ ಪಿಪಿಪಿ ಆಧಾರದಲ್ಲಿ ಅನುಷ್ಠಾನಗೊಳಿಸಲು ಈ ವರ್ಷ 5 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಇದನ್ನೂ ಓದಿ: BBMP Budget 2024: ಬೆಂಗಳೂರು ನಗರದಲ್ಲಿ ನಿರ್ಮಾಣವಾಗಲಿದೆ 2 ಸುರಂಗ ಮಾರ್ಗ