Tag: ಪಾರು ಸೀರಿಯಲ್‌

  • ವೆಕೇಷನ್ ಮೂಡ್‌ನಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಮೋಕ್ಷಿತಾ ಪೈ

    ವೆಕೇಷನ್ ಮೂಡ್‌ನಲ್ಲಿ ‘ಬಿಗ್ ಬಾಸ್’ ಖ್ಯಾತಿಯ ಮೋಕ್ಷಿತಾ ಪೈ

    ‘ಬಿಗ್ ಬಾಸ್ ಕನ್ನಡ 11’ರಲ್ಲಿ (Bigg Boss Kannada 11) ಸಂಚಲನ ಮೂಡಿಸಿದ ಸ್ಪರ್ಧಿ ಮೋಕ್ಷಿತಾ ಪೈ (Mokshitha Pai) ವೆಕೇಷನ್ ಮೂಡ್‌ನಲ್ಲಿದ್ದಾರೆ. ಫ್ರೆಂಡ್ಸ್ ಜೊತೆ ಕೇರಳದ ವಯನಾಡುಗೆ (Wayanad) ನಟಿ ಭೇಟಿ ನೀಡಿದ್ದಾರೆ. ಇದರ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಟಿ ಮೋಕ್ಷಿತಾ ಪೈ ಅವರು ‘ಬಿಗ್ ಬಾಸ್’ ಶೋ ಆದ್ಮೇಲೆ ಮತ್ತಷ್ಟು ಆ್ಯಕ್ಟೀವ್ ಆಗಿದ್ದಾರೆ. ಸದ್ಯ ಕೇರಳದಲ್ಲಿನ ಸುಂದರ ಸ್ಥಳಗಳಿಗೆ ನಟಿ ಭೇಟಿ ನೀಡುತ್ತಿದ್ದಾರೆ. ಫ್ರೆಂಡ್ಸ್ ಜೊತೆ ಟ್ರೆಕ್ಕಿಂಗ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ:ಪಿಜ್ಜಾಗಿಂತ ನಿಮ್ಮ ಸೊಂಟನೇ ಹಾಟ್ ಆಗಿದೆ: ‘ವಜ್ರಕಾಯ’ ಬೆಡಗಿಗೆ ನೆಟ್ಟಿಗನ ಕಾಮೆಂಟ್

    ಇನ್ನೂ ಇತ್ತೀಚೆಗೆ ‘ಬಿಗ್ ಬಾಸ್’ ರಂಜಿತ್ ಎಂಗೇಜ್‌ಮೆಂಟ್‌ನಲ್ಲಿ ಶಿಶಿರ್, ಐಶ್ವರ್ಯಾ, ಅನುಷಾ ರೈ ಜೊತೆ ಮೋಕ್ಷಿತಾ ಕೂಡ ಭಾಗಿಯಾಗಿದ್ದರು. ನವಜೋಡಿಗೆ ಶುಭಕೋರಿ ಬಂದಿದ್ದರು. ಇದನ್ನೂ ಓದಿ:ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ದೃಷ್ಟಿಬೊಟ್ಟು’ ಸೀರಿಯಲ್ ನಟಿ

    ಇನ್ನೂ ಮೋಕ್ಷಿತಾ ‘ಮಿಡಲ್ ಕ್ಲಾಸ್ ರಾಮಾಯಣ’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಕಪ್ಪು ಹುಡುಗಿಯ ಪಾತ್ರಕ್ಕೆ ಅವರು ಜೀವ ತುಂಬಿದ್ದಾರೆ. ಸದ್ಯದಲ್ಲೇ ಸಿನಿಮಾ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.

    ‘ಮಿಡಲ್ ಕ್ಲಾಸ್ ರಾಮಾಯಣ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಅವರು ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಅವರ ಮೊದಲ ಸಿನಿಮಾ ಆಗಿದೆ. ಈ ಚಿತ್ರದ ಮೂಲಕ ಅವರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

     

    View this post on Instagram

     

    A post shared by Mokshitha Pai (@mokshitha22)

    ಇನ್ನೂ ‘ಪಾರು’ (Paaru Serial) ಸೀರಿಯಲ್ ಮೂಲಕ ಅವರು ಕಿರುತೆರೆಗೆ ಎಂಟ್ರಿ ಕೊಟ್ಟರು. ಪಾರು ಆಗಿ ಕಿರುತೆರೆಯಲ್ಲಿ ಮನೆ ಮಾತಾದರು.

