ಕಿರುತೆರೆಯ ಬ್ಯೂಟಿ ಪಾರು ಅಲಿಯಾಸ್ ಮೋಕ್ಷಿತ್ ಪೈ ಸದ್ಯ `ಪಾರು’ ಧಾರಾವಾಹಿ ಜತೆ ತಮಿಳಿನ ಸೀರಿಯಲ್‌ನಲ್ಲೂ ಬ್ಯುಸಿಯಾಗಿದ್ದಾರೆ. ಸೀರಿಯಲ್‌ನಲ್ಲಿ ಸಹೋದರ ಗಣಿಗೆ ಪ್ರೀತಿಯ ಅಕ್ಕನಾಗಿರುವ ಪಾರು, ರಿಯಲ್ ಲೈಫ್‌ನಲ್ಲಿರುವ ವಿಶೇಷ ಚೇತನ ತಮ್ಮನಿಗೆ ಅಮ್ಮನಂತೆ ನೋಡಿಕೊಳ್ಳುತ್ತಿದ್ದಾರೆ.
View this post on Instagram
ಟಿವಿಲೋಕದ ನಂಬರ್ ಒನ್ ಶೋಗಳಲ್ಲಿ ಒಂದಾಗಿರುವ ಪಾರು ಧಾರಾವಾಹಿಯಲ್ಲಿ ತೆರೆಯ ಮೇಲೆ ನಟಿಸುವವರ ನಿಜ ಜೀವನದಲ್ಲಿ ಒಂದಲ್ಲ ಒಂದು ಕಷ್ಟ ಇರುತ್ತೆ. ಎಲ್ಲವನ್ನೂ ಮರೆತು ನಗುತ್ತಾ ನಟನೆ ಮಾಡುತ್ತಾ ಇರುತ್ತಾರೆ. ಮೋಕ್ಷಿತಾ ಅವರ ಜೀವನದಲ್ಲೂ ಹಾಗೆ, ಅವರಿಗೆ ರಿಯಲ್ ಲೈಫ್‌ನಲ್ಲಿ ವಿಕಲ ಚೇತನ ತಮ್ಮನಿದ್ದು, ಪಾರುನೇ ಅವನನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಮುಜುಗರ ಪಟ್ಟುಕೊಳ್ಳದೇ, ತಮ್ಮನ ಪಾಲನೆ ಮಾಡುತ್ತಾರೆ. ಇದನ್ನೂ ಓದಿ:ಹೊಂಬಾಳೆ ಬ್ಯಾನರ್ ಮುಂದಿನ ಚಿತ್ರಕ್ಕೆ `ಮಹಾನಟಿ’ ಕೀರ್ತಿ ಸುರೇಶ್ ನಾಯಕಿ
View this post on Instagram
ಇನ್ನು ಧಾರಾವಾಹಿಯಲ್ಲಿ ಗಣಿ ಎಂಬ ತಮ್ಮನಿದ್ದಾನೆ. ಪಾರುಗೆ ಗಣಿ ಅಂದ್ರೆ ತುಂಬಾ ಇಷ್ಟ. ಧಾರಾವಾಹಿಯಲ್ಲಿ ಇವರಿಗೆ ತಾಯಿ ಇಲ್ಲದ ಕಾರಣ, ಗಣಿಯನ್ನು ಪಾರು ಅಮ್ಮನಂತೆ ನೋಡಿಕೊಳ್ಳುತ್ತಿದ್ದಾಳೆ. ಗಣಿಗೆ ಅಕ್ಕ ಪಾರು ಅಂದ್ರೆ ಪ್ರಾಣ. ಅಲ್ಲದೇ ರಿಯಲ್ ಲೈಫ್ ನಲ್ಲೂ ಗಣಿ ಮೋಕ್ಷಿತ ಅವರಿಗೆ ತಮ್ಮನಂತೆ ಆಗಿ ಬಿಟ್ಟಿದ್ದಾನೆ. ಪಾರು ಈ ಬಾರಿಯ ರಕ್ಷಾ ಬಂಧನವನ್ನು ಇಬ್ಬರು ತಮ್ಮಂದಿರೊಂದಿಗೆ ಆಚರಿಸಿದ್ದಾರೆ. ಒಂದು ಅವರ ನಿಜವಾದ ತಮ್ಮ.ʻಪಾರುʼ ಧಾರಾವಾಹಿ ಕೊಟ್ಟ ಸಹೋದರ ಗಣಿ, ಇಬ್ಬರಿಗೂ ರಾಖಿಯನ್ನು ಕಟ್ಟಿ, ಸಿಹಿ ತಿನ್ನಿಸಿ ಸಂಭ್ರಮ ಪಟ್ಟಿದ್ದಾರೆ. ಆ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.


ನಟಿಯಾಗಬೇಕು ಎಂಬ ಕನಸು ಕಾಣದ ಮಧ್ಯಮ ವರ್ಗದ ಹುಡುಗಿ ಮೋಕ್ಷಿತಾ ಪೈ, ತಮಗೆ ಸಿಕ್ಕ `ಪಾರು’ ಧಾರಾವಾಹಿ ಅವಕಾಶವನ್ನ ಸರಿಯಾಗಿ ಸದುಪಯೋಗಪಡಿಸಿಕೊಂಡು ಕನ್ನಡಿಗರ ಮನದಲ್ಲಿ ಗಟ್ಟಿ ಸ್ಥಾನ ಗಿಟ್ಟಿಸಿಕೊಂಡರು. ಅಂದಿನಿಂದ ಇಂದಿನವರೆಗೂ ಟಿವಿ ಪರದೆಯಲ್ಲಿ ತಮ್ಮ ಅಭಿಮಾನಿಗಳಿಗೆ ಮೋಡಿ ಮಾಡುತ್ತಲೇ ಬಂದಿದ್ದಾರೆ. ಇದೀಗ ತಮ್ಮ ವೃತ್ತಿ ಜೀವನದಲ್ಲಿ ಹೊಸ ಹೆಜ್ಜೆ ಇಟ್ಟಿದ್ದಾರೆ. ತಮಿಳು ಕಿರುತೆರೆಯಲ್ಲಿ ಮಿಂಚಲು ಪಾರು ರೆಡಿಯಾಗಿದ್ದಾರೆ.
`ಮೀನಾಕ್ಷಿ ಪೊಣ್ಣು’ ಧಾರಾವಾಹಿಯಲ್ಲಿ ಮೋಕ್ಷಿತಾ ಪೈ ಅವರಿಗೆ ಪ್ರಮುಖ ಪಾತ್ರ ಲಭಿಸಿದೆ. ಸೀರಿಯಲ್‌ನಲ್ಲಿ ರೆಬೆಲ್ ಹುಡುಗಿಯ ಪಾತ್ರದಲ್ಲಿ ಮೋಕ್ಷಿತಾ ಪೈ ಕಾಣಿಸಿಕೊಳ್ಳಲಿದ್ದಾರೆ. ಮೀನಾಕ್ಷಿಯ ಎರಡನೇ ಪುತ್ರಿಯಾಗಿ ಶಕ್ತಿ ಪಾತ್ರದಲ್ಲಿ ಮೋಕ್ಷಿತಾ ಪೈ ಅಭಿನಯಿಸಲಿದ್ದಾರೆ. ಸದ್ಯದಲ್ಲಿಯೇ ತಮಿಳಿನ ಖಾಸಗಿ ವಾಹಿನಿಯಲ್ಲಿ `ಮೀನಾಕ್ಷಿ ಪೊಣ್ಣು’ ಧಾರಾವಾಹಿ ಪ್ರಸಾರವಾಗಲಿದೆ. ಈ ಧಾರಾವಾಹಿಯ ಮತ್ತೊಂದು ಪ್ಲಸ್ ಪಾಯಿಂಟ್ ಅಂದ್ರೆ ಕನ್ನಡ ಮತ್ತು ತಮಿಳಿನಲ್ಲಿ ಈಗಾಗಲೇ ಗಮನ ಸೆಳೆದಿರುವ ಹಿರಿಯ ನಟಿ ಅರ್ಚನಾ ಮೋಕ್ಷಿತಾ ಅವರ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ:
ಕನ್ನಡದ `ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ರೀಮೇಕ್ ಈ `ಮೀನಾಕ್ಷಿ ಪೊಣ್ಣು’ ಧಾರಾವಾಹಿಯಾಗಿದೆ. ಮುಗ್ಧ ಹುಡುಗಿ ಪಾರು ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಮೋಕ್ಷಿತಾ ತಮಿಳಿನಲ್ಲಿ ಸಖತ್ ರಗಡ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸೀರಿಯಲ್ ಕಥೆ ಕೇಳಿದ ಕೂಡಲೇ ಈ ಪ್ರಾಜೆಕ್ಟ್ ತಾನು ಮಾಡಲೇಬೇಕು ಎಂದು ಖುಷಿಯಿಂದ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.






