  • ‘ಪಾರು’ ಖ್ಯಾತಿಯ ಮಾನ್ಸಿ ಜೋಶಿ ನಿಶ್ಚಿತಾರ್ಥ

    ‘ಪಾರು’ ಖ್ಯಾತಿಯ ಮಾನ್ಸಿ ಜೋಶಿ ನಿಶ್ಚಿತಾರ್ಥ

    ಕಿರುತೆರೆಯ ಜನಪ್ರಿಯ ‘ಪಾರು’ (Paaru) ಸೀರಿಯಲ್‌ನಲ್ಲಿ ಖಳನಾಯಕಿಯಾಗಿ ನಟಿಸಿದ್ದ ಮಾನ್ಸಿ ಜೋಶಿ (Mansi Joshi) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಘವ್ ಎಂಬುವವರ ಜೊತೆ ನಟಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಸುಂದರ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಹಿರಿಯ ನಟಿ ಶ್ರುತಿ ಕುಟುಂಬದ ಮನೆ ಮಗಳು

     

    View this post on Instagram

     

    A post shared by Mansi Joshi (@mansi._.joshi)


    ಸದ್ಯ ತೆಲುಗು, ತಮಿಳು ಸೀರಿಯಲ್‌ಗಳಲ್ಲಿ ಬ್ಯುಸಿಯಿರುವ ನಟಿ ಮಾನ್ಸಿ (Mansi) ಅವರು ಸಾಫ್ಟ್‌ವೇರ್ ಇಂಜಿನಿಯರ್ ರಾಘವ್ ಜೊತೆ ಬೆಂಗಳೂರಿನ ಬನಶಂಕರಿಯಲ್ಲಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಸಮಾರಂಭ ಜರುಗಿದೆ.

    ಇನ್ನೂ ಮುಂದಿನ ವರ್ಷ ಫೆಬ್ರವರಿಯಲ್ಲಿ ಮಾನ್ಸಿ ಮದುವೆ ನಡೆಯಲಿದೆ. ಅಂದಹಾಗೆ, ಇವರು ನಟಿ ಮೋಕ್ಷಿತಾ ಪೈ (Mokshitha Pai) ಅವರ ಆತ್ಮೀಯ ಗೆಳತಿ. ಮೋಕ್ಷಿತಾ ಬಿಗ್ ಬಾಸ್‌ಗೆ (Bigg Boss Kannada 11) ಹೋಗಿರೋದ್ರಿಂದ ಅವರನ್ನು ಮಿಸ್ ಮಾಡಿಕೊಂಡಿದ್ದಾರೆ. ಇನ್ನೂ ಈ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

    ಕಿರುತೆರೆಯ ಜನಪ್ರಿಯ ಧಾರಾವಾಹಿ `ಪಾರು’ (Paaru) ಮೂಲಕ ಮನೆ ಮಾತಾದ ನಟ ಶರತ್ ಪದ್ಮನಾಭ್ (Sharath Padmanabh) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟ ಶರತ್ ಬಹುಕಾಲದ ಗೆಳತಿ ದಿವ್ಯಶ್ರೀ (Divyashree) ಜೊತೆ ಹಸೆಮಣೆ ಏರಿದ್ದಾರೆ.

    ಜಸ್ಟ್ ಮಾತ್ ಮಾತಲ್ಲಿ, ಪುಟ್ಮಲ್ಲಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮಿಂಚಿದ್ದ ಪ್ರತಿಭಾನ್ವಿತ ನಟ ಶರತ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ (ಜ.22)ರಂದು ಶರತ್ ಮತ್ತು ದಿವ್ಯಶ್ರೀ ಮದುವೆಯಾಗಿದ್ದಾರೆ.

    ಮದುವೆಗೆ `ಪಾರು’ ಸೀರಿಯಲ್ ತಂಡ ಮತ್ತು ವಾಹಿನಿ ಕೆಲ ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿತ್ತು. ನಟ ಅನಿರುದ್ಧ, ʻಗಟ್ಟಿಮೇಳʼ ಖ್ಯಾತಿಯ ರಕ್ಷ್, ‌ʻಹಿಟ್ಲರ್‌ ಕಲ್ಯಾಣʼ ಸೀರಿಯಲ್‌ ದಿಲೀಪ್‌ ರಾಜ್ ಸೇರಿದಂತೆ ಹಲವರು ಮದುವೆ (Wedding) ಸಂಭ್ರಮದಲ್ಲಿ ಭಾಗಿಯಾಗಿದ್ದರು.

    ಇನ್ನೂ ನಟ ಶರತ್ ತಮ್ಮ ಎಂಗೇಜ್‌ಮೆಂಟ್ ಬಗ್ಗೆಯಾಗಲಿ, ಅಥವಾ ಮದುವೆ ಬಗ್ಗೆಯಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k